"ಉಬುಂಟು ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೧೩ ನೇ ಸಾಲು: ೧೧೩ ನೇ ಸಾಲು:
  
 
==ಆಕರಗಳು==
 
==ಆಕರಗಳು==
 +
#[https://wiki.ubuntu.com/Releases ಉಬುಂಟು ರಿಲೀಸ್ ]
 +
#[https://wiki.ubuntu.com/LTS ಉಬುಂಟು ಉಬುಂಟು LTS]
 +
#[https://en.wikipedia.org/wiki/Ubuntu_(operating_system) ವಿಕಿಪೀಡಿಯ]
 +
#[http://karnatakaeducation.org.in/KOER/en/index.php/Kalpavriksha ಕಲ್ಪವೃಕ್ಷ ಪುಟ]

೧೧:೩೮, ೧೫ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಐ.ಸಿ.ಟಿ ಸಾಮರ್ಥ್ಯ

ಆಪರೇಟಿಂಗ್ ಸಿಸ್ಟಮ್ ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI , ಉಚ್ಛರಣೆ Goo-ee) ಎನ್ನುವ ಪ್ರೋಗ್ರಾಮ್ ಅನ್ನು ಬಳಸುತ್ತದೆ. ಇದು ಗಣಕಯಂತ್ರದ ಬೇರೆ ಮನವಿಗಳನ್ನು ಮೌಸ್ ಮೂಲಕ ಪ್ರವೇಶಿಸಲು ಸಹಾಯ ಮಾಡುತ್ತದೆ.. ಪ್ರಸಿದ್ಧವಾಗಿರುವ ಆಪರೇಟಿಂಗ್ ಸಿಸ್ಟಮ್‌ಗಳೆಂದರೆ ವಿಂಡೊಸ್ (Windows) ಜಿಎನ್‌ಯು (GNU) /ಲಿನಕ್ಸ್ (Linux) ಮತ್ತು ಮ್ಯಾಕ್ (Mac OSx)ಓಸಕ್ಸ್.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಮೂಲ ತಂತ್ರಾಂಶವನ್ನು ಬದಲಿಸಿ, ಅಭಿವೃದ್ದಿಪಡಿಸಿ ಅದೂ ಯಾವುದೇ ಲೈಸೆನ್ಸ್ ಅಥವಾ ಪರವಾನಗಿಗೆ ಹಣ ತೆತ್ತದೆ. ಇದೆಲ್ಲದರ ಜೊತೆಗೆ ನಿಮ್ಮ ಭಾಷೆಯಲ್ಲೇ ತಂತ್ರಾಂಶವನ್ನು ಬಳಸುವ ಅವಕಾಶ ಕೂಡ ನಿಮಗೆ ಉಬುಂಟು ಒದಗಿಸುತ್ತದೆ. ಇದನ್ನು ಯಾರು ಬೇಕಾದರೂ ಸುಲಭವಾಗಿ ಬಳಸಬಹುದು ಕೂಡ. ವಿಕಲ ಚೇತನರಿಗೂ ಕೂಡ ಉಪಯೋಗವಾಗುವಂತಹ ಅನೇಕ ತಂತ್ರಾಂಶ ಸವಲತ್ತುಗಳನ್ನು ಉಬುಂಟು ತನ್ನಲ್ಲಿರಿಸಿಕೊಂಡಿದೆ. ಇದು ಉಬುಂಟುವಿನ ಮುಖ್ಯ ಗುರಿ ಕೂಡ. ಪ್ರತಿ ಆರು ತಿಂಗಳಿಗೊಮ್ಮೆ ಹೊಸದಾದ, ಉತ್ತಮ ಮತ್ತು ಸ್ಥಿರವಾದ ಆಪರೇಟಿಂಗ್ ಸಿಸ್ಟಂ ಅನ್ನು ಹೊತ್ತು ತರುವುದರ ಜೊತೆಗೆ, ತಂತ್ರಾಂಶದ ಉಪಯುಕ್ತತೆ, ಅದರ ಬಳಕೆಯ ವಿಧಾನ, ಇನ್ಸ್ಟಾಲೇಶನ್ ಇತ್ಯಾದಿಗಳ ಸರಳೀಕರಣದ ಕಡೆಗೂ ಹೆಚ್ಚಿನ ಗಮನವನ್ನೂ ಹರಿಸುತ್ತದೆ. ಗ್ನು/ಲಿನಕ್ಸ್ ಆಧಾರಿತ ಡೆಬಿಯನ್ ಆಪರೇಟಿಂಗ್ ಸಿಸ್ಟಂನ ಮೂಲವಾಗಿರಿಸಿಕೊಂಡು ಅಭಿವೃದ್ದಿ ಪಡಿಸಲಾಗಿರುವ, ಸ್ವತಂತ್ರ ತಂತ್ರಾಂಶದ ಸ್ವಾತಂತ್ರ್ಯದ ಸವಿಯನ್ನು ಪ್ರಪಂಚದೆಲ್ಲೆಡೆ ಎಲ್ಲ ಕಂಪ್ಯೂಟರ್ ಬಳಕೆದಾರರಿಗೂ ಹಂಚುವುದಕ್ಕೆಂದೇ ಇರುವ ಉಬುಂಟು ಇಂಥದ್ದೊಂದು ತಂತ್ರಾಂಶ. ಶೈಕ್ಷಣಿಕವಾಗಿ ಬಳಸಬಹುದಾದ ಹಲವು ಶೈಕ್ಷಣಿಕ ಪರಿಕರಗಳನ್ನು ಉಬುಂಟಿ ಹೊಂದಿದೆ. ಹಾಗು ಪ್ರಾದೇಶಿಕ ಭಾಷೆಯಲ್ಲಿ ಕಂಪ್ಯೂಟರ್‌ ಬಳಸು ಅನುವು ಮಾಡಿಕೊಡುತ್ತದೆ. ಸುಮಾರು 50ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಯಲ್ಲಿ ಉಬುಂಟು ಲಭ್ಯವಿದೆ. ORCA ಸ್ಕ್ರೀನ್‌ ರೀಡರ್‌ನಂತಹ ಅನ್ವಯಕಗಳು ವಿಶೇಷ ಅಗತ್ಯವುಳ್ಳ, ದೃಷ್ಟಿದೋಷವುಳ್ಳ ಮಕ್ಕಳಿಗೆ ಸಹಾಯಕವಾಗುತ್ತವೆ.

ಆವೃತ್ತಿ

ಉಬುಂಟು ತಂತ್ರಾಂಶ ಪ್ರತೀ ವರ್ಷದಲ್ಲಿ ಎರಡುಬಾರಿ ನವೀಕರಣಗೊಳ್ಳುತ್ತಿರುತ್ತದೆ, ಅಂದರೆ ವರ್ಷದ ಮಾರ್ಚ್ ಮತ್ತು ಆಕ್ಟೋಬರ್ ತಿಂಗಅಳಲ್ಲಿ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಅದರಲ್ಲಿ ಎರಡು ವರ್ಷಕ್ಕೆ ಒಮ್ಮೆ ಎಲ್.ಟಿ.ಸ್(LTS- Long Term Support) ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈಗ ಪ್ರಸ್ತುತ ಉಬುಂಟು ಎಲ್.ಟಿ.ಸ್ 16.04 ಆವೃತ್ತಿಯು ಚಾಲನೆಯಲ್ಲಿದೆ. ಕಳೆದ ಎಲ್.ಟಿ.ಸ್ ಉಬುಂಟು 14.04 ಅಥವ ಯಾವುದೆ ಆವೃತ್ತಿಯನ್ನು ಬಳಸುತ್ತಿರುವವರು, ಈ 16.04 ಆವೃತ್ತಿಗೆ ನವೀಕರಣ ಮಾದಿಕೋಳ್ಳುವ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ.

ಸಂರಚನೆ

ಪ್ರೊಸೆಸರ್: 2 GHz ಡ್ಯುಯಲ್ ಕೋರ್ ಪ್ರೊಸೆಸರ್ ಮೆಮೋರಿ: 1GB of RAM (2GB recommended) ಡಿಸ್ಕ್: ಕನಿಷ್ಟ 30GB ಹಾರ್ಡ್‌ಡಿಸ್ಕ್ ಸ್ಥಳಾವಕಾಶ ಗ್ರಾಫಿಕ್ : ನೆಟ್‌ಬುಕ್ ಇಂಟರ್ಪೆಸ್ ಬಳಸುತ್ತಿದ್ದಲ್ಲಿ 3D acceleration ಗ್ರಾಫಿಕ್ ಅವಶ್ಯಕವಾದುದು. ಉಬುಂಟು ಅನುಸ್ಥಾಪನೆ ಮಾಡುವ ಮೊದಲು, ನಿಮ್ಮ ಕಂಪ್ಯೂಟರ್‌ 64 ಬಿಟ್ ಅಥವಾ 32 ಬಿಟ್ ಆವೃತ್ತಿಯದು ಎಂಬುದನ್ನು ತಿಳಿದು ಆಯಾ ಆವೃತ್ತಿಗೆ ಸೂಕ್ತವಾಗುವ ಉಬುಂಟುವನ್ನು ಡೌನ್‌ಲೋಡಿ ಮಾಡಿ ಅಥವಾ ಡಿವಿಡಿ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಿ.

ಲಕ್ಷಣಗಳ ಮೇಲ್ನೋಟ

ಉಬುಂಟು ಮೂಲಕ ಸಾವಿರಾರು ಅನ್ವಯಕಗಳನ್ನು ಡೌನ್‌ಲೊಡ್‌ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಹುತೇಕ ಅನ್ವಯಕಗಳು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಾಗಿದ್ದು, ಕಂಪ್ಯೂಟರ್‌ಗಳಿಗೆ ಸುಲಭವಾಗಿ ಅನುಸ್ಥಾಪನೆ ಮಾಡಿಕೊಳ್ಳಬಹುದಾಗಿದೆ. ಸುರಕ್ಷಿತವಾದ, ವೆಚ್ಚರಹಿತವಾದ, ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಆಡಳಿತಗಾರರು ಸುಲಭವಾಗಿ ಬಳಸಬಹುದಾದ ವಿಸ್ತಾರವಾದ ಶೈಕ್ಷಣಿಕ ತಂತ್ರಾಂಶಗಳನ್ನು ಉಬುಂಟು ಒದಗಿಸುತ್ತದೆ.

ಸಿಸ್ಟಂ ತಂತ್ರಾಂಶ ಮತ್ತು ಅನ್ವಯಕ ತಂತ್ರಾಂಶ

ಆಪರೇಟಿಂಗ್‌ ಸಿಸ್ಟಂನ್ನು ಸಿಸ್ಟಂ ತಂತ್ರಾಂಶವೆಂದು ಸಹ ಕರೆಯಲಾಗುತ್ತದೆ. ಇದು ಯಂತ್ರಾಂಶಗಳ ಜೊತೆ ಕೆಲಸ ಮಾಡುತ್ತದೆ. ಪ್ರತಿ ಕಂಪ್ಯೂಟರ್‌ಗಳು ಸಹ ತನ್ನ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ಗಳನ್ನು ನಡೆಸಲು ಆಪರೇಟಿಂಗ್ ಸಿಸ್ಟಂನ್ನು ಹೊಂದಿರಲೇಬೇಕಾಗುತ್ತದೆ. ನಿಮ್ಮ ಮೊಬೈಲ್‌ ಪೋನ್‌ ಸಹ ಒಂದು ಆಪರೇಟಿಂಗ್ ಸಿಸ್ಟಂನ್ನು ಹೊಂದಿರುತ್ತದೆ. ನೀವು ಕಂಪ್ಯೂಟರ್‌ನ್ನು ಚಾಲನೆಗೊಳಿಸಿದ ತಕ್ಷಣವೇ ಆಪರೇಟಿಂಗ್‌ ಸಿಸ್ಟಂ ಸಹ ಚಾಲನೆಗೊಳ್ಳುತ್ತದೆ, ಇದನ್ನು ಬೂಟಿಂಗ್ ಎಂದು ಕರೆಯುತ್ತೇವೆ. ಇತರೇ ಎಲ್ಲಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಾದ ಪೈಂಟ್, ಟೈಪಿಂಗ್, ಸಂಗೀತ ಕೇಳುವುದು, ಗಣಿತ ಕಲಿಯುವುದು ಮುಂತಾದವುಗಳನ್ನು ಸಿಸ್ಟಂ ತಂತ್ರಾಂಶದ ಜೊತೆ ಕಾರ್ಯನಿರ್ವಹಿಸುವ ಅನ್ವಯಕ ತಂತ್ರಾಂಶಗಳು ಅಥವಾ ಆಪ್‌ ಗಳೆಂದು ಕರೆಯುತ್ತೇವೆ.

ಇತರೇ ಸಮಾನ ಅನ್ವಯಕಗಳು

ವಾಸ್ತವದಲ್ಲಿ, ನೂರಾರು ಲಿನಕ್ಸ್‌ ತಂತ್ರಾಂಶಗಳು ಲಭ್ಯವಿದ್ದು. ಅದರಲ್ಲಿಪ್ರಮುಖವಾಗಿ ಬಳಸುವ ಕೆಲವು ತಂತ್ರಾಂಶಗಳನ್ನು ಇಲ್ಲಿ ಹೆಸರಿಸಲಾಗಿದೆ. ಮಿಂಟ್, ಡಿಬೈನ್, ಉಬುಂಟು, ಓಪನ್‌ಸೂಸ್, ಫೆಡೋರಾ ಮುಂತಾದವು. ಇವುಗಳಲ್ಲಿ ಲಿನಕ್ಸ್ ಮತ್ತು ಉಬುಂಟು ಉತ್ತಮವಾದುವೆಂದು ಅಭಿಪ್ರಾಯಪಡಲಾಗಿದೆ.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಉಬುಂಟು ಬಳಕೆದಾರರಿಗೆ ಸಹಾಯಕವಾಗಿ ಹಲವು ಸಮುದಾಯ ವೇದಿಕೆಗಳಿವೆ.

ಅನ್ವಯಕ ಬಳಕೆ

ಕಾರ್ಯಕಾರಿತ್ವ






ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

  1. ಮುಕ್ತ ತಂತ್ರಾಂಶ -ಅನುಮತಿಗಳಿಂದ ಮುಕ್ತ
  2. 100 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ
  3. 5 ವರ್ಷಗಳಿಗೂ ಹೆಚ್ಚು ದೀರ್ಘಾವದಿ ಸಹಾಯ
  4. ಸಲಹೆ ಸೇವೆಗಳು ಮತ್ತು ತರಬೇತಿಗಳ ಲಭ್ಯತೆ
  5. ವೈರಸ್ ಮುಕ್ತ ಮತ್ತು ಹೆಚ್ಚು ಸುರಕ್ಷಿತ
  6. ಹೊಸ ಮತ್ತು ಹಳೇ ಯಂತ್ರಾಂಶಗಳಲ್ಲಿಯೂ ಉತ್ತಮ ಕಾರ್ಯನಿರ್ವಹಣೆ
  7. ಶೈಕ್ಷಣಿಕವಾಗಿ ಉಪಯುಕ್ತವಾಗುವ ಬಹಳಷ್ಟು ಅನ್ವಯಕಗಳ ಲಭ್ಯತೆ

ಅನುಸ್ಥಾಪನೆ

ಅನುಸ್ಥಾಪನೆ

ವಿವಿಧ ಆವೃತ್ತಿಯ ಆಪರೇಟಿಂಗ್‌ ಸಿಸ್ಟಂಗಳೊಂದಿಗೆ ಉಬುಂಟು ಅನುಸ್ಥಾಪನೆ ಮಾಡಲು ಕಲ್ಪವೃಕ್ಷ ಪುಟವನ್ನು ನೋಡಿ.

ಉಬುಂಟು ಅನುಸ್ಥಾಪನೆ ಮಾಡುವ ಸಂಕ್ಷಿಪ್ತ ಹಂತಗಳು

1.ಡಿ.ವಿ.ಡಿ ಬಳಸುವ ಮೂಲಕ -
ಡಿ.ವಿ.ಡಿ ಮೂಲಕ ಉಬುಂಟು ಅನುಸ್ಥಾಪನೆ ಮಾಡಿಕೊಳ್ಳುವುದು ಬಹಳ ಸುಲಭ. ಇದರ ಹಂತಗಳನ್ನು ಇಲ್ಲಿ ನೋಡಿ .

  • ಉಬುಂಟು ಡಿ.ವಿ.ಡಿಯನ್ನು ನಿಮ್ಮ ಡಿ.ವಿ.ಡಿ ಡ್ರೈವ್‌ ಗೆ ಸೇರಿಸಿ.
  • ನಿಮ್ಮ ಕಂಪ್ಯೂಟರ್‌ನ್ನು ಪುನರಾರಂಭಿಸಿ.
  • ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಸೂಚಿಸುವ ಉಬುಂಟು ಸ್ವಾಗತ ಪುಟ ತೆರೆಯುತ್ತದೆ. ಇಲ್ಲಿ ಉಬುಂಟು ಅನುಸ್ಥಾಪನೆ ಮಾಡುವ ಆಯ್ಕೆ ಅಥವಾ ಡಿ.ವಿ.ಡಿ ಮೂಲಕ ಉಬುಂಟು ಬಳಸುವ ಆಯ್ಕೆ ಮೂಡುತ್ತದೆ.

2.ಯು.ಎಸ್.ಬಿ ಪೆನ್‌ಡ್ರೈವ್‌ ಬಳಸುವ ಮೂಲಕ
ಬಹಳಷ್ಟು ಹೊಸ ಕಂಪ್ಯೂಟರ್‌ಗಳು ಯು.ಎಸ್.ಬಿ ಪೆನ್‌ಡ್ರೈವ್‌ ಮೂಲಕವೂ ಬೂಟ್‌ ಆಗುತ್ತವೆ. ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಲು ಸೂಚಿಸುವ ಉಬುಂಟು ಸ್ವಾಗತ ಪುಟ ತೆರೆಯುತ್ತದೆ. ಇಲ್ಲಿ ಉಬುಂಟು ಅನುಸ್ಥಾಪನೆ ಮಾಡುವ ಆಯ್ಕೆ ಅಥವಾ ಯು.ಎಸ್.ಬಿ ಪೆನ್‌ಡ್ರೈವ್‌ ಮೂಲಕ ಉಬುಂಟು ಬಳಸುವ ಆಯ್ಕೆ ಮೂಡುತ್ತದೆ

ಒಂದು ವೇಳೆ ನಿಮ್ಮ ಕಂಪ್ಯೂಟರ್‌ ಸ್ವಯಂಚಾಲಿತವಾಗಿ ಬೂಟ್‌ ಆಗದಿದ್ದಲ್ಲಿ, F12 ಕೀ ಯನ್ನು ಒತ್ತಬೇಕಾಗುತ್ತದೆ. ಆದರೆ ಸತತವಾಗಿ ಹಾಗೆ F12 ಕೀಯನ್ನು ಒತ್ತಿ ಹಿಡಿಯಬೇಡಿ.

3.ಉಬುಂಟು ಅನುಸ್ಥಾಪಿಸಲು ಸಿಧ್ಧತೆ- ನಿಮ್ಮ ಕಂಪ್ಯೂಟರ್‌ನ್ನು ವಿದ್ಯುತ್‌ ಚಾರ್ಜರ್‌ಗೆ ಸಂಪರ್ಕಿಸಿ.
4.ನಿಮ್ಮ ಕಂಪ್ಯೂಟರ್‌ನಲ್ಲಿ ಉಬುಂಟು ಅನುಸ್ಥಾಪನೆ ಮಾಡಲು ಸಾಕಷ್ಟು ಜಾಗವಿದೆಯೇ ಎಂಬುದನ್ನು ಪರೀಕ್ಷಿಸಿ. ನಂತರ "Select Download updates while installing" ಮತ್ತು "Install this third-party software" ನ್ನು ಆಯ್ಕೆ ಮಾಡಿ. ನೀವು ಇಂಟರ್‌ನೆಟ್‌ಗೆ ಸಂಪರ್ಕಿತವಾಗಿರದಿದ್ದಲ್ಲಿ, ಇದು ಸಂಪರ್ಕಗೊಳ್ಳಲು ಕೇಳುತ್ತದೆ. ಅನುಸ್ಥಾಪನೆ ಮಾಡುವ ಸಮಯದಲ್ಲಿ ಇಂಟರ್‌ನೆಟ್‌ ಗೆ ಸಂಪರ್ಕಗೊಳ್ಳಲು ನಾವು ಸಲಹೆ ನೀಡುತ್ತೇವೆ, ಇದರಿಂದ ನಿಮ್ಮ ಕಂಪ್ಯೂಟರ್‌ ಎಲ್ಲಾ ಅಪ್‌ಡೇಟ್‌ಗಳನ್ನು ಹೊಂದುತ್ತದೆ.
5.ಡ್ರೈವ್‌ ಸ್ಥಳವನ್ನು ವಿಂಗಡಿಸಿ- ಈಗಾಗಲೇ ನಿಮ್ಮ ಕಂಪ್ಯೂಟರ್‌ನಲ್ಲಿ ಒಂದು ಆಪರೇಟಿಂಗ್‌ ಸಿಸ್ಟಂ ಇದ್ದಲ್ಲಿ, ಉಬುಂಟುವನ್ನು ಅದರ ಜೊತೆಗೆ ಅನುಸ್ಥಾಪನೆ ಮಾಡಲು ಬಯಸುತ್ತೀರಾ ಅಥವಾ ಅದನ್ನು ಅಳಿಸಿ ಉಬುಂಟು ಅನುಸ್ಥಾಪನೆ ಮಾಡಲು ಬಯಸುತ್ತೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಲ್ಲದೇ ’Something else’ ಆಯ್ಕೆಯ ಮೂಲಕ ಡ್ರೈವ್‌ನಲ್ಲಿ ಸ್ಥಳವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು
6.ಅನುಸ್ಥಾಪನೆ ಪ್ರಾರಂಭಿಸಿ ಈ ಹಿಂದಿನ ನಿಮ್ಮ ಆಯ್ಕೆ ಯ ಪ್ರಕಾರ ವೀವು "Install Now " ಮೇಲೆ ಒತ್ತಿದ ತಕ್ಷಣಿ ಉಬುಂಟು ಅನುಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಉಬುಂಟು 4.5 ಜಿಬಿ ಯಷ್ಟು ಸ್ಥಳ ಪಡೆಯುತ್ತದೆ.
7.ನಿಮ್ಮ ಪ್ರದೇಶವನ್ನು ಆಯ್ದುಕೊಳ್ಳಿ- ನೀವು ಇಂಟರ್‌ನೆಟ್‌ ಸಂಪರ್ಕ ಹೊಂದಿದ್ದರೆ, ಸ್ವಯಂಚಾಲಿತವಾಗಿ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ನಿಮ್ಮ ಪ್ರದೇಶ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಅಲ್ಲಿ ನಮೂದಾಗಿರುವ ಪ್ರದೇಶವನ್ನು ಬದಲಿಸಲು ಆ ನಕ್ಷೆಯ ಮೇಲೆ ಕ್ಲಿಕ್ ಮಾಡಿ ಅಥವಾ ಸ್ಥಳದ ಹೆಸರನ್ನು ನಮೂದಿಸಿ. .
ಕೀಬೋರ್ಡ್‌ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಿ. ನಿಮಗೆ ಬೇಕಾದ ಭಾಷೆಯ ಆಯ್ಕೆಯನ್ನು ಕ್ಲಿಕ್ ಮಾಡಿ..
8.ನಿಮ್ಮ ಲಾಗಿನ್ ಹೆಸರು ಮತ್ತು ಗುಪ್ತಪದವನ್ನು ನಮೂದಿಸಿ.
ಇದರ ನಂತರ ಅನುಸ್ಥಾಪನೆ ಪ್ರಕ್ರಿಯೆಯ ಮುಂದುವರೆಯುತ್ತದೆ. ಇದು 20-40 ನಿಮಿಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಅನುಸ್ಥಾಪನೆ ಮುಗಿದ ನಂತರ ಅನುಸ್ಥಾಪನೆ ಸಾಧನವನ್ನು ತೆಗೆದು ಕಂಪ್ಯೂಟರ್‌ನ್ನು ಪುನರಾರಂಭಿಸಲು ಸೂಚಿಸುತ್ತದೆ.

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಉಬುಂಟು ಕೆಲವು ಮೊಬೈಲ್‌ ಪೋನ್‌ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಲಬ್ಯವಿದೆ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು

  1. ಉಬುಂಟು ರಿಲೀಸ್
  2. ಉಬುಂಟು ಉಬುಂಟು LTS
  3. ವಿಕಿಪೀಡಿಯ
  4. ಕಲ್ಪವೃಕ್ಷ ಪುಟ