"ತ್ರಿಭುಜಗಳ ಮೇಲಿನ ಪ್ರಮೇಯಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೩ ನೇ ಸಾಲು: ೩೩ ನೇ ಸಾಲು:
  
 
{{Youtube
 
{{Youtube
| 1 = v=2MV-8_uMguc
+
| 1 = 2MV-8_uMguc
 
}}
 
}}
  

೧೭:೦೮, ೨೮ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

See in English

ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:THEOREMS ON TRIANGLE.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ತ್ರಿಭುಜಗಳ ವಿಧಗಳು ಮತ್ತು ಅವುಗಳ ಗುಣಲಕ್ಷಣದ ಮೇಲೆ ಕೆಲವು ತುಣುಕುಗಳು



ಉಪಯುಕ್ತ ವೆಬ್ ಸೈಟ್ ಗಳು

  1. ತ್ರಿಭುಜಗಳ ವಿಧಗಳ ಬಗ್ಗೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ
  2. ತ್ರಿಭುಜಗಳ ಗುಣಲಕ್ಷಣಗಳ ಬಗ್ಗೆ ಮಾಹಿತಿ ತಿಳಿಯಲುಇಲ್ಲಿ ಕ್ಲಿಕ್ಕಿಸಿ
  3. ತ್ರಿಭುಜದ ಕೋನಗಳ ಮೇಲಿನ ಪ್ರಮೇಯದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಸಂಬಂಧ ಪುಸ್ತಕಗಳು

ಪಠ್ಯಪುಸ್ತಕಗಳು - ಕರ್ನಾಟಕ ಸರ್ಕಾರದ ಪಠ್ಯ ಪುಸ್ತಕ - ತರಗತಿ ೮, ಅಧ್ಯಾಯ ೧೨

ಬೋಧನೆಯ ರೂಪರೇಶಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

  1. ತ್ರಿಭುಜವನ್ನು ವಿವರಿಸಿ ಮತ್ತು ಬಾಹು ಮತ್ತು ಕೋನಗಳ ಆಧಾರದ ಮೇಲೆ ವಿವಿಧ ರೀತಿಯ ತ್ರಿಭುಜವನ್ನು ವರ್ಗೀಕರಿಸಿ.

ಶಿಕ್ಷಕರಿಗೆ ಟಿಪ್ಪಣಿ

ಮೊದಲು ಶಿಕ್ಷಕರು ರೇಖೆಗಳು,ಏಕರೇಖಾಗತ ಮತ್ತು ಏಕರೇಖಾಗತವಲ್ಲದ ಬಿಂದುಗಳು, ಶೃಂಗಗಳು, ಬಾಹುಗಳು ಮುಂತಾದ ರೇಖಾಗಣಿತದ ಮೂಲ ಅಂಶಗಳನ್ನು ಹೊರತೆಗೆಯಲು ಪ್ರಯತ್ನಿಸಬಹುದು ಅಥವಾ ಅದರ ಬಗ್ಗೆ ಮಾತನಾಡಬಹುದು. ಇದು ತ್ರಿಭುಜದ ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ. ನಂತರ ಚಟುವಟಿಕೆಗಳನ್ನು ಬಳಸುವ ಮೂಲಕ ತ್ರಿಭುಜವನ್ನು ಬಾಹು ಮತ್ತು ಕೋನಗಳ ಆಧಾರದ ಮೇಲೆ ವರ್ಗೀಕರಿಸಲು ಪ್ರಯತ್ನಿಸಿ ಮತ್ತು ಅವುಗಳನ್ನು ಹೆಸರಿಸಿ. ದೈನಂದಿನ ಜೀವನದಲ್ಲಿ ಕಂಡುಬರುವ ತ್ರಿಭುಜಕ್ಕೆ ಜೀವಂತವಾಗಿರುವ ಉದಾಹರಣೆಗಳನ್ನು ಹೊರಹೊಮ್ಮಿಸಲು ಶಿಕ್ಷಕರು ಪ್ರಯತ್ನಿಸಬಹುದು. ಶಿಕ್ಷಕರು ಅನುಗಮ- ನಿಗಮ ಅಥವಾ ಸಿಎಎಂ(CAM) ವಿಧಾನವನ್ನು ಬಳಸಬಹುದು.

ಚಟುವಟಿಕೆಗಳು -

ಚಟುವಟಿಕೆ : ಬಾಹುಗಳ ಆಧಾರದ ಮೇಲೆ ತ್ರಿಭುಜದ ವರ್ಗೀಕರಣ

ಉದ್ದೇಶಗಳು:

ಬಾಹುಗಳ ಆಧಾರದ ಮೇಲೆ ತ್ರಿಭುಜದ ವರ್ಗೀಕರಣದ ಬಗ್ಗೆ ತಿಳಿದುಕೊಳ್ಳುವುದು

ಅಂದಾಜು ಸಮಯ: ೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ:

ತ್ರಿಭುಜದ ಅರ್ಥವನ್ನು ಮತ್ತು ತ್ರಿಭುಜವು 2 ಆಯಾಮದ ಆಕೃತಿ ಎಂದು ತಿಳಿದಿರಬೇಕು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ಕತ್ತರಿಸಿದ ತ್ರಿಭುಜದ ಕಾಗದ , ಪೆನ್ಸಿಲ್,ಅಳತೆಪಟ್ಟಿ

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ವರ್ಗವನ್ನು ಗುಂಪುಗಳಾಗಿ ವಿಂಗಡಿಸಿ ಮತ್ತು ಪ್ರತಿ ಗುಂಪಿಗೆ ಪರಿಕರಗಳನ್ನು (ಕಲಿಕಾ ಸಾಮಗ್ರಿ)ಒದಗಿಸಿ
  2. ಅವರನ್ನು ಕೊಟ್ಟಿರುವ ತ್ರಿಭುಜಗಳ ಪ್ರತಿಯೊಂದು ಬಾಹುಗಳ ಉದ್ದವನ್ನು ಅಳೆಯಲು ಕೇಳಿ.
  3. ಅವರಿಗೆ ಕೊಟ್ಟಿರುವ ತ್ರಿಭುಜಗಳಲ್ಲಿ ೩ ರೀತಿಯ ತ್ರಿಭುಜಗಳನ್ನು ಗುರುತಿಸಲು ಸಹಾಯ ಮಾಡಿ.
  4. ಗುರುತಿಸಲಾದ 3 ವಿಭಿನ್ನ ರೀತಿಯ ತ್ರಿಭುಜಗಳನ್ನು ಹೆಸರಿಸಲು ಅವರನ್ನು ಕೇಳಿ.

ಬೆಳವಣಿಗೆಯ ಪ್ರಶ್ನೆಗಳು:

  1. ಕೊಟ್ಟಿರುವ ರೇಖಾಕೃತಿಯ ಹೆಸರೇನು?
  2. ನೀವು ಎಷ್ಟು ರೀತಿಯ ತ್ರಿಭುಜವನ್ನು ಕಂಡುಕೊಂಡಿದ್ದೀರಿ?
  3. ಈ ಎಲ್ಲಾ ತ್ರಿಭುಜಕ್ಕೆ ನೀವು ಯಾವ ಹೆಸರನ್ನು ನೀಡಬಹುದು?

ಮೌಲ್ಯ ನಿರ್ಣಯ ಪ್ರಶ್ನೆಗಳು

ನಾವು ಯಾವ ಆಧಾರದ ಮೇಲೆ ತ್ರಿಭುಜವನ್ನು ವರ್ಗೀಕರಿಸುತ್ತೇವೆ?

ಚಟುವಟಿಕೆ ಸಂಖ್ಯೆ- ಒಂದು ತ್ರಿಭುಜದ ಮೂರು ಒಳಕೋನಗಳ ಮೊತ್ತ ೧೮೦°

ಉದ್ದೇಶಗಳು:

ಒಂದು ತ್ರಿಭುಜದ ಮೂರು ಒಳಕೋನಗಳ ಮೊತ್ತ ೧೮೦° ಎಂದು ಅರ್ಥಮಾಡಿಕೊಳ್ಳುವುದು

ಅಂದಾಜು ಸಮಯ: ೪೫ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ:

ವಿಧ್ಯಾರ್ಥಿಗಳು ತಿಳಿದುಕೊಳ್ಳಬೇಕಾಗಿರುವುದು:

  • ತ್ರಿಭುಜವು ಮೂರು ಬಾಹುವಿನ ಬಹುಭುಜಾಕೃತಿಯಾಗಿದೆ.
  • ಬಾಹುಗಳು ಮತ್ತು ಕೋನಗಳಿಂದ ತ್ರಿಭುಜಗಳ ವಿಧಗಳು.
  • ಬಾಹುಗಳು ಮತ್ತು ಕೋನಗಳಿಂದ ತ್ರಿಭುಜಗಳ ಗುಣಲಕ್ಷಣಗಳು.
  • ಪೂರಕ,ಪಾಶ್ವ ಕೋನಗಳು ಮತ್ತು ಶೃಂಗಾಭಿಮುಖ ಕೋನಗಳ ಸತ್ಯಾಂಶಗಳು.
  • ಸರಳ ರೇಖೀಯ ಸಮೀಕರಣಗಳನ್ನು ಬರೆಯಿರಿ ಮತ್ತು ಪರಿಹರಿಸಿ.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಚಾರ್ಟ್ ಪೇಪರ್,ಪೆನ್ಸಿಲ್,ಅಳತೆಪಟ್ಟಿ,ಕೋನಮಾಪಕ

ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

ವಿದ್ಯಾರ್ಥಿಗಳನ್ನು ಅನುಗಮ ಪ್ರಕ್ರಿಯೆಯ ಮೂಲಕ ಬಾಹುಗಳ ಉದ್ದ ಮತ್ತು ಕೋನಕ್ಕೆ ಜಾರುಕವನ್ನು ಬಳಸಿಕೊಂಡು ತ್ರಿಭುಜವನ್ನು ರಚಿಸುವುದು. ಕೋನದ ಜಾರುಕವನ್ನು ವಿಭಿನ್ನ ರೀತಿಯ ತ್ರಿಭುಜಗಳನ್ನು ರಚಿಸಲು ಸರಿಸಲಾಗಿದೆ. ವಿವಿಧ ರೀತಿಯ ತ್ರಿಭುಜಗಳ ಆಂತರಿಕ ಕೋನಗಳ ಮೊತ್ತವನ್ನು ಹೋಲಿಸಲಾಗಿದೆ.

ಮೌಲ್ಯ ನಿರ್ಣಯ ಪ್ರಶ್ನೆಗಳು

ಒಂದು ತ್ರಿಭುಜದಲ್ಲಿ ಎರಡು ಲಂಬಕೋನಗಳಿರಬಹುದೇ?

ಒಂದು ತ್ರಿಭುಜದಲ್ಲಿ ಎಲ್ಲಾ ಮೂರು ಕೋನಗಳು ೬೦°ಗಿಂತ ಹೆಚ್ಚಿರಬಹುದೇ?

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಯೋಜನೆಗಳು

ಗಣಿತ ವಿನೋದ