"ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೭೨ ನೇ ಸಾಲು: | ೭೨ ನೇ ಸಾಲು: | ||
! ಅನುಸ್ಥಾಪನೆ ವಿಧಾನಗಳು !! ಹಂತಗಳು | ! ಅನುಸ್ಥಾಪನೆ ವಿಧಾನಗಳು !! ಹಂತಗಳು | ||
|- | |- | ||
− | | ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || | + | | ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Search Libreoffice |
|- | |- | ||
− | | ಟರ್ಮಿನಲ್‌ನಿಂದ || | + | | ಟರ್ಮಿನಲ್‌ನಿಂದ || sudo apt-get install libreoffice |
|- | |- | ||
− | | ವೆಬ್‌ಪುಟದಿಂದ || | + | | ವೆಬ್‌ಪುಟದಿಂದ || Go to libreoffice.org and download files to install |
|- | |- | ||
− | |ವೆಬ್‌ಆಧಾರಿತ ನೊಂದಣಿ|| | + | |ವೆಬ್‌ಆಧಾರಿತ ನೊಂದಣಿ|| Not Applicable |
|} | |} | ||
+ | |||
==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ == | ==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ == | ||
೧೩:೨೧, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನುತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ.
ಐ.ಸಿ.ಟಿ ಸಾಮರ್ಥ್ಯ
ಇದೊಂದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದ್ದು. ದತ್ತಾಂಶಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಹಾಗು ವಿಶ್ಲೇಷಿಸಿದ ದತ್ತಾಂಶವನ್ನು ಕೋಷ್ಟಕಗಳ ಮೂಲಕ ಪ್ರಕಟಿಸುವ ಕಾರ್ಯ ನೆಡೆಸುತ್ತವೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ವಿದ್ಯುನ್ಮಾನ ದತ್ತಾಂಶ ಕೋಷ್ಟಕದ ಪ್ರಮುಖ ಉಪಯುಕ್ತತೆ ಎಂದರೆ, ಈ ಕೋಷ್ಟಕದಲ್ಲಿ ನಮೂದಿಸಿದ ಮಾಹಿತಿಯನ್ನು ಹಲವು ರೀತಿಯ ಪ್ರಕ್ರಿಯೆಗೆ ಒಳಪಡಿಸಬಹುದು. ಗಣಿತ ಶಿಕ್ಷಕರಿಗೆ ಬೀಜಗಣಿತದ ಕೆಲವು ಕಾರ್ಯಗಳನ್ನು ಸುಲಭವಾಗಿಸುತ್ತದೆ. ಹಾಗು ಬೇರೆ ಬೇರೆ ವಿಷಯಗಳಿಗೆ ಸಾಂಖ್ಯಿಕ ವಿಶ್ಲೇಷಣೆ ನಡೆಸಬಹುದು. ಈ ಕೈಪಿಡಿಯಲ್ಲಿ ಉದಾಹರಣೆಯಾಗಿ :
- ದತ್ತಾಂಶ ಕೋಷ್ಟಕದ ಮೂಲಕ ವಿವಿಧ ಪ್ರದೇಶಗಳ ಮಳೆ ಪ್ರಮಾಣದ ದತ್ತಾಂಶವನ್ನು ನಿರ್ವಹಣೆ ಮಾಡುವುದನ್ನು ನೋಡಬಹುದು.
- ಗಣನೆಗಳ ಮೂಲಕ ಮಾಹಿತಿ ವಿಶ್ಲೇಷಣ
- ವಿಶ್ಲೇಷಿಸಿದ ಮಾಹಿತಿಗಳ ಆಧಾರದ ಮೇಲೆ ವರದಿಗಳನ್ನು ರಚಿಸುವುದು. (ವಿವಿಧ ಪ್ರದೇಶಗಳಲ್ಲಿನ ಮಳೆ ಬೀಳುವ ಪ್ರಮಾಣ)
- ದತ್ತಾಂಶವನ್ನು ಚಿತ್ರಸಹಿತವಾಗಿ ವಿವರಿಸಲು ಸಾಧ್ಯವಾಗುವಂತಹ ಗ್ರಾಫ್‌ಗಳನ್ನು ರಚಿಸುವುದು.
ಆವೃತ್ತಿ
LibreOffice Calc, Version: 5.2.0.4 (LibreOffice Calc is also available on the Windows and Macintosh operating systems)
ಸಂರಚನೆ
ಲಕ್ಷಣಗಳ ಮೇಲ್ನೋಟ
ದತ್ತಾಂಶ ಕೋಷ್ಟಕ ಅನ್ವಯಕವು ದತ್ತಾಂಶವನ್ನು ಸಂಗ್ರಹಿಸಲು, ದತ್ತಾಂಶವನ್ನು ವಿವಿಧ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು, ದತ್ತಾಂಶವನ್ನು ವಿಶ್ಲೇಷಿಸಲು, ಪಠ್ಯ ರಚಿಸಲು ಮತ್ತು ಗ್ರಾಫಿಕ್ ರಚಿಸಲು ಬಳಸಲಾಗುತ್ತದೆ. ಈ ಅನ್ವಯಕವು ಸಂಖ್ಯಾಶಾಸ್ತ್ರ, ಅಂಕಗಣಿತ ಮತ್ತು ಪಠ್ಯ ಪ್ರಕ್ರಿಯೆಯ ಹಲವು ಕಾರ್ಯಗಳನ್ನು ಹೊಂದಿದೆ. ದತ್ತಾಂಶವನ್ನು ವಿಭಿನ್ನ ಕೋಷ್ಟಕಗಳ ಜೊತೆಗೆ ವಿಂಗಡಿಸಬಹುದು(Sort), ಶೋಧಿಸಬಹುದು (filter) ಪ್ರಕ್ರಿಯೆಗೊಳಿಸಬಹುದು.
ಇತರೇ ಸಮಾನ ಅನ್ವಯಕಗಳು
Other spreadsheet software applications include Microsoft Excel, OpenOffice Calc, Google spreadsheet etc.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
Developer(s) -The Document Foundation Stable release: "Fresh" version: 5.2.2 (September 29, 2016; 14 days ago[1]) [±] "Still" version: 5.1.5 (August 3, 2016; 2 months ago[1]) [±] Development status- Active Operating system-Linux, OS X, Microsoft Windows[2] and FreeBSD[3] Type - Spreadsheet License-GNU LGPLv3[4] Website-www.libreoffice.org/discover/calc/
ಅನ್ವಯಕ ಬಳಕೆ
ಕಾರ್ಯಕಾರಿತ್ವ
ಲಿಬ್ರೆ ಆಪೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು ‘work book’ ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ.
- Image
ಹಂತ 1 -ನಾವು ಲಿಬ್ರೆ ಆಪೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್" ಎನ್ನುತ್ತೇವೆ.
- Image
ಹಂತ 2 -ಕೀಲಿಮಣೆಯಲ್ಲಿನ ಬಾಣದ ಕೀಗಳ ಮೂಲಕ ವಿವಿಧ ಸೆಲ್ಗಳನ್ನಯ ಆಯ್ಕೆ ಮಾಡಬಹುದು. ಸಾಲಿನ ಮೊದಲ ಹಾಗು ಕೊನೆಯ ಸೆಲ್ಗೆ ಹೋಗಲು CTRL-Home (cell A1) ಮತ್ತು CTRL-End ಕೀ ಬಳಸಬಹುದು. ಕೀಲಿಮಣೆಯ ಬಳಕೆಯಲ್ಲಿ ಪರಿಣಿತಿ ಹೊಂದುವುದರಿಂದ ಈ ಅನ್ವಯಕವನ್ನು ಸುಲಭವಾಗಿ ಬಳಸಬಹುದು. ಲಂಬಗೆರೆ (Columns) ಮತ್ತು ಅಡ್ಡಗರೆ (rows) ಯನ್ನು ಹೊಸದಾಗಿ ಸೇರಿಸಬಹುದು, ಅಳಿಸಬಹುದು ಹಾಗು ಅಡಗಿಸಬಹುದು. ಅದೇ ರೀತಿ ವರ್ಕ್ಬುಕ್ನಲ್ಲಿನ ಶೀಟ್ಗಳನ್ನು ಹೆಚ್ಚಿಸಬಹುದು ಹಾಗು ಅಳಿಸಬಹುದಾಗಿದೆ.
- Image
ಹಂತ – 3 ಲಿಬ್ರೆ ಆಪೀಸ್ ರೈಟರ್ನಂತೆಯೇ ಇಲ್ಲಿಯೂ ಸಹ ಹಲವು ಪಾರ್ಮಾಟಿಂಗ್ ಆಯ್ಕೆಗಳು ಲಭ್ಯವಿವೆ. ಪಠ್ಯವನ್ನು ಬೋಲ್ಡ್ ಮಾಡಲು, ಇಟಾಲಿಕ್ ಮಾಡಲು, ಗಾತ್ರವನ್ನು ಹೆಚ್ಚಿಸಲು/ ಕಡಿಮೆ ಮಾಡಲು, ಬಣ್ಣವನ್ನು ಬಳಸಲು ಸಾಧ್ಯವಿದೆ. ಲಭ್ಯವಿರುವ ಮಾಹಿತಿಗನುಗುಣವಾಗಿ ಫಾರ್ಮಾಟಿಂಗ್ ಮಾಡಿಕೊಳ್ಳಬೇಕಾಗಿದೆ.
- Image
ಹಂತ 4-“Name of city” ಅಡಿಯಲ್ಲಿ ನೀವು ಹಲವು ನಗರಗಳ ಹೆಸರನ್ನು ನಮೂದಿಸಿದಾಗ, ಆ ಕಾಲಂ ನ ತಲೆಬರಹವನ್ನು ನೋಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ನಮೂದಿಸಿದಾಗಲೂ ಸಹ ಆ ಕಾಲಂ ನ ತಲೆಬರಹ ಕಾಣಿಸುವಂತಿರಬೇಕಾದರೆ, ಆ ಕಾಲಂ ನ್ನು ಪ್ರೀಜ್ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್ನಲ್ಲಿ View → Freeze Cells → Freeze Rows and Columnsನ್ನು ಆಯ್ಕೆ ಮಾಡಿ.
- Image
ಹಂತ 5 -ಹಲವು ರೀತಿಯ ಗಣನೆಗಳನ್ನು & ಪ್ರಕ್ರಿಯೆಗಳನ್ನು ಈ ದತ್ತಾಂಶ ಕೋಷ್ಟಕದಲ್ಲಿ ಮಾಡಬಹುದು. ಇಲ್ಲಿ ಉದಾಹರಣಗೆ ನಾವು ಹಲವು ನಗರಗಳ ಮಳೆ ಪ್ರಮಾಣವನ್ನು ಲೆಕ್ಕ ಮಾಡೋಣ. ಇಲ್ಲಿ ಕಾಲಂ B ನ ಕೊನೇ ಸೆಲ್ ಗೆ ಹೋಗಿ ಒಟ್ಟು ಮಳೆ ಪ್ರಮಾಣವನ್ನು ಕೂಡಬೇಕಿದೆ. ಅದಕ್ಕಾಗಿ ಕೊನೇ ಸೆಲ್ ನಲ್ಲಿ “=Sum(B2:B15)” ನ್ನು ನಮೂದಿಸಿ. ಇದರ ಅರ್ಥ B ಕಾಲಂ 2 ರಿಂದ 15 ರ ವರೆಗಿನ ಮೊತ್ತವನ್ನು ಕೂಡಬೇಕೆಂಬುದು. ಯಾವುದೇ ರೀತಿಯ ಗಣನೆಯನ್ನು ಮಾಡುವಾಗ ಮೊದಲು “=” ನ್ನು ನಮೂದಿಸಬೇಕು. ಇದಲ್ಲದೇ ಸುಲಭವಾಗಿ “∑” ಸೂಚಕದ ಮೂಲಕವೂ ಮೊತ್ತ ಕಂಡುಹಿಡಿಯಬಹುದು. ಒಟ್ಟು ಮೊತ್ತ ನಮೂದಾಗಿರುವ ಸೆಲ್ ನ ಮೇಲೆ ಮೌಸ್ ಕರ್ಸರ್ ಒತ್ತಿದಾಗ, ಈ ಸೆಲ್ ನ ಫಾರ್ಮೂಲಾವು ಈ ದತ್ತಾಂಶ ಕೋಷ್ಟಕದ ಟೂಲ್ಬಾರ್ ಬಳಿಯಿರುವ ಪ್ರಾರ್ಮೂಲಾ ಬಾರ್ನಲ್ಲಿ ಕಾಣಿಸುತ್ತದೆ. ಎಲ್ಲಾ ರೀತಿಯ ಅಂಕಗಣಿತ ಮತ್ತು ಸಂಖ್ಯಾಶಾಸ್ತ್ಯದ ಲೆಕ್ಕಗಳನ್ನು ಇಲ್ಲಿ ಮಾಡಬಹುದು. ಒಂದು ಸೆಲ್ ನ ಫಾರ್ಮುಲಾವನ್ನು ಮತ್ತೊಂದು ಸೆಲ್ ಗೆ ಕಾಪಿ ಮಾಡಬಹುದು. ಒಂದೇ ಕಾಲಂ ನ ಸೆಲ್ ಗೆ ಕಾಪಿ ಮಾಡಿದಾಗ, ಅದು ಫಾರ್ಮುಲಾವನ್ನು ಮಾತ್ರವೇ ಕಾಪಿ ಮಾಡುತ್ತದೆ.
- Image
ಹಂತ 6-ನಿಮಗೆ ಬೇಕಾದ ರೀತಿಯಲ್ಲಿ ಮಾಹಿತಿಯನ್ನು ವಿಂಗಡಣೆ ವೀಕ್ಷಣೆ ಮಾಡಬಹುದು. ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ವಿಂಗಡಣೆ ಮಾಡಬಹುದು. ಉದಾಹರಣೆಗೆ ಈ ಕೋಷ್ಟಕದಲ್ಲಿ ಅತಿ ಹೆಚ್ಚು ಮಳೆಯಾಗಿರುವ ನಗರಗಳನ್ನು ವಿಂಗಡಿಸಿ ನೋಡಬಹುದು. ಅದೇ ರೀತಿ ನಗರಗಳ ಹೆಸರಿನ ಮೂಲಕವೂ ವಿಂಗಡಿಸಬಹುದು.
- Image
ಹಂತ 7 -ಗ್ರಾಫ್ ಸೇರಿಸಲು : ಮೊದಲು ನಾವು ನಮೂದಿಸಿರುವ ಮಾಹಿತಿಯ ಕಾಲಂಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೆನುಬಾರ್ನಲ್ಲಿನ Insert → chart ನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಚಾರ್ಟ್ ವಿಜ್ಹಾರ್ಡ್ ವಿಂಡೋ ಕಾಣುತ್ತದೆ. ಇಲ್ಲಿ ನಮಗೆ ಬೇಕಾದ ಚಾರ್ಟ್ನ ವಿನ್ಯಾಸವನ್ನಯ ನಾವು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ವಿವಿಧ ಗ್ರಾಫ್ ನಮೂನೆಗಳನ್ನು ಬಳಸುವ ಪ್ರಯೋಗ ಮಾಡುವ ಮೂಲಕ ನೀವು ಹೆಚ್ಚು ಕಲಿಯಬಹುದು.
- Image
ಹಂತ 8- ಹೆಚ್ಚು ಮಾಹಿತಿಯನ್ನು ನಮೂದಿಸಿದಾಗ ಮುದ್ರಿಸುವ ಸಲುವಾಗಿ ಫಾರ್ಮಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಇದನ್ನು ಸರಳಗೊಳಿಸಲು ಕೆಲವು ಸಲಹೆಗಳು:
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಮೇಲಿನ ಉದಾಹರಣೆಯಲ್ಲಿ ನಾವು ಕಡತಕ್ಕೆ ಈ ರೀತಿಯಾಗಿ ಹೆಸರಿಸುತ್ತೇವೆ - ““Rainfall information for cities in South India, October 2016.ods”. ದಿನಾಂಕವನ್ನು ಸಹ ಕಡತದ ಹೆಸರಿನೊಂದಿಗೆ ಸೇರಿಸುವುದರಿಂದ ಈ ಕಡತವನ್ನು ಯಾವಾಗ ರಚಿಸಿದ್ದೆಂದು ತಿಳಿಯಲು ಸಾಧ್ಯವಾಗುತ್ತದೆ.
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಪ್ ಗೆ ಎಕ್ಸ್‌ಪೋರ್ಟ್ ಮಾಡಬಹುದು. ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ.
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | Search Libreoffice |
ಟರ್ಮಿನಲ್‌ನಿಂದ | sudo apt-get install libreoffice |
ವೆಬ್‌ಪುಟದಿಂದ | Go to libreoffice.org and download files to install |
ವೆಬ್‌ಆಧಾರಿತ ನೊಂದಣಿ | Not Applicable |