"ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ- 2015-16 - ಎಸ್ ಆರ್ ಪಿ ಕಾರ್ಯಾಗಾರದ ೫ ದಿನದ ವರದಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: '''ಬೆಂಗಳೂರು ಗ್ರಾಮಾಂತರ ಡಯಟ್ ರಾಜಾಜಿನಗರ''' <br> '''ರಾಜ್ಯ ಮಟ್ಟದ ಸಂ ಪನ್ಮೂಲ ವ...) |
( ಯಾವುದೇ ವ್ಯತ್ಯಾಸವಿಲ್ಲ )
|
೧೪:೫೩, ೭ ಜುಲೈ ೨೦೧೫ ನಂತೆ ಪರಿಷ್ಕರಣೆ
ಬೆಂಗಳೂರು ಗ್ರಾಮಾಂತರ ಡಯಟ್ ರಾಜಾಜಿನಗರ
ರಾಜ್ಯ ಮಟ್ಟದ ಸಂ ಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ
ದಿನಾಂಕ: 15.06.2015
1ನೇ ದಿನದ ವರದಿ
- ಮೊದಲ ದಿನದ ತರಬೇತಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಒಬ್ಬೊ ಬ್ಬರಾಗಿ ಸಂಪನ್ಮೂಲ
ವ್ಯಕ್ತಿಗಳು ಬಂದು ಸೇರುವ ಮೂಲಕ ವೇದಿಕೆ ಸಜ್ಜುಗೊಂಡಿತು.
- ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಗೂಗಲ್ ಶೀಟ್‌ನಲ್ಲಿ ತಮ್ಮ ಮಾಹಿತಿ ಗಳನ್ನೂ , ತರಬೇತಿಯಲ್ಲಿ ತಮಗೆ ಯಾವ ಯಾವ ಅಂಶಗಳ ಬಗ್ಗೆ ತರಬೇತಿ ಬೇಕೆಂಬುದರ ಬಗ್ಗೆಯೂ ವಿವರ ತುಂಬಿಸಿದರು.
- ನಂತರ ತರಬೇತುದಾರರಾದ ವೆಂಕಟೇಶ್‌ರವರು ಸಂಪನ್ಮೂಲ ವ್ಯಕ್ತಿಗಳೆಲ್ಲರ ಪರಿಚಯವನ್ನು ಮಾಡಿಸಿದರು.
- ಮುಂದೆ ವೆಂಕಟೇಶ್‌ರವರು ಈ ಆರು ದಿನಗಳ ತರಬೇತಿಯ ಉದ್ದೇಶ, ಸ್ವರೂಪವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
- ನಂತರ ಶ್ರಿ ಗುರುಮೂರ್ತಿ ರವರು ಬಾಷಾ ಕಲಿಕೆಯನ್ನು ಪರಿಣಾಮಕಾರಿಗೋಳಿಸುವುದು ಹೇಗೆ ಎಂಬುದನ್ನು ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ & ಬರೆಯುವ ಕೌಶಲಗಳ ಹಿನ್ನೆಲೆಯಲ್ಲಿ ಚರ್ಚಾತ್ಮಕವಾಗಿ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ಚರ್ಚೆಗೆ ಸೇರಿಸಿ ಚರ್ಚೆಯನ್ನು ಅರ್ಥಪೂರ್ಣಗೊಳಿಸಿದರು.
- ಬಾಷಾ ಕಲಿಕೆಯನ್ನು ಪರಿಣಾಮಕಾರಿಗೊಳಿಸುವ ಬಗೆಗಿನ ಸವಾಲುಗಳಿಗೆ ಯಾವ ರೀತಿಯ ವಿಧಾನಗಳನ್ನು ತರಗತಿಗಳಲ್ಲಿ ಭಾಷಾ ಶಿಕ್ಷಕರಾದವರು ಬಳಸಬಹುದು ಎಂಬುದನ್ನು ನಾವು ಪ್ರತಿಯೊಬ್ಬರೂ ಭಾಷಾ ಶಿಕ್ಷಕರ ವೇದಿಕೆಯ ಇಮೇಲ್‌ನಲ್ಲಿ ಹಂಚಿಕೊಂಡೆವು.
- ನಂತರ ರಾತ್ರಿಯಿಡಿ ಪ್ರಯಾಣಿಸಿ ಬಂದ ಪ್ರಯಾಣದ ದಣಿವನ್ನು ಮಾಧ್ಯಾಹ್ನದ ರುಚಿಕಟ್ಟಾದ ಊಟ ಕೊಂಚ ಮರೆಮಾಡಿಸಿತು.
- ಮಾಧ್ಯಾಹ್ನದ ಅವಧಿಯಲ್ಲಿ ಇನ್ನೊಬ್ಬ ತರಬೇತುದಾರರಾದ ರಾಕೇಶ್ ರವರು ಅಂತರ್ಜಾಲವನ್ನು ಬಳಸಿಕೊಂಡು ಗೂಗಲ್ ಮತ್ತಿತರ ಹುಡುಕು ತಾಣಗಳ ಬಗ್ಗೆ ಸವಿವರ ಮಾಹಿತಿ ನೀಡಿದರು.
- ಈ ಸಂದರ್ಭದಲ್ಲಿ ಅವರು ಜಾಲ ತಾಣಗಳಿಂದ ಮಾಹಿತಿ ಸಂಗ್ರಹಿಸುವ ಹಂತಗಳು, ಚಿತ್ರಗಳನ್ನು ಉಳಿಸಿಕೊಳ್ಳುವ ವಿಧಾನ , ಹಕ್ಕು ಸ್ವಾಮ್ಯ ಮುಂತಾದ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ ನೀಡಿದರು.
ಹೀಗೆ ಈ ದಿನದ ತರಬೇತಿ ಉಪಯುಕ್ತ ಅಂಶಗಳ ಕಲಿಕೆಯೊಂದಿಗೆ ಕೊನೆಗೊಂಡಿತು.
===========********============
೨ನೇ ದಿನದ ವರದಿ
ಬೆಳಗಾವಿ ಜಿಲ್ಲಾ ತಂಡದಿಂದ.
೧೫/೦೬/೨೦೧೫ ರ ಸೋಮವಾರದಂದು ಪ್ರಾರಂಭವಾದ ಎಸ್.ಟಿ.ಎಪ್ ಕನ್ನಡ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ ಪ್ರಾರಂವಾಗಿ ೨ದಿನಗಳು ೨ ಕ್ಷಣಗಳ ರೀತಿಯಲ್ಲಿ ಕಳೆದು 3ನೇ ದಿನಕ್ಕೆ ಮುಂದುವರಿದ ಸಂದರ್ಭ . ಇವತ್ತು ನಾನು ಎರಡನೇ ದಿನದ ವರದಿಯನ್ನು ತಮ್ಮಮುಂದೆ ಮಂಡಿಸುತ್ತಿದ್ದೇನೆ. ಕಾರ್ಯಾಗಾರದ ಎರಡನೇ ದಿನವಾದ ಮಂಗಳವಾರ ಎಂದಿನಂತೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಸರಿಯಾಗಿ ೯:೩೦ಕ್ಕೆ ಹಾಜರಿದ್ದರು. ಕಾರ್ಯಾಗಾರದಲ್ಲಿ ಮೊದಲನೇಯದಾಗಿ ವೆಂಕಟೇಶ ಸರ್ ರವರು ಕಾರ್ಯಾಗಾರವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ದಕ್ಷಿಣ ಕನ್ನಡ ಜಿಲ್ಲಾ ತಂಡದಿಂದ ಸಮಂತ ಸರ್ ರವರು ಮೊದಲನೇ ದಿನದ ವರದಿಯಯನ್ನು ಅಚ್ಚುಕಟ್ಟಾಗಿ ಮಂಡಿಸಿದರು. ವೆಂಕಟೇಶ ಸರ್ ರವರು ಪ್ರತಿಯೊಂದು ಜಿಲ್ಲಾ ತಂಡದಿಂದ ಕಳೆದ ಸಾಲಿನಲ್ಲಿ ನಡೆದ ಎಸ್.ಟಿ.ಎಪ್ ಕನ್ನಡ ಕಾರ್ಯಾಗಾರದಲ್ಲಿನ ಅನುಭವ ಮತ್ತು ಕುಂದುಕೊರತೆಗಳ ಬಗ್ಗೆ ಟಿಪ್ಪಣಿಯನ್ನು ಮಾಡಿಕೊಂಡರು.ನಂತರ ಎಸ್.ಟಿ.ಎಪ್ ತರಬೇತಿಯ ಅನುಷ್ಟಾನಕ್ಕೆ ಇರುವ ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು. ಅದಾಗಲೇ ೨ ಘಂಟೆಗೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಊಟದ ಸಮಯವಾದ್ದರಿಂದ ಮುದ್ದೆ ಊಟವನ್ನು ಸವಿಯಲು ಹೋದೆವು.ವಿರಾಮದ ನಂತರ ವೆಂಕಟೇಶ ಸರ್ ಅವರು ಸಂಪನ್ಮೂಲ ವ್ಯಕ್ತಗಳ ನೀರಿಕ್ಷೆಗಳನ್ನು ಪಟ್ಟಿ ಮಾಡಿದರು ನಂತರ ರಾಕೇಶ್ ಸರ ಅವರು ಎಲ್ಲಾ ನೀರಕ್ಷಾ ಪಟ್ಟಿಯಲ್ಲಿನ ಅಂಶಗಳಿಗೆ ಪರಿಹಾರವನ್ನು ಸೂಚಿಸಿದರು. ನಂತರ ಲಿಬ್ರೇ ಆಫೀಸ್ ಅಪಡೇಟ ಮಾಡುವದು, ಪರಿವಿಡಿ ರಚನೆ ಮಾಡುವದು, ಪಾಸೆವರ್ಡ ಕೊಡುವ ವಿಧಾನವನ್ನು ತಳಿಸಿದರು ನಂತರ ವೆಂಕಟೇಶ ಸರ್ ಅವರು ಬದಲಾದ ಟೆಂಪಲೇಟ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು ಅದಾಗಲೆ ಸಮಯ ೫.೩೦ ಆಗಿದ್ದರಿಂದ ಕಾರ್ಯಾಗಾರವನ್ನು ಅಂತ್ಯಗೊಳಿಸಲಾಯಿತು. ಮಂಡನೆ ಶ್ರೀ ಅಶೋಕ ಭಜಂತ್ರಿ ಶ್ರೀ ಪೈಗಂಬರ ಕಲಾವಂತ ಬೆಳಗಾವಿ ಜಿಲ್ಲಾ ತಂಡದ ಪರವಾಗಿ
ನಾಲ್ಕನೇ ದಿನದ ವರದಿ
ಕೊಪ್ಪಳ ಜಿಲ್ಲಾ ತಂಡದಿಂದ,
ಗೀಗೀ ಪದದ ಮೂಲಕ ವರದಿ
ಕುಂತ ನಿಂತ ಸಭಾದಾಗ | ಎಸ್.ಆರ್. ಪಿ ಶಿಭಿರದಾಗ
ಕೊಪ್ಪಳ ತಂಡದವರು ವರದಿ ಹೇಳ್ತಾರಣ್ಣ || ಪ ||
ಒಂದು ಕಿವಿಯಿಂದ ಕೇಳಿ ಇನ್ನೊಂದ ಕಿವಿಯಿಂದ ಬಿಟ್ಟು
ಪ್ಯಾಂಟು ಶರ್ಟ್ ಬಿಡಿಸ್ಕೊಂತ ಏಳಬ್ಯಾಡರಣ್ಣ || ೧ ||
ವೆಂಕಟೇಶ ಸರ್ ಸ್ವಾಗತದಿಂದ ಆರಂಭವಾದ ಶಿಬಿರ
ಧಾರವಡ ತಂಡದವರ ವರದಿವಾಚನ ಮುಂದಿನ
ಕಾರ್ಯಕ್ಕೆ ನಾಂದಿಯು ಆಯಿತು
ಮುಂದೆನಾಯ್ತು ಎಂಬೂದು ಕೇಳಿರಣ್ಣ || ೨ ||
ವೆಂಕಟೇಶ ಸರ್ ತಂಡಮಾಡಿ ಭಾಷಾ ಬೋಧನೆಯ ಬಗ್ಗೆ
ಚರ್ಚೆಗೆ ಸ್ಕ್ರಿಪ್ಟ್ ಕೊಟ್ಟಾರಾಣ್ಣಾ |
ತಂಡದವರು ಎಲ್ಲಾಸೇರಿ ಸ್ಕ್ರಿಪ್ಟ್ ಓದಿಕೋಂಡು
ತಮ್ಮ ತಮ್ಮ ವಿಚಾರ ಹೇಳಿದ್ರಣ್ಣ || ೩ ||
ಈ ಹೊತ್ತಿಗಾಗಲೆ ಡೈನಿಂಗ್ ರೂಮಿನಲ್ಲಿ
ಚಪಾತಿ ಎಲ್ಲರನ್ನು ಕರೆದಾವಣ್ಣಾ
ಊಟವನ್ನು ಮಾಡಿಕೊಂಡು ಮಜ್ಜಿಗೆ ಕುಡ್ದುಕೊಂಡು
ಎಲ್ಲಾರು ಒಳಗೆ ಬಂದಾರಣ್ಣಾ || ೪ ||
ಮದ್ಯಾಹ್ನಾ ಅವಧಿಯು ಪ್ರಭಾಕರ ಶೆಟ್ಟಿ ಸರ್
ಭಾಷಾ ಬೋಧನೆ ವಿಚಾರ ತಿಳಿಸಿದರಣ್ಣಾ
ಹಾಸ್ಯದ ಮಾತಿನಿಂದ ಎಲ್ಲರ ಮನಗೆದ್ದು
ನಗುವಿನ ಅಲೆಯಲ್ಲಿ ತೆಲೀಸಿದರಣ್ಣಾ || ೫ ||
ನಂತರ ಅವಧಿಯು ವೆಂಕಟೇಶ ಸರ್ ಕೈಗೆಸಿಕ್ಕು
ಭಾಷಾ ಬೋಧನೆ ಚರ್ಚೆ ನಡೆಸಿದ್ರಣ್ಣಾ
ಹೊರಗಿನ ಚಹಾವಾಸನೆ ಗಮ್ಮೆಂದು ಒಳಗೆ ಬಂದು
ಎಲ್ಲರನ್ನು ತನ್ನಕಡೆ ಸೆಳೆಯಿತ್ತಣ್ಣ || ೬ ||
ಚಹಾದ ವಿರಾಮ ಆದಮೇಲೆ ರಾಖೇಶ ಸರ್ ಮುಂದುವರಸಿ
ಮೇಲ್ ಫಿಲ್ಟ್ ರ್ ಮಾಡುಬಗೆ ತಿಳಿಸಿದ್ರಣ್ಣಾ
ಅವರು ಹೇಳಿದ್ದನ್ನು ಚಿತ್ತಾಗೊಟ್ಟು ಕೇಳುತ್ತಾ
ನಡುನಡುವೆ ಒಂದೊಂದು ಪ್ರಶ್ನೆಯ ಕೇಳತ್ತಾ
ಮೇಲ್ ಫಿಲ್ಟರ್ ಮಾಡುದನ್ನ ಕಲಿತೇವಣ್ಣಾ ||೭ ||
ಆಮೇಲೆ ಎಲ್ಲಾರೂ ಗಣಕಯಂತ್ರಕ್ಕೆ ತೆರಳಿ
ಮೇಲು ಫಿಲ್ಟರು ಮಾಡಿದ್ರಣ್ಣಾ
ಎಷ್ಟು ಪ್ರ್ಯಾಕ್ಟಿಸ್ ಮಾಡಿದ್ರು ಹೆಚ್ಚಿನ ಅವಧಿ ಇಲ್ಲದ್ದಕ್ಕೆ
ಎಲ್ಲಾರು ಮನದಲ್ಲಿ ಗೊಣಿಗ್ಯಾರಣ್ಣ ||೮ ||
ಈ ಹೊತ್ತಿಗಾಗಲೇ ಗಡಿಯಾರ ಓಡೋಡಿ ೫.೩೦ ದಾಟಿದ್ದು ತೋರಿಸತಣ್ಣಾ
ಎಲ್ಲಾರು ಕಂಪ್ಯೂಟರು ಶೆಟ್ ಡೌನ್ ಮಾಡಿ
ತಮ್ಮ ತಮ್ಮ ಗೂಡಿನ ದಾರಿ ಹಿಡಿದಾರಣ್ಣಾ ||೯ ||
ಹಾಡಿದವರು : ಶ್ರೀ ರಘುನಾಥ ಸಂಗಳದ ಶಿಕ್ಷಕರು
ಪ್ರಸ್ತುತಿ : ಶ್ರೀ ಬಸವರಾಜ ಮೇಟಿ ಶಿಕ್ಷಕರು
೫ ನೇ ದಿನದ ವರದಿ
ರಾಯಚೂರು ಜಿಲ್ಲಾ ತಂಡದಿಂದ
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗಜಂಗಮ ಒಂದೇ ಎಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲಬೇಕು ಶಿಕ್ಷಕ ಬಂಧುಗಳಿಗೆ ಕಂಪ್ಯೂಟರಜ್ಷಾನ ಬಳಸುವೆನೆಂದು
ಛಲವಿಲ್ಲದವರ ಮೆಚ್ಚ ನಮ್ಮ ಕಂಪ್ಯೂಟರ್ ದೇವ
ಎಂದು ಬಸವಾದಿ ಶರಣರನ್ನು ಮನದಲ್ಲಿ ಸ್ಮರಿಸುತ್ತ ಆರನೇ ದಿನದ ಕಾರ್ಯಾಗಾರಕ್ಕೆ ಆಗಮಿಸಿದ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರುತ್ತ ೫ನೇ ದಿನದ ಕಾರ್ಯಾಗಾರದ ವರದಿಯನ್ನು ಮಂಡಿಸುತ್ತಿದ್ದೇನೆ
ಮುಖ್ಯಾಂಶಗಳು
1. ಗೀಗೀಪದ ಶೈಲಿಯಲ್ಲಿ ವರದಿವಾಚನ
2. ಹಿಮ್ಮಾಹಿತಿ ವಿಶ್ಲೇಷಣೆ
3. ವಿಡಿಯೋ ಎಡಿಟಿಂಗ್
4. ರಿಕಾರ್ಡ ಮೈ ಡೆಸ್ಕ್ಟಾ ಪ್
5. ಅಡಾಸಿಟಿ
6. ಎಮ್ ಆರ್ ಪಿ ತರಬೇತಿ ಅಝಂಡಾ
ವರದಿಯ ವಿವರ ಕಂಚಿನ ಕಂಠದ ಗಾಯಕರಾದ ರಘುನಾಥ ಸರ್ ಅವರಿಂದ
೪ ನೇ ದಿನದ ವರದಿವಾಚನವನ್ನು ಗೀಗಿ ಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಮಂಡಿಸಲಾಯಿತು. ಅವರ ಈ ಹೊಸ ಪ್ರಯತ್ನ ಎಲ್ಲಾ ಶಿಭಿರಾರ್ಥಿಗಳ ಮನಸೆಳೆಯಿತು
ನಂತರದಲ್ಲಿ ವೆಂಕಟೇಶ ಸರ್ ಇವರಿಂದ ಹಿಮ್ಮಾಹಿತಿ ನಮೂನೆಯಲ್ಲಿ ನಾವು ಕೊಟ್ಟ ಮಾಹಿತಿಯನ್ನು ವಿವಿಧ ಆಲೇಖಗಳ ಮೂಲಕ ವಿಶ್ಲೇಷಣೆ ಮಾಡಲಾಯಿತು. ನಂತರ ಕೋಯರ ಪೇಜನಲ್ಲಿ ಸೇತುಬಂಧ ಸಾಮರ್ಥ್ಯಗಳ ಪಟ್ಟಿ ಇದೆ ಅದನ್ನು ನಮ್ಮ ತರಗತಿಯ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ತಿಳಿಸಿದರು
ರೋಗಿ ಬಯಸಿದ್ದು ಹಾಲು ಅನ್ನ , ಡಾಕ್ಟ್ರು ಹೇಳಿದ್ದು ಹಾಲು ಅನ್ನ ಎನ್ನುವಂತೆ, ನಮ್ಮೆಲ್ಲರ ನಿರೀಕ್ಷೆಯಂತೆ ರಾಖೇಶ ಸರ್ ಅವರನ್ನು ಓಪನ್ ಶಾಟ್ ವಿಡಿಯೋ ಎಡಿಟರ್ ವಿಡಿಯೋ ಎಡಿಟಿಂಗ್ ,ಯೂ ಟೂಬ್ ಡೌನಲೋಡ್, ಟೆಕ್ಸ್ಟ ಎಡಿಟಿಂಗ್
ಇಮೇಜ್ ಎಡಿಟಿಂಗ್ ಅತ್ಯಂತ ಸರಳ ರೀತಿಯಲ್ಲಿ ಮನಮುಟ್ಟುವಂತೆ ತಿಳಿಸಿದರು
ರಿಕಾರ್ಡ ಮೈ ಡೆಸ್ಕಟಾಪ್ನಲ್ಲಿ ಹಿಂದೆ ಇದ್ದ ಒಂದು ವಿಡಿಯೋವನ್ನು ವಿಡಿಯೋ ಧ್ವನಿಯನ್ನು ಮ್ಯೂಟ್ ಮಾಡಿ ನಮ್ಮ ಧ್ವನಿಯನ್ನು ನೀಡುವ ಬಗ್ಗೆ ತಿಳಿಸಿದರು. ಈ ವೇಳೆಗೆ ಊಟ ಬಂದಿತ್ತು ಎಲ್ಲರೂ ಊಟಕ್ಕೆ ತೆರಳಿದೆವು
ಊಟದ ವಿರಾಮದ ನಂತರ ಅಡಾಸಿಟಿ ಬಗ್ಗೆ ತಿಳಿಸುತ್ತಾ ಪ್ರಭಾಕರ ಶೆಟ್ಟಿ ಸರ್ ಅವರ ಧ್ವನಿಯನ್ನು ರಿಕಾರ್ಡ ಮಾಡಿ ಅದರಲ್ಲಿ ಬೇಡವಾದ ಧ್ವನಿಯನ್ನು ತೆಗೆದು ಹಾಕಿ ಬೇಕಾದ ಧ್ವನಿಯನ್ನು ಎಡಿಟ್ ಮಾಡುವ ವಿಧಾನ ತಿಳಿಸಿದರು. ಪೇಡ್ ಇನ್ ಪೇಡ್ ಔಟ್ ಗಳ ಬಗ್ಗೆ ತಿಳಿಸಿದರು. ಬೇರೆ ಬೇರೆ ಹಾಡುಗಳಿಂದ ನಮಗೆ ಬೇಕಾದ ಹಾಡುಗಳನ್ನು ಸೇರಿಸುವ ವಿಧಾನ ತಿಳಿಸಿದರು
ಚಹಾ ವಿರಾಮದ ನಂತರ ವೆಂಕಟೇಶ ಸರ್ ಅವರು ಎಮ್ . ಆರ್. ಪಿ ತರಬೇತಿಯ ಅಜಂಡಾವನ್ನು ಮೈಂಡ್ ಮ್ಯಾಪ್ ಗಳ ಮೂಲಕ ಎಂಟು ದಿನಗಳ ಕಾರ್ಯಾಗಾರದಲ್ಲಿ ಪ್ರತಿ ದಿನ ಮಾಡುವ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಅಷ್ಟೊತ್ತಿಗಾಗಲೆ ಸಮಯ ೫.೩೦ ತೋರಿಸುತ್ತಿತ್ತು ಎಲ್ಲರೂ ಮನೆದಾರಿಗೆ ತೆರಳಿದರು
ವರದಿ : ರಾಯಚೂರು ತಂಡದವರಿಂದ
ಶ್ರೀ ಬಸವರಾಜ ಹೊಸಳ್ಳಿ ಸ. ಶಿಕ್ಷಕರು
ಶ್ರೀ ಶಿವಕುಮಾರ ಕೋಡಿಹಾಳ . ಸ. ಶಿಕ್ಷಕರು