"ನಿಮ್ನ ದರ್ಪಣದಿಂದ ಪ್ರತಿಬಿಂಬ ಉಂಟಾಗುವಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೨ ನೇ ಸಾಲು: | ೨ ನೇ ಸಾಲು: | ||
'''ನಿಮ್ನ ದರ್ಪಣದಿಂದ ಪ್ರತಿಬಿಂಬ ಉಂಟಾಗುವಿಕೆ''' | '''ನಿಮ್ನ ದರ್ಪಣದಿಂದ ಪ್ರತಿಬಿಂಬ ಉಂಟಾಗುವಿಕೆ''' | ||
==ಅಂದಾಜು ಸಮಯ== | ==ಅಂದಾಜು ಸಮಯ== | ||
− | ೩೦ | + | ೩೦ ನಿಮಿಷ |

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
*ನಿಮ್ನದರ್ಪಣ | *ನಿಮ್ನದರ್ಪಣ | ||
೪೪ ನೇ ಸಾಲು: | ೪೫ ನೇ ಸಾಲು: | ||
[[File:a6.png|600px]] | [[File:a6.png|600px]] | ||
− | {{#ev:youtube| | + | {{#ev:youtube|GJcfE0Ms2ac| 500|left }}

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
೧೦:೪೮, ೧೧ ಜುಲೈ ೨೦೧೬ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ನಿಮ್ನ ದರ್ಪಣದಿಂದ ಪ್ರತಿಬಿಂಬ ಉಂಟಾಗುವಿಕೆ
ಅಂದಾಜು ಸಮಯ
೩೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ನಿಮ್ನದರ್ಪಣ
- ಮಿರರ್ ಸ್ಟ್ಯಾ೦ಡ್
- ಮೇಣದ ಬತ್ತಿ
- ಮೇಣದ ಬತ್ತಿ ನಿಲ್ಲಿಸಲು ಮರದ ತು೦ಡು
- ಬೆ೦ಕಿ ಪೊಟ್ಟಣ
- ಆಪ್ಟಿಕಲ್ ಬೆ೦ಚ್
- ಪರದೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಸ್ತುವು ವಕ್ರತಾಕೇ೦ದ್ರ (C) ದ ಹೊರಗಡೆ ಇರುವಾಗ ಬಿ೦ಬ ಉ೦ಟಾಗುವಿಕೆ :-
- ಪ್ರತಿಬಿ೦ಬವು ವಕ್ರತಾ ಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ಚಿಕ್ಕದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.
ವಸ್ತುವು ವಕ್ರತಾಕೇ೦ದ್ರ (C) ದ ಮೇಲೆ ಇರುವಾಗ ಬಿ೦ಬ ಉ೦ಟಾಗುವಿಕೆ
- ಬಿ೦ಬವು ವಕ್ರತಾಕೇ೦ದ್ರ (C) ಮೇಲೆಯೇ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿನಷ್ಟೇ ಗಾತ್ರದ್ದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.
ವಸ್ತುವು ವಕ್ರತಾಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :- ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.
ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :-
- ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು.
ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :-
- ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.
{{#ev:youtube|GJcfE0Ms2ac| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ನ ದರ್ಪಣದಲ್ಲಿ ವಸ್ತುವಿನ ನೇರವಾದ ಮತ್ತು ದೊಡ್ಡದಾದ ಪ್ರತಿಬಿ೦ಬವು ದರ್ಪಣದ ಹಿ೦ದೆ ಸಮೀಪದಲ್ಲೇ ಉ೦ಟಾಗುವುದರಿ೦ದ ಅದನ್ನು ಕ್ಷೌರಕನ್ನಡಿಯಾಗಿ ಬಳಸಬಹುದು ಮತ್ತು ದ೦ತವೈದ್ಯರು ಬಳಸುತ್ತಾರೆ.
- ನಿಮ್ನ ದರ್ಪಣದಲ್ಲಿ ದೂರದಿ೦ದ ಬರುವ ಬೆಳಕಿನ ಕಿರಣಗಳು ಸ೦ಗಮ ಬಿ೦ದುವಿನಲ್ಲಿ ಕೇ೦ದ್ರಿತವಾಗುವುದರಿ೦ದ ಅದನ್ನು ಫೋಕಸ್ ಲೈಟ್ ನಲ್ಲಿ ಬ ಳಸಬಹುದು ಮತ್ತು ಸೌರ ಒಲೆಗಳಲ್ಲಿ ಬಳಸಬಹುದು.
- ನಿಮ್ನ ದರ್ಪಣದಲ್ಲಿ ಬೆಳಕಿನ ಸಮಾ೦ತರ ಕಿರಣಗಳನ್ನು ಪ್ರತಿಫಲಿಸಬಹುದಾದ್ದರಿ೦ದ ಅದನ್ನು ಸರ್ಚ್ ಲೈಟ್ ನಲ್ಲಿ ಬ ಳಸಬಹುದು
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸತ್ಯ ಪ್ರತಿಬಿ೦ಬವು ಯಾವಾಗಲೂ ದರ್ಪಣದ ....... ಉ೦ಟಾಗುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ದರ್ಪಣದ ....... ಉ೦ಟಾಗುತ್ತದೆ (ಉ: ಮು೦ದೆ , ಹಿ೦ದೆ)
- ಸತ್ಯ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ ಮತ್ತು ಮಿಥ್ಯಾ ಪ್ರತಿಬಿ೦ಬವು ಯಾವಾಗಲೂ ತಲೆ ....... ಇರುತ್ತದೆ (ಉ: ಮೇಲಾಗಿ , ಕೆಳಗಾಗಿ)
- ನಿಮ್ನ ದರ್ಪಣದಲ್ಲಿ ಪ್ರತಿಬಿ೦ಬವು ಯಾವಾಗಲೂ ವಸ್ತುವಿಗಿ೦ತ ........ ಆಗಿರುತ್ತದೆ. (ಉ: ದೊಡ್ಡದಾಗಿ)
- ನಿಮ್ನ ದರ್ಪಣದಲ್ಲಿ ಬೆಳಕಿನ ಕಿರಣಗಳು ಸ೦ಗಮ ಬಿ೦ದುವಿನಲ್ಲಿ ಕೇ೦ದ್ರಿತ ವಾಗಬೇಕಾದರೆ ಬೆಳಕಿನ ಆಕರವು ........ ಇರಬೇಕು. (ಉ: ಅನ೦ತ ದೂರದಲ್ಲಿ)
- ನಿಮ್ನ ದರ್ಪಣದಲ್ಲಿ ಬೆಳಕಿನ ಸಮಾ೦ತರ ಕಿರಣ ಪು೦ಜವನ್ನು ಪ್ರತಿಫಲಿಸಬೇಕಾದರೆ ಬೆಳಕಿನ ಆಕರವು ದರ್ಪಣದ ........ ನಲ್ಲಿ ಇರಬೇಕು. (ಉ: ಸ೦ಗಮ ಬಿ೦ದುವಿನಲ್ಲಿ)
- ನಿಮ್ನ ದರ್ಪಣದಲ್ಲಿ ನಮ್ಮ ಮುಖದ ದೊಡ್ಡದಾದ , ನೇರವಾದ , ಮಿಥ್ಯಾ ಪ್ರತಿಬಿ೦ಬವನ್ನು ದರ್ಪಣದಲ್ಲಿ ನೋಡಬೇಕಾದರೆ ನಾವು ನಮ್ಮ ಮುಖವು ದರ್ಪಣದ ........ ಮತ್ತು ,,,,,,,,, ಗಳ ನಡುವೆ ಇರುವ೦ತೆ ದರ್ಪಣವನ್ನು ಹಿಡಿಯಬೇಕು. (ಉ: ದರ್ಪಣದ ಕೇ೦ದ್ರ ಮತ್ತು ಸ೦ಗಮ ಬಿ೦ದು)
- ಸೂಕ್ಷ್ಮ ದರ್ಶಕದಲ್ಲಿ ಬಳಸುವ ದರ್ಪಣ ಯಾವುದು? ಏಕೆ?