"ಚಿಗುರು-೧೦-ಪುರುಷಪ್ರಧಾನ ಸಂದೇಶಗಳು ಭಾಗ-೪" ಆವೃತ್ತಿಗಳ ಮಧ್ಯದ ಬದಲಾವಣೆಗಳು
(→ಉದ್ದೇಶ) |
|||
(ಅದೇ ಬಳಕೆದಾರನ ೨ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
== ಸಾರಾಂಶ == | == ಸಾರಾಂಶ == | ||
ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. | ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. | ||
− | |||
− | |||
− | |||
− | |||
== ಊಹೆಗಳು == | == ಊಹೆಗಳು == | ||
೧೭ ನೇ ಸಾಲು: | ೧೩ ನೇ ಸಾಲು: | ||
== ಉದ್ದೇಶ == | == ಉದ್ದೇಶ == | ||
• ಪರಿಣಾಮಕಾರಿಯಾದ ಮರುಕಳಿಕೆ. | • ಪರಿಣಾಮಕಾರಿಯಾದ ಮರುಕಳಿಕೆ. | ||
+ | |||
+ | • ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ. | ||
• ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು. | • ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು. | ||
೨೬೨ ನೇ ಸಾಲು: | ೨೬೦ ನೇ ಸಾಲು: | ||
ನೀವು ನೋಡುವಂತೆ ಮನೆಯಲ್ಲಿ ಪುರುಷರು ಇರುವ ಕುಟುಂಬಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಒಂದು ವೇಳೆ ಅವರು ಇರದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರವಿರುತ್ತದೆ. | ನೀವು ನೋಡುವಂತೆ ಮನೆಯಲ್ಲಿ ಪುರುಷರು ಇರುವ ಕುಟುಂಬಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಒಂದು ವೇಳೆ ಅವರು ಇರದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರವಿರುತ್ತದೆ. | ||
− | ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. ' | + | ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. ' '''(೩೦ ನಿಮಿಷ)''' |
+ | |||
+ | [[File:Snake and Ladder activity.jpg|350px|Library ]] | ||
ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು. | ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು. |
೧೪:೪೮, ೨೪ ಜೂನ್ ೨೦೨೦ ದ ಇತ್ತೀಚಿನ ಆವೃತ್ತಿ
ಸಾರಾಂಶ
ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ.
ಊಹೆಗಳು
- ಶಾಲೆಗೆ ೩ ವಾರ ರಜೆ ಇತ್ತು.
- ಈ ಮೂರು ವಾರಗಳಲ್ಲಿ ಕಿಶೋರಿಯರು ಶಾಲಾ ವಾರ್ಷಿಕೋತ್ಸವ, ಕ್ರಿಸ್‌ಮಸ್ ರಜೆ, ಹೊಸ ವರ್ಷದ ಆಚರಣೆ ಹೀಗೆ ಇವುಗಳಿಗೆ ತಕ್ಕಂತೆ ಹಲವಾರು ಮನಸ್ಥಿತಿಗಳ ಮೂಲಕ ಹಾದು ಹೋಗಿರುವುದರಿಂದ ಅವರಿಗೆ ಪರಿಣಾಮಕಾರಿಯಾದ ಮರುಕಳಿಕೆ ಬೇಕಾಗಿದೆ.
- ಹಿಂದಿನ ವಾರಗಳ ನಮ್ಮ ಚರ್ಚೆಗಳ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ಹಾಗು ತಾರೆಯರ ಸಂದರ್ಶನಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು.
- ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
- ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
- ಮನೆಯಲ್ಲಿ ಟಿ.ವಿ ಇಲ್ಲದೆ ಅಥವಾ ಮನೆಯವರು ಸಿನೆಮಾಗಳಿಗೆ ಕರೆದುಕೊಂಡು ಹೋಗದಿರುವ ಕಾರಣಗಳಿಂದ ಕೆಲವರು ಜಾಹಿರಾತುಗಳನ್ನು ನೋಡದೆ ಇರಬಹುದು.
- ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
ಉದ್ದೇಶ
• ಪರಿಣಾಮಕಾರಿಯಾದ ಮರುಕಳಿಕೆ.
• ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ.
• ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು.
ಪ್ರಕ್ರಿಯೆ
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. (5 ನಿಮಿಷ)
ಬಹಳ ದಿನಗಳ ನಂತರ ನಮ್ಮ ಮಾತುಕತೆ ಇರುವುದರಿಂದ ಈ ಕೆಳಗಿನ ಪಾತ್ರಾಭಿನಯಗಳ ಮೂಲಕ ಮರುಕಳಿಕೆ ಮಾಡುವುದು. ಈ ಪಾತ್ರಾಭಿನಯಗಳು ಹಿಂದಿನ ವಾರಗಳಲ್ಲಿ ತೋರಿಸಿದ ಜಾಹಿರಾತುಗಳು ಹಾಗು ನಟ-ನಟಿಯರ ಸಂದರ್ಶನಗಳ ಮೇಲೆ ಆಧಾರಿತವಾಗಿರುತ್ತದೆ.
ದೃಶ್ಯ ೧ – ಒಬ್ಬ ಫೆಸಿಲಿಟೇಟರ್ ನಾನು ಇಲ್ಲಿ ನಿಂತರೆ ಆಲಿಯಾ ಭಟ್ ಎಂದು ಹೇಳುತ್ತಾರೆ. ತಮ್ಮ ತಲೆ ಕೂದಲ ಬಗ್ಗೆ ಅಭಿನಯಿಸುತ್ತಾರೆ. ನಾನು ಗಾರ್‌ನಿಯರ್ ಶಾಂಪೂ ಬಳಸುವುದರಿಂದ ನನ್ನ ಕೂದಲು ದಟ್ಟವಾಗಿ, ಕೋಮಲವಾಗಿ ಹಾಗು ಶೈನಿಯಾಗಿದೆ. ನಿಮಗೂ ಹೀಗೆ ಆಗಬೇಕಾ? ಬಳಸಿ ಗಾರ್‌ನಿಯರ್ ಶಾಂಪೂ. ಮತ್ತೊಂದು ಕಡೆ ಹೋಗಿ - ನಾನು ನೋಡಲು ಚೆನ್ನಾಗಿದ್ದೀನಿ, ಬೆಳ್ಳಗೆ ಇದ್ದೀನಿ, ತೆಳ್ಳಗೆ ಇದ್ದೀನಿ ಎಂದು ಹೇಳುತ್ತಾರೆ.
ಇದನ್ನು ಫೆಸಿಲಿಟೇಟರ್ ಏಕೆ ಮಾಡಿದರು? ಎಂದು ಕಿಶೋರಿಯರನ್ನು ಕೇಳುವುದು.
ಇದಾದ ನಂತರ ಕಿಶೋರಿಯರು ಈ ಜಾಹಿರಾತುಗಳನ್ನು ತಮ್ಮ ಮನೆಯ ಟಿವಿಗಳಲ್ಲಿ ನೋಡಿದರೆ/ಇಲ್ಲವೆ ಎಂದು ಕೇಳುವುದು. (೫ ನಿಮಿಷ)
ದೃಶ್ಯ ೨ – ಒಬ್ಬ ಫೆಸಿಲಿಟೇಟರ್ ನಾನು ಮಹೇಶ್ ಬಾಬು ಎಂದು ಹೇಳುತ್ತಾ ಹುಡುಗಿಯನ್ನು ಕರೆದು ಸಾಹಸಮಯ ಜಾಹಿರಾತನ್ನು ಅಭಿನಯಿಸುತ್ತಾರೆ.
ನಂತರ ಇನ್ನೊಂದು ಕಡೆ ನಿಂತು - ನಾನು ನೋಡಲು ಚೆನ್ನಾಗಿದ್ದೀನಿ, ಉದ್ದ ಇದ್ದೀನಿ, ಬೆಳ್ಳಗೆ ಇದ್ದೀನಿ, ತೆಳ್ಳಗೆ ಇದ್ದೀನಿ. ಹುಡುಗಿಯರಿಗೆ ನಾನು ಅಂದರೆ ಹುಚ್ಚು.
ಇದನ್ನು ಫೆಸಿಲಿಟೇಟರ್ ಏಕೆ ಮಾಡಿದರು? ದೃಶ್ಯ ೧ ಹಾಗು ದೃಶ್ಯ ೨ರಲ್ಲಿ ಮಾಡಿದ ಪಾತ್ರಾಭಿನಯಗಳಲ್ಲಿ ಏನು ಹೋಲಿಕೆ ಇತ್ತು/ಇರಲಿಲ್ಲ ? ಎಂದು ಕಿಶೋರಿಯರನ್ನು ಕೇಳುವುದು.
ಇದಾದ ನಂತರ ಕಿಶೋರಿಯರು ಈ ಜಾಹಿರಾತುಗಳನ್ನು ತಮ್ಮ ಮನೆಯ ಟಿವಿಗಳಲ್ಲಿ ನೋಡಿದರೆ/ಇಲ್ಲವೆ ಎಂದು ಕೇಳುವುದು. (೫ ನಿಮಿಷ)
ದೃಶ್ಯ ೩ – ಒಬ್ಬ ಫೆಸಿಲಿಟೇಟರ್ ಕ್ಯಾಮೆರಾ ಹಿಡಿದು Glamour Queen Gamana ಅವರ ಸಂದರ್ಶನ ಮಾಡುತ್ತಾರೆ.
ಫೆ ೧ : ಹೆಲೊ ವೀಕ್ಷಕರೆ ಇವತ್ತು ನಮ್ಮ ಜೊತೆ Glamour Queen Gamanaಇದ್ದಾರೆ. ಬನ್ನಿ ಅವರ ಜೊತೆ ಮಾತನಾಡುತ್ತಾ ಕಾಲ ಕಳೆಯೋಣ. ಹೆಲೊ ಮೆಡಮ್ ನಮ್ಮ ಕಾರ್ಯಕ್ರಮಕ್ಕೆ ಸ್ವಾಗತ. ಹೇಗಿದ್ದಿರಾ?
ಗಮನ : ತುಂಬಾ ಚೆನ್ನಾಗಿದೀನಿ (ಉತ್ಸಾಹದಿಂದ). ಈಗಷ್ಟೆ "ಕಿಸ್ಸಿಂಗ್ ಕಿಲಾಡಿಗಳು" ಶೂಟಿಂಗ್ ಮುಗಿದಿದೆ. So I am very excited.
ಫೆ ೧ : ಕಿಸ್ಸಿಂಗ್ ಕಿಲಾಡಿಗಳು ಶೂಟಿಂಗ್ ಟೈಮಲ್ಲಿ ನಿಮಗೆ ಎಂಗೇಜ್‌ಮೆಂಟ್ ಆಯ್ತು ಅಂತ ಸುದ್ದಿ ಬಂತು. ನಿಜಾನಾ?
ಗಮನ: ಇದರ ಬಗ್ಗೆ ಯಾವುದೇ ಕಮೆಂಟ್ ಇಲ್ಲ.
ಫೆ ೧ : ನೀವು ಮಲೇಷಿಯಾದಲ್ಲಿ ಶ್ರೀರಾಮ ಸರ್ ಜೊತೆ ನ್ಯೂ ಇಯರ್ ಗೆ ಇದ್ದಿದ್ ಫೋಟೋ ಲೀಕ್ ಆಗಿದೆ, ವೈರಲ್ ಆಗಿದೆ. ಇದರ ಬಗ್ಗೆ ನೀವು ಏನಂತೀರಾ?
ಗಮನ: ನೋಡಿ ನಮ್ಮ ಜೊತೆ ಮಲೇಶಿಯದಲ್ಲಿ ಫಿಲ್ಮ್‌ನ crew ಇದ್ರು. ಮೀಡಿಯಾದವರು ನಾವಿಬ್ಬರೇ ಇದ್ದಿದ್ದು ಅಂತ ಸುಳ್ಳು ಸುದ್ದಿ ಹಬ್ಸಿದಾರೆ. In fact ಶ್ರೀರಾಮ್ ಅವರ wife ಶಿಲ್ಪಾ ನಂಗೆ close friend. ನಾನು ಬೆಂಗಳೂರಿಗೆ ಬಂದಾಗೆಲ್ಲ ಅವಳ ಮನೇನಲ್ಲೆ ಉಳಿದುಕೊಳ್ಳೋದು. ಈ ಥರ ಎಲ್ಲ ನೀವು ಮಾತನಾಡಬಾರದು.
ಫೆ ೧ : ಕುಕಿಂಗ್ ನಿಮ್ಮ ಹಾಬಿ ಅಂತ ಕೇಳಿದಿವಿ, ಹೌದಾ ಮೇಡಮ್?
ಗಮನ: ನನಗೆ cooking ಅಂದ್ರೆ ತುಂಬಾ ಇಷ್ಟ. ಈ busy schedule ಮಧ್ಯ cooking stress buster ಥರ. ನನಗೆ time ಆದಾಗೆಲ್ಲ ಅಡಿಗೆ ಮಾಡ್ತೀನಿ.
ಫೆ ೧ : ಏನೇನು ಕುಕ್ ಮಾಡ್ತಿರಾ?
ಗಮನ: ನಾನು dry items ಎಲ್ಲ ಚೆನ್ನಾಗಿ ಮಾಡ್ತೀನಿ. ಕಬಾಬ್, ಗೋಬಿ ಎಲ್ಲ ಮಾಡ್ತೀನಿ. ನನಗೆ bake ಮಾಡೋದು ಅಂದ್ರೆ ತುಂಬ ಇಷ್ಟ. ನಮ್ಮನೇಲಿ ಯಾರ birthday ಇದ್ರೂನು ನಾನೇ cake ಮಾಡೋದು.
ಫೆ ೧ : ನಿಮಗೆ ಬ್ಲೂಬೆರ್ರಿ ಕೇಕ್ ಅಂದರೆ ಇಷ್ಟ ಅಂತ ಕೇಳಿದ್ದೀವಿ.
ಗಮನ: oh yes…. Its my favorite.
ಫೆ ೧ : ನಿಮ್ಮ ಕೆಂಚ ಚಿತ್ರದ ಲಾಲಿಪಾಪ್ ಹಾಡು ಸೂಪರ್‌ಹಿಟ್ ಆಗಿದೆ. ಹುಡುಗರ ಎದೆಗೆ ಕಿಚ್ಚು ಹತ್ತಿಸಿದ್ದಿರ. ಇನ್ನು ಮುಂದೆನೂ ಇದೇ ಥರಹದ ಹಾಡುಗಳನ್ನ ನಿಮ್ಮಿಂದ expect ಮಾಡಬಹುದಾ?
ಗಮನ: ಈಗ ನಂಗೆ ಬೇರೆ appointment ಇದೆ. ಇನ್ನೊಂದ್ ಸಲ ಮಾತಾಡೋಣ.
ದೃಶ್ಯ ೪ – ಒಬ್ಬ ಫೆಸಿಲಿಟೇಟರ್ ಕ್ಯಾಮೆರಾ ಹಿಡಿದು Power Chakravarthy Kush ಅವರ ಸಂದರ್ಶನ ಮಾಡುತ್ತಾರೆ.
ಫೆ ೧ : ಹೆಲೊ ವೀಕ್ಷಕರೆ ಇವತ್ತು ನಮ್ಮ ಜೊತೆ Power Chakravarthy Kush ಇದ್ದಾರೆ. ಬನ್ನಿ ಅವರ ಜೊತೆ ಖುಷಿಖುಷಿಯಾಗಿ ಮಾತಾಡೋಣ. ಹೆಲೊ ಸರ್ ನಮ್ಮ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬಂದಿದಿರಾ. thank you so much sir.
ಕುಶ್ - (ಒಂದು smile ಹೊಡಿತಾರೆ)
ಫೆ ೧ : ನಿಮ್ಮ ಫೈಟರ್ ಸಿನೆಮಾ ಬಿಡುಗಡೆಯಾಗಿ ನೂರು ಕೋಟಿ ದಾಟಿದೆ. ಹೇಗೆ ಅನಿಸುತಿದೆ ಸರ್?
ಕುಶ್ - ಮೊದಲು ನಾನು ಜನರಿಗೆ ಧನ್ಯವಾದಗಳನ್ನು ಹೇಳಲು ಇಷ್ಟ ಪಡುತ್ತೇನೆ. ಒಂದು ಸಿನಿಮಾ ಇಷ್ಟು ಮಟ್ಟದಲ್ಲಿ ಜನರಿಗೆ ಇಷ್ಟವಾಗಿರೋದು ನಮಗೂ ಖುಷಿನೇ.
ಫೆ ೧ : ನೀವು ಸಹರಾದಲ್ಲಿ ಒಂದು action scene shoot ಮಾಡಿದಿರಾ. ಅದು ಸಕ್ಕಾತ್ತಾಗಿದೆ. ಹೇಗಿತ್ತು ಸರ್ ಆ ಅನುಭವ?
ಕುಶ್ - ಮೊದಲು ನಾನು ನಮ್ಮ ಸ್ಟಂಟ್ ಮಾಸ್ಟರ್ ಡ್ಯಾನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಅವರು ಇಂಡಿಯಾದಲ್ಲಿ ಬೆಸ್ಟ್ ಸ್ಟಂಟ್ ಮಾಸ್ಟರ್. ಅವರು ಹಾಗು ಅವರ ಟೀಮ್ ತುಂಬಾ ಕೆಲಸ ಮಾಡಿದ್ದಾರೆ. ನನಗೂ ಇಲ್ಲಿ ೨-೩ ತಿಂಗಳು ಟ್ರೈನಿಂಗ್ ಕೊಟ್ಟು ಕರೆದುಕೊಂಡು ಹೋಗಿದ್ದರು. ಅದು ಸ್ವಲ್ಪ ಸಹಾಯ ಆಯ್ತು.
ಫೆ ೧ : ಆ ಫೈಟಿಂಗ್ ಸೀನಲ್ಲಿ ಕಾಲಲ್ಲಿ ಬೊಬ್ಬೆ ಎಲ್ಲಾ ಬಂತು ಅಂತ ಕೇಳಿದ್ವಿ. ಆದ್ರೂ ನೀವು ಶೂಟಿಂಗ್ ಮಾಡಿದಿರ. ಹೇಗೆ ಸಾರ್?
ಕುಶ್ - ಹೌದು ಆ ಸೀನ್ ಸ್ವಲ್ಪ ಕಷ್ಟ ಇತ್ತು. ಆದರೆ ಒಂದು ಸಿನಿಮಾ ಅಂತ ಅಂದಮೇಲೆ ಅದಕ್ಕೆ ಏನು ಬೇಕು ಅದೆಲ್ಲ ಮಾಡಬೇಕು ಅಲ್ವಾ?
ಫೆ ೧ : ನೀವು ಆ ಶೂಟಿಂಗ್ ಅಲ್ಲಿ ಇದ್ದಾಗ ಇಲ್ಲಿ ಮನೆಗೆ ಪುಟಾಣಿ ಪವರ್ ಚಕ್ರವರ್ತಿ ಬಂದಿದಾನೆ. ಹೇಗೆ ಅನಿಸ್ತಾ ಇದೆ?
ಕುಶ್ - ಹೌದು ನಾನು ಶೂಟಿಂಗ್ ಅಲ್ಲಿ ಇದ್ದಿದ್ದರಿಂದ ಇಲ್ಲಿ ಇರಲಿಲ್ಲ ಅಂತ ತುಂಬಾ ಬೇಜಾರಾಗುತ್ತಾ ಇತ್ತು. ಆದರೆ ವಾಪಾಸು ಬಂದು ಅವನ ಮುಖ ನೋಡಿದ ಮೇಲೆ ಎಲ್ಲ ಸರಿ ಹೋಯ್ತು.
ಇದನ್ನು ಫೆಸಿಲಿಟೇಟರ್‌ಗಳು ಏಕೆ ಮಾಡಿದರು? ಎಂದು ಕಿಶೋರಿಯರನ್ನು ಕೇಳುತ್ತೇವೆ.
ಇದಾದ ನಂತರ ಕಿಶೋರಿಯರು ಯಾವುದಾದರೂ ಸಂದರ್ಶನಗಳನ್ನು ತಮ್ಮ ಮನೆಯ ಟಿವಿಗಳಲ್ಲಿ ನೋಡಿದರೆ/ಇಲ್ಲವೆ ಎಂದು ಕೇಳುವುದು.
ಎರಡೂ ಪಾತ್ರಾಭಿನಯಗಳನ್ನು ನೋಡಿದಾಗ ನಿಮಗೆ ಏನನ್ನಿಸಿತು ಎಂದು ಕಿಶೋರಿಯರನ್ನು ಕೇಳುವುದು. ಏಕೆ ಹೀಗೆ? (೧೦ ನಿಮಿಷ)
ಇದಾದ ನಂತರ "ಕಳೆದ ಬಾರಿ ನಾವು ಸಿಕ್ಕಾಗ ನೀವು ಎಲ್ಲರೂ ಸೇರಿ ಮಾಡಿದಂತಹ ಈ ಚಟುವಟಿಕೆ ನೆನಪಿದೆಯೇ?” ಎಂದು ಕೇಳುವುದು. (ಚಾರ್ಟ್ ತೋರಿಸುವುದು)
ಅಮ್ಮ | ಅಮ್ಮ | ಅಪ್ಪ | ಅಣ್ಣ | ಅಪ್ಪ | ಅಪ್ಪ | ಅಪ್ಪ | ಅಪ್ಪ | ಅಪ್ಪ | ಅಪ್ಪ |
ಅಕ್ಕ | ತಂಗಿ | ಅಮ್ಮ | ಅಮ್ಮ | ಚಿಕ್ಕಪ್ಪ | ಅಮ್ಮ | ಚಿಕ್ಕಪ್ಪ | ಮಾವ | ಅಮ್ಮ | ಅಮ್ಮ |
ನಾನು | ನಾನು | ಅಕ್ಕ | ನಾನು | ಅಮ್ಮ | ಅಕ್ಕ | ಅಮ್ಮ | ಅಮ್ಮ | ನಾನು | ಅಜ್ಜಿ |
ನಾನು | ಅಕ್ಕ | ನಾನು | ಅಣ್ಣ | ಅಜ್ಜಿ&ತಾತ | ಅಣ್ಣ | ಅಣ್ಣ | |||
ನಾನು | ತಮ್ಮ | ನಾನು | ಅಣ್ಣ | ನಾನು | |||||
ತಮ್ಮ | ನಾನು |
ಅಮ್ಮ | ಅಪ್ಪ | ಅಮ್ಮ | ಅಪ್ಪ | ಅಮ್ಮ | ಅಪ್ಪ | ಅಮ್ಮ | ಮಾಮ | ಅಮ್ಮ | |
ಅಪ್ಪ | ಚಿಕ್ಕಪ್ಪ | ತಮ್ಮ | ಅಮ್ಮ | ಅಕ್ಕ | ಅಮ್ಮ | ಅಕ್ಕ-೧ | ಅಮ್ಮ | ಮಾವ | |
ತಂಗಿ | ಅಮ್ಮ | ಅಪ್ಪ | ಚಿಕ್ಕಮ್ಮ | ಅಪ್ಪ | ಅತ್ತೆ | ಅಕ್ಕ -೩ | ಅಪ್ಪ | ತಮ್ಮ | |
ಅಕ್ಕ | ಅಜ್ಜಿ | ನಾನು | ತಮ್ಮ | ಅಣ್ಣ | ನಾನು | ಅಕ್ಕ-೨ | ಅಕ್ಕ | ತಂಗಿ | |
ನಾನು | ಅಕ್ಕ | ನಾನು | ನಾನು | ತಮ್ಮ | ಅಕ್ಕ-೪ | ತಂಗಿ | ನಾನು | ||
ತಂಗಿ | ತಂಗಿ | ತಂಗಿ | ನಾನು | ||||||
ನಾನು | ನಾನು | ||||||||
ಅಣ್ಣ |
ನಂತರ ಅದನ್ನು ಡಿಜೀಕರಿಸಿದ ಈ ಮೇಲಿನ ಪಟ್ಟಿಯನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಗುವುದು. ಪ್ರತಿಯೊಂದು ಕಾಲಂಗಳಲ್ಲಿ 'ನಾನು' ಎನ್ನುವುದು ಎಲ್ಲಿದೆ ಎನ್ನುವುದನ್ನು ನೋಡಿ, ನಿಮಗೆ ಏನು ಅನಿಸುತ್ತದೆ ಎಂದು ಹೇಳಬಹುದೆ? ಎಂದು ಕಿಶೋರಿಯರಿನ್ನು ಕೇಳುವುದು.
ಮೇಲಿನ ಚರ್ಚೆಯನ್ನು ಹೇಗೆ ವಿವಿಧ ಬಗೆಯ ಕುಟುಂಬಗಳಲ್ಲಿ ಯಾರಿಗೆ ಹೆಚ್ಚು ಅಧಿಕಾರವಿದೆ ಎನ್ನುವ ದಿಕ್ಕಿನಲ್ಲಿ Circle of influence chart ಉಪಯೋಗಿಸಿಕೊಂಡು ಮುಂದುವರೆಸುವುದು.
ನೀವು ನೋಡುವಂತೆ ಮನೆಯಲ್ಲಿ ಪುರುಷರು ಇರುವ ಕುಟುಂಬಗಳಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಒಂದು ವೇಳೆ ಅವರು ಇರದ ಸಂದರ್ಭದಲ್ಲಿ ಮಾತ್ರ ಮನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅಧಿಕಾರವಿರುತ್ತದೆ.
ಏಕೆ ಹೀಗೆ ಎಂದು ಕಿಶೋರಿಯರ ಜೊತೆ ಚರ್ಚೆ. ಇಲ್ಲಿ ಹಾವು - ಏಣಿ ಆಟದ ಮೂಲಕ ತಾರತಮ್ಯವನ್ನು ತೋರಿಸಬಹುದು. ' (೩೦ ನಿಮಿಷ)
ಈ ಕೆಳಗಿನ ಅಂಶಗಳನ್ನು ಚರ್ಚಿಸುವುದು.
ಪುರುಷ ಪ್ರಧಾನತೆಯಿಂದಾಗಿ
• ಹೇಗೆ ಕಿಶೋರಿಯರು ಹಾಗು ಕಿಶೋರರು ಪ್ರಭಾವಿತರಾಗುತ್ತಾರೆ. (ಸಮಸ್ಯೆ ನನಗೊಬ್ಬರಿಗೇ ಅಲ್ಲ ಎಂಬ ಅಂಶ)
• ಸುರುಳಿ ಚಟುವಟಿಕೆಯನ್ನು ಕಿಶೋರರು ಮಾಡಿದರೆ ಹೇಗೆ ಸಮಸ್ಯೆಗಳು ವಿಭಿನ್ನವಾಗಿರುತ್ತವೆ.
ಉದಾ :
◦ ಮನೆಯಲ್ಲಿ ಓದಲು ಬಿಡುವುದಿಲ್ಲ, ಕೆಲಸಕ್ಕೆ ಹೋಗಬೇಕು, ಓದಿಗಿಂತ ಹೊರಗಡೆ ಕೆಲಸ ಕಲಿಯುವುದು ಮುಖ್ಯ (ಆದರೆ ಮನೆಯಲ್ಲಿ ಅವರು ಯಾವುದೇ ಕೆಲಸ ಮಾಡಬೇಕಿಲ್ಲ, ಅಧಿಕಾರದಲ್ಲಿ ಅವರು ಅಕ್ಕ, ತಂಗಿ ಹಾಗು ಅಮ್ಮಂದಿರಿಗಿಂತ ಹೆಚ್ಚು, ಸಮಯದ ಮಿತಿಯಿಲ್ಲ),
◦ ಮನೆಯಿಂದ ಶಾಲೆಗೆ ಹೋಗುವಾಗ ಅವರು ಹುಡುಗರ ಗುಂಪುಗಳಲ್ಲಿ ಸೇರದಿದ್ದರೆ ಅವರನ್ನು ಹೀಯಾಳಿಸುವುದು, ಹುಡುಗಿಯರನ್ನು ರೇಗಿಸದಿದ್ದರೆ ಅವನನ್ನು ಹೀಯಾಳಿಸುವುದು ಇತ್ಯಾದಿ. ಅವರ ಬಣ್ಣ, ಎತ್ತರ, ಕೈಯಲ್ಲಿರುವ ಹಣ, ತಮಗಿಂತ ಚಿಕ್ಕ ಹುಡುಗರನ್ನು ತಮ್ಮ ಚೇಲಾಗಳನ್ನಾಗಿ ಮಾಡಿಕೊಳ್ಳುವುದು, ದುಶ್ಚಟಗಳನ್ನು ಕಲಿಯುವುದು ಹಾಗು ಅವುಗಳನ್ನು ಕೂಲ್ ಎಂದುಕೊಳ್ಳುವುದು (ಅವರು ಏನು ಮಾಡಿದರೂ ಮನೆಗೆ ಅಥವಾ ಶಾಲೆಗೆ ತಿಳಿಯದಂತೆ ಮಾಡಬಹುದು ಹಾಗು ಅದು ತಿಳಿದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ)
◦ ಶಾಲೆಯಲ್ಲಿ ಅವರಿಗೆ ಹೆಚ್ಚು ದೈಹಿಕ ಶಿಕ್ಷೆಗಳನ್ನು ನೀಡುತ್ತಾರೆ. ಅವರಿಗೆ ಯಾವುದೇ ವಿಷಯ ಅರ್ಥವಾಗದಿದ್ದರೆ ಅವರನ್ನು ತಾಳ್ಮೆಯಿಂದ ನೆಡೆಸಿಕೊಳ್ಳುವುದಿಲ್ಲ. ಶಾಲೆಯ ಎಲ್ಲಾ ದೈಹಿಕ ಶ್ರಮದ ಕೆಲಸಗಳನ್ನು ಹುಡುಗರಿಗೆ ನೀಡಲಾಗುತ್ತದೆ. (ಶಾಲೆಯ ವಿವಿಧ ಕೆಲಸಗಳನ್ನು ಮಾಡುವ ಮೂಲಕ ಹಾಗು ಎಂಥಹ ಶತಮೂರ್ಖನೇ ಆಗಿದ್ದರೂ ಬೈಕು ಅಥವಾ ಇನ್ನಿತರೆ ಶೋಕಿಗಳನ್ನು ಮಾಡಿ ಹುಡುಗಿಯರನ್ನು ಪಟಾಯಿಸಬಹುದು)
• ಈ ರೀತಿಯ ಸಂದರ್ಭಗಳು ಹುಡುಗರಿಗೆ ಯಾವ ವಯಸ್ಸಿನಲ್ಲಿ ಬರುತ್ತವೆ?
◦ ಹುಡುಗ ಹಾಗು ಗಂಡಸಿನ ಹಂತಗಳ ನಡುವಿನ ಹಂತ -
▪ ದೈಹಿಕ – ಮೀಸೆ, ಗಡ್ಡ, ಗಂಟಲು ಒಡೆಯುವುದು, ಕೂದಲು,
▪ ಮಾನಸಿಕ - ಹುಡುಗಿಯರನ್ನು ಮೆಚ್ಚಿಸಬೇಕು, ಹುಡುಗಿಯರು ನನ್ನ ಮಾತು ಕೇಳಬೇಕು, ಮನೆಯಲ್ಲಿ ಇರುವವರೂ ಇನ್ಮುಂದೆ ನನ್ನ ಮಾತು ಕೇಳಬೇಕು
▪ ಬೌದ್ಧಿಕ - ನನ್ನ ಭವಿಷ್ಯ ನನಗೆ ಗೊತ್ತಿದೆ ಆದ್ದರಿಂದ ಅದಕ್ಕೆ ಬೇಕಾಗುವ ಕೌಶಲಗಳನ್ನು ನಾನು ಹೊಂದುತ್ತೇನೆ.
• ಮಾಧ್ಯಮಗಳಲ್ಲಿ ಜಾಹಿರಾತುಗಳು ಹಾಗು ಇತರೆ ಕಾರ್ಯಕ್ರಮಗಳ ಮೂಲಕ ಸ್ತ್ರೀ-ಪುರುಷರ ಚಿತ್ರಣವು ಪುರುಷರಿಗೇ ಮಾನ್ಯತೆ ನೀಡುವಂತಿದೆ.
• ಸಂದರ್ಶನಗಳಲ್ಲಿ ನೋಡಿದಾಗ ಇದೇ ಅಂಶ ಕಾಣುತ್ತದೆ.
• ಇವೆಲ್ಲವನ್ನೂ ನೋಡಿದಾಗ ಕಿಶೋರರ ಹಾಗು ಕಿಶೋರಿಯರ ಸಮಸ್ಯೆಗಳು ವಿಭಿನ್ನವಾಗಿವೆ. ಪುರುಷಪ್ರಧಾನತೆಯನ್ನು ಅರಿಯುವುದು ಮುಖ್ಯ (ಮನೆಯಲ್ಲಿ ಈ ವಿಷಯಗಳನ್ನು ಚರ್ಚಿಸಬೇಡಿ ಎಂದು ಹೇಳಬೇಕು) (೨೦ ನಿಮಿಷ)
ಹೇಗೆ ನಮ್ಮ ಸ್ಥಿತಿಗತಿಗಳನ್ನು ಬದಲಿಸುವುದು ಎಂಬುದನ್ನು ಮುಂದಿನ ವಾರ ಮಾತನಾಡೋಣ ಎಂದು ಹೇಳಿ ನಮ್ಮ ಮಾತುಕಥೆಯನ್ನು ಮುಗಿಸುವುದು.
ಬೇಕಾದ ಸಂಪನ್ಮೂಲಗಳು
• ಕಂಪ್ಯೂಟರ್/ಲ್ಯಾಪ್‌ಟಾಪ್ - ೧
• ಪ್ರೊಜೆಕ್ಟರ್ - ೧
• ಕ್ಯಾಮೆರಾ - ೧
• ಚಾರ್ಟ್ - ೧
• ಸ್ಕೆಚ್ ಪೆನ್ನುಗಳು - ೨
• ನನ್ನ ಸವಾಲು ನಮ್ಮ ಸವಾಲೇ? ಮಾಡ್ಯೂಲ್‌ನಲ್ಲಿ ತಯಾರಾದ ಸುರುಳಿಗಳು.
• ಹಾವು ಏಣಿ ಆಟದ ಚಿತ್ರವಿರುವ ಚಾರ್ಟ್
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಬ್ಬ ಮುಖ್ಯ ಫೆಸಿಲಿಟೇಟರ್, ಮೂರು ಸಹಾಯಕ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೮೦ ನಿಮಿಷ
ಇನ್‌ಪುಟ್‌ಗಳು
ಕಿಶೋರಿಯವರ ಮಾತುಕಥೆಯಿಂದ ತಯಾರಿಸಿದ ಕುಟುಂಬಗಳ ಮಾಹಿತಿ ಪಟ್ಟಿ.
ಔಟ್‌ಪುಟ್‌ಗಳು
ಕಿಶೋರಿಯರ ಜೊತೆ ಚರ್ಚಿಸಿದ ಅಂಶಗಳ ಟಿಪ್ಪಣಿಗಳು.