"ಎನ್.ಸಿ.ಎಪ್ ಪೊಶೀಷನ್ ಪೇಪರ್ ಭಾಷೆ ಕಲಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಎನ್.ಸಿ.ಎಪ್ ಪೊಶೀಷನ್ ಪೇಪರ್ using HotCat) |
|||
೩೪ ನೇ ಸಾಲು: | ೩೪ ನೇ ಸಾಲು: | ||
ಪಿಯಾಜೆ ರವರ ಸಿದ್ದಾಂತವು ಕಲಿಕಾ ಪರಿಸರದೊಡನೆ ಸಂವಾದ ನಡೆಸುವ, ಪ್ರಮುಖ ಸಂದರ್ಭದಲ್ಲಿ ಭಾಷಾ ಬೋಧನೆಯ ಪ್ರಾಮುಖ್ಯತೆಯನ್ನು ವಿವರಿಸಿದೆ. <br> | ಪಿಯಾಜೆ ರವರ ಸಿದ್ದಾಂತವು ಕಲಿಕಾ ಪರಿಸರದೊಡನೆ ಸಂವಾದ ನಡೆಸುವ, ಪ್ರಮುಖ ಸಂದರ್ಭದಲ್ಲಿ ಭಾಷಾ ಬೋಧನೆಯ ಪ್ರಾಮುಖ್ಯತೆಯನ್ನು ವಿವರಿಸಿದೆ. <br> | ||
ವೆಗಾಟ್ಸ ಕೀ ಕಲ್ಪನೆಯ ಪ್ರಕಾರ ಮಗು-ಕೇಂದ್ರಿತ ಭಾಷಾ ಬೋಧನೆ ಮಗುವಿನ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಮೂಲಕ ಔಪಚಾರಿಕ ತರಗತಿ ವ್ಯವಸ್ಥೆಯಲ್ಲಿ ಸಹಜ ಭಾಷಾ ಕಲಿಕಾ ಸನ್ನಿವೇಶಗಳನ್ನು ಸಾಧ್ಯವಾದಲೆಲ್ಲ ಸೃಷ್ಟಿಸಬೇಕೆಂಬುದು ಇತ್ತೀಚಗೆ ಸ್ಪಷ್ಟವಾಗುತ್ತಿದೆ. | ವೆಗಾಟ್ಸ ಕೀ ಕಲ್ಪನೆಯ ಪ್ರಕಾರ ಮಗು-ಕೇಂದ್ರಿತ ಭಾಷಾ ಬೋಧನೆ ಮಗುವಿನ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಮೂಲಕ ಔಪಚಾರಿಕ ತರಗತಿ ವ್ಯವಸ್ಥೆಯಲ್ಲಿ ಸಹಜ ಭಾಷಾ ಕಲಿಕಾ ಸನ್ನಿವೇಶಗಳನ್ನು ಸಾಧ್ಯವಾದಲೆಲ್ಲ ಸೃಷ್ಟಿಸಬೇಕೆಂಬುದು ಇತ್ತೀಚಗೆ ಸ್ಪಷ್ಟವಾಗುತ್ತಿದೆ. | ||
+ | |||
+ | [[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]] |
೦೦:೨೭, ೧೬ ಆಗಸ್ಟ್ ೨೦೧೮ ದ ಇತ್ತೀಚಿನ ಆವೃತ್ತಿ
ಭಾಷೆ ಕಲಿಕೆ
ಪರಿಚಯ
ನಾವು ಈಗಾಗಲೇ ಗಮನಿಸಿರುವಂತೆ ಮಕ್ಕಳು ಸಂಕೀರ್ಣಾ ಭಾಷಾ ವ್ಯವಸ್ಥೆಯ ಕಲೆಯನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಹೇಗೆ ನಿರ್ವಹಿಸುತ್ತಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಹಲವು ಮಕ್ಕಳು ತಮ್ಮ ಮೂರು ಅಥವಾ ನಾಲ್ಕನೇ ವಯಸ್ಸಿನಲ್ಲಿಯೇ ಎರಡು ಅಥವಾ ಮೂರು ಭಾಷೆಗಳನ್ನು ನಿರರ್ಗಳವಾಗಿ ಬಳಸುತ್ತಾರೆ. ಇಷ್ಟೇ ಅಲ್ಲದೇ ಯಾವ ಸಂದರ್ಭದಲ್ಲಿ ಯಾವ ಭಾಷೆಯನ್ನು ಬಳಸಬೇಕು ಎಂಬುದನ್ನು ಸಹ ತಿಳಿದಿರುತ್ತಾರೆ. ಅಗತ್ಯವಿದ್ದಾಗ, ಪ್ರತ್ಯೇಕ ಅಥವಾ ಮಿಶ್ರಣ ಭಾಷಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪಾವ್ಲೊವ್ ಮತ್ತು ಸ್ಕಿನ್ನರ್ ರವರ ವರ್ತನಾ ಕಲಿಕಾ ಸಿದ್ದಾಂತದ ಪ್ರಕಾರ "ಭಾಷಾ ಕಲಿಕೆಯೆಂದರೆ ಅಭ್ಯಾಸ, ಅನುಕರಣೆ, ಮತ್ತು ಸ್ಮರಣೆಯ ಮೂಲಕ ಪ್ರಚೋದನೆ ಪ್ರತಿಕ್ರಿಯೆನ್ನು ಸ್ವಾದೀನ ಪಡಿಸಿಕೊಳ್ಳುವ ವಿಷಯವಾಗಿದೆ.”. ಆದರೆ ಚೋಮ್ ಸ್ಕೀ ರವರ ಲೇಖನ- ‘Review of Skinner’s Verbal Behaviour’ (1959) ಈ ವರ್ತನಾವಾದದ ಸಿದ್ದಾಂತವನ್ನು ಪ್ರಶ್ನೆ ಮಾಡಿದೆ. ಚೋಮ್ ಸ್ಕೀ ರವರ ವಾದದ ಪ್ರಕಾರ "ನಾವು ಒಂದು ಸಹಜ ಭಾಷಾ ಬೋದನೆಯನ್ನು ನಿರ್ಧಿಷ್ಟಪಡಿಸಿಕೊಳ್ಳದೇ ಸಂಕೀರ್ಣಾ ಭಾಷಾ ವ್ಯವಸ್ಥೆಗಳ ಸ್ವಾದಿನವನ್ನು ವಿವರಿಸಲು ಸಾಧ್ಯವಿಲ್ಲ. ವೆಗಾಟ್ಸಕಿ ಮತ್ತು ಪಿಯಾಜೆ ಎಂಬ ಮನೋವಿಜ್ಞಾನಿಗಳು ಈ ಎರಡು ವ್ಯವಸ್ಥೆಗಳ ಸ್ಥಾನಗಳ ಬಗ್ಗೆ ವಾದಿಸಿದ್ದಾರೆ. ವರ್ತನಾವಾದ ಸಿದ್ದಾಂತದ ಪ್ರಕಾರ ಮನಸ್ಸು ಖಾಲಿ ಸ್ಲೇಟಿನಂತೆ, ಚೋಮ್ ಸ್ಕೀ ರವರ ಅರಿವಿನ ಕಲಿಕಾ ಸಿದ್ದಾಂತದ ಪ್ರಕಾರ ಭಾಷೆಯಂಬುದು ಈಗಾಗಲೇ ಮನುಷ್ಯನ ಮನಸ್ಸಿನಲ್ಲಿ ಬೇರೂರಿದ್ದು, ಸಾರ್ವತ್ರಿಕ ವ್ಯಾಖರಣ ರೂಪದಲ್ಲಿರುವ ಸಂದೇಶವಾಹಕವಾಗಿದೆ.
ಅದೇ ರೀತಿ ಪಿಯಾಜೆ ರವರ ಪ್ರಕಾರ ಭಾಷೆ ಅರಿವಿನ ವ್ಯವಸ್ಥೆಯಲ್ಲಿ ನಡೆಯುವ ಪರಸ್ಪರರ ವರ್ತನೆಯ ಪರಿಸರದಲ್ಲಿ ಸಂರಚನೆಗೊಳ್ಳುತ್ತದೆ.
ಮಂತ್ತೊಂದೆಡೆ, ಮಗುವಿನ ಮಾತು ಸಮಾಜದಲ್ಲಿ ಪರಸ್ಪರರೊಡನೆ ನಡೆಯುವ ಸಂಭಾಷಣೆಯ ಫಲಿತಾಂಶವಾಗಿರುತ್ತದೆ ಎಂದು ವೆಗಾಟ್ಸಕಿ ನಂಬುತ್ತಾರೆ. ಮಗು ತನ್ನ ಭಾಷಾ ಬೆಳವಣಿಗೆಯಲ್ಲಿ ವ್ಯಕ್ತಿ ಕೇಂದ್ರಿತ ಮತ್ತು ಸಾಮಾಜಿಕ ಎಂಬ ಎರಡು ರೀತಿಯ ಸಂಭಾಷಣೆಯನ್ನು ಬಳಸುತ್ತದೆ . ವ್ಯಕ್ತಿ ಕೇಂದ್ರಿತ ಸಂಭಾಷಣೆ ಮಗುವನ್ನು ಆಧರಿಸಿದ್ದರೆ, ಸಮಾಜಿಕ ಸಂಭಾಷಣೆ ಸಮಾಜವನ್ನು ಆಧರಿಸಿರುತ್ತದೆ. ಇದು ಪಿಯಾಜೆ ಮತ್ತು ವೆಗಾಟ್ಸಕಿ ರವರು ಮಕ್ಕಳೊಡನೆಯೇ ಆದ್ಯಯನ ಮಾಡಿ ಅವರನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಭಾಷಾ ವೈಖರಿಯನ್ನು ದಾಖಲಿಸಿ, ಜ್ಞಾನದ ಬೆಳವಣಿಗೆಯನ್ನು ವಿಶ್ಲೇಷಿಸಿ ಮಾಡಿರುವ ವರಿದಿಯಾಗಿದ್ದು ಬಹಳ ಮುಖ್ಯವಾಗಿದೆ.
ಉದಾಹರಣೆಗೆ: ವೆಗಾಟ್ಸಕಿ ಗುರುತಿಸಿದ ಅಂಶಗಳಲ್ಲಿ ಮುಖ್ಯವಾದುದೆಂದರೆ, ಸಣ್ಣ ಮಕ್ಕಳು ಕೇವಲ ತಮ್ಮ ಸಾಮಾಜಿಕ ಮಾದ್ಯಮದ ಸಂಭಾಷಣಾ ವ್ಯವಸ್ಥೆಯನ್ನು ಮಾತ್ರವೇ ಅಭಿವೃದ್ದಿಪಡಿಸಿಕೊಳ್ಳದೇ, ಬಹುಸಂಕೀರ್ಣ ಪೂರ್ವ ಬೆಳವಣಿಗೆ ವ್ಯವಸ್ಥೆಯನ್ನು ಸಹ ಅಭಿವೃದ್ದಿಪಡಿಸಿಕಕೊಳ್ಳುತ್ತಿದ್ದಾರೆ.ಸ್ವಲ್ಪ ಕಾಲದ ನಂತರ ವಿಶ್ವದ ಬಹುಭಾಷೆಗಳೊಡನೆ ವ್ಯವಹರಿಸಲು ಈ ಮಕ್ಕಳಿಗೆ ಸಂಕೀರ್ಣ ಮೌಖಿತ ಭಾಷಾ ಭಂಡಾರದ ಅಗತ್ಯತೆ ಇದೆ.
ಭಾಷೆಯ ಬಗೆಗೆ ಪಿಯಾಜೆ ದೃಷ್ಟಿಕೋನ
ನಾವು ಭಾಷಾ ಸ್ವಾದೀನತೆಯನ್ನು ನೋಡುವ ರೀತಿಯಲ್ಲಿ ಚೋಮ್ ಸ್ಕೀ ರವರ ಮನೋವಾದಿ ಕಲ್ಪನೆಗಳು ಅಗಾಧವಾದ ಪರಿಣಾಮ ಬೀರಿದೆ ಎಂಬುದು ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿರುವ ಪಿಯಾಜೆ ರವರ ಅಭಿಪ್ರಾಯ. . ಇದರ ಒಳಾರ್ಥವೆಂದರೆ ಎಲ್ಲಾ ಮಕ್ಕಳು ಪೂರ್ವ ಕಾರ್ಯವಿಧಾನ, ಸಂರಚನ ಕಾರ್ಯವಿಧಾನ ಮತ್ತು ಔಪಚಾರಿಕ ಕಾರ್ಯವಿಧಾನ ಹಂತದ ಶೈಕ್ಷಣಿಕ ಸಂವಾದಗಳ ಮೂಲಕ ತಮ್ಮ ಜ್ಞಾನದ ಬೆಳವಣಿಗೆಯನ್ನು ನಿರ್ದಿಷ್ಟ ಹಂತಕ್ಕೆ ಮಿತಿಗೊಳಿಸಿದ್ದಾರೆ. ದುರದೃಷ್ಟಕರ ವಿದ್ಯಾಮಾನವೆಂದರೆ ಶಿಕ್ಷಣ ತಜ್ಞರು ಮತ್ತು ಭಾಷಾ ವೃತ್ತಿಪರರು ಚೋಮ್ ಸ್ಕೀ ರವರ ಭಾಷಾ ಪ್ರಸ್ತಾವಗಳ ಪೂರ್ಣ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಸಾದ್ಯವಾಗಿಲ್ಲ. ಚೋಮ್ ಸ್ಕೀ ರವರವ ಸಲಹೆಯ ಪ್ರಕಾರ ಭಾಷಾ ಸ್ವಾದೀನ ಪ್ರಕ್ರಿಯೆಗೆ ಅನಿವಾರ್ಯವಾಗಿ ಮಾಹಿತಿಗಳು, ಮಾಹಿತಿ ವರ್ಗೀಕರಣ, ಮಾಹಿತಿ ವಿಂಗಡಣೆಯಂತಹ ವೃಜ್ಞಾನಿಕ ವಿಚಾರಣೆಯ ಪ್ರಕ್ರಿಯೆಗಳು ಇರಲೇಬೇಕು. ಪಿಯಾಜೆರವರು ಸಹಜ ಭಾಷಾ ಭೋದನಾ ಸಿದ್ದಾಂತವನ್ನು ಒಪ್ಪಿಕೊಂಡಿರಲಿಲ್ಲ. ಪಿಯಾಜೆ ರವರವ ರಚನಾತ್ಮಕ ವಿಧಾನದ ಪ್ರಕಾರ, ಮಗುವಿನ ಹೊಂದಾಣಿಕೆಯಲ್ಲಿ ರಚನೆಯಾಗುವ ವಿವಿಧ ಯೋಜನೆಗಳ ಪ್ರಕ್ರಿಯೆಯಲ್ಲಿ ಸಂವೇದನಾ ಕಾರ್ಯವಿಧಾನಗಳ ಮೂಲಕ ಎಲ್ಲಾ ಜ್ಞಾನ ವ್ಯವಸ್ಥೆಗಳು ರಚನೆಯಾಗುತ್ತವೆ.
ಭಾಷೆ ಭೋದನೆಯ ಉದ್ದೇಶಗಳು
ಬಹಳಷ್ಟು ಮಕ್ಕಳು ಶಾಲೆಗೆ ಸೇರುವಷ್ಟರಲ್ಲಿ ಪರಿಪೂರ್ಣವಾದ ಭಾಷಾ ವ್ಯವಸ್ಥೆಯನ್ನು ಪಡೆದು ಬಂದಿರುತ್ತಾರೆ, ಆದ್ದರಿಂದ ಶಾಲಾ ಪಠ್ಯಕ್ರಮ ಭಾಷೆಗಳ ಭೋಧನೆ ಕುರಿತಂತೆ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರಬೇಕು. ಭಾಷಾ ಭೋದನೆಯ ಒಂದು ಪ್ರಮುಖ ಉದ್ದೇಶವೆಂದರೆ ಕಲಿಯುವವರನ್ನು ಸಾಕ್ಷರರಾಗುವಂತೆ ಸಜ್ಜುಗೊಳಿಸುವುದು ಹಾಗು ತಿಳುವಳಿಕೆಯಿಂದ ಓದಲು ಮತ್ತು ಬರೆಯಲು ಸಮರ್ಥರಾಗುವಂತೆ ಮಾಡುವುದು .ಮಕ್ಕಳು ಈಗಾಗಲೇ ಹೊಂದಿರುವ ದ್ವಿ-ಭಾಷಾ ಸಾಮರ್ಥ್ಯವನ್ನು ಮತ್ತು ಭಾಷೆಯ ಬಗೆಗಿನ ಅರಿವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರಯತ್ನಿಸುವುದು. ಹಾಗೆಯೇ, ಇತರರೊಡನೆ ಸಮಾಲೋಚಿಸಲು ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬೇಕಾಗಿರುವ ಅಭಿವ್ಯಕ್ತಿ ಸಾಮರ್ಥ್ಯಗಳೊಂದಿಗೆ ಮಕ್ಕಳನ್ನು ಸಜ್ಜುಗೊಳಿಸುವುದು ನಮ್ಮ ಪ್ರಮುಖ ಉದ್ದೇಶ.
ಭಾಷಾ ಸಿದ್ದಾಂತ ಮತ್ತು ಅನ್ವಯಿಕ ಭಾಷಾ ಶಾಸ್ತ್ರಗಳ ನಡುವಿನ ಪರಸ್ಪರ ಸಂವಾದದಿಂದಾಗಿ ಅನೇಕ ವಿಧದ ಭೋದನಾ ವಿಧಾನ ಮತ್ತು ಸಾಮಗ್ರಿಗಳು ಬಳಕೆಗೆ ಬಂದರೂ, ತರಗತಿಯಲ್ಲಿನ ಭಾಷಾ ಶಿಕ್ಷಣ ಅತ್ಯಂತ ನೀರಸ ಹಾಗು ಸವಾಲುರಹಿತ ವಾಗಿಯೇ ಉಳಿದುಕೊಂಡಿದೆ.
ವರ್ತನಾವಾದಿ ಮಾದರಿಗಳ ಪ್ರಾಬಲ್ಯ ಮೇಲ್ಕಂಡ ಸನ್ನಿವೇಶದಲ್ಲಿ ಬಹಳವಾಗಿ ಕಂಡುಬರುತ್ತದೆ. ಮಕ್ಕಳು ಈಗಾಗಲೇ ತಿಳಿದಿರುವ ಭಾಷೆಗಳ ವಿಚಾರಕ್ಕೆ ಬಂದರೆ, ಭಾಷಾ ಸಾಮರ್ಥ್ಯದ ಪ್ರಗತಿ ಅತಿ ವಿರಳವಾಗಿದೆ. ಎರಡನೇ ಭಾಷೆಯಾಗಿ ಇಂಗ್ಲೀಷ್ ಕಲಿಯುವ ವಿಷಯಕ್ಕೆ ಬಂದರೆ, ಆರರಿಂದ ಹತ್ತು ವರುಷಗಳ ಶಾಲಾ ಕಲಿಕೆಯ ಬಳಿಕವೂ ಮೂಲಭೂತ ಕುಶಲತೆಯನ್ನು ಗಳಿಸಿರುವುದಿಲ್ಲ. ಶಾಸ್ತ್ರೀಯ ಅಥವಾ ವಿದೇಶಿ ಭಾಷೆಗಳ ಕಲಿಕೆ ಕೇವಲ ಕೆಲವು ಆಯ್ದ ಗ್ರಂಥಗಳು, ನಾಮಪದ ಮತ್ತು ಕ್ರಿಯಾಪದಗಳ ಕಂಠಪಾಠಕ್ಕೆ ಸೀಮಿತವಾಗಿದೆ. ಈ ಮೇಲಿನ ವಿಷಯಗಳನ್ನು ಬೆಂಬಲಿಸುವ ಪ್ರಾಯೋಗಿಕ ಅಧ್ಯಯನಗಳು ಸಾಕಷ್ಟಿವೆ.ನಾವು ನಿರ್ಧಿಷ್ಟ ಸಂದರ್ಭಗಳನ್ನು, ಗುರಿಗಳನ್ನು ಗುರುತಿಸಿ, ವಿಶ್ಲೇಷಿಸಿ ಹಾಗು ಅರ್ಥಮಾಡಿಕೊಂಡು ಸೂಕ್ತ ವಿಧಾನಗಳನ್ನು ಮತ್ತು ಕಲಿಕಾ ಸಾಮಗ್ರಿಗಳನ್ನು ಅಭಿವೃದ್ದಿಪಡಿಸುವುದು ಅನಿವಾರ್ಯವಾಗಿದೆ.
ಬಹಳ ದೀರ್ಘಕಾಲದಿಂದ ಭಾಷಾಬೋಧನೆಯ ಉದ್ದೇಶವನ್ನು ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ ವಿಚಾರದ ಸುತ್ತಲೇ ಹೆಣೆಯಲಾಗಿದೆ. ಇತ್ತೀಚೆಗೆ ಅಷ್ಟೇ ಹಾನಿಕರವಾದ ರೀತಿಯಲ್ಲಿ ಸಂವಹನ ಕೌಶಲ್ಯ, ಸ್ಪಷ್ಟ ಉಚ್ಚಾರಣೆ ಮತ್ತು ಧ್ವನಿ ತರಭೇತಿಗಳ ಹಿಂದೆ ಬಿದ್ದಿದ್ದೇವೆ.
ಭಾಷಾಬೋಧನೆಯ ಗಮನವನ್ನು ಇಂತಹ ಪ್ರತ್ಯೇಕವಾದ ಕೌಶಲ್ಯಗಳಿಗೆ ಮೀಸಲಾಗಿರಿಸಿದ್ದು ಪ್ರತಿಕೂಲ ಪರಿಣಾಮಗಳನ್ನು ಬೀರಿದೆ.
ಈ ಲೇಖನದಲ್ಲಿ ಸ್ವಲ್ಪ ಮಟ್ಟಿಗೆ ಇದೇ ಮಾದರಿಯನ್ನು ಅನುಸರಿಸಿ ಉದ್ದೇಶಗಳನ್ನು ವಿವರಿಸಲಾಗಿದೆಯಾದರೂ, ಭಾಷಾ ಪ್ರಾವೀಣ್ಯತೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಲು ಹೆಚ್ಚು ಒತ್ತು ನೀಡಲಾಗಿದೆ. ಏನೇ ಇದ್ದರೂ ನಾವು ಮಾತನಾಡುವಾಗ ಏಕಕಾಲದಲ್ಲಿ ಆಲಿಸುತ್ತಲೂ ಇರುತ್ತೇವೆ. ಹಾಗೆಯೇ ಬರೆಯುವಾಗ ವಿವಿಧ ರೀತಿಯಲ್ಲಿ ಓದುತ್ತಿರುತ್ತೇವೆ ಮತ್ತು ಎಷ್ಟೋ ಸಂದರ್ಭಗಳಲ್ಲಿ ಭಾಷಾ ಕೌಶಲಗಳನ್ನು ಅರಿವಿನ ಸಾಮರ್ಥ್ಯದೊಂದಿಗೆ ಅನೇಕ ರೀತಿಯಲ್ಲಿ ಉಪಯೋಗಿಸಿರುತ್ತೇವೆ. ಉದಾಹರಣೆಗೆ , ಸ್ನೇಹಿತರೆಲ್ಲಾ ಒಟ್ಟಾಗಿ ನಾಟಕವನ್ನು ಓದುತ್ತಾ, ನಾಟಕವಾಡಲು ಟಿಪ್ಪಣಿ ತೆಗೆದುಕೊಳ್ಳುವುದು.
ನಮ್ಮ ಕೆಲವು ಉದ್ದೇಶಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿವೆ :-
- ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ : ವಿಧ್ಯಾರ್ಥಿಯು ಹೇಳುವವರ ವಿವಿಧ ರೀತಿಯ ಅಮೌಖಿಕ ಸೂಚನೆ/ಸನ್ನೆ ಗಳನ್ನು ಅರ್ಥಮಾಡಿಕೊಳ್ಳಲು ಶಕ್ತನಾಗಿರಬೇಕು. ಕೇಳಿದ ಕ್ರಮದಲ್ಲಷ್ಟೇ ಅಲ್ಲದೇ ವಿವಿಧ ರೀತಿಯಲ್ಲಿ ಕೇಳಿದ್ದನ್ನು ಆಲಿಸಿ ಅರ್ಥ ಮಾಡಿಕೊಂಡು ಸಂಬಂಧಗಳನ್ನು ಕಲ್ಪಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ನುರಿತನಾಗಿರಬೇಕು .
- ಕೇವಲ ಸಾಂಕೇತಿಕವಲ್ಲದ, ಗ್ರಹಿಕೆಯುಕ್ತ ಓದುವ ಸಾಮರ್ಥ್ಯ : ಮಕ್ಕಳು ವಿವಿಧ ವಾಕ್ಯರಚನೆಯ ಶಬ್ದಾರ್ಥಗಳನ್ನು ಸಂಜ್ಙೆ ಸೂಚನೆಗಳನ್ನು ಬಳಸಿ ರೇಖೀಯವಲ್ಲದ ರೀತಿಯಲ್ಲಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ತಮ್ಮ ಹಿಂದಿನ ಜ್ಞಾನದ ಮೂಲಕ ತರ್ಕಗಳಿಗೆ ಅರ್ಥವನ್ನು ಹುಡುಕುತ್ತಾ, ಪಠ್ಯವನ್ನು ತಮ್ಮ ಹಿಂದಿನ ಜ್ಞಾನಕ್ಕೆ ಸಂಬಂಧೀಕರಿಸಬೇಕು. ಮಕ್ಕಳು ಕ್ಲಿಷ್ಟಕರವಾದ ಮತ್ತು ಹೆಚ್ಚು ಪ್ರಶ್ನೆಗಳಿಂದ ಕೂಡಿರುವ ಪುಸ್ತಕವನ್ನು ವಿಮರ್ಶನಾತ್ಮಕವಾಗಿ ಓದುವ ಆತ್ಮವಿಶ್ವಾಸ ಬೆಳೆಸಬೇಕು.
- ಸುಲಲಿತ ಅಭಿವ್ಯಕ್ತಿ : ವಿಧ್ಯಾರ್ಥಿಯು ತನ್ನ ಅಭಿವ್ಯಕ್ತಿ ಕೌಶಲಗಳನ್ನು ವಿವಿಧ ಸನ್ನಿವೇಶಗಳಲ್ಲಿ ಬಳಕೆ ಮಾಡುವುದರಲ್ಲಿ ಶಕ್ತರಾಗಬೇಕು. ಅವರ ಬತ್ತಳಿಕೆಯಲ್ಲಿ ಹಲವಾರು ಶೈಲಿಗಳಿದ್ದು ಬೇಕಾದ ಸಂದರ್ಭದಲ್ಲಿ ಅವುಗಳಿಂದ ಆಯ್ಕೆ ಮಾಡಿಕೊಳ್ಳುವ ಆಗಿರಬೇಕು. ವಿಧ್ಯಾರ್ಥಿಯು ತಾರ್ಕಿಕ, ವಿಶ್ಲೇಷಣಾತ್ಮಕ ಮತ್ತು ಸೃಜನಾತ್ಮಕವಾಗಿ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಸಮರ್ಥವಾಗಿರಬೇಕು.
- ಸುಸಂಬದ್ಧ ಬರವಣಿಗೆ : ಬರವಣಿಗೆ ಯಾಂತ್ರಿಕ ಕೌಶಲವಲ್ಲ, ಇದು ವ್ಯಾಕರಣ, ಶಬ್ದಕೋಶ, ವಿಷಯ ಇತ್ಯಾದಿಗಳ ನಿಯಂತ್ರಿತ ಹಾಗು ಸುಸಂಗತ ಬಳಕೆಯ ಸಾಮರ್ಥ್ಯವನ್ನು ಒಳಗೊಂಡಿದೆ. ವಿದ್ಯಾರ್ಥಿ ತನ್ನ ಆಲೋಚನೆಗಳನ್ನು ಸಲೀಸಾಗಿ ಮತ್ತು ಒಂದು ಸಂಘಟಿತ ರೀತಿಯಲ್ಲಿ ವ್ಯಕ್ತಪಡಿಸಲು ವಿಶ್ವಾಸ ಬೆಳೆಸಿಕೊಳ್ಳಬೇಕು. ತಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿ, ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಮಂಜಸವಾಗಿ ಬರೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಇದು ಸಾದ್ಯವಾಗುವುದು ವಿಧ್ಯಾರ್ಥಿಗಳ ಬರವಣಿಗೆಯನ್ನು ಒಂದು ಉತ್ಪನ್ನದಂತೆ ಅಲ್ಲದೆ ಪ್ರಕ್ರಿಯೆಯಂತೆ ಕಂಡಾಗ ಮಾತ್ರ. ವಿಧ್ಯಾರ್ಥಿಗಳು ಬರವಣಿಗೆಯನ್ನು ವಿವಿಧ ಉದ್ದೇಶ, ಸಂದರ್ಭಗಳಿಗೆ ಅನುಗುಣವಾಗಿ ಬರೆಯಲು ಸಮರ್ಥರಾಗಿರಬೇಕು.
- ವಿವಿಧ ಭಾಷಾ ದಾಖಲೆಪಟ್ಟಿಗಳ (ರಿಜಿಸ್ಟರ್) ಮೇಲೆ ನಿಯಂತ್ರಣ : ಭಾಷಾ ಬಳಕೆ ಎಂದಿಗೂ ಏಕರೂಪವಾದ ಶೈಲಿಯಲ್ಲಿ ಆಗುವುದಿಲ್ಲ ವಿವಿಧ ಕ್ಷೇತ್ರ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಲೆಕ್ಕವಿಲ್ಲದಷ್ಟು ಪ್ರಭೇದಗಳು, ಛಾಯೆಗಳು ಮತ್ತು ಬಣ್ಣಗಳನ್ನು ಭಾಷೆ ಹೊಂದಿದೆ. ಇಂತಹ ವ್ಯತ್ಯಾಸಗಳನ್ನು ಭಾಷಾ ದಾಖಲೆ ಪಟ್ಟಿ (ರಿಜಿಸ್ಟರ್) ಗಳೆನ್ನುತ್ತಾರೆ. ಈ ವ್ಯತ್ಯಾಸಗಳು ವಿಧ್ಯಾರ್ಥಿಗಳ ಭಾಷಾಜ್ಞಾನದ ಅತಿ ಪರಿಚಿತ ಭಾಗವಾಗಬೇಕು. ಪಠ್ಯ ವಿಷಯಗಳ ಭಾಷಾ ದಾಖಲೆಪಟ್ಟಿಗಳ ಜೊತೆಗೆ ಸಂಗೀತ, ಕ್ರೀಡೆ, ಚಲನಚಿತ್ರಗಳು, ತೋಟಗಾರಿಕೆ ನಿರ್ಮಾಣ ಕಾರ್ಯ, ಪಾಕಶಾಸ್ತ್ರ ಹೀಗೆ ವಿವಿಧ ಕ್ಷೇತ್ರಗಳ್ಲಿ ಬಳಕೆಯಿರುವ ದಾಖಲೆಪಟ್ಟಿಗಳನ್ನು ಅರ್ಥಮಾಡಿಕೊಳ್ಲಲು ವಿಧ್ಯಾರ್ಥಿಗಳು ಸಮರ್ಥರಾಗಬೇಕು.
ಭಾಷಾ ಕೌಶಲ ಮತ್ತು ಯೋಚನಾ ಕೌಶಲ ಎರಡೂ ಒಂದೇ ತೆರನಾಗಿರುತ್ತವೆ. - ಭಾಷೆಯ ವೈಜ್ಞಾನಿಕ ಅಧ್ಯಯನ : ಭಾಷಾ ತರಗತಿಯಲ್ಲಿನ ಬೋಧನಾ ವಿಧಾನಗಳು ಮಕ್ಕಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ವರ್ಗೀಕರಿಸುವಿಕೆ ಮತ್ತು ವಿಚಾರ ಮಾಡುವ ಹಾಗೆ ಪ್ರೇರೇಪಿಸಬೇಕು. ಹೀಗಾಗಿ ಭಾಷಾ ಸಾಧನಗಳು ಮಗುವಿನ ಅರಿವಿನ ಸಾಮರ್ಥ್ಯದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಈ ಬೋಧನಾ ವಿಧಾನ ಬರೀ ವ್ಯಾಕರಣದ ನಿಯಮಗಳ ಬೋಧನೆಗಿಂತ ಹೆಚ್ಚು ಉತ್ತಮ . ಇದಲ್ಲದೇ ಈ ವಿಧಾನವು ಬಹುಭಾಷಾ ತರಗತಿಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ.
- ಸೃಜನಶೀಲತೆ : ಭಾಷಾ ತರಗತಿಗಳಲ್ಲಿ ವಿದ್ಯಾರ್ಥಿಗೆ ತನ್ನ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಅಭಿವೃದ್ದಿಪಡಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇರಬೇಕು ತರಗತಿಯಲ್ಲಿನ ತತ್ವಗಳು ಮತ್ತು ಶಿಕ್ಷಕರ -ವಿದ್ಯಾರ್ಥಿಗಳ ನಡುವಿನ ಸಂಬಂಧ, ಪಠ್ಯವಿಷಯ ಹಾಗು ಚಟುವಟಿಕೆಗಳಲ್ಲಿ ನಿರಾಂತಕವಾಗಿ ಸೃಜನಶೀಲತೆಯ ಉಪಯೋಗಕ್ಕೆ ಅತ್ಮಸ್ಥೈರ್ಯವನ್ನು ಕೊಡುತ್ತದೆ.
- ಸೂಕ್ಷ್ಮತೆ : ಭಾಷಾ ತರಗತಿಗಳು ವಿಧ್ಯಾರ್ಥಿಗಳನ್ನು ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಸಮಕಾಲೀನ ಜೀವನದ ಅಂಶಗಳೊಂದಿಗೆ ಪರಿಚಿತಗೊಳಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಇಷ್ಟೇ ಅಲ್ಲದೇ ತಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಹಾಗು ರಾಷ್ಟ್ರದ ಕುರಿತಾಗಿ ಸೂಕ್ಷ್ಮದಿಂದ ಕಾಣುವಂತೆ ಮಾಡಲು ಭಾಷಾ ತರಗತಿಗಳು ಸಹಾಯಕ್ಕೆ ಬರುತ್ತವೆ.
ಉದಾ: ಕಾವೇರಿ ಸಮಸ್ಯೆ
ನಮ್ಮ ಒಂದು ಹಂತದ ಯೋಚನೆಗಳ ಮೂಲಕ ಸಮಸ್ಯೆ ಸೃಷ್ಟಿಯಾದಾಗ ಅದೇ ರೀತಿಯ ಯೋಚನೆಗಳಿಂದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ.- ಆಲ್ಬರ್ಟ್ ಐನ್‌ಸ್ಟೈನ್
ಕೆಲವು ಶೈಕ್ಷಣಿಕ ಪ್ರಸ್ತಾಪಗಳು
ಭಾಷಾ ಸ್ವಾದೀನತೆಯ ಮೇಲಿನ ಸಮಕಾಲೀನ ಸಂಶೋಧನೆಯು ಭಾಷಾ ಕಲಿಕೆಯು ಕಲಿಕಾರ್ಥಿಯನ್ನು ಕೇಂದ್ರೀಕರಿಸಿದೆ. ಕಲಿಕಾರ್ಥಿಗೆ ಆತಂಕರಹಿತ ಕಲಿಕಾ ಸಂದರ್ಭವನ್ನು ಒದಗಿಸಿದಾಗ ಒತ್ತಡರಹಿತವಾಗಿ ಭಾಷೆಯ ವ್ಯಾಕರಣವನ್ನು ಸಂರಚಿಸಿಲು ಸಾಧ್ಯವಾಗುತ್ತದೆ ಎಂಬುದನ್ನು ಈ ಸಂಶೋಧನೆ ತಿಳಿಸಿದೆ. ಕ್ರಸೇನ್ (1985) ಎಂಬ ಭಾಷಾತಜ್ಞರ ಸಲಹೆಯ ಪ್ರಕಾರ , ಭಾವನಾತ್ಮಕ ಶೋಧನೆ ಕಡಿಮೆಯಿದ್ದಾಗ ಮಾತ್ರ ತಿಳಿವಳಿಕೆ ಅಥವಾ ಒಳಹರಿವು ಗಟ್ಟಿಕಲಿಕೆಯಾಗಲು ಸಾಧ್ಯ. ಉದಾ: ನಮ್ಮ ಮನೋಭಾವ ಧನಾತ್ಮಕವಾಗಿದ್ದಾಗ ನಮ್ಮ ಪ್ರೇರಣೆಗಳು ಪ್ರಬಲವಾಗಿರುತ್ತವೆ. ಇಂಗ್ಲೀಷ್ ವಿದೇಶಿ ಭಾಷೆಯಾಗಿದ್ದರೂ ಸಹ ಕೆಲವು ಸಂದರ್ಭಗಳಲ್ಲಿ ಕಲಿಕಾರ್ಥಿಯ ವ್ಯಾಕರಣ ಮೌಲ್ಯಗಳಲ್ಲಿ ಪ್ರಜ್ಞಾಪೂರ್ವಕ ಪ್ರತಿಫಲನವನ್ನು ಪ್ರಚೋದಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಕ್ಕಳು ತಾವು ಬರೆದದ್ದನ್ನು ತಿದ್ದಲು ಸಾಕಷ್ಟು ಸಮಯ ಮತ್ತು ಸ್ವಾತಂತ್ರ್ಯ ಪಡೆದಾಗ ತಮ್ಮ ಕಲಿಕೆಯನ್ನು ಹೇಗೆ ಸುಧಾರಿಸಿಕೊಳ್ಳುತ್ತಾರೆ ಎಂಬುದನ್ನು 'ಕ್ರಸೇನ್' ರವರು ತೋರಿಸಿಕೊಟ್ಟಿದ್ದಾರೆ.
ಜ್ಞಾನದ ಬೆಳವಣಿಗೆಯ ತುಲನಾತ್ಮಕ ಆದೇಶದ ಹಂತಗಳು ಪ್ರಮುಖವಾಗಿ ತಮ್ಮ ಕಲಿಕಾ ಪ್ರಕ್ರಿಯೆಯಲ್ಲಿನ ದೋಷಗಳನ್ನು ಕಂಡುಕೊಳ್ಳಲು ಮತ್ತು ಬಗೆಹರಿಸಿಕೊಳ್ಳಲು ಭಾಷಾ ಶಿಕ್ಷಕರನ್ನು ಪ್ರೋತ್ಸಾಹಿಸುತ್ತವೆ.
ಪಿಯಾಜೆ ರವರ ಸಿದ್ದಾಂತವು ಕಲಿಕಾ ಪರಿಸರದೊಡನೆ ಸಂವಾದ ನಡೆಸುವ, ಪ್ರಮುಖ ಸಂದರ್ಭದಲ್ಲಿ ಭಾಷಾ ಬೋಧನೆಯ ಪ್ರಾಮುಖ್ಯತೆಯನ್ನು ವಿವರಿಸಿದೆ.
ವೆಗಾಟ್ಸ ಕೀ ಕಲ್ಪನೆಯ ಪ್ರಕಾರ ಮಗು-ಕೇಂದ್ರಿತ ಭಾಷಾ ಬೋಧನೆ ಮಗುವಿನ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಮೂಲಕ ಔಪಚಾರಿಕ ತರಗತಿ ವ್ಯವಸ್ಥೆಯಲ್ಲಿ ಸಹಜ ಭಾಷಾ ಕಲಿಕಾ ಸನ್ನಿವೇಶಗಳನ್ನು ಸಾಧ್ಯವಾದಲೆಲ್ಲ ಸೃಷ್ಟಿಸಬೇಕೆಂಬುದು ಇತ್ತೀಚಗೆ ಸ್ಪಷ್ಟವಾಗುತ್ತಿದೆ.