"ಚಿಗುರು ೦೪ ಹದಿಹರೆಯದ ವ್ಯಾಖ್ಯಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: ಉದ್ದೇಶ : ಹದಿಹರೆಯ ಅಂದ್ರೆ ಏನು ಎಂದು ಅರ್ಥ ಮಾಡಿಕೊಳ್ಳುವುದು - ದೈಹಿಕ, ಮಾನಸ...) |
( ಯಾವುದೇ ವ್ಯತ್ಯಾಸವಿಲ್ಲ )
|
೧೩:೧೭, ೨೮ ಡಿಸೆಂಬರ್ ೨೦೨೧ ನಂತೆ ಪರಿಷ್ಕರಣೆ
ಉದ್ದೇಶ : ಹದಿಹರೆಯ ಅಂದ್ರೆ ಏನು ಎಂದು ಅರ್ಥ ಮಾಡಿಕೊಳ್ಳುವುದು - ದೈಹಿಕ, ಮಾನಸಿಕ, ಬೌದ್ಧಿಕ ಬದಲಾವಣೆಗಳು ಏನೇನು - ಇದರ ಬಗ್ಗೆ ನಮಗೆ ತಿಳಿದಿರುವುದರಿಂದ ಆಗುವ ಉಪಯೋಗಗಳೇನು ಎಂದು ಚರ್ಚಿಸುವುದು
ಪ್ರಕ್ರಿಯೆ :
ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವ ಮೂಲಕ ಸೆಶನ್ ಅನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. (10 ನಿಮಿಷ)
ಪ್ರೊಜೆಕ್ಟರ್‌ನಲ್ಲಿ ಈ PDF ಅನ್ನು ಹಾಕಿಕೊಂಡು ಹದಿಹರೆಯದ ಬಗ್ಗೆ ಮಾತನಾಡುವುದು.
ದೈಹಿಕ ಬದಲಾವಣೆಗಳು ಏನೇನಲ್ಲ ಆಗ್ಬೋದು? … ಹೆಣ್ಮಕ್ಳು ದೊಡ್ಡೋರಾಗ್ತಾರೆ. ಅಂದ್ರೆ ಮುಟ್ಟಾಗೋದು, ಮಾಚ್ಯೂರ್ ಆಗೋದು ಅಂತಾರಲ್ಲ ಅದು. ಉದ್ದ ಆಗೋದು, ಮೊಡವೆ ಬರಬಹುದು, ಕೂದಲು ಇನ್ ಕಂಕುಳು ಮತ್ತು ಅಹೆಮ್ ಅದೇ ಥರ ಗಂಡ್ಮಕಳಿಗೆ ಮುಖದ ಮೇಲೆ ಕೂದಲು, ಕಂಕುಳ ಕೆಳಗೆ ಮತ್ತು ಅಹೆಮ್ ಜೊತೆ, ಗಂಟಲು ಒಡ್ಯೋದು,
ಮಾನಸಿಕ ಬದಲಾವಣೆಗಳು ಏನೇನಲ್ಲ ಆಗ್ಬೋದು ನಾನ್ಯಾರು? - ಮಗು ಅಥವ ಯುವತಿ ಮಧ್ಯ ಹೊಯ್ದಾಟ - ಒಂದೊಂದ್ಸಲ ನಾವು ತುಂಬಾ ಚಿಕ್ಕೋರು ನಮ್ಗೆ ಎಲ್ಲಾ ಅರ್ಥ ಆಗಲ್ಲ. ಅನ್ಸುತ್ತೆ ಇನ್ನ ಕೆಲವೊಂದ್ಸಲ ನಾವು ತುಂಬಾ ದೊಡ್ಡೋರು. ನಮಗೆ ಎಲ್ಲಾ ಗೊತ್ತುತಿಳ್ದಿದೆ ಅಂತ ಅನ್ಸುತ್ತೆ. - ಜೊತೆಗಾರರ ಕಡೆಯಿಂದಾಗುವ ಒತ್ತಡಗಳಿಗೆ ಸ್ಪಂದನೆ - ನಮ್ ಫ್ರೆಂಡ್ಸ್ ಏನ್ ಮಾಡ್ತಾರೆ ನಮ್ಗೂನೂ ಅದನ್ನೇ ಮಾಡೋಣ ಅಂತ ಅನ್ಸುತ್ತೆ, ಅವ್ರೆನಾದ್ರೂ ಹೊಸ ಬಟ್ಟೆ ತಗೊಂಡ್ರೆ ನಾವೂ ಕೂಡ ತಗೋಬೇಕು ಅನ್ಸುತ್ತೆ. ನಮ್ಫ್ ಫ್ರೆಂಡ್ಸ್ ಗ್ರೂಪಲ್ಲಿ ಯಾರನ್ನಾದ್ರೂ ಸೇರುಸ್ಕೋಬಾರ್ದು ಅಂತ ಆದ್ರೆ ಅವ್ರನ್ನ ಸೇರುಸ್ಕೊಳಲ್ಲ, ಏನ್ ಮಾಡಿದ್ರೂ ಒಟ್ಗೆ ಮಾಡೋದು, (ಉದಾಹರಣೆಗೆ - ಇಲ್ಲಿ ನಾವು ಗಮನಿಸಿದ ಹಾಗೆ ಎಷ್ಟ್ ಗುಂಪುಗಳು, ನಮ್ಮನ್ನ ಟೀಸ್ ಮಾಡಿ ನಗ್ತಿರ ಅಂತ ನಮ್ಗೆ ಗೊತ್ತಲ್ಲ, ಯಾರ್ಬಗ್ಗೆ ಹೇಳ್ತಿದ್ದೀನಿ ಅಂತ ನಿಮ್ಗೂನೂ ಗೊತ್ತು ಅಲ್ಲಾ?) ಮಾಲ್‌ಗೆ ಹೋಗೋಣ ಅಂತ ಡಿಸೈಡ್ ಮಾಡಿ ನಮ್ಮತ್ರ ಆಗುತ್ತೋ ಇಲ್ವೋ ಅದೆಲ್ಲ ಗೊತ್ತಿಲ್ಲ, ಒಟ್ನ್ಲ್ಲಿ ಹೋಗೆ ತೀರ್ಬೇಕು.
- ಮುಂದೇನು ಅನ್ನುವುದರ ಬಗ್ಗೆ ಅನಿಶ್ಚಿತತೆ - ಮುಂದೆ ನಾವೇನು ಮಾಡಬೇಕು ಅನ್ನೋದೇ ಗೊತ್ತಾಗಲ್ಲ. ಇವತ್ತು ನಂಗೆ ಟೀಚರ್ ಆಗಬೇಕು ಅನ್ಸುತ್ತೆ, ಆಮೇಲೆ ಫೋಟೋಗ್ರಾಫರ್ ಆಗಬೇಕು ಅನ್ಸುತ್ತೆ ಇನ್ನೊಮ್ಮೆ ಏನು ಮಾಡಬೇಕು ಅಂತ ಗೊತ್ತಾಗಲ್ಲ. ಎಲ್ಲಾದೂ ಇಂಟರೆಸ್ಟಿಂಗ್ ಅನ್ನಿಸಬಹುದು ಅಥವಾ ಏನೂ ಇಂಟರೆಸ್ಟಿಂಗ್ ಅನ್ಸಲ್ಲ. ಯಾವುದನ್ನ ಮುಂದೆ ತಗೊಂಡು ಹೋಗಬೇಕು ಅಂತ ಗೊತ್ತಾಗಲ್ಲ.
ಭಾವನೆಗಳ ಏರುಪೇರು - ಕೆಲವೊಂದ್ಸಲ ತುಂಬಾ ದು:ಖ ಆಗುತ್ತೆ. ಇನ್ನ ಕೆಲವೊಂದ್ಸಲ ಖುಷೀನೂ ಆಗುತ್ತೆ. ಕಾರಣ ಇಲ್ದೇನೇ ಸಿಟ್ ಬರುತ್ತೆ. ಅಪ್ಪ ಅಮ್ಮನ್ ಮೇಲೆ, ತಮ್ಮ ತಂಗಿ ಮೇಲೆ ಎಲ್ಲ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ ಬರುತ್ತೆ. ಸುಮ್ ಸುಮ್ನೆ ರೇಗಾಡ್ತೀವಿ. ಯಾರ್ ನೋಡಿದ್ರೂನೂ ಹೊಡದಾಕಗಬಿಡೋಣ ಅಂತಾನೂ ಅನ್ಸುತ್ತೆ.
- ಭಾವನೆಗಳ ಬಗ್ಗೆ ಅತಿ ಸೂಕ್ಷ್ಮತೆ ತುಂಬಾ ಸೆನ್ಸಿಟೀವ್ ಆಗಿರ್ತೀವಿ. ಬೇಗ ಬೇಜಾರಾಗುತ್ತೆ. ಯಾರದಾದ್ರೂ ಏನಾದ್ರೂ ಅಂದ್ರೆ ಮುಜುಗರ ಆಗುತ್ತೆ. ನನ್ನ ಅರ್ತ ಮಾಡ್ಕೊಳೋರೆ ಯಾರೂ ಇಲ್ಲ , ಯಾರೂ ಬೇಡ ಅಂತ ಎಲ್ಲ ಅನ್ಸುತ್ತಲ್ವ? Insta ರೀಲ್ ಮಾಡ್ದಾಗ ಜಾಸ್ತಿ ಲೈಕೇ ಬಂದಿಲ್ಲ, ಇನ್ನೂ ಚೆನ್ನಾಗಿ ಮಾಡ್ಬೋದಿತ್ತು, ಬೇರೆಯವ್ರು ಎಷ್ಟು ಚೆನ್ನಾಗಿ ಮಾಡಿದಾರಲ್ಲ ಅಂತ ಜಲಸಿ ಆಗೋದು.
ನನ್ನನ್ನೇ ಎಲ್ಲಾರೂ ಗಮನಿಸ್ತ ಇದಾರೆ, ನಾನೇನಾದ್ರೂ ಮಾಡಿ ಅದೇನಾದ್ರೂ ತಪ್ಪಗೋದ್ರೆ ಅಂತ ಫುಲ್ ಕಾನ್ಶಿಯಸ್ ಆಗ್ತೀವಿ. ಎಲ್ಲ ನನ್ನೇ ನೋಡಿ ನಗ್ತಿದಾರೇನೋ ಗೇಲಿ ಮಾಡ್ತಿದಾರೆ ಅಂತ ಎಲ್ಲ ಅನ್ಸತ ಇರುತ್ತೆ.
- ಆಕರ್ಷಣೆಗಳು ಆಮೇಲೆ ಯಾರನ್ನಾದ್ರೂ ನೋಡಿದ್ರೆ ಫುಲ್ ಅಟ್ರಾಕ್ಷನ್ನು. ನಾನು ಇವನ್ನೇ ಮದ್ವೆ ಆದ್ರೆ ಚೆನ್ನಾಗಿರುತ್ತಲ್ಲ. ಫಿಲ್ಮಲ್ಲಿ ಯಶ್, ವಿಜಯ್, ಸೂರ್ಯ ನೋಡ್ಬಿಟ್ಟು ವಾವ್ ಸುಪರ್ ಆಗಿದಾರಲ್ಲ, ನಮಗೂನೂ ಇದೇ ಥರ ಯಾರಾದ್ರೂ ಸಿಕ್ಕದ್ರೆ ಸಕತ್ ಆಗಿರುತ್ತಲ್ಲ ಅಂತ. ಹೀರೋಯಿನ್ನ ನೋಡಿ ಎಷ್ಟು ಚೆನ್ನಾಗಿದಾಳೆ, ನಂಗೂನು ಅದೇ ಥರ ಡ್ರೆಸ್ ಮಾಡ್ಕೊಬೇಕು, ಮೇಕಪ್ ಮಾಡ್ಕೊಬೇಕು ಅಂತ ಎಲ್ಲ ಅನ್ಸುತ್ತೆ.
ಅನ್ಸುತ್ತೆ ತಾನೇ?
ಬೌಧ್ಧಿಕ ಬದಲಾವಣೆ x ಕೆಲವೊಂದ್ ವಿಷ್ಯ ಎಲ್ಲ ಇಷ್ಟ್ ದಿವ್ಸ ಅರ್ಥಾನೇ ಆಗ್ತ ಇಲ್ಲ ಅನ್ನಿಸ್ತಿರೋದು ಈಗ ಅಯ್ಯೋ ಇದು ಇಷ್ಟೇನಾ ಅನ್ನೋ ತರ ಅರ್ಥ ಆಗೋಗ್ ಸ್ಟಾರ್ಟ್ ಆಗ್ಬಿಡುತ್ತೆ.. ಟ್ಯೂಬಲೈಟ್ ಆನ್ ಆದ್ಮೇಲೆ ಉರಿಯುತ್ತಲ್ಲ ಹಾಗೆ.
ನಾನು ಏನ್ ಕಲೀಬೇಕು, ಆಮೇಲೆ ಅದನ್ನ ಹೇಗೆ ಕಲೀಬೇಕು ಅನ್ನೋದರ ಬಗ್ಗೆ ಎಲ್ಲ ಐಡಿಯಾಗಳು ಬರೋಕೆ ಸ್ಟಾರ್ಟ್ ಆಗುತ್ತಲ್ಲ. ಒಂದ್ ವಿಷ್ಯದ ಬಗ್ಗೆ ನನ್ ಅಭಿಪ್ರಾಯ ಅಂದರೆ ಇದೇನೆ ಅನ್ನೋತರ ನಮ್ಮ ಒಪಿನಿಯನ್‌ಗಳು ಫಾರ್ಮ್ ಆಗುತ್ತೆ. ನಾನು ಮುಂದೆ ಓದಿ ದೊಡ್ಡೋಳಾಗಿ ಡಾಕ್ಟರ್ ಆಗತ್ತೀನಿ, ಇಂಜಿನಿಯರ್ ಆಗ್ತೀನಿ, ಫ್ಯೂಚರಲ್ಲಿ ನಮ್ಮನೆ ಹಿಂಗಿರ್ಬೇಕು, ನಂಜೋತೆ ಇವ್ರೆಲ್ಲ ಇರಬೇಕು ಅಂತ ಎಲ್ಲ ಯೋಚನೆ ಮಾಡ್ತೀವಿ..
ನಾನು ಹೇಳಿದ್ದು ಸರಿನ ತಪ್ಪ ಅಂತ ನಮ್ಮನ್ನ ನಾವೇ ವಿಚಾರಿಸಿಕೊಳ್ಳೋದು, ಏನಾದರೂ ತಪ್ಪೇಳ್ಬಿಟ್ನ ಅಂತ ಯೋಚನೆ ಎಲ್ಲ ಬರುತ್ತೆ.
ಬರುತ್ತೆ ತಾನೆ??
ಇದಕ್ಕೆಲ್ಲ ಕಾರಣಾನೆ ನೀವು ಈಗ ಟೀನೇಜ್ ಅಲ್ಲಿ ಇರೋದು. ನಂಗೆ ಹೀಗೆಲ್ಲ ಅನ್ನಿಸ್ತಿದಯಲ್ಲ ಅಂತ ಏನೂ ಭಯ, ಆತಂಕ ಮಡೋ ಅವಶ್ಯಕತೆನೇ ಇಲ್ಲ. ಇದೆಲ್ಲಾ ಅನ್ಸೋದು ನಾರ್ಮಲ್ಲು ಅಂತ ತಿಳ್ಕೊಂಡ್ರೆ ಸಾಕು.
ಇವೆಲ್ಲಾ ನಿಮ್ಗೆ ಯಾಕೆ ಗೊತ್ತಿರ್ಬೇಕು ಅಂತ ಹೇಳ್ತೀರ?
ಈ ಬದಲಾವಣೆಗಳು ಗೊತ್ತಿದ್ರೆ, ನಾವು ರೆಡಿಯಾಗಿರ್ಬಹುದು. ದೈಹಿಕ ಬದಲಾವಣೆಗಳ ಬಗ್ಗೆ ಗೊತ್ತಿದ್ರೆ,ನಾವು, ನಮ್ ದೇಹಕ್ಕೆ ನಮ್ ಕಡೆಯಿಂದ ಹೆಲ್ಪ್ ಮಾಡಕ್ಕೆ, ನಮ್ಕೈಲಿ ಆದಷ್ಟು ಒಳ್ಳೆ/ಪೌಷ್ಟಿಕವಾದ ಊಟ, ತಿಂಡಿ, ನೀರು ಕೊಡ್ಬಹುದು. ಅಂದ್ರೆ ಮಧ್ಯಾಹ್ನ ಸ್ಕೂಲಲ್ಲಿ, ಇಲ್ಲ ದಿನಾ ಮನೇಲಿ ಊಟ ಮಾಡ್ಬೇಕಾದ್ರೆ ನಂಗೆ ಈ ತರ್ಕಾರಿ ಇಷ್ಟ ಇಲ್ಲ, ನಾನು ಇದನ್ ತಿನ್ನಲ್ಲ, ಇದು ಬೇಡ, ನಂಗೆ ಇಷ್ಟೇ ಸಾಕು ಅಂತ ಸರ್ಯಾಗಿ ತಿಂದಲೇ ಇರೋದು ಮಾಡಿದ್ರೆ ನಮಿಗೆ ನಾವೇ ತೊಂದರೆ ಮಾಡ್ಕೊಂಡ ಹಾಗೆ. ಸೋ ನಮ್ ದೇಹ ತನ್ನಲ್ಲಿ ಆಗ್ತಾ ಇರೋ ಎಲ್ಲಾ ಬದಲಾವಣೆಗಳನ್ನ ಆರೋಗ್ಯಕರವಾಗಿ ಮಾಡ್ಬೇಕು ಅಂದ್ರೆ ಅದಕ್ಕೆ ನಾವು ಸಹಾಯ ಮಾಡ್ಲೇಬೇಕಲ್ಲ !! ಸೋ ಚಿಕ್ಕ ಮಗು ಅಂದ್ರೆ “ಥೂ ನಂಗೆ ಇದು ಸೇರಲ್ಲ, ನಾನು ಇದನ್ನ ತಿನ್ನಲ್ಲ” ಅನ್ಬಹುದು, ಆದ್ರೆ, ಪ್ರೌಢಾವಸ್ಥೆಗೆ ರೆಡಿ ಆಗ್ತಿರೋ ಕಿಶೋರಿಯಾಗಿ ನಾನು ಚಿಕ್ ಮಗು ಅಲ್ಲ ಅಲ್ವ, ಹಾಗಾಗಿ ನಾನು, “ಕಷ್ಟ ಪಟ್ಟಾದ್ರು ಇದನ್ನ ತಿಂದ್ರೆ ನಂಗೇ ಒಳ್ಳೇದು” ಅಂತ ತಿನ್ಬೇಕಾಗಿ ಬರ್ಬಹುದು ನಮ್ ಬಾಡಿಗೆ ಬೇಕಿರೋ ಪೆಟ್ರೋಲ್ ಕೊಡೋವ್ರು ಯಾರು ? ನಾವು ನಾವು :)
ಮಾನಸಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಗೊತ್ತಿದ್ರೆ, ನಂಗಾಗ್ತಿರೋ ಫೀಲಿಂಗ್ ಗಳನ್ನ ಗಮನಿಸಿ, ಇದು ನಾರ್ಮಲ್ ಅಂತ ಅಂದ್ಕೊಂಡು ನೆಮ್ಮದಿಯಾಗಿರ್ಬಹುದು. ಇಲ್ಲಾಂದ್ರೆ, ನಮ್ ಮೂಡಗಳೇ ನಾವು ಅಂದ್ಕೊಂಡ್ ಅದಕ್ಕೇ ಗಟ್ಟಿಯಾಗಿ ಅಂಟ್ಕೊಂಡ್ಬಿಡೋ ಡೇಂಜರ್ ಇದೆ. ಉದಾಹರಣೆಗೆ, ನಾನು ಕೋಪಿಷ್ಟೆ,, ಹಠಮಾರಿ, ಅಳುಬುರ್ಕಿ, ಪುಕ್ಲಿ, ಬುಧ್ಧಿ ಇಲ್ಲ, ಪೆದ್ದು, ಇತ್ಯಾದಿ ಸೋ ನಿಮ್ಗೆ ಏನ್ ಗೊತ್ತಿರ್ಲೇಬೇಕು ಅಂದ್ರೆ, ನೀವು ನಿಮ್ಮ ಮೂಡ್ ಅಲ್ಲ, ಕೋಪ ಬರೊದು ಹೋಗೋದು ಸಹಜ ಆದ್ರೆ ಅದರರ್ಥ ಕೋಪಿಷ್ಟೆ ಅಂತ ಅಲ್ಲ. ನಿಮ್ಮನ್ನ ನಿಮ್ ಮೂಡ್ ಗಳನ್ನ ನೀವೇ ಗಮನಿಸಿಕೊಳ್ಲಕ್ಕೆ ಈಗಿಂದ ಸಾಧ್ಯ ಆಗ್ಬೇಕು - ಗಮನಿಸ್ತೀರ? ಓಕೇನ?
ಭೌಧ್ಧಿಕವಾಗಿ ಆಗ್ತಿರೋ ಬದಲಾವಣೆಗಳ ಬಗ್ಗೆ ಅರ್ಥ ಯಾಕ್ ಮಾಡ್ಕೋಬೇಕು? ಅಥ್ವ ಅದ್ರ ಬಗ್ಗೆ ಗೊತ್ತಿದ್ರೆ, ನಾನು ನನ್ ಜೀವನದ್ ಬಗ್ಗೆ ಚಿಕ್, ದೊಡ್ಡ ನಿರ್ಣಯಗಳನ್ನ ಮಾಡ್ಬಹುದು. ಉದಾಹರಣೆಗೆ, ಈ ಲೆಕ್ಕ ನಂಗ್ಯಾಕೆ ಬರಲ್ಲ ನೋಡೇಬಿಡ್ತೀನಿ ಅಂತ ಹೊಸ ಥರ ಕಲ್ಯಕ್ಕೆ ಟ್ರೈ ಮಾಡೋದಾಗಿರ್ಬಹುದು, ನಾನು ಈ ಥರ ಇದ್ರೆ ಚೆನ್ನಾಗಿರುತ್ತೆ ಅಂತ ಯೋಚ್ನೆ ಮಾಡಿ ಅಂದ್ಕೊಳ್ಳೋದ್ ಆಗಿರ್ಬಹುದು, ನಂಗೆ ಚಿಕ್ಕವಳಿದ್ದಾಗಿಂದ ಗೊತ್ತಿರೋ ಪರಿಸರಾನ/ವಿಷ್ಯಗಳನ್ನ ಹೊಸದಾಗಿ ಅರ್ಥಮಾಡ್ಕೊಳ್ಳೋದಿಕ್ಕೆ ಇದರ ಅಗತ್ಯ ಇದೆ - ಉದಾಹರಣೆಗೆ ಈ ಕ್ಲಾಸ್ ಆದ್ಮೇಲೆ ನಾನು ನನ್ ದೇಹಕ್ಕೆ ಬೇಕಾದ ಊಟ ತಿಂಡಿ ತಿಂತೀನಿ ಅಂತ ನಿರ್ಥಾರ ಮಾಡ್ಕೋಬಹುದು ಲಾಜಿಕ್ ಅರ್ತ ಆಗೋದು - ಇದು ಯಾಕೆ ಹೀಗೆ ಅಂತ - ಹೇಗೆ ಒಂದ್ ಸಸಿಗೆ ನೀರು, ಗೊಬ್ಬರ, ಸೂರ್ಯನ ಶಾಖ ಇಲ್ಲದೇ ಇದ್ರೆ ಸೊರ್ಗೋಗುತ್ತೋ ಅದೇ ಥರ ನಾವೂನೂ ಕರೆಕ್ಕ್ಟಾಗಿರೋ ಊಟ, ನೀರು,ನಿದ್ದೆ ಇಲ್ಲದೇ ಇದ್ರೆ ಸೊರ್ಗೋಗ್ತೀವಿ ಅಂತ ಆಗಿರ್ಬೋದು, ಇಲ್ಲ ಮಗ್ಗಿ ಗಟ್ ಹೊಡ್ದಿಲ್ಲ ಅಂದ್ರೂನೂ ಅದನ್ನ ಹೇಗೆ ಲೆಕ್ಕಮಾಡ್ಕೋಬೇಕು ಅಂತ ಗೊತ್ತಾಗೋದಾಗಿರ್ಬಹುದು (೮ ರಮಗ್ಗಿ ಬಂದ್ರೆ ೧೮ರದ್ದು ಸುಲಭ ೧೮x2 = ಎರಡೇಂಟ್ಲಿ ಹದಿನಾರು, ದಶಕ ಒಂದು, ೨ ಒಂದ್ಲಿ ಎರಡು ಪ್ಲಸ್ ದಶಕ ಒಂದು ಸೇರ್ಸಿದ್ರೆ ಮೂರು, = ೩೬)
<<<Occupation slide>>>>
ನೋಡಿ ಈ ಚಿತ್ರದಲ್ಲಿ ಏನೇನೆಲ್ಲ ಇವೆ? ಅವ್ರು ಲಿಸ್ಟ್ ಮಾಡ್ತಾರೆ. ಅವ್ರು ಎನೇಳ್ತಾರೋ ಅದರ ಆಧಾರದ ಮೇಲೆ ನಾವೂ ಕೂಡ ನಮ್ಮ ದೇಹ, ಮನಸ್ಸು, ಬೌದ್ಧಿಕತೆ (ಯೋಚ್ನೆಮಾಡೋ ಪವರ್) ನ ಬಳ್ಸಿ, ನಮಗೆ ಇಷ್ಟ ಆದ ಕೆಲ್ಸಮಾಡ್ಕೊಂಡು, ನಮ್ ಜೀವ್ನ ಎಲ್ಲ ರೀತಿನಲ್ಲೂ ಸೂಪರ್ ಆಗಿರೊ ಥರ ರೂಪಿಸಕೊಳ್ಳೋಕೆ ಪ್ರಯತ್ನ ಮಾಡೋಣ್ವ? ಹೂಂ ಅನ್ನುಸ್ಬೇಕು, ಹೌದು ಮಾಡ್ತಿವಿ, ಮಾಡ್ಲೇಬೇಕು ಇತ್ಯಾದಿ
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು - 3 Resources Required Projector Spike buster Laptop Camera Time required 45 minutes Inputs Outputs