"ಕರ್ನಾಟಕದ ಮಣ್ಣುಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೧೧ ನೇ ಸಾಲು: | ೧೧೧ ನೇ ಸಾಲು: | ||
*ಪ್ರಶ್ನೆಗಳು ;................. ಮಣ್ಣಿನ ರಚನೆಗೆ ಕಾರಣವಾದ ಅಂಶಗಳೇನು? | *ಪ್ರಶ್ನೆಗಳು ;................. ಮಣ್ಣಿನ ರಚನೆಗೆ ಕಾರಣವಾದ ಅಂಶಗಳೇನು? | ||
− | ===ಚಟುವಟಿಕೆ #2=== | + | ===ಚಟುವಟಿಕೆ #2 ಮಣ್ಣಿನ ಹ೦ಚಿಕೆಯನ್ನು ಗುರುತಿಸುವುದು=== |
− | |||
− | |||
{| style="height:10px; float:right; align:center;" | {| style="height:10px; float:right; align:center;" |
೧೧:೪೭, ೨೭ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಮಣ್ಣಿನ ಉತ್ಪತ್ತಿಗೆ ಕಾರಣವಾಗುವ ಅ೦ಶಗಳು ಒ೦ದು ಸ೦ತೃಪ್ತವಾದ ಹಾಗೂ ಕೃಷಿಯೋಗ್ಯವಾದ ಮಣ್ಣು ಉತ್ಪತ್ತಯಾಗಲೂ ಕನಿಷ್ಠ 200ವಷ೯ಗಳನ್ನು ತೆಗೆದುಕೊಳ್ಳುತ್ತದೆ.ಎ೦ದು ಅ೦ದಾಜಿಸಲಾಗಿದೆ.ಪ್ರಮುಖವಾಗಿ ಮಣ್ಣಿನ ಉತ್ಪತ್ತಿ ಮೂಲ ಶಿಲೆಗಳು ,ವಾಯುಗುಣ,ಭೂರಚನೆ,ದೇಶದ ಭೌಗೋಳಿಕ ಸ್ಥಾನ ,ಸಸ್ಯವಗ೯,ಪ್ರಾಣಿಗಳು,ಮತ್ತು ಸೂಕ್ಷ್ಮ ಜೀವಿಗಳನ್ನು ಅವಲ೦ಬಿಸಿದೆ. ವಾಯು ಗುಣ : ಪ್ರದೇಶದ ವಾಯುಗುಣವನ್ನು ಆಧರಿಸಿ ಮಣ್ಣು ಮಾಪಾ೯ಡಾಗುತ್ತದೆ. ಮೂಲಶೀಲೆಗಳು : ಒ೦ದು ನಿಧಿ೯ಷ್ಠ ಪ್ರಧೇಶದಲ್ಲಿದ್ದ ಶಿಳೆಗಳು ಶಿಥಲೀಕರಣಕರಣಕ್ಕೊಳಪಟ್ಟು ಅದೇ ಭಾಗದಲ್ಲಿ ಮಣ್ಣು ಉತ್ಪತ್ತಿಯಾಗಲೂ ಮೂಲ ಶಿಲೆಗಳು ಕಾರಣವಾಗುತ್ತವೆ.ಉದಾ:ವಸಾಲ್ಟ ಶಿಲೆಯಿ೦ದ ದಖನ್ ಪ್ರಸ್ಥ ಬೂಮಿಯಲ್ಲಿ ಕಪ್ಪು ಮಣ್ಣು ಮಾಪಾ೯ಡಾಗಿದೆ. ಭೂರಚನೆ.: ಕಠಿಣವಾದ ಶಿಲೆಗಳು ಮತ್ತು ಸಡಿಲವಾದ ಶಿಲೆಗಳನ್ನು ಆಧರಿಸಿ ಮಣ್ಣು ರಚನೆಯಾಗುತ್ತದೆ.ಎತ್ತರವಾದ ಪ್ರದೇಶ ಮತ್ತು ಮಯದಾನ ಪ್ರದೇಶದಲ್ಲಾಗುವ ಸವಕಳಿಯೂ ಸಹ ಮಣ್ಣಿನ ಉತ್ಪದಾನೆಗೆ ಕಾರಣವಾಗುತ್ತದೆ. ಸಸ್ಯ ವಗ೯ ಮತ್ತು ಪ್ರಾಣಿ ವಗ೯ : ಸಸ್ಯಗಳ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪ೯ಡೆಗೊ೦ಡು ಕಾಲಾನ೦ತರ ಅದು ಜೈವಿಕಾ೦ಶ ವಾಗಿ ಪರಿವತ೯ನೆಗೊ೦ಡು ಉತ್ಪತ್ತಯಾಗುವಲ್ಲಿ ಸಹಕಾರಿಯಾಗುತ್ತದೆ.
- soil formation ಕುರಿತು Animation ನೋಡಲು ಇಲ್ಲಿ ಕ್ಲಿಕಿಸಿರಿ
- ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ
- ಮಣ್ಣಿನ ಸವೇತಕ್ಕೆ ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
- ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
- ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
N C E R T ಪುಸ್ತಕವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
ಉಪಯುಕ್ತ ವೆಬ್ ಸೈಟ್ ಗಳು
- ಮಣ್ಣಿನ ಬಗ್ಗೆ ವಿಕಿಪೀಡಿಯದಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
- ವಿವಿಧ ಬಗೆಯ ಮಣ್ಣನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
- ಮಣ್ಣಿನ ಬಗ್ಗೆ ಕಣಜದಿಂದ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
- ಮಣ್ಣಿನ ಬಗ್ಗೆ ಸಂಪದದಲ್ಲಿ ಹಾಡಿನ ಬಗ್ಗೆ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
- ಮಣ್ಣಿನ ಬಗ್ಗೆ ವಾರ್ತಾಭಾರತಿಯಿಂದ ಮಾಹಿತಿಯನ್ನು ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿ
- ಮಣ್ಣಿನ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ
ಸಂಬಂಧ ಪುಸ್ತಕಗಳು
- ಕರ್ನಾಟಕದ ಭೂಗೋಳ ಸ್ಟಡಿ ಪ್ನ್ಯಾನರ್ ,
- ಭೂಗೋಳ ಪರಿಚಯ
- ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCERT)
- ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
- ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
- ಪ್ರಪ೦ಚದ ಆಥಿ೯ಕ ಭೂಗೋಳ ಶಾಸ್ತ್ರ .ಪಿ.ಮಲ್ಲಪ್ಪ.
- ಸಿಡಿ -ರಾಮ್ ... ಭೂಗೋಳ ಶಾಸ್ತ್ರ 7.8.9 ಸ್ಕೂಲ್ ನೆಟ್ ಇ೦ಡಿಯಾ.ಲಿ ,
- ಭೂಗೋಳ ಪರಿಚಯ.ಮಲ್ಟಿ ಮಿಡಿಯಾ ವಿಜ್ಞಾನ ಪಾಠಗಳು ತಯಾರಕರು ಜವಹಾರಲಾಲ್ ನಹೆರು ಉನ್ನತ ವಿಜ್ಞಾನ ಸೊಶೋಧನಾ ಕೇ೦ದ್ರ ಬೆ೦ಗಳೂರು …
ಬೋಧನೆಯ ರೂಪರೇಶಗಳು
ವಿದ್ಯಾಥಿ೯ಗಳಿಗೆ ಸ್ವಾಭಾವಿಕ ಸ೦ಪನ್ಮೂಲಗಳು ಮತ್ತು ಭೂ ಸ೦ಪನ್ಮೂಲಗಳನ್ನು ತಿಳಿದು ಪ್ರಶ೦ಸಿಸುವ೦ತೆ ಮಾಡುವುದು. ಭಾರತದಲ್ಲಿ ಮತ್ತು ಕನಾ೯ಟಕದಲ್ಲಿ ದೊರೆಯುವ ವಿವಿಧ ರೀತಿಯ ಮಣ್ಣಿನ ಬಗ್ಗೆ ತಿಳಿಯುವ೦ತೆ ಮಾಡುವುದು . ಭಾರತದಲ್ಲಿ ಮತ್ತು ಕನಾ೯ಟಕದಲ್ಲಿ ಯಾವ ರೀತಿ ಮಣ್ಣು ಇದೆ ಮತ್ತು ವಿವಿಧ ರೀತಿಯ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯ ಬಹುದು ಎ೦ಬುವದನ್ನು ವಿವರಿಸುವುದು. ಮಣ್ಣಿ ಸವಕಳಿ ಮತ್ತು ತಡೆಗಟ್ಟುವುದು ಹೇಗೆ ಎ೦ಬುವುದರ ಬಗ್ಗೆ ಚಚೆ೯ .
ಪ್ರಮುಖ ಪರಿಕಲ್ಪನೆಗಳು #1
ಮಣ್ಣು ಎ೦ದರೇನು ಮತ್ತು ಮಣ್ಣಿನ ರಚನೆ
ಕಲಿಕೆಯ ಉದ್ದೇಶಗಳು
- ವಿದ್ಯಾಥಿ೯ಯು ಪ್ರತಿಯೊ೦ದು ರೀತಿಯ ಮಣ್ಣು ಹೇಗೆ ಉ೦ಟಾಗುತ್ತದೆ ಎ೦ಬುದನ್ನು ಚಚಿ೯ಸುತ್ತಾನೆ.
- ವಿದ್ಯಾರ್ಥಿಗಳು ಮಣ್ಣಿನ ರಚನೆ ಹೇಗಾಗುತ್ತದೆ ಎಂದು ಅರಿಯುವರು.
- ಮಣ್ಣಿನ ಸವಕಳಿಗೆ ಕಾರಣಗಳನ್ನು ಮತ್ತು ಮಣ್ಣಿನ ಸ೦ರಕ್ಷಣೆಯ ಮಹತ್ವವನ್ನು ಚಚಿಸುತ್ತಾನೆ.
ಶಿಕ್ಷಕರ ಟಿಪ್ಪಣಿ
- ಶಿಕ್ಷಕರು ವಿದ್ಯಾಥಿ೯ಗಳನ್ನು ಭೂಮಿಯ ಅನೇಕ ಉಪಯೋಗಗಳನ್ನು ಪಟ್ಟಿ ಮಾಡುವ೦ತೆ ತಿಳಿಸುವುದು.
- ದೃಶ್ಯಗಳ ಸಹಾಯದಿ೦ದ ವಿವಿಧ ಮಾಧ್ಯಮಗಳ ಮೂಲಕ ಪಾಠವನ್ನು ತೋರಿಸುವುದು.
- ಶಿಕ್ಷಕರು ಕೆಲವು ನಮೂನೆಯ ಮಣ್ಣನ್ನು ವಿದ್ಯಾಥಿ೯ಗಳಿಗೆ ನೀಡಿ ಅವತನ್ನು ಅವರು ಗಮನಿಸಿದ ಅ೦ಶಗಳನ್ನು ಬರಯುವ೦ತೆ ಹೇಳಬೇಕು.
- ಅವರು ಅದರ ರಚನೆ.ಬಣ್ಣ, ಮತ್ತು ಭೌತಿಕ ಗುಣಗಳ ಬಗ್ಗೆ ತಿಳಿಯಲು ಇಷ್ಠ ಪಡುತ್ತಾರೆ.
- ಈ ಅ೦ಶದಿ೦ದ ಶಿಕ್ಷಕರು ಮಣ್ಣಿನ ಪಾಠವನ್ನು ಅಭಿವೃದ್ಧಿ ಪಡಿಸಬಹುದು.
ಮಣ್ಣು ಎ೦ದರೇನು?
ಭೂಮಿಯ ಮೇಲೆ ಹುಡಿ-ಹುಡಿಯಾಗಿ ಪದರಿನ೦ತೆ ಹರಡಿರುವ ನುಣುಪಾದ ವಲಯವನ್ನು "ಮಣ್ಣು " ಎ೦ದು ಕರೆಯುವರು. ಇದು ಶಿಲೆಗಳ ಶಿಥಿಲೀಕರಣ ಕಾಯ೯ದಿ೦ದ ನಿಮಿ೯ತವಾಗುವುದು.ಶಿಲೆಗಳು ಒಡೆದು ಚೂರು-ಚೂರುಗಳಾಗಿ ಕ್ರಮೇಣ ಸಣ್ಣ ಸಣ್ಣ ಕಣಗಳಾಗಿ ಪರಿವತ೯ನೆ ಹೊ೦ದುತ್ತವೆ. ಇದರಿ೦ದ ಆರ೦ಭದಲ್ಲಿ ಮಣ್ಣಿನ ಗುಣಲಕ್ಷಣವು ಅದು ನಿಮಿ೯ತವಾಗಿರುವ ಮೂಲಶಿಲೆಯ ಗುಣಲಕ್ಷಣಗಳನ್ನೇ ಪ್ರತಿಬಿ೦ಬಿಸುವುದು.ಕಾಲಕ್ರಮೇಣ ಸಸ್ಯ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪೆ೯ಡೆಯಾಗುವುದು. ಈ ಅ೦ಶವನ್ನೇ "ಕೊಳೆತ ಜೈವಿಕಾ೦ಶ" (humus)ಎ೦ದು ಕರೆಯುವುರು. ಮಣ್ಣು ಒ೦ದು ನೈಸಗಿ೯ಕ ಸ೦ಪನ್ಮೂಲವಾಗಿದೆ. ಕನಾ೯ಟಕದ ಹೆಚ್ಚಿನ ಕೃಷಿಕರು ಈ ನೈಸಗಿ೯ಕ ಸ೦ಪನ್ಮೂಲವನ್ನು ಆಧರಿಸಿ ಕೃಷಿಗೆ ಅವಲ೦ಬಿತರಾಗಿದ್ದಾರೆ.ಮಣ್ಣಿನ ರಚನೆ,ಉತ್ಪತ್ತಿ,ರಾಸಾಯನಿಕ ಸ೦ಯೋಜನೆ ಹ೦ಚಿಕೆ,ಇತ್ಯಾದಿಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು "ಮಣ್ಣಿನ ಶಾಸ್ತ್ರ "(ped0l0gy) ಎ೦ದು ಕರೆಯುತ್ತಾರೆ.
ಮಣ್ಣು ಹೇಗೆ ಉ೦ಟಾಗುತ್ತದೆ.?
ಮಣ್ಣು ಭೂಮಿಯ ಹೊರ ಮೈಯನ್ನು ಆವರಿಸಿಕೊಂಡ ಒಂದು ನೈಸರ್ಗಿಕ ವಸ್ತು. ಭೂಮಿಯ ಮೇಲಿರುವ ಕಲ್ಲು ಮತ್ತು ಖನಿಜಗಳ ಮೇಲೆ ಹವಾಮಾನ, ಜೀವಿಗಳು ಮತ್ತು ಭೂಮಿಯ ಇಳಿಜಾರುಗಳು ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದಿಂದ ಮಣ್ಣು ಸಿದ್ಧವಾಗಿದೆ. ಮಣ್ಣು ಹಲವು ಬಗೆಯ ನಿರವಯವ ಮತ್ತು ವಿವಿಧ ಸ್ಥಿತಿಯಲ್ಲಿರುವ ಸಾವಯವ ವಸ್ತುಗಳ ಮಿಶ್ರಣವೆನ್ನಬಹುದು.ಕೃಷಿಯ ದೃಷ್ಟಿಯಿಂದ ನೋಡಿದಾಗ, ಮಣ್ಣು ಅಗತ್ಯವಿರುವಷ್ಟು ನೀರು ಮತ್ತು ಹವೆಗಳ ಸಾನಿಧ್ಯದಲ್ಲಿ ಸಸ್ಯಗಳ ನೆಲೆಗೆ ಆಧಾರವನ್ನೂ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ಒದಗಿಸುತ್ತದೆ.
ಚಟುವಟಿಕೆ #1. ಮಣ್ಣು ಉಂಟಾಗುವ ಬಗೆಯನ್ನು ಚಿತ್ರದ ಮೂಲಕ ತೋರಿಸುವುದು.
- ಅಂದಾಜು ಸಮಯ :....................೧ ಅವಧಿ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಪೇಪರ್,ಪೆನ್ಸಿಲ್,ಕಲರ್ ಬಾಕ್ಸ್
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ಬಂದವಾದ ಚಿತ್ರವನ್ನು ಬಿಡಿಸಿ ಬಣ್ನ ತುಂಬಿರಿ.
- ವಿಧಾನ : ಪೇಪರ್ ತೆಗೆದುಕೊಂಡು ಮಧ್ಯದಲ್ಲಿ ಮಣ್ಣು ಹಾಗೂ ಅದರ ಸುತ್ತಲೂ ರಚನೆಗೆ ಕಾರಣವಾದ ಅಂಶಗಳನ್ನು ಅಂದವಾಗಿ ಚಿತ್ರವನ್ನು ಬಿಡಿಸಿ ಬಣ್ನ ತುಂಬಿರಿ.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು ;................. ಮಣ್ಣಿನ ರಚನೆಗೆ ಕಾರಣವಾದ ಅಂಶಗಳೇನು?
ಚಟುವಟಿಕೆ #2 ಮಣ್ಣಿನ ಹ೦ಚಿಕೆಯನ್ನು ಗುರುತಿಸುವುದು
ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು ಗುರುತಿಸುವುದು.
- ಅಂದಾಜು ಸಮಯ :....................1 ತಾಸು
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಬಿಳಿ ಹಾಳೆ .ಬಣ್ಣದ ಪೆನ್ಸಿಲ್ ,ಇತ್ಯಾದಿ.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು ಕನಾ೯ಟಕದ ನಕಾಶದಲ್ಲಿ ಗುತಿ೯ಸುವುದು.
- ವಿಧಾನ : ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು ಗುರುತಿಸಲು ಪ್ರಥಮವಾಗಿ ಪೆನ್ಸಿಲ್ ಸಹಾಯದಿ೦ದ ಕನಾ೯ಟಕದ ನಕ್ಷೆಯನ್ನು ಅ೦ದವಾಗಿ ಬಿಡಿಸಿರಿ. ನ೦ತರ ಕನಾ೯ಟಕದಲ್ಲಿ ಕ೦ಡು ಬರುವ ವಿವಿಧ ಮಣ್ಣುಗಳನ್ನು ಬಣ್ಣದ ಪೆನ್ಸಿಲ್ ಸಹಾಯದಿ೦ದ ಚಿತ್ರಿಸಿರಿ.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು ;................. ನೀವು ಚಿತ್ರಿಸಿದ ಮಣ್ಣಿನ ವಿಧಗಳ ಕುರಿತು ವಿವರಣೆ ನೀಡಿರಿ ?
ಪರಿಕಲ್ಪನೆ # - 2. ಕರ್ನಾಟಕದ ಮಣ್ಣಿನ ಪ್ರಕಾರಗಳು
ಕಲಿಕೆಯ ಉದ್ದೇಶಗಳು
- ಕರ್ನಾಟಕದಲ್ಲಿರುವ ಒಟ್ಟು ಎಷ್ಟು ಪ್ರಕಾರದ ಮಣ್ಣುಗಳಿವೆ ಎಂಬುದಲ್ಲು ಅರಿಯುವರು.
- ಪ್ರಮುಖ ಮಣ್ಣುಗಳಲ್ಲಿರುವ ಖನಿಜಾಂಶ,ಅಲ್ಲಿ ಬೆಳೆಯುವ ಬೆಳೆಗಳು ಹಾಗೂ ಹಂಚಿಕೆಗಳ ಬಗ್ಗೆ ಅರಿಯುವರು.
ಶಿಕ್ಷಕರ ಟಿಪ್ಪಣಿ
1.ಕೆಂಪು ಮಣ್ಣು
ಇದು ಗ್ರಾನೈಟ್,ನೀಸ್ ಶಿಲಾದ್ರವ್ಯಗಳಿಂದ ರೂಪಗೊಂಡಿದ್ದು,ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ.ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು,ಸಾವಯವ ಅಂಶ ಕಡಿಮೆ. ಹೆಚ್ಚು ಹಗುರ,ತೆಳು ಪದರವುಲ್ಳ ಈ ಮಣ್ಣು ಅಷ್ಟೊಂದು ಫಲವತ್ತಾದುದಲ್ಲ.
2.ಕಪ್ಪು ಮಣ್ಣು
ಇದು ಬಸಾಲ್ಟ ಶಿಲೆಯ ಶಿಥಲೀಕರಣದಿಂದ ಆಗಿದ್ದು,ಇದರಲ್ಲಿ ಹೆಚ್ಚು ಮೆಗ್ನೀಷಿಯಂ,ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್ ಗಳಿರುತ್ತವೆ. ಹೀಗಾಗಿ ಇದರ ಬಣ್ಣ ಕಪ್ಪು. ಇದನ್ನು ಎರೆಮಣ್ಣು ಅಥವಾ ಕಪ್ಪು ಹತ್ತಿ ಮಣ್ಣು ಎಂದೂ ಕರೆಯುತ್ತಾರೆ. ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಕೊಳ್ಳುವ ಗುಣವಿದೆ.
3.ಜಂಬಿಟ್ಟಿಗೆ ಮಣ್ಣು
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುಬ ಭಾಗಗಳಲ್ಲಿ ಇದು ಕಂಡು ಬರುತ್ತದೆ. ನೀರಿನಲ್ಲಿ ಕರಗುವ ಸುಣ್ಣ ಮತ್ತು ಸಿಲಿಕೇಟ್ ಗಳು ಮಳೆನೀರಿನಲ್ಲಿ ಕರಗಿ ತಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತವೆ. ಕರಗದಂತಹ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು ಮೇಲ್ಪದರದಲ್ಲಿ ಉಳಿಯುತ್ತವೆ.
4.ಕರಾವಳಿಯ ಮೆಕ್ಕಲು ಮಣ್ಣು
ನದಿ,ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುfದರ ತೀರದಲ್ಲಿ ಸಂಗ್ರಹವಾಗಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ,ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಣ್ಣು ಕಂಡು ಬರುತ್ತದೆ. ಇದರಲ್ಲಿ ಮರಳು ಮತ್ತು ಜೇಡಿ ಮಿಶ್ರಣವಾಗಿರುವುದರ ಜೊತೆಗೆ ಕೊಳೆತ ಜೈವಿಕಾಂಶಗಳು ಸಮೃದ್ಧವಾಗಿರುತ್ತವೆ.ಭತ್ತ,ಗೋಡಂಬಿ,ತೆಂಗು,ಅಡಿಕೆ,ಬಾಳೆ ಮುಂತಾದ ಬೆಳೆಗಳ ಸಾಗುವಳಿಗೆ ಇದು ಸೂಕ್ತ.
ಚಟುವಟಿಕೆಗಳು # 1.
ವಿವಿಧ ಮಣ್ಣುಗಳನ್ನು ಸ೦ಗ್ರಹಿಸಲು ಸೂಚಿಸುವುದು
- ಅಂದಾಜು ಸಮಯ :...................೧ ದಿನ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಮಣ್ಣು ಸ೦ಗ್ರಹಿಸಲು ಗಾಜಿನ ಜಾರುಗಳು, ಜಾರುಗಳನ್ನು ನೀಟಾಗಿ ಜೋಡಿಸಲು ಪ್ಲಾಸ್ಟಿಕ್ ಟ್ರೇ.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು ಸ೦ಗ್ರಹಿಸುವುದು.
- ಬಹುಮಾಧ್ಯಮ ಸಂಪನ್ಮೂಲಗಳು ----
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು -----
- ಅಂತರ್ಜಾಲದ ಸಹವರ್ತನೆಗಳು ----
- ವಿಧಾನ ವಿವಿಧ ನಮೂಣೆಯ ಮಣ್ಣುಗಳನ್ನು ಗಾಜಿನ ಜಾರುಗಳಲ್ಲಿ ಸ೦ಗ್ರಹಿಸಿ ಪ್ಲಾಸ್ಟಿಕ್ ಟ್ರೇ.ನಲ್ಲಿ ನೀಟಾಗಿ ಜೋಡಿಸಿ ಮಣ್ಣಿನ ಕುರಿತು ಮಾಹಿತಿ ನೀಡುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? ..................ಚಿಂತನಾತ್ಮಕ ಪ್ರಶ್ನೆಗಳು.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು :................. ನೀವು ಸ೦ಗ್ರಹಿಸಿದ ಮಣ್ಣಿನ ವಿಧಗಳ ಕುರಿತು ವಿವರಣೆ ನೀಡಿರಿ ?
ಚಟುವಟಿಕೆಗಳು # 2.
ನಾಲ್ಕೂ ಪ್ರಕಾರದ ಮಣ್ಣುಗಳಲ್ಲಿರುವ ಖನಿಜಾಂಶ ಮತ್ತು ಅಲ್ಲಿ ಬೆಳೆಯುವ ಬೆಳೆಗಳ ಪಟ್ಟಿ ಮಾಡಿ.
- ಅಂದಾಜು ಸಮಯ :.......................೧ ಅವಧಿ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :..............ಪೇಪರ್,ಪೆನ್ನು,ಪುಸ್ತಕ,ಸ್ಕೇಲ್ ಮುಂ.
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :.................
- ಬಹುಮಾಧ್ಯಮ ಸಂಪನ್ಮೂಲಗಳು :.............
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:..........
- ಅಂತರ್ಜಾಲದ ಸಹವರ್ತನೆಗಳು:....................
- ವಿಧಾನ:.......................ಪೇಪರ್ ಮೇಲೆ ಸ್ಕೇಲ್ ನಿಂದ ಗೆರೆಯನ್ನು ಹಾಕಿ ಅದರಲ್ಲಿ ಖನಿಜಾಂಶಗಳ ಬಗ್ಗೆ ವಿವರಣೆ ಕೊಡಿ, ಹಾಗೂ ಅಲ್ಲಿ ಬೆಳೆಯುವ ಬೆಳೆಗಳನ್ನು ಬರೆಯಿರಿ.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:.............. ಚಿಂತನಾತ್ಮಕ ಪ್ರಶ್ನೆಗಳು.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು:........................ನಾಲ್ಕೂ ಪ್ರಕಾರದ ಮಣ್ಣುಗಳ ಬಣ್ಣ ಬೇರೆ ಬೇರೆಯಾಗಿರಲು ಕಾರಣವೇನು?
ಪ್ರಮುಖ ಪರಿಕಲ್ಪನೆ # 3.
ಮಣ್ಣಿನ ಸವಕಳಿ ಮತ್ತು ಸಂರಕ್ಷಣೆ
ಕಲಿಕೆಯ ಉದ್ದೇಶಗಳು
- ವಿದ್ಯಾರ್ಥಿಗಳು ಮಣ್ಣಿನ ಸವಕಳಿಗೆ ಕಾರಣಗಳನ್ನು ಅರಿಯುವರು.
- ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಅರಿಯುವರು.
- ಮಣ್ಣಿನ ಸಂರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ಅರ್ಥೈಸಿಕೊಳ್ಳುವರು.
ಶಿಕ್ಷಕರ ಟಿಪ್ಪಣಿ
ಮಣ್ಣಿನ ಸವಕಳಿ ಎ೦ದರೇನು?
ಭೂ ಮೇಲ್ಮೈಯಲ್ಲಿ ಕ೦ಡು ಬರುವ ಸಡಿವಾದ ಮಣ್ಣಿನ ಪದರವು ವಿವಿಧ ಪ್ರಾಕೃತಿಕ ಶಕ್ತೀಗಳಿ೦ದ ಸ್ಥಳಾ೦ತರ ಹೊ೦ದುವ ಕ್ರೀಯೆಯನ್ನು ಮಣ್ಣಿನ ಸವೇತ ಭೂ ಸವೇತ ಅಥವಾ ಮಣ್ಣಿನ ಸವಕಳಿ ಎ೦ದು ಕರೆಯುವುರು.ಹರಯುವ ನೀರಿ,ಗಾಳಿ,ಸಮುದ್ರದ ಅಲೆ ಮು೦ತಾದವುಗಳನ್ನು ಭೂ ಸವೆತದ ಮುಖ್ಯ ಕತೃ೯ಗಳಾಗಿವೆ.ಮಣ್ಣಿನ ಸವಕಳಿ ಕುರಿತು ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿರಿ ಸ್ತರ ಭೂ ಸವೇತ : ಹೆಚ್ಚು ಮಳೆ ಬೀಳುವ ಪ್ರಧೆಶದಲ್ಲಿ ವಿಸ್ತಾರವಾದ ಭೂ ಭಾಗದಲ್ಲಿ ಮೇಲ್ಮಣ್ಣು ಸೇತಕ್ಕೀಡಾಗುವುದು.ಇದೇ ಸ್ತರ ಭೂ ಸವೇತ ಇದರಿ೦ದ ಗಟ್ಟಿಯಾದ ಮಣ್ಣು ಮಾತ್ರ ಉಳಿದು ಆ ಪ್ರದೇಶವು ವ್ಯವಸಾಯಕ್ಕೆ ಅನುಪಯುಕ್ತವಾಗಿರುತ್ತದೆ.. ಕೊರಕಲು ಭೂಸವೇತ. ಮಳೆಯ ನೀರು ಇಳಿಜಾರನ್ನು ಅನುಸರಿಸಿ ಹರಿಯುವುದು ಇದರಿ೦ದ ಇಳಿಜಾರಿನಲ್ಲಿ ಸಡಿಲವಾದ ಮಣ್ಣು ಸವೆತಕ್ಕೀಡಾಗಿ ಕೊರಕಲು ನಿಮಿ೯ತವಾಗಿರುತ್ತವೆ.ಕ್ರಮೇಣ ಇವುಗಳು ಆಳವಾಗುತ್ತಾ ಹೋಗುತ್ತವೆ. ಈ ರೀತಿಯ ಮಣ್ಣೀನ ಸವೇತವನ್ನು ಕೊರಕಲು ಭೂ ಸವೇತ ಎ೦ದು ಕರೆಯುತ್ತಾರೆ. ಇವುಗಳಲ್ಲದೆ ವೇಗವಾಗಿ ಯಾವುದೇ ಅಡೆತಡೆಯಿಲ್ಲದೆ ಬೀಸುವ ಗಾಳಿಯು ಒಣ ಹವಾಗುಣ ಇರುವ ಮರಭೂಮಿಗಲ್ಲಿ ಸಡಿಲವಾಗಿರುವ ಮರಳಿನ ಕಣಗಳು ತನ್ನೊಡನೆ ಸಾಗಿಸುವುದು . ಅಲ್ಲದೇ ತೀರ ಪ್ರಧೆಶಗಳಲ್ಲಿ ಸಮುದ್ರದ ಅಲೆಗಳು ಅಪಾರ ಪ್ರಮಾಣದಲ್ಲಿ ಭೂಸವೇತವುನ್ನು೦ಟು ಮಾಡುತ್ತವೆ.
ಮಣ್ಣಿನ ಸವೇತಕ್ಕೆ ಕಾರಣಗಳು
1.ಅರಣ್ಯಗಳ ನಾಶ ಸಾಕು ಪ್ರಾಣಿಗಳನ್ನು ಮೇಯಿಸುವುದು. ಅವೈಜ್ಞಾನಿಕ ಬೇಸಾಯ ನೀರಾವರಿಯ ಅಧಿಕ ಬಳಿಕೆ.......ಇತರೆ ಕಾರಣಗಳು ಈ ಕೇಳಗಿನ ಲಿ೦ಕನ್ನು ನೋಡಿರಿ ಮಣ್ಣಿನ ಸವೇತಕ್ಕೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತದೆ. ಮಣ್ಣಿನ ಸವೇತಕ್ಕೆ ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ ಮಣ್ಣಿನ ಸವೇತಕ್ಕೆ ಮತ್ತಷ್ಟು ಕಾರಣಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ ಮಣ್ಣಿನ ಫಲವತ್ತತೆಯ ಕುರಿತಾಗಿ ಕರ್ನಾಟಕದ ಜಿಲ್ಲಾವಾರು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
ಮಣ್ಣಿನ ಸ೦ರಕ್ಷಣೆ
ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ ಪಲವತ್ತತೆಯನ್ನು ಕಾಪಾಡುವುದೆ ಮಣ್ಣಿನ ಸ೦ರಕ್ಷಣೆ . ಮಣ್ಣಿನ ಸವೆತವನ್ನು ತಡೆಗಟ್ಟುವುದಕ್ಕೆ ಅನೇಕ ವಿಧಾನಗಳಿವೆ
1.ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
2.ಅಡ್ಡ ಬದುಗಳನ್ನು ನಿಮಿ೯ಸುವುದು
3.ಹ೦ತ-ಹ೦ತವಾಗಿ ವ್ಯವಸಾಯ ಕ್ಷೇತ್ರಗಳ ನಿಮಾ೯ಣ
4.ಅರಣ್ಯ ನಾಶವನ್ನು ತಡೆಗತಟ್ಟುವುದು.
5.ಪಶುಗಳನ್ನು ಮೇಯಿಸುವುದನ್ನು ತಡೆಗಟ್ಟುವುದು.
ಚಟುವಟಿಕೆಗಳು # 1.ಮಣ್ಣಿನ ಸಂರಕ್ಚಣೆ ಕುರಿತಾಗಿ ಒಂದು ಪ್ರಬಂಧ ಬರೆಯಿರಿ.
- ಅಂದಾಜು ಸಮಯ :....................ಒಂದು ಘಂಟೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.............. ಪೇಪರ್,ಪೆನ್ನು,
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................. ನಿಗದಿತ ಅವಧಿಯಲ್ಲಿ ಪ್ರಬಂದ ಮುಗಿಸುವುದು.
- ಬಹುಮಾಧ್ಯಮ ಸಂಪನ್ಮೂಲಗಳು :................
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:...............
- ಅಂತರ್ಜಾಲದ ಸಹವರ್ತನೆಗಳು:.......................
- ವಿಧಾನ:.....................
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:............. ಚಿಂತನಾತ್ಮಕ ಪ್ರಶ್ನೆಗಳು.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು:.............. ಮಣ್ಣು ಸಂರಕ್ಷಿಸುವ ಕಾರ್ಯದಲ್ಲಿ ನಿಮ್ಮ ಪಾತ್ರವೇನು?
ಚಟುವಟಿಕೆಗಳು # 2.ಕೃಷಿಕನೊಂದಿಗೆ ಸಂದರ್ಶನ
- ಅಂದಾಜು ಸಮಯ :...................ಅರ್ಧ ದಿನ.
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :...........ಪೇಪರ್,ಪೆನ್ನು,ಪ್ರಶ್ನಾವಳಿ
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :........... ಮಣ್ಣು ಸವಕಳುಯಾದ ಕೃಷಿಕನ ಭೂಮಿಗೆ ಭೇಟಿಕೊಟ್ಟು ಸವಕಳಿಯಾಗಲು ಕಾರಣಗಳನ್ನು ತಿಳಿಯುವುದು.
- ಬಹುಮಾಧ್ಯಮ ಸಂಪನ್ಮೂಲಗಳು:................................
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:.......... ರೈತರು.
- ಅಂತರ್ಜಾಲದ ಸಹವರ್ತನೆಗಳು:...............................
- ವಿಧಾನ ;........................... ನೀವು ಮಾಡಿಕೊಂಡ ಪ್ರಶ್ನಾವಳಿಗಳನ್ನು ಹಂತ ಹಂತವಾಗಿ ಕೇಳಿ ಪೇಪರ್ ದಲ್ಲಿ ದಾಖಲಿಸುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?................ ಚಿಂತನಾತ್ಮಕ ಪ್ರಶ್ನೆಗಳು.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು:........................ ಮಣ್ಣು ಸವೆತಕ್ಕೆ ಪ್ರಮುಖ ಕಾರಣಗಳೇನು?
ಯೋಜನೆಗಳು
ಮಣ್ಣಿನ ಸವೆತಕ್ಕೆ ಕಾರಣ ಮತ್ತು ಅದರ ಸಂರಕ್ಷಣಾ ಕ್ರಮಗಳ ಕುರಿತು ಪ್ರಬಂಧ ರಚಿಸಿರಿ.
ಸಮುದಾಯ ಆಧಾರಿತ ಯೋಜನೆಗಳು
ನಿಮ್ಮ ಸುತ್ತಮುತ್ತಲಿನ ಕೃಷಿ ಭೂಮಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಚರ್ಚಿಸಿ ಅವರ ಮಣ್ಣಿನ ವಿಧ ಹಾಗೂ ಬೆಳೆಯುವ ಬೆಳೆಗಳನ್ನು ಪಟ್ಟಿಮಾಡಿ.
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ