ಡಾ.ಕೃಷ್ಣಾನಂದ ಕಾಮತ್ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೨೯-೦೯-೧೯೩೪ರಲ್ಲಿ ಜನಿಸಿದರು. ೧೯೫೯ರಲ್ಲಿ ಎಂ.ಎಸ್ಸಿ.ಪದವಿಯಲ್ಲಿ ಉತ್ತೀರ್ಣರಾದ ಕಾಮತ್ ಅವರು ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಬಿಸಿದರು. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು.೧೯೬೧ರಲ್ಲಿ ಡಾಕ್ಟರೇಟ್ ಪದವಿ ಪಡೆದರು.ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ವೆಲ್ತ್ ಇನ್ಸ್ಟೂಟ್ ಆಫ್ ಬಯಾಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿಯಾಗಿ ಸೇವೆಸಲ್ಲಿಸಿರುವರು. ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಛಾಯಾಗ್ರಹಣಮಾಡಿದ್ದಾರೆ. ಡಾ.ಕೃಷ್ಣಾನಂದ ಕಾಮತರ ಕೃತಿಗಳೆಂದರೆ 'ನಾನು ಅಮೇರಿಕಾಗೆ ಹೋಗಿದ್ದೆ'ಪ್ರಾಣಿ ಪರಿಸರ,ಕೀಟ ಜಗತ್ತು,ಪಶು ಪಕ್ಷಿ ಪ್ರಪಂಚ,ಸಸ್ಯ ಪರಿಸರ,ಇರುವೆಯ ಇರವು,ಸರ್ಪ ಸಂಕುಲ,ಮತ್ತು ಕಾವಿ ಕಲೆ ಇತ್ಯಾದಿ.ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.೨೦.೦೨.೨೦೦೨ರಲ್ಲಿ ಇಹಲೋಕವನ್ನು ತ್ಯಜಿಸಿದರು | ಡಾ.ಕೃಷ್ಣಾನಂದ ಕಾಮತ್ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೨೯-೦೯-೧೯೩೪ರಲ್ಲಿ ಜನಿಸಿದರು. ೧೯೫೯ರಲ್ಲಿ ಎಂ.ಎಸ್ಸಿ.ಪದವಿಯಲ್ಲಿ ಉತ್ತೀರ್ಣರಾದ ಕಾಮತ್ ಅವರು ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಬಿಸಿದರು. ನ್ಯೂಯಾರ್ಕ ವಿಶ್ವವಿದ್ಯಾಲಯದಿಂದ ಕೀಟಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಕಾಮತರ ಆಸಕ್ತಿಯ ವ್ಯಾಪ್ತಿ ವಿಸ್ತಾರವಾದದ್ದು.೧೯೬೧ರಲ್ಲಿ ಡಾಕ್ಟರೇಟ್ ಪದವಿ ಪಡೆದರು.ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ವೆಲ್ತ್ ಇನ್ಸ್ಟೂಟ್ ಆಫ್ ಬಯಾಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿಯಾಗಿ ಸೇವೆಸಲ್ಲಿಸಿರುವರು. ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಛಾಯಾಗ್ರಹಣಮಾಡಿದ್ದಾರೆ. ಡಾ.ಕೃಷ್ಣಾನಂದ ಕಾಮತರ ಕೃತಿಗಳೆಂದರೆ 'ನಾನು ಅಮೇರಿಕಾಗೆ ಹೋಗಿದ್ದೆ'ಪ್ರಾಣಿ ಪರಿಸರ,ಕೀಟ ಜಗತ್ತು,ಪಶು ಪಕ್ಷಿ ಪ್ರಪಂಚ,ಸಸ್ಯ ಪರಿಸರ,ಇರುವೆಯ ಇರವು,ಸರ್ಪ ಸಂಕುಲ,ಮತ್ತು ಕಾವಿ ಕಲೆ ಇತ್ಯಾದಿ.ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.೨೦.೦೨.೨೦೦೨ರಲ್ಲಿ ಇಹಲೋಕವನ್ನು ತ್ಯಜಿಸಿದರು |