"ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: '''ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ''' ವಿದ್ಯಾರ್ಥಿಗಳನ್ನು ಕರೆದುಕೊಂ...) |

(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | + | '''ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ''' | |
ವಿದ್ಯಾರ್ಥಿಗಳನ್ನು ಕರೆದುಕೊಂಡು ವನಭೋಜನಕ್ಕೆಂದು ಬಿಜಾಪುರದ ಭೂತನಾಳ ಕೆರಗೆ ಹೋಗಿದ್ದೆವು. ಅಲ್ಲಿಯ ಸುಂದರವಾದ ತೋಟ, ನವಿಲುಗಳು ಹಾಗೂ ಕೆರೆಯ ನೀರಿನ ಅಲೆಗಳನ್ನು ನೋಡುತ್ತ ಸಾಗಿದ್ದೆವು. ಅಲ್ಲಿ ಬೆಳೆದಿದ್ದ ಜಲಸಸ್ಯ ಹಾಗೂ ಹಾವಸೆಗಳನ್ನು ತೋರಿಸಿ ವಿವರಣೆ ನೀಡುತ್ತಿದ್ದೆ. ಆಗ ವಿದ್ಯಾರ್ಥಿಗಳ ಗುಂಪೊಂದು ಗುರುಗಳೇ ಇಲ್ಲಿ ನೋಡಿ, ಇರುವೆಗಳು ಎಷ್ಟು ಚೆನ್ನಾಗಿ ಸಾಲು ಹಿಡಿದು ಹೊರಟಿವೆ ಎಂದರು.
| ವಿದ್ಯಾರ್ಥಿಗಳನ್ನು ಕರೆದುಕೊಂಡು ವನಭೋಜನಕ್ಕೆಂದು ಬಿಜಾಪುರದ ಭೂತನಾಳ ಕೆರಗೆ ಹೋಗಿದ್ದೆವು. ಅಲ್ಲಿಯ ಸುಂದರವಾದ ತೋಟ, ನವಿಲುಗಳು ಹಾಗೂ ಕೆರೆಯ ನೀರಿನ ಅಲೆಗಳನ್ನು ನೋಡುತ್ತ ಸಾಗಿದ್ದೆವು. ಅಲ್ಲಿ ಬೆಳೆದಿದ್ದ ಜಲಸಸ್ಯ ಹಾಗೂ ಹಾವಸೆಗಳನ್ನು ತೋರಿಸಿ ವಿವರಣೆ ನೀಡುತ್ತಿದ್ದೆ. ಆಗ ವಿದ್ಯಾರ್ಥಿಗಳ ಗುಂಪೊಂದು ಗುರುಗಳೇ ಇಲ್ಲಿ ನೋಡಿ, ಇರುವೆಗಳು ಎಷ್ಟು ಚೆನ್ನಾಗಿ ಸಾಲು ಹಿಡಿದು ಹೊರಟಿವೆ ಎಂದರು.

೭ ನೇ ಸಾಲು: | ೭ ನೇ ಸಾಲು: | ||
ಅವುಗಳು ಒಂದೇ ಗೂಡಿನಲ್ಲಿದ್ದರೂ ವಾಸನೆಯಿಂದ ತಮ್ಮ ಜಾತಿಯನ್ನು ಗುರುತಿಸಿಕೊಳ್ಳುತ್ತವೆ. ತಮ್ಮ ವಾಸನೆ ಇಲ್ಲದಿರುವ ಇರುವೆಗಳನ್ನು ಗೂಡಿನೊಳಗೆ ಪ್ರವೇಶಿಸಲೂ ಬಿಡುವುದಿಲ್ಲ. ವಾಸನೆ ಕಂಡುಹಿಡಿಯುವ ಶಕ್ತಿಯಿಂದಲೇ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇರುವೆಗಳು ಚಲಿಸುವ ದಾರಿಯನ್ನು ಅಳಿಸಿಹಾಕಿದಾಗ ಇರುವೆಗಳು ಅತ್ತ ಇತ್ತ ತಿರುಗಿ ವಾಪಾಸಾಗುತ್ತವೆ. ನಾಯಿಗಳು ಕೂಡ ವಾಸನೆ ಗ್ರಹಿಸಿ ಹೋಗುವುದನ್ನು ನೀವು ನೋಡಿದ್ದೀರಿ ಅಲ್ಲವೆ ಎಂದು ತಿಳಿಸಿದೆ.
| ಅವುಗಳು ಒಂದೇ ಗೂಡಿನಲ್ಲಿದ್ದರೂ ವಾಸನೆಯಿಂದ ತಮ್ಮ ಜಾತಿಯನ್ನು ಗುರುತಿಸಿಕೊಳ್ಳುತ್ತವೆ. ತಮ್ಮ ವಾಸನೆ ಇಲ್ಲದಿರುವ ಇರುವೆಗಳನ್ನು ಗೂಡಿನೊಳಗೆ ಪ್ರವೇಶಿಸಲೂ ಬಿಡುವುದಿಲ್ಲ. ವಾಸನೆ ಕಂಡುಹಿಡಿಯುವ ಶಕ್ತಿಯಿಂದಲೇ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇರುವೆಗಳು ಚಲಿಸುವ ದಾರಿಯನ್ನು ಅಳಿಸಿಹಾಕಿದಾಗ ಇರುವೆಗಳು ಅತ್ತ ಇತ್ತ ತಿರುಗಿ ವಾಪಾಸಾಗುತ್ತವೆ. ನಾಯಿಗಳು ಕೂಡ ವಾಸನೆ ಗ್ರಹಿಸಿ ಹೋಗುವುದನ್ನು ನೀವು ನೋಡಿದ್ದೀರಿ ಅಲ್ಲವೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಖುಷಿಯಿಂದ ವಂದನೆಗಳು ಗುರುಗಳೆ ಎಂದು ಒಕ್ಕೊರಿಲಿನಿಂದ ಕೂಗಿ ಆಡಲು ತೆರಳಿದರು.
| ವಿದ್ಯಾರ್ಥಿಗಳು ಖುಷಿಯಿಂದ ವಂದನೆಗಳು ಗುರುಗಳೆ ಎಂದು ಒಕ್ಕೊರಿಲಿನಿಂದ ಕೂಗಿ ಆಡಲು ತೆರಳಿದರು.

ಲೇಖಕರು:
| ಲೇಖಕರು:

೧೬:೨೮, ೩೦ ಜುಲೈ ೨೦೧೫ ದ ಇತ್ತೀಚಿನ ಆವೃತ್ತಿ
ಇರುವೆ ಇರುವೆ ನೀನೆಲ್ಲಿಗೆ ಹೊರಟಿರುವೆ
ವಿದ್ಯಾರ್ಥಿಗಳನ್ನು ಕರೆದುಕೊಂಡು ವನಭೋಜನಕ್ಕೆಂದು ಬಿಜಾಪುರದ ಭೂತನಾಳ ಕೆರಗೆ ಹೋಗಿದ್ದೆವು. ಅಲ್ಲಿಯ ಸುಂದರವಾದ ತೋಟ, ನವಿಲುಗಳು ಹಾಗೂ ಕೆರೆಯ ನೀರಿನ ಅಲೆಗಳನ್ನು ನೋಡುತ್ತ ಸಾಗಿದ್ದೆವು. ಅಲ್ಲಿ ಬೆಳೆದಿದ್ದ ಜಲಸಸ್ಯ ಹಾಗೂ ಹಾವಸೆಗಳನ್ನು ತೋರಿಸಿ ವಿವರಣೆ ನೀಡುತ್ತಿದ್ದೆ. ಆಗ ವಿದ್ಯಾರ್ಥಿಗಳ ಗುಂಪೊಂದು ಗುರುಗಳೇ ಇಲ್ಲಿ ನೋಡಿ, ಇರುವೆಗಳು ಎಷ್ಟು ಚೆನ್ನಾಗಿ ಸಾಲು ಹಿಡಿದು ಹೊರಟಿವೆ ಎಂದರು.
ನಾನು ಇರುವೆಗಳ ಸಾಲನ್ನು ನೋಡಿ, ಮಕ್ಕಳೇ ಇರುವೆಗಳು ಹೇಗೆ ಸಾಲನ್ನು ಗುರುತು ಹಿಡಿದು ಹೋಗುತ್ತವೆ? ಎಂದು ಕೇಳಿದೆ. ಮಕ್ಕಳು ಉತ್ತರ ಹೇಳದೆ ಮೌನವಾಗಿ ನಿಂತರು.
ಈಗ ನೋಡಿ, ಸ್ವಲ್ಪ ನೆಲವನ್ನು ಕೆದರುತ್ತೇನೆ. ಏನಾಯಿತು? ಸಾಲು ಹಿಡಿಯುವುದನ್ನು ಬಿಟ್ಟು ಇರುವೆಗಳು ಚೆಲ್ಲಾಪಿಲ್ಲಿಯಾದವು. ಹೀಗೇಕೆ ಎಂದು ಕೇಳಿದೆ, ಮಕ್ಕಳು ಉತ್ತರ ಹೇಳದೆ ನನಗೆ ಉತ್ತರ ಹೇಳುವಂತೆ ಕೇಳಿದರು.
ನಾನು ತಿಳಿಸಿದೆ - ಇರುವೆಗಳು ಯಾವಾಗಲೂ ಒಂದೇ ಸಾಲಿನಲ್ಲಿ ಹೋಗುತ್ತವೆ. ಇದಕ್ಕೆ ಕಾರಣ, ಇರುವೆಗಳು ‘ಫೆರಮೋನ್’ ಎಂಬ ರಸಾಯನಿಕ ವಸ್ತುವನ್ನು ದಾರಿಯುದ್ದಕ್ಕೂ ಒಸರುತ್ತಾ ಹೋಗುತ್ತವೆ. ರಸಾಯನಿಕ ವಸ್ತುವಿನ ಈ ಜಾಡಿನಲ್ಲಿಯೇ ಉಳಿದ ಇರುವೆಗಳು ಚಲಿಸುತ್ತವೆ. ಇರುವೆ ಮತ್ತು ಜೇನುನೋಣದಂತಹ ಕೀಟಗಳಿಗೆ ವಾಸನೆ ಗ್ರಹಿಸುವ ಶಕ್ತಿ ಹೆಚ್ಚು.
ಅವುಗಳು ಒಂದೇ ಗೂಡಿನಲ್ಲಿದ್ದರೂ ವಾಸನೆಯಿಂದ ತಮ್ಮ ಜಾತಿಯನ್ನು ಗುರುತಿಸಿಕೊಳ್ಳುತ್ತವೆ. ತಮ್ಮ ವಾಸನೆ ಇಲ್ಲದಿರುವ ಇರುವೆಗಳನ್ನು ಗೂಡಿನೊಳಗೆ ಪ್ರವೇಶಿಸಲೂ ಬಿಡುವುದಿಲ್ಲ. ವಾಸನೆ ಕಂಡುಹಿಡಿಯುವ ಶಕ್ತಿಯಿಂದಲೇ ಆಹಾರವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇರುವೆಗಳು ಚಲಿಸುವ ದಾರಿಯನ್ನು ಅಳಿಸಿಹಾಕಿದಾಗ ಇರುವೆಗಳು ಅತ್ತ ಇತ್ತ ತಿರುಗಿ ವಾಪಾಸಾಗುತ್ತವೆ. ನಾಯಿಗಳು ಕೂಡ ವಾಸನೆ ಗ್ರಹಿಸಿ ಹೋಗುವುದನ್ನು ನೀವು ನೋಡಿದ್ದೀರಿ ಅಲ್ಲವೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳು ಖುಷಿಯಿಂದ ವಂದನೆಗಳು ಗುರುಗಳೆ ಎಂದು ಒಕ್ಕೊರಿಲಿನಿಂದ ಕೂಗಿ ಆಡಲು ತೆರಳಿದರು.
ಲೇಖಕರು:
ಶ್ರೀ ಸಂಗಮೇಶ ವ್ಹಿ. ಬುರ್ಲಿ
(ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು)
ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ,
ಸೋಲಾಪೂರ ರಸ್ತೆ ವಿಜಯಪೂರ – 586103
ಮೋ:9060060300 - 9008930072
Email : svb1966bjp@gmail.com