೧ ನೇ ಸಾಲು:
೧ ನೇ ಸಾಲು:
+
== ಸಾರಾಂಶ ==
+
ಹಿಂದಿನ ಮಾಡ್ಯೂಲ್‌ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ ಹಾಗೂ ಅವು ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್‌ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ.
+
=ಊಹೆಗಳು =
+
1. ಎರಡನೇ ಮಾಡ್ಯೂಲ್‌ನಲ್ಲಿ ಕಿಶೋರಿಯರ ಸಮಸ್ಯೆಗಳನ್ನು ಗುರುತಿಸಲಾಗಿದೆ.
+
+
2. ಕಿಶೋರಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಸಂಪೂರ್ಣವಾಗಿ ವ್ಯಕ್ತವಾಗಿಲ್ಲ.
+
+
3. ಹಿಂದಿನ ವಾರಗಳ ಮಾತುಕತೆಯಲ್ಲಿ ವೀಡಿಯೋ ತೋರಿಸಿರುವುದರಿಂದ ಈ ವಾರ ಕೂಡ ವೀಡಿಯೋ ತೋರಿಸಬಹುದು ಎಂದು ಅಂದುಕೊಂಡಿರಬಹುದು.
+
+
4. ಎರಡನೇ ಮಾಡ್ಯುಲ್‌ನಲ್ಲಿ ಮಾಡಿದ ಸುರುಳಿ ಚಟುವಟಿಕೆ ಎಲ್ಲರಿಗೂ ತಿಳಿದಿರುವುದರಿಂದ, ಪುನಃ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ.
+
+
5. ಈ ಮಾಡ್ಯೂಲ್‌ನಲ್ಲಿ ಕೂಡ ಚಾರ್ಟ್‌ಗಳನ್ನು ಬಳಸಿದರೆ ಇವರು ಕೇವಲ ಇವುಗಳನ್ನೇ ಬಳಸುತ್ತಾರೆಂದು ಅನಿಸಬಹುದು. ಆದ್ದರಿಂದ ಬೇರೆ ತರಹದ ಚಟುವಟಿಕೆಗಳನ್ನು ಮಾಡಬೇಕು.
+
+
6. ಮೂರನೇ ಮಾಡ್ಯೂಲ್ ಆಗಿರುವುದರಿಂದ ಹಾಗೂ ನಾವು ಸುಮಾರು ೨ ತಿಂಗಳಿನಿಂದ ಶಾಲೆಗೆ ಭೇಟಿ ಕೊಡುತ್ತಿರುವುದರಿಂದ, ಕಿಶೋರಿಯರ ಹಿನ್ನಲೆಗಳ ಬಗ್ಗೆ ಸ್ವಲ್ಪ ಗೊತ್ತಿದೆ. ಮನೆಯಲ್ಲಿ ಕಷ್ಟ ಇದೆ, ಜಗಳ ಅಗುತ್ತದೆ, ಮನೆಗೆಲಸ ಮಾಡಬೇಕು, ಬಣ್ಣದ ಬಟ್ಟೆ ಹಾಕಲು ಹಿಂಸೆ ಅಗುತ್ತಿದೆ ಎಂದು ಕಿಶೋರಿಯರು ಹೇಳಿದ್ದಾರೆ.
+
+
7. ಶಾಲೆ ಅನ್ನುವುದು ಅವರ ಹಿನ್ನಲೆಗಳಿಗೆ ಸ್ಪಂದಿಸಿ ಅವರ ಅವಶ್ಯಕತೆಗಳಿಗೆ ಪೂರಕವಾಗುವಂತೆ ಇಲ್ಲ.
+
+
8. ಹಿಂದಿನ ಮಾತುಕತೆ ಹಾಗು ಈ ಮಾತುಕತೆಯ ನಡುವೆ ಸಮಯದ ಅಂತರ ಜಾಸ್ತಿ ಇರುವುದರಿಂದ, ಕಿಶೋರಿಯರಿಗೆ ಉತ್ಸಾಹ ತರಿಸುವಂತೆ ಹಿಂದಿನ ವಾರಗಳ ಬಗ್ಗೆ ಮೆಲುಕು ಹಾಕಿಕೊಳ್ಳಬೇಕು.
+
+
9. ಹಿಂದಿನ ವಾರಗಳಲ್ಲಿ ಗುಂಪುಗಳಲ್ಲಿ ಕ್ಲಾಸಿನಿಂದ ಹೊರಗಡೆಗೆ ಕರೆದುಕೊಂಡು ಹೋಗಿರುವುದರಿಂದ, ಈ ವಾರ ಕೂಡ ಹೊರಗಡೆ ಕರೆದುಕೊಂಡು ಹೋಗಬಹುದು ಎನ್ನುವ ನಿರೀಕ್ಷೆ ಇರಬಹುದು.
+
+
== ಉದ್ದೇಶ ==
+
ಕಿಶೋರಾವಸ್ಥೆಯ ಬಗ್ಗೆ ಎಲ್ಲರೂ ಸೇರಿ ವ್ಯಾಖ್ಯಾನಿಸುವಂತೆ ಮಾಡುವುದು.
+
+
== ಬೇಕಾಗಿರುವ ಸಾಮಗ್ರಿಗಳು ==
+
* ಫೆಸಿಲಿಟೇಟರ್‌ಗಳು - ಒಬ್ಬ ಮುಖ್ಯ ಫೆಸಿಲಿಟೇಟರ್ ಹಾಗೂ ೩ ಫೆಸಿಲಿಟೇಟರ್‌ಗಳು ಗುಂಪಿನ ಜೊತೆಗೆ ಮಾತನಾಡಲು
+
* ಸ್ಕೆಚ್‌ಪೆನ್‌ಗಳು (ಗುಂಪು ಮಾಡಲು), ಚಿತ್ರಗಳ ಪ್ರಿಂಟ್ ಔಟ್‌ಗಳು,
+
+
== ಪ್ರಕ್ರಿಯೆ ==
+
ಈ ಮಾಡ್ಯುಲ್‌ನಲ್ಲಿ ಸಂಭಾಷಿಸುವ ವಿಷಯಗಳು ನಮ್ಮ ಮುಂದಿನ ವಾರಗಳ ಮಾತುಕತೆಗಳಿಗೆ ಅವಶ್ಯವಾಗಿರುವುದರಿಂದ ಈ ಮಾಡ್ಯೂಲ್ ಅನ್ನು ೨ ವಾರಗಳಲ್ಲಿ ಮಾಡಲು ಯೋಜಿಸಲಾಗಿದೆ. ಹಾಗಾಗಿ ನಮಗೆ ಒಟ್ಟು ೧೬೦ ನಿಮಿಷಗಳ ಸಮಯವಿದೆ.
+
+
===== ಗುಂಪುಗಳನ್ನು ಮಾಡುವುದು =====
+
• ಮೂರು ಗುಂಪುಗಳನ್ನು ಮಾಡಿಕೊಳ್ಳಬೇಕು.
+
+
• ಗುಂಪುಗಳನ್ನು ಮಾಡಿಕೊಳ್ಳಲು ಸ್ಕೆಚ್ ಪೆನ್‌ಗಳನ್ನು (೧೨ ಬೇರೆ ಬೇರೆ ಬಣ್ಣಗಳು, ೪ ಬಣ್ನಗಳು ಒಬ್ಬೊಬ್ಬರ ಗುಂಪಿಗೆ. ೩ ಗುಂಪುಗಳಲ್ಲಿರುತ್ತವೆ ) ಕಿಶೋರಿಯರು ಒಬ್ಬೊಬ್ಬರಾಗಿ ಬಂದು ಸ್ಕೆಚ್ ಪೆನ್ ಆರಿಸಿಕೊಳ್ಳತ್ತಾರೆ. ಪೂರ್ವ ನಿರ್ಧಾರದಂತೆ ೩ ಫೆಸಿಲಿಟೇಟರ್‌ಗಳು ೩ ತರಹದ ಬಣ್ಣಗಳನ್ನು ತೆಗೆದುಕೊಡು ಗುಂಪು ಮಾಡಿಕೊಳ್ಳುತ್ತಾರೆ. ೨೦ ನಿಮಿಷ
+
+
===== ಗುಂಪುಗಳ ಬಣ್ಣದ ಸಂಯೋಜನೆಗಳು =====
+
• ಗಿಳಿ ಹಸಿರು, ಹಸಿರು, ನೀಲಿ, ಆಕಾಶ ನೀಲಿ
+
+
• ಕೆಂಪು, ಗುಲಾಬಿ, ಕಂದು, ಕಿತ್ತಳೆ
+
+
• ಹಳದಿ, ಬಾದಾಮಿ, ನೇರಳೆ, ಕಪ್ಪು
+
+
ಕಿಶೋರಿಯರ ಜೊತೆಗಿನ ಹಿಂದಿನ ವಾರದ ಮಾತುಕತೆಗಳ ಆಧಾರದ ಮೇಲೆ ಪಾತ್ರಾಭಿನಯಗಳ ತಯಾರಿ ಮಾಡಿಕೊಂಡು ಹೋಗಿರುತ್ತೇವೆ. ಇವುಗಳಲ್ಲಿ ಪುರುಷ ಪಾತ್ರಗಳನ್ನು ಮಹಿಳಾ ಫೆಸಿಲಿಟೇಟರ್‌ಗಳು ಹಾಗೂ, ಮಹಿಳೆಯ ಪಾತ್ರಗಳನ್ನು ಪುರುಷ ಫೆಸಿಲಿಟೇಟರ್‌ಗಳು ಮಾಡುವಂತೆ ಉದ್ದೇಶ ಪೂರ್ವಕವಾಗಿ ರಚಿಸಲಾಗಿದೆ.
+
+
===== ಸ್ಕಿಟ್ ಪೂರ್ವತಯಾರಿ =====
+
೫ ನಿಮಿಷ
+
+
===== ಪಾತ್ರಾಭಿನಯಗಳು =====
+
೧೬ ನಿಮಿಷ
+
+
===== ಪಾತ್ರಾಭಿನಯ ೧ – ಬ್ಯೂ...ಟಿ =====
+
+
===== ಪಾತ್ರಗಳು =====
+
ಮೊನಿಷಾ - ಕಿಶೋರಿ
+
+
ಇಬ್ಬರು ಪೋಕರಿ ಹುಡುಗರು
+
+
ಮೊನಿಷಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುತ್ತಾಳೆ. ಅವಳನ್ನು ನೋಡಿ ಹುಡುಗರು ಶಿಳ್ಳೆ ಹೊಡೆದು, ಬ್ಯೂಟಿ…. ಮೊ...ನಿ...ಷಾ... ಎಂದು ಚುಡಾಯಿಸುತ್ತಾರೆ.
+
+
ಸಮಯಾವಕಾಶದ ಆಧಾರದ ಮೇಲೆ ಪೋಕರಿ ಹುಡುಗರಿಗೆ ಸಂಭಾಷಣೆಗಳನ್ನು ಇಟ್ಟುಕೊಳ್ಳಬಹುದು. ಈ ಸಂಭಾಷಣೆಯು, ಅವರು ಪೋಕರಿ ಹುಡುಗರು ಎನ್ನುವುದನ್ನು ಬಿಂಬಿಸುವಂತೆ ಇರಬೇಕು.
+
+
===== ಪಾತ್ರಾಭಿನಯ ೨ - ಬಸ್ಸು =====
+
+
===== ಪಾತ್ರಗಳು =====
+
ಶ್ರೇಯಾ, ಮೊನಿಷಾ - ಕಿಶೋರಿಯರು
+
+
೧ ಪುರುಷ ಬಸ್ ನಿರ್ವಾಹಕ
+
+
೧ ಪುರುಷ ಪ್ರಯಾಣಿಕ
+
+
೨ ನಿಮಿಷ
+
+
ಶ್ರೇಯಾ ಮತ್ತು ಮೊನಿಷಾ ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿರುತ್ತಾರೆ. ಕಂಡಕ್ಟರ್ ಟಿಕೆಟ್ ಕೊಡಲು ಬಂದವನು ಮೈಮೇಲೆ ಬೀಳುತ್ತಾನೆ. ಪುರುಷ ಪ್ರಯಾಣಿಕ ಅವರನ್ನೇ ದಿಟ್ಟಿಸಿಕೊಂಡು ನೋಡುತ್ತಿರುತ್ತಾನೆ. ಕಂಡಕ್ಟರ್ ಅವನನ್ನು ಹಿಂದೆ ಹೋಗಿ ಅಂದಾಗ ಹುಡುಗಿಯರ ಮೈಸವರಿ, ಅವರ ಕಾಲು ಮೆಟ್ಟಿ ಹೋಗುತ್ತಾನೆ.
+
+
ಸಂಭಾಷಣೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ, ಸಮಯಾವಕಾಶವನ್ನು ನೋಡಿಕೊಂಡು ಹಾಕಿಕೊಳ್ಳಬಹುದು. ಹುಡುಗಿಯರ ಮಾತುಗಳು ಅವರ ವಯಸ್ಸು ಹಾಗೂ ಅವರ ಶಾಲೆಯ ವಿಷಯಗಳ ಸುತ್ತ ಇದ್ದರೆ ಉತ್ತಮ. ಬಸ್ ನಿರ್ವಾಹಕನ ಮಾತುಗಳು ಶಾಲಾ ಮಕ್ಕಳ ಬಗ್ಗೆ ನಿರ್ವಾಹಕರ ಕಿರಿಕಿರಿಯನ್ನು ಸೂಚಿಸುವಂತಿರಬಹುದು.
+
+
===== ಪಾತ್ರಾಭಿನಯ ೩ – ಹುಡುಗಿ, ಒಪ್ಪಿಗೆನಾ? =====
+
+
===== ಪಾತ್ರಗಳು =====
+
ಮೊನಿಷಾ - ಕಿಶೋರಿ
+
+
೧ ಕಿಶೋರಿಯ ಅಮ್ಮ
+
+
೧ ಕಿಶೋರಿಯ ಅಪ್ಪ
+
+
೧ ಮದುವೆ ಗಂಡು
+
+
೫ ನಿಮಿಷ
+
+
ಮೊನಿಷಾ ಓದುತ್ತಿರುತ್ತಾಳೆ.
+
+
ಅವಳ ಅಮ್ಮ ಬಂದು "ಏ ಮೊನಿಷಾ, ರೆಡಿ ಆಗು. ನಿನ್ನ ನೋಡೋಕೆ ಗಂಡು ಬಂದಿದಾನೆ. ಬಂದು ಕಾಫಿ ಕೊಡು" ಅಂತ ಹೇಳ್ತಾಳೆ.
+
+
“ನನಗೆ ಇಷ್ಟು ಬೇಗ ಮದುವೆ ಬೇಡ. ನಾನು ರೆಡಿ ಆಗಲ್ಲ" ಅಂತ ಮೊನಿಷಾ ಹೇಳ್ತಾಳೆ.
+
+
“ನನಗೊತ್ತು, ನೀನು ಚೆನ್ನಾಗಿ ಓದ್ತೀಯಾ ಅಂತ. ಆದ್ರೆ ಇವತ್ತು ಒಂದು ದಿವಸ ಹೋಗಿ ಕಾಫಿ ಕೊಡು. ಆಮೇಲೆ ಅಪ್ಪನ ಹತ್ರ ಮಾತಾಡೋಣ", ಅಂತ ಅಮ್ಮ ಹೇಳ್ತಾಳೆ.
+
+
ಮೊನಿಷಾ ಬಂದು ಮದುವೆ ಗಂಡಿಗೆ ಕಾಫಿ ಕೊಡುತ್ತಾಳೆ. ಮದುವೆ ಗಂಡು ಅವಳನ್ನು ನುಂಗುವಂತೆ ನೋಡಿ, ನನಗೆ ಹೆಣ್ಣು ಒಪ್ಪಿಗೆ ಎಂದು, ಇನ್ನೊಮ್ಮೆ ಕೆಕ್ಕರಿಸಿ ನೋಡಿ, ಹೊರಡುತ್ತಾನೆ.
+
+
ಅವನು ಹೋದ ಮೇಲೆ, ಅಮ್ಮ - ಮಗಳು ಪಿಸು-ಪಿಸು ಮಾತನಾಡುತ್ತಿರುವುದನ್ನು ಕೇಳಿ, ಅಪ್ಪ ಏನು ಮಾತನಾಡುತ್ತಿರುವಿರಿ? ಎಂದು ಗದರುತ್ತಾನೆ. ಆಗ ಕಿಶೋರಿ ಏನೂ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸುತ್ತಾಳೆ.
+
+
ಹುಡುಗ ಹೋದಮೇಲೆ ಅಪ್ಪನ ಮಾತುಗಳು ಮನೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿರುತ್ತವೆ.
+
+
ಸಮಯಾವಕಾಶವನ್ನು ನೋಡಿಕೊಂಡು ಮದುವೆ ಗಂಡು ಹಾಗು ಕಿಶೋರಿಯ ಅಪ್ಪನ ನಡುವಿನ ಮಾತುಕತೆಯನ್ನು ಹಾಕಿಕೊಳ್ಳಬಹುದು. ಈ ಮಾತುಕತೆಯು ವರದಕ್ಷಿಣೆ, ಮದುವೆಯ ಬೇರೆ ಬೇರೆ ವಿಷಯಗಳ ಬಗ್ಗೆ ಇದ್ದರೆ ಉತ್ತಮ.
+
+
===== ಪಾತ್ರಾಭಿನಯ - ೪ - ಚಿಕ್ಕ ಹುಡುಗಿ =====
+
+
===== ಪಾತ್ರಗಳು =====
+
ಶ್ರೇಯಾ - ಕಿಶೋರಿ ೧ - ವಯಸ್ಸಿನಲ್ಲಿ ದೊಡ್ಡವಳು
+
+
ಮೊನಿಷಾ - ಕಿಶೋರಿ ೨ - ವಯಸ್ಸಿನಲ್ಲಿ ಚಿಕ್ಕವಳು
+
+
೪ ನಿಮಿಷ
+
+
ಶ್ರೇಯಾ ಮತ್ತು ಮೊನಿಷಾ ರಸ್ತೆಯಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರು ಭಾರವಾದ ಶಾಲಾ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಂಡಿರತ್ತಾರೆ.
+
+
ಶ್ರೇಯಾ ನನಗೆ ಹೊಟ್ಟೆ ನೋವು ಎಂದು ಅಂತ ಹೇಳುತ್ತಾಳೆ.
+
+
ಆಗ ಮೊನಿಷಾ "ನೀನು ನಿನ್ನೆ ಆ ಕೆಟ್ಟ ನೀರಿನ ಗೋಲಗುಪ್ಪಾ ತಿಂದಿರ್ತೀಯಾ, ಅದಕ್ಕೆ ಬಂದಿರುತ್ತೆ ಹೊಟ್ಟೆ ನೋವು ನಿಂಗೆ" ಅಂತ ಹೇಳುತ್ತಾಳೆ.
+
+
ಶ್ರೇಯಾ ಏನೂ ಉತ್ತರ ನೀಡಲ್ಲ. ಹಾಗೆಯೇ ಆ ನೋವಲ್ಲೇ ನಡೆದುಕೊಂಡು ಹೋಗುತ್ತಿರುತ್ತಾಳೆ.
+
+
ಪುನಃ ಮೊನಿಷಾ "ಗೋಲಗುಪ್ಪಾ ಅಲ್ಲ ಅಂದ್ರೆ, ಬೇರೆ ಇನ್ನೇನೋ ತಿಂದಿರ್ತೀಯಾ. ಅಥವಾ ಗೋಭಿ ಮಂಚೂರಿ ತಿಂದ್ಯಾ? ಅಷ್ಟೊಂದು ದುಡ್ಡು ಎಲ್ ಸಿಕ್ತೆ? ಯಾರಾದ್ರೂ ಕೊಡ್ಸದ್ರ?” ಅಂತ ಎಲ್ಲಾ ಕೇಳುತ್ತಾಳೆ.
+
+
ಆಗ ಶ್ರೇಯಾಗೆ ಕಿರಿಕಿರಿಯಾಗಿ "ನೀನು ಚಿಕ್ಕ ಹುಡುಗಿ ನಿನಗೆ ಏನೂ ಗೊತ್ತಾಗಲ್ಲ, ಸುಮ್ಮನೆ ಇರು ನೀನು" ಅಂತ ಮೊನಿಷಾಳನ್ನು ಗದರಿಸುತ್ತಾಳೆ.
+
+
===== ಪಾತ್ರಾಭಿನಯ - ೫ - ಹಾಡು ಕೇಳ್ತೀಯಾ? =====
+
+
===== ಪಾತ್ರಗಳು =====
+
೧ ಪೋಲಿ ಹುಡುಗ
+
+
ಮೊನಿಷಾ - ಕಿಶೋರಿ
+
+
ಶಾರದಾ - ಕಿಶೋರಿಯ ಅಕ್ಕ
+
+
೪ ನಿಮಿಷ
+
+
ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ.
+
+
ಮೊನಿಷಾ ಮನೆಯ ಬಾಗಿಲಿನ ಹತ್ತಿರ ನಿಂತುಕೊಂಡು ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಹುಡುಗನನ್ನೇ ನೋಡುತ್ತಿರುತ್ತಾಳೆ.
+
+
ಹಿನ್ನಲೆಯಲ್ಲಿ ಪ್ರೇಮಗೀತೆ ಬರುತ್ತಿರುತ್ತದೆ.
+
+
ಆಗ ಶಾರದ ಬಂದು, ಶ್ರೇಯಾಳನ್ನು ನೋಡಿ ಅವಳಿಗೆ, "ದಾರೀಲಿ ಹೋಗೊರನ್ನ ನೊಡ್ಕೊಂಡು ಹಲ್ಲು ಗಿಂಜಿಕೊಂಡಿರುತ್ತೀಯಾ, ಕೊಡೆ ಇಲ್ಲಿ ಮೊಬೈಲ್, ಮನೇಲಿ ಏನೂ ಕೆಲ್ಸ ಮಾಡಲ್ಲ, ನಡಿ" ಎಂದು, ಇಯರ್ ಫೋನ್ ತೆಗೆದುಕೊಂಡು ಫೋನ್ ಕಸಿದುಕೊಳ್ಳುತ್ತಾಳೆ.
+
+
ಆಗ ಮೊನಿಷಾ "ಈ ಹಾಡನ್ನಾದ್ರೂ ಕೇಳಿ ಕೊಡ್ತೀನಿ, ಫೋನ್ ಕೊಡೆ" ಅಂತ ಗೋಗರಿಯುತ್ತಾಳೆ. ಆದರೆ ಶ್ರೇಯಾ, ಮೊನಿಷಾಳನ್ನು ದರದರನೆ ಎಳೆದುಕೊಂಡು ಹೋಗುತ್ತಾಳೆ.
+
+
ಈ ೫ ಪಾತ್ರಾಭಿನಯಗಳನ್ನು ಮಾಡಿ ಮುಗಿಸಿದ ನಂತರ ತರಗತಿಯು ತಹಬಂದಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
+
+
ಕಿಶೋರಿಯರನ್ನು ಪಾತ್ರಾಭಿನಯಗಳನ್ನು ನೋಡಿ ನಿಮಗೆ ಏನನ್ನಿಸಿತು ಎಂದು ಕೇಳುತ್ತೇವೆ.
+
+
ಅವರು "ತುಂಬಾ ಚೆನ್ನಾಗಿತ್ತು”, "ಸೂಪರ್ ಆಗಿತ್ತು" ಎಂದು ಹೇಳಬಹುದು. ಕೆಲವರು ಪಾತ್ರಾಭಿನಯದ ಸಂಭಾಷಣೆಗಳನ್ನು ಹೇಳಬಹುದು.
+
+
ಇದಾದ ನಂತರ, ಅವರನ್ನು ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುತ್ತೇವೆ. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್ ಇರುತ್ತಾರೆ.
+
+
ಗುಂಪಿನಲ್ಲಿ ಕುಳಿತುಕೊಂಡ ನಂತರ ಪಾತ್ರಾಭಿನಯಗಳ ಶೀರ್ಷಿಕೆಗಳನ್ನು ಬಳಸಿಕೊಂಡು ಗುಂಪಿನ ಚರ್ಚೆಯನ್ನು ಪ್ರಾರಂಭಿಸಬಹುದು.
+
+
ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು
+
# ಯಾವ ಪಾತ್ರಾಭಿನಯ ಇಷ್ಟ ಆಯಿತು? ಯಾಕೆ?
+
# ಯಾವ ಪಾತ್ರ ಇಷ್ಟ ಆಯಿತು? ಯಾಕೆ?
+
# ಕಥೆ ಇಷ್ಟ ಆಯ್ತು ಅಂದರೆ, ಯಾವ ಕಥೆ ಇಷ್ಟ ಆಯ್ತು?
+
ಒಬ್ಬೊಬ್ಬರು ಒಂದೊಂದು ಕಥೆ ಬಗ್ಗೆ ಹೇಳುತ್ತಾರೆ ಎಂದು ಅಂದುಕೊಳ್ಳಬಹುದು. ಎಲ್ಲಾ ವಿಷಯಗಳ ಬಗ್ಗೆಯೂ ಮಾತುಕತೆ ಆಗಿಲ್ಲ ಅಂದರೆ, ‘ಇನ್ನೇನು ಕಥೆಗಳಿದ್ದವು?’ ಎಂದು ಕೇಳುವುದು. ಹೀಗೆಯೇ ಪ್ರತಿ ಕಥೆಯ ಬಗ್ಗೆಯೂ ಕೇಳುವುದು.
+
+
ಕಿಶೋರಿಯರು ಏನೂ ಮಾತನಾಡದೇ ಇದ್ದಲ್ಲಿ ಈ ಕೆಳಗಿನ ಉದಾಹರಣೆಗಳನ್ನು ಬಳಸಿಕೊಂಡು ಗುಂಪಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬಹುದು.
+
+
"ಚಿಕ್ಕ ಹುಡುಗಿ ಕಥೆಯಲ್ಲಿ ಏನಾಗುತ್ತೆ?” ಎಂದು ಕೇಳಿದರೆ ಕಿಶೋರಿಯರು ಕಥೆ ಬಗ್ಗೆ ಮಾತನಾಡಬಹುದು.
+
+
"ಕಿಶೋರಿಯರಿಬ್ಬರೂ ಒಂದೇ ಕ್ಲಾಸ್, ಒಂದೇ ವಯಸ್ಸಿನೋರು ಅಂತ ಅನ್ಸುತ್ತಲ್ವಾ?” ಎಂದು ಕೇಳಿದರೆ ಕಿಶೋರಿಯರು 'ಇರಬಹುದು' ಎಂದು ಹೇಳಬಹುದು.
+
+
"ಹಾಗಿದ್ದಾಗ ದೊಡ್ಡೋರು ಚಿಕ್ಕೋರು ಅಂತ ಯಾಕೆ ಮಾತಾಡ್ಕೋತಿದಾರೆ? ಮತ್ತೆ ಇದಕ್ಕೂ ಹೊಟ್ಟೆ ನೋವಿಗೂ ಏನು ಸಂಬಂಧ?”
+
+
ಹೀಗೇಯೇ ಎಲ್ಲಾ ಕಥೆಗಳ ಬಗ್ಗೆಯೂ ಒಂದೊಂದಾಗಿ ಏನನ್ನಿಸಿತು ಎಂದು ಕೇಳವುದು.
+
+
"ಹಾಡು ಕೇಳ್ತೀಯಾ?ಕಥೆ ಬಗ್ಗೆ ಏನು ಅನ್ನಿಸಿತು?” ಎಂದು ಕೇಳಿದರೆ ಈ ಕೆಳಗಿನ ಅಂಶಗಳನ್ನು ಹೇಳಬಹುದು.
+
+
• ಚೆನ್ನಾಗಿತ್ತು.
+
+
• ಹುಡುಗಿನೇ ಹುಡುಗನನ್ನು ಹೆಚ್ಚು ನೋಡುತ್ತಿದ್ದಳು.
+
+
• ಅಕ್ಕ ಬಂದು ಬೈದಳು.
+
+
ಹೀಗೆ ಎಲ್ಲಾ ಕಥೆಗಳ ಬಗ್ಗೆ ಕೇಳುತ್ತೇವೆ.
+
+
ಇದಾದ ನಂತರ ಕಿಶೋರಿಯರಿಗೆ ಪಾತ್ರಾಭಿನಯಗಳಲ್ಲಿ ಬರುವ ಪಾತ್ರಗಳ ಜೊತೆ ಹೋಲಿಸಿಕೊಳ್ಳಲು ಹೇಳುವುದು.
+
+
"ಇದನ್ನೆಲ್ಲಾ ನೊಡಿದಾಗ, ಯಾವ ಪಾತ್ರ ನೋಡಿದರೆ ನಿಮಗೂ ಈ ಥರ ಆಗಿದೆ ಅಂಥ ಅನಿಸುತ್ತೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.
+
+
• ಚುಡಾಯಿಸುವುದು.
+
+
• ಕಾಲು ತುಳಿಯುವುದು.
+
+
• ಹೊಟ್ಟೆ ನೋವು.
+
+
• ಹುಡುಗ ಹುಡುಗಿ ಕಥೆ
+
+
ಇಲ್ಲಿಯವರೆಗೆ ಒಂದು ವಾರದ ಸಮಯ ಮುಗಿದಿರುತ್ತದೆ.
+
+
ಎರಡನೇ ವಾರದ ಚಟುವಟಿಕೆಗಳು
+
+
ಚಟುವಟಿಕೆಗಳನ್ನು ಹಿಂದಿನ ವಾರದ ಗುಂಪುಗಳಲ್ಲೇ ಮುಂದುವರೆಸುತ್ತೇವೆ. ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುತ್ತೇವೆ.
+
+
೧ ಮಗುವಿನ ಚಿತ್ರ ೨ ಕಿಶೋರಿಯರ ವಯಸ್ಸಿನ ಚಿತ್ರ
+
[[ಚಿತ್ರ:Gangamma hombegowda module 3.jpg|none|thumb|450x450px]]
+
+
೯-೧೦ ಜನರ ಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು ಹಾಗೂ ಅವರಲ್ಲೇ ೩ ಜನರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು.
+
+
ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.
+
+
“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.
+
+
ಅನ್ವಯ ಆದರೆ, ಏನೇನು ಅನ್ವಯ ಅಗುತ್ತವೆ? ಆಗಿಲ್ಲ ಅಂದರೆ ಏಕೆ ಆಗಲ್ಲ?
+
+
ಮಗುವಿನ ಚಿತ್ರದ ಬಗ್ಗೆ ಮೊದಲು ಕೇಳುತ್ತೇವೆ.
+
+
"ಮಗುವಿಗೆ ಹೊಟ್ಟೆ ನೋವು ಬರುತ್ತೆ" ಎಂದು ಕಿಶೋರಿಯರು ಹೇಳಬಹುದು.
+
+
ಆಮೇಲೆ ಉಳಿದ ಎರಡು ಗುಂಪುಗಳಿಗೆ ಬಂದ ಚಿತ್ರಗಳಿಗೆ ಏನೇನು ಅನ್ವಯ ಆಗುತ್ತದೆ ಎಂದು ಕೇಳುತ್ತೇವೆ.
+
+
• ಕಿಶೋರಿಯರು ಎಲ್ಲ ಕಥೆಗಳ ಬಗ್ಗೆ ಹೇಳಬಹುದು.
+
+
ಇದಾದ ನಂತರ ಈ ಕಿಶೋರಿಯರಿಗೆ ಏಷ್ಟು ವರ್ಷ ಇರಬಹುದು ಎಂದು ಕೇಳುತ್ತೇವೆ.
+
+
ಇದಾದ ನಂತರ ಗುಂಪಿನಿಂದ, ಕ್ಲಾಸ್‌ರೂಮಿಗೆ ಬರುತ್ತೇವೆ.
+
+
ಪ್ರತಿ ಫಸಿಲಿಟೇಟರ್‌ಗಳು ಅವರವರ ಗುಂಪುಗಳಲ್ಲಿ ಬಂದ ಅಂಶಗಳನ್ನು ಎಲ್ಲರ ಮುಂದೆ ಓದುತ್ತಾರೆ
+
+
ಮುಖ್ಯ ಫೆಸಿಲಿಟೇಟರ್ “ಈ ಚಿತ್ರಗಳಲ್ಲಿ ನಿಮ್ಮನ್ನ ಯಾವ ಚಿತ್ರಕ್ಕೆ ಹೋಲಿಕೆ ಮಾಡ್ಕೋತೀರಾ?”
+
+
ಕಿಶೋರಿಯರು ಒಂದು ಚಿತ್ರವನ್ನು ಹೇಳುತ್ತಾರೆ.
+
+
"ಏಕೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.
+
+
• ಒಂದೇ ವಯಸ್ಸು.
+
+
• ಒಂದೇ ತರಹದ ಸಮಸ್ಯೆಗಳು.
+
+
• ಒಂದೇ ತರಹದ ಸನ್ನಿವೇಶಗಳು.
+
+
• ಅವರಿಗೆ ಆಗಿರೋದೆಲ್ಲಾ ನಮಗೂ ಅಗುತ್ತೆ.
+
+
= ಉಪಸಂಹಾರ =
+
ಫೆಸಿಲಿಟೇಟರ್ ಈ ಕೆಳಗಿನ ಅಂಶಗಳನ್ನು ಹೇಳಬಹುದು. ಹೇಳುವ ರೀತಿ ವಿಧಾನಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಹುದು.
+
+
ಹಿಂದಿನ ವಾರಗಳಲ್ಲಿ ನಿಮ್ಮ ಜೊತೆ ಮಾತನಾಡಿದಾಗ ಬೇರೆ ಬೇರೆ ಸಮಸ್ಯೆಗಳನ್ನು ಗುರುತಿಸಿದ್ದೇವೆ.
+
+
ಉದಾಹರೆಣೆಗೆ
+
+
• ಸ್ಕೂಲಿನಿಂದ ಹೋಗುವಾಗ ರೇಗಿಸುತ್ತಾರೆ
+
+
• ಬಸ್‌ನಲ್ಲಿ ಕಾಲು ತುಳಿಯುತ್ತಾರೆ.
+
+
ಹಾಗೂ, ಈ ಸಮಸ್ಯೆಗಳು ಕೇವಲ ನಮ್ಮದೊಂದೇ ಅಲ್ಲ, ಎಲ್ಲರದ್ದೂ ಅಂತ ತಿಳಿದುಕೊಂಡಿದ್ದೇವೆ.
+
+
ಆಮೇಲೆ ಹಿಂದಿನ ವಾರ ಪಾತ್ರಾಭಿನಯಗಳ ಮಾಡಿದ್ದೆವು. ಈ ಪಾತ್ರಾಭಿನಯಗಳ ಮೂಲಕ ಹಾಗೂ ಗುಂಪಿನ ಚರ್ಚೆಗಳ ಮೂಲಕ ಯಾವ ವಯಸ್ಸಿನ ಹೆಣ್ಣುಮಕ್ಕಳಿಗೆ ಪಾತ್ರಾಭಿನಯಗಳಲ್ಲಿ ಹೇಳಿರುವ ಸಮಸ್ಯೆಗಳು ಬರಬಹುದು ಅಂತ ಗುರುತಿಸಿದ್ದೇವೆ.
+
+
ಆಮೇಲೆ ನೀವು ಹೇಳಿದ ಹಾಗೆ ಇವರೆಲ್ಲಾ ನಿಮ್ಮ ವಯಸ್ಸಿನ ಹುಡುಗಿಯರೇ ಅಂತ.
+
+
೧೨ ವರ್ಷಕ್ಕಿಂತ ಕಮ್ಮಿ ವಯಸ್ಸನ್ನ ಬಾಲ್ಯಾವಸ್ಥೆ ಅಂತ ಹೇಳಬಹುದು. ೧೯ ವರ್ಷಕ್ಕಿಂತ ಜಾಸ್ತಿ ವಯಸ್ಸನ್ನ ಪ್ರೌಢಾವಸ್ಥೆ ಅಂತ ಹೇಳಬಹುದು. ಹಾಗೇ ಆ ಮಧ್ಯದಲ್ಲಿ ಇರುವ ೧೨- ೧೯ ವಯಸ್ಸು. ಅದನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.
+
+
ಈ ವಯಸ್ಸನ್ನೇ ಅಥವಾ ನಿಮ್ಮ ವಯಸ್ಸನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.
+
+
ಇದನ್ನ '''''ಹದಿಹರೆಯ, ಟೀನೇಜ್''''' ಎಂದು ಹೇಳಬಹುದು.
+
+
ನಾವು ತರಗತಿಯಲ್ಲಿ ಏನೆಂದು ಕರೆಯೋಣ ಎಂದು ನಿರ್ಧರಿಸಿಕೊಳ್ಳುತ್ತೇವೆ.
+
+
ನಿಮಗೆ ಗೊತ್ತಿರುವ ಹಾಗೆ, ಟೀನೇಜ್‌ನಲ್ಲಿ, ಶಾರೀರಿಕ ಬದಲಾವಣೆ, ಮಾನಸಿಕ ಹಾಗೂ ಬೌಧ್ಧಿಕ ಬದಲಾವಣೆಗಳು ಅಗುತ್ತವೆ. ಇದು ಹುಡುಗೀರಿಗೊಂದೇ ಅಲ್ಲ. ಹುಡುಗರಿಗೂ ಆಗುತ್ತವೆ.
+
+
ಶಾರೀರಿಕವಾಗಿ, ಎತ್ತರ ಜಾಸ್ತಿ ಆಗಬಹುದು. ಬೇರೆ ಬೇರೆ ವಯಸ್ಸಲ್ಲಿ ದೊಡ್ಡೋರಾಗಬಹುದು. ಹುಡುಗರಿಗೆ ಧ್ವನಿ ಗಡಸು ಆಗಬಹುದು.
+
+
ಮಾನಸಿಕ ಬದಲಾವಣೆಗಳನ್ನು ನೋಡಿದರೆ, ನಮ್ಮ ಉಡುಪಿನ ಶೈಲಿ ಬದಲಾಗಬಹುದು. ನಾವು ಯಾವ ಥರ ಬಟ್ಟೆ ತೊಡಬೇಕು, ಕೂದಲು ಯಾವ ಥರ ಇರಬೇಕು ಎಂದು ನಾವೇ ಯೋಚಿಸಲು ಶುರು ಮಾಡಿರಬಹುದು.
+
+
ಯಶ್, ದರ್ಶನ್, ವಿಜಯ್ ಎಲ್ಲಾ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.
+
+
ಅಥವಾ ಗಂಡುಮಕ್ಕಳಿಗೆ ರಚಿತಾ ರಾಮ್, ತಮನ್ನಾ, ದೀಪಿಕಾ ಪಡುಕೋಣೆ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.
+
+
ಬೌಧ್ಧಿಕವಾಗಿ ಕೆಲವೊಂದು ವಿಷಯಗಳು ಅರ್ಥ ಆಗಲು ಶುರು ಆಗಬಹುದು.
+
+
ಚಿತ್ರಕಥೆ ಮೊದಲು ಅರ್ಥ ಆಗ್ತಾ ಇರಲಿಲ್ಲ, ಈಗ ಅರ್ಥ ಆಗುತ್ತೆ. ಪರಿಸರ, ಮಾಲಿನ್ಯದ ಬಗ್ಗೆ ಅರ್ಥ ಆಗುತ್ತದೆ.
+
+
ಹೀಗೇ ಹಲವಾರು ಬದಲಾವಣೆಗಳು ನಮ್ಮಲ್ಲಿ ಆಗಬಹುದು.
+
+
ಇವುಗಳನ್ನೆಲ್ಲ ಒಟ್ಟು ಸೇರಿಸಿ ನಾವು ಅದನ್ನ ಟೀನೇಜ್ ಅಂತ ಕರೆಯಬಹುದೆ? ಎಂದು ಕೇಳುವುದು.
+
+
ಹೌದು ಎಂದು ಕಿಶೋರಿಯರು ಹೇಳಬಹುದು.
+
+
ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ.
+
+
== ಬೇಕಾಗಿರುವ ಸಂಪನ್ಮೂಲಗಳು ==
+
• ಪಾತ್ರಾಭಿನಯಕ್ಕೆ ಬೇಕಾದ ಪ್ರಸಾಧನ(ಮೇಕಪ್) ಸಾಮಗ್ರಿಗಳು.
+
+
• ದಾವಣಿಗಳು - ೨
+
+
• ಸ್ಕೆಚ್ ಪೆನ್ - ೩ ಸೆಟ್
+
+
• ಕಿಶೋರಿಯರ ಹಾಗೂ ಮಗುವಿನ ಪ್ರಿಂಟ್ ತೆಗೆದ ಚಿತ್ರಗಳು
+
+
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ ==
+
ಮುಖ್ಯವಾಗಿ ಒಬ್ಬರು ಹಾಗೂ ಗುಂಪಿನ ಚರ್ಚೆಗೆ ಒಟ್ಟು ೩, ಪಾತ್ರಾಭಿನಯ ಮಾಡಲು ೪
+
+
== ಒಟ್ಟು ಸಮಯ ==
+
೧೬೦ ನಿಮಿಷಗಳು (೨ ತರಗತಿಗಳು ಸೇರಿ)
+
+
== ಇನ್‌ಪುಟ್‌ಗಳು ==
+
• ನಾವು ಮಾಡುವ ಪಾತ್ರಾಭಿನಯಗಳು
+
+
• ಮಗು ಹಾಗೂ ಕಿಶೋರಿಯರ ಚಿತ್ರಗಳು
+
+
== ಔಟ್‌ಪುಟ್‌ಗಳು ==
+
• ಗುಂಪಿನ ಚರ್ಚೆಯಲ್ಲಿ ಬರುವ ಅಂಶಗಳು
+
+
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
+
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
+
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]