"ರಚನಾ ಸಮಾಜ ವಿಜ್ಞಾನ 9 9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಪರಿಚಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =6. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಪರಿಚಯ = ಎನ್.ಸಿ.ಎಫ್ 2005ರ ಮಾರ್ಗಸೂ...)
 
( ಯಾವುದೇ ವ್ಯತ್ಯಾಸವಿಲ್ಲ )

೧೫:೪೮, ೯ ನವೆಂಬರ್ ೨೦೧೩ ದ ಇತ್ತೀಚಿನ ಆವೃತ್ತಿ

6. 9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಪರಿಚಯ

ಎನ್.ಸಿ.ಎಫ್ 2005ರ ಮಾರ್ಗಸೂಚಿಯಂತೆ, 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೂ ಕೂಡ ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನಗಳನ್ನು ಒಳಗೊಂಡ ಅಂಶಗಳನ್ನು ಸೇರಿಸಲಾಗಿದ್ದು, ಇಲ್ಲಿನ ವಿಷಯ ಹಾಗೂ ಅಭ್ಯಾಸಗಳು ವಿದ್ಯಾಗಳನ್ನು ಯೋಚನೆ ಮಾಡುವಂತೆಯೂ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮಥ್ರ್ಯಗಳನ್ನು ಮಗು ಪಡೆಯುವಂತೆಯೂ ಟಕಗಳನ್ನು ರಚಿಸಲಾಗಿದೆ.

ಈ ನೂತನ ಪಠ್ಯ ಪುಸ್ತಕವು ಪರೀಕ್ಷಾ ದೃಷ್ಟಿಯಿಂದ ರಚಿತವಾಗಿರದೆ ವಿದ್ಯಾಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ಮತ್ತು ಮಕ್ಕಳು ಸ್ವಸ್ಥ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಪುಟಗಳ ವಿನ್ಯಾಸಕ್ಕೆ ಮಹತ್ವಕೊಡಲಾಗಿದೆ. ಇಂದಿನ ಸ್ಪರ್ಧಾತ್ಮಕ ಹಾಗೂ ಮಾಹಿತಿ ಯುಗಕ್ಕೆ ಅನುಕೂಲವಾಗುವಂತೆ ಹೆಚ್ಚಿನ ವಿಷಯಗಳನ್ನು ಸೇರಿಸಲಾಗಿದೆ. ಪಠ್ಯ ಪುಸ್ತಕದಲ್ಲಿ ಕ್ಲಿಷ್ಟವಾದ ಪದಗಳನ್ನು ತೆಗೆದು ಸರಳ ಶಬ್ದಗಳ ಜೋಡಣೆ ಕಠಿಣವಾದ ಪದಗಳಿಗೆ ಅರ್ಥ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇಸವಿಗಳನ್ನು ನೀಡಿದ್ದು ಉತ್ತಮ ಕಲಿಕಾಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

ಅಲ್ಲದೆ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ಕಲಿಕಾಂಶಗಳು ವಿದ್ಯಾಗಳನ್ನು ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರದ ಅಭ್ಯಾಸಗಳಿಗೆ ತೊಡಗುವಂತೆ ಮಾಡಿ ಆ ಮೂಲಕ ಅವಶ್ಯಕ ಭಾರತೀಯ ಜೀವನ ಮೌಲ್ಯಗಳನ್ನು ಕಲಿಕೆಯ ಮೂಲಕ ತಾವೇ ಕಟ್ಟಿಕೊಳ್ಳುವಂತಹ ವ್ಯವಸ್ಥೆಯನ್ನು ಚಟುವಟಿಕೆಗಳ ಮೂಲಕ ಅನುವು ಮಾಡಿ ಕೊಡಲಾಗಿದೆ. ಉದಾಹರಣೆಯಾಗಿ ನೀಡಿರುವ ಚಟುವಟಿಕೆಗಳನ್ನೇ ತಾವು ತರಗತಿಯಲ್ಲಿ ಬಳಸಬೇಕೆಂದೇನಿಲ್ಲ. ತಮ್ಮ ತಮ್ಮ ಸೂಕ್ತ ಮಾರ್ಪಾಡುಗಳೊಂದಿಗೆ ಬಳಸಿಕೊಳ್ಳಬಹುದಾಗಿದೆ ಎಂಬುದನ್ನು ಮರೆಯಬಾರದು. ಏಕೆಂದರೆ ಮಕ್ಕಳನ್ನು ಶಾಲೆಯಲ್ಲಿಯೇ ಸಮಾಜ ಜೀವನಕ್ಕೆ ಅಣಿಗೊಳಿಸುವ ಮಹತ್ತರವಾದ ಕೆಲಸ ಇಂದಿನ ಶಿಕ್ಷಣ ಕ್ರಮದ ಕಾಳಜಿಯಾಗಿರುವುದರಿಂದ ಮಗು ತನ್ನ ಜೀವನದ ಸಂರ್ಷಗಳಿಂದ ಮುಕ್ತರಾಗಲು ಶಾಲೆ ಬಹುಮುಖ್ಯವಾಗಿ ಮಾರ್ಗದರ್ಶನ ನೀಡಬೇಕಾಗಿರುವುದರಿಂದ ಮಗುವಿನ ಅನುಭವಾತ್ಮಕ ಕಲಿಕೆಗಳೊಂದಿಗೆ ಸಮಾಜ ವಿಜ್ಞಾನದ ತರಗತಿ ಪ್ರಕ್ರಿಯೆಗಳು ನಡೆಯುವಂತೆ ಇಲ್ಲಿ ಆಲೋಚಿಸಲೇಬೇಕಾಗಿದೆ.

ಈ ಹಿನ್ನೆಲೆಯಲ್ಲಿಯೇ ಸಮಾಜ ವಿಜ್ಞಾನ ಪಠ್ಯದ ವಿಷಯವು ಏಕತೆಯ ಮನೋಭಾವವನ್ನು ಒಳಗೊಂಡಿದ್ದು, ಲಿಂಗ ಸಮಾನತೆ, ವರ್ಗ ಸಮಾನತೆ ಬುಡಕಟ್ಟು, ದಲಿತ, ಅಲ್ಪ ಸಂಖ್ಯಾತರ ಬಗ್ಗೆ ಕಾಳಜಿಗಳನ್ನು ಬಳಸಿಕೊಳ್ಳುವಂತೆ ಮಕ್ಕಳು ಕಲಿಯಲು ಅವಕಾಶ ಕಲ್ಪಿಸಿರುವುದರಿಂದ ಶಿಕ್ಷಕರು ವಿಮರ್ಶಾತ್ಮಕ ಚಿಂತನೆ, ಇದಕ್ಕೆ ಮಕ್ಕಳನ್ನು ಅಣಿಗೊಳಿಸುವುದು, ಕಡ್ಡಾಯವಾಗಿದೆ. ಸಾಮಾಜಿಕ, ಆಕ, ನೈತಿಕ ಕ್ಷೇತ್ರಗಳಲ್ಲಿ ಚಿಂತನ ಪರವಾದ, ಹಾಗೂ ವರ್ತಮಾನದ ಕಾಳಜಿಗಳನ್ನು, ಮಕ್ಕಳು ಕಲಿಯುತ್ತಾ ಪ್ರಜಾಸತ್ತಾತ್ಮಕವಾದ ಭಾವನೆಗಳನ್ನು ಸಮಾಜ ವಿಜ್ಞಾನ ವಿಷಯದಲ್ಲಿ ಕಟ್ಟಿಕೊಳ್ಳುವುದು ಕೂಡ ಅನಿವಾರ್ಯವಾಗಿದೆ ಎಂಬುದನ್ನು ಶಿಕ್ಷಕರು ಮನಗಾಣಬೇಕು.

ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ 9ನೇ ತರಗತಿ ಸಮಾಜ ವಿಜ್ಞಾನ ತರಗತಿ ಪ್ರಕ್ರಿಯೆಗಳಲ್ಲಿ ವಿಮರ್ಶಾತ್ಮಕ ಶಿಕ್ಷಣ ಕ್ರಮದೊಂದಿಗೆ ಮಗುವಿನ ಅನುಭವಾತ್ಮಕ ಕಲಿಕೆಗೆ ಟಕಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು ಎಂಬ ಸೂಕ್ಷ್ಮ ಪರಿಚಯವನ್ನು ಈ ಕೆಳಗಿನ ಉದಾಹರಣೆಗಳೊಂದಿಗೆ ಶಿಕ್ಷಕರು ಗಮನಿಸಬಹುದು.

ಉದಾಹರಣೆ

ಕರ್ನಾಟಕದ ಜನಸಂಖ್ಯೆ (ಭೂಗೋಳ) ಎಂಬ ಟಕದಲ್ಲಿ ಜನಸಂಖ್ಯೆಯನ್ನು- `ಸಂಪನ್ಮೂಲ ಹೇಗೆ?' ಎಂದು ಅರ್ಥೈಸಲಾಗಿದೆ.

ಈ ಜ್ಞಾನವನ್ನು ಮಗು ಅರಿಯುವಾಗ ತನ್ನ ಕುಟುಂಬದಲ್ಲಿನ ಸದಸ್ಯರ (ತಂದೆ, ತಾಯಿ, ಅಣ್ಣ ತಮ್ಮ, ಅಜ್ಜಿ, ತಾತ ಒಳಗೊಂಡಂತೆ) ಮನೆಯ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಅವರ ಪ್ರಾಮುಖ್ಯತೆ ಏನೆಂಬುದನ್ನು ಅರಿಯುವುದರೊಂದಿಗೆ ಹಾಗೂ ತನ್ನೂರಿನಲ್ಲಿ ಯಾವುದೇ ಸಾರ್ವತ್ರಿಕ ಕೆಲಸವನ್ನು (ದೇವರ ಜಾತ್ರೆ, ಹಬ್ಬ, ಉತ್ಸವ ಇತ್ಯಾದಿ) ಸಾಮೂಹಿಕ ಜನ ಭಾಗವಹಿಸಿ ಮಾಡುವ ಕಾರ್ಯಗಳ ಹಿನ್ನಲೆಯಲ್ಲಿ ರಾಜ್ಯದ, ದೇಶದ, ಜಸಂಖ್ಯೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು.

ಈ ಟಕದ ಮಗುವಿನ ಅನುಭವಾತ್ಮಕ ಕಲಿಕೆಗೆ ಈ ಕೆಳಗಿನ ಚಟುವಟಿಕೆಯನ್ನು ಸೂಚಿಸಲಾಗಿದೆ.

  • ತರಗತಿಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 4 ಅಥವಾ 5 ಗುಂಪುಗಳನ್ನು ರಚಿಸುವುದು.

ಪ್ರತಿ ಗುಂಪಿನ ಮಕ್ಕಳಿಗೂ ತಮ್ಮ ತಮ್ಮ ಕುಟುಂಬಗಳ ಸದಸ್ಯರ ಕೆಳಗಿನ ಮಾಹಿತಿಗಳನ್ನು ಸಂಗ್ರಹಿಸುವುದು.

  • ಗಂಡು-ಹೆಣ್ಣಿನ ಪ್ರಮಾಣ
  • ಅಕ್ಷರಸ್ಥರು-ಅನಕ್ಷರಸ್ಥರು
  • ವಯೋಮಾನ
  • ದುಡಿಮೆ ಮಾಡುವವರು
  • ದುಡಿಮೆ ಇಲ್ಲದವರು
  • ಕುಟುಂಬದ ಯಜಮಾನ
  • ಆರೋಗ್ಯವಂತರು

ಈ ಅಂಶಗಳನ್ನು ಪಟ್ಟಿಮಾಡಿ ಪರಸ್ಪರ ಚರ್ಚಿಸಿ ಪ್ರತಿ ಕುಟುಂಬದ ಸದಸ್ಯರ ಮಹತ್ವವನ್ನು ಅರಿಯುವುದು.

  • ನಂತರ ತರಗತಿಯ ಎಲ್ಲ ಗುಂಪಿನಲ್ಲಿ ಸರಾಸರಿಯಾಗಿ ದುಡಿಯುವ ವಯೋಮಾನದವರ ಪ್ರಮಾಣ ಅನಕ್ಷರತೆ, ಸಾಕ್ಷರತೆ, ಗಂಡು ಹೆಣ್ಣಿನ ಪ್ರಮಾಣ ಹಾಗೂ ದುಡಿಯದವರ ಪ್ರಮಾಣವನ್ನು ಕಪ್ಪು ಹಲಗೆಯ ಮೇಲೆ ಬರೆಯುವುದು.
  • ಆ ಮೂಲಕ ಕುಟುಂಬಗಳಲ್ಲಿ ದುಡಿಯುವವರು ಯಾರು? ಅವರ ಆರೋಗ್ಯ, ಕಾರ್ಯಕ್ಷಮತೆಯನ್ನು ಮಕ್ಕಳು ತಿಳಿಯುವುದರ ಮೂಲಕ ದುಡಿಯುವ ಸದಸ್ಯರು ಕುಟುಂಬ ಒಂದಕ್ಕೆ ಹೇಗೆ ಪ್ರಮುಖರೆನ್ನಿಸುತ್ತಾರೆ (ಸಂಪನ್ಮೂಲ) ಎಂಬುವ ಹಿನ್ನಲೆಯಲ್ಲಿ ರಾಜ್ಯ ಅಥವಾ ದೇಶಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲದ ಪ್ರಾಮುಖ್ಯತೆಯ ಅರಿವಿನ ಜ್ಞಾನವನ್ನು ಕಟ್ಟಿಕೊಳ್ಳುವುದು.

ಹೀಗೆ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ಪ್ರತಿ ವಿಭಾಗದ ಟಕಗಳನ್ನು ಅನುಭವಾತ್ಮಕವಾಗಿ ಮಗು ಅರ್ಥೈಸಿಕೊಂಡು ಜ್ಞಾನ ಕಟ್ಟಿಕೊಳ್ಳುವಂತಹ ತರಗತಿಯ ಪ್ರಕ್ರಿಯೆಯ ಅನಿವಾರ್ಯತೆ ಇದೆ ಎಂಬುದು ಸಮಾಜ ವಿಜ್ಞಾನ ಪಠ್ಯಪುಸ್ತಕದ ಆಶಯವಾಗಿದೆ. ಆದ್ದರಿಂದಲೇ ನೂತನ ಪಠ್ಯ ಪುಸ್ತಕವು ಓಅಈ 2005ರ ಮಾರ್ಗದರ್ಶನದಂತೆ ಭಿನ್ನವಾಗಿ, ವಿಶಿಷ್ಟವಾಗಿ ಮೂಡಿಬಂದಿದೆ.