"Test ಕನ್ನಡಿಗರ ತಾಯಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(೨೨ intermediate revisions by ೨ users not shown) | |||
೨ ನೇ ಸಾಲು: | ೨ ನೇ ಸಾಲು: | ||
=ಪಠ್ಯದ ಗುರಿ ಮತ್ತು ಉದ್ದೇಶ= | =ಪಠ್ಯದ ಗುರಿ ಮತ್ತು ಉದ್ದೇಶ= | ||
ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ. | ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ. | ||
+ | ಭಾಷಾ ಕಲಿಕೆ ; 1. ಪ್ರಾಸ ಪದ, ಅಲಂಕಾರ ಪರಿಚಯ, | ||
+ | 2. ಭಾಷಾ ಸೌಂದರ್ಯದ ಪರಿಚಯ | ||
=ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ= | =ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ= | ||
೨೦ ನೇ ಸಾಲು: | ೨೨ ನೇ ಸಾಲು: | ||
ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು, | ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು, | ||
=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು= | =ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು= | ||
− | + | [[File:Kannadigara Thayi.mm]] | |
=ಪ್ರಸ್ತುತ ಮಾಡಬೇಕಾದ ಪದ್ಯದ ವಿವರ= | =ಪ್ರಸ್ತುತ ಮಾಡಬೇಕಾದ ಪದ್ಯದ ವಿವರ= | ||
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''
| '''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''

೩೫ ನೇ ಸಾಲು: | ೩೭ ನೇ ಸಾಲು: | ||
ತೆನೆಯ ಕೆನೆಯ ಗಾಳಿಯೊ,
| ತೆನೆಯ ಕೆನೆಯ ಗಾಳಿಯೊ,

ಖಗಮೃಗೋರಗಾಳಿಯೊ,
| ಖಗಮೃಗೋರಗಾಳಿಯೊ,

− | ನದಿ ನಗರ | + | ನದಿ ನಗರ ನಗಾಳಿಯೊ!

ಇಲ್ಲಿಲ್ಲದುದುಳಿದುದೆ?
| ಇಲ್ಲಿಲ್ಲದುದುಳಿದುದೆ?

ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
| ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

೪೯ ನೇ ಸಾಲು: | ೫೧ ನೇ ಸಾಲು: | ||
ಹಿನ್ನಲೆ>ಪ್ರಸ್ತುತ>ನಂತರ | ಹಿನ್ನಲೆ>ಪ್ರಸ್ತುತ>ನಂತರ | ||
ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ | ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ | ||
− | = | + | =ಪದ್ಯದ ಬೆಳವಣಿಗೆ= |
1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ | 1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ | ||
==ಅವಧಿ-೧== | ==ಅವಧಿ-೧== | ||
೫೫ ನೇ ಸಾಲು: | ೫೭ ನೇ ಸಾಲು: | ||
===ವಿವರಣೆ=== | ===ವಿವರಣೆ=== | ||
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)=== | ===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)=== | ||
+ | ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. | ||
+ | ೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು. | ||

+ | ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. | ||
+ | ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು. | ||

+ | '''ಮೊದಲನೇ ಅಮೋಘವರ್ಷ''' | ||
+ | #[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] | ||

+ | '''ಜನ್ನ ಕವಿಯ ಕುರಿತಾದ ಮಾಹಿತಿಗೆ''' | ||
+ | #[https://kn.wikipedia.org/wiki/ಜನ್ನ ಜನ್ನನ ಬಗೆಗಿನ ಮಾಹಿತಿಗಾಗಿ ಇಲ್ಲಿ ನೋಡಿ] | ||
+ | #[https://kn.wikipedia.org/wiki/ಪುರಂದರದಾಸರು ಪುರಂದರದಾಸರ ಬಗೆಗಿನ ಮಾಹತಿಗಾಗಿ ಇಲ್ಲಿ ನೋಡಿ] | ||

+ | '''ಬಸವೇಶ್ವರರ ಕುರಿತು''' | ||
+ | #[http://kanaja.in/archives/25922 ಬಸವೇಶ್ವರರ ಬಗೆಗಿನ ಮಾಹಿತಿಯ ಕಣಜ ವೆಬ್ ಪುಟ] | ||
+ | #[https://kn.wikipedia.org/wiki/ಬಸವೇಶ್ವರ ಬಸವೇಶ್ವರರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ] | ||
+ | ''''ಮಧ್ವಾಚಾರ್ಯರು ''' | ||
+ | #[https://krishnasambandha.wordpress.com/2015/04/03/ಶ್ರೀಪಾದ-ಮದ್ವಾಚಾರ್ಯ/ ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | #[http://madhvakanvamatha.blogspot.in/2014/02/blog-post.html ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | #[https://kn.wikipedia.org/wiki/ರನ್ನ ರನ್ನ] | ||
+ | #[https://kn.wikipedia.org/wiki/ಪಂಪ ಪಂಪ] | ||
+ | #[https://kn.wikipedia.org/wiki/ಲಕ್ಷ್ಮೀಶ ಲಕ್ಷ್ಮೀಶ] | ||
+ | #[http://kanaja.in/archives/10501 ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | #[https://kn.wikipedia.org/wiki/ಷಡಕ್ಷರದೇವ ಷಡಕ್ಷರದೇವ] | ||
+ | #[http://kanaja.in/archives/16952 ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | #[http://www.sallapa.com/2013/08/blog-post_5008.html ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | #[http://kannada.nativeplanet.com/halebid/ ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | #[https://kn.wikipedia.org/wiki/ಬೇಲೂರು ಬೇಲೂರು] | ||
+ | #[https://kn.wikipedia.org/wiki/ಶ್ರವಣಬೆಳಗೊಳ ಶ್ರವಣಬೆಳಗೊಳ] | ||

===ಶಬ್ದಕೋಶ/ಪದ ವಿಶೇಷತೆ=== | ===ಶಬ್ದಕೋಶ/ಪದ ವಿಶೇಷತೆ=== | ||
*ಕಾಯೆ - ರಕ್ಷಿಸು | *ಕಾಯೆ - ರಕ್ಷಿಸು | ||
೬೪ ನೇ ಸಾಲು: | ೯೮ ನೇ ಸಾಲು: | ||
=== ವ್ಯಾಕರಣಾಂಶ=== | === ವ್ಯಾಕರಣಾಂಶ=== | ||
− | ಪ್ರಾಸ ಪದಗಳು | + | '''ಪ್ರಾಸ ಪದಗಳು''' |
*ಬಲಿಸು- ನೆಲಸು -ಕಲಸು | *ಬಲಿಸು- ನೆಲಸು -ಕಲಸು | ||
*ತಾಳ್ವೆ - ನಾಳ್ವೆ - ಬಾಳ್ವೆ | *ತಾಳ್ವೆ - ನಾಳ್ವೆ - ಬಾಳ್ವೆ | ||
+ | *ತಾಳ್ವೆ-ನಾಳ್ವೆ- ಬಾಳ್ವೆ | ||
+ | *ಮರೆಯಲಮ್ಮೆವು- ಕನ್ನಡವೆಮ್ಮವು | ||
+ | *ಮರಂಗಳೊ -ತರತರಂಗಳೊ | ||
+ | *ಸುಂದರಂ -ಬಂಧುರಂ | ||
+ | *ಹುಡುಕುವ-ಮಿಡುಕುವ | ||
=== ಚಟುವಟಿಕೆ=== | === ಚಟುವಟಿಕೆ=== | ||
೭೨ ನೇ ಸಾಲು: | ೧೧೧ ನೇ ಸಾಲು: | ||
#'''ಸಮಯ ;'''೨೦ ನಿಮಿಷ | #'''ಸಮಯ ;'''೨೦ ನಿಮಿಷ | ||
#'''ಸಾಮಗ್ರಿಗಳು/ಸಂಪನ್ಮೂಲಗಳು ;''' | #'''ಸಾಮಗ್ರಿಗಳು/ಸಂಪನ್ಮೂಲಗಳು ;''' | ||
− | #'''ವಿಧಾನ/ಪ್ರಕ್ರಿಯೆ ;'''1. ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು | + | #'''ವಿಧಾನ/ಪ್ರಕ್ರಿಯೆ ;''' |
+ | 1.ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.

+ | 2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು | ||
#'''ಚರ್ಚಾ ಪ್ರಶ್ನೆಗಳು ;''' | #'''ಚರ್ಚಾ ಪ್ರಶ್ನೆಗಳು ;''' | ||
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ | #'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ | ||
#'''ಮೌಲ್ಯಮಾಪನ ಪ್ರಶ್ನೆಗಳು ;''' | #'''ಮೌಲ್ಯಮಾಪನ ಪ್ರಶ್ನೆಗಳು ;''' | ||
− | *ನಮ್ಮ ನಾಡನ್ನು ಏಕೆ | + | *ನಮ್ಮ ನಾಡನ್ನು ಏಕೆ ಗೌರವಿಸಬೇಕು? |
*ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ? | *ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ? | ||
೧೦೭ ನೇ ಸಾಲು: | ೧೪೮ ನೇ ಸಾಲು: | ||
===ಶಬ್ದಕೋಶ/ಪದ ವಿಶೇಷತೆ=== | ===ಶಬ್ದಕೋಶ/ಪದ ವಿಶೇಷತೆ=== | ||
===ವ್ಯಾಕರಣಾಂಶ=== | ===ವ್ಯಾಕರಣಾಂಶ=== | ||
+ | '''ತತ್ಸಮ - ತದ್ಭವ''' | ||
+ | ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. | ||
+ | ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ | ||

===ಚಟುವಟಿಕೆ=== | ===ಚಟುವಟಿಕೆ=== | ||
#'''ಚಟುವಟಿಕೆಯ ಹೆಸರು ;''' ಪದ್ಯ ಗಾಯನ | #'''ಚಟುವಟಿಕೆಯ ಹೆಸರು ;''' ಪದ್ಯ ಗಾಯನ | ||
೧೨೫ ನೇ ಸಾಲು: | ೧೭೦ ನೇ ಸಾಲು: | ||
===ಶಬ್ದಕೋಶ/ಪದ ವಿಶೇಷತೆ=== | ===ಶಬ್ದಕೋಶ/ಪದ ವಿಶೇಷತೆ=== | ||
===ವ್ಯಾಕರಣಾಂಶ=== | ===ವ್ಯಾಕರಣಾಂಶ=== | ||
+ | '''ದ್ವಿರುಕ್ತಿ''' | ||
+ | ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. | ||
+ | ಪರಿ ಪರಿ, | ||

===ಚಟುವಟಿಕೆ=== | ===ಚಟುವಟಿಕೆ=== | ||
− | #'''ಚಟುವಟಿಕೆಯ ಹೆಸರು ;''' | + | #'''ಚಟುವಟಿಕೆಯ ಹೆಸರು ;''' ಕನ್ನಡ ಭಾಷೆಯ ಮೇಲಿನ 10 ಪದ್ಯಗಳ ಸಂಗ್ರಹ |
#'''ಸಮಯ ;''' ವಾರದ ಕೆಲಸ | #'''ಸಮಯ ;''' ವಾರದ ಕೆಲಸ | ||
#'''ಸಾಮಗ್ರಿಗಳು/ಸಂಪನ್ಮೂಲಗಳು ;'''ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ | #'''ಸಾಮಗ್ರಿಗಳು/ಸಂಪನ್ಮೂಲಗಳು ;'''ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ | ||
೧೩೫ ನೇ ಸಾಲು: | ೧೮೪ ನೇ ಸಾಲು: | ||
===ಅವಧಿ ೩ರ ಮೌಲ್ಯಮಾಪನ=== | ===ಅವಧಿ ೩ರ ಮೌಲ್ಯಮಾಪನ=== | ||

=ಉಪಸಂಹಾರ= | =ಉಪಸಂಹಾರ= | ||
ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು. | ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು. | ||
− | =ಮೌಲ್ಯಮಾಪನ= | + | =ಪದ್ಯದ ಮೌಲ್ಯಮಾಪನ= |
*ಕನ್ನಡ ಒಂದು ಭಾಷೆಯಲ್ಲ ಸಂಸ್ಕೃತಿ ಹೇಗೆ ? | *ಕನ್ನಡ ಒಂದು ಭಾಷೆಯಲ್ಲ ಸಂಸ್ಕೃತಿ ಹೇಗೆ ? | ||
*ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ? | *ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ? | ||
+ | =ಮಕ್ಕಳ ಚಟುವಟಿಕೆ= | ||
+ | '''ಮಕ್ಕಳ ಚಟುವಟಿಕೆಯ ಸರಿಯಾದ ಅರ್ಥ ತಿಳಿಯಬೇಕು'''

+ | 1.ಕರ್ನಾಟಕದ ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಿ ಬರೆಯಿರಿ

+ | 2.ಕರ್ನಾಟಕದಲ್ಲಿ ಪ್ರಸಿದ್ದವಾದ ಸಂತ ಪರಂಪರೆಯ ಠಿಪ್ಪಣಿ ಬರೆಯಿರಿ | ||

+ | =ಆಕರ ಸೂಚಿ= | ||
+ | <references /> |
೧೨:೦೦, ೧೧ ಏಪ್ರಿಲ್ ೨೦೧೯ ದ ಇತ್ತೀಚಿನ ಆವೃತ್ತಿ
ಪಠ್ಯದ ಗುರಿ ಮತ್ತು ಉದ್ದೇಶ
ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ. ಭಾಷಾ ಕಲಿಕೆ ; 1. ಪ್ರಾಸ ಪದ, ಅಲಂಕಾರ ಪರಿಚಯ, 2. ಭಾಷಾ ಸೌಂದರ್ಯದ ಪರಿಚಯ
ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ
- ಕನ್ನಡದ ನವೋದಯ*
ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.
ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳು ಪುಸ್ತಕದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕೃತಿ ಶ್ರೀ ರಾಮಾಯಣ ದರ್ಶನಂ.
ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು.
ಈ ಕಾಲದ ಪ್ರಸಿದ್ಧ ಕವಿಗಳು: ಕುವೆಂಪು, ಬಿ.ಎಂ.ಶ್ರೀ, ದ.ರಾ.ಬೇಂದ್ರೆ, ಪು ತಿ ನ, ಕೆ.ಎಸ್. ನರಸಿಂಹಸ್ವಾಮಿ, ಎಂ.ಗೋಪಾಲಕೃಷ್ಣ ಅಡಿಗ, ಪ್ರೊ.ನಿಸಾರ್ ಅಹಮದ್, ಚೆನ್ನವೀರ ಕಣವಿ ಮೊದಲಾದವರು.
ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.
ಕವಿ ಪರಿಚಯ
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
- ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಷಯ ವಿಶ್ವಕೋಶದಲ್ಲಿನ ಮಾಹಿತಿ
ನೀಡಿರುವ ಪದ್ಯಭಾಗದ ಹಿನ್ನಲೆ
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
ಪ್ರಸ್ತುತ ಪದ್ಯಕ್ಕೆ ಪೀಠಿಕೆ
ಕನ್ನಡದ ಪ್ರತಿಯೊಬ್ಬ ಕವಿಯೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ನಾಡು ನುಡಿಗೆ ಅಕ್ಷರಗಳ ಮೂಲಕ ನಮನವನ್ನು ಸಲ್ಲಿಸಿ ಕೃತಜ್ಞತೆಯನ್ನು ತೋರಿರುತ್ತಾರೆ. ಇದಕ್ಕೆ ಕುವೆಂಪು ರವರ "ಜಯ ಭಾರತ ಜನನಿಯ ತನುಜಾತೆ" ಕರ್ಕಿ ರವರ "ಹಚ್ಚೆವು ಕನ್ನಡದ ದೀಪ" ರಾಜರತ್ನಂ ರವರ 'ಕನ್ನಡ್ ಪದಗೊಳ್' ಇತ್ಯಾದಿ ಇಂತಹ ಪದ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನಾಡು ನುಡಿಯ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ಮೂಡಿಸುವುದು,
ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು
ಪ್ರಸ್ತುತ ಮಾಡಬೇಕಾದ ಪದ್ಯದ ವಿವರ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ!
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ!
ನಮ್ಮ ತಪ್ಪನೆನಿತ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲಮ್ಮೆವು!
ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು.
ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿ ನಗರ ನಗಾಳಿಯೊ!
ಇಲ್ಲಿಲ್ಲದುದುಳಿದುದೆ?
ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರ ವರೇಣ್ಯರ,
ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
ಪದ್ಯದ ಬೆಳವಣಿಗೆ
ಹಿನ್ನಲೆ>ಪ್ರಸ್ತುತ>ನಂತರ ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ
ಪದ್ಯದ ಬೆಳವಣಿಗೆ
1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ
ಅವಧಿ-೧
ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)
ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. ೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
ಮೊದಲನೇ ಅಮೋಘವರ್ಷ
ಜನ್ನ ಕವಿಯ ಕುರಿತಾದ ಮಾಹಿತಿಗೆ
ಬಸವೇಶ್ವರರ ಕುರಿತು
'ಮಧ್ವಾಚಾರ್ಯರು
- ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ರನ್ನ
- ಪಂಪ
- ಲಕ್ಷ್ಮೀಶ
- ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಷಡಕ್ಷರದೇವ
- ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಬೇಲೂರು
- ಶ್ರವಣಬೆಳಗೊಳ
ಶಬ್ದಕೋಶ/ಪದ ವಿಶೇಷತೆ
- ಕಾಯೆ - ರಕ್ಷಿಸು
- ಎಮ್ಮ - ನಮ್ಮನ್ನು
- ಕಾಣ - ಕಾಣೆಯ? ಗೊತ್ತಿದೆಯಾ? ಇಲ್ಲ
- ನೀವ - ಈವ - ನೀಡುವ
- ಪರಿಪರಿ - ವಿವಿಧ
- ನಗಾಳಿ - ಬೆಟ್ಟ ಅಮೂಹ...
ವ್ಯಾಕರಣಾಂಶ
ಪ್ರಾಸ ಪದಗಳು
- ಬಲಿಸು- ನೆಲಸು -ಕಲಸು
- ತಾಳ್ವೆ - ನಾಳ್ವೆ - ಬಾಳ್ವೆ
- ತಾಳ್ವೆ-ನಾಳ್ವೆ- ಬಾಳ್ವೆ
- ಮರೆಯಲಮ್ಮೆವು- ಕನ್ನಡವೆಮ್ಮವು
- ಮರಂಗಳೊ -ತರತರಂಗಳೊ
- ಸುಂದರಂ -ಬಂಧುರಂ
- ಹುಡುಕುವ-ಮಿಡುಕುವ
ಚಟುವಟಿಕೆ
- ಚಟುವಟಿಕೆಯ ಹೆಸರು ;ನಮ್ಮ ಹಿರಿಯರ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯ
- ಸಮಯ ;೨೦ ನಿಮಿಷ
- ಸಾಮಗ್ರಿಗಳು/ಸಂಪನ್ಮೂಲಗಳು ;
- ವಿಧಾನ/ಪ್ರಕ್ರಿಯೆ ;
1.ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.
2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು
- ಚರ್ಚಾ ಪ್ರಶ್ನೆಗಳು ;
- ವೃದ್ದಿಗೊಳ್ಳುವ ಸಾಮರ್ಥ್ಯಗಳು ;ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ
- ಮೌಲ್ಯಮಾಪನ ಪ್ರಶ್ನೆಗಳು ;
- ನಮ್ಮ ನಾಡನ್ನು ಏಕೆ ಗೌರವಿಸಬೇಕು?
- ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ?
೧ನೇ ಅವಧಿ ಮೌಲ್ಯಮಾಪನ
ಅವಧಿ -೨
ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨
ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪಮಿಲ್ಲ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನೆಮ್ಮತೃಷೆಗೆ ದಕ್ಕಿಸು!
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ!
ಕನ್ನಡ ಕಸ್ತೂರಿಯನ್ನ
ಹೊಸತು ಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು-,
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!
ನಮ್ಮೆದೆಯಂ ತಾಯೆ ಬಲಿಸು
ಎಲ್ಲರ ಬಾಯಲ್ಲಿ ನಲಿಸು
ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ!
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮೆಗೆ ತೋರುವೆ?
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ತತ್ಸಮ - ತದ್ಭವ ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ
ಚಟುವಟಿಕೆ
- ಚಟುವಟಿಕೆಯ ಹೆಸರು ; ಪದ್ಯ ಗಾಯನ
- ಸಮಯ ; ೨೦ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು ; ಹಾಡಿನ ಧ್ವನಿ ಮುದ್ರಿಕೆ,ಉಪಕರಣ,೨ ಸ್ಪೀಕರ್ (ಪ್ರೊಜೆಕ್ಟರ್ )
- ವಿಧಾನ/ಪ್ರಕ್ರಿಯೆ ; ಸಿರಿ ಗನ್ನಡ ಪದ್ಯ ಸಂಗ್ರಹದಿಂದ ಪಠ್ಯಪುಸ್ತಕವನ್ನು ನೋಡಿಕೊಳ್ಳುತ್ತಾ ಮೊದಲು ಹಾಡು ಕೇಳಿಸುವುದು ನಂತರ ಜೊತೆಗೆ ಹಾಡಿಸುವುದು ಮೂರನೆ ಗುಂಪಿನ ೫ ಮಕ್ಕಳನ್ನು ತಂಡಮಾಡಿ ಹಾಡು ಕಲಿತು ತರಗತಿಯಲ್ಲಿ ಹಾಡಲು ತಿಳಿಸುವುದು.ಸಾಧ್ಯವಾದರೆ ದಾಟಿ ಬದಲಿಸಿ ಹಾಡಲು ತಿಳಿಸುವುದು.
- ಚರ್ಚಾ ಪ್ರಶ್ನೆಗಳು ;
- ವೃದ್ದಿಗೊಳ್ಳುವ ಸಾಮರ್ಥ್ಯಗಳು ;
- ಮೌಲ್ಯಮಾಪನ ಪ್ರಶ್ನೆಗಳು ;
- ನಿಮಗೆ ಹೊಸದೆನಿಸಿದ ಪದಗಳನ್ನು ಪಟ್ಟಿಮಾಡಿ?
- ಕವಿ ಹಾಡಿ ಹೊಗಳಿರುವ ಸಂತರುಗಳು ಯಾರುಯಾರು ?
- ಕವಿ ಪ್ರಸ್ತಾಪಿಸಿರುವ ಕನ್ನಡನಾಡಿನ ಪ್ರಮುಖ ಪ್ರದೇಶಗಳಾವುವು?
೨ನೇ ಅವಧಿಯ ಮೌಲ್ಯಮಾಪನ
ಅವಧಿ -೩
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ದ್ವಿರುಕ್ತಿ ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. ಪರಿ ಪರಿ,
ಚಟುವಟಿಕೆ
- ಚಟುವಟಿಕೆಯ ಹೆಸರು ; ಕನ್ನಡ ಭಾಷೆಯ ಮೇಲಿನ 10 ಪದ್ಯಗಳ ಸಂಗ್ರಹ
- ಸಮಯ ; ವಾರದ ಕೆಲಸ
- ಸಾಮಗ್ರಿಗಳು/ಸಂಪನ್ಮೂಲಗಳು ;ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ
- ವಿಧಾನ/ಪ್ರಕ್ರಿಯೆ ;ಮೊದಲೆರಡು ಗುಂಪಿನ ಪ್ರತಿಯೊಬ್ಬರೂ 2 ಪದ್ಯ ಸಂಗ್ರಹಿಸಿ ಬರೆದು ಪುಸ್ತಕದ ರೂಪ ಕೊಡುವುದು. ಮೂರನೇ ಗುಂಪಿನವರು ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. ಗುಂಪು-೩ ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು. ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು. ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.
- ಚರ್ಚಾ ಪ್ರಶ್ನೆಗಳು ;
- ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಸಂಗ್ರಹ ಸಾಮರ್ಥ್ಯ,ಚರ್ಚೆ, ಸಾಮಾಜಿಕತೆ ಕೇಳುವುದು ಹಾಡುವುದು
- ಮೌಲ್ಯಮಾಪನ ಪ್ರಶ್ನೆಗಳು ;
ಅವಧಿ ೩ರ ಮೌಲ್ಯಮಾಪನ
ಉಪಸಂಹಾರ
ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು.
ಪದ್ಯದ ಮೌಲ್ಯಮಾಪನ
- ಕನ್ನಡ ಒಂದು ಭಾಷೆಯಲ್ಲ ಸಂಸ್ಕೃತಿ ಹೇಗೆ ?
- ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ?
ಮಕ್ಕಳ ಚಟುವಟಿಕೆ
ಮಕ್ಕಳ ಚಟುವಟಿಕೆಯ ಸರಿಯಾದ ಅರ್ಥ ತಿಳಿಯಬೇಕು
1.ಕರ್ನಾಟಕದ ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಿ ಬರೆಯಿರಿ
2.ಕರ್ನಾಟಕದಲ್ಲಿ ಪ್ರಸಿದ್ದವಾದ ಸಂತ ಪರಂಪರೆಯ ಠಿಪ್ಪಣಿ ಬರೆಯಿರಿ