೩೫ ನೇ ಸಾಲು: |
೩೫ ನೇ ಸಾಲು: |
| # ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು. | | # ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು. |
| #ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು. | | #ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು. |
| + | |
| + | =ಪ್ರಕ್ರಿಯೆ= |
| + | ದೊಡ್ಡ ಡಬ್ಬಿಯಲ್ಲಿ ೪ ಬಣ್ಣದ ಸ್ಟಿಕರ್ಗಳನ್ನು ಹಾಕಿ ಗುಂಪುಗಳನ್ನು ಮಾಡಿಕೊಳ್ಳಲು ಕಿಶೋರಿಯರಿಗೆ ಒಂದು ಸ್ಟಿಕರ್ನ್ನು ಆರಿಸಿಕೊಳ್ಳಲು ಹೇಳುತ್ತೇವೆ. (ಗುಲಾಬಿ, ಹಸಿರು, ನೇರಳೆ, ನೀಲಿ). ಬೇರೆ ಬೇರೆ ಜಾಗಗಳಲ್ಲಿ ಗುಂಪಿನಲ್ಲಿ ಕುಳಿತುಕೊಳ್ಳುತ್ತೇವೆ. |
| + | ಗುಲಾಬಿ - ಅಪರ್ಣ |
| + | ಹಸಿರು - ಶ್ರೇಯಸ್ |
| + | ನೇರಳೆ - ಕಾರ್ತಿಕ್ |
| + | ನೀಲಿ - ಅನುಷಾ |
| + | |
| + | ಅವರವರ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳಿ ನಂತರ ಕಟ್ಟುಪಾಡುಗಳನ್ನು ಹೇಳುತ್ತೇವೆ. |
| + | |
| + | ಕಟ್ಟುಪಾಡುಗಳು |
| + | 1. ಎಲ್ಲಾರು ಭಾಗವಹಿಸೋಣ. |
| + | 2. ಒಬ್ಬರು ಮಾತನಾಡುವಾಗ, ಎಲ್ಲಾರೂ ಕೇಳಿಸಿಕೊಳ್ಳೋಣ. |
| + | 3. ನಮಗೇನಾದರೂ ಮಾತನಾಡಬೇಕು ಎಂದು ಅನಿಸಿದರೆ, ಕೈ ಎತ್ತೋಣ. |
| + | 4. ಪರಸ್ಪರ ಅಣಕ ಮಾಡುವುದು, ಗೇಲಿ ಮಾಡಿಕೊಳ್ಳುವುದು ಬೇಡ. |
| + | 5. ನಾವು ನಿಮ್ಮ ಶಿಕ್ಷಕಕರಲ್ಲ. ನಾವೆಲ್ಲರೂ ಸಮಾನ ಅನ್ನುವುದನ್ನು ಮರೆಯುವುದಿಲ್ಲ. |
| + | 6. ನಾವು ಬೇರೆ ಬೇರೆ ತರಗತಿ ಅಂತ ಅಂದುಕೊಳ್ಳದೆ, ಎಲ್ಲರೂ ಗೆಳತಿಯರಾಗಿ ಒಟ್ಟಿಗೆ ಬೆರೆಯೋಣ. |
| + | |
| + | ಎಲ್ಲರನ್ನೂ ಅವರವರ ಗುಂಪಿನಲ್ಲೇ ನಿಂತುಕೊಳ್ಳಲು ಹೇಳುತ್ತೇವೆ. ಈ ಕೆಳಗಿನಂತೆ ವರ್ಗೀಕರಣಗಳನ್ನು ಮಾಡಬಹುದು. |
| + | |
| + | 1. ಎತ್ತರದ ಪ್ರಕಾರ ನಿಂತುಕೊಳ್ಳಿ. |
| + | 2. ನಿಮ್ಮ ಮನೆ ಶಾಲೆಯಿಂದ ಇರುವ ದೂರದ ಪ್ರಕಾರ ನಿಂತುಕೊಳ್ಳಿ. |
| + | 3. ನಿಮ್ಮ ಹೆಸರಿನ ಅಕ್ಷರದ ಪ್ರಕಾರ ನಿಂತುಕೊಳ್ಳಿ. (ಇಂಗ್ಲಿಷ್ ಅಕ್ಷರದ ಪ್ರಕಾರ) |
| + | 4. ಹುಟ್ಟಿದ ದಿನಾಂಕ ಮತ್ತು ತಿಂಗಳಿನ ಪ್ರಕಾರ ನಿಂತುಕೊಳ್ಳಿ. |
| + | |
| + | ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ. |
| + | ಎಲ್ಲರಿಗೂ ಒಂದೊಂದು ಮುಂಚೆಯೇ ಬರೆದ ಚೀಟಿಯನ್ನು ನೀಡುತ್ತೇವೆ. ಇದಲ್ಲಿ ಅವರನ್ನು ಪರಿಚಯ ಮಾಡಿಕೊಳ್ಳಲು ಅವರ ಹೆಸರು ಹಾಗು ಯಾವುದಾದರೂ ಒಂದು ಸಾಮಾನ್ಯ ಪ್ರಶ್ನೆ ಇರುತ್ತದೆ. |
| + | ಉದಾಹರಣೆಗೆ : ನನ್ನ ಹೆಸರು ಹಾಗು ಇಷ್ಟವಾದ ಬಣ್ಣ, ನನ್ನ ಹೆಸರು ಹಾಗು ನೆಚ್ಚಿನ ತಿಂಡಿ ಇತ್ಯಾದಿ. |
| + | |
| + | ಬಾಟಲಿಯನ್ನು ತಿರುಗಿಸುವ ಆಟವನ್ನು ಆಡುತ್ತೇವೆ. ಇಲ್ಲಿ ಕಿಶೋರಿಯರನ್ನು ವೃತ್ತಾಕಾರದಲ್ಲಿ ಕೂರಿಸಿ ನಂತರ ಖಾಲಿ ಬಾಟಲಿಯನ್ನು ತಿರುಗಿಸುವುದು. ಅದು ಯಾರ ಕಡೆಗೆ ನಿಲ್ಲುತ್ತದೆಯೋ ಅವರಿಗೆ ನಾವು ಒಂದು ಪ್ರಶ್ನೆಯನ್ನು ಕೆಳಗಿನ ಪಟ್ಟಿಯಲ್ಲಿರುವಂತೆ ಕೇಳುವುದು. |
| + | |
| + | ಬಾಟಲಿ ತಿರುಗಿಸುವ ಆಟದ ಪ್ರಶ್ನೆಗಳು |
| + | # ಬೆಂಗಳೂರಲ್ಲಿ ಎಲ್ಲಿ ಬೇಕಾದರೂ ಪಿಕ್ನಿಕ್ಗೆ ಹೋಗಬಹುದು ಅಂದರೆ, ಎಲ್ಲಿಗೆ ಹೋಗುವಿರಿ? |
| + | #ನಿಮ್ಮ ಮುಂದೆ ದೇವರು ಪ್ರತ್ಯಕ್ಷ ಆಗಿ ಏನು ವರ ಬೇಕು ಅಂತ ಕೇಳಿದರೆ ಏನು ಕೇಳುವಿರಿ? |
| + | #ನಿಮ್ಮ ಅಚ್ಚುಮೆಚ್ಚಿನ ಸ್ನೇಹಿತೆಯ ಜೊತೆ ಒಂದು ದಿನ ಪೂರ್ತಿ ಕಳೆಯಬಹುದು ಅಂದರೆ, ಏನು ಮಾಡುವಿರಿ? |
| + | #ಮಾಲ್ನಲ್ಲಿ ಏನು ತೆಗೆದುಕೊಂಡರೂ ಉಚಿತ ಅಂತಾದರೆ, ಏನು ತೆಗೆಯುವಿರಿ? |
| + | #ಈಗ ಒಂದು ಚಲನಚಿತ್ರದಲ್ಲಿ ನಾಯಕಿಯ ಬದಲು ನೀವು ಇರಬಹುದು ಅಂದರೆ, ಯಾವ ಚಲನಚಿತ್ರ ಆಯ್ಕೆ ಮಾಡುವಿರಿ? ಯಾಕೆ? |
| + | #ನಿಮಗೆ ಯಾವ ತಿಂಡಿ ಬೇಕಾದರೂ ತೆಗೆದುಕೊಂಡು ತಿನ್ನಬಹುದು ಅಂತ ಆದರೆ ಏನು ತೆಗೆದುಕೊಳ್ಳುವಿರಿ? ಯಾಕೆ? |
| + | #ನೀವು ಒಂದು ದಿನ ಮುಖ್ಯಮಂತ್ರಿ ಆಗಿರುವಿರಿ ಅಂದರೆ, ಏನು ಮಾಡುವಿರಿ? |
| + | #ನಿಮಗೆ ಮಾಯ ಆಗಿ ಏಲ್ಲಿ ಬೇಕಿದ್ದರೂ ಪ್ರತ್ಯಕ್ಷ ಆಗಬಹುದು ಅಂತ ಆದರೆ, ಎಲ್ಲಿಗೆ ಹೋಗುತ್ತೀರ? |
| + | #ಮಾಯಾವಿ ದೀಪ ನಿಮಗೆ ಸಿಕ್ಕಿದರೆ ಹಾಗೂ ನೀವು ಏನು ಕೇಳಿದರೂ ಅದಾಗುತ್ತೆ ಅಂತ ಇದ್ದರೆ, ಏನು ಕೇಳುವಿರಿ? |
| + | # ಶಾಲಾ ಪಠ್ಯ ಪುಸ್ತಕ ಅಷ್ಟೇ ಅಲ್ಲದೆ ನೀವು ಏನು ಬೇಕಿದ್ದರೂ ಕಲಿಯಬಹುದು ಅಂತಿದ್ದರೆ ನೀವು ಏನು ಕಲಿಯಲು ಇಷ್ಟ ಪಡುವಿರಿ? |
| + | #ನಿಮಗೆ ಇಷ್ಟ ಇರುವ ಆಟದಲ್ಲಿ ನೀವು ಉನ್ನತ ಸಾಧನೆ ಮಾಡುವಿರಿ ಅಂದರೆ, ಅದು ಯಾವ ಆಟ? |
| + | #ನಿಮಗೆ ಜಗತ್ತಿನಲ್ಲಿರುವ ಯಾವ ವಾಹನವನ್ನಾದರೂ ಓಡಿಸಬಹುದು ಅನ್ನುವ ಆಯ್ಕೆ ಇದ್ದರೆ , ಯಾವ ವಾಹನವನ್ನು ಓಡಿಸುತ್ತೀರ? |
| + | #ನಿಮಗೆ ಏನಾದ್ರೂ ನಿರ್ಭಂದನೆ ಮಾಡುವ ಶಕ್ತಿ ಇದ್ದರೆ, ನೀವು ಏನನ್ನು ನಿರ್ಭಂದಿಸುವಿರಿ? |
| + | |
| + | ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು. |