"ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾ ಕಲಿಕಾ ಸಾಮಗ್ರಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಎನ್.ಸಿ.ಎಪ್ ಪೊಶೀಷನ್ ಪೇಪರ್ using HotCat) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
==ಸಾಮಗ್ರಿಗಳ ವಿಧಗಳು== | ==ಸಾಮಗ್ರಿಗಳ ವಿಧಗಳು== | ||
− | + | ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಬಳಸುವ“ಸಾಮಗ್ರಿಗಳು” ಏನನ್ನಾದರೂ ಒಳಗೊoಡಿರುತ್ತವೆ.ಅವುಗಳು ಭಾಷಾ ಸಂಬಂಧಿ, ದೃಶ್ಯ, ಶ್ರಾವ್ಯ ಅಥವಾ ಸ್ನಾಯು ಸಂವೇದಿ ಗಳಾಗಿರಬಹುದು ಮತ್ತು ಈ ಸಾಮಗ್ರಿಗಳನ್ನು ಮುದ್ರಣ ರೂಪದಲ್ಲಿ, ನೇರ ಪ್ರದರ್ಶನ ಅಥವಾ ಗೋಡೆ ಪ್ರದರ್ಶನದ ಮೂಲಕ, ಅಥವಾ ಕ್ಯಾಸೆಟ್, ಸಿಡಿ-ರಾಮ್ ಡಿವಿಡಿ ಇಲ್ಲವೇ ಇಂಟರ್ ನೆಟ್ ಮುಖಾoತರ ಪ್ರಸ್ತುತಪಡಿಸಬಹುದು. ಕಲಿಕಾರ್ಥಿಗಳಿಗೆ ಭಾಷೆಯ ಬಗ್ಗೆ ಅವು ಮಾಹಿತಿ ನೀಡುವುದರಿಂದ ಶೈಕ್ಷಣಿಕ ಸ್ವರೂಪವುಳ್ಳದ್ದಾಗಿರಬಹುದು, ಬಳಸುವ ಭಾಷೆಗೆ ಅವು ಮಾನ್ಯತೆ ನೀಡುವುದರಿಂದ ಪ್ರಾಯೋಗಿಕ ಸ್ವರೂಪವುಳ್ಳದ್ದಾಗಿರಬಹುದು, ಭಾಷೆಯ ಬಳಕೆಗೆ ಉತ್ತೇಜನ ನೀಡುವುದರಿಂದ ಅವು ಪರಿಶೀಲನಾ ಸ್ವರೂಪವುಳ್ಳದ್ದಾಗಿರಬಹುದು ಅಥವಾ ಭಾಷಾ ಬಳಕೆಯ ಕುರಿತು ಸಂಶೋಧನೆಗಳಿಗೆ ಅವಕಾಶ ನೀಡುವುದರಿಂದ ಅನ್ವೇಷಣಾತ್ಮಕವೂ ಆಗಿರಬಹುದು. | |
==ಪಠ್ಯಪುಸ್ತಕ== | ==ಪಠ್ಯಪುಸ್ತಕ== | ||
೨೧ ನೇ ಸಾಲು: | ೨೧ ನೇ ಸಾಲು: | ||
ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವಲ್ಪ ಹಿಂತಿರುಗಿ ನೋಡಿದರೆ, ನಾವು ಕೌಶಲಗಳನ್ನು ಪ್ರತ್ಯೇಕಿಸಿ ಬಳಸುವುದು ವಿರಳ, ಬದಲಾಗಿ ಒಂದಕ್ಕೊoದು ಪೂರಕವಾಗಿ ಬಳಸುವುದನ್ನು ನಾವು ನೋಡಬಹುದು. | ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವಲ್ಪ ಹಿಂತಿರುಗಿ ನೋಡಿದರೆ, ನಾವು ಕೌಶಲಗಳನ್ನು ಪ್ರತ್ಯೇಕಿಸಿ ಬಳಸುವುದು ವಿರಳ, ಬದಲಾಗಿ ಒಂದಕ್ಕೊoದು ಪೂರಕವಾಗಿ ಬಳಸುವುದನ್ನು ನಾವು ನೋಡಬಹುದು. | ||
ಆದ್ದರಿಂದ, ವಿದ್ಯಾರ್ಥಿಗಳನ್ನು ಅವರು ಕಲಿಯುವ ಭಾಷೆಯಲ್ಲಿ “ಸಂವಹನಾತ್ಮಕವಾಗಿ ಸಮರ್ಥ” ರನ್ನಾಗಿ ಮಾಡುವುದು ಶಿಕ್ಷಕರ ಕಾರ್ಯಗಳಲ್ಲಿ ಒಂದು. ನಮ್ಮ ದಿನನಿತ್ಯದ ಬದುಕುಗಳಲ್ಲಿ, ನಾವು ಭಾಷಾ ಕೌಶಲಗಳ ಸ್ವಾಭಾವಿಕ ಸಮಗ್ರೀಕರಣ ಮಾಡುವಂತಹ ಕಾರ್ಯಗಳ ಪ್ರದರ್ಶನವನ್ನು ಮಾಡುವ ಸಂದರ್ಭಗಳ ಮೇಲೆ ಕೋರ್ಸ್ ಪುಸ್ತಕಗಳು ಗಮನಹರಿಸಬೇಕು. ಸಮಗ್ರೀಕರಣಗೊoಡ ಕೌಶಲ ಸಾಮಗ್ರಿಗಳು ಕಲಿಕಾರ್ಥಿಗಳನ್ನು ವಿಶ್ವಾಸಾರ್ಹ ಮತ್ತು ವಾಸ್ತವಿಕವಾದ ಕಾರ್ಯಗಳಲ್ಲಿ ಒಳಗೊಳ್ಳುವಂತೆ ಮಾಡುವ ಹೆಚ್ಚಿನ ಸಾಧ್ಯತೆ ಇರುವುದರಿಂದ, ತಾವು ಮಾಡಬೇಕಾದ ಕಾರ್ಯದ ಹಿಂದಿರುವ ತರ್ಕದ ಸ್ಪಷ್ಟತೆ ಆದಂತೆ ಅವರ ಪ್ರೇರಣಾ ಮಟ್ಟವು ಹೆಚ್ಚುತ್ತದೆ. (McDonough ಮತ್ತು Shaw 1993: 203-4) | ಆದ್ದರಿಂದ, ವಿದ್ಯಾರ್ಥಿಗಳನ್ನು ಅವರು ಕಲಿಯುವ ಭಾಷೆಯಲ್ಲಿ “ಸಂವಹನಾತ್ಮಕವಾಗಿ ಸಮರ್ಥ” ರನ್ನಾಗಿ ಮಾಡುವುದು ಶಿಕ್ಷಕರ ಕಾರ್ಯಗಳಲ್ಲಿ ಒಂದು. ನಮ್ಮ ದಿನನಿತ್ಯದ ಬದುಕುಗಳಲ್ಲಿ, ನಾವು ಭಾಷಾ ಕೌಶಲಗಳ ಸ್ವಾಭಾವಿಕ ಸಮಗ್ರೀಕರಣ ಮಾಡುವಂತಹ ಕಾರ್ಯಗಳ ಪ್ರದರ್ಶನವನ್ನು ಮಾಡುವ ಸಂದರ್ಭಗಳ ಮೇಲೆ ಕೋರ್ಸ್ ಪುಸ್ತಕಗಳು ಗಮನಹರಿಸಬೇಕು. ಸಮಗ್ರೀಕರಣಗೊoಡ ಕೌಶಲ ಸಾಮಗ್ರಿಗಳು ಕಲಿಕಾರ್ಥಿಗಳನ್ನು ವಿಶ್ವಾಸಾರ್ಹ ಮತ್ತು ವಾಸ್ತವಿಕವಾದ ಕಾರ್ಯಗಳಲ್ಲಿ ಒಳಗೊಳ್ಳುವಂತೆ ಮಾಡುವ ಹೆಚ್ಚಿನ ಸಾಧ್ಯತೆ ಇರುವುದರಿಂದ, ತಾವು ಮಾಡಬೇಕಾದ ಕಾರ್ಯದ ಹಿಂದಿರುವ ತರ್ಕದ ಸ್ಪಷ್ಟತೆ ಆದಂತೆ ಅವರ ಪ್ರೇರಣಾ ಮಟ್ಟವು ಹೆಚ್ಚುತ್ತದೆ. (McDonough ಮತ್ತು Shaw 1993: 203-4) | ||
+ | |||
+ | [[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]] |
೦೦:೩೦, ೧೬ ಆಗಸ್ಟ್ ೨೦೧೮ ದ ಇತ್ತೀಚಿನ ಆವೃತ್ತಿ
ಸಾಮಗ್ರಿಗಳ ವಿಧಗಳು
ಭಾಷಾ ಕಲಿಕೆಯನ್ನು ಸುಗಮಗೊಳಿಸಲು ಬಳಸುವ“ಸಾಮಗ್ರಿಗಳು” ಏನನ್ನಾದರೂ ಒಳಗೊoಡಿರುತ್ತವೆ.ಅವುಗಳು ಭಾಷಾ ಸಂಬಂಧಿ, ದೃಶ್ಯ, ಶ್ರಾವ್ಯ ಅಥವಾ ಸ್ನಾಯು ಸಂವೇದಿ ಗಳಾಗಿರಬಹುದು ಮತ್ತು ಈ ಸಾಮಗ್ರಿಗಳನ್ನು ಮುದ್ರಣ ರೂಪದಲ್ಲಿ, ನೇರ ಪ್ರದರ್ಶನ ಅಥವಾ ಗೋಡೆ ಪ್ರದರ್ಶನದ ಮೂಲಕ, ಅಥವಾ ಕ್ಯಾಸೆಟ್, ಸಿಡಿ-ರಾಮ್ ಡಿವಿಡಿ ಇಲ್ಲವೇ ಇಂಟರ್ ನೆಟ್ ಮುಖಾoತರ ಪ್ರಸ್ತುತಪಡಿಸಬಹುದು. ಕಲಿಕಾರ್ಥಿಗಳಿಗೆ ಭಾಷೆಯ ಬಗ್ಗೆ ಅವು ಮಾಹಿತಿ ನೀಡುವುದರಿಂದ ಶೈಕ್ಷಣಿಕ ಸ್ವರೂಪವುಳ್ಳದ್ದಾಗಿರಬಹುದು, ಬಳಸುವ ಭಾಷೆಗೆ ಅವು ಮಾನ್ಯತೆ ನೀಡುವುದರಿಂದ ಪ್ರಾಯೋಗಿಕ ಸ್ವರೂಪವುಳ್ಳದ್ದಾಗಿರಬಹುದು, ಭಾಷೆಯ ಬಳಕೆಗೆ ಉತ್ತೇಜನ ನೀಡುವುದರಿಂದ ಅವು ಪರಿಶೀಲನಾ ಸ್ವರೂಪವುಳ್ಳದ್ದಾಗಿರಬಹುದು ಅಥವಾ ಭಾಷಾ ಬಳಕೆಯ ಕುರಿತು ಸಂಶೋಧನೆಗಳಿಗೆ ಅವಕಾಶ ನೀಡುವುದರಿಂದ ಅನ್ವೇಷಣಾತ್ಮಕವೂ ಆಗಿರಬಹುದು.
ಪಠ್ಯಪುಸ್ತಕ
ಯಾವುದೇ ನಿರ್ಧಿಷ್ಟ ತರಗತಿಗೆ ಒಂದು ಕೋರ್ಸ್ ಪುಸ್ತಕ ಮಾದರಿಯಾಗಲು ಸಾಧ್ಯವಿಲ್ಲ. ಕಲಿಕಾರ್ಥಿಗಳು ಮತ್ತು ಅವರು ಬಳಸುವ ಸಾಮಗ್ರಿಗಳ ಮಧ್ಯೆ ಒಂದು ಹೊoದಾಣಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಬ್ಬ ಪರಿಣಾಮಕಾರಿ ತರಗತಿ ಶಿಕ್ಷಕ/ಕಿ ಸಾಮಗ್ರಿಗಳ ಮೌಲ್ಯಮಾಪನ ಮಾಡಲು,ಹೊoದಿಸಿಕೊoಡು ಬಳಸಲು ಮತ್ತು ತಯಾರು ಮಾಡಲು ಶಕ್ತವಾಗಿರಬೇಕು. ಪ್ರತಿಯೊಬ್ಬ ಶಿಕ್ಷಕ ಒಬ್ಬ ಸಾಮಗ್ರಿ ತಯಾರಕ ಆಗಬಹುದು ಹಾಗಾಗಿ ಕೋರ್ಸ್ ನಲ್ಲಿ ಬಳಸುವ ಪುಸ್ತಕ ಸಾಮಗ್ರಿಯನ್ನು ಹೊರತಾಗಿ ಹೆಚ್ಚಿನ ಬೋಧನಾ ಸಾಮಗ್ರಿಗಳನ್ನು ಒದಗಿಸಬೇಕು. ಈ ಸಾಮಗ್ರಿಗಳು ಸ್ಥಿರತೆ ಮತ್ತು ಮುoದುವರಿಕೆಯನ್ನು ಸಾಧಿಸಲು ಹಾಗೂ ಶಿಕ್ಷಕರು ಮತ್ತು ಕಲಿಕಾರ್ಥಿಗಳು ಒಂದು ನಿರ್ದಿಷ್ಟ ಸಮಯದ ಕೊನೆಯಲ್ಲಿ ಸಾಧಿಸಲು ಪ್ರಯತ್ನಪಡುವ ಒಂದು ಗುರಿಯನ್ನು ಕಲಿಕಾರ್ಥಿಗಳಿಗೆ ನೀಡಲು ಸಹಾಯ ಮಾಡುತ್ತದೆ ಎಂದುಕೋರ್ಸ್ ಪುಸ್ತಕಗಳ ಪರ ವಕಾಲತ್ತು ವಹಿಸುವ ಕೆಲವರು ವಾದಿಸುತ್ತಾರೆ. ಆದರೂ, ಕೋರ್ಸ್ ಪುಸ್ತಕ ಸಾಮಗ್ರಿಗಳಿಗೆ ತಮ್ಮ ಎಲ್ಲಾ ಓದುಗರ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಆಗುವುದಿಲ್ಲ; ಅವು ಪಠ್ಯಕ್ರಮದ ಸಮಾನತೆಯನ್ನು ಹೇರುತ್ತವೆ, ಹಾಗೂ ಶಿಕ್ಷಕರ ಹೊಸ ಉಪಕ್ರಮಗಳನ್ನು ಮತ್ತು ಅವರ ಅಧಿಕಾರವನ್ನು ತೆಗೆದುಹಾಕುತ್ತವೆ ಎಂದುಕೆಲವು ಸಂಶೋಧಕರು ನಂಬುತ್ತಾರೆ (Allwright 1981; Littlejohn 1992; Hutchison and Torres 1994 ನೋಡಿರಿ).
ಯಾವಾಗಲೂ ಆಸಕ್ತಿದಾಯಕವಾಗಿ ಮತ್ತು ಸವಾಲಾತ್ಮಕವಾಗಬೇಕಾಗಿರುವ ಭಾಷಾ ಪಠ್ಯಪುಸ್ತಕಗಳು, ಸಾಮಾನ್ಯವಾಗಿ ನೀರಸದಾಯಕ ಮತ್ತು ಊಹೆಗೆ ಎಡೆಮಾಡಿಕೊಡದ ರೀತಿಯಲ್ಲಿ ರೂಪುಗೊಳ್ಳುವಲ್ಲಿ ಕೊನೆಗೊಳ್ಳುತ್ತವೆ ಹಿಂಬುದು ಅತ್ಯoತ ಅನುಕoಪದ ವಿಷಯವಾಗಿದೆ. ಅದರಲ್ಲೂ ಮುಖ್ಯವಾಗಿ, ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕಗಳನ್ನು ಅತ್ಯoತ ಸಂವೇದನಶೀಲತೆಯಿoದ ಮತ್ತು ಕಾಳಜಿಪೂರಕವಾಗಿ ಬರೆಯಬೇಕು. ಅವುಗಳು ಸಾಂ ದರ್ಭಿಕ ಶ್ರೀಮoತಿಕೆಯನ್ನು ಹೊoದಿರಬೇಕು ಮತ್ತು ಕಲಿಕಾರ್ಥಿಗಳ ಕ್ರಿಯಾಶೀಲತೆಗೆ ಸೂಕ್ತ ಸವಾಲು ಒದಗಿಸಬೇಕು. ಈ ಪುಸ್ತಕಗಳು ಕೇವಲ ಕಥೆಗಳು ಮತ್ತು ಪದ್ಯಗಳನ್ನು ಹೊoದಿರದೇ, ಕಾಳಜಿಯುತ ಗಮನಿಸುವಿಕೆ ಮತ್ತು ವಿಶ್ಲೇಷಣೆಯನ್ನು ಹೊoದಿರುವಂತಹ ಕಾರ್ಯಗಳು ಸೇರಿದಂತೆ, ಒಂದು ಇಡೀ ತಲೆಮಾರನ್ನು ಮತ್ತು ವಿಷಯವಸ್ತುಗಳನ್ನು ಮತ್ತು ಸಂದರ್ಯಪ್ರಜ್ಞೆಯಿoದ ಕೂಡಿರುವ ಮೌಖಿಕ ಮತ್ತು ಬರಹರೂಪದ ಚರ್ಚೆಯನ್ನು ಬಂಬಿಸಬೇಕು. ವಿವರಣಾ ಚಿತ್ರಗಳು, ಮುದ್ರಣ ವಿನ್ಯಾಸ, ಪುಸ್ತಕ ವಿನ್ಯಾಸಗಳು ಪಠ್ಯಪುಸ್ತಕಗಳ ಅವಿಭಾಜ್ಯ ಭಾಗಗಳಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ, ಪಠ್ಯಪುಸ್ತಕಗಳನ್ನು ಮೊದಲು ಬರೆದು ನಂತರ ಚಿತ್ರವಿವರಣಾಕಾರಿಗೆ ನೀಡಲಾಗುತ್ತದೆ. ಈ ಪ್ರಕ್ರಿಯೆಯು ವಿಷಯವಸ್ತು ಮತ್ತು ಚಿತ್ರವಿವರಣೆಯ ನಡುವಿನ ಕರುಣಾಜನಕ ಅಸಾಮರಸ್ಯದಲ್ಲಿ ಕೊನೆಗೊಳ್ಳುತ್ತದೆ, ಮತ್ತು ಸಾರ್ವಜನಿಕ ನಿಧಿಗೆ ದೊಡ್ಡಮಟ್ಟದ ಹೊರೆಯ ರೂಪದಲ್ಲಿರುತ್ತದೆ. ಪಠ್ಯಪುಸ್ತಕ ಬರಹಗಾರರು, ವೃತ್ತಿಪರ ವಿನ್ಯಾಸಗಾರರು ಮತ್ತು ಚಿತ್ರ ವಿವರಣಕಾರರ ಒಂದು ತoಡವು ಪ್ರಾರಿಂಭದಂದಲೇ ಏಕರೂಪವಾಗಿ ಕೆಲಸ ಮಾಡಬೇಕು ಮತ್ತು ಈ ತoಡದಿಂದ ಆಯ್ಕೆಯಾದ ಒಂದು ಸಣ್ಣ ತoಡವು ಪಠ್ಯಪುಸ್ತಕಗಳ ನಿರ್ಮಾಣದಲ್ಲಿ ತೊಡಗಬೇಕು. ನಮ್ಮ ಅನಿಸಿಕೆಯoತೆ ಒಂದು ದೊಡ್ಡ ಪ್ರಮಾದದ ವಿಷಯವೆಂದರೆ ಮುಖ್ಯ ಪಠ್ಯಪುಸ್ತಕವು ಸಾಮಾನ್ಯವಾಗಿ ಒಂದು ಭಾಷೆಯಲ್ಲಿ ನಿರ್ಮಾಣವಾಗಿ ನಂತರ ಇತರೆ ಭಾಷೆಗಳಲ್ಲಿ ಅನುವಾದಿಸಲ್ಪಡುತ್ತದೆ. ಇದು ನಿಜವಾಗಲೂ, ಭಾಷೆ, ಯೋಚನೆ ಮತ್ತು ಸಂಸ್ಕೃತಿಗಳ ನಡುವಿನ ಸಂಬಂಧದ ಸ್ವರೂಪವನ್ನು ಅನಾವರಣ ಮಾಡುವ ನಮ್ಮ ಪ್ರಯತ್ನವನ್ನು ಅಣಕಿಸಿದಂತಾಗಿದೆ.
ಎಲ್ಲ ಪ್ರಮುಖ ತಾoತ್ರಿಕ ಆವಿಷ್ಕಾರಗಳ ಹೊರತಾಗಿಯೂ, ಪಠ್ಯಪುಸ್ತಕವು, ಒಂದು ಸಾಮಾನ್ಯ ಮಗುವಿನ ಜ್ಞಾನದ ಪ್ರಮುಖ ಮೂಲವಾಗಿ ಮುoದುವರೆಯುತ್ತದೆ ಎಂದುನಮಗೆ ತಿಳಿದಿದೆ. ಆದ್ದರಿಂದ, ಇದನ್ನು ಎಷ್ಟು ಸಾಧ್ಯವೋ ಅಷ್ಟು ಕಾಳಜೀಪೂರ್ವಕವಾಗಿ ನಿರ್ಮಾಣ ಮಾಡುವುದು ಮಹತ್ವದ್ದಾಗಿದೆ. ನಿರ್ಮಾಣದ ಪ್ರಕ್ರಿಯೆಯ ಸಂದರ್ಭದಲ್ಲಿ, ಶಿಕ್ಷಕರು ಮತ್ತು ಮಕ್ಕಳ ಸಹಯೋಗದಲ್ಲಿ ನಿರಿಂತರ ಪ್ರಯೋಗಗಳಿಗೆ ಒಳಪಡಿಸುವಂತಾಗಬೇಕು; ಸದಾಕಾಲ ಪುಸ್ತಕಗಳ ಸುಧಾರಣೆಗೆ ಸಹಾಯ ಮಾಡುವಂತಹ ಹಿಮ್ಮಾಹಿತಿಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲೂ ಸಹ ಸಾಧ್ಯವಾಗಬೇಕು.
ಪ್ರತ್ಯೇಕವಾದ ಭಾಷಾ ಬೋಧನೆ v/s ಸಂವಹನಾತ್ಮಕ ಬೋಧನೆ
ಹೆಚ್ಚಿನ ಪಠ್ಯಪುಸ್ತಕಗಳು ಭಾಷೆಯ ಸ್ಪಷ್ಟ ಕಲಿಕೆ ಮತ್ತು ಅಭ್ಯಾಸವನ್ನು ಗುರಿಯಾಗಿಸಿಕೊoಡಿರುತ್ತವೆ. ಹೆಚ್ಚಿನ ಪಠ್ಯಪುಸ್ತಕಗಳು ಭಾಷೆಯ ಮೂಲರೂಪ ಕೇಂದ್ರಿತ ಬೋಧನೆಗೆ ಸಂವಹನಾತ್ಮಕ ಚಟುವಟಿಕೆಗಳನ್ನು ಸೇರಿಸುವಂತಹ ವಿಧಾನವನ್ನು ಅನುಸರಿಸುತ್ತವೆ. ಭಾಷೆಯ ಪ್ರತ್ಯೇಕ ವೈಶಿಷ್ಟ್ಯತೆಗಳ ಶಿಸ್ತುಬದ್ಧವಾದ ಸರಣಿಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಕಲಿಕಾರ್ಥಿಗಳು ಭರವಸೆಯನ್ನು ಬೆಳೆಸಿಕೊಳ್ಳಲು ಮತ್ತು ಪ್ರಗತಿಯ ಒಂದು ಅನುಭವವನ್ನು ಪಡೆಯಲು ಸಾಧ್ಯ ಎಂದುನಂಬಲಾಗುತ್ತದೆ. ಆದರೆ ಸಂಶೋಧಕರ ತತ್ವಗಳಿoದ ಪ್ರಭಾವಿತರಾದ ಕ್ರಷೆನ್ (1982, 1988) ರಿಂತಹ ಪಠ್ಯಪುಸ್ತಕ ಬರಹಗಾರರು ಸಂವಹನಾತ್ಮಕ ಸಾಮರ್ಥ್ಯಗಳ ಔಪಚಾರಿಕ ಸ್ವಾಧೀನತೆಯನ್ನು ಪಡೆಯುವ ಗುರಿ ಹೊoದಿರುವ ಸಾಮಗ್ರಿಗಳಾದ ಸಂವಾದಗಳು, ಯೋಜನೆಗಳು, ಆಟಗಳು, ನಟನೆಗಳು, ಮತ್ತು ನಾಟಕ (LaDousse 1983; Klippel 1984 ನೋಡಿರಿ) ಮುoತಾದವುಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ಸಂಶೋಧನಕಾರರು ಕಾರ್ಯ ಆಧಾರಿತ ಅಥವಾ ಪಠ್ಯ-ಆಧಾರಿತ ವಿಧಾನದ (Willis 1996 ನೋಡಿರಿ) ಮೂಲಕ ಭಾಷಾ ಅನುಭವದ ಮೇಲೆ ಪ್ರಬಲವಾದ ಗಮನಬಂದ್ರದ ಪರವಾಗಿ ಮoಡಿಸುತ್ತಾರೆ, ಮತ್ತು ಇನ್ನು ಕೆಲವರು ಅನುಭವದ ಜೊತೆಗೆ ಭಾಷಾ ಅರಿವಿನ ಚಟುವಟಿಕೆಗಳ (Tomlinson 1994) ಪರವಾಗಿ ವಾದ ಮoಡಿಸುತ್ತಾರೆ.
ಸಾಮಗ್ರಿಗಳ ಸ್ವರೂಪ: ಪ್ರಮಾಣಿಕೃತ v/s ರೂಪಿತಗೊoಡ
ಇತ್ತೀಚೆಗೆ ಕೆಲವು ಸಮಯದಂದ, ಸಾಮಗ್ರಿಗಳ ಸ್ವರೂಪದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ಪಷ್ಟ ಕಲಿಕೆಯನ್ನು ಗುರಿಯಾಗಿರಿಸಿಕೊoಡಿರುವ ಕೆಲವು ಪುಸ್ತಕಗಳು ಒಂದು ನಿರ್ಧಿಷ್ಟ ಕಾಲಘಟ್ಟದಲ್ಲಿ ಬೋಧಿಸಲಾಗುವ ಭಾಷಾ ವೈಶಿಷ್ಟ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುವ ಭಾಷೆಯ ಉದಾಹರಣೆಯನ್ನು ಬಳಸುತ್ತವೆ. ಈ ರೀತಿಯಲ್ಲಿ ಆಯ್ಕೆಮಾಡಿದ ಉದಾಹರಣೆಗಳು ಸಾಮಾನ್ಯವಾಗಿ ಸರಳವಾಗಿ ಮತ್ತು ಸಣ್ಣ ಪ್ರಮಾಣವಾಗಿ ಕಾಣುವಂತೆ ರೂಪಿಸಲ್ಪಟ್ಟಿರುತ್ತವೆ. ಆದರೆ, ಇದನ್ನು ಭಾರೀ ದಂಡ ತೆರುವ ಮೂಲಕ ಮಾಡಲಾಗಿರುತ್ತದೆ. ಸಹಜ ಭಾಷೆಯ ಒಂದು ಅವಿಭಾಜ್ಯ ಅoಗವಾಗಿರುವ ಅವಶ್ಯಗತೆಗಿoತ ಅಧಿಕವಾಗಿರುವಿಕೆಯ (Redundancy) ವೈಶಿಷ್ಟ್ಯಯನ್ನು ತೆಗೆದು ಹಾಕಲಾಗುವುದರಿಂದ ಪಠ್ಯವು ಕೃತಕ, ಅರ್ಥಹೀನ ಮತ್ತು ಗ್ರಹಿಸಲಸಾಧ್ಯವಾಗುತ್ತದೆ. ಈ ಸಂಶೋಧಕರು ಕಲಿಕಾರ್ಥಿಗಳ ಮೇಲೆ ಪ್ರಮಾಣೀಕೃತ ಸಾಮಗ್ರಿಗಳನ್ನು ಬಳಸುವುದರಿಂದಾಗುವ ಪ್ರೇರಣಾತ್ಮಕ ಪರಿಣಾಮದ ಮೇಲೆ ಒತ್ತು ನೀಡುತ್ತಾರೆ; (Bacon ಮತ್ತು Finnemann, 1990; Kuo 1993). ಹಲವಾರು ವಿಧ್ವಾoಸರು “ಪ್ರಮಾಣೀಕೃತ ಸಾಮಗ್ರಿಗಳ” ಆರಾಧನೆಯ ಮೇಲೆ ವಿರೋಧಿಸಿದ್ದರೂ ಸಹ, ಪಠ್ಯಪುಸ್ತಕ ಬರಹಗಾರರು ಪ್ರಮಾಣೀಕೃತ ಪಠ್ಯವನ್ನೇ ಬಳಸಬೇಕೆoದು ನಾವು ಸಲಹೆ ನೀಡುತ್ತೇವೆ.; ಅವುಗಳನ್ನು ಯಾವತ್ತೂ ಅವರು ಬದಲಾವಣೆ ಮಾಡಬಾರದು.ಒಂದು ವೇಳೆ ಅವುಗಳಲ್ಲಿ ಕೆಲವು ಬದಲಾವಣೆ ಮಾಡುವ ಅವಶ್ಯಕತೆ ಅವರಿಗೆ ಕoಡಲ್ಲಿ, ಮೊದಲಿಗೆ ಕೃತಿ ರಚನಾಕಾರ(ರ) ಒಪ್ಪಿಗೆಯನ್ನು ಮೊದಲು ಪಡೆಯಬೇಕು. ಪಠ್ಯಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾದ ಅಭ್ಯಾಸಗಳು ಮತ್ತು ಚಟುವಟಿಕೆಗಳಲ್ಲಿ ಪಠ್ಯಪುಸ್ತಕ ಬರಹಗಾರರು ನಿಜವಾಗಿಯೂ ಒಂದು ನವೀನ ಮತ್ತು ರಚನಾತ್ಮಕ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತದೆ.
ವಿಷಯವಸ್ತುಗಳು /ವಿಷಯಗಳು
ಯಾವುದಾದರೊoದು ರೀತಿಯ ದೋಷ ವಿಮರ್ಷನೆ ಅವಶ್ಯಕವಾಗಿದ್ದರೂ ಸಹ, ಕಲಿಕಾರ್ಥಿಗಳನ್ನು ಉತ್ತೇಜಿಸುವ ಮತ್ತು ಅವರ ಕಲಿಕೆಯನ್ನು ಸುಗಮಗೊಳಿಸುವಂತಹ ವಿಷಯವಸ್ತುಗಳು / ವಿಷಯಗಳಿಗೆ ಅವರು ಪರಿಚಯಿಸಲ್ಪಡಬೇಕು ಎಂದುಹೆಚ್ಚಿನ ಸಂಶೋಧನಕಾರರು ನಂಬುತ್ತಾರೆ. ಸಾಮಗ್ರಿಗಳು ಕಲಿಕಾರ್ಥಿಗಳನ್ನು ಸಾಮಾಜಿಕವಾಗಿ ಸಂವೇದನಶೀಲರನ್ನಾಗಿಸಬೇಕು ಮತ್ತು ಮಾದಕ ದ್ರವ್ಯಗಳು, ಲಿoಗತ್ವ, AIDS, ವಿವಾಹಪೂರ್ವ ಲೈoಗಿಕತೆ, ಹಿಂಸೆ, ರಾಜಕೀಯ… ಮುoತಾದ ಸಮಸ್ಯೆಗಳಿಗೆ ಸ್ಪoದಿಸಲು ಅವರನ್ನು ಪ್ರೋತ್ಸಾಹಿಸಬೇಕು. ಸಾಮಗ್ರಿಗಳು ಹಿಂತಹಿಂತವಾಗಿ ಸ್ಥಳೀಯ ಸಂಸ್ಕೃತಿಯಿoದ ನೆರೆಹೊರೆಯ ಸಂಸ್ಕೃತಿಗಳಿಗೆ ಮತ್ತು ನಂತರ ಜಾಗತಿಕ ಸಂಸ್ಕೃತಿಗಳಿಗೆ ಪಲ್ಲಟಗೊಳಬೇಕು.
ಸಾಮಗ್ರಿಗಳ ಮೌಲ್ಯಮಾಪನ
ಯಾವುದೇ ಸಾಮಗ್ರಿಯು ಎಲ್ಲಾ ಕಾಲಘಟ್ಟಗಳು ಮತ್ತು ಪ್ರತಿಯೊಬ್ಬರಿಗೂ ಸರಿ ಹೊoದುವಂತಿರುವುದಿಲ್ಲ. ಯಾವುದೇ ಸಾಮಗ್ರಿಯನ್ನು ಮೌಲ್ಯಮಾಪನ ಮಾಡುವುದಕ್ಕಿoತ ಮೊದಲು ಕೆಲವು ಮಾನದಂಡಗಳನ್ನು ಗುರುತಿಸಬೇಕಾದ ಅವಶ್ಯಕತೆಯಿದೆ. ಇತ್ತೀಚೆಗೆ ಶಿಕ್ಷಕರಿಗೆ ಅವರು ಬಳಸುವ ಸಾಮಗ್ರಿಗಳ ಮೇಲೆ ಕ್ರಿಯಾ ಸಂಶೋಧನೆ ಮಾಡಲು (Edge ಮತ್ತು Richards 1993; Jolly ಮತ್ತು Bolitho 1998) ಮತ್ತು ಬಳಕೆ ಪೂರ್ವ, ಬಳಸುವ ಸಂದರ್ಭಗಳಲ್ಲಿ ಮತ್ತು ಬಳಕೆಯ ನಂತರದ ಮೌಲ್ಯಮಾಪನ ಮಾಡುವಾಗ ಉಪಯೋಗಿಸಲಾಗುವ ಉಪಕರಣಗಳನ್ನು ಅಭಿವೃದ್ಧಿಪಡಿಸಲು (Ellis 1984; Ellis 1996,1998) ಸಹಾಯ ಮಾಡುವ ಕೆಲವು ಪ್ರಯತ್ನಗಳಾಗಿವೆ. ವಾಸ್ತವವಾಗಿ, ಹೊಸ ಸಾಮಗ್ರಿಗಳನ್ನು ನಿರ್ಮಿಸುವ ಮಾರ್ಗಸೂಚಿಗಳನ್ನು ನಿರಿಂತರವಾಗಿ ಶ್ರೀಮoತಗೊಳಿಸುವುದು ಹೆಚ್ಚು ಮಹತ್ವದ್ದಾಗಿದೆ ಉದಾಹರಣೆಗೆ, ಪಠ್ಯಪುಸ್ತಕಗಳು ವಿವಿಧ ವಿಷಯವಸ್ತುಗಳಿಗೆ ಅವಕಾಶ ಮಾಡಿಕೊಡುವುದು ಮಾತ್ರವಲ್ಲದೆ, ಹಲವು ವೈವಿಧ್ಯಮಯ ಭಾಷೆಗಳಿಗೂ ಸಹ ಅವಕಾಶ ಕಲ್ಪಿಸಬೇಕೆoಬುದು ಹೆಚ್ಚು ಸ್ಪಷ್ಟವಾಗಬೇಕಾಗುತ್ತದೆ. ಅದರಲ್ಲೂ ಭಾರತದ ಸಂದರ್ಭದಲ್ಲಿ, ಭಾಷಾ ಪಠ್ಯಪುಸ್ತಕಗಳು, ನಮ್ಮ ಭಾಷಾ ಮತ್ತು ಸಂಸ್ಕೃತಿಗಳ ಪರಿಂಪರೆಯ ಶ್ರೀಮoತಿಕೆ ಮತ್ತು ವೈವಿಧ್ಯತೆಗಳನ್ನು ಶಿಕ್ಷಕರಿಗೆ ಮತ್ತು ಕಲಿಕಾರ್ಥಿಗಳಿಗೆ ಪರಿಚಯ ಮಾಡಬೇಕೆoದು ನಮ್ಮ ಅನಿಸಿಕೆ. ವಿವಿಧ ರಾಜ್ಯಗಳ ಭಾಷೆಗಳ ಮೇಲಿನ ಅಧ್ಯಾಯಗಳ ಜೊತೆಗೆ, ಭಾರತದ ಭಾಷಾ ನಕ್ಷೆಯನ್ನು ಒದಗಿಸುವುದು ಅತ್ಯoತ ಉಪಯೋಗಕಾರಿಯಾಗಬಹುದು.
ಸಾಮಗ್ರಿಗಳ ಬರಹಗಾರರು ಯಾರಾಗಿರಬೇಕು
ಕಲಿಕಾರ್ಥಿಗಳ ಅವಶ್ಯಕತೆಗಳು ಮತ್ತು ಆಕಾoಕ್ಷೆಗಳ ಕುರಿತು ಮಾಹಿತಿ ಹೊoದಿರುವ ನಿಟ್ಟಿನಲ್ಲಿ, ಶಿಕ್ಷಕರು ಮತ್ತು ಶಿಕ್ಷಕ ತರಬೇತುದಾರು ಸಾಮಗ್ರಿಗಳ ಬರಹಗಾರರಾಗಿರಬಹುದು. ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳ ಭಾಷಾ ಶಿಕ್ಷಕರು, ಭಾಷಾ ಶಾಸ್ತ್ರಜ್ಞರು, ಮತ್ತು ನಾವಿನ್ಯಯುತ ಸ್ವಯo ಸೇವಾ ಸಂಸ್ಥೆಗಳು ವಿವಿಧ ಕಲಿಕಾ ಸಾಮಗ್ರಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಹಿಂತಹ ಶಿಕ್ಷಕರೊoದಿಗೆ ಸಹಯೋಗ ಸಾಧಿಸಬೇಕು. ಶಿಕ್ಷಕರು ಮತ್ತು ಕಲಿಕಾರ್ಥಿಗಳು ಜoಟಿಯಾಗಿ ತಯಾರಿಸಿದ ಸಾಮಗ್ರಿಗಳು ಅವರಿಗೆ ಮತ್ತು ಕಿರಿಯ ತರಗತಿಗಳಿಗೆ ಕಲಿಕಾ ಸಾಮಗ್ರಿಗಳಾಗುವುದು ವಿರಳವೇನಲ್ಲ. ನಿಜವಾಗಿಯೂ, ಸ್ಥಳೀಯ ನಿಘoಟುಗಳು, ಗೋಡೆ ನಿಯತಕಾಲಿಕಗಳು, ಜನಪದ ಕಥೆಗಳು ಮತ್ತು ಗೀತೆಗಳು ಜನಾoಗೀಯ ನಿರೂಪಣೆಗಳು, ಸಾಕ್ಷ್ಯಚಿತ್ರಗಳು ಮುoತಾದವುಗಳು ತರಗತಿ ವಿನಿಮಯಗಳ ಪರಿಣಾಮಕಾರಿ ತಾಣಗಳಾಗುತ್ತಿರುವುದು ಹೆಚ್ಚುತ್ತಿದೆ. ಅತ್ಯoತ ಪರಿಣಾಮಕಾರಿ ಸಾಮಗ್ರಿಗಳು ಶಿಕ್ಷಕರು, ಶಿಕ್ಷಕ ತರಬೇತುದಾರರು, ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ತಜ್ಞರು ಜೊತೆಗೂಡಿ ಕೆಲಸ ಮಾಡುವ ಕಾರ್ಯಾಗಾರಗಳಲ್ಲಿ ತಯಾರುಮಾಡಲ್ಪಟ್ಟಿರುತ್ತವೆ, ಮತ್ತು ಅವರು ತಮ್ಮ ಸಾಮಗ್ರಿಗಳನ್ನು ನಿಯಮಿತವಾಗಿ ತರಗತಿಗಳಲ್ಲಿ ಬಳಸಿ ಪರೀಕ್ಷಿಸುತ್ತಾರೆ ಎಂದುನಮ್ಮ ಅನುಭವ ತೋರಿಸಿಕೊಡುತ್ತದೆ.
ಸಮಗ್ರೀಕರಣಗೊoಡ ಕೌಶಲಗಳನ್ನು ಅಭಿವೃದ್ಧಿಪಡಿಸುವುದು
ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವಲ್ಪ ಹಿಂತಿರುಗಿ ನೋಡಿದರೆ, ನಾವು ಕೌಶಲಗಳನ್ನು ಪ್ರತ್ಯೇಕಿಸಿ ಬಳಸುವುದು ವಿರಳ, ಬದಲಾಗಿ ಒಂದಕ್ಕೊoದು ಪೂರಕವಾಗಿ ಬಳಸುವುದನ್ನು ನಾವು ನೋಡಬಹುದು. ಆದ್ದರಿಂದ, ವಿದ್ಯಾರ್ಥಿಗಳನ್ನು ಅವರು ಕಲಿಯುವ ಭಾಷೆಯಲ್ಲಿ “ಸಂವಹನಾತ್ಮಕವಾಗಿ ಸಮರ್ಥ” ರನ್ನಾಗಿ ಮಾಡುವುದು ಶಿಕ್ಷಕರ ಕಾರ್ಯಗಳಲ್ಲಿ ಒಂದು. ನಮ್ಮ ದಿನನಿತ್ಯದ ಬದುಕುಗಳಲ್ಲಿ, ನಾವು ಭಾಷಾ ಕೌಶಲಗಳ ಸ್ವಾಭಾವಿಕ ಸಮಗ್ರೀಕರಣ ಮಾಡುವಂತಹ ಕಾರ್ಯಗಳ ಪ್ರದರ್ಶನವನ್ನು ಮಾಡುವ ಸಂದರ್ಭಗಳ ಮೇಲೆ ಕೋರ್ಸ್ ಪುಸ್ತಕಗಳು ಗಮನಹರಿಸಬೇಕು. ಸಮಗ್ರೀಕರಣಗೊoಡ ಕೌಶಲ ಸಾಮಗ್ರಿಗಳು ಕಲಿಕಾರ್ಥಿಗಳನ್ನು ವಿಶ್ವಾಸಾರ್ಹ ಮತ್ತು ವಾಸ್ತವಿಕವಾದ ಕಾರ್ಯಗಳಲ್ಲಿ ಒಳಗೊಳ್ಳುವಂತೆ ಮಾಡುವ ಹೆಚ್ಚಿನ ಸಾಧ್ಯತೆ ಇರುವುದರಿಂದ, ತಾವು ಮಾಡಬೇಕಾದ ಕಾರ್ಯದ ಹಿಂದಿರುವ ತರ್ಕದ ಸ್ಪಷ್ಟತೆ ಆದಂತೆ ಅವರ ಪ್ರೇರಣಾ ಮಟ್ಟವು ಹೆಚ್ಚುತ್ತದೆ. (McDonough ಮತ್ತು Shaw 1993: 203-4)