"ರಕ್ತದ ಒತ್ತಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: '''ರಕ್ತದ ಒತ್ತಡ''' 9ನೇ ಅ ವರ್ಗದ ವಿದ್ಯಾರ್ಥಿನಿಯರಿಗೆ ವಿಜ್ಞಾನ ಭಾಗ 2 (ಜೀವಶಾಸ...) |

೩೪ ನೇ ಸಾಲು: | ೩೪ ನೇ ಸಾಲು: | ||
ಪ್ರಯೋಗ :- ಒಂದು ಡ್ರಾಯಿಂಗ್ ಪಿನ್ ತೆಗೆದುಕೊಂಡು ಅದಕ್ಕೆ ಅರ್ಧಮುರಿದ ಬೆಂಕಿಕಡ್ಡಿ ಸಿಕ್ಕಿಸಿ ಮಣಿಕಟ್ಟು ನಾಡಿಮೇಲೆ ಇಟ್ಟರೆ ನಾಡಿಬಡಿತಕ್ಕೆ ಅದು ಸೂಕ್ಷ್ಮವಾಗಿ ಅಲಗಾಡುವುದು. ಅದರಿಂದ ನಾಡಿಬಡಿತವನ್ನು ಎಣಿಸಬಹುದು, ಎಂದು ತಿಳಿಸುತ್ತಿದ್ದಂತೆ ಗಂಟೆಬಾರಿಸಿತು. ಎಲ್ಲ ವಿದ್ಯಾರ್ಥಿನಿಯರು ಸಂತೊಷದಿಂದ ಧನ್ಯವಾದಗಳು ಸರ್ ಎಂದು ಒಕ್ಕೊರಿಲಿನಿಂದ ಕೂಗಿದರು.
| ಪ್ರಯೋಗ :- ಒಂದು ಡ್ರಾಯಿಂಗ್ ಪಿನ್ ತೆಗೆದುಕೊಂಡು ಅದಕ್ಕೆ ಅರ್ಧಮುರಿದ ಬೆಂಕಿಕಡ್ಡಿ ಸಿಕ್ಕಿಸಿ ಮಣಿಕಟ್ಟು ನಾಡಿಮೇಲೆ ಇಟ್ಟರೆ ನಾಡಿಬಡಿತಕ್ಕೆ ಅದು ಸೂಕ್ಷ್ಮವಾಗಿ ಅಲಗಾಡುವುದು. ಅದರಿಂದ ನಾಡಿಬಡಿತವನ್ನು ಎಣಿಸಬಹುದು, ಎಂದು ತಿಳಿಸುತ್ತಿದ್ದಂತೆ ಗಂಟೆಬಾರಿಸಿತು. ಎಲ್ಲ ವಿದ್ಯಾರ್ಥಿನಿಯರು ಸಂತೊಷದಿಂದ ಧನ್ಯವಾದಗಳು ಸರ್ ಎಂದು ಒಕ್ಕೊರಿಲಿನಿಂದ ಕೂಗಿದರು.

− | [[File:11.jpg| | + | [[File:11.jpg|300px]][[File:12.jpg|300px]][[File:13.jpg|300px]][[File:14.jpg|300px]][[File:15.jpg|300px]]

೪೦ ನೇ ಸಾಲು: | ೪೨ ನೇ ಸಾಲು: | ||
#9ನೇ ವರ್ಗದ ಪಠ್ಯಪುಸ್ತಕ. | #9ನೇ ವರ್ಗದ ಪಠ್ಯಪುಸ್ತಕ. | ||
#ಮನುಷ್ಯದೇಹ ಮತ್ತು ಆರೋಗ್ಯ
| #ಮನುಷ್ಯದೇಹ ಮತ್ತು ಆರೋಗ್ಯ

− | (ಡಾ|| ಹೆಚ್. ಗಿರಿಜಮ್ಮ,ಡಾ|| ಪೂರ್ಣಿಮಾ ಭಟ್)
| + | (ಡಾ|| ಹೆಚ್. ಗಿರಿಜಮ್ಮ,ಡಾ|| ಪೂರ್ಣಿಮಾ ಭಟ್)

೦೯:೫೭, ೪ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ
ರಕ್ತದ ಒತ್ತಡ
9ನೇ ಅ ವರ್ಗದ ವಿದ್ಯಾರ್ಥಿನಿಯರಿಗೆ ವಿಜ್ಞಾನ ಭಾಗ 2 (ಜೀವಶಾಸ್ರ) ದಲ್ಲಿ ‘ಜೀವನ ಕ್ರಿಯೆಗಳು’ ಅಧ್ಯಾಯವನ್ನು (2009ರಲ್ಲಿ) ಬೋಧಿಸುತ್ತಿದ್ದೆ. ಸಾಗಾಣಿಕೆ ವ್ಯೂಹದ ಪ್ರಾಮುಖ್ಯತೆ, ಸಸ್ಯಗಳಲ್ಲಿ ಸಾಗಾಣಿಕೆ ವ್ಯೂಹ, ಮಾನವನಲ್ಲಿ ಸಾಗಾಣಿಕೆ ವ್ಯೂಹ, ರಕ್ತನಾಳ ಹೃದಯ ಮತ್ತು ಹೃದಯ ಹೇಗೆ ಕೆಲಸಮಾಡುತ್ತದೆ ಎಂದು ವಿವರಿಸುತ್ತಿದ್ದೆ.
ಆರೋಗ್ಯವಂತನಾದ ಮನುಷ್ಯನಲ್ಲಿ ಒಂದು ನಿಮಿಷಕ್ಕೆ 72 ಸಲ ಹೃದಯ ಬಡಿತವಾಗುತ್ತದೆ. ಎಡಹೃತ್ಕಕ್ಷಿ ಸಂಕುಚಿಸಿದಾಗ ರಕ್ತವು ಮಹಾಅಪಧಮನಿಗೆ ಒತ್ತಿ ತಳ್ಳಲ್ಪಡುತ್ತದೆ. ಇದು ಮಹಾಅಪಧಮನಿ ಮತ್ತು ಅದರ ಕವಲುಗಳಾದ ಅಪಧಮನಿಗಳ ಗೋಡೆಗಳಮೇಲೆ ಒತ್ತಡವನ್ನು ಏರ್ಪಡಿಸುತ್ತದೆ. ಇದನ್ನು ರಕ್ತದ ಒತ್ತಡ ಎನ್ನುವರು.
ಸುಷ್ಮಾ : ‘ಸ್ಪಿಗ್ಮೋಮೊನೋಮೀಟರ್’ ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಅಲ್ವಾ ಸರ್.
ನಾನು :- ಹೌದು ಸರಿಯಾಗಿ ಹೇಳಿದೆ.
ರಾಣಿ :- ರಕ್ತದೊತ್ತಡ ಎಂದರೇನು? ಸ್ವಲ್ಪ ವಿವರಿಸಿ ಹೇಳಿ ಸರ್.
ನಾನು :- ಈಗಾಗಲೇ ಹೃದಯ, ಅದರ ಕಾರ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದಿರಿ. ಮೂಲತಃ ಹೃದಯ ಒಂದು ಮೃದುವಾದ ಸ್ನಾಯುಗಳಿಂದ ಕೂಡಿದೆ. ಹೃದಯಭಿತ್ತಿಯಾದ ಹೃದಯ ಸ್ನಾಯು ದ್ರವ್ಯ (Peಡಿiಛಿಚಿಡಿಜiಚಿಟ ಜಿಟuiಜ) ಕೆಲಸ ನಡೆಸುತ್ತದೆ. ಹೃದಯದ ಸ್ನಾಯು ಬಿಗಿಯಾದಾಗ ಅಥವಾ ಸಂಕುಚಿತಗೊಂಡಾಗ ಹೃದಯದಿಂದ ರಕ್ತವು ಹೊರತಳ್ಳಲ್ಪಡುತ್ತದೆ ಹಾಗೂ ದೇಹದತುಂಬಾ ಹರಿಯುತ್ತದೆ. ಪುನಃ ಹೃದಯಕ್ಕೆ ಶುದ್ಧ ರಕ್ತ ತುಂಬಿಕೊಳ್ಳುತ್ತದೆ.
ಹೀಗೆ, ಶರೀರದಲ್ಲಿ ರಕ್ತ ಹರಿಯುವಾಗ ರಕ್ತ ಸಂಚಾರದೊಂದಿಗೆ, ಹಿಗ್ಗುವ ಮತ್ತು ಕುಗ್ಗುವ ಅಪಧಮನಿಯ ಭಿತ್ತಿಯ ಒಳಭಾಗದ ಮೇಲೆ ಒತ್ತಡ ಹೇರುತ್ತದೆ. ಆಗ ಹೃದಯ ಸಂಕುಚಿತಗೊಂಡಾಗಲೆಲ್ಲಾ, ಒತ್ತಡ ಅಧಿಕವಾಗುತ್ತದೆ, ಮತ್ತು ವಿಕಸಿತಗೊಂಡಾಗ ಒತ್ತಡವು ಇಳಿಯುತ್ತದೆ. ಒಂದು ದಿನದಲ್ಲಿ ರಕ್ತದ ಒತ್ತಡ ಆಗಿಂದಾಗ್ಗೆ ಬದಲಾಗುತ್ತಿರುತ್ತದೆ. ಕೆಲವು ಶಾರೀರಿಕ ಚಟುವಟಿಕೆಗಳಿಂದಾಗಿ, ಭಾರಿ ಭೋಜನದ ಬಳಿಕ, ಚಳಿಯ ವಾತಾವರಣದಲ್ಲಿ, ರಕ್ತದ ಒತ್ತಡವೂ ಏರುತ್ತದೆ. ಉಳಿದ ಸಮಯದಲ್ಲಿ, ನೀವು ಹಾಸಿಗೆಯ ಮೇಲೆ ಮಲಗಿರುವಾಗ ಮತ್ತು ವಿಶ್ರಾಂತಿ ಪಡೆಯುತ್ತಿರುವಾಗ ಈ ಒತ್ತಡ ಕಡಿಮೆಯಾಗುತ್ತದೆ.
ಮಂಜುಳಾ :- ಹಾಗಾದರೆ ದೇಹ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸುತ್ತದೆ?
ನಾನು :- ರಕ್ತದೊತ್ತಡವನ್ನು ಹತೋಟಿಯಲ್ಲಿಡುವ ಹಾಗೂ ನಿಯಂತ್ರಿಸುವ ಒಂದು ಸಂಕೀರ್ಣವ್ಯವಸ್ಥೆಯಿದೆ. ಈ ವ್ಯವಸ್ಥೆಯಿಲ್ಲದಿದ್ದರೆ, ರಕ್ತವೆಲ್ಲಾ ಕಾಲುಗಳಿಗೆ ಇಳಿಯುತ್ತಿತ್ತು, ಆಗ ವ್ಯಕ್ತಿ ನಿಂತುಕೊಂಡಾಗಲೆಲ್ಲಾ ರಕ್ತದ ಒತ್ತಡ ಕೆಳಗಿಳಿದು, ಮೂರ್ಛೆಬೀಳಬೇಕಾಗುತ್ತಿತ್ತು. ಮೂತ್ರ ಜನಕಾಂಗ, ಮೆದುಳು ಮತ್ತು ನರವ್ಯೂಹ ಈ ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೇಹಕ್ಕೆ ರಕ್ತದ ಅವಶ್ಯಕತೆಯನ್ನು ಹೊಂದಿಕೊಂಡು ಇವು ವಿವಿಧ ರೀತಿಯಲ್ಲಿ ಒತ್ತಡವನ್ನು ಹೆಚ್ಚುಕಡಿಮೆ ಮಾಡುತ್ತದೆ. ಈ ನಿಯಂತ್ರಣದ ಪದ್ಧತಿ ರಕ್ತದ ಒತ್ತಡವನ್ನು ಮೊದಲೇ ಗೊತ್ತು ಪಡಿಸಿದ ಒಂದು ನಿರ್ದಿಷ್ಟಮಟ್ಟದಲ್ಲಿಡಲು ಸಹಕರಿಸುತ್ತದೆ. ಒತ್ತಡ ಅತಿ ಹೆಚ್ಚು ಅಥವಾ ಅತಿ ಕಡಿಮೆ ಇದ್ದಾಗ, ಈ ಪದ್ಧತಿ ನೀತಿಯನ್ನು ಅರಿತುಕೊಂಡು ಅವಶ್ಯಕ ಹೊಂದಾಣಿಕೆಗಳನ್ನು ಮಾಡುವತ್ತ ಕಾರ್ಯಗತವಾಗುತ್ತದೆ.
ಸ್ಮಿತ :- ಸರ್, ಲೊ ಬಿ.ಪಿ. ಮತ್ತು ಹೈ ಬಿ.ಪಿ. ಅಂತಾರಲ್ಲಾ ಹಾಗಂದ್ರೆ ಏನು?
ಅನಿತಾ :- ಬೇಗ ಹೇಳಿಸರ್, ಇಲ್ಲಾಂದ್ರೆ ಸ್ಮಿತಳ ಬಿ.ಪಿ. ಹೆಚ್ಚಾಗುತ್ತದೆ. ಆಗ ಕ್ಲಾಸರೂಮನಲ್ಲಿ ನಗೆ ತೇಲಾಡಿತು.
ನಾನು :- ಹಾಗೇನೂ ಹೆಚ್ಚಾಗೋಲ್ಲ ಹೇಳ್ತಿನಿ ಕೇಳಿ, ರಕ್ತದೊತ್ತಡದಲ್ಲಿ ಎರಡು ವಿಧಗಳಿವೆ.
1. ಸಂಕೋಚನ ರಕ್ತದ ಒತ್ತಡ (Sಥಿsಣoಟiಛಿ ಃಟooಜ Pಡಿessuಡಿe)
2. ವ್ಯಾಕೋಚನ ರಕ್ತದ ಒತ್ತಡ (ಆiಚಿsಣoಟiಛಿ ಃಟooಜ Pಡಿessuಡಿe)
ಗೀತಾ :- ಲೊ ಬಿ.ಪಿ. ಮತ್ತು ಹೈ ಬಿ.ಪಿ. ಆಗಲಿಕ್ಕೆ ಕಾರಣವೇನು ಸರ್.
ನಾನು :- ಹೆಚ್ಚು ಅಥವಾ ತೀವ್ರವಾದ ರಕ್ತದೊತ್ತಡಕ್ಕೆ (ಊಥಿಠಿeಡಿ ಣeಟಿಣioಟಿ) ಕಾರಣಗಳು ಅನೇಕವಿದ್ದರೂ ಮೊದಲು ರಕ್ತದೊತ್ತಡ ಏರುವ ಕ್ರಿಯೆಯ ಬಗ್ಗೆ ತಿಳಿದು ಕೊಳ್ಳುವುದು ಸೂಕ್ತ.
ಹೃದಯವು ಸಂಕುಚಿತಗೊಂಡಾಗ ಮತ್ತು ಹೊಸ ಶುದ್ಧ ರಕ್ತವು ಅಪಧಮನಿಗಳಿಗೆ, ‘ಪಂಪ್’ ಮಾಡಲ್ಪಟ್ಟಾಗ ಒತ್ತಡ ಅತ್ಯಧಿಕವಾಗಿಸುತ್ತದೆ. ಈ ಒತ್ತಡವನ್ನು ಸಂಕೋಚನ ರಕ್ತದ ಒತ್ತಡ (Sಥಿsಣoಟiಛಿ ಃಟooಜ Pಡಿessuಡಿe) ಎಂದು ಕರೆಯುತ್ತಾರೆ. ಹಾಗೆಯೆ ಸಂಕುಚನದ ಬಳಿಕ ಹೃದಯದ ಸ್ನಾಯುಗಳು ವ್ಯಾಕೋಚನಗೊಂಡು ಹೃದಯ ವಿಕಾಸಗೊಳ್ಳುತ್ತದೆ, ಮತ್ತು ಹೊಸ ರಕ್ತ ತುಂಬಿಕೊಳ್ಳುತ್ತದೆ. ಈಗ ಒತ್ತಡ ಅತಿ ಕಡಿಮೆಯಿರುತ್ತದೆ. ಇದನ್ನು ವ್ಯಾಕೋಚನ ರಕ್ತದೊತ್ತಡ (ಆiಚಿsಣoಟiಛಿ ಃಟooಜ Pಡಿessuಡಿe) ಎಂದು ಕರೆಯುತ್ತಾರೆ.
ವಾಣಿ :- ಸರ್ ಆರೋಗ್ಯವಂತರಲ್ಲಿ ರಕ್ತದೊತ್ತಡ 120/80 ಮಿ.ಮಿ.ಎಚ್.ಜಿ.ಎಂದು ಓದಿದ್ದೇನೆ ಹೌದಾ.
ನಾನು :- ಹೌದು, ಸಾಮಾನ್ಯವಾಗಿ ಆರೋಗ್ಯವಂತರಲ್ಲಿ 110,120 ಮಿ.ಮಿ.ಎಚ್.ಜಿ. ರಷ್ಟು ಸಂಕೋಚನ ರಕ್ತದೊತ್ತಡವಿದ್ದರೆ 70,80,90 ಮಿ.ಮಿ.ಎಚ್.ಜಿ. ವರೆಗೆ ವ್ಯಾಕೋಚನ ರಕ್ತದೊತ್ತಡವಿರುತ್ತದೆ. 140/100 ಮಿ.ಮಿ.ಎಚ್.ಜಿ. ಇದ್ದರೆ ಹೆಚ್ಚು ರಕ್ತದೊತ್ತಡವಿದೆ ಎಂದು ತಿಳಿಯಬೇಕು.
ವೀಣಾ :- ರಕ್ತದೊತ್ತಡ ಹೆಚ್ಚು ಕಡಿಮೆ ಆಗಲು ಕಾರಣವೇನು? ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೆ ಸರ್.
ನಾನು :- ರಕ್ತದೊತ್ತಡ ಏರಲು ಇದೇ ಕಾರಣ ಎಂದು ಒಂದು ಕಾರಣವನ್ನು ನಿಖರವಾಗಿ ಹೇಳಲಾಗುವುದಿಲ್ಲ. ಕೆಲವೊಮ್ಮೆ ಇದು ಕೇವಲ ಕುಟುಂಬದಲ್ಲಿ ಬಹಳ ಮಂದಿಗೆ ಇರುವ ವ್ಯಾಧಿಯಾಗಿರುತ್ತದೆ. ವಂಶದಿಂದ ಹರಿದುಬಂದಿರಲೂಬಹುದು. ಕೆಲವೊಮ್ಮೆ ಮೂತ್ರಜನಕಾಂಗದ ರೋಗ, ಅಧಿಕ ಬೊಜ್ಜು, ಅಧಿಕ ಉಪ್ಪುಸೇವನೆ, ಧೂಮಪಾನ, ಮಧ್ಯಪಾನ, ಮಾನಸಿಕ ಒತ್ತಡ ಇತ್ಯಾದಿಗಳಿಂದಲೂ ಏರಿದ ರಕ್ತದೊತ್ತಡವು ಯಾವುದೆ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳಬಹುದು.
ಲಕ್ಷ್ಮಿ :- ಏ - - - - ವಿದ್ಯಾ ನೋಡು ನೀನು ತುಂಬಾ ದಪ್ಪಗಿದ್ದೀಯಾ ನಿನ್ನ ಬೊಜ್ಜು ಕಡಿಮೆ ಮಾಡಿಕೋ, ಇಲ್ಲಾ ಅಂದರೆ ರಕ್ತದೊತ್ತಡ ಹೆಚ್ಚಾಗುತ್ತದೆ.
ವಿದ್ಯಾ :- ನಾನು ಆರೋಗ್ಯವಾಗಿದ್ದೇನೆ. ಚೆನ್ನಾಗಿ ಆಟವಾಡುತ್ತೇನೆ, ಸರಿಯಾಗಿ ಊಟ ಮಾಡುತ್ತೇನೆ, ನನಗೆ ರಕ್ತದೊತ್ತಡ ಹೇಚ್ಚಾಗುವುದಿಲ್ಲ ಅಲ್ವಾ ಸರ್.
ನಾನು :- ಮಕ್ಕಳು ಆಟವಾಡುವುದು, ಅಭ್ಯಾಸ ಮಾಡುವುದು, ಉತ್ತಮ ಆಹಾರ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಆದರೂ ಬೊಜ್ಜು ಬರದಂತೆ ನೋಡಿಕೊಳ್ಳುವುದು ಸೂಕ್ತ.
ಶ್ವೇತಾ :- ಸ್ಟೆತೋಸ್ಕೋಪನ್ನು ಕಂಡುಹಿಡಿದ ವಿಜ್ಞಾನಿ ‘ ರೇನೆ ಲೆನೆಕ್’ ಅಲ್ವಾ ಸರ್.
ನಾನು :- ಸರಿಯಾಗಿ ಹೇಳಿದೆ, ಪ್ರಾನ್ಸ ದೇಶದ ವಿಜ್ಞಾನಿಯಾದ ರೇನೆ ಲೆನೆಕ್ 1819ರಲ್ಲಿ ಸ್ಟೆತೋಸ್ಕೋಪನ್ನು ಕಂಡುಹಿಡಿದನು.
ಪೂರ್ಣಿಮಾ :- ಡಾಕ್ಟರ್ ನಾಡಿಹಿಡಿದು ನೋಡ್ತಾರಲ್ವಾ, ನಾಡಿಬಡಿತ ಹೇಗೆ ಗುರುತಿಸುತ್ತಾರೆ.
ನಾನು :- ಎಡಬಾಗದ ಹೃದಯ ಪ್ರತಿಸಲ ಸಂಕುಚಿತಗೊಂಡು ಅರ್ಧ ಲೋಟದಷ್ಟು ಶುದ್ಧ ರಕ್ತವನ್ನು ಮಹಾಧಮನಿಗೆ ತಳ್ಳಿದಾಗ ಆ ಅಲೆಯು ದೇಹದ ಮೂಲೆ ಮೂಲೆಯ ಧಮನಿಯ ಶಾಖೋಪ ಶಾಖೆಯನ್ನು ಮುಟ್ಟುತ್ತದೆ. ಮಣಿಕಟ್ಟು, ಕುತ್ತಿಗೆ, ತೊಡೆಯಸಂದಿ, ಪಾದ ಇತ್ಯಾದಿ ಭಾಗಗಳಲ್ಲಿರುವ ರಕ್ತನಾಳಗಳ ಮೇಲೆ ನಮ್ಮ ಬೆರಳನ್ನಿಟ್ಟು ಮೆಲ್ಲಗೆ ಅದುಮಿ ಹಿಡಿದಾಗ ಆ ಅಲೆಯ ಬಡಿತ ಗೊತ್ತಾಗುತ್ತದೆ. ಇದೇ ನಾಡಿಬಡಿತ (Puಟse).
ಪ್ರತಿ ನಿಮಿಷಕ್ಕೆ 70-75 ಬಾರಿ ಈ ಬಡಿತವನ್ನು ಏಣಿಸಬಹುದು.
ದೇಹದ ಆರೋಗ್ಯ ಸ್ಥಿತಿಯನ್ನು, ಅನಾರೋಗ್ಯದ ಪ್ರಮಾಣವನ್ನು ನಿರ್ಧರಿಸುವಲ್ಲಿ ಈ ನಾಡಿಬಡಿತದ ಪಾತ್ರ ಬಹುಮುಖ್ಯವಾಗಿರುತ್ತದೆ.
ನಾಡಿಬಡಿತ ನೋಡಲು ಒಂದು ಚಿಕ್ಕ ಪ್ರಯೋಗ ಹೇಳ್ತಿನಿ ಎಲ್ಲರೂ ಸರಿಯಾಗಿ ತಿಳಿದುಕೊಂಡು ಮಾಡಿನೋಡಿ.
ಪ್ರಯೋಗ :- ಒಂದು ಡ್ರಾಯಿಂಗ್ ಪಿನ್ ತೆಗೆದುಕೊಂಡು ಅದಕ್ಕೆ ಅರ್ಧಮುರಿದ ಬೆಂಕಿಕಡ್ಡಿ ಸಿಕ್ಕಿಸಿ ಮಣಿಕಟ್ಟು ನಾಡಿಮೇಲೆ ಇಟ್ಟರೆ ನಾಡಿಬಡಿತಕ್ಕೆ ಅದು ಸೂಕ್ಷ್ಮವಾಗಿ ಅಲಗಾಡುವುದು. ಅದರಿಂದ ನಾಡಿಬಡಿತವನ್ನು ಎಣಿಸಬಹುದು, ಎಂದು ತಿಳಿಸುತ್ತಿದ್ದಂತೆ ಗಂಟೆಬಾರಿಸಿತು. ಎಲ್ಲ ವಿದ್ಯಾರ್ಥಿನಿಯರು ಸಂತೊಷದಿಂದ ಧನ್ಯವಾದಗಳು ಸರ್ ಎಂದು ಒಕ್ಕೊರಿಲಿನಿಂದ ಕೂಗಿದರು.
ಸಹಾಯಕ ಆಕರಗಳು :
- 9ನೇ ವರ್ಗದ ಪಠ್ಯಪುಸ್ತಕ.
- ಮನುಷ್ಯದೇಹ ಮತ್ತು ಆರೋಗ್ಯ
(ಡಾ|| ಹೆಚ್. ಗಿರಿಜಮ್ಮ,ಡಾ|| ಪೂರ್ಣಿಮಾ ಭಟ್)
ಲೇಖಕರು:
ಶ್ರೀ ಸಂಗಮೇಶ ವ್ಹಿ. ಬುರ್ಲಿ
(ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು)
ಬಂಜಾರಾ ಪ್ರೌಢಶಾಲೆ, ಬಂಜಾರಾ ನಗರ,
ಸೋಲಾಪೂರ ರಸ್ತೆ ವಿಜಯಪೂರ – 586103
ಮೋ:9060060300 - 9008930072
Email : svb1966bjp@gmail.com