ಮಾಡ್ಯೂಲ್ ೧೪-ಸೈಬರ್ ಸೇಫ್ಟಿ
ಉದ್ದೇಶಗಳು
- ಕಿಶೋರಿ ಅಡ್ಡ ಕ್ಯಾಂಪೇನ್ ಮೂಲಕ ಹಂಚಿಕೊಳ್ಳಲು ಸಾಧ್ಯವಾಗುವಂತೆ, ಕಿಶೋರಿಯರ ಅಭಿಪ್ರಾಯಗಳು ಮತ್ತು ಆಶಯಗಳನ್ನು ಹಿಡಿದಿಡುವುದು
- ಸೋಶಿಯಲ್ ಮೀಡಿಯ ಬಳಸಲು ಸಾಧ್ಯವಾಗದ ಕಿಶೋರಿಯರು ಮೂಲೆಗುಂಪಾಗದೆ, ತಮ್ಮ ಅಭಿಪ್ರಾಯಗಳನ್ನು ಹೆಂಚಿಕೊಳ್ಳುವಂತೆ, ಚಟುವಟಿಕೆಯಲ್ಲಿ ಒಳಗೊಳ್ಳುವಂತೆ ಮಾಡುವುದು
- ಸೈಬರ್ ಸೇಫ್ಟಿ ಸಂಪನ್ಮೂಲವನ್ನು ತೋರಿಸಿ - ಅದರ ಬಗ್ಗೆ ಮನದಟ್ಟು ಮಾಡಿಸುವುದು
ಪ್ರಕ್ರಿಯೆ
ಕುಶಲೋಪರಿಯ ಮೂಲಕ ಸೆಶನ್ ಆರಂಭಿಸಿ, ಎಲ್ಲರ ಪರಿಚಯವನ್ನು ಮಾಡಿಕೊಳ್ಳುವುದು.
- ಫೇವರೆಟ್ ಫಿಲ್ಮ್
- ಫೇವರೆಟ್ ಆಟ
- ಫೇವರೆಟ್ ಹೀರೊ
- ಫೇವರೆಟ್ ಜಾಗ
- ಫೇವರೆಟ್ ಹಬ್ಬ
- ಫೇವರೆಟ್ ಹಾಡು
- ಫೇವರೆಟ್ ಮನೇಲಿರೋ ವಸ್ತು
- ಫೇವರೆಟ್ ಡ್ರಿಂಕ್
- ಫೇವರೆಟ್ ಹೀರೋಹಿನ್
- ಫೇವರೆಟ್ ಸಾಕು ಪ್ರಾಣಿ
- ಫೇವರೆಟ್ ವಿಷಯ/ subject
- ಫೇವರೆಟ್ ಟಿ. ವಿ. ಪ್ರೋಗ್ರಾಂ
- ಫೇವರೆಟ್ ಪ್ರಾಣಿ
- ಫೇವರೆಟ್ ಡ್ಯಾನ್ಸ್ ಫಾರ್ಮ್
- ಫೇವರೆಟ್ ನೆಲ್ ಪಾಲಿಶ್ ಕಲರ್
- ಫೇವರೆಟ್ ಹಕ್ಕಿ
- ಫೇವರೆಟ್ ಹೂವು
- ಫೇವರೆಟ್ ಮರ
- ಫೇವರೆಟ್ ಗಾಡಿ
- ಫೇವರೆಟ್ ಬಣ್ಣ
- ಫೇವರೆಟ್ ಫೇವರೆಟ್ ಬೆಂಗಳೂರಿನಲ್ಲಿರುವ ಜಾಗ
- ಫೇವರೆಟ್ ನಿಮ್ಮ ಬ್ಯಾಗಿನಲ್ಲಿ ಈಗಿರುವ ವಸ್ತು
- ಫೇವರೆಟ್ ಸ್ವೀಟ್
- ಸ್ಕೂಲಿನಲ್ಲಿರುವ ಫೇವರೆಟ್ ಜಾಗ
- ಫೇವರೆಟ್ ಡ್ರೆಸ್
- ಫೇವರೆಟ್ ಹಣ್ಣು
- ಮನೆಯಲ್ಲಿ ಫೇವರೆಟ್ ಜಾಗ
- ಫೇವರೆಟ್ ಚಾಟ್ಸ್
- ಶಾಪಿಂಗ್ ಮಾಡಲು ಫೇವರೆಟ್ ಅಂಗಡಿ
- ಫೇವರೆಟ್ ಫಿಲ್ಮ್
- ಫೇವರೆಟ್ ಟೀಚರ್
- ಫೇವರೆಟ್ ಉಪ್ಪಿನಕಾಯಿ
- ಫೇವರೆಟ್ ಸಿಂಗರ್
- ವಾರದಲ್ಲಿ ಫೇವರೆಟ್ ದಿನ
- ಫೇವರೆಟ್ ಸ್ನ್ಯಾಕ್ಸ್ (ಕುರುಕ್ ತಿಂಡಿ)
- ಫೇವರೆಟ್ ಹೇರ್ ಸ್ಟೈಲ್
- ಬಿಸಿಊಟದಲ್ಲಿ ನಿಮ್ಮ ಫೇವರೆಟ್
- ಫೇವರೆಟ್ ಐಸ್‌ಕ್ರೀಮ್ ಫ್ಲೇವರ್
- ಫೇವರೆಟ್ ಊರು
- ಫೇವರೆಟ್ ಮಹಿಳಾ ಕ್ರೀಡಾಪಟು
- ಫೇವರೆಟ್ ಪುರುಷ ಕ್ರೀಡಾಪಟು
ಈ ವಿಷಯಗಳಿರುವ ಚೀಟಿಗಳನ್ನು ಕೊಟ್ಟು ಅವರ ಪರಿಚಯ ಮಾಡಿಕೊಳ್ಳಲು ಹೇಳುವುದು.
- ನಮ್ಮ ಪರಿಚಯ - ಕಾರ್ತೀಕ್ - ಬಣ್ಣ, ಚಾಂದನಿ - ಚಾಟ್ಸ್ - ಪಾನಿ ಪುರಿ, ಅನುಷಾ - ಐಸ್ ಕ್ರಿಮಿ ಪ್ಲೇವರ್ - ಲಿಚಿ : ಶ್ರೇಯಸ್ -ಊರು - ಗೋವ, ನಿರಂಜನ - ಸ್ವೀಟ್ - ರಸ್ ಮಲೈ, ಅಪರ್ಣ - ಹೀರೋ - ಅಲ್ಲು ಅರ್ಜುನ್
ಕಿಶೊರಿಯರನ್ನು ಅವರ ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯ ಬಳಕೆಯ ಆಧಾರದ ಮೇಲೆ ಬೇರೆ ಬೇರೆ ಬಣ್ಣಗಳ ಪ್ಲಾಶ್ ಕಾರ್ಡ್ ಕೊಡುವ ಮೂಲಕ ಬೇರ್ಪಡಿಸುವುದು.
- ಇಂಟರ್ನೆಟ್/ಸೋಶಿಯಲ್ ಮೀಡಿಯ ಬಳಸುವ ಕಿಶೋರಿ - ಆರೆಂಜ್
- ಇಂಟರ್ನೆಟ್/ಗೂಗಲ್ ಸರ್ಚ್ ಮಾಡುವ ಕಿಶೋರಿ - ಪರ್ಪಲ್
- ಇಂಟರ್ನೆಟ್ ಬಳಸದ ಕಿಶೋರಿ - ಚಾಕ್ಲೇಟ್
ಕಂಪ್ಯೂಟರ್ ರೂಮ್/ಪಕ್ಕದ ರೂಮ್/ಸ್ಮಾರ್ಟ್ ಕ್ಲಾಸ್ - ಅನುಷಾ ಪರಿಚಯದ ನಂತರ, ಕಿಶೋರಿಯರನ್ನು ಇಬ್ಬರಂತೆ ಕ್ಲಾಸಿನ ಹೊರಗಡೆ ಇರುವ ಬೂತಿಗೆ ಕಳಿಸುವುದು. ಬೂತಿನಲ್ಲಿ ಇಬ್ಬರು ಫೆಸಿಲಿಟೇಟರ್‌ಗಳು (ಅಪರ್ಣ ಮತ್ತು ಕಾರ್ತಿಕ್) ಮೂರು ಬಣ್ಣದ flash card ಗಳನ್ನು ಇಟ್ಟುಕೊಂಡು ಕೂತಿರುವುದು .
- ಪ್ರತಿ ಕಿಶೋರಿಗೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ ಅವರು ಹೇಳಿದ ಉತ್ತರದ ಪ್ರಕಾರ ಕಾರ್ಡ್ ಅನ್ನು ಕೊಟ್ಟು ಕಳಿಸುವುದು.
- ನೀನು ಸೋಶಿಯಲ್ ಮೀಡಿಯಾ/ ಇಂಟರ್ನೆಟ್ ಬಳಸ್ತೀಯ (ಅಂದರೆ instagram, snapchat etc) - ಹೌದು ಅಂದರೆ ಆರೆಂಜ್ ಕಲರ್ ಕಾರ್ಡ್ ಕೊಟ್ಟು ಸ್ಮಾರ್ಟ್ ಕ್ಲಾಸಿಗೆ ಹೋಗಲು ತಿಳಿಸುವುದು
- ಇಲ್ಲ ಅಂದರೆ, ಇಂಟರ್‌ನೆಟ್‌ನ ನೀನು ಹೋಮ್‌ವರ್ಕ್ ಮಾಡೋದಿಕ್ಕೆ ಬಳಸ್ತೀಯ (ಗೂಗಲ್ ಸರ್ಚ್)
- ಹೌದು ಅಂದರೆ, ಪರ್ಪಲ್ ಕಲರ್ ಕಾರ್ಡ್ ಕೊಟ್ಟು ಕಂಪ್ಯೂಟರ್ ಕ್ಲಾಸಿಗೆ ಕಳಿಸುವುದು
- ಇಂಟರ್‌ನೆಟ್/ ಫೋನ್ ಬಳಸಲ್ಲ ಅಂದರೆ ಚಾಕ್ಲೇಟ್ ಕಲರ್ ಕಾರ್ಡ್ ಕೊಟ್ಟು ಕಂಪ್ಯೂಟರ್ ಕ್ಲಾಸಿಗೆ ಕಳಿಸುವುದು
ಅನುಷಾ ಮತ್ತು ಶ್ರೇಯಸ್ ಸ್ಮಾರ್ಟ್ ಕ್ಲಾಸಿನಲ್ಲಿ ಇರುತ್ತಾರೆ. ಮುಖ ಪರಿಚಯದ ಪ್ರಕಾರ ಯಾರು ಚೆನ್ನಾಗಿ articulate ಮಾಡುತ್ತಾರೋ ಅವರನ್ನು ಗುರುತಿಸಿ ಪ್ರತ್ಯೇಕ ಗುಂಪು ಮಾಡುವುದು. ಅವರನ್ನು ಬಿಟ್ಟು ಮಿಕ್ಕವರನ್ನು ನಾಲ್ಕು ಗುಂಪುಗಳಾಗಿ ಮಾಡುವುದು. ಗುಂಪು ೦ - ಇಂಟರ್ನೆಟ್/ಗೂಗಲ್ ಸರ್ಚ್ ಮಾಡುವ ಕಿಶೋರಿಯರು ಮತ್ತು ಇಂಟರ್ನೆಟ್ ಬಳಸದ ಕಿಶೋರಿಯರು - (೬- ೮ ಕಿಶೋರಿಯರಿರಬಹುದು) - ಅನುಷಾ
ನಿಮ್ಮ ಕ್ಲಾಸಿನ ಉಳಿದವರು ಅಂದರೆ, ಇಂಟರ್ನೆಟ್ ಬಳಸ್ತೀನಿ ಅಂದವರು ಬೇರೆ ಕಡೆ ಹೋದ್ರಲ್ಲ, ಏನನಿಸ್ತದೆ ನಿಮಗೆ ಅಂತ ಕೇಳುವುದು.
ಅವರು, ಬೇಜಾರಾಗ್ತಿದೆ ಅನ್ನಬಹುದು, ಸೈಲೆಂಟ್ ಆಗಿರಬಹುದು, ಏನೂ ಅನಿಸ್ತಿಲ್ಲ ಅನ್ನಬಹುದು.
ಅವರಿಗೆ, ನಾವು ಇವತ್ತಿನ ಸೆಶನ್ ಅನ್ನು ಯಾಕೆ ಮಾಡ್ತಿದೀವಿ ಅಂತ ಅವರಿಗೆ ವಿವರಿಸಬಹುದು.
Instgram ನಲ್ಲಿರುವ ಕಿಶೋರಿ ಅಡ್ಡದಲ್ಲಿ ಆಗುವ ಕ್ಯಾಂಪೇನ್‌ಗೆ ಸೋಶಿಯಲ್ ಮೀಡಿಯಾ ಬಳಸುವವರನ್ನ ಮಾತನಾಡಿಸೋಣ ಅಂತ ಅಂದ್ಕೊಂಡ್ವಿ. ಅದಿಕ್ಕೆ ಇವತ್ತಿನ ಸೆಶನ್. ನೀವು ಸೋಶಿಯಲ್ ಮೀಡಿಯಾ ಬಳಸದೇ ಇರೋದ್ರಿಂದ ನಾವು ಇಲ್ಲ ಬೇರೆ ವಿಷಯಗಳನ್ನ ಮಾತಾಡೋಣ್ವ?
- ಸೋಶಿಯಲ್ ಮೀಡಿಯಾ / ಇಂಟರ್ನೆಟ್ ಬಗ್ಗೆ ನಿಮಗೇನು ಅನಿಸುತ್ತೆ ?
- ನಿಮಗೆ ಇಂಟರ್ನೆಟ್ ಬಳಸೋ ಅವಕಾಶ ಸಿಕ್ಕರೆ ನೀವೇನು ಮಾಡೋಕೆ ಇಷ್ಟ ಪಡ್ತೀರ?
- ನಿಮ್ಮ ಪ್ರಕಾರ ಇಂಟರ್ನೆಟ್ ಇಂದ ಏನೇನು ಅನುಕೂಲ / ಅನಾನುಕೂಲ ಆಗುತ್ತೆ?
- ಏನು ಅನುಕೂಲ? (A4 sheets)
- ಏನು ಅನಾನುಕೂಲ? (we will give them 2 colour flashcards to write these - A4 sheets)
- ನಿಮ್ಮ ಫ್ರೆಂಡ್ಸ್ ಸೋಶಿಯಲ್ ಮಿಡಿಯಾದಲ್ಲಿ ಭಾಗವಹಿಸೋದನ್ನ ನೋಡೋದಿಕ್ಕೆ / ನಿಮಗೆ ಆಸಕ್ತಿ ಇದೆಯ?
- ನಿಮಗೆ ಅವಕಾಶ ಇದ್ದರೆ, ನೀವು ಮಾತನಾಡೋಕೆ ಇಷ್ಟ ಪಡ್ತೀರ ?
- ಏನು ಮಾತಾಡೋಕೆ ಇಷ್ಟ ಪಡ್ತೀರ?
ಅವರಿಗೆ ವಾಕ್ಸ್ ಪಾಪ್ ಮಾಡುವುದು
- ಈವತ್ತು ರಾತ್ರಿ ಮಲ್ಕಂಡು, ನಾಳೆ ಬೆಳಿಗ್ಗೆ ಎದ್ದಾಗ ನೀವು ಒಂದು ದಿನದ ಮಟ್ಟಿಗೆ ಮುಖ್ಯ ಮಂತ್ರಿ ಆಗೋಗ್ಬಿಟ್ಟಿದೀರ ಅಂದ್ರೆ, ಹೇಗಿರ್ಬೋದು?
- ಈಗ ವಿಧಾನ ಸೌಧದಲ್ಲಿ ಕುಂತ್ಕಂಡು ನೀವು, ಏನ್ಬೇಕಾದ್ರೂ ಮಾಡಬಹುದು ಅಂದ್ರೆ, ಏನ್ ಮಾಡ್ತೀರ? (ಅರ್ಥ ಆಗ್ಲಿಲ್ಲ ಅಂದ್ರೆ ಬೇರೆ ರೀತಿಯಲ್ಲಿ ವಿವರಿಸಿ ಅಥವ ಕೇಳಿ)
- ಯಾಕೆ ಇದನ್ನೇ ಮಾಡ್ಬೇಕು ಅನ್ನುಸ್ತು ನಿಮ್ಗೆ? (ಪ್ರೋಬ್ - ಅವರು ಹೇಳಿದ ಪ್ರತಿ ಬದಲಾವಣೆಗೆ)
- ಇದ್ರ ಬಗ್ಗೆ ಇನ್ನೇನಾದ್ರೂ ಹೇಳೋಕೆ ಇಷ್ಟ ಪಡ್ತೀರ?
ಅವಕಾಶ ಇದ್ದಲ್ಲಿ ಕಿಶೋರಿಯರು ಯಾವ ವೆಹಿಕಲ್ ಅನ್ನು ಓಡಿಸಬೇಕು ಅಂತ ಅಂದುಕೋತಾರೆ, ಮುಂದಿನ ಜೀವನದಲ್ಲಿ ನೀವು ಯಾವುದನ್ನು ತೆಗೆದುಕೊಳ್ಳಬೇಕು ಅಂತ ಅನ್ಸುತ್ತೆ? 1. ಪ್ರಶ್ನೆಗಳು
- ನಿನ್ನ ಹೆಸರು ಹೇಳ್ತಿಯಾ?
- ಎಷ್ಟನೇ ಕ್ಲಾಸ್ ನಲ್ಲಿ ಓದ್ತಿದಿಯಾ?
- ನೀನು ಯಾವ ವೆಹಿಕಲ್ ಬೇಕಿದ್ರು ಓಡ್ಸಬಹುದು ಅನ್ನೋ ಥರದ ಅವಕಾಶ ನಿಂಗಿದೆ ಅಂದ್ರೆ, ನೀನು ಯಾವ ವೆಹಿಕಲ್ ಓಡ್ಸಕ್ಕೆ ಇಷ್ಟಪಡ್ತೀಯ? ಉದಾ : ಸೈಕಲ್, ಬೈಕು, ಕಾರು, ಬಸ್ಸು, ಲಾರಿ, ಈ ಥರ ಯಾವ್ದಾದ್ರು ಆಗಿರ್ಬಹುದು.
- ಯಾಕೆ ನಿಂಗೆ _____ನ ಓಡ್ಸಬೇಕು ಅಂತ ಅನ್ಸುತ್ತೆ ?
- ನೀನು ____ನ ಓಡ್ಸಬೇಕು ಅಂದೆ, ಇದುನ್ನ ನಿಂಗೆ ಮುಂದೆ ನಿಮ್ಮ ಜೀವನದಲ್ಲಿ ಮಾಡಬಹುದು ಅನ್ಸುತ್ತಾ?
- ನೀನು ____ ಗಾಡಿ ಓಡುಸ್ಕಂಡು ನೀನು ಖುಷ್ಯಾಗಿ ಎಲ್ಲಿಗೆ ಬೇಕಿದ್ರು ಹೋಗಬಹುದು ಅಂದ್ರೆ ಎಲ್ಲಿಗೆ ಹೋಗ್ತಿಯ?
- ನಿನ್ನ ಜೊತೆಗೆ ಯಾರುನ್ನಾದ್ರು ಕರಕೊಂಡು ಹೋಗಬಹುದು ಕೂರುಸ್ಕೊಂಡು ಅಂದ್ರೆ ಯಾರುನ್ನ ಕರಕೊಂಡು ಹೋಗ್ತೀಯ?
- ಯಾಕೆ ಇವ್ರುನ್ನೇ ಕರಕೊಂಡು ಹೋಗ್ತೀಯ?
2. ಪ್ರಶ್ನೆಗಳು
- ನಿಮ್ಮ ಹೆಸರೇನು?
- ಯಾವ ಶಾಲೆ? ಎಷ್ಟನೇ ತರಗತಿ?
- ನೀವು ಎಷ್ಟು ಬೇಕಿದ್ರೂ ಓದಬಹುದು ಅನ್ನೋ ಥರದ ಆಪ್ಶನ್ ಇದೆ ಅಂದರೆ, ಏನು ಓದ್ತಿರ?
- ಎಲ್ಲಿವರೆಗೂ ಓದ್ತೀರ?
- ಯಾಕೆ ಅದನ್ನೇ ಓದ್ತೀರ?
- ನೀವು ಏನು ಬೇಕಿದ್ರು ಆಗಬಹುದು ಅಥವಾ ಏನು ಕೆಲಸ ಬೇಕಿದ್ರು ಮಾಡಬಹುದು ಅನ್ನೊ ತರದ ಆಪ್ಶನ್ ಇದ್ರೆ, ನೀವು ಯಾವ ಕೆಲಸ ಮಾಡೋಕೆ ಇಷ್ಟ ಪಡ್ತಿರ?
- ಯಾಕೆ ಈ ಕೆಲವನ್ನೇ ಮಾಡ್ತಿರ?
- ಆ ಕೆಲಸದ ಬಗ್ಗೆ ನಿಮಗೆ ಏನಾದ್ರೂ ಐಡಿಯಾ ಇದ್ಯಾ?
- ನೀವ ನಿಮಗೆ ಏನು ಬೇಕಿದ್ರೂ ಓದಬಹುದು ಅತವಾ ಏನು ಕೆಲಸ ಬೇಕಿದ್ರು ಮಾಡಬಹುದು ಅಂದ್ರೆ, ಇದರಿಂದ ಏನಾಗುತ್ತೆ ?
Back up - safe society ಗುಂಪು ೦೧ ಮತ್ತು ೦೨ - ಇಂಟರ್ನೆಟ್/ಸೋಶಿಯಲ್ ಮೀಡಿಯ ಬಳಸುವ ಕಿಶೋರಿಯರು - digital picture stories - ನಿರಂಜನ ಮತ್ತು ಚಾಂದನಿ ಅಷ್ಟೊಂದು ಮಾತನಾಡದ ಕಿಶೋರಿಯರ ಗುಂಪುಗಳು - ೫ ಕಿಶೋರಿಯರ ಎರಡು ಗುಂಪು
ಇವರಿಗೆ ಮೊದಲೆ ಪ್ರಿಂಟ್ 14 ಚಿತ್ರಗಳನ್ನು ಕೊಟ್ಟು, ಅದರಲ್ಲಿ 8 ಚಿತ್ರಗಳನ್ನು ಆಯ್ಕೆ ಮಾಡಿಕೊಂಡು, ಆ ಚಿತ್ರಗಳನ್ನು ಬಳಸಿ, ಅವರ ಪ್ರಕಾರ ಇಂಟರ್ನೆಟ್ ಎಂದರೆ ಏನು ಎನ್ನುವುದನ್ನು ಚಾರ್ಟಿನಲ್ಲಿ ಕಥೆ ಬರೆಯಲು ಹೇಳುವುದು. ಕಥೆ ಬರೆದಾದ ನಂತರ - ಅವರಿಗೆ ಈ ಕೆಳಗಿನ ವಿಷಯಗಳನ್ನು ಬರೆಯಲು ಹೇಳುವುದು
- ನಿಮ್ಮ ಪ್ರಕಾರ ಇಂಟರ್ನೆಟ್ ಇಂದ ಏನೇನು ಅನುಕೂಲ / ಅನಾನುಕೂಲ ಆಗುತ್ತೆ?
- ಏನು ಅನುಕೂಲ? (A4 sheets)
- ಏನು ಅನಾನುಕೂಲ? (we will give them 2 colour flashcards to write these - A4 sheets)
ಗುಂಪು ೦೩ - ಕಾರ್ತಿಕ್ ಪ್ರತಿಯೊಬ್ಬರಿಗೂ ಎರಡು flas card ಗಳನ್ನು ಕೊಟ್ಟು, ನೀವು ಎಷ್ಟು ಬೇಕಾದರೂ ಇಂಟರ್ನೆಟ್ ಬಳಸಬಹುದು, ಅಂದರೆ ಅನ್‌ಲಿಮಿಟೆಡ್ ಡೇಟಾ ಇದೆ, ಜೊತೆಗೆ ಯಾರೂ ಏನೂ ಹೇಳಲ್ಲ ನಿಮಗೆ, ಅಂತ ಅಂದ್ಕೊಳಿ, ಆವಾಗ ನೀವು ಏನೇನಕ್ಕೆ ಇಂಟರ್ನೆಟ್ ಬಳಸ್ತೀರ?
Flash ಕಾರ್ಡಿನಲ್ಲಿ ಒಂದೊಂದುಕಡೆ ಒಂದೊಂದು ಪಾಯಿಂಟ್ ಬರೆಯಿರಿ ಎಂದು ಹೇಳುವುದು. ಅವರಿಗೆ A4 ಹಾಳೆಗಳನ್ನು ಕೊಟ್ಟು,
- ನಿಮ್ಮ ಪ್ರಕಾರ ಇಂಟರ್ನೆಟ್ ಸೇಫ್ ಆಗಿದೆ ಅಂತ ಅನ್ಸುತ್ತ?
- ಅನ್‌ಸೇಫ್ ಅಂತ ಅನ್ಸುತ್ತ? ಯಾಕೆ?
- ಯಾರಿಗೆ ಅನ್‌ಸೇಫ್ ಆಗಿರುತ್ತೆ?
- ಹೇಗೆ
ಎಂದು ಕೇಳಿ ಬರೆಯಲು ಹೇಳುವುದು
ಬರೆದಾದ ನಂತರ ಅವರು ಬರೆದಿರುವುದನ್ನು ಓದಿ ಇನ್ನೇನಾದರೂ Add ಮಾಡುವುದಿದ್ದರೆ ಹೇಳಬಹುದು. ಇದು ಸುರಕ್ಷಿತ ಪ್ಲೇಸ್ ಎಂದು ಹೇಳುವುದು. Concerning ಇರೋದನ್ನ ಶೇರ್ ಮಾಡಿದ್ರೆ ಹೇಗೆ ಸೇಫ್ ಆಗಿರೋದು ಆನ್‌ಲೈನ್ ಅಲ್ಲಿ ಅಂತ ಆಮೇಲೆ ನೋಡೋಣ ಎಂದು ಮಾತುಕತೆಯನ್ನು ಮುಗಿಸುವುದು. ಗುಂಪು ೦೪ Kishoris who can articulate well - ಅಪರ್ಣ 4-5 ಕಿಶೋರಿಯರು - ಮೊದಲೇ ಗುರುತಿಸಿಕೊಂಡಂತೆ
ಅವರಿಗೆ ವಾಕ್ಸ್ ಪಾಪ್ ರೆಕಾರ್ಡ್ ಮಾಡಿಸುವುದು
ಪ್ರಶ್ನೆಗಳು
- ಜೀರೋ ಪ್ರಶ್ನೆಗಳು
- ಇಂಟರ್‌ನೆಟ್ ಅಂದ್ರೆ ಏನು ಅಂತ ಗೊತ್ತ?
- ಸೋಶಿಯಲ್ ಮೀಡಿಯಾ ಬಳಸ್ತೀನಿ ಅಂದ್ಯಲ್ಲ, ಯಾವ ಯಾವ ಸೋಶಿಯಲ್ ಮೀಡಿಯಾ apps ಬಳಸ್ತೀಯ?
- ಇವುಗಳಲ್ಲಿ ಏನೇನು ಮಾಡ್ತೀಯ? (ಪ್ರೋಬ್)
- ಈ apps ಗಳು ಒಂದೇ ತರ ಇರುತ್ವ? ಬೇರೆ ಬೇರೆ ತರ ಇರುತ್ತ?
- ಹೇಗಿರುತ್ತೆ?
- ಕಂಟೆಂಟ್ ಬಗ್ಗೆ question - ಯಾವ ಥರ ಕಂಟೆಂಟ್ ಇಷ್ಟ ?
- ನಿಮ್ಮ ವಯಸ್ಸಿನ ಹುಡುಗಿಯರನ್ನ ದೃಷ್ಟಿಯಲ್ಲಿ ಇಟ್ಟುಕೊಂಡರೆ, ಸೋಶಿಯಲ್ ಮೀಡಿಯಾದ ಅನುಕೂಲಗಳು ಏನು?
- ಅನಾನುಕೂಲಗಳು ಏನು?
- ಇಷ್ಟೆಲ್ಲ ಅನುಕೂಲಗಳಿದ್ರೂನೂ, ಮನೇನಲ್ಲಿ ಬಳಸೋಕೆ ಬಿಡಲ್ವಲ್ಲ, ಯಾಕೆ ಅನ್ಸುತ್ತೆ ನಿಂಗೆ ?
- ಇಷ್ಟೆಲ್ಲ ಅನುಕೂಲಗಳಿದ್ರೂನೂ, ಸ್ಕೂಲಲ್ಲಿ ಬಳಸೋಕೆ ಬಿಡಲ್ವಲ್ಲ, ಯಾಕೆ ಅನ್ಸುತ್ತೆ ನಿಂಗೆ ?
- ಪೇರೆಂಟ್ಸ್‌ಗೆ, ಟೀಚರ್ಸ್‌ಗೆ ಇರೋ ಆತಂಕ ಭಯ ನಿಮಗೆ ಸರಿ ಅನ್ಸುತ್ತ? ಹೇಗೆ?
- ಅವುಗಳನ್ನ ಸರಿ ಮಾಡೋದಕ್ಕೆ ಯಾರು ಏನು ಮಾಡಬಹುದು ಅಂತ ಹೇಳ್ತೀರ ?
- ನೀನು ಇವುಗಳನ್ನ ಹೇಗೆ ಬೇಕಿದ್ರೂ ಬದಲಾಯಿಸಬಹುದು ಅಂತ ಪವರ್ ಕೊಟ್ರೆ ಹೇಗೆ ಬದಲಾಯಿಸ್ತೀಯ?
ಗುಂಪು ೦೫ - envisioning internet - ಶ್ರೇಯಸ್
ಅವರಿಗೆ A4 ಹಾಳೆಗಳನ್ನು ಕೊಟ್ಟು,
- ನಿಮ್ಮ ಪ್ರಕಾರ ಇಂಟರ್ನೆಟ್ ಸೇಫ್ ಆಗಿದೆ ಅಂತ ಅನ್ಸುತ್ತ?
- ಅನ್‌ಸೇಫ್ ಅಂತ ಅನ್ಸುತ್ತ? ಯಾಕೆ?
- ಯಾರಿಗೆ ಅನ್‌ಸೇಫ್ ಆಗಿರುತ್ತೆ?
- ಹೇಗೆ
ಎಂದು ಕೇಳಿ ಬರೆಯಲು ಹೇಳುವುದು
ಇದಾದ ನಂತರ ಎಲ್ಲ ಹೆಣ್ಣುಮಕ್ಕಳು, ಸೇಫ್ ಆಗಿ ಇಂಟರ್ನೆಟ್ ಬಳಸಲು ಸಾಧ್ಯ ಆಗ್ಬೇಕು ಅಂದರೆ ಇಂಟರ್ನೆಟ್ / ಸೋಶಿಯಲ್ ಮೀಡಿಯಾ ಹೇಗಿರ್ಬೇಕು ಅಂತ ಅಂದ್ಕೋತಿರ ಅನ್ನೋದನ್ನ ಯೋಚನೆ ಮಾಡಿ ಬರೆಯಿರಿ ಎಂದು flash ಕಾರ್ಡ್‌ಗಳನ್ನು ಕೊಡುವುದು. ಪ್ರತಿಯೊಂದು ಗುಂಪಿನಲ್ಲೂ, ಗುಂಪು ಚಟುವಟಿಕೆ ಮುಗಿದ ನಂತರ ಕಿಶೋರಿ ಅಡ್ಡ ದ ಪರಿಚಯ ಮಾಡಿ, ಸಮಯ ಎಷ್ಟಿದೆ ಎನ್ನುವುದರ ಆಧಾರದ ಮೇಲೆ, ಕಿಶೋರಿ ಅಡ್ಡ ದ ಪೋಸ್ಟ್ ಗಳನ್ನ ತೋರಿಸುವುದು. ಇದಾದ ನಂತರ, ಗರ್ಲ್ಸ್ ಅಡ್ಡದ ಸೈಬರ್ ಸೇಫ್ಟಿ ಸಂಪನ್ಮೂಲ ತೋರಿಸಿ, ಕಿಶೋರಿಯರಿಗೆ ಇನ್ನೂ ಉತ್ಸಾಹವಿದ್ದರೆ ಒಂದೆರಡು ಪ್ರಶ್ನೆ ಕೇಳುವುದು ಅಥವ ಚರ್ಚೆ ಮಾಡುವುದು. ಎಲ್ಲರಿಗೂ ನಮಸ್ಕಾರ ಮಾಡಿ ಹೊರಡುವುದು !
-------------------------------------------------- ಶುಭಂ -------------------------------------------------------
ಬೇಕಾಗಿರುವ ಸಾಮಾಗ್ರಿಗಳು
- Voice recorder
- Speaker
- Laptops
- Camera
- Tripod
- Projector
- Projector cables
- Flash Cards
- Cut A4 sheets
- Brown sheets
- Sketch pens
- Lapel Set
- Extension cord
- Recorder accessaries
- Batteries
- Pictures Sourced (in a folder) - upload to drive
- Curtain
- Fevi quick
- Double-sided tape
Images:
- Girl 01
- Girl 02
- Boy 01 (or young man)
- Love symbol
- Chat bubble, DM
- Food vlog screen grab
- Meesho app interface
- GRWM - influencer screen grab
- Trending reels
- Filters
- Whistling
- SM App logos
- Google voice search - ok google
- Wifi, bluetooth, hotspot
ಒಟ್ಟೂ ಫೆಸಿಲಿಟೇಟರ್‌ಗಳು - ೪
ಇನ್‌ಪುಟ್‌ಗಳು
- Digital picture stories
- Cyber safety DST
- Kishori Adda Post
ಔಟ್‌ಪುಟ್‌ಗಳು
- ಕಿಶೋರಿಯರು ಬರೆದ Flash ಕಾರ್ಡ್ ಗಳು
- Digital picture stories ಬರೆದ ಚಾರ್ಟ್ ಗ