"ಭೌಗೋಳಿಕ ಪ್ರದೇಶ ಸಮೀಕ್ಷೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೨೦ ನೇ ಸಾಲು: | ೨೦ ನೇ ಸಾಲು: | ||
ಪ್ರತೀ ಗುಂಪಿನಲ್ಲೂ ವಿವಿಧ ರೀತಿಯ ಲ್ಲಿ ಅಳತೆ ಮಾಡಬಹುದು ಅಳತೆಪಟ್ಟಿ(ಟೇಪ್), ಹಗ್ಗ, ಬೈಸಿಕಲ್ ಬಳಸಬಹುದು. ಮತ್ತು ನಾವು ಅಳತೆ ಮಾಡಿರುವ ವಿಧಾನವನ್ನು ಪರೀಕ್ಷಿಸಲು ಮೋಟಾರ್ ಸೈಕಲ್ ಗಳನ್ನು ಬಳಸಬಹುದು. | ಪ್ರತೀ ಗುಂಪಿನಲ್ಲೂ ವಿವಿಧ ರೀತಿಯ ಲ್ಲಿ ಅಳತೆ ಮಾಡಬಹುದು ಅಳತೆಪಟ್ಟಿ(ಟೇಪ್), ಹಗ್ಗ, ಬೈಸಿಕಲ್ ಬಳಸಬಹುದು. ಮತ್ತು ನಾವು ಅಳತೆ ಮಾಡಿರುವ ವಿಧಾನವನ್ನು ಪರೀಕ್ಷಿಸಲು ಮೋಟಾರ್ ಸೈಕಲ್ ಗಳನ್ನು ಬಳಸಬಹುದು. | ||
ಹಗ್ಗದ ಮೂಲಕ ಅಳತೆ ಮಾಡುವಾಗ ಇಬ್ಬರು ಈ ಪ್ರಕ್ರಿಯೆಯಲ್ಲಿ ತೊಡಗಿದರೆ, ಮತ್ತೊಬ್ಬರು ಅಳತೆಯನ್ನು ದಾಖಲು ಮಾಡಿಕೊಳ್ಳಬೇಕು, ನಂತರ ಮತ್ತೊಂದೆಡೆ ಇನ್ನಿಬ್ಬರು ಹಗ್ಗದ ಮೂಲಕ ಅಳತೆ ಮಾಡುವುದು ಹಾಗು ಒಬ್ಬರು ದಾಖಲು ಮಾಡಿಕೊಳ್ಳುವುದು. ಜೊತೆಗೆ ಬೈಸಿಕಲ್ ನ ಚಕ್ರದ ಅಳತೆಯನ್ನು ಪಡೆಯಬಹುದು, ಚಕ್ರ ಒಂದು ಸುತ್ತಿಗೆ ಎಷ್ಟು ಅಂತರ ಕ್ರಮಿಸುತ್ತದೆ ಎಮುದರ ಲೆಕ್ಕಾಚಾರದ ಮೇಲೆ ಅಳತೆ ಮಾಡುವುದು . ಈ ಪ್ರಕ್ರಿಯೆ ನಡೆಯುವಾಗಲೇ ಗುಂಪಿನಲ್ಲಿರುವ ಇತರ ಮಕ್ಕಳು ತಾವು ಕ್ರಮಿಸಿದ ಸ್ಥಳಗಳಲ್ಲಿನ ಮಾಹಿತಿ, ಪೋಟೋ ತೆಗೆದುಕೊಳ್ಳಬೇಕು . ಒಮ್ಮೆಗೆ ಈ ಕಾರ್ಯ ಮುಗಿದ ನಂತರ ತಾವು ಮಾಡಿರುವ ಅಳತೆಗಳನ್ನು ಪರಿಕ್ಷಿಸಬೇಕು. ಪ್ರತಿಯೊಬ್ಬರೂ ಅಳೆತೆಯಲ್ಲಿ ನಿರ್ಧಿಷ್ಟವಾಗಿ ಅಳೆಯಲು ಸಾಧ್ಯವಾಗದೇ ಟೇಪ್, ಹಗ್ಗ, ಬೈಸಿಕಲ್ ನ ಅಳತೆಗಳು ಏರುಪೇರಾಗಿರಬಹುದು ಅದಕ್ಕಾಗಿಯೇ ಮಕ್ಕಳು ಶಿಕ್ಷಕರೊಡನೆ ಕೂಡಿ ಒಂದು ಸ್ಕೂಟರ್ ಬಳಸಿ ಅದರಲ್ಲಿನ ಕಿ.ಮೀ ಮೀಟರ್ ಮೂಲಕ ಖಚಿತ ಪಡಿಸಿಕೊಳ್ಳಬಹುದು. | ಹಗ್ಗದ ಮೂಲಕ ಅಳತೆ ಮಾಡುವಾಗ ಇಬ್ಬರು ಈ ಪ್ರಕ್ರಿಯೆಯಲ್ಲಿ ತೊಡಗಿದರೆ, ಮತ್ತೊಬ್ಬರು ಅಳತೆಯನ್ನು ದಾಖಲು ಮಾಡಿಕೊಳ್ಳಬೇಕು, ನಂತರ ಮತ್ತೊಂದೆಡೆ ಇನ್ನಿಬ್ಬರು ಹಗ್ಗದ ಮೂಲಕ ಅಳತೆ ಮಾಡುವುದು ಹಾಗು ಒಬ್ಬರು ದಾಖಲು ಮಾಡಿಕೊಳ್ಳುವುದು. ಜೊತೆಗೆ ಬೈಸಿಕಲ್ ನ ಚಕ್ರದ ಅಳತೆಯನ್ನು ಪಡೆಯಬಹುದು, ಚಕ್ರ ಒಂದು ಸುತ್ತಿಗೆ ಎಷ್ಟು ಅಂತರ ಕ್ರಮಿಸುತ್ತದೆ ಎಮುದರ ಲೆಕ್ಕಾಚಾರದ ಮೇಲೆ ಅಳತೆ ಮಾಡುವುದು . ಈ ಪ್ರಕ್ರಿಯೆ ನಡೆಯುವಾಗಲೇ ಗುಂಪಿನಲ್ಲಿರುವ ಇತರ ಮಕ್ಕಳು ತಾವು ಕ್ರಮಿಸಿದ ಸ್ಥಳಗಳಲ್ಲಿನ ಮಾಹಿತಿ, ಪೋಟೋ ತೆಗೆದುಕೊಳ್ಳಬೇಕು . ಒಮ್ಮೆಗೆ ಈ ಕಾರ್ಯ ಮುಗಿದ ನಂತರ ತಾವು ಮಾಡಿರುವ ಅಳತೆಗಳನ್ನು ಪರಿಕ್ಷಿಸಬೇಕು. ಪ್ರತಿಯೊಬ್ಬರೂ ಅಳೆತೆಯಲ್ಲಿ ನಿರ್ಧಿಷ್ಟವಾಗಿ ಅಳೆಯಲು ಸಾಧ್ಯವಾಗದೇ ಟೇಪ್, ಹಗ್ಗ, ಬೈಸಿಕಲ್ ನ ಅಳತೆಗಳು ಏರುಪೇರಾಗಿರಬಹುದು ಅದಕ್ಕಾಗಿಯೇ ಮಕ್ಕಳು ಶಿಕ್ಷಕರೊಡನೆ ಕೂಡಿ ಒಂದು ಸ್ಕೂಟರ್ ಬಳಸಿ ಅದರಲ್ಲಿನ ಕಿ.ಮೀ ಮೀಟರ್ ಮೂಲಕ ಖಚಿತ ಪಡಿಸಿಕೊಳ್ಳಬಹುದು. | ||
− | |||
− | |||
− | |||
− | |||
− | |||
===ವಿದ್ಯುನ್ಮಾನ ಮಾಹಿತಿ ಮಂಡನೆ=== | ===ವಿದ್ಯುನ್ಮಾನ ಮಾಹಿತಿ ಮಂಡನೆ=== |
೧೭:೪೮, ೧೫ ಜುಲೈ ೨೦೧೪ ನಂತೆ ಪರಿಷ್ಕರಣೆ
ಭೌಗೋಳಿಕ ಪ್ರದೇಶ ಸಮೀಕ್ಷೆ ಕೈಪಿಡಿ ಇಲ್ಲಿ ಡೌನ್ ಲೋಡ್ ಮಾಡಬಹುದು
ಶಾಲಾ/ಸ್ಥಳೀಯ ಭೌಗೋಳಿಕ ಪ್ರದೇಶ ಸಮೀಕ್ಷೆ
ಐತಿಹಾಸಿಕವಾಗಿ ನಕ್ಷೆಗಳು ರಾಜ್ಯಗಳನ್ನು ದೇಶಗಳನ್ನು ಗುರುತಿಸಲು ರಚಿಸಲಾಗುತ್ತಿತ್ತು. ನಕ್ಷೆ ರಚಿಸುವವರು ಅವರ ಆಸಕ್ತಿಗನುಗುಣವಾಗಿ ನಕ್ಷೆಗಳನ್ನು ಚಿತ್ರಿಸುತ್ತಿದ್ದರು . ಉದಾ: ಯುರೋಪಿನ ನಕ್ಷೆ ರಚನಾಕಾರರು, ಯುರೋಪನ್ನು ವಿಶ್ವದಲ್ಲಿಯೇ ಅತಿ ದೊಡ್ಡ ರಾಷ್ಟವೆಂದು ತೋರಿಸುವ ಉದ್ದೇಶದಿಂದಲೇ ದೊಡ್ಡ ದೊಡ್ಡ ನಕ್ಷೆಗಳನ್ನು ರಚಿಸಿದರು, ಆದರೆ ಇದು ಸೂಕ್ತವಾದುದಲ್ಲ ಹಾಗು ಎಲ್ಲರಿಗೂ ಉಪಯುಕ್ತವಾಗಿರಲಿಲ್ಲ. ನಕ್ಷೆ ರಚನೆಯ ಸಂದರ್ಭದಲ್ಲಿ ಗಮನಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಕ್ಕಳು ತಿಳಿದಿರಬೇಕು. ಸ್ಥಳಗಲನ್ನು ಗುರುತಿಸುವುದು ಹೇಗೆ, ಆ ಸ್ಥಳಗಳ ಮಾಹಿತಿಯನ್ನು ಕಲೆಹಾಕುವುದು ಹೇಗೆ ಎಂಬುದನ್ನು ಮತ್ತು ಏಕೆ ನಕ್ಷೆಯಲ್ಲಿ ಪ್ರದೇಶಗಳನ್ನು ಗುರುತಿಸಬೇಕು ಎಂಬುದನ್ನು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಅಂತರ್ಜಾಲವನ್ನು ಬಳಸುವಾಗ ವಿವಿಧ ಪ್ರದೇಶಗಳ ನಕ್ಷೆಯನ್ನು ಗುರುತಿಸು ಸಹ ಅಂತರ್ಜಾಲವನ್ನು ಬಳಸುತ್ತೇವೆ. ಆದರೆ ಅಂತರ್ಜಾಲ ನಕ್ಷೆಗಳಲ್ಲಿ ಪ್ರಮುಖ ಪ್ರದೇಶಗಳ ನಕ್ಷೆಗಳನ್ನು ಮಾತ್ರವೇ ಕಾಣಬಹುದಾಗಿರುತ್ತದೆ. ಉದಾ : ಬೆಂಗಳೂರು ನಗರದ ಬಗ್ಗೆ ಅತೀ ಹೆಚ್ಚು ಮಾಹಿತಿಯನ್ನು ನಕ್ಷೆಗಳಲ್ಲಿ ಪಡೆಯಬಹುದು, ಆದರೆ ಬೆಂಗಳೂರು ಹೊರವಲಯದ ಗ್ರಾಮೀಣ ಪ್ರದೇಶದ ಬಗ್ಗೆ ಯಾವುದೇ ಮಾಹಿತಿ ದೊರೆಯುವುದಿಲ್ಲ. ಆದ್ದರಿಂದ ನಮ್ಮ ಶಾಲೆಯ ಪ್ರದೇಶದ ನಕ್ಷೆಯನ್ನು ಸೇರಿಸಬಹುದು, ಇದಕ್ಕೂ ಮೊದಲು ನಮ್ಮ ಪ್ರದೇಶದ ಪ್ರಮುಖ ಸ್ಥಳಗಳಾವು, ಅವುಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಹೇಗೆ ಮತ್ತು ರಚಿಸಿದ ನಕ್ಷೆಯನ್ನು ವಿದ್ಯುನ್ಮಾನವಾಗಿ ಅಂತರ್ಜಾಲ ನಕ್ಷೆಗಳಿಗೆ ಹೇಗೆ ಸೇರಿಸುವುದು ಎಂಬುದನ್ನು ತಿಳಿದುಕೊಳ್ಳಬೇಕು. ರಚಿಸಿದ ನಕ್ಷೆಯನ್ನು ವಿದ್ಯುನ್ಮಾನವಾಗಿ ಅಂತರ್ಜಾಲ ನಕ್ಷೆಗಳಿಗೆ ಸೇರಿಸಲು GPRS ತಂತ್ರಾಂಶದ ಆಧುನಿಕ ಸಲಕರಣೆಗಳನ್ನು ಬಳಸಬಹುದಾಗಿದೆ.
ಉದ್ದೇಶಗಳು
- ಸುತ್ತಮುತ್ತಲಿನ ಭೌಗೋಳಿಕ ಪ್ರದೇಶದ ಬೆಳವಣಿಗೆಯನ್ನು ಅರ್ಥೈಸುವುದು.
- ಅಳತೆ, ಪ್ರಾದೇಶಿಕ ವ್ಯಾಪ್ತಿ ಗಳ ಪ್ರಕ್ರಿಯೆಯನ್ನು ತಿಳಿಯುವುದು, ನಕ್ಷೆ ಬಿಡಿಸುವುದು, ಪ್ರದೇಶಗಳನ್ನು ನಕ್ಷೆಯಲ್ಲಿ ಗುರುತಿಸುವುದು.
- ಅಳತೆ ಮತ್ತು ಅಭಿವೃದ್ದಿ ಮಾನಕಗಳ ಕೌಶಲ ಹೊಂದುವುದು.
- ತಾವು ತಯಾರಿಸಿದ ನಕ್ಷೆಯನ್ನು ಈಗಾಗಲೇ ಇರುವ ಅಂತರ್ಜಾಲಾಧಾರಿತ ವಿದ್ಯುನ್ಮಾನ ನಕ್ಷೆಗಳೊಡನೆ ಹೋಲಿಸುವುದು ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು.
ಪೂರ್ವಸಿದ್ದತೆ
ಮಕ್ಕಳನ್ನು ಗುಂಪುಗಳಲ್ಲಿ ವಿಂಗಡಿಸಬೇಕು, ಒಂದು ತಂಡದಲ್ಲಿ ಸುಮಾರು 10 ಮಕ್ಕಳು ಇರಬಹುದು. ನಂತರ ಪ್ರತಿಯೊಬ್ಬರಿಗೂ ತಾವು ನಕ್ಷೆ ರಚಿಸಬೇಕಿರುವ ಸ್ಥಳವನ್ನು ಆಯ್ಕೆ ಮಾಡಿಕೊಡಬೇಕು. ತಮ್ಮ ಶಾಲಾ ಸಮುದಾಯದ ಪ್ರಮುಖ ಸ್ಥಳಗಳು, ಶಾಲೆಯಿಂದ ಆ ಸ್ಥಳಗಳಿಗೆ ಇರುವ ಅಂತರಗಳನ್ನು ಅಳತೆ ಮಾಡಲು ತಿಳಿಸುವುದು . ಪ್ರತೀ ತಂಡಗಳು ಬೇರೆ ಬೇರೆ ದಿಕ್ಕುಗಳಲ್ಲಿ ನಕ್ಷೆ ಗುರುತಿಸುವರು. ಪ್ರತೀ ಗುಂಪಿನಲ್ಲೂ ವಿವಿಧ ರೀತಿಯ ಲ್ಲಿ ಅಳತೆ ಮಾಡಬಹುದು ಅಳತೆಪಟ್ಟಿ(ಟೇಪ್), ಹಗ್ಗ, ಬೈಸಿಕಲ್ ಬಳಸಬಹುದು. ಮತ್ತು ನಾವು ಅಳತೆ ಮಾಡಿರುವ ವಿಧಾನವನ್ನು ಪರೀಕ್ಷಿಸಲು ಮೋಟಾರ್ ಸೈಕಲ್ ಗಳನ್ನು ಬಳಸಬಹುದು.
ಕಾರ್ಯವಿಧಾನ
ಮಕ್ಕಳನ್ನು ಗುಂಪುಗಳಲ್ಲಿ ವಿಂಗಡಿಸಬೇಕು, ಒಂದು ತಂಡದಲ್ಲಿ ಸುಮಾರು 10 ಮಕ್ಕಳು ಇರಬಹುದು. ನಂತರ ಪ್ರತಿಯೊಬ್ಬರಿಗೂ ತಾವು ನಕ್ಷೆ ರಚಿಸಬೇಕಿರುವ ಸ್ಥಳವನ್ನು ಆಯ್ಕೆ ಮಾಡಿಕೊಡಬೇಕು. ತಮ್ಮ ಶಾಲಾ ಸಮುದಾಯದ ಪ್ರಮುಖ ಸ್ಥಳಗಳು, ಶಾಲೆಯಿಂದ ಆ ಸ್ಥಳಗಳಿಗೆ ಇರುವ ಅಂತರಗಳನ್ನು ಅಳತೆ ಮಾಡಲು ತಿಳಿಸುವುದು . ಪ್ರತೀ ತಂಡಗಳು ಬೇರೆ ಬೇರೆ ದಿಕ್ಕುಗಳಲ್ಲಿ ನಕ್ಷೆ ಗುರುತಿಸುವರು. ಪ್ರತೀ ಗುಂಪಿನಲ್ಲೂ ವಿವಿಧ ರೀತಿಯ ಲ್ಲಿ ಅಳತೆ ಮಾಡಬಹುದು ಅಳತೆಪಟ್ಟಿ(ಟೇಪ್), ಹಗ್ಗ, ಬೈಸಿಕಲ್ ಬಳಸಬಹುದು. ಮತ್ತು ನಾವು ಅಳತೆ ಮಾಡಿರುವ ವಿಧಾನವನ್ನು ಪರೀಕ್ಷಿಸಲು ಮೋಟಾರ್ ಸೈಕಲ್ ಗಳನ್ನು ಬಳಸಬಹುದು. ಹಗ್ಗದ ಮೂಲಕ ಅಳತೆ ಮಾಡುವಾಗ ಇಬ್ಬರು ಈ ಪ್ರಕ್ರಿಯೆಯಲ್ಲಿ ತೊಡಗಿದರೆ, ಮತ್ತೊಬ್ಬರು ಅಳತೆಯನ್ನು ದಾಖಲು ಮಾಡಿಕೊಳ್ಳಬೇಕು, ನಂತರ ಮತ್ತೊಂದೆಡೆ ಇನ್ನಿಬ್ಬರು ಹಗ್ಗದ ಮೂಲಕ ಅಳತೆ ಮಾಡುವುದು ಹಾಗು ಒಬ್ಬರು ದಾಖಲು ಮಾಡಿಕೊಳ್ಳುವುದು. ಜೊತೆಗೆ ಬೈಸಿಕಲ್ ನ ಚಕ್ರದ ಅಳತೆಯನ್ನು ಪಡೆಯಬಹುದು, ಚಕ್ರ ಒಂದು ಸುತ್ತಿಗೆ ಎಷ್ಟು ಅಂತರ ಕ್ರಮಿಸುತ್ತದೆ ಎಮುದರ ಲೆಕ್ಕಾಚಾರದ ಮೇಲೆ ಅಳತೆ ಮಾಡುವುದು . ಈ ಪ್ರಕ್ರಿಯೆ ನಡೆಯುವಾಗಲೇ ಗುಂಪಿನಲ್ಲಿರುವ ಇತರ ಮಕ್ಕಳು ತಾವು ಕ್ರಮಿಸಿದ ಸ್ಥಳಗಳಲ್ಲಿನ ಮಾಹಿತಿ, ಪೋಟೋ ತೆಗೆದುಕೊಳ್ಳಬೇಕು . ಒಮ್ಮೆಗೆ ಈ ಕಾರ್ಯ ಮುಗಿದ ನಂತರ ತಾವು ಮಾಡಿರುವ ಅಳತೆಗಳನ್ನು ಪರಿಕ್ಷಿಸಬೇಕು. ಪ್ರತಿಯೊಬ್ಬರೂ ಅಳೆತೆಯಲ್ಲಿ ನಿರ್ಧಿಷ್ಟವಾಗಿ ಅಳೆಯಲು ಸಾಧ್ಯವಾಗದೇ ಟೇಪ್, ಹಗ್ಗ, ಬೈಸಿಕಲ್ ನ ಅಳತೆಗಳು ಏರುಪೇರಾಗಿರಬಹುದು ಅದಕ್ಕಾಗಿಯೇ ಮಕ್ಕಳು ಶಿಕ್ಷಕರೊಡನೆ ಕೂಡಿ ಒಂದು ಸ್ಕೂಟರ್ ಬಳಸಿ ಅದರಲ್ಲಿನ ಕಿ.ಮೀ ಮೀಟರ್ ಮೂಲಕ ಖಚಿತ ಪಡಿಸಿಕೊಳ್ಳಬಹುದು.
ವಿದ್ಯುನ್ಮಾನ ಮಾಹಿತಿ ಮಂಡನೆ
ಸಮುದಾಯ ಸಮೀಕ್ಷೆಯ ನಂತರ ವಿಧ್ಯಾರ್ಥಿಗಳು ತಮ್ಮ ತಂಡದವರೊಡನೆ ಕುಳಿತು ಎಲ್ಲರೂ ಚರ್ಚಿಸಿ ಈ ಕಾರ್ಯಕ್ರಮದಲ್ಲಿ ತಾವು ಪಡೆದುಕೊಂಡ ಮಾಹಿತಿಯನ್ನು ಒಂದೆಡೆ ದಾಖಲಿಸುವುದು. ಟಿಪ್ಪಣಿಗಳು, ಪೋಟೋಗಳು, ವೀಡಿಯೋಗಳು ಹಾಗು ಪೋಟೂಗಳನ್ನು ಒಂದೆಡೆಗೆ ಸಂಗ್ರಹಿಸಿಕೊಳ್ಳುವುದು.. ನಂತರ ಎಲ್ಲಾ ತಂಡದವರು ಒಂದೆಡೆ ಸೇರಿ ತಮ್ಮ ಶಾಲೆಯನ್ನು ಕೇಂದ್ರವಾಗಿರಿಸಿಕೊಂಡು ತಾವು ಗುರುತಿಸಿದ ಸ್ಥಳಗಳ ನಕ್ಷೆ ರಚಿಸುವುದು . ತಂಡದಲ್ಲಿ ಚರ್ಚಸಿ, ಈ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಶಿಕ್ಷಕರ ಸಹಾಯದಿಂದ ಪೋಟೋಗಳನ್ನು ಹಾಗು ವೀಡಿಯೋಗಳನ್ನು ಹಾಗು ತಾವು ಪಡೆದ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಸೇರಿಸಿ ಮಂಡನೆಗೆ ಸಿದ್ದಗೊಳಿಸುವುದು . ಸಮೀಕ್ಷೆ ಸಂದರ್ಭದಲ್ಲಿ ತಾವು ಕಂಡುಕೊಂಡ ಅಂಶಗಳು/ಅನುಭವಗಳು/ಮಾಹಿತಿಗಳನ್ನು ಕಥೆಯ ರೂಪದಲ್ಲಿ ಹಂಚಿಕೊಳ್ಳಬೇಕು . ತಾವು ಸಂಗ್ರಹಿಸಿದ ಪೋಟೋಗಳನ್ನು ವೀಡಿಯೋಗಳನ್ನು ಕಂಪ್ಯೂಟರ್ ನ ಮೂಲಕ ಪ್ರಸ್ತುತಪಡಿಸಬಹುದು. ಇದು ಅವರ ಕಲಿಕೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ.
ವಿದ್ಯುನ್ಮಾನ ಮಾಹಿತಿ ಮಂಡನೆಯನ್ನು ಮಾಡಲು ಕಂಪ್ಯೂಟರ್, ಪ್ರೋಜೆಕ್ಟರ್, ಸ್ಪೀಕರ್ ಗಳ ಅವಶ್ಯಕತೆ ಇರುತ್ತದೆ, ಈ ಸಾಮಗ್ರಿಗಳನ್ನು ಬಳಸಿ ಮಂಡನೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಮೂಡಿಸಬಹದು. ಸಮೀಕ್ಷೆ ಭೇಟಿಯ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳು, ಪೋಟೋಗಳು, ವೀಡಿಯೋಗಳ್ನು ನೇರವಾಗಿ ಪ್ರದರ್ಶಿಸುವ ಮೂಲಕ ಪ್ರತ್ಯೇಕ್ಷ ಚಿತ್ರಣವನ್ನು ನೀಡಬಹುದು. . ಈ ಮೂಲಕ ಮಂಡನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ ಮತ್ತು ಪ್ರಸ್ತುತಿ ಕೌಶಲ ದ ಕಲಿಕೆಯೂ ಸಾಧ್ಯವಾಗುತ್ತದೆ.
ನಿರೀಕ್ಷಿತ ಫಲಿತಾಂಶ:
- ಅಳತೆಗಳ ಪರಿಕಲ್ಪನೆ ಮೂಡುವುದು ( ಗಣಿತ),
- ಕ್ಷೆಗಳ ಮಾಹಿತಿಯನ್ನು ಅರ್ಥೈಸಿಕೊಳ್ಳುವರು ( ಭೂಗೋಳ),
- ಭೌಗೋಳಶಾಸ್ತ್ರವನ್ನು ಅರ್ಥೈಸಿಕೊಳ್ಳುವರು .
- ಸ್ಥಳೀಯ ಪ್ರದೇಶದ ನಕ್ಷೆ ತಯಾರಿಸುವುದನ್ನು ತಿಳಿಯುವರು
- ನಮ್ಮ ಸುಮುದಾಯದಲ್ಲಿರುವ ಸೌಲಭ್ಯಗಳೇನು, ಈ ಸೌಲಭ್ಯಗಳು ಎಲ್ಲರಿಗೂ ತಲುಪಿವೆಯೇ, ಎಲ್ಲರಿಗೂ ತಲುಪದಿದ್ದಲ್ಲಿ ನಮ್ಮ ನಕ್ಷೆಯ ಮಾಹಿತಿ ಪ್ರಕಾರ ಸ್ಥಳೀಯ ಸರ್ಕಾರಕ್ಕೆ ಮನವಿ ಮಾಡಬಹದೇ ಎಂಬುದನ್ನು ತಿಳಿಯುತ್ತಾರೆ. ಉದಾ: ಅಂಗನವಾಡಿ, ಆರೋಗ್ಯ ಕೇಂದ್ರ, ಶಾಲೆ etc..
ಮೌಲ್ಯಮಾಪನ ಅಂಶಗಳು
- ಅಳತೆ - ಕೌಶಲ, ವಿಧಾನ ಮತ್ತು ಪರಿಕರಗಳ ಬಳಕೆ
- ದೂರ - ಅಂತರಗಳ ಅರಿವು
- ಭಾಗವಹಿಸುವಿಕೆ
- ಅಂದಾಜಿಸುವಿಕೆ
- ಮ್ಯಾಪ್ ಚಿತ್ರ ರಚನೆ, ಮಂಡನೆ ಕೌಶಲ
- ಮ್ಯಾಪ್ ವಿವರಣೆ