ಹುಲಿ ಬಂತು ಹುಲಿ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಹುಲಿರಾಯ ಕಾಡಿಗೆ ಬಂದಿದ್ದು ಅದು ಹೇಗೋ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಗೊತ್ತಾಯಿತು! ಆಗ ಅವೆಲ್ಲವೂ ಹೇಗೆ ಮಾತ್ನಾಡಿದ್ವು ಅಂಥಾ ತಿಳ್ಕೋಬೇಕಾ ಹಾಗಿದ್ರೆ ಈ ಕಥೆ ಕೇಳಿ.
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಿಗೆ ಕಾಡಿನ ವಿವಿಧ ರೀತಿಯ ಪ್ರಾಣಿಗಳ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದು ಅಲ್ಲದೇ ಕಾಡಿನಲ್ಲಿ ಪ್ರಾಣಿಗಳಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅವುಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಹಾಗೂ ಇತರೆ ಪ್ರಾಣಿಗಳನ್ನು ಎಚ್ಚರಿಸುವ ರೀತಿಯನ್ನು ತಿಳಿಸಿಕೊಡಬಹುದು.
ಕಥಾ ವಸ್ತು : ಪ್ರಾಣಿ ಮತ್ತು ಪಕ್ಷಿಗಳು,ಜೀವನ ಕೌಶಲ್ಯ,ಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ತರಗತಿ ೧, ೨,೩,೪,೫
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Huli%20Bantu%20Huli.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಹುಲಿ ಬಂತು ಹುಲಿ ಕಥೆಯ ಪಾತ್ರಾಭಿನಯ
- ಹುಲಿ ಮತ್ತು ಹಸುವಿನ ಆಟ ಆಡಿಸುವುದು
- ವಿವಿಧ ಪ್ರಾಣಿಗಳ ಮುಖವಾಡ ತಯಾರಿಸುವುದು
- ಬೆಟ್ಟದ ಹೂವು ಚಲನಚಿತ್ರದಲ್ಲಿ ಹುಲಿಯ ಲಕ್ಷಣದ ಕುರಿತಾಗಿ ಇರುವ ಗೀತೆಯನ್ನು ಹಾಡಿಸುವುದು.
ಆಲಿಸುವ ಪೂರ್ವದ ಚಟುವಟಿಕೆ
- ವಿವಿಧ ಪ್ರಾಣಿಗಳ ಕೂಗುವಿಕೆಯನ್ನು ಧ್ವನಿಸುರುಳಿಯ ಮೂಲಕ ಕೇಳಿಸಿ ಪ್ರಾಣಿಯನ್ನು ಗುರ್ತಿಸಲು ತಿಳಿಸುವುದು.
- ಮಕ್ಕಳಿಂದ ಪ್ರಾಣಿ ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುವುದು.
ಆಲಿಸುವ ಸಮಯದ ಚಟುವಟಿಕೆ
- ಹುಲಿಗೆ ಬೇಟೆ ದೊರೆಯುವುದು ಸುಲಭ ಸಾಧ್ಯವಲ್ಲ ಏಕೆ?
- ಹುಲಿಯಿಂದ ತಪ್ಪಿಸಿಕೊಳ್ಳಲು ಪ್ರಾಣಿಗಳು ಏನೆಲ್ಲಾ ಉಪಾಯಗಳನ್ನು ಕಂಡುಕೊಂಡಿರಬಹುದು?
- ವ್ಯಾಘ್ರನಿಗಾದ ಸಂಕಟವನ್ನು ನಟಿಸಿರಿ.
ಆಲಿಸಿದ ನಂತರದ ಚಟುವಟಿಕೆ
- ಹುಲಿಯ ದೇಹದ ವಿವಿಧ ಭಾಗಗಳನ್ನು ಜೋಡಿಸುವುದು.
- ಪುಣ್ಯಕೋಟಿ ರೂಪಕವನ್ನು ಅಭಿನಯಿಸುವುದು
- ಹುಲಿ ಸಂರಕ್ಷಣಧಾಮಗಳಿಗೆ ಭೇಟಿ ನೀಡುವುದು ಮತ್ತು ಮಹಿತಿ ಸಂಗ್ರಹಿಸುವುದು
- ಹುಲಿಯ ಚಿತ್ರವನ್ನು ಬರೆಯಲು ತಿಳಿಸುವುದು
- ಹುಲಿ ವೇಷ, ಕುಣಿತ/ನೃತ್ಯ