ಗಣಕಯಂತ್ರದ ಮೇಜಿನ ಕೆಳಗೆ ಅಥವಾ ಮೇಲೆ ಇಟ್ಟಿರುವ ದೊಡ್ಡ ಪೆಟ್ಟಿಗೆಯಾಕರದಂತಹ ವಸ್ತುವನ್ನು (ಸಿಸ್ಟಮ್ ಯೂನಿಟ್) ನೋಡಿದ್ದೀರಾ? ಇದರಲ್ಲಿ ಪವರ್ ಸ್ವಿಚ್ ಮತ್ತು ಸಿಡಿ (Compact Disc)ಯನ್ನು ಹಾಕಲು ಡಿಸ್ಕ್ ಡ್ರೈವ್ಗಳಿರುತ್ತವೆ. ಇದನ್ನು ವ್ಯವಸ್ಥಾ ಘಟಕ / ಗಣಕಯಂತ್ರದ ಹೃದಯದ ಭಾಗ ಎನ್ನುತ್ತಾರೆ. ಈ ಪೆಟ್ಟಿಗೆಯೊಳಗಿರುವ ಅನೇಕ ಎಲೆಕ್ಟ್ರಾನಿಕ್ ಭಾಗಗಳು ನಿಜವಾದ ಕೆಲಸವನ್ನು ನಿರ್ವಹಿಸುತ್ತವೆ. ಇವುಗಳಲ್ಲಿ ಅತಿ ಮುಖ್ಯವಾದುದೆಂದರೆ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ (CPU) ಅಥವಾ ಮೈಕ್ರೊ ಪ್ರೊಸೆಸರ್ (ಸಂಸ್ಕಾರಕ). ಇದು ಗಣಕಯಂತ್ರದ "ಮೆದುಳಾಗಿ" ವರ್ತಿಸುತ್ತದೆ. ಇದರ ಇನ್ನೊಂದು ಭಾಗವೆಂದರೆ Random Access Memory (RAM). ಗಣಕಯಂತ್ರವು ಕೆಲಸ ನಿರತವಾಗಿದ್ದಾಗ , CPUಬಳಸುವ ಮಾಹಿತಿಯನ್ನು RAM ತಾತ್ಕಾಲಿಕವಾಗಿ ಶೇಖರಿಸುತ್ತದೆ. ವ್ಯವಸ್ಥಾ ಘಟಕದ ಹಿಂಭಾಗವನ್ನು ವೀಕ್ಷಣೆ ಮಾಡಲು ನಿಮ್ಮ ಶಿಕ್ಷಕರಲ್ಲಿ ವಿನಂತಿಸಿ (ಎಚ್ಚರಿಕೆ! ಅನುಮತಿ ಇಲ್ಲದೆ ಗಣಕಯಂತ್ರದ ಹಿಂಭಾಗವನ್ನು ನೋಡಲು ಹೋಗಬೇಡಿ, ಏಕೆಂದರೆ ಅಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸುತ್ತಿರುತ್ತದೆ). ಈ ಪೆಟ್ಟಿಗೆಯ ಹಿಂಭಾಗದಿಂದ ಹಲವಾರು ತಂತಿಗಳು ಗಣಕಯಂತ್ರದ ವಿವಿಧ ಭಾಗಗಳಗೆ ಸಂಪರ್ಕಿಸಿರುವುದನ್ನು ನೋಡಬಹುದಾಗಿದೆ. ಈ ಪೆಟ್ಟಿಗೆಯ ಹಿಂದೆ ಅಥವಾ ಕೆಲವೊಮ್ಮೆ ಮುಂದೆ ಆಯತಾಕಾರದ ಸ್ಲಾಟ್ಸ್ (Slots)ಗಳಿದ್ದು, ಇವುಗಳನ್ನು ಯುಎಸ್ಬಿ (USB-ಯುನಿವರ್ಸೆಲ್ ಸೀರಿಯಲ್ ಬಸ್) ಪೋರ್ಟ್ಸ್ ಎನ್ನುತ್ತಾರೆ. ಈ ಪೋರ್ಟ್ಸ್ ಗಳನ್ನು, ಶೇಖರಣಾ ಸಾಧನಗಳಾದ ಫ್ಲಾಷ್ ಡ್ರೈವ್ಸ್ ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಬಳಸುತ್ತಾರೆ. ಈ ಯುಎಸ್ಬಿ ಪೋರ್ಟ್ಅನ್ನು ಬಳಸಿ ಗಣಕಯಂತ್ರವನ್ನು ಡಿಜಿಟಲ್ ಕ್ಯಾಮೆರಾ ಮತ್ತು ಮೊಬೈಲ್ ಫೋನ್ ಗಳಿಗೆ ಸಂಪರ್ಕಿಸಬಹುದು. | ಗಣಕಯಂತ್ರದ ಮೇಜಿನ ಕೆಳಗೆ ಅಥವಾ ಮೇಲೆ ಇಟ್ಟಿರುವ ದೊಡ್ಡ ಪೆಟ್ಟಿಗೆಯಾಕರದಂತಹ ವಸ್ತುವನ್ನು (ಸಿಸ್ಟಮ್ ಯೂನಿಟ್) ನೋಡಿದ್ದೀರಾ? ಇದರಲ್ಲಿ ಪವರ್ ಸ್ವಿಚ್ ಮತ್ತು ಸಿಡಿ (Compact Disc)ಯನ್ನು ಹಾಕಲು ಡಿಸ್ಕ್ ಡ್ರೈವ್ಗಳಿರುತ್ತವೆ. ಇದನ್ನು ವ್ಯವಸ್ಥಾ ಘಟಕ / ಗಣಕಯಂತ್ರದ ಹೃದಯದ ಭಾಗ ಎನ್ನುತ್ತಾರೆ. ಈ ಪೆಟ್ಟಿಗೆಯೊಳಗಿರುವ ಅನೇಕ ಎಲೆಕ್ಟ್ರಾನಿಕ್ ಭಾಗಗಳು ನಿಜವಾದ ಕೆಲಸವನ್ನು ನಿರ್ವಹಿಸುತ್ತವೆ. ಇವುಗಳಲ್ಲಿ ಅತಿ ಮುಖ್ಯವಾದುದೆಂದರೆ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ (CPU) ಅಥವಾ ಮೈಕ್ರೊ ಪ್ರೊಸೆಸರ್ (ಸಂಸ್ಕಾರಕ). ಇದು ಗಣಕಯಂತ್ರದ "ಮೆದುಳಾಗಿ" ವರ್ತಿಸುತ್ತದೆ. ಇದರ ಇನ್ನೊಂದು ಭಾಗವೆಂದರೆ Random Access Memory (RAM). ಗಣಕಯಂತ್ರವು ಕೆಲಸ ನಿರತವಾಗಿದ್ದಾಗ , CPUಬಳಸುವ ಮಾಹಿತಿಯನ್ನು RAM ತಾತ್ಕಾಲಿಕವಾಗಿ ಶೇಖರಿಸುತ್ತದೆ. ವ್ಯವಸ್ಥಾ ಘಟಕದ ಹಿಂಭಾಗವನ್ನು ವೀಕ್ಷಣೆ ಮಾಡಲು ನಿಮ್ಮ ಶಿಕ್ಷಕರಲ್ಲಿ ವಿನಂತಿಸಿ (ಎಚ್ಚರಿಕೆ! ಅನುಮತಿ ಇಲ್ಲದೆ ಗಣಕಯಂತ್ರದ ಹಿಂಭಾಗವನ್ನು ನೋಡಲು ಹೋಗಬೇಡಿ, ಏಕೆಂದರೆ ಅಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸುತ್ತಿರುತ್ತದೆ). ಈ ಪೆಟ್ಟಿಗೆಯ ಹಿಂಭಾಗದಿಂದ ಹಲವಾರು ತಂತಿಗಳು ಗಣಕಯಂತ್ರದ ವಿವಿಧ ಭಾಗಗಳಗೆ ಸಂಪರ್ಕಿಸಿರುವುದನ್ನು ನೋಡಬಹುದಾಗಿದೆ. ಈ ಪೆಟ್ಟಿಗೆಯ ಹಿಂದೆ ಅಥವಾ ಕೆಲವೊಮ್ಮೆ ಮುಂದೆ ಆಯತಾಕಾರದ ಸ್ಲಾಟ್ಸ್ (Slots)ಗಳಿದ್ದು, ಇವುಗಳನ್ನು ಯುಎಸ್ಬಿ (USB-ಯುನಿವರ್ಸೆಲ್ ಸೀರಿಯಲ್ ಬಸ್) ಪೋರ್ಟ್ಸ್ ಎನ್ನುತ್ತಾರೆ. ಈ ಪೋರ್ಟ್ಸ್ ಗಳನ್ನು, ಶೇಖರಣಾ ಸಾಧನಗಳಾದ ಫ್ಲಾಷ್ ಡ್ರೈವ್ಸ್ ಗಳನ್ನು ಗಣಕಯಂತ್ರಕ್ಕೆ ಸಂಪರ್ಕಿಸಲು ಬಳಸುತ್ತಾರೆ. ಈ ಯುಎಸ್ಬಿ ಪೋರ್ಟ್ಅನ್ನು ಬಳಸಿ ಗಣಕಯಂತ್ರವನ್ನು ಡಿಜಿಟಲ್ ಕ್ಯಾಮೆರಾ ಮತ್ತು ಮೊಬೈಲ್ ಫೋನ್ ಗಳಿಗೆ ಸಂಪರ್ಕಿಸಬಹುದು. |