"ಆಧಾರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೯೬ ನೇ ಸಾಲು: | ೯೬ ನೇ ಸಾಲು: | ||
[[File:History_Lesson_1_unicode_html_a10f45a.jpg|400px]] | [[File:History_Lesson_1_unicode_html_a10f45a.jpg|400px]] | ||
[[File:History_Lesson_1_unicode_html_2927ec80.jpg|400px]] | [[File:History_Lesson_1_unicode_html_2927ec80.jpg|400px]] | ||
+ | [[File:History_Lesson_1_unicode_html_3873caf7.jpg|400px]] |
೧೫:೪೩, ೧ ಜೂನ್ ೨೦೧೩ ನಂತೆ ಪರಿಷ್ಕರಣೆ
ಚರಿತ್ರೆ ರಚನೆಗೆ ಆಧಾರಗಳು ಏಕೆ ಬೇಕು '?
ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲಾಧಾರಗಳು.
ಇತಿಹಾಸ ರಚನೆಗೆ ಆಧಾರಗಳು ಮೂಲ ಸಾಮಾಗ್ರಿಗಳು,ಗತಿಸಿಹೋದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಆಧಾರಗಳು ಬಹುಮಖ್ಯ.
ಆಧಾರಗಳಲ್ಲಿ '2 ವಿಧ.
ಸಾಹಿತಿಕ ಆಧಾರಗಳು'.
ಮನುಷ್ಯನು ತಾನು ನೋಡಿದ್ದು,ಆಲೋಚಿಸಿದ್ದು ಹಾಗೂ ಅನುಭವಿಸಿದ್ದನ್ನು ಬರವಣಿಗೆಯ ಮೂಲಕ ದಾಖಲಿಸುವುದನ್ನು ಸಾಹಿತಿಕ ಆಧಾರಗಳು ಎನ್ನುವರು.
ಸಾಹಿತಿಕ ಆಧಾರಗಳಲ್ಲಿ 2 ವಿಧ.
ದೇಶೀಯ ಸಾಹಿತ್ಯ - ಭಾರತೀಯರಿಂದಲೇ ರಚಿತ ವಾಗಿರುವ ಗ್ರಂಥಗಳು.
ಉದಾ;- ವಿಶಾಖದತ್ತನ ‘ಮುದ್ರಾರಾಕ್ಷಸ’, ಕಲ್ಹಣನ ‘ರಾಜತರಂಗಿಣಿ’,ಅಶ್ವಘೋಷನ ‘ಬುದ್ಧಚರಿತ’, ಕೌಟಿಲ್ಯನ ‘ಅರ್ಥಶಾಸ್ರ್ತ’, ಬೌದ್ಧ ಸಾಹಿತ್ಯಗಳಾದ ‘ತ್ರಿಪಿಟಕಗಳು’ ಅಮೋಘವರ್ಷನ’ಕವಿರಾಜ ಮಾರ್ಗ’
ವಿದೇಶೀ ಸಾಹಿತ್ಯ - ವಿದೇಶಿ ಬರಹಗಾರರು ಭಾರತಕ್ಕೆ ಬಂದು ಹೋದ ಪ್ರವಾಸಿಗರು, ವಿದ್ವಾಂಸರು ರಚಿಸಿದ ಕೃತಿಗಳನ್ನು ವಿದೇಶೀ ಸಾಹಿತ್ಯ ಎನ್ನುವರು.
ಮೆಗಾಸ್ತನೀಸನ ಇಂಡಿಕಾ,ಹ್ಯೂಯನ್‍ತ್ಸಾಂಗ್ ‘ಸಿಯುಕಿ’, ಫಾಯಿಯಾನನ ‘ಘೋ-ಕೋ-ಕಿ’, ಸಿಲೋನಿನ ದೀಪವಂಶ ಮತ್ತು ಮಹಾವಂಶ , ವಿಜಯ ನಗರರಾಜ್ಯಕ್ಕೆ ಭೇಟಿನೀಡಿದ ಫರ್ನಿಯೋ ನ್ಯೂನಿಚ್,ದುವಾರ್ತೆ ಬಾರ್ಬೋಸ,ನಿಕೊಲೋ ಕೋಂಟಿ ಮುಂತಾದವರ ಬರಹಗಳನ್ನು ಸ್ಮರಿಸಬಹುದು.
ಪುರಾತತ್ವ ಆಧಾರಗಳು.
ಪುರಾತತ್ವ ಆಧಾರ - ಭೂ ಸಂಶೋಧನೆ ಉತ್ಕನನಗಳಿಂದ ದೊರೆತಿರುವ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮಡಿಕೆ-ಕುಡಿಕೆಗಳು ಹಾಗೂ ಇನ್ನಿತರ ಪಳಿಯುಳಿಕೆಗಳನ್ನು ಪುರಾತತ್ವ ಆಧಾರಗಳನ್ನುವರು.
ಶಾಸನಗಳು - ಶಾಸನಗಳು ಆಕಾಲದ ಧರ್ಮ,ಸಂಸ್ಕøತಿ, ಆರ್ಥಿಕತೆ,ಆಡಳಿತ ಇನ್ನಿತರ ಅಂಶಗಳಬಗ್ಗೆ ಮಾಹಿತಿಯನ್ನು ಒದಗಿಸುವ ಜೀವಂತ ಸಾಕ್ಷಾಧಾರಗಳು.
ಉದಾ - ಮೌರ್ಯ ಚಕ್ರವರ್ತಿ ಅಶೋಕನ ಶಾಸನಗಳು ಬ್ರಾಹ್ಮಿಲಿಪಿ ಹಾಗೂ ಪ್ರಾಕೃತ ಭಾಷೆಗಳಲ್ಲಿವೆ. ಕರ್ನಾಟಕದಲ್ಲಿ ಮಸ್ಕಿ ಹಾಗು ಬ್ರಹ್ಮಗಿರಿಯಲ್ಲಿವೆ. ಕನ್ನಡದ ಮೊದಲ ಶಾಸನ ಹಲ್ಮಿಡಿ (ಕ್ರಿ.ಶ.ಸುಮಾರು 450, ಕದಂಬರ ಕಾಕುಸ್ಥವರ್ಮನ ಕಾಲದಲ್ಲಿ ರಚಿತವಾಗಿದೆ)
ನಾಣ್ಯಗಳು ವಿವಿಧ ಲೋಹದಿಂದ ಟಂಕಿಸಲಾದ ನಾಣ್ಯಗಳು ಅಂದಿನ ಕಾಲದ ಧರ್ಮ,ಸಂಸ್ಕøತಿ,ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ತಿಳಿಸುವ ಆಧಾರಗಳಾಗಿವೆ.
ಸ್ಮಾರಕಗಳು -ಕಾಲದಿಂದ ಕಾಲಕ್ಕೆ ಮನುಷ್ಯನ ಸಾಧನೆಗಳನ್ನು ತಿಳಿಸುವ ಬೌತಿಕ ವಸ್ತುಗಳು. ಅವೆಂದರೆ ಸ್ತಂಭಗಳು,ಸ್ತೂಪಗಳು,ಬಸದಿಗಳು,ದೇವಸ್ಥಾನಗಳು ಹಾಗೂ ಕೋಟೆಗಳಿವೆ. ಇವುಗಳಿಂದ ಆಯಾ ಕಾಲದ ನಾಗರೀಕತೆ,ತಂತ್ರಜ್ಞಾನ,ಸಾಮಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ತಿಳಿಯಲು ಸಹಾಯಕ.ಉದಾ;- ಅಶೋಕನ ಸ್ತಂಭಗಳು,ಅಜಂತಾ ಎಲ್ಲೋರ,ಎಲಿಫೆಂಟಾಗಳ ಶಿಲ್ಪಗಳು,ಕರ್ನಾಟಕದ ಬಾದಾಮಿ,ಐಹೊಳೆ,ಪಟ್ಟದಕಲ್ಲು ಮುಂತಾದುವು.
ವಾಸ್ತುಶಿಲ್ಪ -ಸ್ಥೂಪಗಳು,ಬಸದಿಗಳು,ಚೈತ್ಯಗಳು ಮತ್ತು ಸಾವಿರಾರು ದೇವಾಲಯಗಳು ಕಾಲಾಂತರದಲ್ಲಿ ರಚಿತವಾಗಿವೆ. ಇವುಗಳಿಂದ ಆಕಾಲದ ರಾಜಕೀಯ,ಸಾಮಾಜಿಕ ಹಾಗೂ ಆರ್ಥಿಕ ಜೀವನವನ್ನು ತಿಳಿಯಬಹುದು.
ಮೌಖಿಕ ಆಧಾರಗಳು- ಅನಾದಿಕಾಲದ ಮಾನವವನು ತನ್ನ ಅನುಭವ ಹಾಗೂ ನೆನಪುಗಳನ್ನು ಹಾಡು,ಕಾವ್ಯ,ಲಾವಣಿಗಳನ್ನು ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಲಿಖಿತ ಪರಂಪರೆಯು ಆರಂಭವಾಗುವ ಮೊದಲೇ ಸಂಪ್ರದಾಯಗಳಂತೆ ಉಳಿಸಿಕೊಂಡು ಬಂದಿದ್ದಾನೆ.
ನಮ್ಮ ಭಾರತ ಚರಿತ್ರೆಯು ಆರಂಭಗೊಳ್ಳುವ ಮುನ್ನ ವೇದಗಳು ಲಿಖಿತ ಸ್ವರೂಪವನ್ನು ಪಡೆದುಕೊಳ್ಳುವ ಮುನ್ನ ಅನೇಕ ತಲೆಮಾರುಗಳವರೆಗೆ ಮೌಖಿಕ ಪರಂಪರೆಯಾಗಿಯೇ ಇತ್ತು.
ಐತಿಹ್ಯಗಳು - ಇವುಗಳು ಸ್ಥಳ ಪುರಾಣಗಳೆಂದು ಕೂಡ ಕರೆಯುವರು. ವ್ಯಕ್ತಿಯ ವೈಭವವನ್ನು ಅಥವಾ ಸ್ಥಳದ ಮಹಿಮೆಯನ್ನು ಇವು ಸೂಚಿಸುತ್ತವೆ.