"ರಚನಾ ಸಮಾಜ ವಿಜ್ಞಾನ 9 ವಾರ್ಷಿಕ ಪಾಠ ಯೋಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: =10. ವಾರ್ಷಿಕ ಪಾಠ ಯೋಜನೆ = ಹೊಸ ಶಿಕ್ಷಣ ಕ್ರಮದ ನಿರ್ದೇಶನದಂತೆ, ಎನ್.ಸಿ.ಎಫ್. ಮತ...) |
( ಯಾವುದೇ ವ್ಯತ್ಯಾಸವಿಲ್ಲ )
|
೧೪:೫೨, ೧೦ ನವೆಂಬರ್ ೨೦೧೩ ದ ಇತ್ತೀಚಿನ ಆವೃತ್ತಿ
10. ವಾರ್ಷಿಕ ಪಾಠ ಯೋಜನೆ
ಹೊಸ ಶಿಕ್ಷಣ ಕ್ರಮದ ನಿರ್ದೇಶನದಂತೆ, ಎನ್.ಸಿ.ಎಫ್. ಮತ್ತು ಸಿ.ಸಿ.ಇ. ಆಶಯದಂತೆ ತರಗತಿಯ ಕಲಿಕಾ ಪ್ರಕ್ರಿಯೆಗೆ ಒಂದು ನಿರ್ದಿಷ್ಟವಾದ ಚೌಕಟ್ಟನ್ನು ಕಲ್ಪಿಸಿಕೊಳ್ಳದಿದ್ದರೂ ಅನುಕೂಲಕಾರ (ಶಿಕ್ಷಕ)ರಿಗೆ Hand Post ನಂತೆ ಸಹಾಯ ಮಾಡುವಲ್ಲಿ ಈ ವಾರ್ಷಿಕ ಪಾಠಯೋಜನೆಯ ಪರಿಕಲ್ಪನೆ ಉಪಯುಕ್ತವಾಗುತ್ತದೆ ಎನ್ನುವ ಹಿನ್ನಲೆಯಲ್ಲಿ ವಾರ್ಷಿಕ ಪಾಠಯೋಜನೆಯ ರೂಪುರೇಷೆಗಳನ್ನು ಸಾಹಿತ್ಯ ರಚನಾ ತಂಡವು ತಮ್ಮ ಮುಂದಿಡುತ್ತಿದೆ.
ರಚನಾವಾದಿ ಪದ್ಧತಿಗಳನ್ನು ಆಧರಿಸಿ, ನಿರ್ವಹಿಸುವ ತರಗತಿಯ ಕಲಿಕೆಯು ಅನುಕೂಲಕಾರರ (ಶಿಕ್ಷಕರ) ಮಾರ್ಗದರ್ಶನದಲ್ಲಿ ಪ್ರತಿ ಮಗುವು ತನ್ನದೇ ಆದ ರೀತಿಯಲ್ಲಿ ಅನುಭವಗಳ ಮೂಲಕ ಜ್ಞಾನ ಕಟ್ಟಿಕೊಳ್ಳಬೇಕಾಗಿದೆ. ಈ ಸಂಬಂಧ ಶಿಕ್ಷಕರೇ ಎಲ್ಲವನ್ನೂ ಹೇಳುವುದಿಲ್ಲವಾದ್ದರಿಂದ, ಸಂವೇದನಶೀಲವಾದ ತರಗತಿ ನಿರ್ವಹಣೆಯ ಪದ್ಧತಿಗಳನ್ನು, ಚಟುವಟಿಕೆಗಳನ್ನು ಒಳಗೊಂಡಂತೆ, ಕಲಿಕಾ ಸಂದರ್ಭದಲ್ಲಿ ನನ್ನ ಪಾತ್ರ ಏನು, ಏಕೆ ಹೇಗೆ ನಿರ್ವಹಿಸಬೇಕು ಎನ್ನುವ ಹಿನ್ನಲೆಯಲ್ಲಿ ವಾರ್ಷಿಕ ಪಾಠ ಯೋಜನೆಯನ್ನು ಅನುಕೂಲಕಾರನು ತನಗಾಗಿ ರೂಪಿಸಿಕೊಳ್ಳಬೇಕಿದೆ.
ಮಕ್ಕಳ ಅನುಭವಗಳ ಪರಿಧಿಯೊಳಗೆ ಬರುವ ವಸ್ತು, ಅಂಶ, ಘಟನೆಗಳಿಂದ ಕಲಿಕೆಯನ್ನು ಆರಂಭಿಸಿ, ಹೊಸ ವಿಷಯಗಳತ್ತ ಮುಂದುವರೆಸುವುದು ಹೇಗೆ ಎಂಬುದಕ್ಕೆ ನಿರ್ದಿಷ್ಟ ಪರಿಕಲ್ಪನೆಯನ್ನು ಈ ವಾರ್ಷಿಕ ಪಾಠ ಯೋಜನೆಯಲ್ಲಿ ಅರ್ಥಪೂರ್ಣವಾದ ಹಾಗೂ ಪೂರಕವಾದ ಅಂಶ, ಸಲಹೆ ಸೂಚನೆಗಳನ್ನು ದಾಖಲಿಸಿಕೊಳ್ಳಬೇಕಾಗುತ್ತದೆ.
ಅನುಕೂಲಕಾರ, ಕಲಿಕೆ, ಕಲಿಕೆಯನ್ನು ಅನುಕೂಲಿಸುವುದು ಎಂಬುದನ್ನು ಒಳಗೊಂಡಂತೆ ಜ್ಞಾನದ ಪುನರ್ರಚನೆಗೆ ವಿದ್ಯಾಗಳನ್ನು ಹೇಗೆ ಉತ್ತೇಜಿಸಿ ಕಟ್ಟಿಕೊಂಡ ಜ್ಞಾನವನ್ನು ಅವಶ್ಯಕತೆಗಳಿಗನುಸಾರವಾಗಿ ಸಮನ್ವಯಿಸಲು ಪ್ರತಿಪಾಠವನ್ನು ಬಳಸಿಕೊಳ್ಳುವ ಪ್ರಕ್ರಿಯೆಯನ್ನು ವಾರ್ಷಿಕ ಪಾಠಯೋಜನೆಯು ಒಳಗೊಂಡಿರಬೇಕು. ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ವಾರ್ಷಿಕ ಪಾಠ ಯೋಜನೆಯ ರಚನೆಯ ಉದ್ದೇಶಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.
- ಅನುಭವಾತ್ಮಕ ಚಟುವಟಿಕೆಗಳನ್ನು ಒಳಗೊಂಡಿರಬೇಕು.
- ಏನನ್ನು ಕಲಿಯುವುದು? ಹೇಗೆ ಕಲಿಯುವುದು ಎಂಬುದಕ್ಕೆ ಸ್ಪಷ್ಟತೆಯನ್ನು ನೀಡಿರಬೇಕು.
- ಅನುಕೂಲಕಾರರ ಪೂರ್ವಸಿದ್ಧತೆ ಕಲಿಕಾ ಸಾಮಗ್ರಿ, ಆಕರ ಸಂಪನ್ಮೂಲ, ಮೇಲ್ವಿಚಾರಣೆ, ಮೌಲ್ಯಮಾಪನ ವಿಧಾನಗಳನ್ನು ಸೂಕ್ಷ್ಮವಾಗಿ ಸೂಚಿಸಿರುವುದು.
- ಮಕ್ಕಳ ವಿಮರ್ಶಾತ್ಮಕ ಚಿಂತನೆಗೆ ವಿಧಾನಗಳನ್ನು ಸಂಗ್ರಹಿಸುವುದು.
- ಚರ್ಚೆಗಳಿಗೆ ಅವಕಾಶ ನೀಡುವುದು.
- ಕಲಿಕೆ ಮತ್ತು ಮೌಲ್ಯಮಾಪನದಲ್ಲಿ ಅಗತ್ಯವಾಗಿ ಬೇಕಾಗುವ ಸಾಧನಗಳು ಮತ್ತು ತಂತ್ರಗಳನ್ನು ಸಂಗ್ರಹಿಸಿಕೊಳ್ಳುವುದು.
- ಘಟಕವಾರು ಪ್ರಮುಖ ಜ್ಞಾನ ರಚನೆಯ ಅಂಶಗಳು ದೊರೆಯುವ ಅವಧಿಗಳು ಹಾಗೂ ಮನನ ಮಾಡಿಕೊಳ್ಳಲೇಬೇಕಾಗುವಂತಹ ಅಂಶಗಳನ್ನು ಸ್ಪಷ್ಪಪಡಿಸಿಕೊಳ್ಳುವುದು.