"ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (removed Category:ಪ್ರಥಮ ಭಾಷೆ using HotCat) |
|||
(೭ intermediate revisions by ೨ users not shown) | |||
೧೦೨ ನೇ ಸಾಲು: | ೧೦೨ ನೇ ಸಾಲು: | ||
====ಪಠ್ಯ ವಾಚನ ಪ್ರಕ್ರಿಯೆ==== | ====ಪಠ್ಯ ವಾಚನ ಪ್ರಕ್ರಿಯೆ==== | ||
ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು | ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು | ||
+ | {{Youtube|p2N79HMBRls}} | ||
+ | {{Youtube|-mmqXYc_YYI}} | ||
+ | |||
====ಪಾಠದ ಬೆಳವಣಿಗೆ==== | ====ಪಾಠದ ಬೆಳವಣಿಗೆ==== | ||
{| class="wikitable" | {| class="wikitable" | ||
೨೦೬ ನೇ ಸಾಲು: | ೨೦೯ ನೇ ಸಾಲು: | ||
*ಸರ್ವಪಲ್ಲಿ ರಾಧಾಕೃಷ್ಣನ್ [http://www.youtube.com/watch?v=UjwhXOqfBJY&sns=em ರವರ ಡಾಕುಮೆಂಟರಿಯನ್ನು ನೋಡಿರಿ] | *ಸರ್ವಪಲ್ಲಿ ರಾಧಾಕೃಷ್ಣನ್ [http://www.youtube.com/watch?v=UjwhXOqfBJY&sns=em ರವರ ಡಾಕುಮೆಂಟರಿಯನ್ನು ನೋಡಿರಿ] | ||
*[http://kn.wikipedia.org/wiki/ಸರ್ವೆಪಲ್ಲಿ_ರಾಧಾಕೃಷ್ಣನ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಬಗೆಗಿನ ವಿಕೀಪೀಡಿಯ ಪುಟ] | *[http://kn.wikipedia.org/wiki/ಸರ್ವೆಪಲ್ಲಿ_ರಾಧಾಕೃಷ್ಣನ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಬಗೆಗಿನ ವಿಕೀಪೀಡಿಯ ಪುಟ] | ||
− | *[https://www.youtube.com/watch?v=ZYdU2XQ1K6Y ಸರ್ವ ಪಲ್ಲಿ | + | *[https://www.youtube.com/watch?v=ZYdU2XQ1K6Y ಸರ್ವ ಪಲ್ಲಿ ರಾಧಾಕೃಷ್ಣರವರು ಇರುವ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ] |
− | *[https://www.youtube.com/watch?v=awH7qyf_aVY ಸರ್ವ ಪಲ್ಲಿ | + | *[https://www.youtube.com/watch?v=awH7qyf_aVY ಸರ್ವ ಪಲ್ಲಿ ರಾಧಾಕೃಷ್ಣರವರ ಜೀವನಚಿತ್ರದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ] |
===ಘಟಕ - ೩.=== | ===ಘಟಕ - ೩.=== | ||
೨೬೮ ನೇ ಸಾಲು: | ೨೭೧ ನೇ ಸಾಲು: | ||
೧. | ೧. | ||
− | [[ವರ್ಗ: | + | [[ವರ್ಗ:ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಕೃಷ್ಣ]] |
− |
೧೩:೨೭, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ
ಪರಿಕಲ್ಪನಾ ನಕ್ಷೆ
ಕಲಿಕೋದ್ದೇಶಗಳು
ಪಾಠದ ಉದ್ದೇಶ
- ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ರಾಧಾಕೃಷ್ಣನ್‌ನವರನ್ನು ಅರ್ಥೈಸುವುದು
- ಭಾರತದ ಶ್ರೇಷ್ಠ ವ್ಯಕ್ತಿಯ ವಿವರಣೆ, ಅರ್ಥೈಸುವುದು
- ರಾಧಾಕೃಷ್ಣನ್‌ನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸಿ ಅರ್ಥೈಸುವುದು
- ದೇಶದ ಇತರ ವ್ಯಕ್ತಿಗಳಿಗೆ ಹೋಲಿಕೆ ಮಾಡುವುದು ಮತ್ತು ಅರ್ಥೈಸುವುದು
ಭಾಷಾ ಕಲಿಕಾ ಗುರಿಗಳು
- ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು ಚಿತ್ರ ಸಂಪನ್ಮೂಲದ ಬಳಕೆ
- ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು (ಇಂಡಿಕ್ ಅನಾಗ್ರಾಮ್ ಅನ್ವಯಕ)
- ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ವೀಕ್ಷಣೆ
- ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸಿ ಅರ್ಥೈಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ)
- ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.
ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ
ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ
ಪಾಠದ ಸನ್ನಿವೇಶ
ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ.
ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್‌ಗೆ ಓದಬೇಕೆನ್ನುವ ಅಪಾರ ಹಂಬಲ, ಸ್ಕಾಲರ್‌ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿಯನ್ನು ಸಂಪಾದಿಸಿಕೊಂಡರು.
ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ್' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ಸಿದ್ಧಾಂತ, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.
ವೆಲ್ಲೂರಿನಲ್ಲಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ ಶಿವಕಾಮುಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೂಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು.
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ.
'Do not sit like a Rock, Do work as a Clock' ಎನ್ನುವ ಮಾತಿಗೆ ಉತ್ತಮ ನಿದರ್ಶನವಾದ ರಾಧಾಕೃಷ್ಣನ್, ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.
1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' ೧ (Kannada: ಸರ್ವಪಲ್ಲಿ ರಾಧಾಕೃಷ್ಣನ್) (ಜನನ : ೫ ನೇ ಸೆಪ್ಟೆಂಬರ್, ೧೮೮೮.) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರು ವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ ೫ ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ ೫ "ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ(1962) ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ ೫ ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ. ೧೯೬೬ ರರ ಅಕ್ಟೋಬರ್ ೫ ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ ೧೯೯೪ ರ ಅಕ್ಟೋಬರ್ ೫ ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ.
ಲೇಖಕರ ಪರಿಚಯ
ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ.
ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.
ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್‌ಗೆ ಓದಬೇಕೆನ್ನುವ ಅಪಾರ ಹಂಬಲ, ಸ್ಕಾಲರ್‌ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ ಬಿ.ಎ ಮತ್ತು ಎಂ.ಎ. ಪದವಿಯನ್ನು ಸಂಪಾದಿಸಿಕೊಂಡರು.
ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ್' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ಸಿದ್ಧಾಂತ, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.
ವೆಲ್ಲೂರಿನಲ್ಲಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ ಶಿವಕಾಮುಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೂಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು.
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ.
'Do not sit like a Rock, Do work as a Clock' ಎನ್ನುವ ಮಾತಿಗೆ ಉತ್ತಮ ನಿದರ್ಶನವಾದ ರಾಧಾಕೃಷ್ಣನ್, ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.
1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.
1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' (ಕನ್ನಡ: ಸರ್ವಪಲ್ಲಿ ರಾಧಾಕೃಷ್ಣನ್) (ಜನನ : ೫ ನೇ ಸೆಪ್ಟೆಂಬರ್,೧೮೮೮.) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ,ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ ೫ ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ ೫ "ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ(1962) ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ ೫ ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ. ೧೯೬೬ ರರ ಅಕ್ಟೋಬರ್ ೫ ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ ೧೯೯೪ ರ ಅಕ್ಟೋಬರ್ ೫ ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ.
ಮಹಾ ಶಿಕ್ಷಕನಾಗಿ
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು "ರಾಧಾಕ್ರಿಶ್ಣಯ್ಯ"ಎಂದು ಹಾಕುತಿದ್ದರು. ಮೈಸೂ ರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.
ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ
ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು. ಶಿಕ್ಷಣ ಕ್ಷೇತ್ರದಲ್ಲಿ ಸು ಧಾರಣೆಗಳು ೧೯೩೧ ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. ೧೯೩೯ ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, ೧೯೪೮ ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ೧೯೪೯ ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ
೧೯೫೨ ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ 'ರಾಧಾಕೃಷ್ಣನ್', ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. 'ರಾಧಾಕೃಷ್ಣನ್' ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ ೧೯೫೪ ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು. ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ.
ಶಿಕ್ಷಕರ ದಿನಾಚರಣೆಯ ದಿನ
ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಬಿರುದುಗಳು
- ಬ್ರಿಟನ್ನಿನ ಆಕ್ಸ್ ಫರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೨ )
- ಲಂಡನ್ ಪ್ರವಾಸದಲ್ಲಿದ್ದಾಗ "ಆರ್ಡರ್ ಆಫ್ ಮೆರಿನ್"ಪ್ರಶಸ್ತಿ,
- ವ್ಯಾಟಿಕನ್ ಸಿಟಿ ಪೋಪ್ ಜಾನ್ ರಿಂದ "ನೈಟ್ ಆಫ್ ದ ಆರ್ಮಿ.
- ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ -೧೯೬೮ ,
- ಭಾರತೀಯ ವಿದ್ಯಾಭವನದಿಂದ "ಬ್ರಹ್ಮ ವಿದ್ಯಾ ಭಾಸ್ಕರ "ಬಿರುದು,
- ೧೯೭೩ರಲ್ಲಿ"ಟೆಂಪಲ್ಟನ್"ಪ್ರಶಸ್ತಿ .
- " ೧೯೫೪ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪುರಸ್ಕಾರ
ನಿಧನ
ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.
ಪಠ್ಯ ವಾಚನ ಪ್ರಕ್ರಿಯೆ
ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು
ಪಾಠದ ಬೆಳವಣಿಗೆ
ವಿವರ | ಸಾಮರ್ಥ್ಯ | |||
ಸಂಬಂದಿಸಿದ ಚಿತ್ರಗಳು | ಆ - ಮಾತನಾಡುವುದು | ಇದು ಯಾವ ಮಾದರಿ ಹಾಡು?ಭಾವಗೀತೆ ಎಂದರೇನು?ನಿಮ್ಮಗೆ ಇಷ್ಷದ ಭಾವಗೀತೆಯನ್ನು ಹಾಡಿರಿ?ಕನ್ನಡದ ಪ್ರಸಿದ್ದ ಭಾವಗೀತೆಯ ಕವಿ ಯಾರು?** ಬದಲಾಯಿಸಬೇಕು | ಚಿತ್ರಗಳು | |
ವೀಡಿಯೋ ವೀಕ್ಷಣೆ | ಆ -ಮಾ- | ರಾಧಾ ಕೃಷ್ಣನ್ ಪರಿಚಯ | ||
ಶಿಕ್ಷಕರು - ಮಕ್ಕಳು ಓದುವರು | ಆ - ಓ | ಸ್ವರ ಭಾರದೊಂದಿಗೆ ಓದುಗಾರಿಕೆಯನ್ನು ಕಲಿಯುವರು | ವಿವಿಧ ಧ್ವನಿಗಳು ಘಟ್ಟಗಳು | |
* ಗುಂಡಪ್ಪ
* ವಿಶ್ವೇಶ್ವರಯ್ಯ * ವಿರ್ಜಾ * ಮೈಸೂರು ಅರಮನೆ * ಕೆ ಆರ್ ಎಸ್ *ದಸರಾ ಮೆರವಣಿಗೆ |
*Text book activities
*Boi pic of Radhakrishnan | |||
ಆ - ನೋ - ಮಾತನಾಡುವುದು | * ರಾಧಾಕೃಷ್ಣನ್ ಅವರು ಯಾರು?
* ಅವರ ಪ್ರಮುಖ ಕೃತಿಗಳನ್ನು ಹೆಸರಿಸಿ |
|||
ಗುಂಪು ಚರ್ಚೆ - ಒಬ್ಬರು ಉತ್ತರಿಸುವರು | ಮಾ - ಓ - ಆ | |||
– h5p | *ಗ್ರಹಣ ಶಕ್ತಿ - ವಿಷಯವನ್ನು ತಿಳಿದುಕೊಳ್ಳುವ ಸಾಮರ್ಥ್ಯ
*ಅಮರ - ಶಾಶ್ವತ *ಬುನಾದಿ - ತಳಹದಿ *ಬೇಗೆ - ಸಂಕಟ *ಮೊಳಗು - ಧ್ವನಿಮಾಡು |
|||
ಪ್ರದರ್ಶಿತ ಪದ್ಯವನ್ನು ಓದಿರಿ - ಅರ್ಥೈಸಿರಿ |
ಘಟಕ -೨ .
ಘಟಕ-೨ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆ - ೧
- ಚಟುವಟಿಕೆಯ ಹೆಸರು;
- ವಿಧಾನ/ಪ್ರಕ್ರಿಯೆ:
- ಸಮಯ:
- ಹಂತಗಳು:
- ಸಾಮಗ್ರಿಗಳು/ಸಂಪನ್ಮೂಲಗಳು;
- ಚರ್ಚಾ ಪ್ರಶ್ನೆಗಳು;
ಚಟುವಟಿಕೆ - ೨
- ಚಟುವಟಿಕೆ;
- ವಿಧಾನ/ಪ್ರಕ್ರಿಯೆ ;
- ಸಮಯ ;
- ಸಾಮಗ್ರಿಗಳು/ಸಂಪನ್ಮೂಲಗಳು :
- ಹಂತಗಳು ;
- ಚರ್ಚಾ ಪ್ರಶ್ನೆಗಳು;
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ
(ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು)
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
- ಸರ್ವಪಲ್ಲಿ ರಾಧಾಕೃಷ್ಣನ್ ರವರ ಡಾಕುಮೆಂಟರಿಯನ್ನು ನೋಡಿರಿ
- ಸರ್ವಪಲ್ಲಿ ರಾಧಾಕೃಷ್ಣನ್ ರವರ ಬಗೆಗಿನ ವಿಕೀಪೀಡಿಯ ಪುಟ
- ಸರ್ವ ಪಲ್ಲಿ ರಾಧಾಕೃಷ್ಣರವರು ಇರುವ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಸರ್ವ ಪಲ್ಲಿ ರಾಧಾಕೃಷ್ಣರವರ ಜೀವನಚಿತ್ರದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಘಟಕ - ೩.
ಘಟಕ-೩ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆ
ಚಟುವಟಿಕೆ ೧
- ಚಟುವಟಿಕೆಯ ಹೆಸರು;
- ವಿಧಾನ/ಪ್ರಕ್ರಿಯೆ:
- ಸಮಯ:
- ಹಂತಗಳು:
- ಸಾಮಗ್ರಿಗಳು/ಸಂಪನ್ಮೂಲಗಳು;
- ಚರ್ಚಾ ಪ್ರಶ್ನೆಗಳು;
- ರಾಧಾಕೃಷ್ಣನ್ ಅವರ ಜನನ ಸ್ಥಳ ಯಾವುದು?
- ರಾಧಾಕೃಷ್ಣನ್ ಹೆಂಡತಿ ಹೆಸರೇನು ?
- ನಾಗರಿಕ ಅತ್ಯುನ್ನತ ಪ್ರಶಸ್ತಿ ಯಾವುದು ?
- ರಾಧಾಕೃಷ್ಣನ್ ಅವರ ಬಾಲ್ಯ ಜೀವನವನ್ನು ತಿಳಿಸಿ?
ಚಟುವಟಿಕೆ ೨
- ಚಟುವಟಿಕೆಯ ಹೆಸರು;
- ವಿಧಾನ/ಪ್ರಕ್ರಿಯೆ:
- ಸಮಯ:
- ಹಂತಗಳು:
- ಸಾಮಗ್ರಿಗಳು/ಸಂಪನ್ಮೂಲಗಳು;
- ಚರ್ಚಾ ಪ್ರಶ್ನೆಗಳು;
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /
೨ನೇ ಅವಧಿಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಘಟಕ - ೪.
ಘಟಕ - ೪ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆಗಳು ೧
- ಚಟುವಟಿಕೆಯ ಹೆಸರು;
- ವಿಧಾನ/ಪ್ರಕ್ರಿಯೆ:
- ಸಮಯ:
- ವೃದ್ದಿಗೊಳ್ಳುವ ಸಾಮರ್ಥ್ಯಗಳು ;,
- ಹಂತಗಳು:
- ಸಾಮಗ್ರಿಗಳು/ಸಂಪನ್ಮೂಲಗಳು;
- ಚರ್ಚಾ ಪ್ರಶ್ನೆಗಳು;
ಚಟುವಟಿಕೆ ೨
- ಚಟುವಟಿಕೆಯ ಹೆಸರು;
- ವಿಧಾನ/ಪ್ರಕ್ರಿಯೆ:
- ಸಮಯ:
- ಹಂತಗಳು:
- ಸಾಮಗ್ರಿಗಳು/ಸಂಪನ್ಮೂಲಗಳು;
- ಚರ್ಚಾ ಪ್ರಶ್ನೆಗಳು;
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ
ಘಟಕ-3ರ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
೧.