೧,೮೫೮ ನೇ ಸಾಲು: |
೧,೮೫೮ ನೇ ಸಾಲು: |
| # ಫೋಲ್ಡರ್ ಮತ್ತು ಕಡತವನ್ನು ಆಯ್ಕೆ ಮಾಡಿ. | | # ಫೋಲ್ಡರ್ ಮತ್ತು ಕಡತವನ್ನು ಆಯ್ಕೆ ಮಾಡಿ. |
| # Open ಅನ್ನುವುದರ ಮೇಲೆ ಕ್ಲಿಕ್ ಮಾಡಿ. | | # Open ಅನ್ನುವುದರ ಮೇಲೆ ಕ್ಲಿಕ್ ಮಾಡಿ. |
| + | ==ನೀವು ಪ್ರಯತ್ನಿಸಬಹುದಾದ ಇನ್ನಿತರ ಅಭ್ಯಾಸಗಳು== |
| + | # ಚಿತ್ರದಲ್ಲಿರುವಂತೆ ABCDಆಯತಾಕಾರವನ್ನು ರಚಿಸಲು ಕೆಳಗಿನ ಹಂತಗಳನ್ನು ಅನುಸರಿಸಿ. 'Move' ಉಪಕರಣವನ್ನು ಬಳಸಿ ಆಯತದ ಶೃಂಗವನ್ನು ಚಲಿಸಿ. ನೀವು ರಚಿಸಿದ ಆಯತಾಕಾರವು ಸರಿಯಿದ್ದಲ್ಲಿ ಶೃಂಗಗಳನ್ನು ಚಲಿಸಿದಾಗ ಅದು ಯಾವಾಗಲು ಆಯತವಾಗಿರುತ್ತದೆ. ನೀವು ಈ ರಚನೆಯನ್ನು ನೋಡಿ ಆಯತದ ಲಕ್ಷಣಗಳನ್ನು ಬರೆಯಿರಿ. |
| + | |
| + | ==ಹಂತಗಳು== |
| + | i. ಯಾವುದೇ ಅಳತೆಯ AB ರೇಖಾಖಂಡವನ್ನು ಎಳೆಯಿರಿ ('Segment between two points'ಉಪಕರಣ ) |
| + | ii. AB ರೇಖಾಖಂಡಕ್ಕೆ ಲಂಬವಾಗಿರುವಂತೆ A ಬಿಂದುವಿನಲ್ಲಿ ಲಂಬ ರೇಖೆಯನ್ನು ಎಳೆಯಿರಿ. ಇದಕ್ಕಾಗಿ ಜಿಯೋಜೀಬ್ರಾದಲ್ಲಿ 'Perpendicular Line' ಉಪಕರಣವನ್ನು ಆಯ್ಕೆ ಮಾಡಿ. ಬಿಂದು 'A' ಮೇಲೆ ಕ್ಲಿಕ್ ಮಾಡಿ. ನಂತರ AB ರೇಖಾಖಂಡವನ್ನು ಆಯ್ಕೆಮಾಡಿ. |
| + | iii. ಇದೇ ರೀತಿ AB ರೇಖಾಖಂಡಕ್ಕೆ ಲಂಬವಾಗಿರುವಂತೆ Bಬಿಂದುವಿನಲ್ಲಿ ಲಂಬ ರೇಖೆಯನ್ನು ಎಳೆಯಿರಿ. ಇದನ್ನು ಜಿಯೋಜೀಬ್ರಾದಲ್ಲಿ ಹೇಗೆ ಮಾಡುವಿರಿ? |
| + | iv. ಈಗ ನೀವು 'Parallel Line' ಉಪಕರಣವನ್ನು ಆಯ್ಕೆ ಮಾಡಿ, 'AB' ಗೆ ಯಾವುದಾದರೂ ಹೊಸ ಬಿಂದು 'C' ಯಿಂದ ಸಮಾನಾಂತರ ರೇಖೆಯನ್ನು ಎಳೆಯಿರಿ. |
| + | v. ಈ ಲಂಬ ಮತ್ತು ಸಮಾನಾಂತರ ರೇಖೆಗಳು ಛೇದಿಸುವ ಬಿಂದುಗಳನ್ನು 'Intersect Two Objects' ಉಪಕರಣವನ್ನು ಬಳಸಿ D ಮತ್ತು E ಎಂದು ಗುರುತಿಸಿ. |
| + | vi. ನೀವು ರಚಿಸಿದ ಆಯತವು ADEB ಆಗಿರುತ್ತದೆ. |
| + | vii. ಬಾಹುಗಳನ್ನು ಅಳತೆಮಾಡಲು 'Distance or Length' ಉಪಕರಣ ಬಳಸುವುದು ಮತ್ತು AD ಬಿಂದುವಿನ ಮೇಲೆ, ನಂತರ DE ತದನಂತರ EB ಮತ್ತು ಅಂತಿಮವಾಗಿ AB ಅನ್ನು ಕ್ಲಿಕ್ ಮಾಡಿ. |
| + | viii. 'Move' ಉಪಕರಣ ಬಳಸಿ A ಅಥವಾ B ಬಿಂದುವನ್ನು ಚಲಿಸಿ, ನೀವು ಗಮನಿಸುವ ಅಂಶಗಳನ್ನು ಪಟ್ಟಿಮಾಡಿ. |
| + | ix. ಈಗ ನೀವು 'Polygon'ಉಪಕರಣ ಬಳಸಿ ನಿಮ್ಮ ಆಯತವನ್ನು ಪೂರ್ಣಗೊಳಿಸಿ. ರಚನೆಯನ್ನು ಮರೆ ಮಾಡಿರಿ . ಹೇಗೆ ಇದನ್ನು ಮಾಡುವಿರಿ? |
| + | |
| + | ==ಅಧ್ಯಾಯದ ಸಾರಾಂಶ== |
| + | '''ಈ ಅಧ್ಯಾಯದಲ್ಲಿ ನೀವು ಕಲಿತಿರುವ ಅಂಶಗಳು''': |
| + | # ಜಿಯೋಜೀಬ್ರಾ ಎನ್ನುವುದು ಗಣಿತಶಾಸ್ತ್ರ ಸಾಧನವಾಗಿದ್ದು , ಇದನ್ನು ರೇಖಾಗಣಿತದ ಚಿತ್ರಗಳನ್ನು ರಚಿಸಲು ಮತ್ತು ರಚಿಸಿದ ಚಿತ್ರ ಹಾಗೂ ಅದನ್ನು ಪ್ರತಿನಿಧಿಸುವ ಬೀಜಗಣಿತದ ಸಮೀಕರಣಗಳನ್ನು ಒಟ್ಟಿಗೆ ನೋಡಲು ಬಳಸುತ್ತಾರೆ. ಇದು ಕ್ರಿಯಾಶೀಲವಾಗಿದ್ದು (ಇದರಲ್ಲಿ ಕೋನ, ಉದ್ದ ಹಾಗೂ ಇತರ ಅಳತೆಯನ್ನು ಬದಲಾಯಿಸಬಹುದು) ರೇಖಾಗಣಿತದ ಚಿತ್ರಗಳನ್ನು ಸಜೀವಗೊಳಿಸಿ, ನೀವು ರಚಿಸಿದ ಚಿತ್ರದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. |
| + | # ಜಿಯೋಜೀಬ್ರಾವನ್ನು ಬಳಸಿಕೊಂಡು ವಿವಿಧ ರೇಖಾಗಣಿತದ ಚಿತ್ರಗಳನ್ನು ರಚಿಸುವುದು ಮತ್ತು ಗಣಿತದ ಕೆಲವು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಬಳಸುವುದನ್ನು ತಿಳಿದಿದ್ದೀರಿ. |
| + | |
| + | ==ಅಭ್ಯಾಸಗಳು== |
| + | # ಪ್ರಮೇಯವನ್ನು ಪರಿಶೀಲಿಸುವುದು:ಒಂದು ತ್ರಿಭುಜದಲ್ಲಿ ಒಳಕೋನಗಳ ಒಟ್ಟು ಮೊತ್ತ 180ಡಿಗ್ರಿ ಆಗಿರುತ್ತದೆ. |
| + | x. ಮೂರು ಬಿಂದುಗಳಾದ A, B ಮತ್ತು Cಗಳನ್ನು ಗುರುತಿಸಿ. ('New Point' ಉಪಕರಣ ) |
| + | xi. A,B ಮತ್ತು C ಗಳನ್ನು ಶೃಂಗಗಳಾಗಿ ತ್ರಿಭುಜವನ್ನು ರಚಿಸಿ ('Polygon'ಉಪಕರಣ). |
| + | xii. ತ್ರಿಭುಜದ ಎಲ್ಲಾ ಒಳಕೋನಗಳನ್ನು ಅಳತೆ ಮಾಡಲು 'Angle' ಉಪಕರಣ ವನ್ನು ಆಯ್ಕೆಮಾಡಿ. ಈಗ ಒಳಭಾಗದ ಎಲ್ಲಾ ಕೋನಗಳ ಒಟ್ಟು ಮೊತ್ತ 180ಡಿಗ್ರಿಗೆ ಸಮವಾಗಿದೆಯೆ ಪರಿಶೀಲಿಸಿ. |
| + | xiii. ತ್ರಿಭುಜದ ಯಾವುದಾದರು ಶೃಂಗವನ್ನು (A,B ಅಥವಾ C)ಆಯ್ಕೆ ಮಾಡಿ ಮತ್ತು ಆ ಬಿಂದುವನ್ನು ಚಲಿಸಿ ('Move' ಉಪಕರಣ ಬಳಸಿ )ತ್ರಿಭುಜದ ಆಕಾರವನ್ನು ಬದಲಿಸಿ. |
| + | |
| + | '''ನಿಮ್ಮ ತರಗತಿಯಲ್ಲಿ ಈ ಪ್ರಮೇಯವನ್ನು ಸಾಬೀತುಪಡಿಸಿದ್ದೀರಾ?''' |
| + | A, B ಮತ್ತು C ಶೃಂಗಗಳು ಮೂರು ಒಂದೇ ಸರಳ ರೇಖೆಯಲ್ಲಿದ್ದರೆ ಏನಾಗುತ್ತದೆಂದು ಗಮನಿಸಿದ್ದೀರಾ? |
| + | ಕೆಳಗೆ ಕೊಟ್ಟಿರುವಂತೆ ಅಂಕಣಗಳನ್ನು ಪುಸ್ತಕದಲ್ಲಿ ರೂಪಿಸಿ, ನೀವು ಶೃಂಗಗಳನ್ನು ಚಲಿಸಿದಾಗ ಅವುಗಳ ಬೆಲೆಯನ್ನು ಬರೆಯಿರಿ. |
| + | ಕೋನ BAC |
| + | ಕೋನ CBA |
| + | ಕೋನ ACB |
| + | ABC ತ್ರಿಭುಜದ ಒಳಕೋನಗಳ ಒಟ್ಟುಮೊತ್ತ |
| + | ==ನಿಯಮವನ್ನು ಪರಿಶೋಧಿಸುವುದು: ಸಮರೂಪಿ ತ್ರಿಭುಜಗಳು ಸಮಾನುಪಾತದಲ್ಲಿರುತ್ತವೆ== |
| + | ತ್ರಿಭುಜವನ್ನು ರಚಿಸಿ. ಒಂದು ಬಾಹುವಿನ ಮೇಲೆ ಒಂದು ಬಿಂದುವನ್ನಿರಿಸಿ, ಈ ಬಿಂದುವಿನ ಮುಖಾಂತರ ತ್ರಿಭುಜದ ಒಂದು ಬಾಹುವಿಗೆ ಸಮಾನಾಂತರ ರೇಖೆಯನ್ನು ಎಳೆಯಿರಿ. (ಸಮಾನಾಂತರ ರೇಖೆ: 'Parallel Line' ಉಪಕರಣವನ್ನು ಬಳಸಿ.) ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ಎರಡು ತ್ರಿಭುಜಗಳನ್ನು ನೋಡಬಹುದು. |
| + | |
| + | I. ತ್ರಿಭುಜ ABCಯು ತ್ರಿಭುಜ DBEಗೆ ಹೇಗೆ ಸಮರೂಪಿಯಾಗಿದೆ ಎಂದು ವಿವರಿಸಿ. ಎರಡು ತ್ರಿಭುಜಗಳಲ್ಲಿರುವ ಬಾಹುಗಳ ಉದ್ದವನ್ನು ಅಳತೆ ಮಾಡಿ. |
| + | II. ಎರಡು ಸಮರೂಪಿ ತ್ರಿಭುಜಗಳ ಅನುರೂಪ ಬಾಹುಗಳ ಉದ್ದವು ಸಮಾನುಪಾತದಲ್ಲಿರುತ್ತವೆ ಎಂಬ ನಿಯಮವು ಇದಕ್ಕೆ ಅನ್ವಯಿಸುತ್ತದೆಯೇ ಎಂದು ಪರಿಶೀಲಿಸಿ. |
| + | III. ಉದ್ದವನ್ನು ಅಳತೆ ಮಾಡುವುದು: 'Distance or Length' ಉಪಕರಣ ಬಳಸಿ. |
| + | IV. ಆಲ್ ಜೀಬ್ರಾ ವ್ಯೂ ಗೋಚರಿಸುವಂತೆ ಮಾಡುವುದು: ಮೆನುವಿನಲ್ಲಿರುವ ವ್ಯೂ ಅನ್ನು ಆಯ್ಕೆ ಮಾಡಿ. |
| + | V. ಬಿಂದುವಿನ ಹೆಸರನ್ನು ತೋರಿಸುವುದು: ಯಾವುದಾದರೂ ಬಿಂದುವಿನ ಮೇಲೆ ರೈಟ್ ಕ್ಲಿಕ್ ಮಾಡಿ. ಬಿಂದುವಿನ ಎಡಭಾಗದ ಪಟ್ಟಿಯ ಮೇಲೆ ಕಾಣುವ ಪ್ರಾಪರ್ಟಿಸ್ ಅನ್ನು ಆಯ್ಕೆ ಮಾಡಿ. ಶೋ ಲೇಬಲ್ ಅನ್ನು ಟಿಕ್ ಮಾಡಿ. |
| + | VI. ಅನುಪಾತವನ್ನು ಲೆಕ್ಕಾಚಾರ ಮಾಡುವುದು: ಇನ್ ಪುಟ್ ಬಾರ್‌ನಲ್ಲಿ ತ್ರಿಜ್ಯಾ (r1)=ದೂರ [AB]/ದೂರ[BD]. AB ಮತ್ತು BD ಗಳು ಎರಡು ತ್ರಿಭುಜಗಳ ಅನುರೂಪ ಬಾಹುಗಳು. ಉಳಿದ ಇನ್ನೆರಡು ಜೊತೆ ಅನುರೂಪ ಬಾಹುಗಳಿಗೆ ಕಮ್ಯಾಂಡ್ ಅನ್ನು ಪುನರಾವರ್ತಿಸಿ. |
| + | VII. ಚಲಿಸಲು ಸಾಧ್ಯವಿರುವ ಬಿಂದುಗಳನ್ನು ಚಲಿಸುವ ಮೂಲಕ ತ್ರಿಭುಜದ ಆಕಾರವನ್ನು ಬದಲಿಸಿ.(ಇದಕ್ಕಾಗಿ 'Move' ಉಪಕರಣವನ್ನು ಬಳಸಿ). ಈಗಲೂ ಸಹ ತ್ರಿಭುಜಗಳು ಸಮರೂಪಿಯಾಗಿವೆಯೆ? ಅವುಗಳ ಅನುಪಾತ ಏನಾಗಬಹುದು? |
| + | ನಿಮ್ಮ ನೆರಳನ್ನು ಅಳತೆ ಮಾಡಲಾಗಿ ಅದು 1.34 ಮೀ ಎಂದಾಗಿದೆ. ನಿಮ್ಮ ಎತ್ತರವು 1.68ಮೀ. ಒಂದು ದೊಡ್ಡದಾದ ಮರದ ನೆರಳನ್ನು ಅಳತೆ ಮಾಡಿದಾಗ 8.50ಮೀ ಎಂದಾದರೆ, ಆ ಮರದ ಎತ್ತರ ಎಷ್ಟು? ನೀವು ಈ ಸಮಸ್ಯೆಯನ್ನು ವಿವರಿಸುವ ಒಂದು ನಕ್ಷೆಯನ್ನು ತಯಾರಿಸಿ ಮತ್ತು ಸಮರೂಪಿ ತ್ರಿಭುಜಗಳು ಸಮಾನುಪಾತದಲ್ಲಿರುತ್ತವೆ ಎಂಬ ನಿಯಮವನ್ನು ಉಪಯೋಗಿಸಿ ಸಮಸ್ಯೆಯನ್ನು ಬಗೆಹರಿಸಿ. |
| + | ==ಜಿಯೋಜೀಬ್ರಾದಲ್ಲಿ ವರ್ಗಾಕೃತಿಯನ್ನು ರಚಿಸುವುದು== |
| + | AB ಎಂಬ ರೇಖಾಖಂಡವನ್ನು ಮಾತ್ರ ನೀಡಿದೆ. ನೀವು ವರ್ಗಾಕೃತಿಯನ್ನು ಹೇಗೆ ರಚಿಸುವಿರಿ? ಇದನ್ನು ರಚಿಸುವ ಹಂತಗಳನ್ನು ಕೆಳಗೆ ನೀಡಲಾಗಿದೆ. |
| + | I. 'Segment between two points' ಉಪಕರಣವನ್ನು ಬಳಸಿ ABರೇಖಾಖಂಡವನ್ನು ಎಳೆಯುವುದು. |
| + | II. A ಮತ್ತು B ಬಿಂದುಗಳಲ್ಲಿ ಎರಡು ಲಂಬ ರೇಖೆಗಳನ್ನು ಎಳೆಯಿರಿ ಮತ್ತು AB ರೇಖಾಖಂಡಕ್ಕೆ ಲಂಬವಾಗಿರಲಿ ಇದಕ್ಕೆ 'Perpendicular Line' ಉಪಕರಣ ಬಳಸಿ. |
| + | III. 'Circle with Centre through point' ಉಪಕರಣವನ್ನು ಬಳಸಿ ವೃತ್ತದ ತ್ರಿಜ್ಯವು AB ರೇಖಾಖಂಡದ ಉದ್ದಕ್ಕೆ ಸಮನಾಗಿರುವಂತೆ ಎಳೆಯಿರಿ. ವೃತ್ತದ ಕೇಂದ್ರವನ್ನು A ಬಿಂದು ಎಂದು ಗುರುತಿಸಿ ಮತ್ತು B ಬಿಂದುವನ್ನು ವೃತ್ತದ ಮೇಲಿನ ಬಿಂದು ಎಂದು ಗುರುತಿಸಿ. |
| + | IV. 'Intersection two Objects' ಉಪಕರಣ ಬಳಸಿ ವೃತ್ತವು ಲಂಬರೇಖೆಯ ಮೇಲೆ ಛೇದಿಸುವ ಬಿಂದುವಿನ ಮೇಲೆ ಕ್ಲಿಕ್ ಮಾಡಿ, ಇದು C ಬಿಂದು ಆಗಿರುತ್ತದೆ. |
| + | V. C ಬಿಂದು ಮತ್ತು AB ರೇಖಾಖಂಡವನ್ನು ಆಯ್ಕೆಮಾಡಿ ಸಮಾನಾಂತರ ರೇಖೆಯನ್ನು 'Parallel Line' ಉಪಕರಣ ಬಳಸಿ ಎಳೆಯಿರಿ. |
| + | VI. 'Intersection two Objects' ಉಪಕರಣ ಬಳಸಿ, ಸಮಾನಾಂತರ ರೇಖೆಯು ಲಂಬರೇಖೆಯನ್ನು ಛೇದಿಸುವ B ಬಿಂದುವಿನ ಮೇಲೆ ಕ್ಲಿಕ್ ಮಾಡಿ. ಇದು D ಬಿಂದು ಆಗಿರುತ್ತದೆ. |
| + | VII. ABCD ನಿಮ್ಮ ವರ್ಗಾಕೃತಿಯಾಗಿರುತ್ತದೆ. |
| + | VIII. 'Distance or Length' ಉಪಕರಣ ಬಳಸಿ ಬಾಹುಗಳನ್ನು ಅಳತೆ ಮಾಡಿ. ಏನನ್ನು ಗಮನಿಸುವಿರಿ? ವರ್ಗಾಕೃತಿಯ ಗುಣ ಲಕ್ಷಣಗಳೇನು? |
| + | IX. 'Move' ಉಪಕರಣ ಬಳಸಿ A ಅಥವಾ B ಬಿಂದುಗಳನ್ನು ಚಲಿಸಿ. ABCD ಇನ್ನೂ ವರ್ಗಾಕೃತಿ ಆಗಿದೆಯೇ? |
| + | |
| + | ದಯವಿಟ್ಟು ನಿಮ್ಮ ಶಿಕ್ಷಕರ ಜೊತೆ ಕಾರ್ಯ ನಿರ್ವಹಿಸಿ. ವಿಶೇಷವಾಗಿ 8 ಮತ್ತು 9 ಹಂತಗಳ ಬಗ್ಗೆ ಚರ್ಚಿಸಿ. |
| + | |
| + | ==ಪೂರಕ ಸಂಪನ್ಮೂಲಗಳು== |
| + | # ಜಿಯೋಜೀಬ್ರಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೆಬ್ ಸೈಟ್ ಅನ್ನು ಬಳಸಿ http://www.geogebra.org/en/wiki/index.php/English |
| + | # ನಿಮ್ಮ ಗಣಿತ ಶಿಕ್ಷಕರು ರಚಿಸಿದ ಜಿಯೋಜೀಬ್ರಾ ಕಡತಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ವೆಬ್ ಸೈಟ್ ಅನ್ನು ಸಂಪರ್ಕಿಸಿ http://rmsa.karnatakaeducation.org.in/ ನಂತರ ಈ ವೆಬ್‌ಸೈಟ್‌ನಲ್ಲಿ Maths Tab ಅನ್ನು ಆಯ್ಕೆ ಮಾಡಿ, ನಂತರ ಕಂಪ್ಯೂಟರ್ ಟೂಲ್ಸ್ ಟ್ಯಾಬ್ ಅನ್ನು ಆಯ್ಕೆ ಮಾಡಿ. |
| + | # ಜಿಯೋಜೀಬ್ರಾದ ವಿಡಿಯೋ ಪಾಠಗಳನ್ನು ನೋಡಲು ಈ ವೆಬ್ ಸೈಟ್ ಅನ್ನು ಬಳಸಿ http://spoken-tutorial.org/wiki/index.php/Geogebra |
| + | # ಗಣಿತ ಶಾಸ್ರ್ತದ ಒಲಂಪಿಯಾಡ್ಸ್ ನಲ್ಲಿ ಹೇಗೆ ಭಾಗವಹಿಸುವುದೆಂದು ತಿಳಿಯಲು http://olympiads.hbcse.tifr.res.in/ ವೆಬ್ ಸೈಟ್ ಅನ್ನು ಬಳಸಿ |
| + | # ಗಣಿತ ಶಾಸ್ರ್ತದ ಫಜಲ್ಸ್ ಗಳನ್ನು ಬಿಡಿಸುವುದನ್ನು ಪ್ರಯತ್ನಿಸಲು ಈ ವೆಬ್ ಸೈಟ್ ಗಳನ್ನು ಸಂಪರ್ಕಿಸಿ |
| + | http://www.homeschoolmath.net/online/math_games_fun.php http://mathematics.hellam.net/ |
| + | |
| + | =ವಿಜ್ಞಾನ ಮತ್ತು ತಂತ್ರಜ್ಞಾನ= |
| + | ==ಅಧ್ಯಾಯದ ಉದ್ದೇಶಗಳು== |
| + | '''ಈ ಅಧ್ಯಾಯದ ಕೊನೆಯಲ್ಲಿ ನೀವು ಕಲಿಯುವ ಅಂಶಗಳೆಂದರೆ''': |
| + | # ವಿಜ್ಞಾನ ಮತ್ತು ತಂತ್ರಜ್ಞಾನವು ಹೇಗೆ ಬೆಳೆದಿದೆ ಎಂದು ತಿಳಿಯುವಿರಿ . |
| + | # ವಿವಿಧ ವಿಷಯಗಳನ್ನು ಕಲಿಯಲು ವಿವಿಧ ತಂತ್ರಾಂಶ ಅಪ್ಲಿಕೇಷನ್ಸ್ ಗಳನ್ನು ಬಳಸುವುದನ್ನು ತಿಳಿಯುವಿರಿ. |
| + | # ಅನುಕರಣೆಗಳನ್ನು (Simulations)ಅರ್ಥಮಾಡಿಕೊಂಡು ಅವುಗಳನ್ನು ಬಳಸುವುದರ ಬಗ್ಗೆ ತಿಳಿಯುವಿರಿ. |
| + | # ಮಾಹಿತಿಯನ್ನು ಪಡೆಯಲು ಅಂತರ್ಜಾಲವನ್ನು ಬಳಸುವುದನ್ನು ತಿಳಿಯುವಿರಿ. |
| + | ಈ ಮಾಡ್ಯುಲ್‌ನಲ್ಲಿ ನೀವು ನಿಮ್ಮ ಶಿಕ್ಷಕರೊಂದಿಗೆ ಕೆಲಸ ಮಾಡುವಿರಿ. ನಿಮ್ಮ ಪಠ್ಯಕ್ರಮದಲ್ಲಿರುವ ಬೇರೆ ಬೇರೆ ವಿಷಯಗಳಿಗೆ ಉದಾಹರಣೆ ನೀಡಿ ಕಲಿಯಲು ಮಾರ್ಗದರ್ಶನ ನೀಡುತ್ತಾರೆ. ಇಲ್ಲಿ ನೀಡಿರುವ ಹಲವು ಉದಾಹರಣೆಗಳಿಗೆ ನೀವು ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡುವ ಮತ್ತು ತರಗತಿಯ ಹೊರಗೆ ವೀಕ್ಷಿಸುವ ಅವಶ್ಯಕತೆ ಇದೆ. |
| + | |
| + | ==ವಿಜ್ಞಾನ ಮತ್ತು ತಂತ್ರಜ್ಞಾನ== |
| + | ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿರುವ ಸಂಬಂಧವೇನು ? ವೈಜ್ಞಾನಿಕ ಕಲಿಕೆಯೆಂದರೆ ನಮ್ಮ ಸುತ್ತಲಿನ ವಸ್ತುಗಳನ್ನು ವೀಕ್ಷಿಸುವ ವಿಧಾನ, ಈ ಘಟನೆಗಳು ನಡೆಯಲು ಕಾರಣವೇನು ಎಂದು ಆಲೋಚಿಸುವುದು, ಘಟನೆಗಳು ಏಕೆ ನಡೆದವು ಎಂದು ವಿವರಿಸುವುದು, ನಡೆದ ಘಟನೆಗಳ ಬಗ್ಗೆ ಮಾಹಿತಿಯನ್ನು ದಾಖಲಿಸಿ ಮುಂದೆ ಏನಾಗಬಹುದೆಂದು ಊಹಿಸುವ ವಿಧಾನವಾಗಿದೆ. ವಿದ್ಯಮಾನಗಳನ್ನು ಅರ್ಥಮಾಡಿಕೊಂಡಾಗ ಅದು ಸಾಧನಗಳ/ಉಪಕರಣಗಳ ಅಭಿವೃದ್ಧಿಗೆ ದಾರಿಯಾಗಬಹುದು. ಇದನ್ನು ತಂತ್ರಜ್ಞಾನವೆಂದು (ಟೆಕ್ನಾಲಜಿ) ಕರೆಯುತ್ತೇವೆ. |
| + | ಈ ತಂತ್ರಜ್ಞಾನ ನಮಗೆ ವೀಕ್ಷಿಸುವ, ಪ್ರಯೋಗಗಳನ್ನು ಮಾಡುವ ಹಾಗೂ ಅವುಗಳನ್ನು ದಾಖಲಿಸುವ ಅನೇಕ ಹೊಸ ವಿಧಾನಗಳನ್ನು ಒದಗಿಸುತ್ತದೆ. ಇದು ವೈಜ್ಞಾನಿಕ ಕ್ಷೇತ್ರದ ಪ್ರಗತಿಗೆ ಕಾರಣವಾಗುತ್ತದೆ . ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಪರಸ್ಪರ ಸಂಬಂಧಪಟ್ಟಿವೆ . |
| + | ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಪ್ರಭಾವ ಬೀರಿರುವ ತಂತ್ರಜ್ಞಾನವೆಂದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT). ಇದರಲ್ಲಿ ಮಾಹಿತಿಯನ್ನು ವರ್ಗಾಯಿಸಲು ಗಣಕಯಂತ್ರ ಮತ್ತು ಅಂತರ್ಜಾಲಗಳು ಒಳಗೊಂಡಿದೆ. ನೀವು ಈಗಾಗಲೇ ಗಣಕಯಂತ್ರದ ಬೆಳೆದು ಬಂದ ಇತಿಹಾಸವನ್ನು ತಿಳಿದಿದ್ದೀರಿ. ಈಗ ನೀವು ಗಣಕಯಂತ್ರಗಳನ್ನು ವೈಜ್ಞಾನಿಕ ಸಂಶೋಧನೆಗೆ ಮತ್ತು ಅಧ್ಯಯನಕ್ಕೆ ಬೇರೆ ಬೇರೆ ವಿಧದಲ್ಲಿ ಹೇಗೆ ಬಳಸುವುದೆಂದು ತಿಳಿಯಬಹುದು. |
| + | ==ದೊಡ್ಡ ಪ್ರಮಾಣದ ಲೆಕ್ಕಾಚಾರ ಮಾಡುವುದು== |
| + | ವಿಜ್ಞಾನಿಗಳಿಗೆ ಬಹಳ ಸಂಖ್ಯೆಗಳ ಲೆಕ್ಕಾಚಾರ ಮಾಡುವುದರಲ್ಲಿ ಗಣಕಯಂತ್ರಗಳು ಸಹಾಯಕವಾಗಿವೆ. ಉದಾಹರಣೆಗೆ ಅಸಂಖ್ಯಾತ ಕೋಶಗಳು ಅಥವಾ ಅಸಂಖ್ಯಾತ ನಕ್ಷತ್ರಗಳು.. |
| + | ಅಧ್ಯಯನಕ್ಕೆ ಬೇಕಾದ ಮಾದರಿಯನ್ನು ತಯಾರಿಸುವುದು: |
| + | ವಿಜ್ಞಾನದಲ್ಲಿ ಪ್ರಯೋಗಗಳು ಬೇರೆ ಬೇರೆ ರೀತಿಯಲ್ಲಿರುತ್ತವೆ. ಕೆಲವು ಚಿಕ್ಕದಾಗಿಯೂ, ಕೆಲವು ದೊಡ್ಡದಾಗಿಯೂ, ಕೆಲವು ಸರಳವಾಗಿಯೂ, ಇನ್ನೂ ಕೆಲವುಗಳಿಗೆ ಹೆಚ್ಚು ಉಪಕರಣಗಳು ಬೇಕಾಗುತ್ತವೆ. ಕೆಲವು ತುಂಬಾ ಕ್ಲಿಷ್ಟಕರವಾಗಿರುತ್ತವೆ ಮತ್ತು ಅವುಗಳನ್ನು ಮಾಡಲು ಹೆಚ್ಚಿನ ಕೌಶಲ್ಯ ಬೇಕಾಗುತ್ತದೆ. ಮತ್ತೆ ಕೆಲವನ್ನು ಭೌತಿಕವಾಗಿ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ವಿಧಗಳಿಗೆ ಒಂದೊಂದು ಉದಾಹರಣೆಯನ್ನು ಯೋಚಿಸುವಿರಾ? |
| + | ಗಣಕಯಂತ್ರಗಳು ವಿಜ್ಞಾನಿಗಳಿಗೆ ಸಂಕೀರ್ಣವಾದ ಹಾಗೂ ಭೌತಿಕವಾಗಿ ಕಷ್ಟಕರವಾದ ಪ್ರಯೋಗಗಳ ಮಾದರಿಗಳನ್ನು ತಯಾರಿಸಲು ಸಹಾಯಮಾಡುತ್ತದೆ. ಒಂದು ಔಷಧಿಯು ಕೆಲಸ ನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಮಾನವನ ಜೀವಕೋಶದಂತಹ ಒಂದು ಗಣಕಯಂತ್ರದ ಅನುಕರಣೀಯ ಮಾದರಿಯನ್ನು ಮಾಡಿ ಅದಕ್ಕೆ ಪ್ರಾಯೋಗಿಕವಾಗಿ ಔಷಧಿ ಬಳಸಿದಾಗ ಅದು ಹೇಗೆ ಅದಕ್ಕೆ ಸ್ಪಂದಿಸುತ್ತದೆಂದು ತಿಳಿಯುತ್ತದೆ. ಅದೇ ರೀತಿ ನಾವು ಒಂದು ನಕ್ಷತ್ರದ ಒಳಹೊಕ್ಕು ಅದರ ಅಧ್ಯಯನವನ್ನು ಮತ್ತು ಅದರಲ್ಲಿ ರೇಡಿಯೋ ತರಂಗಗಳು ಹೇಗೆ ಉತ್ಪಾದನೆಯಾಗುತ್ತವೆಂದು ತಿಳಿಯಲು ಸಾಧ್ಯವಿಲ್ಲ ಆದರೆ ನಮ್ಮ ಗಣಕಯಂತ್ರದಲ್ಲಿ ಅದರ ಮಾದರಿಯನ್ನು ಮಾಡಬಹುದು. |
| + | |
| + | '''ವಿಜ್ಞಾನಿಗಳ ನಡುವೆ ಸಂಪರ್ಕ ಕಲ್ಪಿಸುವುದು ಮತ್ತು ದತ್ತಾಂಶ ಅಭಿವೃದ್ಧಿ ''' |
| + | ವಿಜ್ಞಾನ ಎಲ್ಲೆಲ್ಲೂ ಇದೆ. ಸಂಗ್ರಹಿಸಿದ ಮಾಹಿತಿಯನ್ನು ಹಂಚಲು ಯಾವಾಗ ಗಣಕಯಂತ್ರಗಳನ್ನು ಉಪಯೋಗಿಸಲಾಗುತ್ತದೋ ಆಗ ಹೆಚ್ಚು ಜನರಿಗೆ ಮಾಹಿತಿ ಲಭ್ಯವಾಗುತ್ತದೆ. ಬೆಂಗಳೂರಿನಲ್ಲಿರುವ ನ್ಯಾಷ್‌ನಲ್ ಸೆಂಟರ್ ಆಫ್ ಬಯೊಲಾಜಿಕಲ್ ಸೈನ್ಸಸ್ ಎನ್ನುವ ಸಂಸ್ಥೆಯು ಕರ್ನಾಟಕದಾದ್ಯಂತ ಇರುವ ಮರಗಳು ಮತ್ತು ಸಸ್ಯಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಸಂಗ್ರಹಿಸಿ ದತ್ತಾಂಶ ಅಭಿವೃದ್ಧಿ ಗೊಳಿಸಲು ಇಚ್ಛಿಸುತ್ತಿದೆ. ಈ ರೀತಿಯ ದತ್ತಾಂಶವು ಅನೇಕ ಜನರಿಗೆ ಲಭ್ಯವಾಗುತ್ತದೆ. |
| + | |
| + | ==ಪ್ರಯೋಗಾಲಯ ಅಭ್ಯಾಸಗಳು== |
| + | ಅಂತರ್ಜಾಲ ಎನ್ನುವುದು ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಅತ್ಯಂತ ಪ್ರಯೋಜನಕಾರಿ ಸಂಪನ್ಮೂಲವಾಗಿದೆ. |
| + | ನಿಮ್ಮ ಶಿಕ್ಷಕರ ನೆರವಿನಿಂದ , ಈ ವೆಬ್ ಸೈಟ್ ಗಳನ್ನು ನೋಡಿ. |
| + | #http://www.nasa.gov/audience/forstudents/5-8/index.html |
| + | #http://www.youtube.com/watch?v=E4k3kEA3pmo |
| + | ಈ ವೆಬ್ ಸೈಟ್ಸ್ ನಿಮಗೆ ಉಪಗ್ರಹಗಳ ಬಗ್ಗೆ, ಅವುಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ. |
| + | ಗಣಕಯಂತ್ರವು ವೈಜ್ಞಾನಿಕ ಮಾಹಿತಿಯನ್ನು ಅನೇಕ ಜನರಿಂದ ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಹೇಗೆ ಸಹಾಯಕವಾಗಿದೆ ಎಂಬುದನ್ನು ತಿಳಿಯಲು ಅಂತರ್ಜಾಲದಲ್ಲಿ ಸಿಟಿಜನ್ ಸ್ಪಾರೋ ಪ್ರಾಜೆಕ್ಟ್ ಅನ್ನು ಪರಿಶೀಲಿಸಿ. |
| + | ಗಣಕಯಂತ್ರದ ಸಿಮ್ಯುಲೇಶನ್ಸ್ (ಅನುಕರಣೆ ಗಳು)ಎಂದರೇನು? |
| + | ವೈಜ್ಞಾನಿಕವಾಗಿ ಸಂಶೋಧನೆಯಲ್ಲಿ ಕೆಲ ಭೌತಿಕ ಪ್ರಯೋಗಗಳು ತುಂಬ ದುಬಾರಿಯಾಗಿದ್ದಾಗ ಅಥವಾ ಅಪಾಯಕಾರಿಯಾಗಿದ್ದಾಗ ಅಥವಾ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವಂತಿದ್ದಾಗ ಗಣಕಯಂತ್ರದ ಸಿಮ್ಯುಲೇಶನ್ಸ್ ಗಳು ತುಂಬಾ ಪ್ರಯೋಜನಕಾರಿ. ಒಬ್ಬ ವಿಜ್ಞಾನಿ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡುವಾಗ, ಆ ಬದಲಾವಣೆಗೆ ಕಾರಣವೇನು ಮತ್ತು ಏನು ಬದಲಾಗಬಹುದು ಎಂದು ಊಹಿಸಬೇಕಾಗುತ್ತದೆ. ಈ ಮಾಹಿತಿಯನ್ನು ಗಣಕಯಂತ್ರಕ್ಕೆ ನಮೂದಿಸಬಹುದು ಮತ್ತು ಸಿಮ್ಯುಲೇಶನ್ಸ್ ಎಲ್ಲಾ ರೀತಿಯ ಲೆಕ್ಕಾಚಾರ ಮಾಡಿ ಯಾವ ರೀತಿಯ ಬದಲಾವಣೆಯಾಗುತ್ತದೆ ಎಂದು ತೋರಿಸುತ್ತದೆ. ಕೆಲವೊಮ್ಮೆ ಸಿಮ್ಯುಲೇಶನ್ಸ್ ಗಳಲ್ಲಿ ತೋರಿಸಿದ ಬದಲಾವಣೆಯು ವಿಜ್ಞಾನಿಯು ಊಹೆ ಮಾಡಿದ್ದಕ್ಕಿಂತ ವಿಭಿನ್ನವಾಗಿರಬಹುದು. ಇದು ವಿಜ್ಞಾನಿಗಳು ಸಿದ್ಧಾಂತವನ್ನು ಸಂಸ್ಕರಿಸಲು ಸಹಾಯಕವಾಗುತ್ತದೆ. ಸಿಮ್ಯುಲೇಶನ್ಸ್ ಗಳು ಗಣಕಯಂತ್ರದ ಮೇಲೆ ಪ್ರಯೋಗಗಳನ್ನು ತೋರಿಸುತ್ತವೆ. ಪ್ರಾಯೋಗಿಕವಾಗಿ ಅದನ್ನು ಮಾಡಿ ತೋರಿಸುತ್ತದೆ. ವಿಜ್ಞಾನಿಗಳು ದತ್ತಾಂಶವನ್ನು ಬದಲಾಯಿಸಿ ಪ್ರಯೋಗದಲ್ಲಾಗುವ ಬದಲಾವಣೆಯನ್ನು ಕಾಣಬಹುದು. ಇದು ಹೊಸ ಜ್ಞಾನದ ಅಭಿವೃದ್ಧಿಗೆ ಸಹಾಯಕವಾಗಿದೆ. |
| + | ಸಿಮ್ಯುಲೇಶನ್ಸ್ ಗಳು ಅನಿಮೇಶನ್ಸ್ ಗಿಂತ ವಿಭಿನ್ನವಾಗಿದೆ |
| + | ಗಣಕಯಂತ್ರದ ಮಾದರಿಗಳು ಅನಿಮೇಶನ್ಸ್ ಗಿಂತ ವಿಭಿನ್ನವಾಗಿವೆ. ಅನಿಮೇಶನ್ಸ್ ನಲ್ಲಿ ನಾವು ಒಂದು ವಿದ್ಯಮಾನವನ್ನು ಒಂದು ಚಲನಚಿತ್ರದ ಮುಖಾಂತರ ನೋಡಬಹುದು. ಇಲ್ಲಿ ನಮೂದಿಸುವ ದತ್ತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ. |
| + | |
| + | |
| + | ನಿಮ್ಮ ಶಿಕ್ಷಕರು ಈ ಕೆಳಗಿನವುಗಳನ್ನು ತೋರಿಸುತ್ತಾರೆ. ಈ ಎರಡು ಚಟುವಟಿಕೆಗಳಲ್ಲಿ ನೀವು ಗಮನಿಸುವ ಅಂಶವನ್ನು ಪಟ್ಟಿಮಾಡಿ. ಇವೆರಡರಲ್ಲೂ ಏನಾದರೂ ವ್ಯತ್ಯಾಸ ಕಾಣಿಸಿತೆ? |
| + | # ಅಪ್ಲಿಕೇಶನ್ಸ್ → ಎಜುಕೇಷನ್→Ph ET→ ಮೈ ಸೋ ಲಾರ್ ಸಿಸ್ಟಮ್. |
| + | # ಅಪ್ಲಿಕೇಶನ್ಸ್ →ಎಜುಕೇಷನ್ →ಕೆಸ್ಟಾರ್ಸ್ →ಟೂಲ್ಸ್ → ಸೊಲಾರ್ ಸಿಸ್ಟಮ್ |
| + | # ಸೊಲಾರ್ ಸಿಸ್ಟಮ್ ಗೆ ಸಂಬಂಧಪಟ್ಟ ಕೆಳಗಿನ ಲಿಂಕ್ ಅನ್ನು ನೋಡಿ |
| + | http://www.stumbleupon.com/su/569KDD/dd.dynamicdiagrams.com/wp-content/uploads/2011/01/orrery_2006.swf |
| + | |
| + | ==ವಿಜ್ಞಾನ ಅಧ್ಯಯನ ಮಾಡಲು ಗಣಕಯಂತ್ರದ ಸಿಮ್ಯುಲೇಶನ್ಸ್ ಗಳು== |
| + | ಪಿಹೆಚ್ ಈಟಿ (Ph ET) ಎನ್ನುವುದು ತಂತ್ರಾಂಶದ ಆಪ್ಲೀಕೇಶನ್‌ಆಗಿದ್ದು ಇದು ಗಣಕಯಂತ್ರದ ಪ್ರಯೋಗಗಳು ಮತ್ತು ಚಟುವಟಿಕೆಗಳ ಪ್ರದರ್ಶನಗಳನ್ನು ಒಳಗೊಂಡಿದೆ. ಇದನ್ನು ಸಿಮ್ಯುಲೇಶನ್ ಎನ್ನುತ್ತಾರೆ. ಸಿಮ್ಯುಲೇಶನ್ ಎನ್ನುವುದು ಒಂದು ರೀತಿಯಲ್ಲಿ ಗಣಕಯಂತ್ರದಲ್ಲಿ ಪ್ರಯೋಗ ಮಾಡುವುದಾಗಿದೆ . |
| + | ಪ್ರಯೋಗಾಲಯದ ಅಭ್ಯಾಸಗಳು |
| + | |
| + | ನೀವು PhETಯನ್ನು ಆಪ್ಲಿಕೇಷನ್ಸ್ → ಎಜುಕೇಷನ್→ ಸೈನ್ಸ್ ನಲ್ಲಿ ಹುಡುಕಬಹುದು. ಗಣಕಯಂತ್ರಗಳನ್ನು ವಿಜ್ಞಾನದಲ್ಲಿ ಬಳಸುವಾಗ ಸಿಮ್ಯುಲೇಶನ್ಸ್ ಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯುತ್ತೇವೆ. PhET ಸಿಮ್ಯುಲೇಶನ್ಅನ್ನು ಅಂತರ್ಜಾಲದ http://phet.colorado.edu/en/simulations/category/new ನಲ್ಲಿ ಕಾಣಬಹುದು. ನೀವು PhETಯನ್ನು ತರೆದಾಗ ಕೆಳಗೆ ತೋರಿಸಿದ ಈ ರೀತಿಯಾದ ಪುಟ ಕಾಣಿಸುತ್ತದೆ. |
| + | 'Play with sims' ಆಪ್ಷನ್ ಅನ್ನು ನೀವು ಕ್ಲಿಕ್ ಮಾಡಿದಾಗ ವಿವಿಧ ವಿಷಯಗಳ ಬಗ್ಗೆ ಸಿಮ್ಯುಲೇಶನ್ ಅನ್ನು ತೆರೆಯುತ್ತದೆ. ನಾವು ಭೌತಶಾಸ್ತ್ರದ ಮೇಲೆ ಕ್ಲಿಕ್ ಮಾಡಿ ತಂತಿಯ ಅಲೆಗಳ(Waves on Strings ) ಸಿಮ್ಯುಲೇಶನ್ ಮೇಲೆ ಸ್ರ್ಕೋಲ್ ಮಾಡೋಣ. ಸಿಮ್ಯುಲೇಶನ್ ಅನ್ನು ತೆರೆಯಬೇಕೆಂದಾಗ 'ರನ್ ನೌ'(Run Now) ಎಂಬ ಹಸಿರು ಆಯತಾಕಾರದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದು ಸಿಮ್ಯುಲೇಶನ್‌ಅನ್ನು ಆರಂಭಿಸುತ್ತದೆ. |
| + | ಅಭ್ಯಾಸ 01 Wave on Strings ಎಂಬ ಸಿಮ್ಯುಲೇಶನ್‌ಅನ್ನು ಗಮನಿಸುವುದು. |
| + | ನೀವು ಈ ರೀತಿಯ ಚಿತ್ರವನ್ನು ನೋಡಬಹುದು. ನಿಮಗೆ, ಈ ಸಿಮ್ಯುಲೇಶನ್ ನೀವು ಹಗ್ಗದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ನಿಮ್ಮ ಕೈಯಲ್ಲಿ ಹಿಡಿದಿರುವ ಹಾಗೆ ಇರುತ್ತದೆ. |
| + | ನೀವು ಕೈಯನ್ನು ಅಲುಗಾಡಿಸಿದಾಗ, ಹಗ್ಗದ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ ಅಲುಗಾಡಲು ಪ್ರಾರಂಭಿಸಿ ಸುವುದನ್ನು ನೋಡಬಹುದು. ಇದೇ ರೀತಿ ನೀವು ಸಿಮ್ಯುಲೇಶನ್‌ನಲ್ಲಿ ಹಗ್ಗದ ಮೇಲೆ ವ್ರೆಂಚ್‌ಅನ್ನು ಚಲಿಸಿದಾಗ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ ಹಗ್ಗವು (ಹಗ್ಗವು ಅನೇಕ ಮಣಿಗಳ ಸಂಗ್ರಹ )ಚಲಿಸುವುದನ್ನು ನೋಡಬಹುದು. |
| + | ಈ ರೀತಿ ಅನುಕರಣೆಯು ನಮ್ಮ ಮೌಸ್ ನಿಂದ ಹಗ್ಗವನ್ನು ವಿವಿಧ ರೀತಿಯಲ್ಲಿ ಚಲಿಸುವಂತೆ ಮಾಡುವ ಆಯ್ಕೆಗಳನ್ನು ನಮಗೆ ನೀಡುತ್ತದೆ. ನಿಮ್ಮ ಶಿಕ್ಷಕರು ಈ ವಿವಿಧ ಆಯ್ಕೆಗಳು ಏನೆಂಬುದನ್ನು ತಿಳಿಸುತ್ತಾರೆ. |
| + | |
| + | ==ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ== |
| + | # ನೀವು ತುದಿಗಳನ್ನು ಮೇಲೆ ಕೆಳಗೆ ಅಲುಗಾಡಿಸಿದಾಗ, ತಂತಿ ಏನಾದರು ಚಲಿಸಿತೇ? ಹೇಗೆ ಚಲಿಸಿತು? ಪ್ರತಿಯೊಂದು ಮಣಿಗಳು ಹೇಗೆ ಚಲಿಸಿದವು? |
| + | # ನೀವು ಸಿಮ್ಯುಲೇಶನ್ ನೋಡಿದಾಗ, ಒಂದು ತುದಿಯಿಂದ ಇನ್ನೊಂದು ತುದಿಗೆ ಏನೋ ಚಲಿಸಿದ ಹಾಗೆ ಕಾಣುತ್ತದೆ. ಏನು ಚಲಿಸುತ್ತಿದೆ ? |
| + | # ನಿಮ್ಮ ಕೈಗಳಿಂದ ತಂತಿಯನ್ನು ಚಲಿಸಿದಾಗ ಏನಾಗುತ್ತದೆಂದು ಅರ್ಥಮಾಡಿಕೊಳ್ಳೋಣ. ಈ ಕೆಳಗಿನ ಅಂಕಣವನ್ನು ಪೂರ್ತಿಗೊಳಿಸಿ. |
| + | |
| + | ==ಚಟುವಟಿಕೆ== |
| + | ನೀವು ಏನನ್ನು ಗಮನಿಸಿದಿರಿ? |
| + | ವ್ರೆಂಚ್(Wrench)ಅನ್ನು ಮೇಲಕ್ಕೆ ಚಲಿಸಿದಾಗ |
| + | |
| + | ವ್ರೆಂಚ್ ಅನ್ನು ಕೆಳಕ್ಕೆ ಚಲಿಸಿದಾಗ |
| + | |
| + | ವ್ರೆಂಚ್ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಿದಾಗ |
| + | |
| + | ತಂತಿಯಲ್ಲಿರುವ ಮಣಿಗಳು ಎಡದಿಂದ ಬಲಕ್ಕೆ ಚಲಿಸುತ್ತಿವೆಯೇ?, ಬಲದಿಂದ ಎಡಕ್ಕೆ? ಅಥವಾ ಮೇಲೆ ಮತ್ತು ಕೆಳಗೆ ಚಲಿಸುತ್ತಿವೆಯೇ? ತರಂಗಗಳ ಬಗ್ಗೆ ಇದು ಏನನ್ನು ಹೇಳುತ್ತದೆ? |
| + | |
| + | ತಂತಿಗೆ ಒತ್ತಡ ಹೆಚ್ಚಾದಾಗ ಮತ್ತು ತಂತಿಗೆ ಒತ್ತಡ ಕಡಿಮೆಯಾದಾಗ ಎಷ್ಟು ವೇಗವಾಗಿ ಚಲಿಸುತ್ತದೆ. ಏನಾದರೂ ವ್ಯತ್ಯಾಸವಿದೆಯೇ? ಮತ್ತು ಏಕೆ? |
| + | |
| + | ನೀವು ಅಲೆಗಳ ವಿಸ್ತಾರವನ್ನು ತಗ್ಗಿಸುತ್ತಾ ಹೋದ ಹಾಗೆ (damping ) ತಂತಿಯ ಚಲನೆ ಹೇಗಿರುತ್ತದೆ. |
| + | |
| + | |
| + | ನೀವು ಲೋಲಕದಂತೆ ತೂಗಾಡುವ ಆಯ್ಕೆಯನ್ನು ಬಳಸಿ ತಂತಿಯನ್ನು ಚಲಿಸುವಂತೆ ಮಾಡಿದಾಗ ಏನಾಗುತ್ತದೆಂದು ಅರ್ಥಮಾಡಿಕೊಂಡು, ಕೆಳಗೆ ನೀಡಿರುವ ಅಂಕಣವನ್ನು ಪೂರ್ಣಗೊಳಿಸಿ. ಹಸಿರಾಗಿರುವ ಆಯತಾಕಾರದ ನಿಯಂತ್ರಣದ ಗುಂಡಿಯಲ್ಲಿ ಪಾರ (Amplitude- ಕಂಪನದ ಮಧ್ಯ ಸ್ಥಾನದಿಂದ ಅಂತ್ಯದ ಬಿಂದುವಿಗೆ ಇರುವ ದೂರ) , ಆವೃತ್ತಿ (frequency)ಮತ್ತು ಅಲೆಗಳ ವಿಸ್ತಾರವನ್ನು ತಗ್ಗಿಸುವ (damping) ಗುಂಡಿಗಳನ್ನು ನೋಡಬಹುದು. ಈ ಸಿಮ್ಯುಲೇಶನ್‌ನ ಕೊನೆಗೆ ನೀವು ಪಾರ ಮತ್ತು ಆವೃತ್ತಿಯ ಬಗ್ಗೆ ವಿವರಿಸುವಿರಿ. |
| + | |
| + | ಪಾರವನ್ನು ಹಿಗ್ಗಿಸಿದಾಗ ಮತ್ತು ಕುಗ್ಗಿಸಿದಾಗ |
| + | ತರಂಗ (ಅಲೆ)ವು ಹೇಗೆ ಕಾಣುತ್ತದೆ? ಮಣಿಗಳು ಹೇಗೆ ಚಲಿಸುತ್ತವೆ. ನೀವು ಪಾರವನ್ನು ಬದಲಾಯಿಸಿದಾಗ ಮಣಿಗಳಲ್ಲಿ ಏನು ಬದಲಾವಣೆಯಾಗುತ್ತದೆ? ಎಲ್ಲಾ ಮಣಿಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತವೆಯೇ? ನೀವು ಪಾರವನ್ನು ಹೆಚ್ಚು ಮತ್ತು ಕಡಿಮೆ ಮಾಡಿದಾಗ ಆವೃತ್ತಿ ಯು ಏನಾಗುತ್ತದೆ? |
| + | ಆವೃತ್ತಿಯನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು |
| + | ಅಲೆ (ತರಂಗ) ಹೇಗೆ ಕಾಣುತ್ತದೆ? ಮಣಿಗಳು ಹೇಗೆ ಚಲಿಸುತ್ತವೆ? ನೀವು ಆವೃತ್ತಿಯನ್ನು ಬದಲಾಯಿಸಿದಾಗ ಮಣಿಗಳಲ್ಲಿ ಏನು ಬದಲಾವಣೆ ಕಾಣುವಿರಿ? ಎಲ್ಲಾ ಮಣಿಗಳು ಒಂದೇ ದಿಕ್ಕಿನಲ್ಲಿ ಚಲಿಸುತ್ತವೆಯೇ? ನೀವು ಆವೃತ್ತಿಯನ್ನು ಹೆಚ್ಚಿಸಿದಾಗ ಮತ್ತು ಕಡಿಮೆ ಮಾಡಿದಾಗ ಪಾರದಲ್ಲಿ ಏನು ವ್ಯತ್ಯಾಸ ಕಾಣುವಿರಿ? |
| + | ಒತ್ತಡ ಮತ್ತು ಡ್ಯಾಂಪಿಂಗ್ ಅನ್ನು ಬದಲಾಯಿಸಿದಾಗ |
| + | ತರಂಗ ಏನಾಗುತ್ತಿದೆಯೆಂದು ಗಮನಿಸಿ? ತರಂಗದ ಕೊನೆ ಭಾಗವನ್ನು ಸರಿಯಾಗಿ ಬಿಗಿಮಾಡದೆ ಸಡಿಲವಾಗಿ ಬಿಟ್ಟರೆ ಏನಾಗುತ್ತದೆ? |
| + | ಮಣಿಗಳು ಚಲಿಸುವುದನ್ನು ನೋಡಲು ನಿಮ್ಮ ರೂಲರ್ ಅನ್ನು ಬಳಸಿ |
| + | |
| + | ಎಷ್ಟು ದೂರ ಮಣಿಗಳು ಚಿಮ್ಮುತ್ತವೆ? ಏನಾದರೂ ಬದಲಾವಣೆ ಇದೆಯಾ? |
| + | |
| + | ನೀವು ರೂಲರ್‌ಅನ್ನು ಬಳಸಿದಾಗ ಮಣಿಗಳು ಅಲೆಗಳು ಪ್ರಾರಂಭವಾದ ಸಮಯಕ್ಕಿಂತ ಹೆಚ್ಚು ಎತ್ತರಕ್ಕೆ ಚಿಮ್ಮುವುದನ್ನು ನೋಡಬಹುದು. ಇದು ಹೀಗೆ ಏಕೆ? ಮಣಿಗಳು ಎಷ್ಟು ಎತ್ತರಕ್ಕೆ ಚಿಮ್ಮಿವೆ ಎಂಬುವುದು ಪಾರಕ್ಕೆ ಸಂಬಂಧಿಸಿದೆ. ಸ್ವಲ್ಪ ಸಮಯದ ನಂತರ ಮಣಿಗಳು ಇಷ್ಟು ಎತ್ತರಕ್ಕೆ ಏಕೆ ಚಿಮ್ಮುತ್ತವೆ ಎಂಬುದನ್ನು ಮತ್ತು ಅವುಗಳಿಗೆ ಅಲೆಗಳ ಪಾರದೊಂದಿಗಿರುವ ಸಂಬಂಧವನ್ನು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ. ಪಾರ ಮತ್ತು ಆವೃತ್ತಿಯಿಂದ ಏನನ್ನು ಅರ್ಥಮಾಡಿಕೊಂಡಿದ್ದೀರೆಂದು ವಿವರಿಸಿ. |
| + | |
| + | ==ಅಧ್ಯಾಯದ ಸಾರಾಂಶ== |
| + | # ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಂಬಂಧಿಸಿವೆ. ತಂತ್ರಜ್ಞಾನವು ವಿಜ್ಞಾನ ಬೆಳೆಯಲು ಸಹಾಯ ಮಾಡಿದೆ. |
| + | # ಗಣಕಯಂತ್ರಗಳು ವಿಜ್ಞಾನ ಅಧ್ಯಯನದ ಆಭಿವೃದ್ಧಿಗೆ ಸಹಾಯಕವಾಗಿವೆ. ಗಣಕಯಂತ್ರಗಳನ್ನು ವಿಜ್ಞಾನದ ಮಾದರಿಗಳನ್ನು ಅನುಕರಣೆ ಮಾಡಲು, ದೊಡ್ಡ ಮೊತ್ತದ ಲೆಕ್ಕಚಾರ ಮಾಡಲು, ದತ್ತಾಂಶಗಳನ್ನು ಬೆಳೆಸಲು, ಜನರಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಬಳಸಬಹುದು. |
| + | # ಗಣಕಯಂತ್ರ ಮತ್ತು ಅಂತರ್ಜಾಲ ತಂತ್ರಜ್ಞಾನವನ್ನು ಬಳಸಿ ಶಾಲೆಗಳಲ್ಲಿ ವಿಜ್ಞಾನದ ಅಧ್ಯಯನಕ್ಕೂ ಸಹ ಬಳಸಬಹುದು. |
| + | # ನೀವು ಪರಿಸರ ವ್ಯವಸ್ಥೆ, ಬಯೋಮ್‌ಗಳ ಬಗ್ಗೆ ವಿಡಿಯೋ ನೋಡಿ ಅಧ್ಯಯನ ಮಾಡಿರುವಿರಿ. |
| + | # ನೀವು ಆನಿಮೇಶನ್ ಮತ್ತು ಸಿಮ್ಯುಲೇಷನ್ಸ್ (ಅನುಕರಣೆಯ) ಗಳ ನಡುವಿನ ವ್ಯತ್ಯಾಸವನ್ನು ತಿಳಿದಿರುವಿರಿ. |
| + | |
| + | ==ಅಭ್ಯಾಸಗಳು== |
| + | # PhET ಸಿಮ್ಯುಲೇಷನ್ ಅನ್ನು ಕಲರ್ ವಿಷನ್‌ನಲ್ಲಿ ತೆರೆಯಿರಿ. ಆರ್ ಜಿ ಬಿ ಬಲ್ಬ್ಸ್ ಮತ್ತು ಸಿಂಗಲ್ ಬಲ್ಬ್ಸ್ ಸಿಮುಲೇಷನ್ಸ್ ಗಳನ್ನು ಚಾಲುಗೊಳಿಸಿ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: |
| + | I. ಒಂದೇ ಬಲ್ಬ್ ಅನ್ನು ಬಳಸಿದಾಗ, ಮನುಷ್ಯ ಯಾವ ಬಣ್ಣವನ್ನು ನೋಡುತ್ತಾನೆ?ಏಕೆ? |
| + | II. ಒಂದಕ್ಕಿಂತ ಹೆಚ್ಚು ಬಣ್ಣವನ್ನು ಬಳಸಿದಾಗ, ಮನುಷ್ಯ ಯಾವ ಬಣ್ಣವನ್ನು ನೋಡಬಹುದು? ಏಕೆ? ಮನುಷ್ಯ ನೋಡುತ್ತಿರುವ ಪ್ರತಿಯೊಂದು ಬಲ್ಬ್ ಅನ್ನು ಸ್ಲೈಡರ್‌ನಿಂದ ಚಲಿಸಿದಾಗ ಇದು ಬದಲಾಗುತ್ತದೆಯೇ? ಇದು ಬದಲಾವಣೆಯಾದರೆ, ಏಕೆ ಬದಲಾಯಿತು? |
| + | III. ಎಲ್ಲಾ ಮೂರು ಬಣ್ಣಗಳನ್ನು ಬಳಸಿದಾಗ ಮನುಷ್ಯನಿಗೆ ಕಾಣುವ ಬಣ್ಣ ಯಾವುದು? ಬಿಳಿಯ ಬೆಳಕನ್ನು ಮತ್ತೆಲ್ಲಿ ನಾವು ನೋಡುತ್ತೇವೆ? ಈಗ ಆರ್.ಜಿ.ಬಿ ಗಳನ್ನು ಮಿಶ್ರಮಾಡಿದರೆ ಬಿಳಿಯ ಬೆಳಕನ್ನು ನೀಡುವುದಾದರೆ, ಕೆಂಪು ,ಹಸಿರು ಮತ್ತು ನೀಲಿ ಬಣ್ಣಗಳ ಸ್ವಭಾವವೇನು ತಿಳಿಸಿ? |
| + | IV. ಯಾವಾಗ ಮನುಷ್ಯ ಯಾವುದಾದರೂ ಬಣ್ಣವನ್ನು ನೋಡುತ್ತಾನೆ ಮತ್ತು ಯಾವಾಗ ಕಪ್ಪು ಬಣ್ಣ ನೋಡುತ್ತಾನೆ? |
| + | V. ಶೋಧನ (ಪಿಲ್ಟರ್) ಏನು ಮಾಡುತ್ತದೆ? ನೀವು ಬಿಳಿಯ ಬಣ್ಣದ ಮತ್ತು ಏಕವರ್ಣೀಯ ಬಣ್ಣಗಳ ಮೂಲಗಳಿಗಿರುವ ವ್ಯತ್ಯಾಸವೇನೆಂದು ವಿವರಿಸಿ? |
| + | # ಭೌತಶಾಸ್ತ್ರದ ಘರ್ಷಣೆ / ಚಲನೆಯ PhETಸಿಮ್ಯುಲೇಶನ್ ಅನ್ನು ತೆರೆದು, ಸಿಮ್ಯುಲೇಶನ್ ಅನ್ನು ಚಾಲುಗೊಳಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. |
| + | # ಚಲಿಸುತ್ತಿರುವಂತಹ ಹಸಿರು ಮತ್ತು ಹಳದಿಬಣ್ಣದ ವೃತ್ತಗಳು ಏನನ್ನು ಸೂಚಿಸುತ್ತವೆ.? |
| + | # ನೀವು ಹಳದಿ ಪುಸ್ತಕವನ್ನು ಹಸಿರು ಪುಸ್ತಕಕ್ಕೆ ಉಜ್ಜಿದಾಗ ಏನಾಗುತ್ತದೆ? ಇದರಲ್ಲಿ ಶಾಖ ಉತ್ಪತ್ತಿಯಾಗುತ್ತದೆಂದು ಹೇಗೆ ತಿಳಿಯುತ್ತದೆ? |
| + | # ತಾಪ ಅತಿ ಹೆಚ್ಚಾದಾಗ ಹಳದಿ ಬಣ್ಣದ ವೃತ್ತಗಳು ಹಾರಿಹೋಗುತ್ತವೆ. ಭೌತಿಕವಾಗಿ ಇದು ಏನನ್ನು ಸೂಚಿಸುತ್ತದೆ? |
| + | |
| + | ==ಪೂರಕ ಸಂಪನ್ಮೂಲಗಳು== |
| + | #ರೇಡಿಯೋ ಖಗೋಳ ವಿಜ್ಞಾನದ ವಿವರಣೆಗೆ ಈ ವೆಬ್ ಸೈಟ್‌ಅನ್ನು ನೋಡಿ http://www.nrao.edu/ . |
| + | #ಗಣಕಯಂತ್ರದ ತಂತ್ರಜ್ಞಾನದ ಬೆಳವಣಿಗೆ ಈ ವೆಬ್ ಸೈಟ್ ಅನ್ನು ನೋಡಿ |
| + | #http://www.computersciencelab.com/ComputerHistory/History.htm |
| + | |
| + | = ೫.ಸಮಾಜ ವಿಜ್ಞಾನ= |
| + | ==ಇತಿಹಾಸ== |
| + | '''ಅಧ್ಯಾಯದ ಉದ್ದೇಶಗಳು''' |
| + | ಈ ಅಧ್ಯಾಯದ ಕೊನೆಗೆ, ನೀವು ಕೆಳಗಿನವುಗಳನ್ನು ಅರ್ಥ ಮಾಡಿಕೊಳ್ಳಲು ಐ ಸಿ ಟಿ (ICTs) ನೊಂದಿಗೆ ಕೆಲಸ ಮಾಡುವುದನ್ನು ತಿಳಿಯುವಿರಿ. |
| + | # ವಿಭಿನ್ನ ಐತಿಹಾಸಿಕ ಸಂಪನ್ಮೂಲಗಳು ಮತ್ತು ಅವುಗಳ ದೃಷ್ಟಿಕೋನಗಳು. |
| + | # ವಿಭಿನ್ನ ಐತಿಹಾಸಿಕ ಜನರ ಜೀವನದ ಬಗ್ಗೆ ಇತಿಹಾಸದ ಪಠ್ಯ ಪುಸ್ತಕದಲ್ಲಿ ನೀಡಿರುವ ಮಾಹಿತಿಯನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಹೇಗೆ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯುವಿರಿ. |
| + | |
| + | ==ಐತಿಹಾಸಿಕ ಸಂಪನ್ಮೂಲಗಳು ಮತ್ತು ಅದರ ದೃಷ್ಟಿಕೋನಗಳು== |
| + | ನಾವು ಇತಿಹಾಸವನ್ನು ಅಧ್ಯಯನ ಮಾಡುವಾಗ, ಹಿಂದೆ ಗತಿಸಿದ ವಿವಿಧ ಘಟನೆಗಳನ್ನು ಕಲಿಯುತ್ತೇವೆ. ನಾವು ರಾಜರು, ರಾಣಿಯರು, ಸಾಮಾನ್ಯ ಜನರು ಮತ್ತು ಅವರ ಜೀವನದ ಬಗ್ಗೆ ಕಥೆಗಳನ್ನು ಕೇಳುತ್ತೇವೆ. ಇವೆಲ್ಲಾ ಆಗಿದೆ ಎಂದು ನಿಮಗೆ ಹೇಗೆ ಗೊತ್ತು? ನಾವು ಈಗ ಅವರೆಲ್ಲರನ್ನು ನೋಡಲಾಗುವುದಿಲ್ಲದಿದ್ದರೂ ಅವರು ನೋಡಲು ಹೇಗಿದ್ದರು, ಹೇಗೆ ಬಟ್ಟೆ ಉಡುತ್ತಿದ್ದರು, ಏನನ್ನು ತಿನ್ನುತ್ತಿದ್ದರು, ಯಾವುದನ್ನು ಪೂಜಿಸುತ್ತಿದ್ದರು,. ಅವರ ಆಡಳಿತ (ಸರ್ಕಾರ) ಹೇಗಿತ್ತು ಮತ್ತು ಇನ್ನಿತರ ವಸ್ತುಗಳ ಬಗ್ಗೆ ಯೋಚಿಸಬೇಕಾಗುತ್ತದೆ. |
| + | |
| + | ಇತಿಹಾಸಕಾರರು ವಿಭಿನ್ನ ರೀತಿಯ ಸಾಕ್ಷಿ, ಪುರಾವೆಗಳನ್ನು ಬಳಸಿ ಏನಾಗಿರಬಹುದೆಂದು ಕಥೆಯನ್ನು ಕಟ್ಟಿರುತ್ತಾರೆ. ಅವರು ವಿವಿಧ ಸಂಪನ್ಮೂಲಗಳಾದ ಐತಿಹಾಸಿಕದ ಸ್ಮಾರಕಗಳು, ಬಟ್ಟೆಗಳು, ಸಾಧನ ಸಾಮಾಗ್ರಿಗಳು, ದಿನಚರಿ, ಬರೆದಿರುವ ದಾಖಲೆಗಳು, ಶಿಲ್ಪಕಲೆ ಮತ್ತು ಸಮಾಜದಲ್ಲಿದ್ದ ಹಿರಿಯ ವ್ಯಕ್ತಿಗಳೊಂದಿಗೆ ಆ ಕಾಲದ ಕೆಲಸ ಮತ್ತು ಕಲೆಯ ಬಗ್ಗೆ ಕೇಳಿ ತಿಳಿಯುತ್ತಿದ್ದರು. ಈ ಸಂಪನ್ಮೂಲಗಳು ಪ್ರೈಮರಿ (ಪ್ರಾಥಮಿಕ) ಅಥವಾ ಸೆಕೆಂಡರಿ (ದ್ವಿತೀಯ) ಆಗಿರಬಹುದು. ಪ್ರಾಥಮಿಕ ಸಂಪನ್ಮೂಲಗಳು ಮೂಲವಸ್ತುಗಳಾಗಿರುತ್ತವೆ. ಉದಾಹರಣೆಗೆ ಭೂಶೋಧನೆಯಿಂದ ದೊರೆತ ವಸ್ತುಗಳು, ಪುರಾತನ ವ್ಯಕ್ತಿಗಳಿಂದ ದೊರೆತ ಕಾಗದ ಮತ್ತು ದಿನಚರಿಗಳು, ಇನ್ನಿತರ ವಸ್ತುಗಳು. ಪ್ರಾಥಮಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಹೊರತಂದ ಐತಿಹಾಸಿಕ ಬರಹಗಳೇ ಸೆಕೆಂಡರಿ ಸಂಪನ್ಮೂಲಗಳು. |
| + | |
| + | ನಾವು ಅಂದಿನ ಕಾಲದ ವಸ್ತುಗಳ ಪ್ರದರ್ಶನಗಳನ್ನು ನೋಡಲು ಸಂಗ್ರಹಾಲಯಗಳಿಗೆ ಭೇಟಿ ನೀಡುತ್ತೇವೆ. ಪ್ರತಿ ವಸ್ತುವಿನ ಕೆಳಗೆ, ಆ ವಸ್ತುವಿಗೆ ಕಾಲ ಮತ್ತು ದೊರೆತ ಸ್ಥಳದ ಬಗ್ಗೆ ವಿವರಣೆ ನೀಡಿರುತ್ತಾರೆ. |
| + | ಇತಿಹಾಸದ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಾಲಯಗಳು ಶೇಖರಿಸಿಡಲು ಸಾಧ್ಯವಿಲ್ಲದ ಕಾರಣ ಇದು ಒಂದು ಮಟ್ಟಕ್ಕೆ ಸೀಮಿತವಾಗಿರುತ್ತದೆ. ವಿವಿಧ ಸಂಗ್ರಹಾಲಯಗಳು ವಿವಿಧ ರೀತಿಯ ಸಂಪನ್ಮೂಲಗಳನ್ನು ಹೊಂದಿವೆ. ಹಾಗಾಗಿ ಇತಿಹಾಸವನ್ನು ಬರೆಯಲು ಬಳಸುವ ವಿವಿಧ ಸಾಕ್ಷಿಗಳನ್ನು ತಿಳಿಯಲು ಮತ್ತು ನೋಡಲು ಅಂತರ್ಜಾಲ ಬಳಸಬೇಕು. |
| + | ಭಾರತದ ಪುರಾತತ್ವ ಸಮೀಕ್ಷೆ ಯ (Archaeological Survey of India) ವೆಬ್ ಸೈಟ್ http/asi.nic.in/ ಇತಿಹಾಸ ಮಾಹಿತಿಯ ಸಂಗ್ರಹವಾಗಿದೆ. ಈ ವೆಬ್ ಸೈಟ್ಸ್ ಗಳಲ್ಲಿರುವ ಮಾಹಿತಿಗಳು ಸಮಂಜಸವಾಗಿದೆ ಮತ್ತು ಅಧಿಕೃತವಾಗಿದೆಯೆಂದು ಪ್ರಮಾಣೀಕರಿಸಲಾಗಿದೆ. ಇದೇ ರೀತಿಯಲ್ಲಿ ಅಂತರ್ಜಾಲದ ಎಲ್ಲಾ ವೆಬ್ ಸೈಟ್ ನಲ್ಲಿರುವ ಮಾಹಿತಿಯ ಬಗ್ಗೆ ಹೇಳಲಾಗುವುದಿಲ್ಲ. |
| + | |
| + | |
| + | ಭಾರತದ ಪುರಾತತ್ವ ಸಮೀಕ್ಷೆ (ASI) ಸಾಂಸ್ಕೃತಿಕ ಸಚಿವಾಲಯದ ಹತೋಟಿಯಲ್ಲಿರುವ ಒಂದು ಸಂಸ್ಥೆ. ಈ ಸಂಸ್ಥೆಯು ಪುರಾತತ್ವ ಸಂಶೋಧನೆಗಳ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಇಲಾಖೆಯಾಗಿದೆ. ಎ ಎಸ್ ಐ ನ ಮೂಲ ಉದ್ದೇಶವೆಂದರೆ ಪುರಾತನ ಸ್ಮಾರಕಗಳನ್ನು ,ಪುರಾತತ್ವ ಸ್ಥಳಗಳನ್ನು ಪಾಲನೆ ಮಾಡಿ ದೇಶದ ವಿಶೇಷತೆಯನ್ನು ಉಳಿಸುವುದಾಗಿದೆ. ಸ್ವಾತಂತ್ರ್ಯ ನಂತರ ಕೆಲವು ಸಂಸ್ಥೆಗಳಾದ ಭಾರತದ ಪುರಾತತ್ವ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ವಿಶ್ವವಿದ್ಯಾನಿಲಯಗಳು ಮತ್ತು ಬೇರೆ ಸಂಶೋಧನಾ ಮಂಡಲಿಗಳು ಉತ್ಖನನ(ಭೂ ಶೋಧನಾ) ಕಾರ್ಯವನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಿವೆ. |
| + | ==ಪ್ರಯೋಗಾಲಯದ ಅಭ್ಯಾಸ== |
| + | # ನೀವು ಸಿಂಧೂ ಕಣಿವೆಯ ನಾಗರೀಕತೆಯ ವೆಬ್ ಸೈಟ್‌ಗೆ ಹೋಗಿ ಮಾಹಿತಿಯನ್ನು ಹೇಗೆ ಬರೆದಿದ್ದಾರೆ ಎಂದು ನೋಡಿ. ಇದರಲ್ಲಿ ಏನಾದರೂ ವ್ಯತ್ಯಾಸವಿದೆಯೆ? ಅದನ್ನು ಬರೆಯಿರಿ. ಉದಾಹರಣೆಗೆ, ಇದಕ್ಕೆ ಬಳಸಲಾದ '''ಸಂಪನ್ಮೂಲಗಳು ಯಾವುವು? ಇದರ ಬಗ್ಗೆ ಮಾಹಿತಿಯನ್ನು ಬರೆದವರು ಯಾರು?''' (ಮೊದಲಿಗೆ ಕೆಳಗೆ ನೀಡಿದ ವೆಬ್ ಸೈಟ್ ಬಳಸಿ ಹುಡುಕಿ). |
| + | #http://en.wikipedia.org/wiki/Indus_Valley_Civilization |
| + | #http://india.mrdonn.org/indus.html |
| + | #http://www.bbc.co.uk/schools/primaryhistory/indus_valley/ |
| + | #http://asi.nic.in/asi_walkthrough.asp, http://asi.nic.in/asi_pgallery.asp and http://en.wikipedia.org/wiki/Vijayanagara_Empire, ಈ ವೆಬ್ ಲಿಂಕ್ ಅನ್ನು ಬಳಸಿ: ವಿಜಯನಗರ ಸಾಮ್ರಾಜ್ಯದ ಜನಜೀವನದ ಬಗ್ಗೆ ಬರೆಯಿರಿ (ಅವರ ಆಹಾರ ಅಭ್ಯಾಸಗಳು, ಅವರು ಸಾಮಾನ್ಯವಾಗಿ ಭೇಟಿ ನೀಡುತ್ತಿದ್ದ ಸ್ಥಳಗಳು, ದಿನನಿತ್ಯದ ಜೀವನ). ಇದಕ್ಕಾಗಿ ನೀವು ವರ್ಡ್ ಪ್ರೊಸೆಸರ್ ಅನ್ನು ಬಳಸಬಹುದು. ನೀವು ಅವರ ಬಗ್ಗೆ ಬರೆಯಬಹುದಾದ ಕೆಲವು ಅಂಶಗಳಿಗೆ ಉದಾಹರಣೆಗಳು: |
| + | i. ದೇವಸ್ಥಾನದ ನರ್ತಕಿ. |
| + | ii. ವಿರೂಪಾಕ್ಷ ದೇವಾಲಯ ಕಟ್ಟಿದವರಲ್ಲಿ ಒಬ್ಬರು |
| + | iii. ಹಂಪಿಯ ಒಬ್ಬ ಮಾರಾಟಗಾರ |
| + | iv. ಒಬ್ಬ ರೈತ. |
| + | |
| + | ==ಅಧ್ಯಾಯದ ಸಾರಾಂಶ== |
| + | ಇತಿಹಾಸವನ್ನು ವಿವಿಧ ಪ್ರಾಥಮಿಕ ಮತ್ತು ದ್ವಿತೀಯ ಮೂಲಗಳ ಐತಿಹಾಸಿಕ ಸಂಪನ್ಮೂಲಗಳನ್ನು ಬಳಸಿ ಬರೆಯಲಾಗಿದೆ. |
| + | ಐತಿಹಾಸಿಕ ಬರವಣಿಗೆಯು ಹಿಂದಿನ ಕಾಲದ ಜನರ ಜೀವನವನ್ನು ಪ್ರತಿನಿಧಿಸುತ್ತದೆ. |
| + | ಐತಿಹಾಸಿಕ ಬರವಣಿಗೆಯು ಪ್ರಮಾಣೀಕೃತವಾಗಿರಬೇಕು. |
| + | |
| + | ==ಅಭ್ಯಾಸಗಳು== |
| + | # ಕೆಳಗಿನ ವೆಬ್ ಸೈಟ್ ಗಳನ್ನು ಬಳಸಿ , ಬೌದ್ಧಧರ್ಮ ಮತ್ತು ಜೈನಧರ್ಮ ದ ಕಥೆಗಳನ್ನು ಓದಿ. ಗುಂಪಿನಲ್ಲಿ ಸೇರಿ ಒಂದು ವೆಬ್ ಸೈಟ್ ಅನ್ನು ಆಯ್ಕೆಮಾಡಿ ಅದರಲ್ಲಿರುವ ಕಥೆಗಳಿಂದ ಮುಖ್ಯ ಅಂಶಗಳನ್ನು ಸಂಗ್ರಹಿಸಿ ನಿಮ್ಮ ಮೆಚ್ಚಿನ ಕಥೆಯನ್ನು ನಿಮ್ಮ ತರಗತಿಯಲ್ಲಿ ವಿವರಿಸಿ. |
| + | #http://www.jainworld.com/literature/strindex.htm |
| + | #http://www.scribd.com/doc/81399/Jain-Stories |
| + | #http://www.jainworld.com/education/stories1.asp |
| + | |
| + | # www.youtube.com ನಲ್ಲಿ ಅಲೆಗ್ಸಾಂಡರ್‌ನ ಜೀವನದ ಕೆಲವು ವಿಡಿಯೋಗಳನ್ನು ನೋಡಿ. ನಿಮ್ಮನ್ನು ನೀವು ಅಲೆಗ್ಸಾಂಡರ್ ಎಂದು ಭಾವಿಸಿ ಒಂದು ಸ್ಥೂಲ ಚಿತ್ರಣ ಬರೆಯಿರಿ. ಹಾಗೆಯೇ ನೀವು ಆತನ ಕುದುರೆ ನೋಡಿಕೊಳ್ಳುವರೆಂದು ಭಾವಿಸಿ ಒಂದು ಸಣ್ಣ ಕಥೆಯನ್ನು ಬರೆಯಿರಿ. |
| + | # ಭಾರತದ ಶ್ರೇಷ್ಠ ಇತಿಹಾಸಕಾರರ ಬಗ್ಗೆ ತಿಳಿಯಲು ಈ ವೆಬ್ ಸೈಟ್‌ಗಳನ್ನು ನೋಡಿ: http://en.wikipedia.org/wiki/Romila_Thapar, #http://en.wikipedia.org/wiki/Suryanath_U._Kamath, http://en.wikipedia.org/wiki/Arthur_Llewellyn_Basham, #http://en.wikipedia.org/wiki/Ram_Sharan_Sharma. |
| + | |
| + | ಅವರು ಏಕೆ ಇತಿಹಾಸಕಾರರಾಗಲು ಬಯಸಿದರು ಎಂದು ಯೋಚಿಸಿ? ಸಾಧ್ಯವೆನ್ನುವ ಎಲ್ಲಾ ಉತ್ತರವನ್ನು ಟೈಪ್ ಮಾಡಿ ನಿಮ್ಮ ತರಗತಿಯಲ್ಲಿ ಹಂಚಿಕೊಳ್ಳಿ.. |
| + | |
| + | # ನಿಮ್ಮ ತರಗತಿಯ ಶಿಕ್ಷಕರ ಸಹಾಯದಿಂದ ನಿಮ್ಮ ಹಳ್ಳಿಯಿಂದ ಪಕ್ಕದೂರಿಗೆ ಹೊರಸಂಚಾರ ಹೋಗಿ, ಸ್ಥಳೀಯವಾಗಿ ಹೆಸರುವಾಸಿಯಾಗಿರುವ ಐತಿಹಾಸಿಕ ಸ್ಥಳಗಳನ್ನು ಭೇಟಿಮಾಡಿ, ಈ ಸ್ಥಳಗಳು ಹೇಗೆ ಮತ್ತು ಏಕೆ ಮಹತ್ವವನ್ನು ಪಡೆದಿವೆ ಎಂದು ತಿಳಿಯಿರಿ. ಅಲ್ಲಿಯ ಭಾವ ಚಿತ್ರಗಳನ್ನು ತೆಗೆದು ನಿಮ್ಮ ತರಗತಿಯಲ್ಲಿ ಹಂಚಿಕೊಳ್ಳಿ. |
| + | |
| + | # ನಿಮ್ಮ ಹಳ್ಳಿಗಳಲ್ಲಿರುವ ಕೆಲವು ಹಿರಿಯರನ್ನು ಭೇಟಿ ಮಾಡಿ ನಿಮ್ಮ ಹಳ್ಳಿಯ ಬಗ್ಗೆ ಇರುವ ಕಥೆ ಅಥವಾ ದಂತಕಥೆಯನ್ನು ಹೇಳಲು ಕೇಳಿ, ಅದನ್ನು ಬರೆದು ನಂತರ ಎಲ್ಲರೂ ಅದನ್ನು ಓದಲು ಅವಕಾಶವಾಗುವಂತೆ ಟೈಪ್ ಮಾಡಲು ಸಾಧ್ಯವೇ? |
| + | |
| + | =ರಾಜ್ಯ ಶಾಸ್ರ್ತ= |
| + | '''ಅಧ್ಯಾಯದ ಉದ್ದೇಶಗಳು ''' |
| + | ಈ ಅಧ್ಯಾಯದ ಕೊನೆಗೆ, ಕೆಳಗಿನವುಗಳನ್ನು ಅರ್ಥೈಸಿಕೊಳ್ಳಲು ಐ ಸಿ ಟಿ (ICTs) ನ್ನು ಬಳಸಿ ಅನ್ವೇಷಣೆ ನಡೆಸಲು ಸಮರ್ಥರಾಗುತ್ತೀರಿ. |
| + | # ಸ್ಥಳೀಯ ಮತ್ತು ರಾಷ್ಟ್ರೀಯ ಸನ್ನಿವೇಶಗಳಲ್ಲಿ ನಾಗರೀಕನಾಗಿ ನಿಮ್ಮ ಪಾತ್ರ. |
| + | # ಸ್ಥಳೀಯ, ಸಾಮಾಜಿಕ ಮತ್ತು ಪೌರ ಸಮಸ್ಯೆಗಳನ್ನು ಗುರುತಿಸುವುದು. |
| + | # ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸ ಬಹುದಾದ ವಿಧಾನ . |
| + | ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಈ ರಾಷ್ಟ್ರದ ನಾಗರೀಕರರಾದ ನಮಗೆ ಕೆಲವು ಹಕ್ಕುಗಳು ಮತ್ತು ಜವಾಬ್ದಾರಿಗಳು ಇವೆ. ಕ್ರಿಯಾಶೀಲ ನಾಗರೀಕರಾಗಲು ಮೊದಲು ನಾವು ನಮ್ಮ ಸುತ್ತಮುತ್ತಲಿರುವ ಸಾಮಾಜಿಕ ಸಮಸ್ಯೆಗಳನ್ನು ಮತ್ತು ಪೌರ ಸಮಸ್ಯೆಗಳನ್ನು ತಿಳಿಯಬೇಕು. ಆ ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಯಾವ ರೀತಿ ಭಾಗವಹಿಸಬೇಕೆಂದು ಅರಿಯಬೇಕು. ಕೆಳಗಿನ ಅಭ್ಯಾಸಗಳ ಮೂಲಕ ನೀವು ಮತ್ತು ನಿಮ್ಮ ಜೊತೆಗಾರರು ಸೇರಿ ಪ್ರಜಾಪ್ರಭುತ್ವ ಎಂದರೆ ಏನು ಎಂಬುದನ್ನು ತಿಳಿಯುವಿರಿ. ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ ಈ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಿ. ನಿಮ್ಮ ನೆರೆಹೊರೆಯಲ್ಲಿ ಕಾಣಸಿಗುವ ಸಮಸ್ಯೆಗಳ ವಿಶೇಷವಾಗಿ ಸಾಮಾನ್ಯವಾಗಿರುವ ಸಂಪನ್ಮೂಲ (ನೀರು, ಕಾಡು,ನೀರಾವರಿ ಪದ್ಧತಿ, ಭೂಮಿ ಇತ್ಯಾದಿ) ಸಮಸ್ಯೆಗಳ ಪಟ್ಟಿಯನ್ನು ಮಾಡಿ. |
| + | ಪ್ರಯೋಗಾಲಯದ ಅಭ್ಯಾಸಗಳು |
| + | # ಮೈಂಡ್ ಮ್ಯಾಪ್ ಅನ್ನು ಬಳಸಿ ಪ್ರಜಾಪ್ರಭುತ್ವವನ್ನು ನೀವು ಅರ್ಥಮಾಡಿಕೊಂಡಿರುವ ಬಗ್ಗೆ ನಕ್ಷೆಯನ್ನು ತಯಾರಿಸಿ. ಇದನ್ನು ಗುಂಪಿನಲ್ಲಿ ಚರ್ಚಿಸಿ, ನಿಮ್ಮ ತರಗತಿಯ ಸಹಪಾಠಿಗಳೊಂದಿಗೆ ಹಂಚಿಕೊಳ್ಳಿ ಮತ್ತು ಈ ಶಬ್ದಕ್ಕೆ ನಿಮ್ಮ ಸ್ವಂತ ವ್ಯಾಖ್ಯೆಯನ್ನು ರಚಿಸಿ. |
| + | # ನಿಮ್ಮ ನೆರೆಹೊರೆಯಲ್ಲಿ ಪ್ರಚಲಿತದಲ್ಲಿರುವ ಸಾಮಾಜಿಕ ಮತ್ತು ಪೌರ ಸಮಸ್ಯೆಯ ಬಗ್ಗೆ ಛಾಯಾ ಚಿತ್ರ ಸಹಿತ ಚಿಕ್ಕ ಪ್ರಬಂಧ ಬರೆಯಿರಿ. |
| + | # ನಿಮ್ಮ ಹಳ್ಳಿಯಲ್ಲಿ ಸಾಮಾನ್ಯವಾಗಿರುವ ಸಂಪನ್ಮೂಲಗಳು ಯಾವುವು? ಇದರ ಬಗ್ಗೆ ಛಾಯಾ ಚಿತ್ರಸಹಿತ ಒಂದು ಚಿಕ್ಕ ಪ್ರಬಂಧ ಬರೆಯಿರಿ. |
| + | ಒಂದು ಚಿತ್ರವನ್ನು ನಿಮ್ಮ ದಾಖಲೆಗೆ (ಇನ್ ಸರ್ಟ್) ಲಗತ್ತಿಸಲು Insert →Picture→From File ಆಯ್ಕೆ ಮಾಡಿ |
| + | # ಸರ್ಕಾರ ಇಲಾಖೆಗಳನ್ನು ಭೇಟಿಮಾಡಿ (ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಇತ್ಯಾದಿ) ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸೂಕ್ತವಾದ ವಿಷಯ ಸಂಪದೀಕರಣ ಮಾಡಿ . ಇದು ನಿಮ್ಮ ಮತ್ತು ನಿಮ್ಮ ಕುಟುಂಬದ ಇಂದಿನ ಮತ್ತು ಭವಿಷ್ಯದ ಅವಶ್ಯಕತೆಯನ್ನೊಳಗೊಂಡಿರಬಹುದು. : |
| + | http://www.youtube.com/watch?v=Sgd6y9GTcdE&list=UUH4suj5leg5_Na0ttjuHHjw&index=20&feature=plcp |
| + | ಅಧ್ಯಾಯದ ಸಾರಾಂಶ |
| + | # ಸರ್ಕಾರದ ವಿವಿಧ ಇಲಾಖೆಗಳು ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿವೆ. |
| + | # ಒಬ್ಬ ನಾಗರೀಕನಾಗಿ ನೀವು ಇದನ್ನು ಅರಿತಿರಬೇಕು ಮತ್ತು ನಿಮ್ಮ ಸಮೂದಾಯದ ಮೂಲ ಅಗತ್ಯಗಳು ಪೂರೈಕೆಯಾಗುವುದನ್ನು ಖಚಿತ ಪಡಿಸಿಕೊಳ್ಳಬೇಕು. |
| + | ==ಅಭ್ಯಾಸಗಳು== |
| + | # ನಿಮ್ಮ ಶಾಲೆಯ ಕೆಲವು ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕಿ/ಕರನ್ನು ಸಂದರ್ಶನ ಮಾಡಿ, ಅವರ ಅಭಿಪ್ರಾಯದ ಪ್ರಕಾರ ನಿಮ್ಮ ಶಾಲೆಯಲ್ಲಿ ಬಗೆಹರಿಸಬೇಕಾಗಿರುವ ಮುಖ್ಯ ಸಮಸ್ಯೆ ಗಳನ್ನು ಗುರುತಿಸಿ. ನಿಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಅದರ ಬಗ್ಗೆ ಒಂದು ಟಿಪ್ಪಣಿ ತಯಾರಿಸಿ ನಿಮ್ಮ ಮುಖ್ಯ ಶಿಕ್ಷಕಿ/ಕ ರಿಗೆ ಮಂಡಿಸಿ. |
| + | # ನಿಮ್ಮ ಸ್ಥಳೀಯ ಗ್ರಾಮ ಪಂಚಾಯ್ತಿಯನ್ನು ಭೇಟಿ ಮಾಡಿ ಅವರ ಕಾರ್ಯಚಟುವಟಿಕೆಗಳ ಪಟ್ಟಿ ಮಾಡಿ. ಕೆಲವು ವ್ಯಕ್ತಿಗಳನ್ನು ಸಂದರ್ಶಿಸಿ, ಗ್ರಾಮದ ಬಗ್ಗೆ ಅವರ ದೂರದೃಷ್ಟಿ ಏನೆಂದು ತಿಳಿಯಿರಿ. |
| + | # ನಿಮ್ಮ ಶಾಲೆಯ ಅತೀ ಮುಖ್ಯವಾದ ಬೇಡಿಕೆ ಏನು? (ಉದಾ: ಶೌಚಾಲಯ, ವಿಜ್ಞಾನ ಪ್ರಯೋಗಾಲಯ) ಇದಕ್ಕೆ ಸಂಬಂಧಪಟ್ಟ ಆಧಿಕಾರಿಗಳು ಯಾರೆಂದು ಅರಿತು ಅವರಿಗೆ ಇದರ ಬಗ್ಗೆ ಅರ್ಜಿಯನ್ನು ಬರೆಯಿರಿ. |
| + | # ಕೆಲವು ಹೆಣ್ಣು ಮಕ್ಕಳೆಲ್ಲಾ ಸೇರಿ ತಮ್ಮ ಹಳ್ಳಿಗೆ ಬಸ್ ವ್ಯವಸ್ಥೆ ಹೇಗೆ ಪಡೆದರೆಂದು ಈ ದೃಶ್ಯಾವಳಿ ನೋಡಿ ತಿಳಿಯಿರಿ . http://www.youtube.com/watch?v=523515SrOX0&list=UUH4suj5leg5_Na0ttjuHHjw&index=18&feature=plcp |
| + | |
| + | |
| + | =ಭೂಗೋಳ ಶಾಸ್ತ್ರ= |
| + | '''ಅಧ್ಯಾಯದ ಉದ್ದೇಶಗಳು ''': |
| + | ಈ ಅಧ್ಯಾಯದ ಕೊನೆಗೆ ನೀವು ಐ ಸಿ ಟಿ (ICTs)ನಲ್ಲಿ ಅನ್ವೇಷಿಸಿ ಕೆಳಗಿನ ಅಂಶಗಳನ್ನು ಅರ್ಥಮಾಡಿಕೊಳ್ಳುವಿರಿ. |
| + | # ಪ್ರಕೃತಿಯ ವಿದ್ಯಮಾನಗಳಿಗೆ ಕಾರಣಗಳೇನು, ಇವು ಜನರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಮತ್ತು ಅವುಗಳನ್ನು ತಡೆಯಲು ಅನುಸರಿಸುವ ಸುರಕ್ಷಾ ಕ್ರಮಗಳು. |
| + | # ಬೇರೆ ಬೇರೆ ಸ್ಥಳಗಳನ್ನು ಪತ್ತೆ ಹಚ್ಚಲು ಮಾರ್ಬಲ್ ಎಂಬ ಸಾರ್ವಜನಿಕ ಶೈಕ್ಷಣಿಕ ಉಪಕರಣ ಬಳಸುವುದು . |
| + | ==ಪ್ರಕೃತಿಯ ವಿದ್ಯಮಾನಗಳು== |
| + | ಎಲ್ಲಾ ಸಂದರ್ಭಗಳಲ್ಲೂ ಹಲವಾರು ಸ್ವಾಭಾವಿಕ ವಿದ್ಯಮಾನಗಳು ಸಂಭವಿಸುತ್ತಲೇ ಇರುತ್ತವೆ. ಮಳೆ, ಪ್ರವಾಹ, ಬರಗಾಲ, ಭೂಕಂಪ, ಜ್ವಾಲಮುಖಿ ಇದಕ್ಕೆ ಕೆಲವು ಉದಾಹರಣೆಗಳು. ಭೂಮಿಯಲ್ಲಿ ಈ ರೀತಿ ವಿದ್ಯಮಾನಗಳು ಹಲವಾರು ಸ್ಥಳಗಳಲ್ಲಿ ಸಂಭವಿಸುತ್ತಿರುತ್ತವೆ. ಆದರೆ ಕೆಲವು ನಿರ್ದಿಷ್ಟ ಪ್ರದೇಶಗಳು ಮಾತ್ರ ಜ್ವಾಲಮುಖಿ , ಭೂಕಂಪಗಳು ಇತ್ಯಾದಿ ವಿದ್ಯಮಾನಗಳಿಗೆ ಹೆಚ್ಚು ತುತ್ತಾಗುತ್ತವೆ . ಇವುಗಳಲ್ಲಿ ಕೆಲವು ಮನುಷ್ಯನಿಗೆ ಮತ್ತು ಪ್ರಾಣಿಸಂಕುಲಕ್ಕೆ ಮಾರಕವಾಗಿವೆ. ಇವುಗಳು ಜನರು ತಮ್ಮ ಮನೆಗಳನ್ನು, ಜೀವನವನ್ನು ,ಕುಟಂಬ ಮತ್ತು ಸ್ನೇಹಿತರನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. |
| + | |
| + | |
| + | |
| + | ಕರ್ನಾಟಕದಲ್ಲಿ ನೈಸರ್ಗಿಕ ವಿಕೋಪಗಳ ಪರಿವೀಕ್ಷಣಾ ಕೇಂದ್ರವಿದ್ದು (Karnataka State Natural Disaster Monitoring Centre)ಅದರ ವೆಬ್ ಸೈಟ್ hhtp://dmc.kar.nic/in ಇದರಲ್ಲಿ ರಾಜ್ಯದ ಹವಾಮಾನ ದಾಖಲೆಯನ್ನು ಮಾಡಲಾಗುತ್ತದೆ. |
| + | |
| + | |
| + | ಇವುಗಳಲ್ಲಿ ಕೆಲವೊಂದು ವಿದ್ಯಮಾನಗಳನ್ನು ನಾವು ದಿನನಿತ್ಯ ಜೀವನದಲ್ಲಿ ನೋಡಲು ಸಾಧ್ಯವಿಲ್ಲ (ಉದಾ: ಜ್ವಾಲಾಮುಖಿ ಸ್ಫೋಟ, ಭೂಕಂಪ). ಅಂತರ್ಜಾಲವನ್ನು ಬಳಸಿ ಈ ದೃಶ್ಯಗಳನ್ನು ನೋಡಿ ಘಟನೆಯ ಬಗ್ಗೆ ಅರ್ಥಮಾಡಿಕೊಳ್ಳೋಣ. |
| + | ==ಪ್ರಾಯೋಗಿಕ ಅಭ್ಯಾಸಗಳು== |
| + | # ಭೂಕಂಪ, ಜ್ವಾಲಾಮುಖಿ ಮತ್ತು ಸುನಾಮಿ ಬಗ್ಗೆ ತಿಳಿಯಲು ಬಳಸಬೇಕಾದ ವೆಬ್ ಸೈಟ್ www.youtube.com. ತರಗತಿಯನ್ನು ಗುಂಪುಗಳಾಗಿ ವಿಂಗಡಿಸಿ, ಹೇಗೆ ಈ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆಂದು ಪ್ರೆಸೆಂಟೇಷನ್ ಅನ್ನು ರಚಿಸಿ. |
| + | ನಿಮ್ಮ ಶೋಧನೆಗೆ ಸಹಾಯಮಾಡಲು ಬೇಕಾಗುವ ಕೆಲವು ವಿಡಿಯೋಗಳ ವೆಬ್ ಸೈಟ್ ಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. |
| + | # http://www.youtube.com/watch?v=W5piS8JBb3E (ಮಕ್ಕಳಿಂದ ವಿವರಿಸಿದ ಭೂಕಂಪಗಳು) |
| + | # http://www.youtube.com/watch?v=yexLVVeWHb8&feature=related (ಸುನಾಮಿ ಎಂದರೇನು) |
| + | # http://www.youtube.com/watch?v=uZp1dNybgfc&feature=fvst (ಜ್ವಾಲಾಮುಖಿ ಬಗ್ಗೆ ರಾಷ್ಟ್ರೀಯ ಭೌಗೋಳಿಕ ದೃಶ್ಯ ) |
| + | # http://www.youtube.com/watch?v=a1lsLUBh9I8&feature=relmfu (ಸುನಾಮಿಯ ಬಗ್ಗೆ ರಾಷ್ಟ್ರೀಯ ಭೌಗೋಳಿಕ ದೃಶ್ಯ ) |
| + | # http://www.youtube.com/user/NationalGeographic?feature=watch#p/search/0/CtBXTvtFaCU ( ಭೂಕಂಪದ ಬಗ್ಗೆ ರಾಷ್ಟ್ರೀಯ ಭೌಗೋಳಿಕ ದೃಶ್ಯ ) |
| + | |
| + | # ಬರಗಾಲ ಮತ್ತು ಪ್ರವಾಹ ಕರ್ನಾಟಕದಲ್ಲಿ ಸಾಮಾನ್ಯ. ಆನ್‌ಲೈನ್‌ನಲ್ಲಿ ದಿನಪತ್ರಿಕೆಯನ್ನು ನೋಡಿ (http://kannada.samachar.com/) ಆ ಪರಿಸ್ಥಿತಿಯ ಬಗ್ಗೆ ನಿಮ್ಮ ವಿಶ್ಲೇಷಣೆಯನ್ನು ನಿಮ್ಮ ತರಗತಿಯಲ್ಲಿ ಮಂಡಿಸಿ.(ಯಾವ ಪ್ರದೇಶಗಳು ಹೆಚ್ಚು ಇದರ ಪ್ರಭಾವಕ್ಕೊಳಗಾಗಿವೆ, ಅಲ್ಲಿಯ ಜನರ ಪರಿಸ್ಥಿತಿ ಹಾಗೂ ಸರ್ಕಾರವು ಈ ಪ್ರದೇಶಗಳಿಗೆ ಸಹಾಯಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ನಿಮ್ಮ ವಿಚಾರಗಳು.) |
| + | |
| + | ==ನಕ್ಷೆ /ಭೂಪಟಗಳು== |
| + | ಭೂಗೋಳದಲ್ಲಿ ಚಿತ್ರಣದ ಮೂಲಕ ಸ್ಥಳ, ಘಟನೆ, ಲಕ್ಷಣಗಳನ್ನು ಪ್ರತಿನಿಧಿಸಲು ಉಪಯೋಗಿಸುವ ತಂತ್ರವೇ ಭೂಪಟದ ಬಳಕೆ. ಭೂಪಟ ರಚನೆ (ನಕ್ಷಾಶಾಸ್ರ್ತ- cartography) ಎನ್ನುವುದು ಮುಖ್ಯವಾದ ಕೌಶಲವಾಗಿದ್ದು , ಅನೇಕ ವರ್ಷಗಳಿಂದ ನಮ್ಮ ಸುತ್ತಲೂ ಇವೆ. ನಕ್ಷೆ ತಯಾರು ಮಾಡುವ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http://academic.emporia.edu/aberjame/map/h_map/h_map.htm ಮತ್ತು http://en.wikipedia.org/wiki/History_of_cartography ವೆಬ್ ಸೈಟ್‌ಗಳನ್ನು ಭೇಟಿ ಮಾಡಿ. |
| + | |
| + | ನಾವು ನಕ್ಷೆಗಳನ್ನು ಕೆಲವು ವಸ್ತುಗಳಿಗೆ ಹೆಚ್ಚು ಒತ್ತು ನೀಡಲು (ಉದಾಹರಣೆಗೆ ನೀವು ಮೇಲಿನ ವೆಬ್‌ಸೈಟ್‌ನಲ್ಲಿ ನೋಡಿದ ಜ್ವಾಲಾಮುಖಿಯ ನಕ್ಷೆ ), ಕೆಲವು ವಸ್ತುಗಳ ವಿವರಗಳನ್ನು ವರ್ಣಿಸಲು ಬಳಸಬಹುದು. ನಕ್ಷೆಗಳಲ್ಲೂ ಹಲವು ವಿಧಗಳಿವೆ. ಭೌಗೋಳಿಕ ಸನ್ನಿವೇಶ ನಕ್ಷೆ , ರಾಜಕೀಯ ನಕ್ಷೆ ಇತ್ಯಾದಿ. ಭೂಪಟಗಳು ಹಲವು ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿವೆ. ನಮ್ಮ ಶಾಲೆಯ ನಕ್ಷೆಯನ್ನು, ಸ್ಥಳೀಯ ನಕ್ಷೆ, ಹಳ್ಳಿಯ ನಕ್ಷೆ ಇತ್ಯಾದಿಗಳನ್ನೂ ಸಹ ನಾವು ತಯಾರಿಸಬಹುದು. ಜನರು ಹೇಗೆ ತಮ್ಮದೇ ಆದ ತಮ್ಮ ನೆರೆಹೊರೆಯ ಭೂಪಟಗಳನ್ನು ತಯಾರಿಸುತ್ತಿದ್ದಾರೆ ಎನ್ನುವುದಕ್ಕೆ 'ಓಪನ್ ಸ್ಟ್ರೀಟ್ ಮ್ಯಾಪ್' ಒಂದು ಉದಾಹರಣೆ. http://www.openstreetmap.org/ . ಈ ಭೂಪಟದಲ್ಲಿ ತಮಗೆ ಪ್ರಮುಖವಾದ ಅಂಶಗಳನ್ನು ಅವರು ಸೇರಿಸುತ್ತಾರೆ. ವಿವಿಧ ರೀತಿಯ ನಕ್ಷೆಗಳು ಹಾಗೂ ಅವು ಏನನ್ನು ಬಿಂಬಿಸುತ್ತವೆ ಎಂದು ತಿಳಿಯೋಣ. |
| + | |
| + | ==ಜಿಯೋಗ್ರಾಫಿಕ್ ಇನ್ ಫರ್ಮೆಷನ್ ಸಿಸ್ಟಮ್ (GIS) ಭೌಗೋಳಿಕ ಮಾಹಿತಿಯನ್ನು ಸೇವ್ ಮಾಡಲು== |
| + | ಹುಡುಕಲು ಮತ್ತು ವಿಶ್ಲೇಷಿಸಲು ನೆರೆವು ನೀಡುತ್ತದೆ.ಜಿಐಎಸ್ ಅನ್ನು ಪ್ರಸ್ತುತ ಶೈಕ್ಷಣಿಕವಾಗಿಯೂ ಹಾಗೂ ಪರಿಸರ ವಿಜ್ಞಾನ, ಸಾಗಾಣಿಕೆಯನ್ನೊಳಗೊಂಡಂತೆ ಅನೇಕ ವೃತ್ತಿಪರ ಕ್ಷೇತ್ರಗಳಲ್ಲಿ ಬಳಸುತ್ತಿದ್ದಾರೆ. ಸಮತಲದ ಕಾಗದದ ನಕ್ಷೆಯು ಸಾಮಾನ್ಯವಾಗಿ 'ನಾವು ಏನನ್ನು ನೋಡುತ್ತೀವೋ ಅದನ್ನೇ ಪಡೆಯುತ್ತೇವೆ ' ಎಂಬ ರೀತಿಯಲ್ಲಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಜಿಐಎಸ್ ಹಲವಾರು ಪದರಗಳಲ್ಲಿ ವಿವಿಧ ಮಾಹಿತಿಯನ್ನು ಪ್ರಸ್ತುತಪಡಿಸುತ್ತದೆ. |
| + | ಮಾಹಿತಿಯನ್ನು ನೋಡಿ ಅದನ್ನು ತ್ವರಿತವಾಗಿ ಅರ್ಥಮಾಡಿಕೊಂಡು ಪ್ರಶ್ನೆ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಇದನ್ನು ಸುಲಭವಾಗಿ ಹಂಚಿಕೊಳ್ಳಲು ಜಿಐಎಸ್ ಸಹಕಾರಿಯಾಗಿದೆ . |
| + | ಜಿಐಎಸ್ ಅನ್ನು ಹೇಗೆ ಬಳಸಬೇಕೆಂಬ ಹೆಚ್ಚಿನ ಮಾಹಿತಿಗಾಗಿ |
| + | (http://geography.about.com/od/understandmaps/a/map-types.html ಅನ್ನು ನೋಡಿ. |
| + | ಗೂಗಲ್ ಅರ್ಥ್: http://www.google.com/earth/index.html |
| + | |
| + | |
| + | |
| + | |
| + | |
| + | ==ಪ್ರಯೋಗಾಲಯದ ಅಭ್ಯಾಸಗಳು== |
| + | # ಈ ವೆಬ್ ಸೈಟ್ ಅನ್ನು ಬಳಸಿ |
| + | #(http://geography.about.com/od/understandmaps/a/map-types.htm |
| + | #http://www.myteacherpages.com/webpages/TTravis/social_studies_class.cfm?subpage=648434), ಕೆಳಗಿನ ಟೇಬಲ್ ಅನ್ನು ಭರ್ತಿ ಮಾಡಿ : |
| + | ==ಭೂಪಟದ ಮಾದರಿ== |
| + | ಭೂಪಟದ ಉದ್ದೇಶ |
| + | |
| + | |
| + | |
| + | # ಆಫ್ಲೀಕೇಷನ್ಸ್→ ಎಜುಕೇಷನ್→ಮಾರ್ಬಲ್‌ಗೆ ಭೇಟಿ ನೀಡಿ. |
| + | ಪರದೆಯ ಎಡಭಾಗದಲ್ಲಿ ಭೂಮಿಯ ವಿವಿಧ ನೋಟಗಳನ್ನು (Map View)ನೋಡಬಹುದು. ಉದಾಹರಣೆಗೆ ಜುಲೈ ಮತ್ತು ಡಿಸೆಂಬರ್ ತಿಂಗಳುಗಳ ಮಳೆಯ ಚಿತ್ರಣ, ಜುಲೈ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಹಿಮ/ ಆಲಿಕಲ್ಲುಗಳು ಬೀಳುವ ಚಿತ್ರಣ ಇತ್ಯಾದಿಗಳನ್ನು ಭೂಪಟದ ಮೇಲೆ ಕ್ಲಿಕ್ ಮಾಡಿ ಅವಲೋಕಿಸಿ. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. |
| + | |
| + | ನೀವು ಜೂಮ್ ಬಾಣದ(Zoom Arrow) ಗುರುತು ಬಳಸಿ ಗ್ಲೋಬ್ ನಲ್ಲಿ ನಿಮ್ಮ ಹತ್ತಿರದ ನಗರವನ್ನು ವೀಕ್ಷಿಸಿ. |
| + | |
| + | |
| + | # ಜೂನ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಗುರುತಿಸಿ. ಯಾವುದಾದರೂ ಒಂದೇ ರೀತಿಯ ಪ್ರದೇಶಗಳಿವೆಯೇ? ಕಾರಣವೇನಿರಬಹುದು? |
| + | # ಭೂಮಿಯ ಯಾವ ವಲಯವು ಉಷ್ಣಾಂಶ ವಲಯವಾಗಿದೆ ಮತ್ತು ಶೀತ ವಲಯವಾಗಿದೆ? ಅದಕ್ಕೆ ಕಾರಣವೇನಿರಬಹುದು? |
| + | # ಗ್ಲೋಬ್‌ಅನ್ನು ತಲೆಕೆಳಗೆ ಮಾಡಿ. ನಿಮ್ಮ ಅನಿಸಿಕೆಯಲ್ಲಿ ಇದರಿಂದ ಉಂಟಾಗಬಹುದಾದ ಮುಖ್ಯ ಬದಲಾವಣೆಗಳೇನು? ಗುರುತಿಸಿ. (ಉದಾಹರಣೆ: ಆಸ್ಟ್ರೇಲಿಯಾ ಮೇಲ್ಭಾಗದಲ್ಲಿದ್ದಾಗ .) |
| + | |
| + | |
| + | |
| + | ಮಾರ್ಬಲ್ ಬಳಸಿ ಅಕ್ಷಾಂಶ, ರೇಖಾಂಶ ಮತ್ತು ಮಳೆಮಾರುತದ ಚಕ್ರವನ್ನು ತಿಳಿಯಲು ನಿಮ್ಮ ಶಿಕ್ಷಕರ ಸಹಾಯ ಪಡೆಯಿರಿ. |
| + | ==ಅಧ್ಯಾಯದ ಸಾರಾಂಶ== |
| + | # ನೈಸರ್ಗಿಕ ವಿದ್ಯಮಾನಗಳು ಪ್ರಾಕೃತಿಕವಾಗಿ ಮತ್ತು ಮನುಷ್ಯ ಪ್ರಭಾವಿತ ಕಾರಣಗಳಿಂದ ಸಂಭವಿಸುತ್ತವೆ. |
| + | # ಚಿತ್ರಣದ ರೀತಿಯಲ್ಲಿ ಕೆಲವು ಮಾಹಿತಿಯನ್ನು ನಕ್ಷೆಗಳು ಪ್ರತಿನಿಧಿಸುತ್ತವೆ. |
| + | # ಮಾರ್ಬಲ್ ಎನ್ನುವುದು ಒಂದು ಶೈಕ್ಷಣಿಕ ಸಾಧನವಾಗಿದ್ದು ಇದರಲ್ಲಿರುವ ವಿವಿಧ ಮ್ಯಾಪ್ ವ್ಯೂ ಗಳ ಸಹಾಯದಿಂದ ಭೂಮಿಯ ಭೌಗೋಳಿಕ ಮಾಹಿತಿಯನ್ನು ಸಂಗ್ರಹಿಸಬಹುದು. |
| + | |
| + | ==ಅಭ್ಯಾಸಗಳು== |
| + | # ನಿಮ್ಮ ಪ್ರಕಾರ ಪರಿಸರವು ಒಳಗೊಂಡಿರುವಂತಹ ಅಂಶಗಳ ಒಂದು ಪರಿಕಲ್ಪನೆಯ ನಕ್ಷೆಯನ್ನು ತಯಾರಿಸಿ. ನಿಮಗೆ ತಿಳಿದಿರುವಂತಹ ಪರಿಸರದ ಸಮಸ್ಯೆಗಳು ಯಾವುವು? ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆಗಳನ್ನೇನಾದರು ನೋಡಿದ್ದೀರಾ ? ಪರಿಸರ ಉಳಿಸುವ ಕಾರ್ಯದಲ್ಲಿ ನಾವು ಭಾಗವಹಿಸುವುದು ಮುಖ್ಯ. |
| + | # ನಿಮ್ಮ ಶಾಲೆಯ ಸುತ್ತಮುತ್ತ ಎಷ್ಟು ಬಾವಿ ಮತ್ತು ಕೊಳವೆಬಾವಿಗಳಿವೆ? ಇವೆಲ್ಲವೂ ಕೆಲಸ ನಿರ್ವಹಿಸುತ್ತಿವೆಯೇ? ಕೊಳವೆಬಾವಿಗಳು ಒಣಗಲು ಕಾರಣವೇನಿರಬಹುದು? ಅಂತರ್ಜಲ ಸಂರಕ್ಷಣೆ ಏಕೆ ಮುಖ್ಯವಾಗಿದೆ? ಇವುಗಳ ಬಗ್ಗೆ ಒಂದು ಟಿಪ್ಪಣಿ ಯನ್ನು ತಯಾರಿಸಿ. ಚಿತ್ರಗಳನ್ನು ಹುಡುಕಲು ಅಂತರ್ಜಾಲಗಳನ್ನು ಮತ್ತು ನಿಮ್ಮ ವಿಷಯ ಹಂಚಿಕೆಗೆ ಇತರ ವೆಬ್ ಸೈಟ್‌ಗಳನ್ನು ಬಳಸಬಹುದು . |
| + | # ತಿಂಗಳ ಪ್ರತಿ ಮೊದಲ ವಾರದಂದು ತಾಪಮಾನವನ್ನು ದಾಖಲೆ ಮಾಡಿ. ನೀವು ಮಾಹಿತಿ ಸಂಗ್ರಿಹಿಸಿರುವುದರ ಬಗ್ಗೆ ಒಂದು ಟೇಬಲ್ ರಚಿಸಿ. |
| + | #ಕಡಿಮೆ |
| + | #ಹೆಚ್ಚು |
| + | #ಬಿದ್ದ ಮಳೆ |
| + | #ಜನವರಿ |
| + | #ಫೆಬ್ರವರಿ |
| + | #ಡಿಸೆಂಬರ್ |
| + | ಟೇಬಲ್ ಇನ್ ಸರ್ಟ್ ಮಾಡಲು ಟೇಬಲ್ ಮೆನುವಿನಲ್ಲಿ ಇನ್ ಸರ್ಟ್ →ಟೇಬಲ್ |
| + | |
| + | ==ಪೂರಕ ಅಭ್ಯಾಸಗಳು== |
| + | # ಈ ವೆಬ್ ಸೈಟ್ ಅನ್ನು ಬಳಸಿ http://www.rbi.org.in/currency/museum/c-ancient.html ಭಾರತದಲ್ಲಿ ನಾಣ್ಯಗಳು ವಿಕಾಸವಾದ ಬಗ್ಗೆ ನೋಡಿ. ಇಂದು ನಾವು ಬಳಸುತ್ತಿರುವ ನೋಟು ಮತ್ತು ನಾಣ್ಯಗಳು ಯಾವುವು? ಭಾರತದಲ್ಲಾದ ನಾಣ್ಯಗಳ ವಿಕಾಸವನ್ನು ಪತ್ತೆ ಹಚ್ಚಿ ಉಪಯೋಗಿಸಲಾದ ನಾಣ್ಯಗಳನ್ನು ಪಟ್ಟಿಮಾಡಿ . |
| + | # ನಿಮ್ಮ ಪ್ರದೇಶದಲ್ಲಿ ಕಂಡುಬರುವ ಎಲ್ಲಾ ಕಾರ್ಖಾನೆಗಳ ಪಟ್ಟಿಮಾಡಿ. ಈ ಕಾರ್ಖಾನೆಗಳಲ್ಲಿ ಲಭ್ಯವಿರುವ ವಿವಿಧ ಉದ್ಯೋಗಗಳ ಬಗ್ಗೆ ಪಟ್ಟಿಮಾಡಿ. ನಿಮ್ಮ ಸುತ್ತಮುತ್ತಲಿನ ಎಷ್ಟು ಜನರು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ? |
| + | ==ಪೂರಕ ಸಂಪನ್ಮೂಲಗಳು== |
| + | #[http://en.wikipedia.org/wiki/Indus_Valley_Civilization ಸಿಂಧೂ ಕಣಿವೆಯ ನಾಗರೀಕತೆಯ ಅವಲೋಕನ] |
| + | #[http://www.bbc.co.uk/schools/primaryhistory/indus_valley/ ಸಿಂಧೂ ಕಣಿವೆಯ ನಾಗರೀಕತೆಯ ಅವಲೋಕನ] |
| + | #[http://www.harappa.com/ ಮತ್ತು http://www.mohenjodaro.net/ ಹರಪ್ಪ ಮತ್ತು ಮೊಹೆಂಜೋದಾರೋ ನಾಗರೀಕತೆಯ ಜೀವನದ ವಿವಿಧ ಶೈಲಿಗಳ ಚಿತ್ರಣ] |
| + | #[http://www.hindu.com/yw/ ದಿ ಹಿಂದುನಲ್ಲಿ ಪುಟಾಣಿಗಳ ಪ್ರಪಂಚ ವಿಭಾಗ] |
| + | #[http://www.socialstudiesforkids.com/subjects/mapshistorical.htm ಪಾಶ್ಚಿಮಾತ್ಯ ರಾಷ್ಟ್ರಗಳ ಐತಿಹಾಸಿಕ ನಕ್ಷೆಗಳು] |
| + | #[http://video.nationalgeographic.com/video/kids/ ಮಕ್ಕಳಿಗಾಗಿ ರಾಷ್ಟ್ರೀಯ ಭೌಗೋಳಿಕ ವಿಡಿಯೋ] |
| + | # http://rmsa.karnatakaeducation.org.in/?q=node/202 ಇತರೆ ಸಮಾಜ ವಿಜ್ಞಾನ ಪಠ್ಯ ಪುಸ್ತಕಕ್ಕಾಗಿ] |