"ಮಾರುತಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೬ ನೇ ಸಾಲು: | ೬ ನೇ ಸಾಲು: | ||
# '''ನಿರಂತರ ಮಾರುತಗಳು (planetary winds) :''' ಇವುಗಳನ್ನು ನಿತ್ಯ ಮಾರುತ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು.ಇವುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.ಇದರಲ್ಲಿ ಮೂರು ವಿಧಗಳು 1) ವಾಣಿಜ್ಯ ಮಾರುತಗಳು 2) ಪ್ರತಿ ವಾಣಿಜ್ಯ ಮಾರುತಗಳು 3) ಧ್ರುವೀಯ ಮಾರುತಗಳು. | # '''ನಿರಂತರ ಮಾರುತಗಳು (planetary winds) :''' ಇವುಗಳನ್ನು ನಿತ್ಯ ಮಾರುತ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು.ಇವುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.ಇದರಲ್ಲಿ ಮೂರು ವಿಧಗಳು 1) ವಾಣಿಜ್ಯ ಮಾರುತಗಳು 2) ಪ್ರತಿ ವಾಣಿಜ್ಯ ಮಾರುತಗಳು 3) ಧ್ರುವೀಯ ಮಾರುತಗಳು. | ||
# '''ಋತುಮಾನ ಮಾರುತಗಳು (seasonal winds) :''' ಇವುಗಳನ್ನು ನಿಯತಕಾಲಿಕ ಮಾರುತಗಳು,ಕ್ಲುಪ್ತಮಾರುತಗಳು ಎಂದೂ ಕರೆಯುವರು.ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾ. | # '''ಋತುಮಾನ ಮಾರುತಗಳು (seasonal winds) :''' ಇವುಗಳನ್ನು ನಿಯತಕಾಲಿಕ ಮಾರುತಗಳು,ಕ್ಲುಪ್ತಮಾರುತಗಳು ಎಂದೂ ಕರೆಯುವರು.ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾ. | ||
+ | '''ನೈಋತ್ಯ ಮಾನ್ಸೂನ್ ಮಾರುತಗಳು''': ಭಾರತದಲ್ಲಿ ಇದನ್ನು ಮಳೆಗಾಲ ಎನ್ನುವರು. ಇವು ಜಲಾಂಶಪೂರಿತ ಮಾರುತಗಳಾಗಿದ್ದು ಭಾರತದ ಹೆಚ್ಚು ಭಾಗದಲ್ಲಿ ಮಳೆ ಸುರಿಸುತ್ತವೆ. ಇದು ಜೂನ್ ನಿಂದ ಸೆಪ್ಟಂಬರ್ ವರೆಗೆ ಕಂಡು ಬರುವವು.ಈ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ.ಅವು ಅರಬ್ಬಿ ಸಮುದ್ರ ಶಾಖೆ ಹಾಗೂ ಬಂಗಾಳಕೊಲ್ಲಿಯ ಶಾಖೆ. | ||
+ | '''ಈಶಾನ್ಯ ಮಾನ್ಸೂನ್ ಮಾರುತಗಳು''': ಅಕ್ಟೋಬರ್ ತಿಂಗಳ ಕೊನೆಯ ಭಾಗದ ಒಳಗಾಗಿ ಭಾರತದ ಉಪಖಂಡದಲ್ಲಿ ಮಳೆ ಸುರಿದ ಪರಿಣಾಮವಾಗಿ ಉಷ್ಣಾಂಶವು ಕಡಿಮೆಯಾಗುತ್ತದೆ.ಅದಕ್ಕಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಹಿಮ್ಮೆಟ್ಟಲು ಪ್ರಾರಂಭ ಮಾಡುತ್ತವೆ.ನಿಧಾನವಾಗಿ ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಇವು ಬೀಸುವುದನ್ನು ನಿಲ್ಲಿಸುತ್ತವೆ.ಇದನ್ನೇ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಎಂದು ಕರೆಯುವರು. | ||
# '''ಸ್ಥಳೀಯ ಮಾರುತಗಳು (local winds) :''' ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ,ತೇವಾಂಶದಲ್ಲಿ ವ್ಯತ್ಯಾಗಳ ಪರಿಣಾಮವಾಗಿ ಸ್ಥಳಿಯ ಮಾರುತಗಳು ಉಂಟಾಗುತ್ತವೆ.ಇವುಗಳು ಪರ್ವತಶ್ರೇಣಿಗಳು,ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯುಪ್ರವಾಹಗಳುಂಟಾಗುತ್ತವೆ.ಪ್ರಮುಖ ಸ್ತಳೀಯ ಮಾರುತಗಳಾವುವೆಂದರೆ,ಭೂಗಾಳಿ,ಸಮುದ್ರ ಗಾಳಿ, ಪರ್ವತಗಾಳಿ,ಕಣಿವೆಗಾಳಿ ಮುಂ. | # '''ಸ್ಥಳೀಯ ಮಾರುತಗಳು (local winds) :''' ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ,ತೇವಾಂಶದಲ್ಲಿ ವ್ಯತ್ಯಾಗಳ ಪರಿಣಾಮವಾಗಿ ಸ್ಥಳಿಯ ಮಾರುತಗಳು ಉಂಟಾಗುತ್ತವೆ.ಇವುಗಳು ಪರ್ವತಶ್ರೇಣಿಗಳು,ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯುಪ್ರವಾಹಗಳುಂಟಾಗುತ್ತವೆ.ಪ್ರಮುಖ ಸ್ತಳೀಯ ಮಾರುತಗಳಾವುವೆಂದರೆ,ಭೂಗಾಳಿ,ಸಮುದ್ರ ಗಾಳಿ, ಪರ್ವತಗಾಳಿ,ಕಣಿವೆಗಾಳಿ ಮುಂ. | ||
# '''ಅವರ್ತ ಮತ್ತು ಪ್ರತ್ಯಾವರ್ತ ಮಾರುತಗಳು (cyclones and anti cyclones) :'''ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿ ಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ.ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು. | # '''ಅವರ್ತ ಮತ್ತು ಪ್ರತ್ಯಾವರ್ತ ಮಾರುತಗಳು (cyclones and anti cyclones) :'''ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿ ಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ.ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು. |
೨೧:೪೯, ೮ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಮಾರುತಗಳು
ಮಾರುತಗಳು ಭೂಮಿಯ ದೈನಂದಿನ ಚಲನೆ ಮತ್ತು ಒತ್ತಡದ ಹಂಚಿಕೆಯಲ್ಲಿ ವ್ಯತ್ಯಾಸಗಳಿಂದ ಉಂಟಾಗುತ್ತವೆ.ವಾಯು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು ಪವನದಿಕ್ಸೂಚಿ ಉಪಕರಣವನ್ನು ಬಳಸುವರು. ಅದೇ ರೀತಿ ವಾಯುವಿನ ವೇಗವನ್ನು ಅಳೆಯಲು ಪವನವೇಗಮಾಪಕ ಉಪಕರಣವನ್ನು ಉಪಯೋಗಿಸುವರು.
ಮಾರುತಗಳ ವಿಧಗಳು
- ನಿರಂತರ ಮಾರುತಗಳು (planetary winds) : ಇವುಗಳನ್ನು ನಿತ್ಯ ಮಾರುತ ಅಥವಾ ಭೂಮಂಡಲಿಯ ಮಾರುತಗಳೆಂದೂ ಸಹ ಕರೆಯುವರು.ಇವುಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಬಹುತೇಕ ಒಂದೇ ದಿಕ್ಕಿನಿಂದ ಬೀಸುತ್ತವೆ.ಇದರಲ್ಲಿ ಮೂರು ವಿಧಗಳು 1) ವಾಣಿಜ್ಯ ಮಾರುತಗಳು 2) ಪ್ರತಿ ವಾಣಿಜ್ಯ ಮಾರುತಗಳು 3) ಧ್ರುವೀಯ ಮಾರುತಗಳು.
- ಋತುಮಾನ ಮಾರುತಗಳು (seasonal winds) : ಇವುಗಳನ್ನು ನಿಯತಕಾಲಿಕ ಮಾರುತಗಳು,ಕ್ಲುಪ್ತಮಾರುತಗಳು ಎಂದೂ ಕರೆಯುವರು.ಇವುಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ತದ್ವಿರುದ್ಧ ದಿಕ್ಕಿನಿಂದ ಬೀಸುತ್ತವೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳು ನಿಯತಕಾಲಿಕ ಮಾರುತಗಳಿಗೆ ಉತ್ತಮ ಉದಾ.
ನೈಋತ್ಯ ಮಾನ್ಸೂನ್ ಮಾರುತಗಳು: ಭಾರತದಲ್ಲಿ ಇದನ್ನು ಮಳೆಗಾಲ ಎನ್ನುವರು. ಇವು ಜಲಾಂಶಪೂರಿತ ಮಾರುತಗಳಾಗಿದ್ದು ಭಾರತದ ಹೆಚ್ಚು ಭಾಗದಲ್ಲಿ ಮಳೆ ಸುರಿಸುತ್ತವೆ. ಇದು ಜೂನ್ ನಿಂದ ಸೆಪ್ಟಂಬರ್ ವರೆಗೆ ಕಂಡು ಬರುವವು.ಈ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ.ಅವು ಅರಬ್ಬಿ ಸಮುದ್ರ ಶಾಖೆ ಹಾಗೂ ಬಂಗಾಳಕೊಲ್ಲಿಯ ಶಾಖೆ. ಈಶಾನ್ಯ ಮಾನ್ಸೂನ್ ಮಾರುತಗಳು: ಅಕ್ಟೋಬರ್ ತಿಂಗಳ ಕೊನೆಯ ಭಾಗದ ಒಳಗಾಗಿ ಭಾರತದ ಉಪಖಂಡದಲ್ಲಿ ಮಳೆ ಸುರಿದ ಪರಿಣಾಮವಾಗಿ ಉಷ್ಣಾಂಶವು ಕಡಿಮೆಯಾಗುತ್ತದೆ.ಅದಕ್ಕಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಹಿಮ್ಮೆಟ್ಟಲು ಪ್ರಾರಂಭ ಮಾಡುತ್ತವೆ.ನಿಧಾನವಾಗಿ ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಇವು ಬೀಸುವುದನ್ನು ನಿಲ್ಲಿಸುತ್ತವೆ.ಇದನ್ನೇ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಎಂದು ಕರೆಯುವರು.
- ಸ್ಥಳೀಯ ಮಾರುತಗಳು (local winds) : ನಿರಂತರ ನಿಯತಕಾಲಿಕ ಮಾರುತಗಳು ಸ್ಥಳೀಯ ಉಷ್ಣಾಂಶ ಒತ್ತಡ,ತೇವಾಂಶದಲ್ಲಿ ವ್ಯತ್ಯಾಗಳ ಪರಿಣಾಮವಾಗಿ ಸ್ಥಳಿಯ ಮಾರುತಗಳು ಉಂಟಾಗುತ್ತವೆ.ಇವುಗಳು ಪರ್ವತಶ್ರೇಣಿಗಳು,ಕಣಿವೆಗಳು ಮತ್ತು ಇತರೆ ಎತ್ತರದ ಸ್ಥಳಗಳನ್ನು ಹಾದುಹೋಗುವುದರಿಂದ ಬದಲಾವಣೆಗೊಂಡು ವಾಯುಪ್ರವಾಹಗಳುಂಟಾಗುತ್ತವೆ.ಪ್ರಮುಖ ಸ್ತಳೀಯ ಮಾರುತಗಳಾವುವೆಂದರೆ,ಭೂಗಾಳಿ,ಸಮುದ್ರ ಗಾಳಿ, ಪರ್ವತಗಾಳಿ,ಕಣಿವೆಗಾಳಿ ಮುಂ.
- ಅವರ್ತ ಮತ್ತು ಪ್ರತ್ಯಾವರ್ತ ಮಾರುತಗಳು (cyclones and anti cyclones) :ಇವುಗಳು ಅನಿಶ್ಚಿತವಾಗಿ ಬೀಸುತ್ತವೆ. ಸಾಮಾನ್ಯವಾಗಿ ಒತ್ತಡದ ಹಂಚಿಕೆಯಲ್ಲಿನ ಅತಿ ಹೆಚ್ಚು ವ್ಯತ್ಯಾಸದ ಕಾರಣದಿಂದ ಇವು ಬೀಸಲಾರಂಭಿಸುತ್ತವೆ.ಇವುಗಳು ಬೀಸುವ ಅವಧಿ ಅಲ್ಪಕಾಲಿಕವಾದರೂ ಕೆಲವೊಮ್ಮೆ ಇವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿಯಾದವು.