"ಲಿಬ್ರೆ ಆಫೀಸ್ ಇಂಪ್ರೆಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೬೨ ನೇ ಸಾಲು: | ೬೨ ನೇ ಸಾಲು: | ||
! ಅನುಸ್ಥಾಪನೆ ವಿಧಾನಗಳು !! ಹಂತಗಳು | ! ಅನುಸ್ಥಾಪನೆ ವಿಧಾನಗಳು !! ಹಂತಗಳು | ||
|- | |- | ||
− | | ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ || | + | | ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ || Go to Ubuntu Software Centre and search and download. This is part of the custom distribution 16.04, Kalpavriksha. |
|- | |- | ||
− | | ಟರ್ಮಿನಲ್ನಿಂದ || | + | | ಟರ್ಮಿನಲ್ನಿಂದ || sudo apt-get install libreOffice |
|- | |- | ||
− | | ವೆಬ್ಪುಟದಿಂದ || | + | | ವೆಬ್ಪುಟದಿಂದ || https://www.libreoffice.org/ and https://wiki.ubuntu.com/LibreOffice |
|- | |- | ||
|ವೆಬ್ಆಧಾರಿತ ನೊಂದಣಿ|| | |ವೆಬ್ಆಧಾರಿತ ನೊಂದಣಿ|| | ||
|} | |} | ||
+ | |||
==ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಅನ್ವಯಕ == | ==ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಅನ್ವಯಕ == | ||
೦೬:೩೪, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಲಿಬ್ರೆ ಆಪೀಸ್ ಇಂಪ್ರೆಸ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್ವೇರ್ ಪ್ಯಾಕೇಜಿನ ಸ್ವತಂತ್ರ ಮತ್ತು ಮುಕ್ತ ಪ್ರೆಸೆಂಟೇಷನ್ ಡಾಕ್ಯುಮೆಂಟ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದ್ದು. ಮೈಕ್ರೋಸಾಪ್ಟ್ ಪವರ್ಪಾಯಿಂಟ್ ರೀತಿಯ ವೈಶಿಷ್ಟಯಗಳನ್ನು ಹೊಂದಿದೆ.
ಐ.ಸಿ.ಟಿ ಸಾಮರ್ಥ್ಯ
ಲಿಬ್ರೆ ಆಪೀಸ್ ಇಂಪ್ರೆಸ್ ಎಂಬುದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಪರಿಕರವಾಗಿದೆ. ಇದರ ಮೂಲಕ ಪ್ರಸ್ತುತಿಗಳನ್ನುರಚಿಸಬಹುದು.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಲಿಬ್ರೆ ಆಪೀಸ್ ಇಂಪ್ರೆಸ್ ಮೂಲಕ ವಿವಿಧ ಅಂಶಗಳು, ಪಠ್ಯ, ಬುಲೆಟ್ಸ್- ಸಂಖ್ಯೆಗಳು, ಪಟ್ಟಿಗಳು, ಕೋಷ್ಟಕಗಳು, ಚಾರ್ಟ್ಗಳು ಹಾಗು ಕ್ಲಿಪ್ ಆರ್ಟ್, ಡ್ರಾಯಿಂಗ್ ಮತ್ತಿ ಪೋಟೋಗ್ರಾಪ್ಸ್ನಂತಹ ಹಲವು ಗ್ರಾಫಿಕ್ಗಳನ್ನು ಒಳಗೊಂಡ ಪ್ರಸ್ತುತಿಗಳನ್ನು ರಚಿಸಿಬಹುದು. ಲಿಬ್ರೆ ಆಪೀಸ್ ಇಂಪ್ರೆಸ್ ಮೂಲಕ ಮಾಹಿತಿಯನ್ನು ಸರಳವಾಗಿ ಮತ್ತು ಸುಳಬವಾಗಿ ಸಂವಹನ ಮಾಡಲು ಸಾಧ್ಯವಾಗುವಂತೆ, ವ್ಯಾಕರಣ ಪರಿಶೀಲನೆ ಮತ್ತು ಪದಗಳ ಅರ್ಥಕೋಶ, ಪಠ್ಯ ಶೈಲಿ ಮತ್ತು ಸ್ಲೈಡ್ಗಳಿಗೆ ಹಿನ್ನೆಲೆ ಶೈಲಿಯ ಆಯ್ಕೆಗಳನ್ನು ಸಹ ಹೊಂದಿದೆ. ತರಬೇತಿಗಳಲ್ಲಿ ಹಾಗು ತರಗತಿಗಳಲ್ಲಿ ವಿಚಾರಗಳನ್ನು ಸಂಕ್ಷಿಪ್ತವಾಗಿ ಸಂವಹನ ಮಾಡಲು ಲಿಬ್ರೆ ಆಪೀಸ್ ಇಂಪ್ರೆಸ್ ನ ಪ್ರಸ್ತುತಿಗಳು ಸಹಾಯಕವಾಗುತ್ತವೆ.
ಆವೃತ್ತಿ
Version: 5.2.2.2 Build ID: 1:5.2.2-0ubuntu1~trusty0 CPU Threads: 4; OS Version: Linux 4.4; UI Render: default; Locale: en-US (en_US.UTF-8); Calc: group Using KDE Development Platform 4.13.3 This application is free and licensed under the GNU Public License.
ಸಂರಚನೆ
ಇದು ಉಬುಂಟು ಕಸ್ಟಮ್ ನ ಭಾಗವಾಗಿದ್ದು, ಮತ್ತೊಮ್ಮೆ ಕಾನ್ಪಿಗರ್ ಮಾಡಬೇಕಾದ ಅವಶ್ಯಕತೆ ಇಲ್ಲ.
ಲಕ್ಷಣಗಳ ಮೇಲ್ನೋಟ
- ಲಿಬ್ರೆ ಆಪೀಸ್ ಇಂಪ್ರೆಸ್ ಪಠ್ಯ, ಬುಲೆಟ್ಸ್- ಸಂಖ್ಯೆಗಳು, ಪಟ್ಟಿಗಳು, ಕೋಷ್ಟಕಗಳು, ಚಾರ್ಟ್ಗಳು ಹಾಗು ಕ್ಲಿಪ್ ಆರ್ಟ್, ಡ್ರಾಯಿಂಗ್ ಮತ್ತಿ ಪೋಟೋಗ್ರಾಪ್ಸ್ನಂತಹ ಹಲವು ಗ್ರಾಫಿಕ್ಗಳನ್ನು ಒಳಗೊಂಡ ವೃತ್ತಿಪರ ಪ್ರಸ್ತುತಿಗಳನ್ನು ರಚಿಸಲು ಅವಕಾಶ ನೀಡುತ್ತದೆ.
- ಮೈಕ್ರೋಸಾಪ್ಟ್ ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಸಹ ಬಳಸಬಹುದು ಹಾಗು ತಿದ್ದಿಪಡಿ ಮಾಡಬಹುದು.
- ಸ್ಲೈಡ್ಪ್ರದರ್ಶಕಗಳು, ಆನಿಮೇಷನ್ಗಳು, ಸ್ಲೈಡ್ ಚಲನೆಗಳು ಮತ್ತು ಬಹುಮಾಧ್ಯಮ ಮಾದರಿ ಕಾರ್ಯತಂತ್ರಗಳ ಮೂಲಕ ಪ್ರಸ್ತುತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ರಚಿಸಬಹುದು.
ಇತರೇ ಸಮಾನ ಅನ್ವಯಕಗಳು
Sozi – ಸೋಜಿ ಎಂಬುದು ಮತ್ತೊಂದು ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದೆ. ಈ ಮೂಲಕ ಪಠ್ಯ ಮತ್ತು ಚಿತ್ರಗಳನ್ನೊಳಗೊಂಡ ವೆಕ್ಟರ್ ಗ್ರಾಫಿಕ್ (.svg) ಕಡತಗಳನ್ನು ರಚಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಪ್ರಸ್ತುತಿಗಳನ್ನು ವಿಭಿನ್ನವಾಗಿ ತೋರಿಸಬಹುದಾಗಿದೆ (with relations, zooming into). 'MS Office power point -ಇದು ಮೈಕ್ರೋಸಾಪ್ಟ್ ಆಪೀಸ್ನ ಭಾಗವಾಗಿದ್ದು, ಇದು ಲಿಬ್ರೆ ಆಪೀಸ್ ಇಂಪ್ರೆಸ್ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. Google Office App - ಗೂಗಲ್ ಸ್ಲೈಡ್, ಗೂಗಲ್ ಡ್ರೈವ್ ನ ಭಾಗವಾಗಿದೆ. ಇದು ಆನ್ಲೈನ್ ಆಧಾರಿತ ಪ್ರಸ್ತುತಿಯಾಗಿದೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
This tool is developed by LibreOffice.org and supports the continuous development of the application. More detail please visit this site LibreOffice.org
ಅನ್ವಯಕ ಬಳಕೆ
ಕಾರ್ಯಕಾರಿತ್ವ
ಲಿಬ್ರೆ ಆಪೀಸ್ ಇಂಪ್ರೆಸ್ ನ್ನು ತೆರೆಯಲು ಅಪ್ಲಿಕೇಷನ್ → ಆಫೀಸ್ → ‘ಲಿಬ್ರೆ ಆಫೀಸ್ ಇಂಪ್ರೆಸ್’ ನ್ನು ಆಯ್ಕೆ ಮಾಡಬೇಕು.
- Image
ಹಂತ 1- ನೀವು ಲಿಬ್ರೆ ಆಪೀಸ್ ಇಂಪ್ರೆಸ್ ತೆರೆದಾಗ ಈ ಮೇಲಿನ ಚಿತ್ರದ ರೀತಿ ಕಾಣಬಹುದು. ಇಲ್ಲಿ ನಿಮ್ಮ ಪ್ತಸ್ತುತಿಯನ್ನು ಪ್ರಾರಂಭಿಸಬಹುದು. ಮೊದಲಿಗೆ ನಿಮ್ಮ ಮೊfಲನೇ ಸ್ಲೈಡ್ನ ಪ್ರಸ್ತುತಿಯ ತಲೆಬರಹವನ್ನು ನಮೂದಿಸಲು "click to add title" ನಲ್ಲಿ ಒತ್ತಿರಿ. ನಂತರ ತಲೆಬರಹದ ವಿವರಣೆಯ ಪಠ್ಯವನ್ನು ಸೇರಿಸಲು "click to add text" ನಲ್ಲಿ ಒತ್ತಿರಿ. ಮೊದಲನೇ ಸ್ಲೈಡ್ನಲ್ಲಿ ನಿಮ್ಮ ಮಾಹಿತಿಯನ್ನು ಸೇರಿಸಿದ ನಂತರ ಮತ್ತೊಂದು ಸ್ಲೈಡ್ ತೆರೆಯಲು, ಪರದೆಯ ಎಡಬದಿಯಲ್ಲಿರುವ ಸ್ಲೈಡ್ ಪ್ಯಾನೆಲ್ ನಲ್ಲಿನ ಸ್ಲೈಡ್ ನ್ನಯ ಆಯ್ಕೆ ಮಾಡಿ ENTER ಒತ್ತಿರಿ. ಅಥವಾ ಸ್ಲೈಡ್ ಮೆಲೆ ರೈಟ್ ಕ್ಲಿಕ್ ಮಾಡಿ "New Slide” ಆಯ್ಕೆ ಮಾಡಿಕೊಳ್ಳಬಹುದು.
- Image
ಹಂತ 2- ಕ್ರಮಸಂಖ್ಯೆ ಮತ್ತು ಬಿಂದುಗಳನ್ನು ಸೇರಿಸುವುದು.To add the bullets and numbers ನೀವು ನಮೂದಿಸುವ ಪಠ್ಯ ಮಾಹಿತಿಯನ್ನು ಕ್ರಮಾನುಗತವಾಗಿ ನೋಡಲು ಕ್ರಮಸಂಖ್ಯೆ ಅಥವಾ ಬಿಂದುಗಳನ್ನು ಸೇರಿಸಬಹುದು. ಇದಕ್ಕಾಗಿ ಮೆನುಬಾರ್ನಲ್ಲಿ Format - Bullets and Numbering ನ್ನು ಆಯ್ಕೆ ಮಾಡಿ. ಇಲ್ಲಿ ನಿಮಗೆ ಬೇಕಾದ ಶೈಲಿಯ ಕ್ರಮಸಂಖ್ಯೆ/ಬಿಂದುಗಳನ್ನಯ ಆಯ್ಕೆ ಮಾಡಿಕೊಳ್ಳಬಹುದು.
- Image
ಹಂತ 3 – ಚಿತ್ರ, ಧ್ವನಿ-ವೀಡಿಯೋ, ಕೋಷ್ಟಕ& ಗ್ರಾಫ್ ಗಳನ್ನು ಸೇರಿಸಲು - ಮೆನುಬಾರ್ನಲ್ಲಿ Insert – images ನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನೀವು ಸೇರಿಸಬೇಕಿರು ಚಿತ್ರವನ್ನು ಆಯ್ಕೆ ಮಾಡಿ. ಇದಲ್ಲದೇ ಹೊಸ ಸ್ಲೈಡ್ ಪರದೆಯಲ್ಲಿನ ಚಿತ್ರ ಸೂಚಕದ ಮೇಲೆ ಒತ್ತುವ ಮೂಲಕವೂ ಚಿತ್ರ ಸೇರಿಸಬಹುದು. ಸ್ಲೈಡ್ನಲ್ಲಿರುವ ಇತರೇ ಸೂಚಕಗಳ ಮೇಲೆ ಮೌಸ್ ಚಲಿಸಿದಾಗ ನೀವು ಧ್ವನಿ ಸೇರಿಸುವ, ಗ್ರಾಫ್ ಸೇರಿಸುವ, ಕೋಷ್ಟಕ ಸೇರಿಸುವ ಹಾಗು ವೀಡಿಯೋಗಳನ್ನು ಸೇರಿಸುವ ಆಯ್ಕೆಗಳನ್ನು ಕಾಣಬಹುದು. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್ ನಿಂದ ಸ್ಲೈಡ್ಗೆ ಸೇರಿಸಬಹುದು.
- Image
ಹಂತ 4 -ಅಂತರ್ಜಾಲ ಕೊಂಡಿಯನ್ನು ಸೇರಿಸುವುದು. - ಮೊದಲು ಅಂತರ್ಜಾಲ ಪುಟದ ವಿಳಾಸದ ಕೊಂಡಿಯನ್ನು ಕಾಫಿ ಮಾಡಿಕೊಳ್ಳಬೇಕು. ನಂತರ ಯಾವ ಪದಕ್ಕೆ ಅಂತರ್ಜಾಲ ಕೊಂಡಿಯನ್ನು ಸೇರಿಸಬೇಕಿದೆಯೋ ಅದನ್ನಯ ಆಯ್ಕೆ ಮಾಡಿಕೊಂಡು ಮೆನುಬಾರ್ನಲ್ಲಿನ Insert- Hyperlink ನ್ನು ಆಯ್ಕೆ ಮಾಡಿಕೊಳ್ಳಬೇಕು.ಈಗಾಗಲೇ ಕಾಫಿ ಮಾಡಿಕೊಂಡಿರುವ ಅಂತರ್ಜಾಲ ಪುಟದ ಕೊಂಡಿಯನ್ನು ಇಲ್ಲಿ ಅಂಟಿಸಬೇಕು.
- Image
ಹಂತ 5- ಪ್ರಸ್ತುತಿ ಅನಿಮೇಷನ್ - ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್ ಪ್ಯಾನೆಲ್ನಲ್ಲಿ ಮೌಸ್ ಚಲಿಸುವ ಮೂಲಕ “Custom Animation” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಲ್ಲದೇ ಮೆನುಬಾರ್ನಲ್ಲಿ Slide - Custom Animation ಮೂಲಕವೂ ಪ್ರಸ್ತುತಿಗಳ ಚಲನೆಯ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು..
- Image
ಹಂತ 6- ಹಿನ್ನೆಲೆ ಪುಟಗಳು (ಮಾಸ್ಟರ್ ಪೇಜ್) - ಲಿಬ್ರೆ ಆಪೀಸ್ ಇಂಪ್ರೆಸ್ ನಲ್ಲಿ ಹಲವು ವಿಭಿನ್ನ ಶೈಲಿಯ ಹಿನ್ನೆಲೆಪುಟಗಳನ್ನು ಬಳಸಬಹುದು. ಪ್ರಸ್ತುತಿ ರಚಿಸುತ್ತಿರುವ ಪರದೆಯ ಬಲಭಾಗದಲ್ಲಿನ ಟಾಸ್ಕ್ ಪ್ಯಾನೆಲ್ನಲ್ಲಿ ಮೌಸ್ ಚಲಿಸುವ ಮೂಲಕ “Master Pages” ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಹಲವು ರೀತಿಯ ಹಿನ್ನೆಲೆ ಪುಟಗಳ ಟೆಂಪ್ಲೇಟ್ನ್ನು ನೀವು ಕಾಣಬಹುದಾಗಿದ್ದು, ಸೂಕ್ತವಾದ ಹಿನ್ನೆಲೆ ಪುಟವನ್ನು ಆಯ್ಕೆ ಮಾಡಿಕೊಳ್ಳಬಹುದು.
ಕಡತ ರೂಪ
ಲಿಬ್ರೆ ಆಪೀಸ್ ಇಂಪ್ರೆಸ್ ನ ಕಡತವು .Odp ನಮೂನೆಯಲ್ಲಿ ಉಳಿಯುತ್ತದೆ.
ಕಡತ ಉಳಿಸಿಕೊಳ್ಳುವುದು
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಇಲ್ಲಿ ಉಳಿಸುವ ಕಡತವು .Odp ನಮೂನೆಯಲ್ಲಿ ಉಳಿಯುತ್ತದೆ.
ಕಡತಗಳ ನಿರ್ಯಾತ (ಎಕ್ಸ್ಪೋರ್ಟ್) ಮತ್ತು ಪ್ರಕಟಣೆ
ಲಿಬ್ರೆ ಆಪೀಸ್ ಇಂಪ್ರೆಸ್ ಕಡತವನ್ನು ಇದನ್ನು ಪಿಡಿಎಪ್ ಗೆ (ಮುದ್ರಣದ ಉದ್ದೇಶದಿಂದ), HTML (ವೆಬ್ ಪುಟವಾಗಿ) ಮತ್ತು JPEG (ಚಿತ್ರ) ನಮೂನೆಗೆ ಎಕ್ಸ್ಪೋರ್ಟ್ ಮಾಡಬಹುದು.
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ | Go to Ubuntu Software Centre and search and download. This is part of the custom distribution 16.04, Kalpavriksha. |
ಟರ್ಮಿನಲ್ನಿಂದ | sudo apt-get install libreOffice |
ವೆಬ್ಪುಟದಿಂದ | https://www.libreoffice.org/ and https://wiki.ubuntu.com/LibreOffice |
ವೆಬ್ಆಧಾರಿತ ನೊಂದಣಿ |