"ವ್ಯೋಮ ವಿಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೪೩ ನೇ ಸಾಲು: | ೪೩ ನೇ ಸಾಲು: | ||
[http://www.space.com/topics/stars-galaxies-news ನಕ್ಷತ್ರಗಳು ಮತ್ತು ಗೆಲಕ್ಸಿಗಳ ಅಧಿಕ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ] | [http://www.space.com/topics/stars-galaxies-news ನಕ್ಷತ್ರಗಳು ಮತ್ತು ಗೆಲಕ್ಸಿಗಳ ಅಧಿಕ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ] | ||
− | [http://sciencelearn.org.nz/Contexts/Satellites/Science-Ideas-and-Concepts/Artificial-satellites | + | [http://sciencelearn.org.nz/Contexts/Satellites/Science-Ideas-and-Concepts/Artificial-satellites ಕೃತಕ ಉಪಗ್ರಹಗಳ ಬಗ್ಗೆ ಇನ್ನು ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ] |
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == |
೧೫:೧೨, ೪ ಮೇ ೨೦೧೬ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
[ ನಕ್ಷತ್ರಗಳ ಜೀವನ ಚಕ್ರ]
[ ಗೆಲಕ್ಸಿಗಳು]
ನಕ್ಷತ್ರಗಳು ಮತ್ತು ಗೆಲಕ್ಸಿಗಳ ಅಧಿಕ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ
ಕೃತಕ ಉಪಗ್ರಹಗಳ ಬಗ್ಗೆ ಇನ್ನು ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
1.ನಕ್ಷತ್ರಗಳ ಉಗಮ, ನಕ್ಷತ್ರಗಳ ಬಣ್ಣ.
2.ಕೆಂಪು ದೈತ್ಯ, ಶ್ವೇತ ಕುಬ್ಜಗಳು, ಕ್ವಸಾರ್, ಕಪ್ಪು ಕುಳಿಗಳು.
3.ಗೆಲಕ್ಸಿಗಳು ಮತ್ತು ಅವುಗಳ ವಿಧಗಳು.
4.ಸೌರರಾಶಿಗಿಂತ ಹೆಚ್ಚು ರಾಶಿಯನ್ನೊಳಗೊಂಡ ನಕ್ಷತ್ರಗಳ ಭವಿಷ್ಯ.
5.ವಿಶ್ವದ ಉಗಮ
6.ರಾಕೆಟ್ ಗಳು : ತತ್ವ, ನೋದನಕಾರಿಗಳು, ಕಾರ್ಯವಿಧಾನ, ಕಕ್ಷಾ ವೇಗ, ವಿಮೋಚನಾ ವೇಗ.
7.ಬಹುಹಂತ ರಾಕೆಟ್ ಗಳು, ಉಪಗ್ರಹಗಳು : ಭೂಸ್ಥಿರ ಉಪಗ್ರಹಗಳು.
8.ಭಾರತೀಯ ವ್ಯೋಮ ಕಾರ್ಯಕ್ರಮಗಳು : ಚಂದ್ರಯಾನದ ಉದ್ದೇಶಗಳು.
ಪರಿಕಲ್ಪನೆ #1
ನಕ್ಷತ್ರಗಳು : ನಕ್ಷತ್ರಗಳ ಉಗಮ, ನಕ್ಷತ್ರಗಳ ಬಣ್ಣ
ನಕ್ಷತ್ರಗಳ ಜೀವನ ಚಕ್ರ : ಕೆಂಪು ದೈತ್ಯ, ಶ್ವೇತ ಕುಬ್ಜಗಳು, ಕ್ವಸಾರ್, ಕಪ್ಪು ಕುಳಿಗಳು.
ನಕ್ಷತ್ರಗಳ ಭವಿಷ್ಯ.
ಗೆಲಕ್ಸಿ ಮತ್ತು ಗೆಲಕ್ಸಿಯ ವಿಧಗಳು : ಎಲಿಪ್ಸೀಯ ಗೆಲಕ್ಸಿ, ಸುರುಳಿ ಗೆಲಕ್ಸಿ, ಅನಿಯತ ಗೆಲಕ್ಸಿ
ವಿಶ್ವದ ಉಗಮ : ಹಬಲ್ ನಿಯಮ, ಮಹಾಸ್ಫೋಟ ಸಿದ್ಧಾಂತ
ಕಲಿಕೆಯ ಉದ್ದೇಶಗಳು
1. ನಕ್ಷತ್ರಗಳ ಉಗಮವಾದ ಬಗೆಯನ್ನು ವಿವರಿಸುವರು.
2. ನಕ್ಷತ್ರಗಳ ಬಣ್ಣಗಳನ್ನು ನಕ್ಷತ್ರಗಳ ಮೇಲ್ಮೈ ತಾಪಗಳಿಗನುಗುಣವಾಗಿ ತಿಳಿಸುವರು.
3. ನಕ್ಷತ್ರವು ಸ್ಥಿರಸ್ಥಿತಿ ತಲುಪಲು ಇರಬೇಕಾದ ನಿರ್ಬಂಧವನ್ನು ನಿರೂಪಿಸುವರು.
4. ಸ್ಥಿರಸ್ಥಿತಿಯಲ್ಲಿರುವ ನಕ್ಷತ್ರದಿಂದ ಹೊರ ಹೊಮ್ಮುವ ಶಕ್ತಿಗೆ ಕಾರಣವನ್ನು ನೀಡುವರು.
5. ನಕ್ಷತ್ರವು ಸ್ಥಿರ ಸ್ಥಿತಿಯಿಂದ ಕೆಂಪು ದೈತ್ಯ ಸ್ಥಿತಿಗೆ ಬದಲಾಗುವುದಕ್ಕೆ ಕಾರಣವನ್ನು ತಿಳಿಸುವರು.
6. ಸೂಪರ್ ನೋವಾ ಎಂದರೇನು ಎಂದು ನಿರೂಪಿಸುವರು.
7. ಸೌರರಾಶಿಗಿಂತ ಕಡಿಮೆ ರಾಶಿಯನ್ನೊಳಗೊಂಡ ನಕ್ಷತ್ರಗಳ ಭವಿಷ್ಯ ಏನಾಗುತ್ತದೆ ಎಂದು ವಿವರಿಸುವರು.
8. ಸೌರರಾಶಿಗಿಂತ ಹೆಚ್ಚು ರಾಶಿಯನ್ನೊಳಗೊಂಡ ನಕ್ಷತ್ರಗಳ ಭವಿಷ್ಯ ಏನಾಗುತ್ತದೆ ಎಂದು ವಿವರಿಸುವರು.
9. ನಕ್ಷತ್ರಗಳ ಜೀವನ ಚಕ್ರದ ಸಂಕ್ಷಿಪ್ತ ವಿವರಣೆ ನೀಡುವರು.
10. ಗೆಲಕ್ಸಿ ಎಂದರೇನು ಎಂದು ನಿರೂಪಿಸುವರು.
11. ಗೆಲಕ್ಸಿಗಳ ವಿಧಗಳನ್ನು ಪಟ್ಟಿ ಮಾಡುವರು.
12. ಎಲಿಪ್ಸೀಯ ಗೆಲಕ್ಸಿ, ಸುರುಳಿ ಗೆಲಕ್ಸಿ ಮತ್ತು ಅನಿಯತ ಗೆಲಕ್ಸಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವರು.
13. ವಿಶ್ವದ ಉಗಮವಾದ ಬಗೆಯನ್ನು ಮಹಾಸ್ಫೋಟ ಸಿದ್ಧಾಂತದ ಆಧಾರದ ಮೇಲೆ ವಿವರಿಸುವರು.
14. ಹಬಲ್ ನಿಯಮವನ್ನು ನಿರೂಪಿಸುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ರಾಕೆಟ್ ಗಳು : ರಾಕೆಟ್ ಗಳ ತತ್ವ, ರಾಕೆಟ್ ಗಳ ನೋದನಕಾರಿಗಳು, ರಾಕೆಟ್ ಗಳ ಕಾರ್ಯ ವಿಧಾನ,
ರಾಕೆಟ್ ನ ಕಕ್ಷಾವೇಗ, ರಾಕೆಟ್ ನ ವಿಮೋಚನಾ ವೇಗ ಮತ್ತು ಬಹುಹಂತ ರಾಕೆಟ್ ಗಳು.
ಕೃತಕ ಉಪಗ್ರಹಗಳು : ಭೂಸ್ಥಿರ ಉಪಗ್ರಹಗಳು.
ಭಾರತೀಯ ವ್ಯೋಮ ಕಾರ್ಯಕ್ರಮಗಳು : ಚಂದ್ರಯಾನದ ಉದ್ದೇಶಗಳು.
ಕಲಿಕೆಯ ಉದ್ದೇಶಗಳು
1. ರಾಕೆಟ್ ನ ತಂತ್ರಜ್ಞಾನದ ಮಹತ್ವಪೂರ್ಣ ಐತಿಹ್ಯದ ಬಗ್ಗೆ ವಿವರಿಸುವರು.
2.ರಾಕೆಟ್ ನ ಉಡಾವಣಾ ತತ್ತ್ವವನ್ನು ವಿವರಿಸುವರು.
3.ರಾಕೆಟ್ ನ ಉಡಾವಣೆಯ ತಂತ್ರಜ್ಞಾನವನ್ನು ವಿವರಿಸುವರು.
4.ಕಕ್ಷಾವೇಗ ಮತ್ತು ವಿಮೋಚನಾ ವೇಗಗಳಿಗಿರುವ ವ್ಯತ್ಯಾಸವನ್ನು ತಿಳಿಸುವರು.
5.ಕಕ್ಷಾವೇಗ ಮತ್ತು ವಿಮೋಚನಾ ವೇಗಗಳಿಗಿರುವ ಸಂಬಂಧವನ್ನು ತಿಳಿಸುವರು.
6.ಏಕಹಂತ ರಾಕೆಟ್ ಗಳಿಗಿಂತ ಬಹುಹಂತ ರಾಕೆಟ್ ಗಳು ಹೇಗೆ ಉಪಯೋಗಕರವಾಗಿವೆ ಎಂದು ತಿಳಿಸುವರು.
7.ಚಂದ್ರಯಾನ ಒಳಗಗೊಂಡಂತೆ ಭಾರತೀಯ ವ್ಯೋಮ ಕಾರ್ಯಕ್ರಮಗಳ ಬಗ್ಗೆ ವಿವರಿಸುವರು.
8.ಕೃತಕ ಉಪಗ್ರಹಗಳ ಉಪಯೋಗಗಳನ್ನು ಪಟ್ಟಿ ಮಾಡುವರು.
9.ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಗಳನ್ನು ವಿವರಿಸುವುದರ ಮುಖಾಂತರ ಸ್ಮರಿಸುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಸೌರವ್ಯೂಹ
- ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು.
- ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು.
- ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ.
- ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು.
- ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು.
- ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ.
- ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್
- ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು.
- ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು
- ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ.
- ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ'
- ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ, ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ
- ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು.
- ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ದೂರದಲ್ಲಿ ಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷ ಎನ್ನುವರು.
- ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು 'ಅಸ್ಟ್ರನಾಮಿಕಲ್ ಯೂನಿಟ್' ಎನ್ನುವರು.
- ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ ಪರಿವಾರವನ್ನು 'ಸೌರವ್ಯೂಹ' ಎಂದು ಕರೆಯುವರು.
- ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು ಹೀಲಿಯಂ ಹಾಗೂ ಉಳಿದ ಭಾಗವು ಇತರ ಅನಿಲಗಳಿಂದ ಕೂಡಿದೆ.
- ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೂರ್ಯ ಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿ ಹ್ಯಾಲೆಯು ಸಂಶೋದಿಸಿದನು.
- ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ ಸೂತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ ಸೂತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸೂತ್ತಲೂ ಬಳೆಯಾಕಾರದ ' ಪೋಟೋ ಸ್ಪಿಯರ ಎಂದು ಕರೆಯುವರು.
- ಸೂರ್ಯನ ಮೇಲ್ಬಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು ಕರೆಯುವರು.
- ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು ಸೂರ್ಯನ ಪ್ರಕಾಶವನ್ನು ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸೂತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ ವಿರುದ್ದ ದಿಕ್ಕಿಗೆ ಚಲಿಸುತ್ತವೆ.
- ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ.
- ಸೂರ್ಯನ ಸೂತ್ತಲೂ 8 ಗ್ರಹಗಳು ಸೂತ್ತುತ್ತವೆ. ಅವೆಂದರೆ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.
- ಅಗಸ್ಟ 24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಗ್ರಹವನ್ನು ಗ್ರಹವಲ್ಲ ಎಂದು ತೀರ್ಮಾನಿಸಲಾಯಿತು.
- ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ. ಇದು ಅತೀ ಹೆಚ್ಚು ಉಷ್ಣಾಂಶದಿಂದ ಕೂಡಿದೆ.
- ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸೂತ್ತ ಸುತ್ತುತ್ತದೆ.
- ಗುರು ಗ್ರಹವು ಅತೀ ದೊಡ್ಡದಾದ ಗ್ರಹ. ಇದು ಅತೀ ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ. ಇದರ ಒಂದು ದಿನ 9 ಗಂಟೆ 50 ನಿಮಿಷ ಮಾತ್ರ .
- ಶನಿ ಗ್ರಹವು ತನ್ನ ಸೂತ್ತ ಸುಂದರವಾದ ಬಳೆಗಳನ್ನು ಹೊಂದಿದೆ.
- ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು ಆಂತರಿಕ ಗ್ರಹಗಳು ಅಥವಾ ಶಿಲಾಗ್ರಹಗಳು ಎಂದು ಕರೆಯುವರು. ಇವುಗಳ ಸಾಂದ್ರತೆ ಅತಿ ಹೆಚ್ಚು.
- ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು ಬಾಹ್ಯ ಗ್ರಹಗಳು ಅಥವಾ ಜೋವಿಯಾನ್ ಗ್ರಹಗಳೆಂದೂ ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ.
- ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂ ಸೀರಿಸ್.
- ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂ ಕಡಿಮೆ 88 ದಿನಗಳು.
- ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ ಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚು.
- ಭೂಮಿಯ ಏಕೈಕ ನೈಸಗರ್ಿಕ ಉಪಗ್ರಹ ಚಂದ್ರ.
- ಮಂಗಳ ಗ್ರಹವನ್ನು 'ಕೆಂಪು ಗ್ರಹ' ಕುಜ ಅಥವಾ ಅಂಗಾರಕವೆಂತಲೂ ಕರೆಯುವರು.
- ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ ಎರಡು ಚಿಕ್ಕ ಉಪ ಗ್ರಹಗಳನ್ನು ಹೊಂದಿದೆ.
- ಭಾರತವು ಮಂಗಳ ಗ್ರಹವನ್ನು ಶೋಧಿಸುವ ಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸ ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ ಮತ್ತು ಯೂರೋಪಗಳ ಒಕ್ಕೂಟದ ನಂತರ ನಾಲ್ಕನೆಯದಾಗಿದೆ.
- ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ ದೊಡ್ಡದು. ಇದನ್ನು ಮತ್ತು ಇದರ ಉಪ ಗ್ರಹಗಳನ್ನು ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.
- ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ ಗ್ರಹಗಳನ್ನು ಹೊಂದಿದೆ, (ಗುರು-60, ಶನಿ-50, ಯೂರೇನೆಸ್-25).
- ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು ಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡ ಮತ್ತು ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು.
- ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ ಉಪ ಗ್ರಹಗಳಲ್ಲಿ ಅತೀ ದೊಡ್ಡದು. ಐಓ ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ.
- ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ ಸುಂದರವಾದ ಗ್ರಹ. ಇದರ ಸೂತ್ತಲೂ ಮೂರು ಬಳೆಗಳಿವೆ. ಶನಿ ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, ಡಿಯೋನ್, ಮತ್ತು ರಿಯಾ.
- ಯುರೆನೇಸ್ ಗ್ರಹವು ಗಾಡ ನೀಲಿ ಬಣ್ಣವನ್ನು ಹೊಂದಿರುವುದು ಇದರ ವಾಯುಮಂಡಲದಲ್ಲಿ ಮಿಥೇನ ಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆ ಮೂಲ ಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾ ಉಪಗ್ರಹಗಳಿಗೆ ಷೇಕ್ಸ್ ಪಿಯರನ ನಾಟಕದ ಪಾತ್ರಧಾರಿಗಳ ಹೆಸರನ್ನು ನೀಡಲಾಗಿದೆ.
- ಬುಧ ಮತ್ತು ಶುಕ್ರ ಗ್ರಹಗಳು ಯಾವುದೇ ಉಪಗ್ರಹಗಳನ್ನು ಹೊಂದಿರುವುದಿಲ್ಲ.
- ಸೌರವ್ಯೂಹದ ಉಪಗ್ರಹಗಳಲ್ಲಿ ಗುರು ಗ್ರಹದ ಗ್ಯಾನಿಮೇಡ್ ಅತಿ ದೊಡ್ಡದು. ಶನಿ ಗ್ರಹದ ಇಯಾಪಿಟಸ್ ಅತೀ ಚಿಕ್ಕದು.
- ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು ವಸ್ತುಗಳಿಗೆ 'ಉಲ್ಕೆಗಳು' ಎಂದು ಕರೆಯುವರು.
- ಉಲ್ಕೆಗಳು ಪೂರ್ಣವಾಗಿ ಉರಿದು ಹೋಗದೆ ಅವುಗಳ ಭೂಮಿಯ ಮೇಲೆ ಬೀಳುತ್ತವೆ ಅವುಗಳನ್ನು ಉಲ್ಕಾಶಿಲೆಗಳು ಎನ್ನುವರು. ಭೂಮಿಗೆ ತಲುಪಿರುವ ಉಲ್ಕಾಶಿಲೆಗಳಲ್ಲಿ ನಮೀಬಿಯಾದ ಹೋಬಾವೆಸ್ಟನಲ್ಲಿರುವ ಹಾಗೂ ಆಸ್ಟ್ರೇಲಿಯಾದ ಹೆನ್ಚುರಿ ತಗ್ಗುಗಳು.
- ಕ್ಷುದ್ರಗಳು ಮಂಗಳು ಮತ್ತು ಗುರುಗ್ರಹಗಳ ನಡುವೆ ಸೂರ್ಯನ ಸೂತ್ತಲೂ ಸುತ್ತುತ್ತಿವೆ. ಸೀರಿಸ್ ಸೌರವ್ಯೂಹದ ಅತೀ ದೊಡ್ಡ ಕ್ಷುದ್ರಗ್ರಹ.
- ಧೂಮಕೇತುಗಳು ಪ್ರಜ್ವಲಿಸುವ ತಲೆ ಹಾಗೂ ಉದ್ದವಾದ ಬಾಲವನ್ನು ಹೊಂದಿವೆ. ಹ್ಯಾಲೆ ಧೂಮಕೇತುವು 76 ವರ್ಷಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ.
- 1956 ರಲ್ಲಿ ರಷ್ಯಾದ ಲೂನಿಕ್-2 ಚಂದ್ರನನ್ನು ತಲುಪಿದ ಮೊದಲ ಬಾಹ್ಯಾಕಾಶ ನೌಕೆ. 1969 ರಲ್ಲಿ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ.
- ಚಂದ್ರನು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಅಂಡಾಕಾರವಾಗಿ ಸೂತ್ತುತ್ತಾ ಭೂಮಿಗೆ ಸಮೀಪಿಸುವುದನ್ನು 'ಪೆರಿಜಿ' ಅಥವಾ ಉಚ್ಚಸ್ಥಾನವೆಂದೂ ಹಾಗೂ ಭೂಮಿಯಿಂದ ಗರಿಷ್ಠ ದೂರವಿರುವುದನ್ನು 'ಅಪೋಜಿ' ಅಥವಾ ನೀಚಸ್ಥಾನ ಎನ್ನುವರು.
- ಚಂದ್ರನು ಭೂಮಿಯ ಸೂತ್ತ ಪ್ರದಕ್ಷಿಣೆಯನ್ನುಪೂರ್ಣಗೊಳಿಸಲು ಬೇಕಾಗುವ ಅವಧಿ 29 ದಿನ 12 ಗಂಟೆ 44 ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ
- ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾ ಹುಣ್ಣಿಮೆಯ ದಿನಗಳಂದು ಚಂದ್ರಗ್ರಹಣವಾಗುವುದಿಲ್ಲ.
- ಸೂರ್ಯ ಗ್ರಹಣವು ಅಮವಾಸ್ಯೆಯ ದಿನದಂದು ಮಾತ್ರ ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿ ಕಂಡು ಬರುತ್ತದೆ. 1) ಪೂರ್ಣ ಸೂರ್ಯಗ್ರಹಣ 2) ಪಾಶ್ವ ಸೂರ್ಯಗ್ರಹಣ ಹಾಗೂ 3) ಕಂಕಣ ಸೂರ್ಯಗ್ರಹಣ.
- ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣವಾಗುತ್ತದೆ
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು