"ಶಿಕ್ಷಕರ ಸ್ವರಚಿತ ಕವನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:

#[http://karnatakaeducation.org.in/KOER/index.php/ರಾಜೀವ_ಪೂಜಾರಿ '''  ಉಡುಪಿ ಜಿಲ್ಲೆಯ ರಾಜೀವ ಪೂಜಾರಿರವರ ಕವನಗಳು]

#[http://karnatakaeducation.org.in/KOER/index.php/ರಾಜೀವ_ಪೂಜಾರಿ '''  ಉಡುಪಿ ಜಿಲ್ಲೆಯ ರಾಜೀವ ಪೂಜಾರಿರವರ ಕವನಗಳು]

#[http://geluvejeevana.blogspot.in/ ಐ.ಟಿ.ಫಾರ್ ಚೇಂಜ್ ತಂಡದ ವೆಂಕಟೇಶ್‌ರವರ ಕವನಗಳು]

#[http://geluvejeevana.blogspot.in/ ಐ.ಟಿ.ಫಾರ್ ಚೇಂಜ್ ತಂಡದ ವೆಂಕಟೇಶ್‌ರವರ ಕವನಗಳು]

'''ನುಡಿ-ಹೆಮ್ಮೆ'''

ಹೊನ್ನುಡಿಯು ನಮ್ಮದು

ಚೆನ್ನುಡಿಯು ನಮ್ಮದು

ಎಲ್ಲಿಹುದು  ಇದಕೆ ಸಾಟಿ

ದಶದಿಶೆಗಳಲ್ಲಿ ಹಬ್ಬುತಾ

ಕಸ್ತೂರಿ ಕಂಪು ಹರಡುತಾ

ಚೆಲ್ಲಿಹುದು ಭಾವದೀಟಿ  / ೧ /

ಇದರಿಂಪು ಮಧುರ

ಕೆನೆ ಹಾಲಿನಲ್ಲಿ ಬೆರೆತಂತೆ

ಸಹ್ಯಾದ್ರಿ ಕಾನಜೇನು

ಎಲ್ಲಿದ್ದರೇನು?ಹೇಗಿದ್ದರೇನು?

ತಾಯ್ನುಡಿಯ ಮರೆವೆವೇನು  ?/೨/

ಇರ್ -ಸಾಸಿರ ವರುಷ

ಹಲ್ -ಮಿಡಿಯ ಹರುಷ

ಸಕ್ಕದದ ಹೂರಣ

ಆಂಗ್ಲದ ಸಂಕರಣ

"ಬಾಡಿಲ್ಲ ನುಡಿಯ ತೋರಣ"

ಕನ್ನುಡಿಯ ಡಿಂಡಿಮಾನುರಣನ

ಕಟ್ಟಾಳು ಜಾಗರಣ ,ಗಡಿನಾಡಲೂ

ಹೊರನಾಡಲೂ ಡಂಡಣಣ ಡಣಣ /೩/

ಪಂಪನ ಪೆಂಪು, ಕುವೆಂಪು ಕಂಪು

ಜನಪದದ ಇಂಪು,"ನುಡಿ ಆಲ "ಸೊಂಪು ಸೊಂಪು

ಶರಣರ ವಚನ,ದಾಸರ ಕೀರ್ತನ

ಲಕುಮೀಶ ಕುವರವ್ಯಾಸ

ಪೊನ್ನ ರತ್ನಾಕರಣ್ಣ

ರಾಘವಾಂಕ ಜನ್ನ ರನ್ನ

ನೆಲವೆನಿತು ಪುಣ್ಯವಣ್ಣ /೪/

ಬೇಂದ್ರೆ ಕಾರಂತ ಮಾಸ್ತಿ

ಸಿರಿನುಡಿಯಸಮೃದ್ಧ ಆಸ್ತಿ

ಗೋಕಾಕ ಕಾರ್ನಾಡ ಕಂಬಾರ ಮೂರ್ತಿ

ನುಡಿದೀಪಕೆ ತೈಲವೆರೆದ ಧವಳಕೀರ್ತಿ

ಸಂದಿಹುದು ಶ್ರೇಷ್ಠತೆಗೆ ಏಳೆಂಟು ಜ್ಞಾನಪೀಠ

ಸಾರ್ಥಕವು ಸಾಹಿತ್ಯಕೃಷಿಯ ಸರಸದಾಟ/೫/

ಬಂದರೆ ಕುತ್ತು ಹೋಗುವೆವು ಸತ್ತು

ತಾಯ್ನಾಡೆ ಹೆಚ್ಚು ತಾಯ್ನುಡಿಯ ಕಿಚ್ಚು

ಧಗಧಗವು ಕನ್ನಡಿಗರೆದೆಯೆಕುಲುಮೆ

ಅನವರತ ಆಜ್ಯಧಾರೆ ಸುರಿಯುತ ಒಲುಮೆಒಲುಮೆ/೬/

'''ರಚನೆ'''..:

ಚಂದ್ರೇಗೌಡ ನಾರಮ್ನಳ್ಳಿ, ಎಂ.ಎ,ಕನ್ನಡಪಂಡಿತ್.ಬಿ.ಇಡಿ. ಶಿಕ್ಷಕರು,

ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ ಮೊ8722199344

೦೯:೦೨, ೫ ಜನವರಿ ೨೦೧೬ ನಂತೆ ಪರಿಷ್ಕರಣೆ

1. ಉಡುಪಿ ಜಿಲ್ಲೆಯ ರಾಜೀವ ಪೂಜಾರಿರವರ ಕವನಗಳು
2. ಐ.ಟಿ.ಫಾರ್ ಚೇಂಜ್ ತಂಡದ ವೆಂಕಟೇಶ್‌ರವರ ಕವನಗಳು

ನುಡಿ-ಹೆಮ್ಮೆ

ಹೊನ್ನುಡಿಯು ನಮ್ಮದು
ಚೆನ್ನುಡಿಯು ನಮ್ಮದು
ಎಲ್ಲಿಹುದು ಇದಕೆ ಸಾಟಿ
ದಶದಿಶೆಗಳಲ್ಲಿ ಹಬ್ಬುತಾ
ಕಸ್ತೂರಿ ಕಂಪು ಹರಡುತಾ
ಚೆಲ್ಲಿಹುದು ಭಾವದೀಟಿ / ೧ /

ಇದರಿಂಪು ಮಧುರ
ಕೆನೆ ಹಾಲಿನಲ್ಲಿ ಬೆರೆತಂತೆ
ಸಹ್ಯಾದ್ರಿ ಕಾನಜೇನು
ಎಲ್ಲಿದ್ದರೇನು?ಹೇಗಿದ್ದರೇನು?
ತಾಯ್ನುಡಿಯ ಮರೆವೆವೇನು ?/೨/

ಇರ್ -ಸಾಸಿರ ವರುಷ
ಹಲ್ -ಮಿಡಿಯ ಹರುಷ
ಸಕ್ಕದದ ಹೂರಣ
ಆಂಗ್ಲದ ಸಂಕರಣ
"ಬಾಡಿಲ್ಲ ನುಡಿಯ ತೋರಣ"
ಕನ್ನುಡಿಯ ಡಿಂಡಿಮಾನುರಣನ
ಕಟ್ಟಾಳು ಜಾಗರಣ ,ಗಡಿನಾಡಲೂ
ಹೊರನಾಡಲೂ ಡಂಡಣಣ ಡಣಣ /೩/

ಪಂಪನ ಪೆಂಪು, ಕುವೆಂಪು ಕಂಪು
ಜನಪದದ ಇಂಪು,"ನುಡಿ ಆಲ "ಸೊಂಪು ಸೊಂಪು
ಶರಣರ ವಚನ,ದಾಸರ ಕೀರ್ತನ
ಲಕುಮೀಶ ಕುವರವ್ಯಾಸ
ಪೊನ್ನ ರತ್ನಾಕರಣ್ಣ
ರಾಘವಾಂಕ ಜನ್ನ ರನ್ನ
ನೆಲವೆನಿತು ಪುಣ್ಯವಣ್ಣ /೪/

ಬೇಂದ್ರೆ ಕಾರಂತ ಮಾಸ್ತಿ
ಸಿರಿನುಡಿಯಸಮೃದ್ಧ ಆಸ್ತಿ
ಗೋಕಾಕ ಕಾರ್ನಾಡ ಕಂಬಾರ ಮೂರ್ತಿ
ನುಡಿದೀಪಕೆ ತೈಲವೆರೆದ ಧವಳಕೀರ್ತಿ
ಸಂದಿಹುದು ಶ್ರೇಷ್ಠತೆಗೆ ಏಳೆಂಟು ಜ್ಞಾನಪೀಠ
ಸಾರ್ಥಕವು ಸಾಹಿತ್ಯಕೃಷಿಯ ಸರಸದಾಟ/೫/

ಬಂದರೆ ಕುತ್ತು ಹೋಗುವೆವು ಸತ್ತು
ತಾಯ್ನಾಡೆ ಹೆಚ್ಚು ತಾಯ್ನುಡಿಯ ಕಿಚ್ಚು
ಧಗಧಗವು ಕನ್ನಡಿಗರೆದೆಯೆಕುಲುಮೆ
ಅನವರತ ಆಜ್ಯಧಾರೆ ಸುರಿಯುತ ಒಲುಮೆಒಲುಮೆ/೬/
ರಚನೆ..:
ಚಂದ್ರೇಗೌಡ ನಾರಮ್ನಳ್ಳಿ, ಎಂ.ಎ,ಕನ್ನಡಪಂಡಿತ್.ಬಿ.ಇಡಿ. ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ ಮೊ8722199344