ಬದಲಾವಣೆಗಳು

Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:     
=ಸಾರಾಂಶ=
 
=ಸಾರಾಂಶ=
 +
ಸರಳ ಗಧ್ಯನುವಾದಕ್ಕೆ ಕನ್ನಡ ದೀವಿಗೆಯ ಸಹಾಯ ಪಡೆಯಲಾಗಿದೆ
 +
 +
'''ಅಂತರಾಳ ಗದ್ಯಭಾಗದ ಸರಳ ಗದ್ಯಾನುವಾದ'''
 +
 +
ಹೀಗೆ ಬಂದೊದಗಿದ ಚಳಿಗಾಲದಲ್ಲಿ ರಾಘವನ ಯಜ್ಞಾಶ್ವವು ಅರಣ್ಯಕ ಎಂಬ ತಪಸ್ವಿಯ ಪವಿತ್ರ ಆಶ್ರಮಕ್ಕೆ ಪ್ರವೇಶಿಸುತ್ತಿರುವುದನ್ನು ಕಂಡು ಶತ್ರುಘ್ನ ಮೊದಲಾದವರು (ಜಾಂಬವ, ಹನುಮಂತ, ಸುಗ್ರೀವಾದಿ ಕಪಿವೀರರು ಮೊದಲಾದವರು) ಮುನಿಗಳ ದರ್ಶನಕ್ಕೆಂದು ಆಶ್ರಮದ ಒಳಗೆ ಹೋದರು. ತಪಸ್ವಿಗಳ ಕಾಲಿಗೆ ಬಿದ್ದು ನಮಸ್ಕರಿಸಿದರು. ಆಕಸ್ಮಿಕವಾಗಿ ಆಗಮಿಸಿದ ಈ ಅತಿಥಿಗಳನ್ನು ಅರಣ್ಯಕ ಮುನಿಗಳು ಬಹಳ ಗೌರವದಿಂದ ಬರಮಾಡಿಕೊಂಡು ತಮ್ಮ ಆತಿಥ್ಯದಿಂದ ಸತ್ಕರಿಸಿದರು. ನಂತರ ಶ್ರೀರಾಮನನ್ನು ಕುರಿತ ಸತ್ಕಥೆಯ ವಿನೋದವಾದ ಸಂಭಾಷಣೆಯಲ್ಲಿ...... [ಹೀಗೆ ಕಥೆ ಹೇಳುತ್ತಿದ್ದ ಮುದ್ದಣನು ಇನ್ನು ಮುಂದುವರಿದು ಏನೋ ಹೇಳಬೇಕೆಂದು ಮಾತು ಮುಂದುವರಿಸುತ್ತಿರುವಾಗ ಮನೋರಮೆಗೆ ಮಧ್ಯದಲ್ಲಿ ಸಂಶಯವುಂಟಾಗಿ ಮುದ್ದಣನನ್ನು ಮುಂದಿನಂತೆ ಕೇಳುತ್ತಾಳೆ. ಆಗ ಅವರಿಬ್ಬರ ಸಲ್ಲಾಪ ಆರಂಭವಾಗುತ್ತದೆ.]
 +
 +
'''ಮನೋರಮೆ :'''  ನನ್ನ ಚೆಲುವ! ಆತಿತ್ಯವೆಂದರೇನು? ಬರಿಯ ಬಾಯುಪಚಾರವೇ?
 +
 +
'''ಮುದ್ದಣ:''' ಅಲ್ಲ ಅಲ್ಲ, ಬರಿಯ ಬಾಯುಪಚಾರವಲ್ಲ. ಬಂದವರಿಗೆ ಕೈಗೆ, ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ, ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ, ಹೂವಿನಿಂದ ಅಲಂಕರಿಸಿ, ಪರಿಮಳಭರಿತವಾದ ಶ್ರೀಗಂಧವನ್ನು ಸಿಂಪಡಿಸಿ, ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ, ಗೌರವಿಸುವುದು.
 +
 +
'''ಮನೋರಮೆ:''' ಹಾಗಿದ್ದರೆ, ಶತ್ರು ಸಂಹಾರಮಾಡುವಂತಹ ಸಾವಿರ ಸಾವಿರ ಲೆಕ್ಕದಲ್ಲಿದ್ದ ಅಷ್ಟೊಂದು ದೊಡ್ಡ ಸೈನ್ಯಕ್ಕೆ ಅನ್ನ-ನೀರು ಕೊಟ್ಟು (ಊಟಕೊಟ್ಟು) ತೃಪ್ತಿಪಡಿಸಿದನೆ?
 +
 +
'''ಮುದ್ದಣ:''' ಹೌದು ಹೌದು. ಸಾಕಷ್ಟು ರುಚಿಕರವಾದ ಭೋಜನದಿಂದ ಎಲ್ಲರನ್ನು ತೃಪ್ತಿಪಡಿಸಿದನು.
 +
 +
'''ಮನೋರಮೆ:''' ನನಗೆ ಇದು ಆಶ್ಚರ್ಯವೆನಿಸುತ್ತಿದೆ. ಅವನಿಗೆ (ಮುನಿಗೆ) ಇದು ಹೇಗೆ ಸಾಧ್ಯವಾಯಿತು?
 +
 +
'''ಮುದ್ದಣ:''' ಮತ್ತೇನು! ಮುನಿಗಳ ಒಂದು ಜಪ-ತಪ-ಮಂತ್ರದ ಶಕ್ತಿಯೇನು ಕಿರಿದೇ? ಬೇಡಿದ ದ್ರವ್ಯವನ್ನು (ವಸ್ತುವನ್ನು) ಕೂಡಲೆ ತಂದುಕೊಡುವುದು.
 +
 +
'''ಮನೋರಮೆ:''' ಅಷ್ಟೊಂದು ಶ್ರೇಷ್ಠವೇ! ಯಾವು ಆ ಮಂತ್ರ.
 +
 +
'''ಮುದ್ದಣ:''' ಯಾವುದೆಂದರೆ! ಏಕಾಕ್ಷರಿ(ಒಂದು ಅಕ್ಷರದ ಮಂತ್ರ –ಉದಾ: ಓಂ), ದ್ವ್ಯಕ್ಷರಿ (ಎರಡು ಅಕ್ಷರದ ಮಂತ್ರ. ಉದಾ: ರಾಮ ನಾಮ), ತ್ರ‍್ಯಕ್ಷರಿ (ಮೂರು ಅಕ್ಷರದ ಮಂತ್ರ. ಉದಾ: ಶಿವಾಯ), ಚತುರಾಕ್ಷರಿ (ಉದಾ: ನಾರಾಯಣ), ಪಂಚಾಕ್ಷರಿ (ಉದಾ: ನಮಃ ಶಿವಾಯ), ಷಡಕ್ಷರಿ (ಉದಾ: ಓಂ ನಮಃ ಶಿವಾಯ) ಮುಂತಾದ ಪ್ರಸಿದ್ಧ ಮಂತ್ರಗಳು ಇರುವವಲ್ಲವೇ.
 +
 +
'''ಮನೋರಮೆ:''' ಓಹೋ! ಇಷ್ಟೊಂದು ಜಪದ ಶಕ್ತಿಯ ಸಹಾಯ ಇರುವುದರಿಂದಲೇ ತಪಸ್ವಿಗಳು ಬೇರೊಂದರ ಚಿಂತೆಯಿಲ್ಲದಂತೆ ಇದ್ದಾರೆ.
 +
 +
'''ಮುದ್ದಣ:''' ಹೌದೌದು. ತಪ್ಪೇನು?
 +
 +
'''ಮನೋರಮೆ:''' ಅದು ಹಾಗಿರಲಿ(ಆ ಮಾತು ಹಾಗಿರಲಿ). ನಿನ್ನಂತಹ ಕವಿಗಳು ತಮ್ಮ ಮನೆ-ಸಂಸಾರದ ಬಗ್ಗೆ ಸ್ವಲ್ಪವೂ ಚಿಂತೆಮಾಡದೆ, ಸುಮ್ಮಸುಮ್ಮನೆ ಹಾಳು ಕಥೆ-ಕಾವ್ಯದಲ್ಲಿ ಭ್ರಮೆಗೊಂಡಿದ್ದಾರಲ್ಲಾ. ಅವರಿಗೇನು ಬಟ್ಟೆಯೋ, ಉಣ್ಣಲು-ತನ್ನಲು ಏನುಮಾಡುವುದು? ಆದ್ದರಿಂದ ನೀವು ಅಂತಹ ಒಂದು ಜಪವನ್ನು ಹಿರಿಯ ತಪಸ್ವಿಯಿಂದ ಉಪದೇಶ ಪಡೆದುಕೊಂಡರೆ ಆಗುವುದಿಲ್ಲವೇ?
 +
 +
'''ಮುದ್ದಣ:''' (ಮುಗುಳು ನಗೆಬೀರುತ್ತಾ) ಏನು! ನಮ್ಮವರ ರೀತಿಯ ಬಗ್ಗೆ ನಗುವೇ? ಆಹಾ! ನನ್ನಂತಹ ಕವಿಗಳಿಗೇನು ಕೊರತೆಯಾಗಿದೆ? ತಮ್ಮ ಒಂದೆ ಒಂದು ನುಡಿಯ ಸಾಮರ್ಥ್ಯದಿಂದ ಮೂರು ಜಗತ್ತನ್ನೆ ನಾಶಮಾಡುವ, ಹೊಗಳುವ, ತೆಗಳುವ, ಕೊಂಡುಕೊಳ್ಳುವ, ಆಳುವ, ಅನುಭವಿಸುವ,ನಾಶಪಡಿಸುವ, ಹೂತುಬಿಡುವ, ಆಜ್ಞೆಮಾಡುವ, ಬಾಳುವಂತೆ ಮಾಡುವ, ಶೃಂಗಾರಮಯವಾಗಿ ವರ್ಣಿಸುವ(ಸೊಗಸಾಗಿ ವರ್ಣಿಸುವ) ನಮ್ಮ ಕವಿಗಳ ರೀತಿಯನ್ನು ನೀನು ತಿಳಿದಿಲ್ಲ.
 +
 +
'''ಮನೋರಮೆ:''' (ಬಿಸವಂದಗೊಂಡು=ವಿಸ್ಮಯಗೊಂಡು) ನಿಮ್ಮವರಿಗೆ ಹಾಗಾದರೆ ಮಂತ್ರ ಸಿದ್ಧಿ ಮಾಡಿಕೊಳ್ಳವುದು ಗೊತ್ತೇ?
 +
 +
'''ಮುದ್ದಣ:''' ಅದಕ್ಕೆ ತಡೆಯೇನಿದೆ! ಹೆದರಿಕೆ ಏನಿದೆ!
 +
 +
'''ಮನೋರಮೆ:''' ನಿನ್ನಲ್ಲಿಯೂ ಇದೆಯೇ?
 +
 +
'''ಮುದ್ದಣ:''' ನನ್ನಲ್ಲಿ ಇದು ಹಾಸು ಹೊಕ್ಕಾಗಿದೆ. (ಸಾಕಷ್ಟಿದೆ)
 +
 +
'''ಮನೋರಮೆ:''' ಆಹಾ! ನೀನು ಬಹಳ ಮಹಿಮೆಗಾರ. ನಿನಗೆ ಯಾರ ಕಡೆಯಿಂದ ಉಪದೇಶವಾಯಿತು?
 +
 +
'''ಮುದ್ದಣ:''' ಗುರುವಿನ ಕಡೆಯಿಂದ; ಚಿಕ್ಕಂದಿನಲ್ಲೆ.
 +
 +
'''ಮನೋರಮೆ:''' ನನ್ನ ಪ್ರಿಯನೇ! ಅದು ಯಾವುದೋ ಆ ಮಂತ್ರವನ್ನು ನನಗೆ ಹೇಳಾ.
 +
 +
'''ಮುದ್ದಣ:''' ಎಲೆ ಹೆಣ್ಣೆ! ನೀನು ಯಾರಲ್ಲೂ ಎಂದೆಂದಿಗೂ ಹೇಳಬಾರದು, ಜೋಕೆ!
 +
 +
'''ಮನೋರಮೆ:''' ಎಂದಿಗೂ ಹೇಗೂ ಯಾರೊಡನೆಯೂ ಹೇಳುವುದಿಲ್ಲ.
 +
 +
'''ಮುದ್ದಣ:''' ಹಾಗಾದರೆ ಈ ರೀತಿ ಇದು. ಕೇಳು.... ಭ....ವ... (ಮಧ್ಯೆ ನಿಲ್ಲಿಸಿ) ಬೇರೆಯವರಿಗೆ ಇದನ್ನು ಹೇಳುವುದಿಲ್ಲವೆಂದು ನಂಬುವ ಹಾಗೆ ಪ್ರಮಾಣಮಾಡು.
 +
 +
'''ಮನೋರಮೆ:''' (ಮುದ್ದಣನ ಕೈಮೇಲೆ ಕೈ ಇಟ್ಟು ಪ್ರಮಾಣಮಾಡುತ್ತಾ) ಇದೆ. ಹಿಡಿ ಪ್ರಮಾಣ ಮಾಡುತ್ತೇನೆ. ನಿನ್ನಾಣೆ, ಕುಲದೇವರ ಮೇಲಾಣೆ! ಎಂದಿಗೂ ಬೇರೆಯವರಲ್ಲಿ ಹೇಳುವುದಿಲ್ಲ.
 +
 +
'''ಮುದ್ದಣ್ಣ:''' ಉಂ! .......ಭವತಿ.......ಭಿ...... (ಅಂದು ಮತ್ತೊಮ್ಮೆ ಹೇಳುವುದನ್ನು ಅರ್ಧಕ್ಕೆ ನಿಲ್ಲಿಸಿ) ನೀನು ಹೇಗಾದರೂ ಮರೆತು ಬೇರೆಯವರೊಡನೆ ಹೇಳಿ ಗುಟ್ಟನ್ನು ಬಿಟ್ಟುಕೊಟ್ಟರೆ ನಮ್ಮಿಬ್ಬರ ಬಾಳು ಪಾಳಾಗುತ್ತದೆ(ಹಾಳಾಗುತ್ತದೆ).
 +
 +
'''ಮನೋರಮೆ:''' (ಹುಸಿ ಮುನಿಸಿನಿಂದ) ನಾನೇನು ದಡ್ಡಿಯೇ! ಹೋಗು! ತನ್ನ ಆಣೆ, ಕಣ್ಣಿನ ಆಣೆ, ನೀನು ಹೇಳಿದಂತೆ ಕೇಳುತ್ತೇನೆ.
 +
 +
'''ಮುದ್ದಣ:''' (ಎಕ್ಕಟಿಯೊಳ್- ಹಾಸ್ಯದಿಂದ) ’ಭವತಿ ಭಿಕ್ಷಾಂ ದೇಹಿ’ ಎಂಬುವುದು ಇದೇ ಕವಿಗಳಿಗೆ ಸಿದ್ಧಿಸಿರುವ ಹೆಮ್ಮೆಯ ಸಪ್ತಾಕ್ಷರಿ ಮಂತ್ರವಾಗಿದೆ. ಇದನ್ನು ಯಾರ ಬಳಿಯೂ ಹೇಳಬೇಡ.
 +
 +
'''ಮನೋರಮೆ:''' (ಅರೆಮುನಿಸಿನಿಂದ) ಹೋಗು. ಬಿಡು ಎಲೆ ನನ್ನ ರಮಣ! ನಿನ್ನ ನುಡಿಯನ್ನು ಸಹಜ(ನಿಜ), ನಿಶ್ಚಿತ ಎಂದೇ ತಿಳಿದ. ಈ ರೀತಿಯ ಮಾಟದ, ಮೋಸದ, ಕೊಂಕು ನುಡಿ ಎಂಬುದನ್ನು ತಿಳಿದುಕೊಳ್ಳದಾದೆ. ನೀನು ಕವಿಯೋ ಇಲ್ಲ ಹಾಸ್ಯಗಾರನೊ! ನಿನ್ನ ಈ ಕಾವ್ಯದ ಸೊಗಸು ನಮ್ಮಂತಹ ಜಾಣರಲ್ಲದ (ದಡ್ಡರಾದ) ಹೆಣ್ಣುಗಳೇ ಕೊಂಡಾಡಬೇಕು(ಹೊಗಳಬೇಕು). ಅದಲ್ಲದೇ ತಿಳಿದವರು(ಬುದ್ಧಿವಂತರು) ಇಷ್ಟಪಡುವರೇ?
 +
 +
'''ಮುದ್ದಣ:''' ಸಾಕು ಈ ವಿನೋದ(ಚೇಷ್ಟೆ). ಮುಂದಿನ ಕಥೆಯನ್ನು ಕೇಳು. (ಎಂದು ಕಥೆಯನ್ನು ಮುಂದುವರೆಸುತ್ತಾನೆ)
 +
 
==ಪರಿಕಲ್ಪನೆ ೧==
 
==ಪರಿಕಲ್ಪನೆ ೧==
 
===ಚಟುವಟಿಕೆ-೧===
 
===ಚಟುವಟಿಕೆ-೧===

ಸಂಚರಣೆ ಪಟ್ಟಿ