"ವಚನಾಮೃತ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೪ ನೇ ಸಾಲು: | ೩೪ ನೇ ಸಾಲು: | ||
===ಅಮುಗೆ ರಾಯಮ್ಮ=== | ===ಅಮುಗೆ ರಾಯಮ್ಮ=== | ||
− | https://kn.wikipedia.org/wiki/ಅಮುಗೆ_ರಾಯಮ್ಮ | + | *'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ [https://kn.wikipedia.org/wiki/ಅಮುಗೆ_ರಾಯಮ್ಮ ಇಲ್ಲಿ ಕ್ಲಿಕ್ಕಿಸಿರಿ] |
===ಆಯ್ದಕ್ಕಿಮಾರಯ್ಯ=== | ===ಆಯ್ದಕ್ಕಿಮಾರಯ್ಯ=== |
೧೬:೩೬, ೬ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ಕಲಿಕೋದ್ದೇಶಗಳು
ಕವಿ/ಕವಯಿತ್ರಿ ಪರಿಚಯ
ಅಕ್ಕ ಮಹಾದೇವಿ
ಭಾರತದ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿದರೆ ಭಾರತ ಮಾತೆಯು ಹೆಣ್ಣಾದರೂ ಹೆಚ್ಚಾಗಿ ಕಂಡು ಬರುವವರು ಪುರುಷ ದಾರ್ಶನಿಕರು. ಉತ್ತರದಲ್ಲಿ ಮೀರಾ ಬಾಯಿ, ಶಾರದಾ ದೇವಿ ಮತ್ತು ಸಿಸ್ಟರ್ ನಿವೇದಿತಾ ಕಂಡು ಬರುತ್ತಾರೆ. ನಮ್ಮ ಕನ್ನಡ ನಾಡಿನಲ್ಲಿ ಅದಕ್ಕೇನು ಬರವಿಲ್ಲ. ಭಕ್ತಿ ವೈರಾಗ್ಯ ಮತ್ತು ದೇವರ ಸ್ಮರಣೆ ಕೇವಲ ಗಂಡಿನಿಂದ ಮಾತ್ರ ಸಾಧ್ಯ ಅಲ್ಲ ಹೆಣ್ಣಿನಿಂದಲೂ ಸಹ ಸಾಧ್ಯ ಎಂದು ೧೨ನೆ ಶತಮಾನದಲ್ಲಿ ತೋರಿದ ಕನ್ನಡದ ಮಹಿಳೆ ಅಕ್ಕ ಮಹಾದೇವಿ. ಆಕೆ ಶಿವಭಕ್ತೆಯಾಗಿ, ಕವಯತ್ರಿಯಾಗಿ ನಾಡವರ ನೆನಪಿನಲ್ಲಿ ಚಿರವಾಗಿದ್ದಾಳೆ. ಆಕೆಯ ನಡೆ ನುಡಿ ಎಲ್ಲರ ಗೌರವಕ್ಕೂ ಪಾತ್ರವಾಗಿದೆ.
ಇಂದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿ ಎಂಬ ಶಿವಭಕ್ತರ ಮಗಳಾಗಿ ಜನಿಸಿದರು ಮಹಾದೇವಿ. ವ್ಯಾಪಾರಿಯಾದ ನಿರ್ಮಲ ಹೆಸರಿಗೆ ತಕ್ಕಂತೆ ವ್ಯಾಪಾರದಲ್ಲಿ ನಿರ್ಮಲನಾಗಿದ್ದ. ಸುಮತಿಯು ಸಹ ಅಪ್ರತಿಮ ಬುದ್ಧಿವಂತೆಯಾಗಿದ್ದಳು. ಬಸವಣ್ಣನನವರ ನುಡಿಮುತ್ತಾದ ‘ ಕಾಯಕವೇ ಕೈಲಾಸ ‘ ಎಂದು ತಮ್ಮ ಕಾರ್ಯದಲ್ಲಿ ಶಿವನನ್ನು ಕಾಣುತ್ತಾ ಇದ್ದರು.
ನಿರ್ಮಲ ಮತ್ತು ಸುಮತಿಯರಿಗೆ ಮಕ್ಕಳ ಕೊರತೆ ಇತ್ತು. ಊರಲ್ಲಿದ್ದ ಮಲ್ಲಿಕಾರ್ಜುನ ದೇವಾಲಯದಲ್ಲಿ ಹೆಣ್ಣು ಮಗುವಿಗಾಗಿ ಪ್ರತಿದಿನವೂ ಪ್ರಾರ್ಥಿಸುತ್ತಿದ್ದರು.ಒಮ್ಮೆ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಪಾರ್ವತಿಯ ಮುಡಿಯಿಂದ ಪುಷ್ಪದ ಪ್ರಸಾದವಾಯಿತು. ಅದನ್ನೇತ್ತಿ ಕೊಂಡ ದಂಪತಿಗಳಿಗೆ ಸ್ವಲ್ಪ ಸಮಯದಲ್ಲಿ ಹೆಣ್ಣು ಮಗುವಾಯಿತು. ಅದಕ್ಕೆ ಮಹಾ ದೇವಿ ಎಂದು ಹೆಸರು ಇಟ್ಟರು. ಮುದ್ದಾದ ಮಗು ಶಿವನ ಹೆಸರು ಕೇಳಿದರೆ ಸಾಕು ಕಣ್ಣನ್ನು ಅರಳಿಸುತ್ತಿತ್ತು. ಅಕ್ಕ ಮಹಾದೇವಿ
ಚಿಕ್ಕಂದಿನಿಂದಲೂ ಶಿವನ ಮೇಲೆ ಅಪಾರ ಭಕ್ತಿ. ಕಾಲಕ್ರಮೇಣ ಬಂಗಾರದ ಹೂವಿಗೆ ಪರಿಮಳ ಕೂಡಿದಂತೆ ಮಹಾದೇವಿಯ ಚೆಲುವೆಗೆ ಯೌವನ ಸೇರಿ ಗುಣ ರೂಪಗಳಲ್ಲಿ ಸರಿಸಮನಾರು ಇಲ್ಲದಂತೆ ಉಡುತಡಿಯಲ್ಲಿ ಬೆಳೆದಳು. ಆ ಗ್ರಾಮದ ದೊರೆ ಕೌಶಿಕ ಒಮ್ಮೆ ಲಾವಣ್ಯವತಿಯಾದ ಮಹಾದೇವಿಯನ್ನು ನೋಡಿ ಮದುವೆಯಾಗ ಬೇಕೆಂದು ಬಯಸಿದ . ಮದುವೆಯ ಪ್ರಸ್ತಾಪವನ್ನು ಮಹಾದೇವಿಯ ಪೋಷಕರ ಮುಂದೆ ಇಟ್ಟರು. ಚಿಕ್ಕಂದಿನಿಂದ ಮಹಾದೇವಿ ‘ ಮಲ್ಲಿಕಾರ್ಜುನನೇ ನನ್ನ ಗಂಡ ‘ ಎಂದು ಹೇಳಿಕೊಂಡು ಬಂದಿದ್ದಳು ಹಾಗು ಕೌಶಿಕನು ಶಿವ ಭಕ್ತನಾಗಿರಲಿಲ್ಲ. ರಾಜನು ಕೋಪಿಯು ಮತ್ತು ನಿಷ್ಟುರನು ಆಗಿದ್ದರಿಂದ ಮಹಾದೇವಿಯ ಮನ ಒಲಿಸಲು ಯತ್ನಿಸಿದರು. ಕಡೆಗೆ ಹೆತ್ತವರಿಗೆ ದುಃಖವಾಗಬಾರದೆಂದು ಮಹಾದೇವಿ ಮೂರು ಷರತ್ತುಗಳನ್ನು ಮುಂದಿಟ್ಟು ಮದುವೆ ಯಾದಳು. ಮೂರು ತಪ್ಪುಗಳಾದರೆ ಮದುವೆಯ ಬಂಧನದಿಂದ ಮುಕ್ತಳಾಗುತ್ತೇನೆ ಎಂಬ ಶರತ್ತಿನ ಮೇಲೆ ಆಕೆಯ ಮುದುವೆ ಯಾಯಿತು. ಅರಮನೆಯನ್ನು ಸೇರಿದ ಮಹಾದೇವಿ ಶಿವಪೂಜೆಯಲ್ಲಿ ಮಗ್ನಳಾದಳು. ಕೌಶಿಕನು ಮಹಾದೇವಿಯ ಶಿವಪೂಜೆಯನ್ನು ತಡೆದ , ಶಿವಭಕ್ತರು ಮಹಾದೇವಿಯನ್ನು ನೋಡಲು ತಡೆದ, ಮತ್ತೊಮ್ಮೆ ಆಕೆಯ ಪೂಜೆಗೆ ಭಂಗ ಮಾಡಿದ. ಹೀಗೆ ಮೂರು ತಪ್ಪು ಗಳಾದ ಮೇಲೆ ಮಹಾದೇವಿ ಆಕೆಯ ಮೈಮೇಲಿದ್ದ ವೈಭವದ ಒಡವೆ, ವಸ್ತ್ರಗಳನ್ನು ಕಳಚಿ ಹೇಗಿದ್ದಳೋ ಹಾಗೆಯೇ ಅರಮನೆಯನ್ನು ತೊರೆದು ತನ್ನ ಆರಾಧ್ಯ ದೈವನಲ್ಲಿಗೆ ಹೆಜ್ಜೆ ಹಾಕಿದಳು.
ಅರಮನೆಯಿಂದ ಹೊರಟ ಮಹಾದೇವಿಯು ತನ್ನ ಆರಾಧ್ಯ ದೈವ ಚೆನ್ನ ಮಲ್ಲಿಕಾರ್ಜುನನನ್ನು ಕಾಣಲು ಶ್ರೀ ಶೈಲಕ್ಕೆ ಹೊರಟರು, ಮಾರ್ಗ ಮಧ್ಯದಲ್ಲಿ ಚಾಲುಕ್ಯರ ಕಲ್ಯಾಣ ನಗರವನ್ನು ಸೇರಿ ಬಸವಣ್ಣನವರ ಅನುಭವ ಮಂಟಪವನ್ನು ಸಂದರ್ಶಿಸುತ್ತಾರೆ.
ಅನುಭವ ಮಂಟಪದಲ್ಲಿ ಆಕೆಗೆ ಮತ್ತು ಅಲ್ಲಮ ಪ್ರಭುಗಳಿಗೆ ಆದ ಸಂವಾದ ಆಕೆಯನ್ನು ಅಕ್ಕ ಅನ್ನುವ ನಾಮಾಂಕಿತವನ್ನು ತಂದುಕೊಟ್ಟಿತು.
ಅಲ್ಲಮ: ನೀನು ಇಲ್ಲಿಗೇಕೆ ಬಂದೆ. ನಿನ್ನ ಗಂಡನ ಗುರುತು ಹೇಳಿ ಮಂಟಪದ ಒಳಕ್ಕೆ ಬಂದು ಕೂರು
ಅಕ್ಕ: ಚೆನ್ನಮಲ್ಲಿಕಾರ್ಜುನನೆ ನನ್ನ ಗಂಡ. ಮಿಕ್ಕ ಲೋಕದ ಗಂಡಸರೊಡನೆ ನನಗೆ ಸಂಬಂಧವಿಲ್ಲ
ಅಲ್ಲಮ: ನೀನು ವಿರಕ್ತರಾಗಿದ್ದರು ದೇಹದ ಮೇಲಿನ ಮೋಹ ಮರೆತಂತಿಲ್ಲ
ಅಕ್ಕ: ಕಾಯ ಕರ್ರನೆ ಕಂಡಿದರೇನು? ಮಿರ್ರನೆ ಮಿಂಚಿದರೇನು? ಅಂತರಂಗ ಶುದ್ಧ ವಾದ ಬಳಿಕ, ಮಲ್ಲಿಕಾರ್ಜುನ ಒಲಿದ ಕಾಯ ಹೇಗಿದ್ದರೇನಯ್ಯ?
ಅಲ್ಲಮ: ನಿನ್ನ ಭಾವ ಶುದ್ಧ ವಾಗಿದ್ದರೆ ದೇಹವನ್ನು ಕೂದಲಲ್ಲಿ ಏಕೆ ಮುಚ್ಚಿಕೊಂಡಿರುವೆ
ಅಕ್ಕ: ಫಲ ಒಳಗೆ ಪಕ್ವ ವಾಗಿದೆಯಲ್ಲದೆ, ಹೊರಗಣ ಸಿಪ್ಪೆ ಒಪ್ಪಗೆಡದು. ದೇಹ ಕಂಡು ನಿಮಗೆ ನೋವಾದೀತೆಂದು ಮುಚ್ಚಿದೆ.
ಅಲ್ಲಮ ಪ್ರಭುಗಳು ಸೇರಿದಂತೆ ಸುತ್ತಲು ನೆರೆದಿದ್ದ ಅನುಭವ ಮಂಟಪದ ಶರಣ ಶರಣೆಯರು ಮಹಾದೇವಿಯ ಜ್ಞಾನಕ್ಕೆ ಮೆಚ್ಚುಗೆ ಮತ್ತು ತಮ್ಮ ಗೌರವ ಸೂಚಿಸುತ್ತಾರೆ. ಅಕ್ಕನ ದೃಷ್ಟಿ ವಿಸ್ತಾರವಾದವು. ತನ್ನ ಹೃದಯದಲ್ಲಿಯೇ ನೆಲೆಸಿದ ಮಲ್ಲಿಕಾರ್ಜುನನನ್ನು ಅರಿಯುವಂತಾಯಿತು. ಇನ್ನು ಹೆಚ್ಚು ಕಾಲ ಕಳೆಯದೆ ಶ್ರೀಶೈಲ ದತ್ತ ಪ್ರಯಾಣ ಬಳಸಿದಳು. ಆಕೆಯ ಅನನ್ಯ ಭಕ್ತಿ ಯಿಂದ ಸಂಪ್ರೀತನಾದ ಮಲ್ಲಿಕಾರ್ಜುನನ ಜೊತೆ ಆಕೆ ಒಂದಾದಳು.
- 'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
- 'ಕಣಜ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿರಿ
ಅಮುಗೆ ರಾಯಮ್ಮ
- 'ವಿಕಿಪೀಡಿಯ'ದಲ್ಲಿನ ಅಕ್ಕ ಮಹಾದೇವಿಯ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಆಯ್ದಕ್ಕಿಮಾರಯ್ಯ
ಶಿಕ್ಷಕರಿಗೆ ಟಿಪ್ಪಣಿ
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು