"ಚಿಗುರು ೧೧ -ಪುರುಷ ಪ್ರಧಾನ ಸಂದೇಶಗಳು - ಭಾಗ ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧೫ ನೇ ಸಾಲು: ೧೫ ನೇ ಸಾಲು:
 
6. Venn Diagram ಚಟುವಟಿಕೆಯ ಮೂಲಕ ಕಿಶೋರಿಯರು ಅವರ ಮೇಲೆ ಯಾರು ಯಾರಿಗೆ ಎಷ್ಟು ಅಧಿಕಾರ ಇದೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ.
 
6. Venn Diagram ಚಟುವಟಿಕೆಯ ಮೂಲಕ ಕಿಶೋರಿಯರು ಅವರ ಮೇಲೆ ಯಾರು ಯಾರಿಗೆ ಎಷ್ಟು ಅಧಿಕಾರ ಇದೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ.
  
7.  ಕನ್ನಡ ಬಿಟ್ಟು ಬೇರೆ ಭಾಷೆಯ ಆಡಿಯೋ/ವಿಡಿಯೋ ತೋರಿಸಿದರೆ ಕೆಲವು ಕಿಶೋರಿಯರಿಗೆ ಅರ್ಥವಾಗುವುದಿಲ್ಲ. ಇದರಿಂದ ಅವರು ಮಾತುಕತೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಿದಾರೆ.
+
7.  ಕನ್ನಡ ಬಿಟ್ಟು ಬೇರೆ ಭಾಷೆಯ ಆಡಿಯೋ/ವಿಡಿಯೋ ತೋರಿಸಿದರೆ ಕೆಲವು ಕಿಶೋರಿಯರಿಗೆ ಅರ್ಥವಾಗುವುದಿಲ್ಲ. ಇದರಿಂದ ಅವರು ಮಾತುಕತೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ.
  
 
8. ಕಿಶೋರಿಯರು ಓದಲು ಬರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ಅವರು  ಈ ಚಟುವಟಿಕೆಗಳಲ್ಲಿ ಭಾಗವಹಿಸುವದಿಲ್ಲ.
 
8. ಕಿಶೋರಿಯರು ಓದಲು ಬರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ಅವರು  ಈ ಚಟುವಟಿಕೆಗಳಲ್ಲಿ ಭಾಗವಹಿಸುವದಿಲ್ಲ.

೧೧:೫೮, ೧೧ ಸೆಪ್ಟೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಸಾರಾಂಶ

ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಚಲನಚಿತ್ರದ ತುಣುಕುಗಳನ್ನು ನೋಡಿ ಅದನ್ನು ವಿಶ್ಲೇಷಣೆ ಮಾಡುವ ಮೂಲಕ ಪುರುಷ ಪ್ರಧಾನತೆಯನ್ನು ಹೇಗೆ ಮೀರಬಹುದು ಎಂದು ಮಾತನಾಡುತ್ತಾರೆ. ತಮಾಷೆಯ ವಿಡಿಯೋಗಳನ್ನು ಉಪಯೋಗಿಸಿಕೊಂಡು ಈ ಮಾತುಕತೆಯನ್ನು ನಡೆಸುವುದರಿಂದ ಕಿಶೋರಿಯರನ್ನು ಪರಿಣಾಮಕಾರಿಯಾಗಿ ತಲುಪಲು ಸಹಾಯವಾಗುತ್ತದೆ.

ಊಹೆಗಳು

1. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.

2. ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.

3. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.

4. ಹಿಂದಿನ ತರಗತಿಯ ಶಿಕ್ಷಕರು ಇವರನ್ನು ಬೈಯಬಹುದು, ಇದರಿಂದ ಕಿಶೋರಿಯರು ನಿರುತ್ಸಾಹರಾಗಿರಬಹುದು.

5. ಪುರುಷ ಪ್ರಧಾನತೆ ಅಂದರೆ ಏನು ಎಂದು ಗೊತ್ತಾಗಿದೆ.

6. Venn Diagram ಚಟುವಟಿಕೆಯ ಮೂಲಕ ಕಿಶೋರಿಯರು ಅವರ ಮೇಲೆ ಯಾರು ಯಾರಿಗೆ ಎಷ್ಟು ಅಧಿಕಾರ ಇದೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ.

7.  ಕನ್ನಡ ಬಿಟ್ಟು ಬೇರೆ ಭಾಷೆಯ ಆಡಿಯೋ/ವಿಡಿಯೋ ತೋರಿಸಿದರೆ ಕೆಲವು ಕಿಶೋರಿಯರಿಗೆ ಅರ್ಥವಾಗುವುದಿಲ್ಲ. ಇದರಿಂದ ಅವರು ಮಾತುಕತೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ.

8. ಕಿಶೋರಿಯರು ಓದಲು ಬರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ಅವರು  ಈ ಚಟುವಟಿಕೆಗಳಲ್ಲಿ ಭಾಗವಹಿಸುವದಿಲ್ಲ.

9. ಹಿಂದಿನ ವಾರ ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರಿರುವವರ ಬಗ್ಗೆ ಕೇಳಿದಾಗ ಒಬ್ಬ ಕಿಶೋರಿಯನ್ನು ಬಿಟ್ಟು ಬೇರೆ ಯಾರೂ ಮಾತನಾಡಿಲ್ಲ.

10. ಹಿಂದಿನ ತರಗತಿಯ ಶಿಕ್ಷಕರು ಜಾಸ್ತಿ ಸಮಯ ತೆಗೆದುಕೊಳ್ಳುತ್ತಾರೆ.

11. ನಾವು 'ಹದಿಹರೆಯದ ವ್ಯಾಖ್ಯಾನ' ಮಾಡ್ಯೂಲ್‌ ಸಮಯದಲ್ಲಿ ಮಾಡಿರುವ ಪಾತ್ರಾಭಿನಯಗಳು ಕಿಶೋರಿಯರಿಗೆ ನೆನಪಿರಬಹುದು.

ಉದ್ದೇಶ

• ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರುವುದು ಹೇಗೆ ಎನ್ನುವ ಚರ್ಚೆಯನ್ನು ಪ್ರಾರಂಭಿಸುವುದು.

ಪ್ರಕ್ರಿಯೆ

ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳ ಬಗ್ಗೆ ಮಾತನಾಡುವುದು.  

ಹಿಂದಿನ ವಾರಗಳಲ್ಲಿ ಚರ್ಚಿಸಿರುವ ವಿಷಯಗಳ ಬಗ್ಗೆ ನೆನಪಿಸುವುದು. ೧೦ ನಿಮಿಷ

ಇದಾದ ನಂತರ ತೆಲುಗು ಭಾಷೆಯ 'ಜಂಬ ಲಕಿಡಿ ಪಂಬ' ಎನ್ನುವ ಸಿನೆಮಾದ ತುಣುಕುಗಳನ್ನು ತೋರಿಸುವುದು. ಈ ಸಿನೆಮಾದಲ್ಲಿ ಮಹಿಳೆಯರ ಮತ್ತು ಪುರುಷರ 'Gender Role’ಗಳನ್ನು ಬದಲಾಯಿಸಿ ಕಥೆಯನ್ನು ಹೆಣೆಯಲಾಗಿದೆ.

ಪ್ರತಿ ತುಣುಕುಗಳನ್ನು ತೋರಿಸಿದ ನಂತರ ಅದರಲ್ಲಿ ಏನಿತ್ತು, ಪುರುಷರು ಏನು ಮಾಡಿತ್ತದ್ದರು, ಮಹಿಳೆಯರು ಏನು ಮಾಡುತ್ತಿದ್ದಾರೆ ಎಂದು ಕಿಶೋರಿಯರನ್ನು ಕೇಳುವುದು. ಅವರು ಹೇಳುವುದನ್ನು ಫೆಸಿಲಿಟೇಟರ್‌ ಚಾರ್ಟಿನ ಮೇಲೆ ಬರೆಯುತ್ತಾರೆ.

ಎಲ್ಲ ತುಣುಕುಗಳನ್ನೂ ತೋರಿಸಿದ ನಂತರ ಈ ವಿಡಿಯೋಗಳಿಗೂ ಅವರು ಇರುವ ಸಮಾಜಕ್ಕೂ ಇರುವ ಸಾಮ್ಯತೆ/ವ್ಯತ್ಯಾಸಗಳು ಏನು ಎಂದು ಚರ್ಚಿಸುವುದು.

ಈ ಕೆಳಗಿನ ಪ್ರಶ್ನೆಗಳ ಮೂಲಕ ಮಾತುಕತಯನ್ನು ಮುಂದುವರೆಸಬಹುದು.

• ಪುರುಷ ಪ್ರಧಾನ ಸಮಾಜದಲ್ಲಿ ಗಂಡುಮಕ್ಕಳ ಸ್ಥಾನ ಎಲ್ಲಿತ್ತು? ಇದರಲ್ಲಿ ಎಲ್ಲಿದೆ?

• ಅಧಿಕಾರ ಯಾರ ಕೈಯಲ್ಲಿದೆ?

• ಇವುಗಳನ್ನು ಒಪ್ಕೋತೀರ?

ನೀವು ಹೇಳಿರೋದು ಹಾಗು ಈ ಸಿನೆಮಾದ ತುಣುಕುಗಳನ್ನು ನೋಡಿದರೆ, ಇದೆಲ್ಲ ಬರಿ ತಮಾಷೆಯ ಥರಹ ನೋಡಬಹಿದೇ ಹೊರತು ನಿಜ ಜೀವನದಲ್ಲಿ ಈ ಥರ ಏನು ಆಗಲ್ಲ. ಆದ್ದರಿಂದ ಪುರುಷ ಪ್ರಧಾನತೆಯ ಪ್ರಭಾವವನ್ನು ಅರ್ಥ ಮಾಡಿಕೊಳ್ಳುವುದು ತುಂಬ ಅವಶ್ಯ. ಅದನ್ನ ಅರ್ಥ ಮಾಡಿಕೊಂಡರೆ ಪುರುಷ ಪ್ರಧಾನತೆಯನ್ನು ಮೀರಬಹುದು. ಕಿಶೋರಿಯರು ಹೇಳಿದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಮಾತುಕತೆಯನ್ನು ಮುಂದುವರೆಸುವುದು.

ಇದಾದ ನಂತರ ಪುರುಷ ಪ್ರಧಾನತೆಯನ್ನು ಮೀರಿರುವವರು ಯಾರಾದರೂ ಗೊತ್ತ ಎಂದು ಕಿಶೋರಿಯರನ್ನು ಕೇಳುವುದು.

ಕಿಶೋರಿಯರು ಅವರ ಅನುಭವಗಳನ್ನು ಹಂಚಿಕೊಂಡ ನಂತರ ಪುರುಷ ಪ್ರಧಾನತೆಯನ್ನು ಇನ್ನೂ ಬೇರೆ ಬೇರೆ ಬೇರೆ ರೀತಿಯಲ್ಲಿ ಮೀರುವುದು ಹೇಗೆ ಎಂದು ಮುಂದಿನ ವಾರಗಳಲ್ಲಿ ತಿಳಿದುಕೊಳ್ಳೋಣ ಎಂದು ಹೇಳಿ ನಮ್ಮ ಮಾತುಕತೆಯನ್ನು ಮುಗಿಸುವುದು. ೫೦ ನಿಮಿಷ

ಬೇಕಾದ ಸಂಪನ್ಮೂಲಗಳು

  • ಕಂಪ್ಯೂಟರ್‌
  • ಪ್ರೊಜೆಕ್ಟರ್‌
  • ಸ್ಪೀಕರ್‌

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

ಒಬ್ಬ ಮುಖ್ಯ ಫೆಸಿಲಿಟೇಟರ್‌, ಒಬ್ಬರು ಸಹಾಯಕ ಫೆಸಿಲಿಟೇಟರ್‌

ಒಟ್ಟು ಸಮಯ

೬೦ ನಿಮಿಷಗಳು    

ಇನ್‌ಪುಟ್‌ಗಳು

• ಸಿನೆಮಾದ ತುಣುಕುಗಳು

ಔಟ್‌ಪುಟ್‌ಗಳು

• ಕಿಶೋರಿಯರು ಹೇಳುವ ಅಂಶಗಳು