"ಸಮಾಂತರ ರೇಖೆಗಳನ್ನು ಪರಿಚಯಿಸುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೩೫ ನೇ ಸಾಲು: ೩೫ ನೇ ಸಾಲು:
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
ಎರಡು ಸಮಾಂತರ ರೇಖೆಗಳು ಭೇಟಿಯಾಗುತ್ತವೆಯೇ?
 
ಎರಡು ಸಮಾಂತರ ರೇಖೆಗಳು ಭೇಟಿಯಾಗುತ್ತವೆಯೇ?
 +
 +
[[ವರ್ಗ:ರೇಖೆಗಳು ಮತ್ತು ಕೋನಗಳು]]

೧೫:೫೭, ೧೮ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ

ಸಮಾಂತರ ರೇಖೆಗಳು ಯಾವಾಗಲೂ ಒಂದೇ ಅಂತರದಲ್ಲಿ ಇರುವ ರೇಖೆಗಳು. ಏಕೆಂದರೆ ಸಮಾಂತರ ರೇಖೆಗಳ ಮೇಲಿನ ಬೇರೆ ಬೇರೆ ಬಿಂದುಗಳ ನಡುವಿನ ಲಂಬದೂರವು ಸಮವಾಗಿರುತ್ತದೆ ಆದ್ದರಿಂದ ಸಮಾಂತರ ರೇಖೆಗಳು ಎಂದಿಗೂ ಛೇದಿಸುವುದಿಲ್ಲ.

ಉದ್ದೇಶಗಳು

ಸಮಾಂತರ ರೇಖೆಗಳನ್ನು ಪರಿಚಯಿಸುವುದು

ಸಮಾಂತರ ರೇಖೆಗಳ ನಡುವಿನ ಲಂಬದೂರವನ್ನು ಅರ್ಥಮಾಡಿಕೊಳ್ಳುವುದು

ಅಂದಾಜು ಸಮಯ

೨೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳು,ಛೇದಿಸುವ ರೇಖೆಗಳು ಮತ್ತು ಶೃಂಗಾಭಿಮುಖ ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಪೂರ್ವ ಕರ ನಿರತ ಚಟುವಟಿಕೆಗಳು: ಎರಡು ಸಮಾಂತರ ರೇಖೆಗಳನ್ನು ಕಡತದಲ್ಲಿ ಬರೆಯಿರಿ ಈ ರೇಖೆಗಳು ಸೇರುತ್ತವೆಯೇ ಎಂದು ಕೇಳಿ.
  • ಮಕ್ಕಳಿಂದ ಆರಂಭಿಕ ಅವಲೋಕನಗಳನ್ನು ಪಡೆಯಲು ಕಡತವನ್ನು ಬಳಸಿ - ರೇಖೆಗಳು ಎಲ್ಲಿಯಾದರೂ ಭೇಟಿಯಾಗುತ್ತಿದ್ದರೆ
  • ಎರಡು ರೇಖೆಗಳು ಎಂದಿಗೂ ಭೇಟಿಯಾಗದಿರಲು ಸಾಧ್ಯವೇ.
  • ಅವು ಒಂದು ನಿರ್ದಿಷ್ಟ ಬಿಂದುವಿನಲ್ಲಿ ಭೇಟಿಯಾಗುತ್ತವೆ ಎಂದು ನಿಮಗೆ ಹೇಗೆ ಗೊತ್ತು?
  • ಎರಡು ರೇಖೆಗಳು ಎಂದಿಗೂ ಭೇಟಿಯಾಗುವುದಿಲ್ಲ ಎಂದು ತೋರಿಸಲು ಪರದೆಯನ್ನು ಎರಡೂ ಕಡೆಗಳಿಗೂ ಎಳೆಯಿರಿ.
  • ಎರಡು ರೇಖೆಗಳ ನಡುವಿನ ಅಂತರವನ್ನು ಅಳೆಯುವುದರಿಂದ ರೇಖೆಗಳು ಭೇಟಿಯಾಗುತ್ತವೆಯೇ ಎಂದು ನಿರ್ಧರಿಸಬಹುದು.
  • ರೇಖೆಗಳ ಮೇಲೆ ಎರಡು ಬಿಂದುಗಳನ್ನು ರೂಪಿಸಿ ಮತ್ತು ಅವುಗಳನ್ನು ಸೇರಿಸಿ.
  • ಎರಡು ಸಮಾಂತರ ರೇಖೆಗಳನ್ನು ಬರೆಯಿರಿ
  • ಈ ರೇಖೆಗಳ ಬಗ್ಗೆ ನೀವು ಏನು ಗಮನಿಸಿದ್ದೀರಿ
  • ಎರಡು ರೇಖೆಗಳ ನಡುವಿನ ಅಂತರವನ್ನು ಗಮನಿಸಿ
  • ಛೇದಕ ಪರಿಕಲ್ಪನೆಯನ್ನು ಪರಿಚಯಿಸಿ: ಛೇದಕದೂಂದಿಗೆ ಎರಡು ರೇಖೆಗಳನ್ನು ಬರೆಯಿರಿ - ಎರಡು ರೇಖೆಗಳು ಸಮಾಂತರವಾಗಿವೆ ಎಂದು ನೀವು ಹೇಗೆ ಹೇಳಬಹುದು?
  • ಸಮಾಂತರ ರೇಖೆಗಳ ಆಂತರಿಕ ಭಾಗ ಮತ್ತು ಬಾಹ್ಯ ಭಾಗವನ್ನು ಗುರುತಿಸಿ.

ಮೌಲ್ಯ ನಿರ್ಣಯ ಪ್ರಶ್ನೆಗಳು

ಎರಡು ಸಮಾಂತರ ರೇಖೆಗಳು ಭೇಟಿಯಾಗುತ್ತವೆಯೇ?