"ಅಕ್ಷೀ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: '''‘ಅಕ್ಷೀ. . . . . .’ ಸೀನು ಹೇಗೆ ಬರುತ್ತೆ''' 9ನೇ ವರ್ಗಕ್ಕೆ ವಿಜ್ಞಾನದ ‘ಉಷ್ಟ’ ಪಾ...) |

೧೪ ನೇ ಸಾಲು: | ೧೪ ನೇ ಸಾಲು: | ||
“ದೇವರು ನಿನಗೆ ಸಹಾಯ ಮಾಡಲಿ” ಎಂದು ಹಾರೈಸುತ್ತಿದ್ದರು. ಅವರ ನಂಬಿಕೆಯಲ್ಲಿ ಸೀನುವ ವ್ಯಕ್ತಿ ಅಪಾಯದಲ್ಲಿದ್ದಾನೆಂಬ ಭಾವನೆ ಇರುತ್ತಿತ್ತು ಎಂದು ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದೆ.
| “ದೇವರು ನಿನಗೆ ಸಹಾಯ ಮಾಡಲಿ” ಎಂದು ಹಾರೈಸುತ್ತಿದ್ದರು. ಅವರ ನಂಬಿಕೆಯಲ್ಲಿ ಸೀನುವ ವ್ಯಕ್ತಿ ಅಪಾಯದಲ್ಲಿದ್ದಾನೆಂಬ ಭಾವನೆ ಇರುತ್ತಿತ್ತು ಎಂದು ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದೆ.

ಎಲ್ಲರೂ ಏಕಾಗ್ರತೆಯಿಂದ, ಆಸಕ್ತಿಯಿಂದ ಆಲಿಸುತ್ತಿದ್ದರು. ಆಗ ಮತ್ತೊಮ್ಮೆ ವಿದ್ಯಾರ್ಥಿ ಸೀನಿದ್ದರಿಂದ ಎಲ್ಲರೂ ಒಕ್ಕೊರಲಿನಿಂದ ‘ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದಾಗ ವರ್ಗಕೋಣೆಯಲ್ಲಿ ನಗು ತುಂಬಿತು.
| ಎಲ್ಲರೂ ಏಕಾಗ್ರತೆಯಿಂದ, ಆಸಕ್ತಿಯಿಂದ ಆಲಿಸುತ್ತಿದ್ದರು. ಆಗ ಮತ್ತೊಮ್ಮೆ ವಿದ್ಯಾರ್ಥಿ ಸೀನಿದ್ದರಿಂದ ಎಲ್ಲರೂ ಒಕ್ಕೊರಲಿನಿಂದ ‘ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದಾಗ ವರ್ಗಕೋಣೆಯಲ್ಲಿ ನಗು ತುಂಬಿತು.

+ | ಲೇಖಕರು:

+ | ಶ್ರೀ ಸಂಗಮೇಶ ವ್ಹಿ. ಬುರ್ಲಿ

+ | (ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು)

+ | ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ,

+ | ಸೋಲಾಪೂರ ರಸ್ತೆ ವಿಜಯಪೂರ – 586103

+ | ಮೋ:9060060300 - 9008930072

+ | Email : svb1966bjp@gmail.com |
೧೬:೩೦, ೩೦ ಜುಲೈ ೨೦೧೫ ದ ಇತ್ತೀಚಿನ ಆವೃತ್ತಿ
‘ಅಕ್ಷೀ. . . . . .’ ಸೀನು ಹೇಗೆ ಬರುತ್ತೆ
9ನೇ ವರ್ಗಕ್ಕೆ ವಿಜ್ಞಾನದ ‘ಉಷ್ಟ’ ಪಾಠವನ್ನು ಹೇಳುತ್ತಾ ವಿಶೇಷ ಪ್ರಶ್ನೆ ಕೇಳಿ ಮಕ್ಕಳನ್ನು ಕುತೂಹಲದಿಂದ ಪಾಠ ಆಲಿಸುವಂತೆ ಮಾಡಿದ್ದೆ. ಒಬ್ಬ ವಿದ್ಯಾರ್ಥಿನಿ ಜೋರಾಗಿ ಸೀನಿದ್ದರಿಂದ ಎಲ್ಲರೂ ಜೋರಾಗಿ ನಗಲು ಪ್ರಾರಂಭಿಸಿದರು. ಆಗ ನಾನು ಶಾಂತ ರೀತಿಯಿಂದ ಮತ್ತೊಂದು ಪ್ರಶ್ನೆ ಕೇಳಿದೆ.
ಪ್ರಶ್ನೆ :- ಮಕ್ಕಳೆ ಸೀನು ಹೇಗೆ ಬರುತ್ತದೆ?
ವಿದ್ಯಾರ್ಥಿಗಳು :- (ಸ್ವಲ್ಪ ಯೋಚಿಸಿ) ನೆಗಡಿ ಬಂದಾಗ ಸೀನು ಬರುತ್ತದೆ ಎಂದರು.
ಪ್ರಶ್ನೆ :- ಇನ್ನೂವರೆಗೆ ಇಲ್ಲದ ಸೀನು ಒಮ್ಮೆಲೆ ಹೇಗೆ ಬಂತು. ನೆಗಡಿ ಒಮ್ಮೆಲೇ ಇಲ್ಲೆ ಸುರು ಆಯ್ತಾ? ಹಾಗಾದರೆ ಸೀನು ಹೇಗೆ ಬರುತ್ತೆ?
ಆಗ ವಿದ್ಯಾರ್ಥಿನಿಯರು ಸುಮ್ಮನಾದರು. ಅವರಿಗೆ ಯೋಚಿಸಲು ಅವಕಾಶ ನೀಡಿದೆ, ಆದರೂ ಸಮಂಜಸ ಉತ್ತರ ದೊರಕಲಿಲ್ಲ. ಆಗ ನಾನೇ ತಿಳಿಸಿದೆ.......
ಸೀನುವುದು ಕೇವಲ ಭೌತಿಕ ಕೆಲಸವಷ್ಟೇ ಅಲ್ಲ ವೈಜ್ಞಾನಿಕವಾಗಿ ಹೇಳುವುದಾದರೆ ಗಾಳಿ ಮತ್ತು ಮೂಗಿನಲ್ಲಿ ಸೇರಿರುವ ಕಶ್ಮಲವನ್ನು ಮೂಗಿನಿಂದ ಮತ್ತು ಬಾಯಿಯಿಂದ ಹೊರಹಾಕುವ ಕ್ರಿಯೆಯೆ ಸೀನು. ಇದೊಂದು ಪ್ರತಿಕ್ರಿಯೆಯಾಗಿದ್ದು ಇದಕ್ಕೆ ಮುಖ್ಯ ಸ್ಥಾನವಿದೆ. ನಮಗೆ ಸೀನಿನಮೇಲೆ ಯಾವುದೆ ನಿಯಂತ್ರಣವಿರುವುದಿಲ್ಲ. ಶ್ಲೇಷ್ಮದಿಂದ ಮೂಗಿನ ಒಳಗಿನ ಪೊರೆಗೆ ಉಪದ್ರವ ಉಂಟಾದಾಗ ಸೀನು ಬರುತ್ತದೆ.
ಮೂಗಿನ ಶ್ಲೇಷ್ಮ ಪೊರೆಯು ಊದಿಕೊಂಡಾಗ ಕೂಡಾ ಸೀನು ಬರುತ್ತದೆ. ನೇಗಡಿ ಹಿಡಿದಾಗ ಅಥವಾ ಹೊರಗಿನ ವಸ್ತುಗಳು ಮೂಗಿಗೆ ಹೊಕ್ಕಾಗ ಸೀನು ಬರುತ್ತದೆ. ಸೀನುವುದೆಂದರೆ ದೇಹಕ್ಕೆ ಬೇಡದಿರುವ ವಸ್ತುಗಳನ್ನು ಗಾಳಿಯ ಮೂಲಕ ಹೊರಗೆ ಹಾಕುವುದು. ಅತ್ತಾಗ ಕೂಡ ಸೀನು ಬರುವುದು. ಸಾಮಾನ್ಯವಾಗಿ ನೆಗಡಿ ಸೋಂಕು ತಗುಲಿದಾಗ ಸೀನು ಪದೇ ಪದೇ ಬರುವುದಲ್ಲದೆ, ಮೂಗು ಕಟ್ಟಿಕೊಳ್ಳುತ್ತದೆ. ನೆಗಡಿ ಸಾಮಾನ್ಯವಾಗಿ ಗೋಚರಿಸುವ ಒಂದು ಅಂಟುರೋಗ. ‘ರೈನೋವೈರಸ್’ ನಿಂದ ಈ ರೋಗ ಬರುವುದು. ಕೆಮ್ಮುವಾಗ, ಸೀನುವಾಗ ಹೊರಹಾಕುವ ತುಂತುರುಗಳಲ್ಲಿ ರೋಗದ ವೈರಸ್ ಇರುವುದು.
ಅವು ಗಾಳಿಯಲ್ಲಿ ತೇಲುತ್ತ ಇನ್ನೊಬ್ಬರಿಗೆ ತಗಲುತ್ತವೆ. ಆದ್ದರಿಂದ ಸೀನುವಾಗ ಎರಡು ಅಂಗೈಗಳನ್ನು ಬಾಯಿಯ ಮುಂದೆ ಹಿಡಿದುಕೊಳ್ಳಬೇಕು. ಇಲ್ಲದೆ ಹೋದರೆ ವೈರಸ್ಗಳು ಹತ್ತಿರ ಇರುವವರಿಗೆ ಸೇರುತ್ತವೆ. ಒಂದೆರಡು ದಿನಗಳಲ್ಲಿ ಗಂಟಲಿನ ಒಳಪೊರೆ ಕೆಂಪಾಗುವುದು, ದ್ರವ ವಸರಲಾರಂಭಿಸುತ್ತದೆ, ಮೂಗಿನಿಂದ ನೀರು ಇಳಿಯುವುದು, ಅನಂತರ ಒಣ ಕೆಮ್ಮು, ಸೀನು ಕಂಡುಬರುತ್ತದೆ. ಮುಂದೆ ದ್ರವ ಗಟ್ಟಿಯಾಗಿ ಹಸಿರು-ಹಳದಿ ಬಣ್ಣ ಪಡೆಯುವುದು. ಮೂಗು ಕಟ್ಟಿಕೊಂಡು ಉಸಿರಾಟ ಕಷ್ಟವಾಗುವುದು. ವಾಸನೆ ರುಚಿ ತಿಳಿಯದೆ ಹೋಗುವುದು. ಇವೆಲ್ಲ ಕ್ರಮವಾಗಿ ನಡೆಯುತ್ತವೆ.
ಸೀನುವುದರ ಬಗ್ಗೆ ಹಲವು ದಂತ ಕಥೆಗಳು ಕೂಡ ಇವೆ. ಬಹಳ ಕಾಲದಿಂದಲೂ ಸೀನುವುದನ್ನು ಒಂದು ಅಪಶಕುನವೆÀಂದು ನಂಬಿದ್ದರು. ರೋಮನ್‍ರು, ಗ್ರೀಕರು, ಈಜಿಪ್ಟಿನವರು ಸೀನುವುದನ್ನು ಅಪಾಯದ ಸಂಕೇತವೆಂದೂ ನಂಬಿದ್ದಾರೆ. ನಮ್ಮಲ್ಲಿಯೂ ಒಂಟಿ ಸೀನಿಗೆ ಏನೇನೊ ಕಲ್ಪನೆಗಳಿವೆ.
ಬಲಗಡೆ ಸೀನುವುದನ್ನು ಶುಭಕರವೆಂದು, ಎಡಗಡೆ ಸೀನುವುದನ್ನು ಅಶುಭವೆಂದು ನಂಬಿದ್ದರು. ಯಾರಾದರು ಸೀನಿದನಂತರ “ನಿನಗೆ ದೇವರು ಒಳ್ಳೆಯದನ್ನು ಮಾಡಲಿ” ಎನ್ನುವುದು ಇತ್ತೀಚಿನದಲ್ಲ, ಪ್ರಾಚೀನ ನಂಬಿಕೆಯಾಗಿದೆ. ರೋಮನ್ನರ ನಂಬಿಕೆಯಂತೆ ಸೀನುವುದರಿಂದ ದುಷ್ಟಶಕ್ತಿಗಳು ಹೊರಗೆ ಹೊಗುತ್ತವೆ, ಯಾರದರೂ ಸೀನಿದರೆ ಎಲ್ಲರೂ “ನಿನಗೆ ಒಳ್ಳೆಯದಾಗಲಿ” ಎನ್ನತ್ತಿದ್ದರು. ಅವರ ಪ್ರಕಾರ ದುಷ್ಟಶಕ್ತಿಯನ್ನು ಹೊರಗೆ ಹಾಕುವ ನಿನ್ನ ಪ್ರಯತ್ನ ಯಶಸ್ವಿಯಾಗಲಿ ಎಂದರ್ಥ.
ಪ್ರಾಚೀನ ಜನರು ಸೀನುವುದು ಸಾವು ಹತ್ತಿರ ಬರುತ್ತಿರುವ ಸಂಕೇತವೆಂದು ನಂಬಿದ್ದರು. ಸೀನುವವನಿಗೆ ಜನರು
“ದೇವರು ನಿನಗೆ ಸಹಾಯ ಮಾಡಲಿ” ಎಂದು ಹಾರೈಸುತ್ತಿದ್ದರು. ಅವರ ನಂಬಿಕೆಯಲ್ಲಿ ಸೀನುವ ವ್ಯಕ್ತಿ ಅಪಾಯದಲ್ಲಿದ್ದಾನೆಂಬ ಭಾವನೆ ಇರುತ್ತಿತ್ತು ಎಂದು ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದೆ.
ಎಲ್ಲರೂ ಏಕಾಗ್ರತೆಯಿಂದ, ಆಸಕ್ತಿಯಿಂದ ಆಲಿಸುತ್ತಿದ್ದರು. ಆಗ ಮತ್ತೊಮ್ಮೆ ವಿದ್ಯಾರ್ಥಿ ಸೀನಿದ್ದರಿಂದ ಎಲ್ಲರೂ ಒಕ್ಕೊರಲಿನಿಂದ ‘ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹಾರೈಸಿದಾಗ ವರ್ಗಕೋಣೆಯಲ್ಲಿ ನಗು ತುಂಬಿತು.
ಲೇಖಕರು:
ಶ್ರೀ ಸಂಗಮೇಶ ವ್ಹಿ. ಬುರ್ಲಿ
(ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು)
ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ,
ಸೋಲಾಪೂರ ರಸ್ತೆ ವಿಜಯಪೂರ – 586103
ಮೋ:9060060300 - 9008930072
Email : svb1966bjp@gmail.com