"ಚಿಗುರು ೧ - ಪರಿಚಯದ ಹೊಸ ಹೆಜ್ಜೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ using HotCat) |
|||
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
− | = ಸಾರಾಂಶ = | + | ==ಸಾರಾಂಶ == |
ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಡಿಜಿಟಲ್ ಕಂಟೆಂಟ್ (ವಿಷಯ) ಗಳನ್ನು ಉಪಯೋಗಿಸಿ ಸ್ಥಳದಲ್ಲಿಯೇ ಜೋಡಿಸಿದ ಡಿಜಿಟಲ್ ಕಥೆ ತೋರಿಸುವುದರಿಂದ ಕಿಶೋರಿಯರಿಗೆ ತಂತ್ರಜ್ಞಾನದ ಬಗ್ಗೆ ಇರುವ ಹಿಂಜರಿಕೆ, ಸಂಕೋಚಗಳು ಕಡಿಮೆಯಾಗುತ್ತವೆ ಹಾಗೂ ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುತ್ತದೆ. | ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಡಿಜಿಟಲ್ ಕಂಟೆಂಟ್ (ವಿಷಯ) ಗಳನ್ನು ಉಪಯೋಗಿಸಿ ಸ್ಥಳದಲ್ಲಿಯೇ ಜೋಡಿಸಿದ ಡಿಜಿಟಲ್ ಕಥೆ ತೋರಿಸುವುದರಿಂದ ಕಿಶೋರಿಯರಿಗೆ ತಂತ್ರಜ್ಞಾನದ ಬಗ್ಗೆ ಇರುವ ಹಿಂಜರಿಕೆ, ಸಂಕೋಚಗಳು ಕಡಿಮೆಯಾಗುತ್ತವೆ ಹಾಗೂ ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುತ್ತದೆ. | ||
− | + | == ಊಹೆಗಳು == | |
− | |||
− | |||
− | |||
− | = ಊಹೆಗಳು = | ||
# ಎಲ್ಲಾ ಮಾಡ್ಯೂಲ್‌ಗಳಿಗೆ ಸಾಮಾನ್ಯ ಕಾರಣಗಳು | # ಎಲ್ಲಾ ಮಾಡ್ಯೂಲ್‌ಗಳಿಗೆ ಸಾಮಾನ್ಯ ಕಾರಣಗಳು | ||
## ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು. | ## ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು. | ||
೩೦ ನೇ ಸಾಲು: | ೨೬ ನೇ ಸಾಲು: | ||
## ಪೂರಕ ಅಂಶಗಳು - ಭಾಷಾ ಗ್ರಹಿಕೆ, ತಂತ್ರಜ್ಞಾನದ ಒಲವು, ಸೃಜನಶೀಲರು, ಉತ್ಸುಕ ಕಿಶೋರಿಯರು. | ## ಪೂರಕ ಅಂಶಗಳು - ಭಾಷಾ ಗ್ರಹಿಕೆ, ತಂತ್ರಜ್ಞಾನದ ಒಲವು, ಸೃಜನಶೀಲರು, ಉತ್ಸುಕ ಕಿಶೋರಿಯರು. | ||
− | = ಉದ್ದೇಶಗಳು = | + | == ಉದ್ದೇಶಗಳು == |
# ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು. | # ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು. | ||
# ತಂತ್ರಜ್ಞಾನದ ಬಗ್ಗೆ ಆಸಕ್ತರನ್ನಾಗಿಸುವುದು ಹಾಗು ಅದರ ಸುತ್ತಲ ಕ್ಲಿಷ್ಟಕರ ಚಿತ್ರಣವನ್ನು ಹೋಗಲಾಡಿಸಿ ಸರಳಗೊಳಿಸುವುದು. | # ತಂತ್ರಜ್ಞಾನದ ಬಗ್ಗೆ ಆಸಕ್ತರನ್ನಾಗಿಸುವುದು ಹಾಗು ಅದರ ಸುತ್ತಲ ಕ್ಲಿಷ್ಟಕರ ಚಿತ್ರಣವನ್ನು ಹೋಗಲಾಡಿಸಿ ಸರಳಗೊಳಿಸುವುದು. | ||
# ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು. | # ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು. | ||
− | = ಪ್ರಕ್ರಿಯೆ = | + | == ಪ್ರಕ್ರಿಯೆ == |
ಕಿಶೋರಿಯರ ಹುಬ್ಬೇರುವಂತೆ ಮಾಡಲು ಅವರ ಚಿತ್ರಗಳನ್ನು ನಾವು ಕ್ಲಿಕ್ಕಿಸುತ್ತೇವೆ. | ಕಿಶೋರಿಯರ ಹುಬ್ಬೇರುವಂತೆ ಮಾಡಲು ಅವರ ಚಿತ್ರಗಳನ್ನು ನಾವು ಕ್ಲಿಕ್ಕಿಸುತ್ತೇವೆ. | ||
೫೯ ನೇ ಸಾಲು: | ೫೫ ನೇ ಸಾಲು: | ||
* ಈ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು. | * ಈ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು. | ||
− | = ಬೇಕಾದ ಸಂಪನ್ಮೂಲಗಳು = | + | == ಬೇಕಾದ ಸಂಪನ್ಮೂಲಗಳು == |
− | + | * ಕ್ಯಾಮೆರ ಹಾಗು ಟ್ರೈಪಾಡ್ - ೧ | |
− | + | * ವೀಡಿಯೋ ಎಡಿಟಿಂಗ್ ಸಾಫ್ಟ್‌ವೇರ್ (ಕೆಡೆನ್ ಲೈವ್) ಹಾಗು ಆಡಿಯೋ ಎಡಿಟಿಂಗ್ ಸಾಫ್ಟ್‌ವೇರ್ (ಅಡಾಸಿಟಿ) ಇರುವ ಕಂಪ್ಯೂಟರ್/ಲ್ಯಾಪ್‌ಟಾಪ್ - ೧ | |
− | + | * ಪ್ರೊಜೆಕ್ಟರ್ -೧ | |
− | + | * ಸ್ಪೀಕರ್ -೧ | |
− | + | * ಮುಂಚೆಯೇ ಸಿದ್ಧಪಡಿಸಿದ ಆಡಿಯೋ ಕಥೆ, ಸಂಬಂಧಿಸಿದ ಚಿತ್ರಗಳು ಹಾಗು ಸೂಕ್ತ ಹಿನ್ನೆಲೆ ಸಂಗೀತದ ತುಣುಕುಗಳು. | |
− | + | * ಖಾಲಿ ಚಾರ್ಟ್ | |
− | + | * ಸ್ಕೆಚ್ ಪೆನ್‌ಗಳು | |
− | = ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ = | + | == ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪ == |
ಡಿಜಿಟಲ್ ಕಥೆಯ ಸಂಕಲನಕಾರರು ಇಬ್ಬರು (೨). ಈ ಸಾಮರ್ಥ್ಯ ಮೇಲಿನ ಫೆಸಿಲಿಟೇಟರ್‌ಗಳಲ್ಲೇ ಇರಬಹುದು. | ಡಿಜಿಟಲ್ ಕಥೆಯ ಸಂಕಲನಕಾರರು ಇಬ್ಬರು (೨). ಈ ಸಾಮರ್ಥ್ಯ ಮೇಲಿನ ಫೆಸಿಲಿಟೇಟರ್‌ಗಳಲ್ಲೇ ಇರಬಹುದು. | ||
− | = ಒಟ್ಟು ಸಮಯ = | + | == ಒಟ್ಟು ಸಮಯ == |
೮೦ ನಿಮಿಷಗಳು | ೮೦ ನಿಮಿಷಗಳು | ||
− | = ಇನ್‌ಪುಟ್‌ಗಳು = | + | == ಇನ್‌ಪುಟ್‌ಗಳು == |
* ಡಿಜಿಟಲ್ ಕಥೆ | * ಡಿಜಿಟಲ್ ಕಥೆ | ||
* ಗೀಟು ಹಾಕಿದ ಚಾರ್ಟ್ | * ಗೀಟು ಹಾಕಿದ ಚಾರ್ಟ್ | ||
− | = ಔಟ್‌ಪುಟ್‌ಗಳು = | + | == ಔಟ್‌ಪುಟ್‌ಗಳು == |
* ಕಿಶೋರಿಯರು ಬರೆದ ಚಿತ್ರಪಟ | * ಕಿಶೋರಿಯರು ಬರೆದ ಚಿತ್ರಪಟ | ||
* ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ | * ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ | ||
೮೪ ನೇ ಸಾಲು: | ೮೦ ನೇ ಸಾಲು: | ||
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | ||
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]] | ||
+ | [[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]] |
೧೪:೫೭, ೨೪ ಜೂನ್ ೨೦೨೦ ದ ಇತ್ತೀಚಿನ ಆವೃತ್ತಿ
ಸಾರಾಂಶ
ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಡಿಜಿಟಲ್ ಕಂಟೆಂಟ್ (ವಿಷಯ) ಗಳನ್ನು ಉಪಯೋಗಿಸಿ ಸ್ಥಳದಲ್ಲಿಯೇ ಜೋಡಿಸಿದ ಡಿಜಿಟಲ್ ಕಥೆ ತೋರಿಸುವುದರಿಂದ ಕಿಶೋರಿಯರಿಗೆ ತಂತ್ರಜ್ಞಾನದ ಬಗ್ಗೆ ಇರುವ ಹಿಂಜರಿಕೆ, ಸಂಕೋಚಗಳು ಕಡಿಮೆಯಾಗುತ್ತವೆ ಹಾಗೂ ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುತ್ತದೆ.
ಊಹೆಗಳು
- ಎಲ್ಲಾ ಮಾಡ್ಯೂಲ್‌ಗಳಿಗೆ ಸಾಮಾನ್ಯ ಕಾರಣಗಳು
- ಹಿಂದಿನ ತರಗತಿಯಲ್ಲಿ ಶಿಕ್ಷಕರು ಶಿಕ್ಷಿಸಿದ್ದರೆ ಕಿಶೋರಿಯರು ಸಪ್ಪೆಯಾಗಿರಬಹುದು.
- ಇಡೀ ದಿನ ಅವರಿಗೆ ನಿಶ್ಯಕ್ತಿ ಇರಬಹುದು(ತಿಂಡಿ ತಿನ್ನದೆ ಬಂದಿರಬಹುದು ,ಅನಾರೋಗ್ಯ,ಮುಟ್ಟಾಗಿರಬಹುದು)
- ಒಟ್ಟು ಕಿಶೋರಿಯರ ಸಂಖ್ಯೆ - ೨೯
- ಭಾಷೆ
- ಬೋಧನಾ ಮಾಧ್ಯಮ – ಕನ್ನಡ
- ಕಿಶೋರಿಯರು ವಿವಿಧ ಭಾಷಾ ಹಿನ್ನಲೆಗಳಿಂದ ಬಂದಿರಬಹುದು. ತೆಲುಗು, ತಮಿಳು, ಉರ್ದು ಇತ್ಯಾದಿ.
- ಸ್ಥಳ - ಪ್ರೊಜೆಕ್ಟರ್ ವ್ಯವಸ್ಥೆ ಇರುವ ಕೊಠಡಿ.
- ಕಿಶೋರಿಯರು ಬಡತನದ ಕೆಳಗಿನ ಅಥವಾ ಮೇಲಿನ ರೇಖೆಗಳಿಗೆ ಸೇರಿರುವವರಿರಬಹುದು (BPL or APL).
- ಕೆಲವು ಕಿಶೋರಿಯರು :
- ಏಕ ಪೋಷಕ ಕುಟುಂಬಗಳಿಂದ ಬಂದಿರಬಹುದು
- ಋತುಕಾಲಿಕ ವಲಸಿಗರ ಕುಟುಂಬಗಳಿಂದ ಬಂದಿರಬಹುದು.
- ಅಮ್ಮ ಅಥವಾ ಅಪ್ಪ ವಿವಾಹೇತರ ಸಂಬಂಧವನ್ನು ಹೊಂದಿರಬಹುದು. ಇದರಿಂದ ಕಿಶೋರಿಯರಿಗೆ ಮುಜುಗರ ಹಾಗು ಕೀಳರಿಮೆ ಇರಬಹುದು. ಹಾಗಾಗಿ ಅವರು ತಮ್ಮ ಕೌಟುಂಬಿಕ ವಿಷಯಗಳನ್ನು ಮಾತಾಡಲು ಹಿಂಜರಿಯಬಹುದು (ಈ ವಿಷಯದ ಬಗ್ಗೆ ಒಬ್ಬರಿಗಿಂತ ಹೆಚ್ಚು ಶಾಲಾ ಮುಖ್ಯೋಪಾಧ್ಯಾಯರು ಹಂಚಿಕೊಂಡಿದ್ದಾರೆ).
- ಅಮ್ಮಅಥವಾ ಅಪ್ಪ ಮಾಡುವ ವೃತ್ತಿಯ ಬಗ್ಗೆ ನಾಚಿಕೆ ಇರಬಹುದು.
- ಕೆಲವಷ್ಟು ಕಿಶೋರಿಯರು ಮನೆಯಲ್ಲಿ/ಹೊರಗೆ ಹಲವು ರೀತಿಯ ಶೋಷಣೆಗಳಿಗೆ ಒಳಗಾಗುತ್ತಿರಬಹುದು.
- ಕೆಲವು ಕಿಶೋರಿಯರು ಶಾಲೆಗೆ ಬರುವ ಮುನ್ನ ಮನೆಯ ಆರ್ಥಿಕ ಪರಿಸ್ಥಿತಿಗೆ ಸಹಾಯ ಮಾಡಲು ವಿವಿಧ ವೃತ್ತಿಗಳನ್ನು ಮಾಡುತ್ತಿರಬಹುದು ಅಥವಾ ಅವರ ಅಪ್ಪ ಅಮ್ಮಂದಿರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿರಬಹುದು.
- ಶಾಲೆಗೆ ಕಿಶೋರಿಯರು ನಡೆದು/ಬಸ್ಸಿನಲ್ಲಿ/ಪೋಷಕರ ಜೊತೆ ದ್ವಿಚಕ್ರ ವಾಹನಗಳಲ್ಲಿ ಬರಬಹುದು. ಅದರಿಂದ ನಮ್ಮ ಚರ್ಚೆಯ ಮೇಲೆ ಪರಿಣಾಮ ಬೀರಬಹುದು.
- ಹಿಂದಿನ ತರಗತಿಯ ಒಳ್ಳೆಯ ಪಾಠ/ಅನುಭವ ಕಿಶೋರಿಯರ ಉತ್ಸಾಹ ಹೆಚ್ಚಿಸುವಂತೆ ಮಾಡಬಹುದು.
- ಹಿಂದಿನ ತರಗತಿಯಲ್ಲಿ ಕಹಿ ಅನುಭವವಾಗಿರುವುದರಿಂದ ಕಿಶೋರಿಯರು ನಿರುತ್ಸಾಹಿಗಳಾಗಿರಬಹುದು.
- ಕಿಶೋರಿಯರ ವಿಭಿನ್ನ ಕಲಿಕಾ ಶೈಲಿಗಳ ಬಗ್ಗೆ ನಮ್ಮ ಗಮನವಿರಬೇಕು.
- ನ್ಯೂನ್ಯತೆಗಳು - ಭಾಷೆಯನ್ನು ಬರೆಯಲು, ಓದಲು ಬರುವುದಿಲ್ಲ ಅಥವಾ ಕಲಿಕಾ ತೊಂದರೆ.
- ಪೂರಕ ಅಂಶಗಳು - ಭಾಷಾ ಗ್ರಹಿಕೆ, ತಂತ್ರಜ್ಞಾನದ ಒಲವು, ಸೃಜನಶೀಲರು, ಉತ್ಸುಕ ಕಿಶೋರಿಯರು.
ಉದ್ದೇಶಗಳು
- ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
- ತಂತ್ರಜ್ಞಾನದ ಬಗ್ಗೆ ಆಸಕ್ತರನ್ನಾಗಿಸುವುದು ಹಾಗು ಅದರ ಸುತ್ತಲ ಕ್ಲಿಷ್ಟಕರ ಚಿತ್ರಣವನ್ನು ಹೋಗಲಾಡಿಸಿ ಸರಳಗೊಳಿಸುವುದು.
- ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.
ಪ್ರಕ್ರಿಯೆ
ಕಿಶೋರಿಯರ ಹುಬ್ಬೇರುವಂತೆ ಮಾಡಲು ಅವರ ಚಿತ್ರಗಳನ್ನು ನಾವು ಕ್ಲಿಕ್ಕಿಸುತ್ತೇವೆ.
ಇದೇ ಸಮಯದಲ್ಲಿ ಉಳಿದ ಕಿಶೋರಿಯರಿಗೆ ಏನಾದರೂ ತಮಾಷೆಯ ಆಟ ಆಡಿಸಬಹುದು. ಒಂದು ಚಾರ್ಟ್‌ನ ಮೇಲೆ ಒಂದು ಗೀಟು ಅಥವಾ ವೃತ್ತವನ್ನು ಬರೆದು, ಒಬ್ಬರಾದ ಮೇಲೆ ಒಬ್ಬರು ಬಂದು ಚಿತ್ರವನ್ನು ಮುಂದುವರಿಸಿಕೊಂಡು ಹೋಗಲು ಹೇಳುವುದು. ಕೊನೆಯಲ್ಲಿ ಒಂದು ಅರ್ಥಪೂರ್ಣ ಚಿತ್ರ ಬರುವಂತೆ ಮಾಡುವುದು ಈ ಆಟದ ಗುರಿ. ಸುಮಾರು ೨೦ ನಿಮಿಷಗಳು
ನಂತರದ ತರಗತಿಯ ಸಮಯದಲ್ಲಿ ಸಂಕಲನ ಮಾಡುತ್ತೇವೆ (ಮೇಲೆ ಹೇಳಿದ ಇಬ್ಬರು ಫೆಸಿಲಿಟೇಟರ್ಸ್) ಸುಮಾರು ೧೦ ನಿಮಿಷಗಳು
ಇದೇ ಹತ್ತು ನಿಮಿಷಗಳಲ್ಲಿ ಉಳಿದ ಇಬ್ಬರು ಫೆಸಿಲಿಟೇಟರ್ಸ್ ಕಿಶೋರಿಯರ ಪರಿಚಯದ ಚಟುವಟಿಕೆಯನ್ನು ಮಾಡುತ್ತಾರೆ. ಈ ಚಟುವಟಿಕೆಯಲ್ಲಿ ಕಿಶೋರಿಯರು ತಮ್ಮ ಬಲಭಾಗಕ್ಕೆ ಇರುವವರ ಹೆಸರು, ಅವರ ನೆಚ್ಚಿನ ಹೀರೋ, ನೆಚ್ಚಿನ ಅಡಿಗೆ, ಇಷ್ಟದ ಆಟ ಯಾವುದು? ಎಂಬ ಪ್ರಶ್ನೆಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತಾರೆ.
ನಂತರ ಹೊಸ ಹೆಜ್ಜೆ ಹೊಸ ದಿಶೆಯ ಮೊಟ್ಟಮೊದಲ ಡಿಜಿಟಲ್ ಕಥೆಯನ್ನು ತೋರಿಸುತ್ತೇವೆ. (ಸುಮಾರು ೩ರಿಂದ ೪ ನಿಮಿಷಗಳ ವಿಡಿಯೋ).
ಡಿಜಿಟಲ್ ಕಥೆಯನ್ನು ನೋಡಿದ ನಂತರ ನಿಮಗೆ ಏನು ಅನ್ನಿಸಿತು? ಎಂಬ ಪ್ರಶ್ನೆಯ ಮೂಲಕ ಚರ್ಚೆಯನ್ನು ಆರಂಭಿಸುತ್ತೇವೆ.
ಅನಿಸಿಕೆಗಳನ್ನು ಹಂಚಿಕೊಳ್ಳಲು ಸಹಾಯವಾಗುವಂತೆ ನಮ್ಮಿಂದ ಹಂಚಿಕೆ ಶುರುವಾಗುತ್ತದೆ ನಂತರ ಅವರನ್ನು ಕೇಳುತ್ತೇವೆ. ಸುಮಾರು ೧೦ ನಿಮಿಷಗಳು
ಹೊಸ ಹೆಜ್ಜೆ ಹೊಸ ದಿಶೆಯ ಬಗ್ಗೆ ಪರಿಚಯ. ಇದು ಮಾಮೂಲಿ ಪಠ್ಯ ವಿಷಯಗಳ ತರಗತಿಯಲ್ಲ ಎಂದು ತಿಳಿಸುವುದು
- ೪ ಜನ ಫೆಸಿಲಿಟೇಟರ್‌ಗಳು ಚಿಕ್ಕ ಗುಂಪುಗಳಲ್ಲಿ ಚರ್ಚಿಸುತ್ತೇವೆ.
- ೪ ಚಿಕ್ಕ ಗುಂಪುಗಳಲ್ಲಿ -ನಾಲ್ಕು ಬಣ್ಣಗಳ ಸ್ಟಿಕರ್ (ಪುಸ್ತಕಕ್ಕೆ ಅಂಟುವಂತದ್ದು) ೨ ಬಾಕ್ಸ್ ನಲ್ಲಿ ಹಾಕಿ ಅವರಿಗೆ ಪ್ರತಿಯೊಬ್ಬರೂ ಒಂದನ್ನು ತೆಗೆದುಕೊಳ್ಳಲು ಹೇಳುವುದು (ಗುಲಾಬಿ, ನೀಲಿ, ನೇರಳೆ ಹಾಗು ಹಸಿರು)
- ಪ್ರತಿಯೊಂದು ಬಣ್ಣ ಒಂದೊಂದು ಗುಂಪಿನ ಬಣ್ಣವಾಗುತ್ತದೆ. ಆಯಾ ಚಿಕ್ಕ ಗುಂಪಿನಲ್ಲಿ ಮುಂದಿನ ಚಟುವಟಿಕೆ ಆಗುತ್ತದೆ.
- ನಾಲ್ಕು ಗುಂಪಿನಲ್ಲಿ ಕುಳಿತುಕೊಂಡ ನಂತರ ಆಡಿಯೊ ರಿಕಾರ್ಡರ್, ಟ್ಯಾಬು, ಕ್ಯಾಮರಗಳನ್ನು ಬಳಸಿಕೊಂಡು ನಿಮಗೆ ಬೇಕಿರೋ ವಿಷಯದ ಬಗ್ಗೆ ಕಥೆ, ದಾಖಲೆ ಅಥವಾ ಇನ್ನೇನಾದರೂ ಸೃಷ್ಟಿಸಬಹುದು ಎನ್ನುವುದಾದರೆ ನೀವು ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರ? (ಉದಾಹರಣೆಗೆ: ನಿಮ್ಮ ನೆಚ್ಚಿನ ಹೀರೋ ಬಗ್ಗೆ, ಕುಂಟಾಬಿಲ್ಲೆ ಬಗ್ಗೆ, ರಜ ಹೇಗಿತ್ತು ಎನ್ನುವುದರ ಬಗ್ಗೆ) ಅವರು ಹಂಚಿಕೊಂಡಂತೆ ದಾಖಲಾತಿ ಮಾಡಿಕೊಳ್ಳಬೇಕು.
- ಇದಾದ ನಂತರ ಸಣ್ಣ ಗುಂಪಿನ ಚರ್ಚೆಯನ್ನು ಮುಗಿಸಿ ಎಲ್ಲರೂ ಮತ್ತೆ ದೊಡ್ಡ ಗುಂಪಾಗಬೇಕು.
- ನಾವು ಪ್ರತೀ ______ವಾರ ___________ ಪೀರಿಯಡ್‌ನಲ್ಲಿ ನಿಮ್ಮ ಜೊತೆ ಈ ರೀತಿಯ ಚಟುವಟಿಕೆಗಳನ್ನ ಮಾಡೋಣ ಅಂದುಕೊಂಡೀದ್ದೀವಿ. ನೀವು ಹೇಳಿದ ವಿಷಯಗಳ ಜೊತೆಗೆ ನಮಗೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು ಎನ್ನುವ ವಿಷಯಗಳ ಬಗ್ಗೆ ಈ ಯೋಜನೆ ರೂಪುಗೊಂಡಿದೆ. ಈ ಯೋಜನೆಯ ಹೆಸರು ಹೊಸ ಹೆಜ್ಜೆ ಹೊಸ ದಿಶೆ.
- ಈ ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು.
ಬೇಕಾದ ಸಂಪನ್ಮೂಲಗಳು
- ಕ್ಯಾಮೆರ ಹಾಗು ಟ್ರೈಪಾಡ್ - ೧
- ವೀಡಿಯೋ ಎಡಿಟಿಂಗ್ ಸಾಫ್ಟ್‌ವೇರ್ (ಕೆಡೆನ್ ಲೈವ್) ಹಾಗು ಆಡಿಯೋ ಎಡಿಟಿಂಗ್ ಸಾಫ್ಟ್‌ವೇರ್ (ಅಡಾಸಿಟಿ) ಇರುವ ಕಂಪ್ಯೂಟರ್/ಲ್ಯಾಪ್‌ಟಾಪ್ - ೧
- ಪ್ರೊಜೆಕ್ಟರ್ -೧
- ಸ್ಪೀಕರ್ -೧
- ಮುಂಚೆಯೇ ಸಿದ್ಧಪಡಿಸಿದ ಆಡಿಯೋ ಕಥೆ, ಸಂಬಂಧಿಸಿದ ಚಿತ್ರಗಳು ಹಾಗು ಸೂಕ್ತ ಹಿನ್ನೆಲೆ ಸಂಗೀತದ ತುಣುಕುಗಳು.
- ಖಾಲಿ ಚಾರ್ಟ್
- ಸ್ಕೆಚ್ ಪೆನ್‌ಗಳು
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪
ಡಿಜಿಟಲ್ ಕಥೆಯ ಸಂಕಲನಕಾರರು ಇಬ್ಬರು (೨). ಈ ಸಾಮರ್ಥ್ಯ ಮೇಲಿನ ಫೆಸಿಲಿಟೇಟರ್‌ಗಳಲ್ಲೇ ಇರಬಹುದು.
ಒಟ್ಟು ಸಮಯ
೮೦ ನಿಮಿಷಗಳು
ಇನ್‌ಪುಟ್‌ಗಳು
- ಡಿಜಿಟಲ್ ಕಥೆ
- ಗೀಟು ಹಾಕಿದ ಚಾರ್ಟ್
ಔಟ್‌ಪುಟ್‌ಗಳು
- ಕಿಶೋರಿಯರು ಬರೆದ ಚಿತ್ರಪಟ
- ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ