ಬದಲಾವಣೆಗಳು

Jump to navigation Jump to search
೧,೪೯೫ ನೇ ಸಾಲು: ೧,೪೯೫ ನೇ ಸಾಲು:  
   
 
   
 
|}
 
|}
 +
==ಪ್ರಯೋಗಾಲಯದ ಅಭ್ಯಾಸಗಳು==
 +
ಮರವನ್ನು ಕುರಿತಾಗಿ ಒಂದು ಪ್ರಬಂಧವನ್ನು  ಟೈಪ್‌ ಮಾಡಿ ( ಈ ಅಭ್ಯಾಸವನ್ನು ನೀವು  ಎಂ ಎಸ್ ವರ್ಡ್  ಮತ್ತು ಲಿಬ್ರೆ ಆಫೀಸ್‌ ರೈಟರ್‌ಗಳನ್ನು ಬಳಸಿ ಮಾಡಿ).
 +
 +
'''ಮರಗಳು'''
 +
ಮರಗಳು ನಮ್ಮ ದಿನ ನಿತ್ಯ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿವೆ.  ಅವು ನಮಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸುತ್ತವೆ. ಈ ಎರಡು ಅಂಶಗಳು  ನಾವು ಜೀವಿಸಲು ಬೇಕಾಗಿರುವ ಅತ್ಯಂತ
 +
 +
'''ಅವಶ್ಯಕ ಅಂಶವಾಗಿವೆ'''. ಕೆಲವು ಮರಗಳಲ್ಲಿ ಔಷಧೀಯ ಗುಣಗಳಿವೆ. ಕೆಲವು ಮರಗಳು ನಮಗೆ ಮರವನ್ನು ಒದಗಿಸುತ್ತವೆ. ಇವುಗಳನ್ನು ಮನೆಕಟ್ಟುವುದಕ್ಕೆ,, ಪಿಠೋಪಕರಣಗಳನ್ನು  ಮಾಡಲು ಹಾಗೆಯೇ  ಇಂಧನದ ಸಂಪನ್ಮೂಲವಾಗಿ ಬಳಸುತ್ತಾರೆ. ಅತೀ ಮುಖ್ಯವಾದ ವಿಷಯವೆಂದರೆ ನಾವು ಮರಗಳನ್ನು ಕಡಿಯುವುದಕ್ಕಿಂತ, ಹೆಚ್ಚು ಮರಗಳನ್ನು  ನೆಟ್ಟು ಬೆಳೆಸಬೇಕು. ಮೇಲಿನ ವಿಷಯವನ್ನು  ಫಾರ್ ಮ್ಯಾಟ್  ಮಾಡಿದಾಗ  ಹೀಗೆ  ಕಾಣುತ್ತದೆ.
 +
 +
ಮರಗಳು
 +
ಮರಗಳು ನಮ್ಮ ದಿನ ನಿತ್ಯ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸಿವೆ.  ಅವು ನಮಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸುತ್ತವೆ. ಈ ಎರಡು ಅಂಶಗಳು  ನಾವು ಜೀವಿಸಲು ಬೇಕಾಗಿರುವ ಅತ್ಯಂತ ಅವಶ್ಯಕವಾಗಿವೆ. ಕೆಲವು ಮರಗಳಲ್ಲಿ ಔಷಧೀಯ ಗುಣಗಳಿವೆ. ಕೆಲವು ಮರಗಳು ನಮಗೆ ಮರವನ್ನು ಒದಗಿಸುತ್ತವೆ. ಇವುಗಳನ್ನು ಮನೆಕಟ್ಟುವುದಕ್ಕೆ,, ಪಿಠೋಪಕರಣಗಳನ್ನು ಮಾಡಲು ಹಾಗೆಯೇ  ಇಂಧನದ ಸಂಪನ್ಮೂಲವಾಗಿ ಬಳಸುತ್ತಾರೆ. ಅತೀ ಮುಖ್ಯವಾದ ವಿಷಯವೆಂದರೆ ನಾವು ಮರಗಳನ್ನು ಕಡಿಯುವುದಕ್ಕಿಂತ, '''ಹೆಚ್ಚು ಮರಗಳನ್ನು  ನೆಟ್ಟು ಬೆಳೆಸಬೇಕು'''.
 +
 +
'''ಸಾರಾಂಶ''':
 +
# ವರ್ಡ್ ಪ್ರೊಸೆಸರ್‌ ನಲ್ಲಿ  ನೀವು  ದಾಖಲೆಯನ್ನು  ರಚಿಸಲು , ಡಿಸ್ಕ್ ನಲ್ಲಿ ಶೇಖರಿಸಿಡಲು , ಪರದೆಯ ಮೇಲೆ ಪ್ರದರ್ಶಿಸಲು, ಕೀಲಿ ಮಣೆಯನ್ನು ಬಳಸಿ ಬದಲಾವಣೆ ಮಾಡಲು ಮತ್ತು ಮುದ್ರಣದಲ್ಲಿ ಮುದ್ರಿಸಲು ನೆರವಾಗುತ್ತದೆ.
 +
# ವರ್ಡ್ ಪ್ರೊಸೆಸರ್‌ ಪಠ್ಯವನ್ನು  ಸೇರಿಸಲು, ಅಳಿಸಲು, ಕತ್ತರಿಸಲು, ಮುದ್ರಿಸಲು ಮತ್ತು ಅಂಟಿಸಲು ನೆರವಾಗುತ್ತದೆ.
 +
# ಮೈಕ್ರೊಸಾಫ್ಟ್ ವರ್ಡ್‌, ಲಿಬ್ರೆ ಆಫೀಸ್‌ ರೈಟರ್, ಓಪನ್ ಆಫೀಸ್ ರೈಟರ್ ಮತ್ತು  ಗೂಗಲ್ ಡಾಕ್ಸ್ (ಡಾಕ್ಯುಮೆಂಟ್ಸ್)ಗಳು ಕೆಲವು ಪ್ರಸಿದ್ಧ ವರ್ಡ್ ಪ್ರೊಸೆಸರ್‌ಗಳು .
 +
# ಮೈಕ್ರೊಸಾಫ್ಟ್ ವರ್ಡ್ ಮೈಕ್ರೊಸಾಫ್ಟ್ ವಿಂಡೋಸ್  ಆಪರೇಟಿಂಗ್  ಸಿಸ್ಟಮ್‌ನಲ್ಲಿ ಮಾತ್ರ  ಕೆಲಸ ನಿರ್ವಹಿಸುತ್ತದೆ ಮತ್ತು ಇವುಗಳಲ್ಲಿ ಸೃಷ್ಠಿಸಿದ ಕಡತಗಳು .docx ಎಂಬ ವಿಸ್ತರಣೆ ಹೊಂದಿರುತ್ತವೆ. 
 +
# ಲಿಬ್ರೆಆಫೀಸ್‌ ರೈಟರ್  ಅನೇಕ ಅಪರೇಟಿಂಗ್ ಸಿಸ್ಟಮ್‌ಗಳಾದ  ಉಬುಂಟು (ಗ್ನು  /ಲಿನಕ್ಸ್) ಮತ್ತು ಮೈಕ್ರೊಸಾಫ್ಟ್ ವಿಂಡೋಸ್‌ಗಳಲ್ಲಿ ಕೆಲಸ ನಿರ್ವಹಿಸುತ್ತದೆ.  ಇದರಲ್ಲಿ ಸೃಷ್ಠಿಸಿದ ಕಡತಗಳು .odt ಎಂಬ ವಿಸ್ತರಣೆಯನ್ನು  ಹೊಂದಿರುತ್ತದೆ.
 +
# ಎಂ ಎಸ್ ವರ್ಡ್‌  ಮತ್ತು ಲಿಬ್ರೆ ಆಫೀಸ್ ರೈಟರ್ ಅನ್ನು ಬಳಸುವುದರಿಂದ ನೀವು ಪಠ್ಯದಲ್ಲಿ ಹೇಗೆ ಬದಲಾವಣೆ ಮಾಡುವುದು,  ಲಿಪಿಗಳನ್ನು ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್ಮ್ಯಾಟ್ ಮಾಡುವುದು,  ಬುಲೆಟ್ ಮತ್ತು ಅಂಕಿಗಳಿಂದ ಪಟ್ಟಿಯನ್ನು ರಚಿಸುವುದನ್ನು ತಿಳಿದಿದ್ದೀರಿ.
 +
 +
'''ಅಭ್ಯಾಸಗಳು''':
 +
# ಮೈಕ್ರೊಸಾಫ್ಟ್ ವರ್ಡ್ ಅನ್ನು ತೆರೆದು (ಇದನ್ನು ಆಂಗ್ಲ ಭಾಷೆಯಲ್ಲಿ ಅಥವಾ ಕನ್ನಡದಲ್ಲಿ  ಮಾಡಬಹುದು)
 +
i.ನಿಮ್ಮ ಹೆಸರನ್ನು ಟೈಪ್‌ ಮಾಡಿ. 
 +
ii.ನಿಮ್ಮ ಹೆಸರು ಕಾಣುವ ರೀತಿಯನ್ನು ಬದಲಾಯಿಸಿ.
 +
iii.ಪುನಃ ಟೈಪ್‌ ಮಾಡದೆ ನಿಮ್ಮ  ಹೆಸರಿನ  ಹಲವು ನಕಲುಗಳನ್ನು ಮಾಡಿ.
 +
iv.ಪುನಃ ಟೈಪ್‌ ಮಾಡದೆ ನಿಮ್ಮ  ಹೆಸರನ್ನು ಪುಟದ ಮಧ್ಯ ಭಾಗಕ್ಕೆ ವರ್ಗಾಯಿಸಿ.
 +
# ಮೈಕ್ರೊಸಾಪ್ಟ್ ವರ್ಡ್ ನಲ್ಲಿ ಅಂಕಿಯನ್ನು ಬಳಸಿ ಭಾರತದಲ್ಲಿನ ರಾಜ್ಯಗಳ ಪಟ್ಟಿಯನ್ನು ತಯಾರಿಸಿ.
 +
# ಲಿಬ್ರೆ ಆಫೀಸ್ ರೈಟರ್  ಅನ್ನು ಬಳಸಿ ನಿಮ್ಮ ಶಿಕ್ಷಕರಿಗೆ  15 ದಿನಗಳ ರಜೆ ಕೋರಿ  ಒಂದು ಪತ್ರ ಬರೆಯಿರಿ.
 +
# ಲಿಬ್ರೆ ಆಫೀಸ್ ರೈಟರ್‌ನಲ್ಲಿ ಬುಲೆಟ್ ಗಳನ್ನು ಬಳಸಿ ನಿಮ್ಮ  ಸ್ನೇಹಿತರ  ಪಟ್ಟಿ ಯನ್ನು ಮಾಡಿ.
 +
==ಪೂರಕ  ಸಂಪನ್ಮೂಲಗಳು==
 +
ಎಂಎಸ್ ವರ್ಡ್ ಅಥವಾ ಲಿಬ್ರೆಆಫೀಸ್ ಅನ್ನು  ಬಳಸುವಾಗ  F1  ಕಾರ್ಯ ಕೀಲಿಯನ್ನು  ಸಹಾಯಕ್ಕಾಗಿ ಬಳಸಿ.
 +
#http://www.libreoffice.org/get-help/documentation/#wg
 +
#http://office.microsoft.com/en-us/word-help/
 +
 +
= ೩.ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು=
 +
'''ಅಧ್ಯಾಯದ ಉದ್ದೇಶಗಳು''':
 +
'''ಈ ಅಧ್ಯಾಯದಲ್ಲಿ ನೀವು ಕಲಿಯುವುದೇನೆಂದರೆ''',
 +
# ಗಣಕಯಂತ್ರ ಜಾಲ  (Network)
 +
# ಅಂತರ್ಜಾಲ (Internet)
 +
# ಅಂತರ್ಜಾಲದ ಸಂಪರ್ಕಕ್ಕೆ ಬೇಕಾದ ತಂತ್ರಾಂಶ ಮತ್ತು ಯಂತ್ರಾಂಶ
 +
# ವರ್ಲ್ಡ್ ವೈಡ್ ವೆಬ್ (WWW) ಮತ್ತು ಯುಆರ್ಎಲ್ (URL).
 +
# ಅಂತರ್ಜಾಲ ಬ್ರೌಸರ್‌ಗಳು
 +
# ಅಂತರ್ಜಾಲದಲ್ಲಿ ಬ್ರೌಸಿಂಗ್‌ ಮಾಡುವುದು
 +
 +
'''ಅಂತರ್ಜಾಲ'''
 +
ನಮ್ಮ ಮನೆಗಳಲ್ಲಿ  ವಿದ್ಯುತ್‌  ಹೇಗೆ ದೊರಕುತ್ತದೆ? ವಿದ್ಯುತ್ತ್  ತಂತಿಗಳು, ವಿದ್ಯುತ್‌ ಕಂಬಗಳು, ಭೂಗರ್ಭತಂತಿಗಳು, ಟವರ್‌ಗಳು  ಇವುಗಳ ಜಾಲಗಳ ಮೂಲಕ ವಿದ್ಯುಚ್ಛಕ್ತಿಯು ಮನೆಗಳನ್ನು ತಲುಪುತ್ತದೆ.
 +
ಹಲವು ಬಗೆಯ ನೆಟ್ ವರ್ಕ್ ಗಳಿವೆ: ಟೆಲಿಫೋನ್ ನೆಟ್‌ವರ್ಕ್,  ನೀರನ್ನು ಪೂರೈಸುವ ನೆಟ್‌ವರ್ಕ್, ರಸ್ತೆ ನೆಟ್ ವರ್ಕ್, ರೈಲು ನೆಟ್‌ವರ್ಕ್ ಇನ್ನೂ  ಅನೇಕ.  ಒಂದು ನೆಟ್‌ವರ್ಕ್ ಎಂದರೆ ಹಲವು ಘಟಕಗಳ (ಭಾಗ)  ಸಂಪರ್ಕವಾಗಿರುತ್ತದೆ ಅದೇ ರೀತಿ ನೆಟ್‌ವರ್ಕ್ ಅನ್ನು ಅನೇಕ ಜನರು ಹಂಚಿಕೊಂಡಿರುತ್ತಾರೆ
 +
ಗಣಕಯಂತ್ರಗಳನ್ನು ಸಹ  ಜಾಲ (ನೆಟ್ ವರ್ಕ್)ದಲ್ಲಿ ಸೇರಿಸಬಹುದು. ಗಣಕಯಂತ್ರದ  ಜಾಲವು  ಎರಡು ಅಥವಾ  ಹೆಚ್ಚು ಗಣಕಯಂತ್ರಗಳನ್ನು ಒಟ್ಟಾಗಿ ಸೇರಿಸುವುದಾಗಿದೆ . ಗಣಕಯಂತ್ರದ ನೆಟ್‌ವರ್ಕ್ ಅನ್ನು ಮುಖ್ಯವಾಗಿ    ಕೆಳಗಿನಂತೆ ವಿಂಗಡಿಸಬಹುದು.
 +
 +
# ಲೋಕಲ್ ಏರಿಯ ನೆಟ್ ವರ್ಕ್ (LAN):  ಗಣಕಯಂತ್ರಗಳು ಒಂದಕ್ಕೊಂದು ತುಂಬ ಹತ್ತಿರದಲ್ಲಿರುವುದು. (ಒಂದೇ ಕಟ್ಟಡದಲ್ಲಿ ಇರಬಹುದು).
 +
 +
# ವೈಡ್ ಏರಿಯ ನೆಟ್ ವರ್ಕ್ (WANS): ಗಣಕಯಂತ್ರಗಳು  ದೂರ ಪ್ರದೇಶಗಳಲ್ಲಿ ವಿಸ್ತರಿಸಲ್ಪಟ್ಟಿದ್ದು ಅವುಗಳನ್ನು  ಟೆಲಿಪೋನ್ ತಂತಿಗಳು ಅಥವಾ ರೇಡಿಯೋ ತರಂಗಗಳಿಂದ ಸಂಪರ್ಕಿಸಿರುತ್ತಾರೆ. 
 +
 +
ನಿಮ್ಮ ಗಣಕಯಂತ್ರದ  ಪ್ರಯೋಗಾಲಯದಲ್ಲಿ ಎಲ್ಲಾ ಗಣಕಯಂತ್ರಗಳು ಒಂದು ಮುಖ್ಯ ಗಣಕಯಂತ್ರಕ್ಕೆ ಸಂರ್ಪಕಿಸಿರುವುದನ್ನು ನೋಡಿರಬಹುದು. ಅದೇ 'ಸರ್ವರ್ " ಇದುವೇ LAN.  ಗಣಕಯಂತ್ರಗಳಿಂದ  ಬರುವ ತಂತಿಗಳನ್ನು  ಹಬ್ ಎನ್ನುವ ಸಾಧನಕ್ಕೆ ಸಂಪರ್ಕಿಸಿರುತ್ತಾರೆ. ಈ ಹಬ್ ಅನ್ನು ಸರ್ವರ್‌ಗೆ ಸಂರ್ಪಕಿಸಿರುತ್ತಾರೆ. ನೆಟ್ ವರ್ಕ್ ನಲ್ಲಿ ಹಬ್ ಅನ್ನು ಸಾಮಾನ್ಯ  ಸಂಪರ್ಕದ ಸಾಧನವನ್ನಾಗಿ ಬಳಸುತ್ತಾರೆ.
 +
ಗಣಕಯಂತ್ರದ ನೆಟ್‌ವರ್ಕ್ ನಲ್ಲಿ ಏನನ್ನು ಹಂಚಿಕೊಳ್ಳು.ತ್ತಾರೆ. ನಿಮಗೆ ಗೊತ್ತೇ ? ಗಣಕಯಂತ್ರದ ನೆಟ್‌ವರ್ಕ್  ಅನ್ನು ಬಳಸಿ  ಕಡತಗಳನ್ನು , ಮಾಹಿತಿಯನ್ನು , ಕೆಲವು ಯಂತ್ರಾಂಶ ಸಾಧನಗಳನ್ನು ಸಹ ಹಂಚಿಕೊಳ್ಳಬಹುದು.     
 +
ಗಣಕಯಂತ್ರದ ನೆಟ್‌ವರ್ಕ್ ನಲ್ಲಿ  ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಪ್ರಯೋಜನವೇನು? ನೀವು ರೈಲು ಅಥವಾ ಬಸ್‌ ಪ್ರಯಾಣ ಮಾಡಲು ರಾಜ್ಯದೆಲ್ಲೆಡೆ ಟಿಕೇಟ್ ಅನ್ನು  ಕಾಯ್ದಿರಿಸಿರಬಹುದು. ನೀವು ಟಿಕೇಟ್ ಅನ್ನು ಕಾಯ್ದಿರಿಸಲು ನೀವು ಹೋಗಬೇಕಾದ ಸ್ಥಳಕ್ಕೆ ಹೋಗುವ ರೈಲು ಅಥವಾ ಬಸ್ಸಿನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು  ಅವು ಹೋಗುವ ದಿನದಂದು  ಸಿಗುವುದೇ ಎಂದು ತಿಳಿಯಬೇಕು.  ನಿಮ್ಮ ಗಣಕಯಂತ್ರವು,  ರೈಲು ಟಿಕೇಟ್‌  ಕಾಯ್ದಿರಿಸುವ  ಕಛೇರಿಯ ಗಣಕಯಂತ್ರದೊಂದಿಗೆ  ಸಂಪರ್ಕ ಹೊಂದಿದ್ದರೆ ನೀವು ಮನೆಯಿಂದಲೇ ನಿಮ್ಮ ಟಿಕೇಟ್ ಅನ್ನು ಕಾಯ್ದಿರಿಸಿರಬಹುದು. ಈ ರೀತಿಯ ಗಣಕಯಂತ್ರಗಳ ಸಂಪರ್ಕವನ್ನು ಅಂತರ್ಜಾಲ ಸಂಪರ್ಕ ಮಾಧ್ಯಮ ಎಂದು ಕರೆಯುತ್ತಾರೆ. ಈ ರೀತಿಯ  ಅಂತರ್ಜಾಲ  ಸಂಪರ್ಕ ಮಾಧ್ಯಮದಿಂದ ಮಾಹಿತಿಯನ್ನು  ಎರಡು ಗಣಕಯಂತ್ರಗಳ ಮಧ್ಯೆ  ಹಂಚಿಕೊಳ್ಳಬಹುದು. 
 +
 +
ನಿಮ್ಮ ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳ  ಮಾಹಿತಿ ನಿಮಗೆ ಬೇಕೆಂದರೆ, ನೀವು  ಗ್ರಂಥಾಲಯದಲ್ಲಿರುವ  ಗಣಕಯಂತ್ರಕ್ಕೆ  ಸಂಪರ್ಕ ಹೊಂದಿದ್ದರೆ ಮನೆಯಿಂದಲೇ ಮಾಹಿತಿಯನ್ನು ಪಡೆಬಹುದು.
 +
 +
ಅನೇಕ ಸಂಸ್ಥೆಗಳಲ್ಲಿ  ಈ ರೀತಿ ಗಣಕಯಂತ್ರಗಳಿದ್ದು  ನಮಗೆ ವಿಭಿನ್ನ ರೀತಿಯ ಮಾಹಿತಿಯನ್ನು ನೀಡುತ್ತವೆ. ಈ ಎಲ್ಲಾ ಗಣಕಯಂತ್ರಗಳನ್ನು ಒಂದಕ್ಕೊಂದು ಸಂಪರ್ಕಿಸಿರುತ್ತಾರೆ . ಇದನ್ನು  ಅಂತರ್ಜಾಲ ಎನ್ನುತ್ತಾರೆ.
 +
ಬೇರೊಂದು ಗಣಕಯಂತ್ರದಿಂದ ಮಾಹಿತಿಯನ್ನು ಪಡೆಯಲಿಕ್ಕಾಗಲಿ , ಹಂಚಲಿಕ್ಕಾಗಲಿ  ನಿಮ್ಮ ಗಣಕಯಂತ್ರವನ್ನು ಅಂತರ್ಜಾಲಕ್ಕೆ  ಸಂಪರ್ಕಿಸಿರಬೇಕು. 
 +
 +
 +
==ಅಂತರ್ಜಾಲಕ್ಕೆ  ಸಂಪರ್ಕ ಹೊಂದಲು ನಿಮಗೆ ಏನು ಬೇಕು?==
 +
ಅಂತರ್ಜಾಲಕ್ಕೆ ಸಂಪರ್ಕ ಪಡೆಯುವ ಮುನ್ನ ನೀವು ಗಣಕಯಂತ್ರ, ಮೋಡಮ್ ಮತ್ತು  ಸಂಪರ್ಕ ಹೊಂದಲು ತಂತ್ರಾಂಶ ಹೊಂದಿರಬೇಕು (ಮೋಡಮ್ ಎಂದರೆ ಒಂದು ಯಂತ್ರಾಂಶದ ಸಾಧನವಾಗಿದ್ದು, ಗಣಕಯಂತ್ರಕ್ಕೆ ಬರುವ ಮಾಹಿತಿಯನ್ನು ಟೆಲಿಫೋನ್ ಅಥವಾ ಕೇಬಲ್‌ ತಂತಿಗಳ ಮೂಲಕ ವರ್ಗಾಯಿಸುತ್ತದೆ). 
 +
 +
ಯಾವುದೇ ತಂತಿಯ ಸಂಪರ್ಕವಿಲ್ಲದೆ ಅಂತರ್ಜಾಲದ ಸಂಪರ್ಕವನ್ನು ಪಡೆಯಲು ಬಳಸುವ ಸಾಧನಕ್ಕೆ ನೀವು  ಡೇಟಾಕಾರ್ಡ್  ಎನ್ನುತ್ತಾರೆ. ಈ ಡೇಟಾಕಾರ್ಡ್ ಅಂತರ್ಜಾಲದ ಸಂಪರ್ಕವನ್ನು ಪಡೆಯಲು ಮೊಬೈಲ್ ಫೋನ್‌ಗಳ ನೆಟ್ ವರ್ಕ್ ಅನ್ನು ಬಳಸಿಕೊಳ್ಳುತ್ತದೆ.  ಸರ್ವೀಸ್‌ ಪ್ರೊವೈಡರ್‌ನಿಂದ ಸಾಮಾನ್ಯವಾಗಿ ಸಂಪರ್ಕಿಸುವ ತಂತ್ರಾಂಶವು  ದೊರೆಯುತ್ತದೆ. (ಇವು ಹೆಚ್ಚಾಗಿ ಟೆಲಿಫೋನ್ ಕಂಪನಿಗಳದ್ದಾಗಿರುತ್ತವೆ). 
 +
 +
==ವರ್ಲ್ಡ್ ವೈಡ್‌ ವೆಬ್‌ (WWW)==
 +
ಅಂತರ್ಜಾಲದಲ್ಲಿ ಮಿಲಿಯನ್‌ಗಟ್ಟಲೆ ಮಾಹಿತಿಯನ್ನು ಹಂಚಿಕೊಳ್ಳಬಹುದಾದಂತ ಪುಟಗಳಿದ್ದು, ಇವುಗಳನ್ನು ವೆಬ್‌ ಪೇಜ್‌ ರೂಪದಲ್ಲಿ ಅನೇಕ ವ್ಯಕ್ತಿ ಮತ್ತು ಸಂಸ್ಥೆಗಳು ರಚಿಸಿರುತ್ತಾರೆ. ಇದನ್ನು ಪ್ರವೇಶಿಸಲು ಬಳಸುವ ಸಾಫ್ಟ್ ವೇರ್‌ ಅಪ್ಲಿಕೇಶನ್‌ ಗೆ 'ವೆಬ್‌ಬ್ರೌಸರ್‌' ಎನ್ನುತ್ತಾರೆ. ಈ ಮಾಹಿತಿಯ ಜಾಲವನ್ನು ವರ್ಲ್ಡ್ ವೈಡ್‌ ವೆಬ್‌ ಎಂದು ಕರೆಯುತ್ತಾರೆ. ಈ ಮಾಹಿತಿಯ ಮೂಲವನ್ನು ವೆಬ್‌ ಸೈಟ್‌ ಎಂದು ಕರೆಯುತ್ತಾರೆ.  ವೆಬ್‌ ಸೈಟ್‌ ಅನೇಕ ಸಂಬಂಧಿತ ವೆಬ್‌ಪೇಜ್‌ಗಳ ಸಮೂಹವಾಗಿದೆ.
 +
 +
'''ವೆಬ್‌ ಬ್ರೌಸರ್‌'''
 +
ನೀವು ಅಂತರ್ಜಾಲವನ್ನು ಸಂಪರ್ಕಿಸಿ ವಿಷಯಗಳನ್ನು  ನೋಡಲು ನಿಮಗೆ ವೆಬ್‌ ಬ್ರೌಸರ್‌ ಎನ್ನು ವ ಅಪ್ಲಿಕೇಶನ್ ಸಾಫ್ಟ್ ವೇರ್‌ ಬೇಕಾಗುತ್ತದೆ. ಮೊಜಿಲ್ಲಾ ಫೈರ್‌ ಫಾಕ್ಸ್, ವಿಂಡೋಸ್‌ ಇಂಟರ್ನೆಟ್‌ ಎಕ್ಸ್ ಪ್ಲೋರರ್‌, ಆಪಲ್ಸ್ ಸಫಾರಿ, ಗೂಗಲ್‌ ಕ್ರೋಮ್‌ ಎನ್ನುವ ಅನೇಕ ಬ್ರೌಸರ್‌ಗಳಿವೆ. ಎಲ್ಲಾ ಬ್ರೌಸರ್‌ಗಳು ಒಂದೇ ರೀತಿಯ ಕೆಲಸವನ್ನು ನಿರ್ವಹಿಸುತ್ತವೆ. ಈ ಅಧ್ಯಾಯದಲ್ಲಿ ನೀವು ವೆಬ್‌ ಅನ್ನು ಬ್ರೌಸ್‌ ಮಾಡಲು ಮೊಜಿಲ್ಲಾ ಫೈರ್‌ ಫಾಕ್ಸ್ ಬಳಸುವುದನ್ನು ತಿಳಿಯುತ್ತೀರಿ. ವೆಬ್‌ ಬ್ರೌಸಿಂಗ್‌ ಎಂದರೆ, ಅಂತರ್ಜಾಲದಲ್ಲಿರುವ ವಿಷಯಗಳನ್ನು ನೋಡುವುದು. ನೀವು ಉಬಂಟುವನ್ನು ಬಳಸುವಾಗ ಮೇಲಿನ ಪ್ಯಾನಲ್‌ನಲ್ಲಿರುವ ಐಕಾನ್‌ಅನ್ನು ಕ್ಲಿಕ್‌ ಮಾಡಿ ಫೈರ್‌ ಫಾಕ್ಸ್ ಇಂಟರ್ನೆಟ್‌ ಬ್ರೌಸರ್‌ಅನ್ನು  ಪ್ರಾರಂಭಿಸಬಹುದು.
 +
 +
ವಿಂಡೋಸ್‌ ಅನ್ನು ಬಳಸುವಾಗ ನೀವು ಮೊಜಿಲ್ಲಾ ಫೈರ್‌ ಫಾಕ್ಸ್ ಅಥವಾ ವಿಂಡೋಸ್‌ ಇಂಟರ್ನೆಟ್‌ ಎಕ್ಸ್ ಪ್ಲೋರರ್‌ ಗಳಲ್ಲಿ ಒಂದನ್ನು ಬಳಸಬಹುದು.ಸ್ಟಾರ್ಟ್ ಬಟನ್‌ ಅನ್ನು ಕ್ಲಿಕ್‌ ಮಾಡಿದಾಗ ಎರಡೂ ಕಾರ್ಯಯೋಜನೆಗಳು ದೊರೆಯುತ್ತವೆ ಮತ್ತು ಆಲ್‌ ಪ್ರೋಗ್ರಾಮ್ಸ್ ಅನ್ನು ಆಯ್ಕೆ ಮಾಡಿ. ಫೈರ್‌ ಫಾಕ್ಸ್ ಒಂದು ಸಾರ್ವಜನಿಕ ತಂತ್ರಾಂಶ ಅಪ್ಲಿಕೇಶನ್‌ ಆಗಿದೆ. ಆದ್ದರಿಂದ ಇದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಇಂಟರ್ನೆಟ್‌ ಎಕ್ಸ್ ಪ್ಲೋರರ್‌ ಖಾಸಗಿ ಒಡೆತನದ ವೆಬ್‌ ಬ್ರೌಸರ್‌ ಆಗಿದೆ.
 +
 +
ವೆಬ್ ಸೈಟ್ ಎನ್ನುವುದು ಗಣಕ ಯಂತ್ರದ ಮೇಲಿನ ಒಂದು ಫೋಲ್ಡರ್ ಆಗಿದ್ದು  ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದು ಒಂದು ವಿಳಾಸವನ್ನು ಹೊಂದಿರುತ್ತದೆ. ವೆಬ್‌ಸೈಟ್‌ನ ವಿಳಾಸವನ್ನು ಅಡ್ರೆಸ್ ಬಾರ್ ನಲ್ಲಿ ನೀವು ಎಂಟರ್ ಮಾಡಬೇಕು (ಚಿತ್ರದಲ್ಲಿ ತೋರಿಸಿದ ಹಾಗೆ ) ಈ ಅಡ್ರೆಸನ್ನು ಯುನಿಫಾರ್ಮ್‌ ರಿಸೋರ್ಸ್ ಲೊಕೇಟರ್ (URL)ಎಂದು ಕರೆಯುತ್ತಾರೆ.
 +
ಅಡ್ರೆಸ್ ಬಾರ್ ನಲ್ಲಿ ನೀವು www.wikipedia.org ಎಂದು ಟೈಪ್ ಮಾಡಿ ಮತ್ತು ಎಂಟರ್ ಗುಂಡಿಯನ್ನು ಒತ್ತಿ. ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ಪಡೆಯುತ್ತೀರಿ. ಈ ವೆಬ್ ಸೈಟ್ ಅನೇಕ ಭಾಷೆಗಳಲ್ಲಿ ಮಾಹಿತಿಯನ್ನು ಹೊಂದಿದೆ. ಮೌಸ್ ಪಾಯಿಂಟರ್ ಅನ್ನು 'ಆಂಗ್ಲ'  ಎಂಬ ಆಯ್ಕೆಯ ಮೇಲೆ ಚಲಿಸಿದಾಗ ಮೌಸ್ ಪಾಯಿಂಟರ್ ಕೈಯಾಗಿ ಬದಲಾಗುತ್ತದೆ. ವೆಬ್ ಸೈಟ್ ನ ಇತರೆ ಭಾಗಗಳಿಗೆ ಇದು ಕೊಂಡಿಯಾಗಿರುತ್ತದೆ. ಅವುಗಳನ್ನು ಹೈಪರ್ಲಿಂಕ್ಸ್ ಎನ್ನುತ್ತಾರೆ. ಹೈಪರ್ಲಿಂಕ್ಸ್ ಎನ್ನುವುದು ಒಂದು ಯಾಂತ್ರಿಕ
 +
ವ್ಯವಸ್ಥೆಯಾಗಿದ್ದು ಒಂದು ವೆಬ್ ಪೇಜ್‌ನಿಂದ ಮತ್ತೊಂದು ಸಂಬಂಧಿತ ವೆಬ್ ಪೇಜ್‌ಗೆ  ಕೊಂಡಿಯಾಗಿದೆ. ಪಠ್ಯ, ಚಿತ್ರಗಳನ್ನು ಹೈಪರ್ಲಿಂಕ್ಸ್ ಗಳಾಗಿ ಮಾಡಬಹುದು. ಹೈಪರ್ಲಿಂಕ್ಸ್ ಗಳು ಸಾಮಾನ್ಯವಾಗಿ ಅಂಡರ್ ಲೈನ್‌ ಆಗಿರುತ್ತವೆ.
 +
 +
ನೀವು ಇಂಗ್ಲೀಷ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ  ಮಾಹಿತಿಯು ಆಂಗ್ಲ ಭಾಷೆಯಲ್ಲಿರುವ  ವಿಶ್ವಕೋಶದಿಂದ ದೊರೆಯುತ್ತದೆ.
 +
ನೀವು ಬಲಭಾಗದ ಮೇಲೆ ಮೂಲೆಯನ್ನು ನೋಡಿದಾಗ ವಿವಿಧ ಭಾಗಗಳಾದ ಕಲಾವಿಭಾಗ, ಇತಿಹಾಸ, ಗಣಿತ ಮತ್ತು ವಿಜ್ಞಾನದ ಬಗ್ಗೆ ಮಾಹಿತಿಯನ್ನು ಪಡೆಯುವಿರಿ. ನೀವು ಗಣಿತದ ಮೇಲೆ ಕ್ಲಿಕ್ ಮಾಡಿ, ಬೇಕಾದ ವಿಭಾಗವನ್ನು ಹುಡುಕಬಹುದು. ನೀವು ಗಣಿತ ವಿಷಯದ ಮೇಲೆ ಕ್ಲಿಕ್ ಮಾಡಿ ಕೆಲವು ವಿಷಯಗಳನ್ನು ಹುಡುಕಬಹುದು. ವಿವಿಧ ವಿಭಾಗಗಳು ಎನ್ನುವುದರ ಮೇಲೆ ಇರುವ ಶೋಧನಾ ಪಟ್ಟಿಯಲ್ಲಿ ಗುಣಾಕಾರ ಎಂದು ಟೈಪ್‌ ಮಾಡಿ. ಗುಣಾಕಾರದ ಬಗ್ಗೆ ನೀವು ಮಾಹಿತಿಯನ್ನು ಪಡೆಯುವಿರಿ.
 +
 +
==ಶೋಧನಾ(ಸರ್ಚ್‌) ಎಂಜಿನ್‌ಗಳು==
 +
ವರ್ಲ್ಡ್ ವೈಡ್ ವೆಬ್‌ನಲ್ಲಿ ಮಾಹಿತಿಯನ್ನು ಹುಡುಕಲು  ಶೋಧನಾ  ಎಂಜಿನ್‌ಗಳನ್ನು  ಬಳಸುತ್ತಾರೆ. ಇದು ಎಲ್ಲಾ ವೆಬ್ ಪೇಜ್ ಗಳ ಮಾರ್ಗವನ್ನು ಹೊಂದಿರುತ್ತದೆ. ನಾವು ನಮಗೆ ಬೇಕಾದ ಮಾಹಿತಿಯ  ಪದ ಅಥವಾ ವಾಕ್ಯವನ್ನು ಶೋಧನಾ ಎಂಜಿನ್‌ಗೆ ಒದಗಿಸಿ ಮಾಹಿತಿಯನ್ನು ಹುಡುಕಬಹುದು. ಗೂಗಲ್‌ ಎನ್ನುವುದು ಪ್ರಸಿದ್ಧ ಶೋಧನಾ ಎಂಜಿನ್‌ ಅಗಿದೆ. ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿ www.google.com  ಎಂದು ಟೈಪ್‌ ಮಾಡಿ. ಶೋಧನಾ ಬಾಕ್ಸ್ ನಲ್ಲಿ  ಸಚಿನ್ ತೆಂಡೊಲ್ಕರ್‌ನ ಶತಕಗಳು (centuries) ಎಂದು ಟೈಪ್‌ ಮಾಡಿ. ಸಚಿನ್ ತೆಂಡೊಲ್ಕರ್‌ನ ಶತಕಗಳ ಬಗ್ಗೆ ಮಾಹಿತಿ ಇರುವ ವೆಬ್‌ ಪುಟಗಳ ಪಟ್ಟಿಯನ್ನು ಕಾಣುತ್ತೀರಿ.  ನೀವು ಹೈಪರ್ ಲಿಂಕ್ಸ್ ನ  ಮೇಲೆ ಕ್ಲಿಕ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
 +
 +
'''ಪ್ರಯೋಗಾಲಯದ ಅಭ್ಯಾಸಗಳು''':
 +
 +
'''ಈ ಕೆಳಕಂಡ ವೆಬ್ ಸೈಟ್ಸ್ ಗಳನ್ನು ಭೇಟಿ ಮಾಡಿ'''.
 +
# kn.wikipedia.org, kannada.samachar.com, irctc.com,  rmsa.karnatakaeducation.org.in dsert.kar.nic.in
 +
# Search for NCERT Textbooks for Class VIII using google.com
 +
 +
 +
ಅಧ್ಯಾಯದ ಸಾರಾಂಶ:
 +
1. ಗಣಕಯಂತ್ರದ ನೆಟ್ ವರ್ಕ್ ಅನ್ನು ಬಳಸಿ ಕಡತಗಳು, ಮಾಹಿತಿಯನ್ನು ಮತ್ತು ಕೆಲವು ಯಂತ್ರಾಂಶ  ಸಾಧನಗಳನ್ನು  ಹಂಚಿಕೊಳ್ಳಬಹುದು.
 +
2. ಅಂತರ್ಜಾಲದ ಸಂರ್ಪಕದಿಂದ ಮಾಹಿತಿಯನ್ನು  ಗಣಕಯಂತ್ರಗಳ ನಡುವೆ ಸಂವಹಿಸಬಹುದು ಮತ್ತು ಹಂಚಿಕೊಳ್ಳಬಹುದು.
 +
3. ಗಣಕಯಂತ್ರ, ಮೋಡಮ್, ಟೆಲಿಫೋನ್ ತಂತಿಗಳನ್ನು  ಅಂತರ್ಜಾಲಕ್ಕೆ ಸಂಪರ್ಕಿಸಲಾಗಿರುತ್ತದೆ ಮತ್ತು ಅಂತರ್ಜಾಲಕ್ಕೆ ಸಂಪರ್ಕಹೊಂದಲು ಸಂಪರ್ಕ ತಂತ್ರಾಂಶ ಬೇಕಾಗುತ್ತದೆ.
 +
4. ಒಂದು ವೆಬ್ ಸೈಟ್ ಎಂದರೆ ಪರಸ್ಪರ ಸಂಬಂಧವಿರುವ ವೆಬ್ ಪೇಜ್‌ಗಳ ಮಾಹಿತಿಯ ಕ್ರೋಢೀಕರಣ.
 +
5. ಅಂತರ್ಜಾಲದ ವರ್ಲ್ಡ್ ವೈಡ್‌ ವೆಬ್‌ನಲ್ಲಿ ಮಾಹಿತಿಯನ್ನು ಹುಡುಕಲು ವೆಬ್‌ ಬ್ರೌಸರ್ ಎಂಬ ಸಾಫ್ಟ್ ವೇರ್ ಅಪ್ಲಿಕೇಶನ್ ಬೇಕಾಗುತ್ತದೆ.
 +
6. ವರ್ಲ್ಡ್ ವೈಡ್ ವೆಬ್ ನಲ್ಲಿ ಮಾಹಿತಿಯನ್ನು ಹುಡುಕಲು ಶೋಧನಾ  ಎಂಜಿನ್ ಅನ್ನು ಬಳಸುತ್ತಾರೆ.
 +
 +
'''ಅಭ್ಯಾಸಗಳು''':
 +
'''ಸರಿಯಾದ ಉತ್ತರ ಆರಿಸಿ ಬರೆಯಿರಿ'''
 +
# ಇಂಟರ್ನೆಟ್(ಅಂತರ್ಜಾಲ ) ಎನ್ನುವುದು ________________ನೆಟ್‌ವರ್ಕ್ ಆಗಿದೆ.
 +
1. ರಸ್ತೆಗಳ 2. ರೈಲುಗಳ 3. ಗಣಕಯಂತ್ರಗಳ 4. ನೀರಿನ ಪೈಪ್ ಗಳ
 +
# ಇವುಗಳಲ್ಲಿ ಯಾವುದು ಬ್ರೌಸರ್ ಅಲ್ಲ
 +
1. ಸಫಾರಿ 2. ಕ್ರೋಮ್ 3. ನೌಟಿಲಸ್ (nautilus) 4.  ಫೈರ್ ಫಾಕ್ಸ್ (firefox)
 +
# ತಂತಿಯ ಸಹಾಯವಿಲ್ಲದೆ ಅಂತರ್ಜಾಲ ಕ್ಕೆ ಸಂಪರ್ಕಕೊಡುವ ಸಾಧನ__________
 +
1. USB ಫ್ಲಾ ಶ್ ಡ್ರೈವ್ 2.ಡೇಟಾ  ಕಾರ್ಡ್ 3. ಮೆಮೊರಿಕಾರ್ಡ 4.ಮೋಡೆಮ್
 +
 +
'''ಸರಿ ಅಥವಾ  ತಪ್ಪು  ತಿಳಿಸಿ''':
 +
# ಅಂತರ್ಜಾಲ ವೆಂಬುವುದು ಗಣಕಯಂತ್ರಗಳ  ನೆಟ್ ವರ್ಕ್ ಆಗಿದೆ.
 +
# ತಂತಿಗಳ ಸಹಾಯವಿಲ್ಲದೆ ಮೋಡಮ್ ಅಂತರ್ಜಾಲಕ್ಕೆ  ಸಂಪರ್ಕವನ್ನುಂಟು ಮಾಡುತ್ತದೆ.
 +
# Wikipedia ಒಂದು ವೆಬ್ ಸೈಟ್.
 +
# WWW  ಎಂದರೆ  ವರ್ಲ್ಡ್ ವೈಡ್ ವೆಬ್
 +
# URL ಎಂದರೆ ಅನ್ ನೋನ್ ರಿಸೋರ್ಸ್ ಲೊಕೇಟರ್.
 +
 +
'''ಪೂರಕ ಸಂಪನ್ಮೂಲ''':
 +
http://simple.wikipedia.org/wiki/Internet
 +
 +
== 5.ಮೈಂಡ್ ಮ್ಯಾಪಿಂಗ್ ==
 +
'''ಫ್ರೀ ಮೈಂಡ್ ನೊಂದಿಗೆ ಮೈಂಡ್ ಮ್ಯಾಪಿಂಗ್ '''
 +
'''ಅಧ್ಯಾಯದ ಉದ್ದೇಶಗಳು'''
 +
ಈ ಅಧ್ಯಾಯದಲ್ಲಿ ನೀವು: 
 +
# ಮೈಂಡ್ ಮ್ಯಾಪ್‌ನ  ಅರ್ಥ ತಿಳಿಯುವಿರಿ.
 +
# ಮೈಂಡ್ ಮ್ಯಾಪ್ ಅನ್ನು ಹೇಗೆ ಬಳಸುವುದು ಎಂದು ತಿಳಿಯುವಿರಿ.
 +
# ಫ್ರೀ ಮೈಂಡ್ ಎನ್ನುವ ತಂತ್ರಾಂಶದ ಅಫ್ಲಿಕೇಷನ್ ಬಳಸಿ ಮೈಂಡ್ ಮ್ಯಾಪ್‌ ರಚಿಸುವುದನ್ನು  ತಿಳಿಯುವಿರಿ.
 +
 +
'''ಮೈಂಡ್ ಮ್ಯಾಪ್ ಎಂದರೇನು?'''
 +
ನೀವು ಕಣ್ಣನ್ನು ಮುಚ್ಚಿ ಒಂದು ಪದವನ್ನು ಆಲೋಚಿಸಿ. ಉದಾಹರಣೆಗೆ ಸಸ್ಯ ಎನ್ನುವ ಪದದ ಬಗ್ಗೆ ಯೋಚಿಸಿ. ಸಸ್ಯ ಎನ್ನುವ ಪದವನ್ನು ಯೋಚಿಸಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಎಲ್ಲಾ ಪದಗಳನ್ನು  ಯೋಚಿಸಿ. ಈ ಎಲ್ಲಾ ಪದಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ಬರೆಯಿರಿ.
 +
 +
ಸಸ್ಯ ಎನ್ನುವ ಪದವನ್ನು ಯೋಚಿಸಿದಾಗ ನಿಮ್ಮ ಮನಸ್ಸಿಗೆ ಸಾಮಾನ್ಯವಾಗಿ ಬರುವ  ಪದಗಳೆಂದರೆ:
 +
ಸಸ್ಯ, ನೀರು, ದ್ಯುತಿಸಂಶ್ಲೇಷಣಾಕ್ರಿಯೆ, ಎಲೆ, ಹೂ, ಬೇರು, ಕಾಂಡ,  ಮಣ್ಣು , ಸೂರ್ಯನ ಬೆಳಕು,  ಇಂಗಾಲದ ಡೈ ಆಕ್ಸೈ ಡ್.
 +
 +
ನೀವು ನೆನಪಿಸಿಕೊಂಡ ಈ ಪದಗಳನ್ನು  ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಹುದು. ಈ ಪದಗಳನ್ನು  ಪರಿಕಲ್ಪನಾ ಪದಗಳು ಎನ್ನುತ್ತಾರೆ.
 +
ಪರಿಕಲ್ಪನೆ ಎಂದರೆ ಮನಸ್ಸಿನಲ್ಲಿ ನೆನಪಿಸಿಕೊಂಡ ಪದಗಳ ಬಗ್ಗೆ ವರ್ಣಿಸುವುದು ಎಂದರ್ಥ. ಯಾವುದೇ ಪದ ಅಥವಾ ವಿಷಯವನ್ನು  ಆಲೋಚಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಊಹೆ, ಉಪಾಯ, ನಂಬಿಕೆ, ಚಿತ್ರ ಅಥವಾ ಪ್ರತಿಬಿಂಬ ಆಗಿರುತ್ತದೆ.  ಉದಾರಹಣೆಗೆ ಸಸ್ಯಕ್ಕೆ  ಜೀವವಿರುವುದು  ಸಸ್ಯದ  ಒಂದು ಪರಿಕಲ್ಪನೆ .
 +
ಈಗ ಈ ಪದಗಳನ್ನು ಗಮನಿಸಿ:
 +
ಹೊಂದಿದೆ ----------->ಬಳಸುತ್ತದೆ------------ಅವಶ್ಯಕತೆ------------>ಮುಂದುವರಿಸುತ್ತದೆ.
 +
 +
ಈ ಪದಗಳು ಪರಿಕಲ್ಪನೆಯ ಪದಗಳಲ್ಲ, ಆದರೂ  ಎರಡು ಅಥವಾ ಹೆಚ್ಚು  ಪರಿಕಲ್ಪನೆಯ ಪದಗಳಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತವೆ. ಉದಾ: ಸಸ್ಯಗಳು ಬೇರುಗಳನ್ನು ,ಎಲೆಗಳನ್ನು,ಕಾಂಡ, ಹೂಗಳನ್ನು ಹೊಂದಿವೆ. ಆದ್ದರಿಂದ ಒಂದು ಪರಿಕಲ್ಪನೆಯ ಪದ ಬೇರೆಯ  ಪರಿಕಲ್ಪನೆಯ ಪದಕ್ಕೆ ಕೊಂಡಿಯಾಗಿರಬಹುದು ಇದನ್ನು ಪಕ್ಕದಲ್ಲಿ  ತೋರಿಸಿರುವ  ಚಿತ್ರದಂತೆ  ನಕ್ಷೆಯಾಗಿ  ತೋರಿಸಬಹುದು.
 +
 +
ಈ ಮೇಲಿನ ಚಿತ್ರಕ್ಕೆ ಅಥವಾ ನಕ್ಷೆಗೆ ಇನ್ನೂ ಹಲವು ಪರಿಕಲ್ಪನೆಯ ಪದಗಳನ್ನು ಸೇರಿಸಿ  ಸಸ್ಯ ಎಂಬ ವಿಷಯಕ್ಕೆ ಮೈಂಡ್ ಮ್ಯಾಪ್ ಅನ್ನು ರಚಿಸಬಹುದು.
 +
 +
ಒಂದು ವಿಷಯಕ್ಕೆ ಸಂಬಂಧಿಸಿದ ವಿವಿಧ ಪರಿಕಲ್ಪನೆಗಳನ್ನು ನಾವು ಅರ್ಥೈಸಿಕೊಂಡಂತೆ ಒಟ್ಟಾಗಿ  ಒಂದು ನಕ್ಷೆಯಡಿಯಲ್ಲಿ  ತರುವುದರಿಂದ  ಮೈಂಡ್ ಮ್ಯಾಪ್‌ಅನ್ನು ಪರಿಕಲ್ಪನಾ- ನಕ್ಷೆ ಎಂದೂ ಸಹ ಕರೆಯುತ್ತೇವೆ.
 +
 +
ಸಸ್ಯದ ಮೈಂಡ್ ಮ್ಯಾಪ್ ಮಾಡುವಾಗ ವರ್ಣಿಸಿದಂತಹ ಪದಗಳು ಮತ್ತು ಚಿತ್ರಸಿಕೊಂಡಂತಹ ಪದಗಳು ಚಿತ್ರ  2ಲ್ಲಿ ಇವೆ.
 +
 +
 +
 +
 +
 +
 +
 +
 +
 +
 +
ಚಿತ್ರ 1 ಮತ್ತು 2 ರಲ್ಲಿ ಏನೇನು ವ್ಯತ್ಯಾಸಗಳನ್ನು ಕಾಣುವಿರಿ? ಚಿತ್ರ 1 ರಲ್ಲಿ ಕಾಣುವ ಒಂದು ಸ್ಪಷ್ಟ ವ್ಯತ್ಯಾಸವೆಂದರೆ ಎಲ್ಲಾ ಪರಿಕಲ್ಪನೆಯ ಪದಗಳು ಮತ್ತು ಕೊಂಡಿಯಾಗಿ ವರ್ತಿಸಿದ ಪದಗಳನ್ನು ಪಟ್ಟಿ ಮಾಡದಿರುವುದು. ಇನ್ನೊಂದು ವ್ಯತ್ಯಾಸವೆಂದರೆ ಚಿತ್ರ 1 ರಲ್ಲಿ
 +
ಪೆನ್ನು ಮತ್ತು ಪೇಪರ್‌ಗಳನ್ನು ಬಳಸಿ ಫ್ರೀ ಹ್ಯಾಂಡ್‌ (Free hand) ಮೈಂಡ್ ಮ್ಯಾಪ್ ಅನ್ನು ಮಾಡಿದ್ದಾರೆ. ಎರಡನೆಯ ಚಿತ್ರದಲ್ಲಿ ಫ್ರೀ ಮೈಂಡ್ ಎನ್ನುವ  ತಂತ್ರಾಂಶದ ಅಫ್ಲಿಕೇಷನ್ ಬಳಸಿ  ಮೈಂಡ್ ಮ್ಯಾಪ್ ಅನ್ನು ರಚಿಸಿದ್ದಾರೆ.
 +
 +
 +
ಮೈಂಡ್ ಮ್ಯಾಪ್ ಏಕೆ ಪ್ರಯೋಜನವಾಗಿದೆ?
 +
*ನಿಮ್ಮ ಯೋಜನೆಗಳನ್ನು ವಿಸ್ತರಿಸಲು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸಲು ಬಳಸುತ್ತಾರೆ.
 +
ನೀವು ಕ್ರಮಬದ್ಧವಾಗಿ ಆಲೋಚಿಸುವ ಅಗತ್ಯವಿಲ್ಲ. ನಿಮ್ಮ ಮನಸ್ಸಿಗೆ ಬಂದ ಎಲ್ಲಾ ಶಬ್ದಗಳನ್ನು ಹಾಗೂ ಚಿಂತನೆಗಳನ್ನು ಪಟ್ಟಿಮಾಡಬಹುದು.
 +
ನೀವು ಪರಿಕಲ್ಪನೆಗಳನ್ನು  ಅರ್ಥೈಸಿಕೊಂಡ ರೀತಿಯಲ್ಲಿ ಅನಂತರ ಪದಗಳನ್ನು  ಕ್ರಮವಾಗಿ ಜೋಡಿಸಬಹುದು.
 +
ನೀವು ಪರಿಕಲ್ಪನಾ ನಕ್ಷೆಯನ್ನು  ಮಾಡುವಾಗ ನಿಮಗೆ ಹೆಚ್ಚಿನ ಆಲೋಚನೆಗಳು ಜ್ಞಾಪಕಕ್ಕೆ ಬರಬಹುದು ಅಥವಾ ನಿಮ್ಮ ಸ್ನೇಹಿತರೊಂದಿಗೆ ಈ ಆಲೋಚನೆಯನ್ನು ಹಂಚಿಕೊಳ್ಳಬಹುದು.  ಇದನ್ನು ಸುಲಭವಾಗಿ ನಿಮ್ಮ ನಕ್ಷೆಗೆ ಸೇರಿಸಬಹುದು.
 +
 +
 +
 +
==ಪ್ರಯೋಗಾಲಯದ ಅಭ್ಯಾಸಗಳು==
 +
ಫ್ರೀ ಮೈಂಡ್ ಎಂದರೇನು ಮತ್ತು ನಾನು ಅದನ್ನು ಹೇಗೆ ಬಳಸಬಹುದು?
 +
ಫ್ರೀ ಮೈಂಡ್ ಒಂದು ಸಾರ್ವಜನಿಕ ಶೈಕ್ಷಣಿಕ ಅಪ್ಲಿಕೇಷನ್ ತಂತ್ರಾಂಶದ ಸಾಧನವಾಗಿದ್ದು  ಇದನ್ನು ಮೈಂಡ್ ಮ್ಯಾಪ್ ಅನ್ನು  ರಚಿಸಲು ಮತ್ತು ಮೈಂಡ್ ಮ್ಯಾಪ್‌ನಲ್ಲಿ ತಿದ್ದುಪಡಿ ಮಾಡಲು ಬಳಸಬಹುದು. ಇದನ್ನು ಉಚಿತವಾಗಿ ಹಂಚಿಕೊಳ್ಳಬಹುದು.
 +
ಫ್ರೀ ಮೈಂಡ್ ಅನ್ನು ತೆರೆಯುವುದು
 +
ಉಬಂಟು ಮೆನುವನ್ನು ಆಯ್ಕೆಮಾಡಿ. ಅಪ್ಲಿಕೇಷನ್ → ಆಫೀಸ್ → ಫ್ರೀ ಮೈಂಡ್
 +
 +
 +
 +
 +
 +
 +
 +
ಫ್ರೀ ಮೈಂಡ್ ಒಂದು ಬಾರಿ ತೆರೆದ ನಂತರ ಹೆಲ್ಪ್ ಆಪ್ಷನ್‌ ಅನ್ನು ಆಯ್ಕೆಮಾಡಿ ಡಾಕ್ಯುಮೆಂಟೇಶನ್‌ ಮೇಲೆ ಕ್ಲಿಕ್‌ ಮಾಡಿ.  ಹೆಲ್ಪ್ (ಸಹಾಯ)→ದಾಖಲೀಕರಣ
 +
 +
==ಹೊಸ ಮೈಂಡ್ ಮ್ಯಾಪ್ಅನ್ನು  ರಚಿಸುವುದು==
 +
# ಮೊದಲು ಫ್ರೀ ಮೈಂಡ್ ಮೆನುವಿನಿಂದ ಮ್ಯಾಪ್ಸ್ →  ಮೈಂಡ್ ಮ್ಯಾಪ್ ಮೋಡ್.
 +
(ಶಾರ್ಟ್‌ ಕಟ್‌ ಕೀಗಳು  'Alt + 1' )
 +
# ಫೈಲ್ →ನ್ಯೂ
 +
(ಶಾರ್ಟ್‌ ಕಟ್‌ ಕೀಗಳು  'Ctrl + N' )
 +
ಈ ರೀತಿಯ ಒಂದು ಪರದೆಯನ್ನು ಕಾಣುವಿರಿ.
 +
 +
 +
 +
 +
 +
 +
'''ಮೈಂಡ್ ಮ್ಯಾಪ್ ಅನ್ನು ಬರೆಯಲು ಪ್ರಾರಂಭಿಸುವುದು''':
 +
# ಚಿತ್ರ 3ರಲ್ಲಿ ತೋರಿಸಿರುವಂತೆ ನ್ಯೂ ಮೈಂಡ್ ಮ್ಯಾಪ್ ಮೇಲೆ ಡಬಲ್‌ ಕ್ಲಿಕ್‌ ಮಾಡಿ.
 +
# ನ್ಯೂ ಮೈಂಡ್ ಮ್ಯಾಪ್  ನಲ್ಲಿರುವ ಪಠ್ಯವನ್ನು ಅಳಿಸಿ,  ಸಸ್ಯ ಎಂಬ ಮುಖ್ಯ ಪದವನ್ನು ಟೈಪ್‌ ಮಾಡಿ.
 +
 +
ಸಸ್ಯದ ನೋಡ್‌ (Parent node)  ಮೇಲೆ ನೀವು ಕರ್ಸರ್‌ ಅನ್ನು ತಂದು ಕೊಂಡಿ ಪದವನ್ನು ಸೇರಿಸಿ.
 +
ಈ ಕೆಳಗಿನ ಯಾವುದಾದರೊಂದು ಆಯ್ಕೆಯನ್ನು ಬಳಸಿ
 +
# ಎಡಿಟ್ →  ನ್ಯೂ ಚೈಲ್ಡ್  (ಶಾರ್ಟ್‌ ಕಟ್‌ ಕೀ 'Insert').
 +
# ಈಗ ನೀವು ಸಸ್ಯ ನೋಡ್‌ನ ಹೊಸದೊಂದು ಚೈ ಲ್ಡ್  ನೋ ಡ್ ಅನ್ನು ರಚಿಸಿದ್ದೀರಿ.
 +
# ಈ ನ್ಯೂನೋಡ್' ನಲ್ಲಿ 'Have' ಎಂಬ ಪಠ್ಯವನ್ನು ಟೈಪ್‌ ಮಾಡಿ.
 +
# ಫಾರ್ಮ್ಯಾಟ್  ಮೆನುವಿನಿಂದ →  ಫೋರ್ಕ್ ಆಪ್ಷನ್ ಅನ್ನು ಆಯ್ಕೆ ಮಾಡಿ.
 +
ಇನ್ನೊಂದು ಪರಿಕಲ್ಪನಾ ಪದವನ್ನು ಸೇರಿಸಲು ಕರ್ಸರ್‌ ಅನ್ನು  Have ನೋಡ್‌ (ಪೇರೆಂಟ್ ನೋಡ್)ನ ಮೇಲಿಡಿ ಮತ್ತು
 +
# ಎಡಿಟ್ ಮೆನುವಿನಲ್ಲಿ →  ನ್ಯೂ ಚೈಲ್ಡ್ ನೋಡ್ (ಶಾರ್ಟ್‌ ಕಟ್‌ ಕೀ 'Insert') ಆಪ್ಷನ್ ಅನ್ನು ಆಯ್ಕೆ ಮಾಡಿ.
 +
# 'Have' ನೋಡ್‌ ಗೆ  ನೀವು ಹೊಸದಾದ ನ್ಯೂ  ಚೈಲ್ಡ್ ಅನ್ನು  ಸೃಷ್ಠಿಸಿದ್ದೀರಿ.
 +
# ಕಾಂಡ ಎನ್ನುವ ಹೊಸ ವಿಷಯವನ್ನು ಹೊಸ ಘಟಕದಲ್ಲಿ ಸೇರಿಸಿ.
 +
# ಫಾರ್ಮ್ಯಾಟ್ ಮೆನುವಿನಲ್ಲಿ  → ಬಬಲ್ ಆಯ್ಕೆ ಮಾಡಿ.
 +
ಎಲೆಗಳು (Leaves) ಎಂಬ ಇನ್ನೊಂದು ಪರಿಕಲ್ಪನಾಪದವನ್ನು ಸೇರಿಸಲು ಕಾಂಡದ (ಸಿಬ್ಲಿಂಗ್ ನೋಡ್)ಮೇಲೆ  ಕರ್ಸರ್‌ ಅನ್ನು ಇರಿಸಿ ಕೆಳಗಿನ ಹಂತಗಳನ್ನು ಅನುಸರಿಸಿ.
 +
# ಎಡಿಟ್ ಮೆನುವಿನಲ್ಲಿ →  ನ್ಯೂ ಸಿಬ್ಲಿಂಗ್‌ ನೋಡ್ (ಶಾರ್ಟ್‌ ಕಟ್‌ ಕೀ 'Enter)ಅನ್ನು ಆಯ್ಕೆ ಮಾಡಿ.
 +
# ನೀವು ಹೊಸದಾದ  ಕಾಂಡ ಎಂಬ ನ್ಯೂ ಸಿಬ್ಲಿಂಗ್‌ ನೋಡ್ ಅನ್ನು  ಸೃಷ್ಠಿಸಿದ್ದೀರಿ.
 +
# ಈ ಹೊಸ ನೋಡ್‌ನಲ್ಲಿ ಎಲೆಗಳು ಎಂಬ ಪಠ್ಯವನ್ನು ಸೇರಿಸಿ.
 +
# ಫಾರ್ಮ್ಯಾಟ್ ಮೆನುವಿನಲ್ಲಿ  → ಬಬಲ್ ಆಯ್ಕೆ ಮಾಡಿ.
 +
 +
ಈ ರೀತಿ ನೀವು  ಸಸ್ಯದ ಸಂಪೂರ್ಣ ಮೈಂಡ್ ಮ್ಯಾಪ್ ಅನ್ನು ರಚಿಸಬಹುದು.
 +
 +
==ನಿಮ್ಮ ಫ್ರೀ ಮೈಂಡ್ ಮ್ಯಾಪ್ ಅನ್ನು ಸೇವ್ ಮಾಡುವುದು==
 +
# ಫೈಲ್ ಮೆನುವಿನಂದ → Save As ಆಯ್ಕೆ ಮಾಡಿ.
 +
# ಪಕ್ಕದಲ್ಲಿರುವಂತೆ ವಿಂಡೋ ಕಾಣಿಸುತ್ತದೆ.
 +
# ಫೋಲ್ಡರ್ ಬಾಕ್ಸ್ ನ ಮೇಲೆ ಡಬಲ್ ಕ್ಲಿಕ್ ಮಾಡಿ ನಿಮಗೆ  ಬೇಕಾದ  ಪೋಲ್ಡರ್  ಅನ್ನು ಆಯ್ಕೆ ಮಾಡಿ. ಇಲ್ಲಿ ಆಯ್ಕೆಯಾಗಿರುವ ಫೋಲ್ಡರ್  /ಹೋಮ್ /ಬಿಂದು/ಡಾಕ್ಯುಮೆಂಟ್ಸ್ ಆಯ್ಕೆಯಾಗಿರುತ್ತದೆ.
 +
 +
# ಬಾಕ್ಸ್ ನಲ್ಲಿ Plant(ಸಸ್ಯ) ಎಂದು ಕಡತದ ಹೆಸರನ್ನು ಟೈಪ್‌ ಮಾಡಿ.
 +
# ಓಕೆ (OK)ಯನ್ನು  ಕ್ಲಿಕ್  ಮಾಡಿ.
 +
# ಫ್ರೀ ಮೈಂಡ್ ವಿಂಡೋದ ಪ್ಯಾನೆಲ್‌ ನಲ್ಲಿ ಈಗ ನೀವು ಹೆಸರು ಬದಲಾಗುವುದನ್ನು ಗಮನಿಸುವಿರಿ ಮತ್ತು ಈಗ ಕಡತದ ಹೆಸರು ಯಾವ ಮಾರ್ಗದಲ್ಲಿ  ಸೇವ್‌ ಆಗಿದೆಯೊ ಆ ರೀತಿ  ಕಾಣಸಿಗುತ್ತದೆ.
 +
# ನಿಮ್ಮ ಕಡತವು (ಸಸ್ಯ) Plant.mm ಎಂದು ಸೇವ್ ಆಗಿರುತ್ತದೆ.  ಎಲ್ಲಾ ಫ್ರೀ ಮೈಂಡ್‌ಗಳ ಕಡತವು .mm ಎಂಬ ವಿಸ್ತರಣೆಯನ್ನು ಹೊಂದಿರುತ್ತವೆ.
 +
 +
'''ಫ್ರೀ ಮೈಂಡ್ ಮ್ಯಾಪ್ ಅನ್ನು ತೆರೆಯಲು'''
 +
# ಕಡತ  ಮೆನುವಿನಿಂದ  → ಓಪನ್ ಅನ್ನು ಆಯ್ಕೆ ಮಾಡಿ
 +
# ಒಂದು ವಿಂಡೊ ಕಾಣಿಸುತ್ತದೆ.
 +
# ನೀವು ಕಡತವನ್ನು ಸೇವ್ ಮಾಡಿದ ಫೋಲ್ಡರ್ ಅನ್ನು  ಆಯ್ಕೆಮಾಡಿ.
 +
# <ಫೈಲ್ ಹೆಸರು> .mm ಕಡತವನ್ನು  ಆಯ್ಕೆ ಮಾಡಿ. ಈ ಉದಾಹರಣೆಯಲ್ಲಿ ಸಸ್ಯ.mm( plant.mm) ಕಡತವಾಗಿದೆ.  ಓಕೆ( OK)ಯನ್ನು ಕ್ಲಿಕ್ ಮಾಡಿ.
 +
 +
==ಈ ಅಭ್ಯಾಸವನ್ನು  ಪ್ರಯೋಗಾಲಯದಲ್ಲಿ ಪ್ರಯತ್ನಿಸಿ==
 +
# 'ಸಾಗಣಿಕೆ' (Transport) ಎಂಬ ಶೀರ್ಷಿಕೆಯ  ಮೈಂಡ್‌ ಮ್ಯಾಪ್‌ ಅನ್ನು ರಚಿಸಿ. ಮನಸ್ಸಿನ ಪದಗಳ ಪಟ್ಟಿ  ಹೀಗಿದೆ: ಗಾಳಿ, ನಿಧಾನ, ಕಾರು, ಸಮುದ್ರ, ಪೆಟ್ರೋಲ್, ಏರೋಪ್ಲೇನ್, ವೇಗ, ಜಲಂತರ್ಗಾಮಿ, ಬೈಸಿಕಲ್, ಹಡಗು, ಹೆಲಿಕ್ಯಾಪ್ಟರ್, ಇಂಧನ, ನೀರು,ಡೀಸೆಲ್. ಇನ್ನೂ ನಿಮಗೆ ಮೈಂಡ್ ಪದಗಳು ದೊರೆಯುವುದಾದರೆ ಇದಕ್ಕೆ ಸೇರಿಸುವುದು. ನಿಮ್ಮದೇ ಆದ ಕೊಂಡಿ ಪದಗಳನ್ನು  ಬಳಸಿ ಫ್ರೀ ಮೈಂಡ್ ನಲ್ಲಿ ಮ್ಯಾಪ್ ಅನ್ನು ರಚಿಸಿ. ನಿಮ್ಮ ಕಡತಕ್ಕೆ  'ಸಾಗಣಿಕೆ' Transport.mm ಎಂದು ಹೆಸರಿಸಿ.
 +
 +
==ಅಧ್ಯಾಯದ ಸಾರಂಶ==
 +
# ಪರಿಕಲ್ಪನೆಗಳು: ಪರಿಕಲ್ಪನೆಗಳೆಂದರೆ ನಿಮ್ಮ ಮನಸ್ಸಿನಲ್ಲಿ ಮೂಡಿದ(ಭಾವನೆ) ಯೋಜನೆಗಳಿಗೆ ಅಥವಾ ಪದಗಳಿಗೆ ಚಿತ್ರಣವನ್ನು  ಕೊಡುವುದು  ಎಂದರ್ಥ. ನೀವು ಅರ್ಥಮಾಡಿಕೊಂಡಿರುವುದರ ಆಧಾರದ ಮೇಲೆ ಒಂದು  ಪರಿಕಲ್ಪನೆಯನ್ನು ಮತ್ತೊಂದು  ಪರಿಕಲ್ಪನೆಗೆ ಕೊಂಡಿ ಪದಗಳಿಂದ ಜೋಡಿಸಬಹುದು.  ಪರಿಕಲ್ಪನಾ ಪದಗಳಿಗೆ ಉದಾಹರಣೆಗಳೆಂದರೆ ಪ್ರಾಣಿ, ಸಸ್ಯ, ಆಹಾರ, ಸಸ್ತನಿಗಳು ಇತ್ಯಾದಿ., ಇವುಗಳಿಗೆ ಕೊಂಡಿ (ಸಂಬಂಧ)ಕೊಡುವ ಪದಗಳೆಂದರೆ ಹೊಂದಿರುವ, ಅವಲಂಬಿಸಿರುವ, ಭಾಗವಾಗಿರುವ ಇತ್ಯಾದಿ.,
 +
# ಮೈಂಡ್ ಮ್ಯಾಪ್ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳಿಗನುಗುಣವಾಗಿ ವಿವಿಧ ಪರಿಕಲ್ಪನೆಗಳಿಗೆ ಕೊಂಡಿಯನ್ನು (ಸಂಬಂಧ )ಕಲ್ಪಿಸಿ ಒಂದು ನಕ್ಷೆಯನ್ನು  (ಮೈಂಡ್ ಮ್ಯಾಪ್) ರಚಿಸುತ್ತದೆ. 
 +
# ಫ್ರೀ ಮೈಂಡ್ ಎನ್ನುವುದು ಒಂದು ಅಪ್ಲಿಕೇಷನ್ ತಂತ್ರಾಂಶವಾಗಿದ್ದು, ಗಣಕಯಂತ್ರದಲ್ಲಿ ಮೈಂಡ್ ಮ್ಯಾಪ್ ರಚಿಸಲು ಇದನ್ನು ಬಳಸುತ್ತಾರೆ. ನೀವು ಗಣಕಯಂತ್ರದಲ್ಲಿ ನಿಮ್ಮ ಮೈಂಡ್ ಮ್ಯಾಪ್‌ ಅನ್ನು ಸೇವ್ ಮಾಡಿದರೆ ಅದು ಡಿಜಿಟಲ್ ದಾಖಲೆಯಾಗಿದ್ದು ,ಅದನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು ಮತ್ತು ಅದನ್ನು ಹಂಚಿಕೊಳ್ಳಬಹುದು.
 +
# ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿಯಲು ಮೈಂಡ್ ಮ್ಯಾಪ್ ಗಳು ಹೇಗೆ ಪ್ರಯೋಜನಕಾರಿ: ನಿಮ್ಮ ಮನಸ್ಸಿನಲ್ಲಿ ಒಂದು ಘಟಕದ ಬಗ್ಗೆ ಬರುವಂತಹ ಆಲೋಚನೆಗಳನ್ನು ತೆಗೆದುಕೊಂಡು ಅವುಗಳನ್ನು  ಸಂಬಂಧೀಕರಿಸಿ ನೀವು ಹೇಗೆ ಅರ್ಥೈಸುವಿರಿ.  ನಿಮ್ಮ ಅರ್ಥವು ಸರಿಯಿಲ್ಲದಿದ್ದಾಗ,  ನಿಮ್ಮ ಶಿಕ್ಷಕರೊಡನೆ ಚರ್ಚಿಸಿ, ಅದು ಏಕೆ ಸರಿಯಿಲ್ಲ ಎಂಬ ಕಾರಣ ತಿಳಿಯುವಿರಿ ಮತ್ತು ತಪ್ಪಾಗಿ ಅರ್ಥಮಾಡಿಕೊಂಡಿದ್ದನ್ನು ಸರಿಪಡಿಸಿಕೊಳ್ಳುವಿರಿ.
 +
 +
'''ಅಭ್ಯಾಸಗಳು'''
 +
# ನಿಮ್ಮ ಆಯ್ಕೆಯ ವಿಷಯ ಅಥವಾ ಮುಖ್ಯ ಪರಿಕಲ್ಪನೆಯೆಂದರೆ ಪ್ರಾಣಿಗಳು. ಬೇರೆ ಬೇರೆ ಪ್ರಾಣಿಗಳೆಂದರೆ ಸರಿಸೃಪಗಳು, ಸಸ್ತನಿಗಳು, ಮೀನುಗಳು , ಹಕ್ಕಿಗಳು, ಉಭಯವಾಸಿಗಳು. ಪ್ರತಿ ವರ್ಗದ ಪ್ರಾಣಿಗಳ ಪಟ್ಟಿಮಾಡಿ. ಮೈಂಡ್ ಮ್ಯಾಪ್ ಅನ್ನು ನಿಮಗಾಗಿ ಪ್ರಾರಂಭಿಸಲಾಗಿದೆ. ಚಿತ್ರ 6ನ್ನು  ನೋಡಿ ನಿಮಗೆ ತಿಳಿದ ಪ್ರಾಣಿಗಳಿಂದ ಇದನ್ನು ಪೂರ್ಣಗೊಳಿಸಿ.
 +
ಈ ಮೈಂಡ್ ಮ್ಯಾಪ್ ನಲ್ಲಿ ಯಾವುದೇ ಕೊಂಡಿ ಪದಗಳು ಇಲ್ಲದಿರುವುದನ್ನು  ಗಮನಿಸಿರುವಿರಾ?  ಏಕೆಂದರೆ ನಾವು ಊಹಿಸಿರುವ ಎಲ್ಲಾ ಕೊಂಡಿಪದಗಳು ಟೈಪ್‌ ಆಗಿವೆ ಎಂದು ಭಾವಿಸೋಣ. ಇಲ್ಲದಿದ್ದರೂ ಅದನ್ನು ಇದೆ ಎಂದು ತಿಳಿದುಕೊಳ್ಳಬೇಕು, ಕೆಲವೊಂದು ಸಂದರ್ಭಗಳಲ್ಲಿ ಮೈಂಡ್ ಮ್ಯಾಪ್ ನಲ್ಲಿ ಕೊಂಡಿ ಪದಗಳು ಇಲ್ಲದೆ ಇರಬಹುದು. ಬೇರೆಯ ಕಲ್ಪನಾ ಪದಗಳು ಕೊಂಡಿ ಪದಗಳಿಲ್ಲದೆ ಹೇಗೆ ಸ್ಪಷ್ಟವಾಗಿ ಸಂಬಂಧಪಡುತ್ತವೆ ಎಂದು ತಿಳಿಯಬಹುದು.
 +
# 'ನನ್ನ ಹಳ್ಳಿ'  ಎನ್ನುವ ಶೀರ್ಷಿಕೆಯವನ್ನು ಆರಿಸಿಕೊಳ್ಳಿ. ನೀವು ದೊಡ್ಡ ನಗರ ಅಥವಾ ಪಟ್ಟಣದಲ್ಲಿ ವಾಸಿಸುತ್ತಿದ್ದರೆ 'ನನ್ನ ಪ್ರದೇಶ' ಎಂಬ ಶೀರ್ಷಿಕೆಯವನ್ನು ಆರಿಸಿಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಹಳ್ಳಿಯ/ಪ್ರದೇಶದ ಬಗ್ಗೆ  ಊಹಿಸಿಕೊಂಡು ಒಂದು ಮೈಂಡ್ ಮ್ಯಾಪ್ಅನ್ನು  ರಚಿಸಿ.
 +
ನಿಮ್ಮ ಶಿಕ್ಷಕರೊಂದಿಗೆ, ಗೆಳೆಯರೊಂದಿಗೆ, ಊರಿನ ಹಿರಿಯರೊಂದಿಗೆ ಚರ್ಚಿಸಿ  ಊರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಒಂದು ದೊಡ್ಡದಾದ ಸುಂದರವಾದ ಮೈಂಡ್ ಮ್ಯಾಪ್ ರಚಿಸಿ. ಇದು ಸಾಮಾನ್ಯ ಜನರದ್ದಾಗಿರಬಹುದು, ಪ್ರಾಣಿಗಳದ್ದಾಗಿರಬಹುದು, ಹೆಸರಾಂತ ವ್ಯಕ್ತಿಗಳದ್ದಾಗಿರಬಹುದು, ಚಿಕ್ಕ ಅಥವಾ ದೊಡ್ಡ ಸ್ಮಾರಕಗಳದ್ದಾಗಿರಬಹುದು, ಹಬ್ಬಗಳದ್ದಾಗಿರಬಹುದು ಅಥವಾ ನಿಮ್ಮ ಹಳ್ಳಿಯ/ಪ್ರದೇಶದ ವೈಶಿಷ್ಟ್ಯತೆಯನ್ನು ಹೇಳುವಂತಹದ್ದಾಗಿರಬಹುದು.
 +
 +
==ಪೂರಕ ಸಂಪನ್ಮೂಲಗಳು== 
 +
ಈ ಕೆಳಗಿನ ವೆಬ್ ಸೈಟ್ ಗಳನ್ನು  ಹೆಚ್ಚಿನ  ಮೈಂಡ್ ಮ್ಯಾಪ್ ರಚಿಸಲು ಸಂಪರ್ಕಿಸಿ.
 +
#http://www.gnowledge.org/   
 +
#  http://rmsa.karnatakaeducation.org.in
 +
 +
= 6.ಗಣಕಯಂತ್ರಆಧಾರಿತ ಕಲಿಕೆ=
 +
==ಜಿಯೋಜೀಬ್ರಾವನ್ನು ಬಳಸಿ ರೇಖಾಗಣಿತವನ್ನು ಕಲಿಯುವುದು==
 +
'''ಅಧ್ಯಾಯದ ಉದ್ದೇಶಗಳು'''
 +
ಈ ಅಧ್ಯಾಯದಲ್ಲಿ ನೀವು ಕಲಿಯುವ ಅಂಶಗಳೆಂದರೆ,
 +
# ಗಣಿತವನ್ನು ಗಣಕಯಂತ್ರ ಬಳಸಿ  ಕಲಿಯುವುದು ಹೇಗೆ ಎಂದು ತಿಳಿಯುವಿರಿ.
 +
# ಜಿಯೋಜೀಬ್ರಾ ಎಂಬ ಗಣಿತದ ಒಂದು ತಂತ್ರಾಂಶ ಅಫ್ಲಿಕೇಷನ್‌ನಿಂದ ರೇಖಾಗಣಿತ ,ಬೀಜಗಣಿತ ಮತ್ತು ಸಂಖ್ಯಾಶಾಸ್ರ್ತ ವನ್ನು ಕಲಿಯುವ ಬಗ್ಗೆ ತಿಳಿಯುವಿರಿ.
 +
# ಜಿಯೋಜೀಬ್ರಾವನ್ನು  ಹೇಗೆ ಬಳಸುವುದೆಂದು ತಿಳಿಯುವಿರಿ.
 +
# ಜಿಯೋಜೀಬ್ರಾವನ್ನು ಗಣಿತ ತರಗತಿಯಲ್ಲಿ ಕಲಿಸುವ ರೇಖಾಗಣಿತದ ಕಲ್ಪನೆ ಮತ್ತು ಗುಣಲಕ್ಷಣಗಳನ್ನು ಉತ್ತಮವಾಗಿ  ಅರ್ಥೈಸಿಕೊಳ್ಳಲು  ಅನ್ವಯಿಸುವುದನ್ನು ತಿಳಿಯುವಿರಿ.
 +
 +
ಗಣಿತವನ್ನು ಕಲಿಯಲು ನಾವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ICT)ಗಳನ್ನುಹೇಗೆ ಬಳಸಬಹುದು?
 +
ಇತ್ತೀಚಿನ ದಿನಗಳಲ್ಲಿ ನಾವು ಗಣಕಯಂತ್ರವನ್ನು  ಎಲ್ಲೆಡೆ  ಕಾಣುತ್ತಿದ್ದೇವೆ ಮತ್ತು  ನಮ್ಮ ದಿನನಿತ್ಯದ ಜೀವನದಲ್ಲಿ  ಗಣಕಯಂತ್ರಗಳು ಮಹತ್ವದ ಪಾತ್ರವನ್ನು  ವಹಿಸುತ್ತಿವೆ ಎಂಬ ಅಂಶವನ್ನು ಅರಿತಿದ್ದೇವೆ.  ಇಲ್ಲಿಯವರೆಗೂ ನಾವು ಗಣಕಯಂತ್ರವನ್ನು ದಾಖಲೆಯನ್ನು ಬರೆಯಲು ಹೇಗೆ ಬಳಸುವುದೆಂದು ತಿಳಿದಿದ್ದೇವೆ. ಇದನ್ನು ಟೆಕ್ಸ್ಟ್ ಪ್ರೋಸೆಸಿಂಗ್‌ ಎನ್ನುತ್ತಾರೆ.  ಮಾಹಿತಿಯನ್ನು ಓದಲು ಅಂತರ್ಜಾಲವನ್ನು ಬಳಸಿದ್ದೇವೆ.  ನಾವು ಕೆಲವು ವಿಡಿಯೋಗಳನ್ನು ನೋಡಿರಬಹುದು, ಸಂಗೀತವನ್ನು ಕೇಳಿರಬಹುದು. ತರಗತಿ ಪಾಠಗಳ ಬಗ್ಗೆ ಕೆಲವು ಸಿ ಡಿ ಗಳನ್ನು  ನೋಡಿರಬಹುದು. ನೀವು ಗಣಕಯಂತ್ರದಲ್ಲಿ ಆಟಗಳನ್ನೂ ಸಹ ಆಡಿರಬಹುದು. ನೀವು ಕ್ಯಾಲ್‌ಕ್ಯುಲೇಟರ್ ಅನ್ನು ನೋಡಿದ್ದೀರಾ ಆಥವಾ ಬಳಸಿದ್ದೀರಾ? ಅಂಕಗಣಿತ ಸಮಸ್ಯೆಗಳನ್ನು ಮಾಡುವುದಕ್ಕೆ ಇರುವ ಸಾಧನವೇ ಕ್ಯಾಲ್‌ಕ್ಯುಲೇಟರ್.  ಈಗ  ಈ ಕ್ಯಾಲ್‌ಕ್ಯುಲೇಟರ್‌ಗಳು ಗಣಕಯಂತ್ರದಲ್ಲಿ ಮತ್ತು ಮೊಬೈಲ್‌ಗಳಲ್ಲಿ ದೊರೆಯುತ್ತವೆ. ಜಿಯೋಜೀಬ್ರಾ ಎನ್ನುವ ತಂತ್ರಾಂಶ ಅಪ್ಲಿಕೇಷನ್ ಅನ್ನು ಬಳಸಿ ಈಗ ನೀವು ಗಣಿತದ ವಿಭಾಗಗಳಾದ ರೇಖಾಗಣಿತ, ಬೀಜಗಣಿತ, ಸಂಖ್ಯಾಶಾಸ್ರ್ತ ಗಳ ಬಗ್ಗೆ ಕಲಿಯಬಹುದಾಗಿದೆ. ಇದು ರೇಖಾಗಣಿತದ ಪರಿಕಲ್ಪನೆಗಳನ್ನು ಕಲ್ಪಿಸಿಕೊಳ್ಳಲು  ಮತ್ತು ವಿವಿಧ ರೇಖಾಚಿತ್ರಗಳಾದ ಸರಳ ರೇಖೆ,  ತ್ರಿಭುಜಗಳು ಮತ್ತು ಕಿರಣಗಳ ಗುಣಲಕ್ಷಣಗಳನ್ನು  ಅವಲೋಕಿಸಲು ಸಹಾಯಕವಾಗಿವೆ.
 +
 +
'''ಜಿಯೋಜೀಬ್ರಾ ಎಂದರೇನು?'''
 +
ಇದನ್ನು ರೂಪಿಸಿದಂತಹ ವ್ಯಕ್ತಿಗಳು ಇದಕ್ಕೆ ಜಿಯೋಜೀಬ್ರಾ ಎಂದು ಏಕೆ ಹೆಸರನ್ನು ಇಟ್ಟಿರಬಹುದು, ಊಹಿಸಬಲ್ಲಿರಾ? ಜಿಯೋಮೆಟ್ರಿ (ರೇಖಾಗಣಿತ) ಎನ್ನುವುದರ ಸಂಕ್ಷಿಪ್ತ ಪದ ಜಿಯೋ ಮತ್ತು ಆಲ್ ಜಿಬ್ರಾ (ಬೀಜಗಣಿತ)ಎನ್ನುವುದರ ಸಂಕ್ಷಿಪ್ತ ಪದ ಜೀಬ್ರಾ. ಎಲ್ಲಾ ರೇಖಾಗಣಿತದ ಚಿತ್ರಗಳನ್ನು ಬೀಜಗಣಿತದ ಸಮೀಕರಣದ ರೂಪದಲ್ಲಿ ಪ್ರತಿನಿಧಿಸಬಹುದೆಂಬ ವಿಷಯವು ನಿಮಗೆ ಗೊತ್ತೇ? ಜಿಯೋ ಜೀಬ್ರಾವು  ರೇಖಾ ಗಣಿತದ ಚಿತ್ರವನ್ನು ಮತ್ತು ಅದರ ಬೀಜಗಣಿತದ ಸಮೀಕರಣವನ್ನು ಒಟ್ಟಿಗೆ ನೋಡಲು ಸಹಾಯಕವಾಗಿದೆ. ಆದುದರಿಂದ ಇದನ್ನು  ಜಿಯೋಜೀಬ್ರಾ ಎನ್ನುತ್ತಾರೆ.
 +
 +
 +
ಈ ಬೀಜಗಣಿತದ ಸಮೀಕರಣವನ್ನು ನೋಡಿ y=mx+c.  ರೇಖಾಗಣಿತದಲ್ಲಿ ಇದರ ಅರ್ಥ- ಸರಳರೇಖೆ. ಇದೇ ರೀತಿ, ಹಲವಾರು ಬೀಜಗಣಿತದ ಸಮೀಕರಣಗಳನ್ನು  ರೇಖಾಗಣಿತದ ರೂಪದಲ್ಲಿ  ಸೂಚಿಸಬಹುದು. ಅದೇ ರೀತಿ ಯಾವುದೇ ರೇಖಾ ಚಿತ್ರಕ್ಕೆ ನೀವು ಬೀಜಗಣಿತದ ಸಮೀಕರಣವನ್ನು  ಬರೆಯಬಹುದು.
 +
 +
ಈ ಅಧ್ಯಾಯದಲ್ಲಿ ನೀವು ರೇಖಾಗಣಿತದ ಪರಿಕಲ್ಪನೆಗಳನ್ನು ಜಿಯೋಜೀಬ್ರಾ ಬಳಸಿ ತಿಳಿಯುವಿರಿ. ಜಿಯೋಜೀಬ್ರಾದಲ್ಲಿ ನೀವು ರೇಖಾಗಣಿತದ ಚಿತ್ರಗಳನ್ನು  ಸಜೀವಗೊಳಿಸಬಹುದು (animate).  ಕೆಲವು ಬೆಲೆಗಳಾದ ಉದ್ದ, ವಿಸ್ತೀರ್ಣ, ಸುತ್ತಳತೆಯನ್ನು ಕ್ರಿಯಾತ್ಮಕವಾಗಿ(dynamically) ಬದಲಾಯಿಸಿ ಒಂದೇ ಚಿತ್ರವನ್ನು ವಿವಿಧ ರೀತಿಯಲ್ಲಿ ಕಾಣಬಹುದು.
 +
 +
 +
ರೇಖಾಗಣಿತದ ರಚನೆಯನ್ನು ನಮ್ಮ ನೋಟ್‌ ಪುಸ್ತಕದಲ್ಲಿ ಮಾಡಲು ಕಾಂಪಾಸ್‌ ಬಾಕ್ಸ್ ಬೇಕಾಗುತ್ತದೆ ಎಂದು ನಮಗೆ ಗೊತ್ತಿದೆ. ಈಗಲೂ ಕಾಂಪಾಸ್‌ ಬಾಕ್ಸ್ ಬೇಕಾಗುತ್ತದೆ ಎಂಬುದು ನಿಮಗೆ ನೆನಪಿರಲಿ. ಜಿಯೋಜೀಬ್ರಾದಲ್ಲಿ ಮಾಡುವ ರಚನೆಗಳನ್ನು ರೇಖಾಗಣಿತದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಬಳಸಬೇಕು.
 +
 +
 +
 +
ಆನಿಮೇಟ್ ಎಂದರೆ ಜೀವ ಕೊಡುವುದು ಎಂದರ್ಥ. ನೀವು ದೂರದರ್ಶನದಲ್ಲಿ ಕಾರ್ಟೂನ್ ಚಿತ್ರಗಳನ್ನು ನೋಡಿರಬಹುದು (ಅವು ತಮ್ಮ ಅಂಗಾಂಗಗಳನ್ನು ಚಲಿಸುತ್ತವೆ, ನಡೆಯುತ್ತವೆ, ನೆಗೆಯುತ್ತವೆ, ಬಾಯಿಯನ್ನು ಆಡಿಸುತ್ತವೆ, ಕೈಕಾಲುಗಳನ್ನು ಅಲುಗಾಡಿಸುತ್ತವೆ.). ಇದೆಲ್ಲಾ ಸಾಧ್ಯವಾದದ್ದು  ಕಲಾಕೃತಿ ವಿನ್ಯಾಸಕ/ಆನಿಮೇಟರ್ ಗಣಕಯಂತ್ರದಲ್ಲಿ ಮಾಡಿದ್ದರಿಂದ.
 +
ಜಿಯೋಜೀಬ್ರಾದಲ್ಲಿ ಡೈನಮಿಕ್ ಚೇಂಜ್, ಎಂದರೆ ಚಿತ್ರಗಳನ್ನು ನೀವು ಬದಲಿಸಿದಂತೆ / ಸ್ಥಳಾಂತರ ಗೊಳಿಸಿದಂತೆ  ರೇಖಾಗಣಿತದ ಚಿತ್ರದ ಗುಣಲಕ್ಷಣಗಳು ಬದಲಾಗುತ್ತದೆ..
 +
 +
==ಪ್ರಯೋಗಾಲಯದ ಅಭ್ಯಾಸಗಳು==
 +
==ಪೀಠಿಕೆ==
 +
'''ಜಿಯೋಜೀಬ್ರಾದ ವಿಂಡೋ''': ಗಣಿತದ ವಿವಿಧ ಆಬ್ಜೆಕ್ಟ್ ಗಳನ್ನು ವಿವಿಧ ರೀತಿಯಲ್ಲಿ ಪ್ರತಿನಿಧಿಸಲು ಜಿಯೊಜೀಬ್ರಾದ ಪರದೆಯನ್ನು  ಅನೇಕ ಭಾಗಗಳಾಗಿ  ವಿಂಗಡಿಸಲಾಗಿದೆ. ಈ ಭಾಗಗಳನ್ನು ಕೆಳಗೆ ನೀಡಲಾಗಿದೆ.
 +
'''ಮೆನು ಬಾರ್''': ಇದು ಸಾಮಾನ್ಯ ಎಲ್ಲಾ ವಿಂಡೋಸ್‌ನಲ್ಲಿ  ಕಾಣುವ  ಮೆನು ಬಾರ್ ಆಗಿದ್ದು, ಕಡತ, ಎಡಿಟ್ ,ವ್ಯೂ (view) ಇತ್ಯಾದಿ., ಇವೆಲ್ಲವೂ ಮೆನುವಿನ ಭಾಗಗಳು.
 +
'''ಟೂಲ್ ಬಾರ್''': ಗ್ರಾಫಿಕ್‌ ವ್ಯೂನಲ್ಲಿ  ನೋಡುವಂತಹ ಎಲ್ಲಾ  ಸಾಧನಗಳನ್ನು (ಕಾಂಪಾಸ್‌ ಬಾಕ್ಸ್) ಒಳಗೊಂಡಿದೆ.
 +
'''ಆಕ್ಟಿವ್ ಟೂಲ್ ವ್ಯೂ''': ಇದು ಗ್ರಾಫಿಕ್‌ವ್ಯೂ (ನೋಟ)ನಲ್ಲಿ ಯಾವ ಸಾಧನ ಬಳಸಿದರೆ ಉತ್ತಮ ಮತ್ತು ಅದನ್ನು ಹೇಗೆ ಬಳಸುವುದೆಂದು ತಿಳಿಸುತ್ತದೆ.
 +
'''ಗ್ರಾಫಿಕ್ ವ್ಯೂ''':  ರೇಖಾಗಣಿತ ಚಿತ್ರಗಳನ್ನು ರಚಿಸಲು ಇದನ್ನು  (ಜಿಯೋಜೀಬ್ರಾದಲ್ಲಿ ಆಬ್ಜೆಕ್ಟ್ (object) ಎನ್ನು ತ್ತಾರೆ.) ಬಳಸುತ್ತಾರೆ. ಈ ವಿಂಡೋವನ್ನು ಎಂದೂ ಮುಚ್ಚಲಾಗುವುದಿಲ್ಲ.
 +
'''ಆಲ್‌ಜೀಬ್ರಾ ವ್ಯೂ''': ಇದು ಬೀಜಗಣಿತದ ಬೀಜೋಕ್ತಿಗಳನ್ನು ತೋರಿಸುತ್ತದೆ. ರೇಖಾಗಣಿತದಲ್ಲಿ ನೀವು ಕೆಲಸ ಮಾಡುವಾಗ ಈ ವಿಂಡೋವನ್ನು ಮುಚ್ಚಿಟ್ಟಿರಬಹುದು.
 +
ಇನ್‌ಪುಟ್ ಟೂಲ್‌ ನಲ್ಲಿ ಇಲ್ಲದಿರುವಂತಹ ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಇಲ್ಲಿ ಅಳವಡಿಸಲು ಅವಕಾಶವಿದೆ.
 +
ಕಮ್ಯಾಂಡ್ಸ್  ಪಟ್ಟಿಯಿಂದ ದೊರೆಯುವ ಆಯ್ಕೆಗಳನ್ನು ಬಳಸಲು ಇನ್ ಪುಟ್ ಬಾರ್‌ನ ಜೊತೆ ಇದನ್ನು ಬಳಸುತ್ತಾರೆ.
 +
''''ಟೂಲ್ ಬಾರ್''' : ಇದು ಜಿಯೊಜೀಬ್ರಾದ ಕಾಂಪಾಸ್‌ ಬಾಕ್ಸ್ ಆಗಿದೆ.
 +
 +
ಪ್ರತಿಯೊಂದು ಉಪಕರಣವು(tool), ಅದರಡಿಯಲ್ಲಿ ಅನೇಕ ಸಂಬಂಧಪಟ್ಟ ಇತರ ಉಪಕರಣಗಳನ್ನು ಹೊಂದಿದೆ. ಸಂಬಂಧಪಟ್ಟ ಉಪಕರಣಗಳನ್ನು ನೋಡಲು ಕೆಳಭಾಗದಲ್ಲಿರುವ  ಬಲಗೈ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿದಾಗ ಪ್ರತಿಯೊಂದು ಉಪಕರಣವೂ ಕೆಳಗೆ ಕಾಣಿಸುತ್ತದೆ.
 +
 +
==ಉಪಕರಣಗಳ ಮೂಲ ಬಳಕೆ==
 +
ಸಂಬಂಧಪಟ್ಟ ಐಕಾನ್ ಮೇಲೆ ನೀವು ಕ್ಲಿಕ್ ಮಾಡಿದಾಗ  ಆ ಉಪಕರಣ  ಕ್ರಿಯಾಶೀಲವಾಗುತ್ತದೆ.
 +
ಬಟನ್‌ನ ಕೆಳಭಾಗದಲ್ಲಿ ಕ್ಲಿಕ್ ಮಾಡಿ ಟೂಲ್ ಬಾಕ್ಸ್ ಅನ್ನು ತೆರೆಯಬಹುದು.
 +
ಈ ಟೂಲ್ ಬಾಕ್ಸ್ ನಿಂದ ಮತ್ತೊಂದು ಉಪಕರಣವನ್ನು ಆಯ್ಕೆಮಾಡಿ.
 +
 +
 +
==ಈ ಪರದೆಯನ್ನು ನೋಡಿ==
 +
ಜಿಯೊಜೀಬ್ರಾದಲ್ಲಿ ಗ್ರಾಫಿಕ್ ವ್ಯೂ ಅನ್ನು ಮಾತ್ರ ಮುಚ್ಚಲಾಗುವುದಿಲ್ಲ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಪರದೆಯನ್ನು ಚೆನ್ನಾಗಿ ಕಾಣುವ ಹಾಗೆ ಮಾಡಿಕೊಳ್ಳಬಹುದಾಗಿದೆ. ವ್ಯೂ (view)ಮೆನುವನ್ನು ಒತ್ತಿ ಮತ್ತು ಬೀಜಗಣಿತದ ವ್ಯೂ ರೇಖೆಗಳು, ಅಕ್ಷಗಳನ್ನು (axes) ಮತ್ತು ಚೌಕಳಿಗಳನ್ನು (grid-ಅಡ್ಡ ಮತ್ತು ಉದ್ದಕ್ಕೆ ಸಮಾಂತರವಾಗಿ ಅಳವಡಿಸಿರುವ ಚೌಕಳಿ ಮನೆಗಳು) ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ರದರ್ಶಿತವಾಗುವ  ಅಥವಾ ಪ್ರದರ್ಶಿತವಾಗದ ರೀತಿಯಲ್ಲಿ  ನೋಡಿಕೊಳ್ಳಬಹುದು(ಚೆಕ್ ಬಾಕ್ಸ್ ಅನ್ನು ಕ್ಲಿಕ್ ಅಥವಾ ಅನ್ ಕ್ಲಿಕ್ ಮಾಡಿ).
 +
==ಜಿಯೊಜೀಬ್ರಾದ ಅಭ್ಯಾಸಗಳು==
 +
# ಬಿಂದುಗಳನ್ನು , ರೇಖಾಖಂಡಗಳನ್ನು ಮತ್ತು ಕಿರಣಗಳನ್ನು ರಚಿಸುವುದು.
 +
 +
 +
 +
 +
 +
ರೇಖಾಚಿತ್ರಗಳನ್ನು ರಚಿಸುವಾಗ ಬಳಸುವ ಸಾಮಾನ್ಯ ಸಾಧನಗಳನ್ನು  ಹೇಗೆ ಜಿಯೊಜೀಬ್ರಾದಲ್ಲಿ ಬಳಸುವುದೆಂದು ತಿಳಿಯುವಿರಿ.
 +
# ಪಾಯಿಂಟ್ ಟೂಲ್ಅನ್ನು ಮೊದಲು ಆಯ್ಕೆಮಾಡಿ.  A, B, C, D, E, F ಎಂಬ ಆರು ಬಿಂದುಗಳನ್ನು ರಚಿಸಲು ಡ್ರಾಯಿಂಗ್‌ ಪಾಯಿಂಟ್‌ನ  ಮೇಲೆ  ಎಲ್ಲಿಯಾದರೂ (ಆರು ಪಾಯಿಂಟ್‌ಗಳನ್ನು ) ಕ್ಲಿಕ್ ಮಾಡಿ.

ಸಂಚರಣೆ ಪಟ್ಟಿ