"ನ್ಯೂನತಾ ಕಾಯಿಲೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೩ ನೇ ಸಾಲು: ೩೩ ನೇ ಸಾಲು:
 
*http://en.wikipedia.org/wiki/Nutrition_disorder
 
*http://en.wikipedia.org/wiki/Nutrition_disorder
 
*http://www.humanillnesses.com/original/Conj-Dys/Dietary-Deficiencies.html
 
*http://www.humanillnesses.com/original/Conj-Dys/Dietary-Deficiencies.html
 +
*http://kn.wikipedia.org/wiki/ಅಪೌಷ್ಟಿಕತೆ
  
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==

೧೩:೫೦, ೩೦ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #೧ - ನ್ಯೂನಪೋಷಣೆ

ಅವಶ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೀರ್ಘಕಾಲ ದೊರೆಯದಿದ್ದಲ್ಲಿ ನ್ಯೂನಪೋಷಣೆ ಉಂಟಾಗುವುದು.

ಕಲಿಕೆಯ ಉದ್ದೇಶಗಳು

  1. ನ್ಯೂನತಾ ಕಾಯಿಲೆಗಳ ಅರ್ಥವನ್ನು ತಿಳಿಯುವುದು
  2. ವಿವಿಧ ನ್ಯೂನತಾ ಕಾಯಿಲೆಗಳ ಲಕ್ಷಣಗಳನ್ನು ಗುರುತಿಸುವರು
  3. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಈ ಕಾಯಿಲೆಗಳಿಂದ ನರಳುವ ವ್ಯಕ್ತಿಗಳನ್ನು ಗುರುತಿಸುವರು
  4. ನ್ಯೂನತಾ ಕಾಯಿಲೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ತಿಳಿಸುವರು

ಶಿಕ್ಷಕರಿಗೆ ಟಿಪ್ಪಣಿ

“ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆಯನ್ನು ತೆಗೆದುಕೊಂಡರೆ ನಮ್ಮ ಪೂರ್ವಜರು ಈ ಸತ್ಯವನ್ನು ಅರಿತಿದ್ದರು ಎನ್ನುವುದನ್ನು ಈ ಗಾದೆಯಿಂದ ತಿಳಿಯಬಹುದು. ಮಾನವನಿಗೆ ಪೋಷಕಾಂಶಗಳ ಮಹತ್ವವನ್ನು ತಿಳಿಯಬಹುದು. ಫೋಷಕಾಂಶಗಳ ಕೊರತೆ ಪ್ರತಿಯೊಂದು ರೋಗಕ್ಕೆ ಮೂಲ ಕಾರಣವೆನ್ನಬಹುದು.

ಕ್ರ.ಸಂ. ನ್ಯೂನತಾ ಕಾಯಿಲೆ ನ್ಯೂನ ಪೋಷಕಾಂಶ ಲಕ್ಷಣಗಳು ತಡೆಗಟ್ಟುವ ವಿಧಾನ
ಫ್ರೈನೋಡರ್ಮ ಚಿತ್ರಗಳು ಕೊಬ್ಬು * ಕೈಕಾಲು, ಬೆನ್ನು, ಪೃಷ್ಠದ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವವು
  • ಚರ್ಮವು ಶುಷ್ಕ ಮತ್ತು ಮಂದವಾಗುವುದು.
ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ
ಕ್ವಾಷೀಯೋರಕರ್‌ ಚಿತ್ರಗಳು ಪ್ರೋಟೀನ್‌ * ಕುಠಿತ ಬೆಳವಣಿಗೆ, ಹೊಟ್ಟೆ, ಕಾಲು ಮತ್ತು ಪಾದಗಳಲ್ಲಿ ಬಾವು
  • ಚರ್ಮ ಮತ್ತು ರೋಮಗಳ ಬಣ್ಣ ಬದಲಾಗುವಿಕೆ, ಮಾಂಸ ಖಂಡಗಳ ಜೋಲು ಬೀಳುವಿಕೆ ಮತ್ತು ಬುದ್ಧಿಮಾಂದ್ಯತೆ
ಪ್ರೋಟೀನ್‌ ಹೆಚ್ಚಿರುವ ಆಹಾರಗಳಾದ ಮೊಳಕೆ ಕಾಳುಗಳು, ಮೊಟ್ಟೆ, ಹಾಲು, ಎಣ್ಣೆ ಕಾಳುಗಳು ಇತ್ಯಾದಿಗಳ ಸೇವನೆ.
ಪೋಷಣಾ ಮರಾಸ್ಮಸ್‌ ಚಿತ್ರಗಳು ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಟ್ಸ್ ಕುಠಿತ ಬೆಳವಣಿಗೆ, ಮಾಂಸಖಂಡಗಳ ಇಳಿಬೀಳುವಿಕೆ, ಬಡಕಲಾದ ಕೈಕಾಲುಗಳು ಮತ್ತು ಒಣಕಲಾದ ಚರ್ಮ ಸುಲಭವಾಗಿ ಜೀರ್ಣವಾಗಿ ರಕ್ತಗತವಾಗುವಂತಹ ಪ್ರೋಟಿನ್‌, ಕಾರ್ಬೋಹೈಡ್ರೆಟ ಸಮೃದ್ಧವಾಗಿರುವ ಆಹಾರವನ್ನು ಕೊಡುವುದು
ಇರಳುಗಣ್ಣು / ನಿಶಾಂಧತೆ, ಕ್ಸೀರಾಪ್ಥಾಲ್ಮಿಯಾ ಚಿತ್ರಗಳು ಜೀವಸತ್ತ್ವ 'ಎ' ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು, ಕಣ್ಣುಗಳ ಶುಷ್ಕತೆ ಕ್ಯಾರೆಟ್‌, ಮೀನು, ಮೀನಿನ ಪಿತ್ತಕೋಶದ ಎಣ್ಣೆ, ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ
ಬೆರಿ ಬೆರಿ ಚಿತ್ರಗಳು ಜೀವಸತ್ತ್ವ 'ಬಿ1' * ಸ್ನಾಯುಗಳ ಬಲಹೀನತೆ, ನೋವು, ಜೋಮು ಹಿಡಿಯುವಿಕೆ.
  • ನರಗಳಲ್ಲಿ ನ್ಯೂನತೆ ಉಂಟಾಗಿ ಪಾರ್ಶ್ವವಾಯು ಉಂಟಾಗಬಹುದು
ಪಾಲಿಷ್‌ ಮಾಡದೆ ಇರುವ ಅಕ್ಕಿ, ಹಾಲು, ಹಸಿರು ತರಕಾರಿಗಳ ಸೇವನೆಯಿಂದ
ಫೋಟೋಫೋಬಿಯಾ ಚಿತ್ರಗಳು ಜೀವಸತ್ತ್ವ 'ಬಿ2' ಕಣ್ಣು ಬೆಳಕು ಸಹಿಸಲಾರದಷ್ಟು ಸೂಕ್ಷ್ಮವಾಗುತ್ತದೆ. ಬಾಯಿಯ ಮೂಲೆಗಳು ನಾಲಿಗೆ ಮತ್ತು ತುಟಿಗಳ ಮೇಲೆ ಹುಣ್ಣಾಗುತ್ತವೆ. ಹಸಿರು ತರಕಾರಿಗಳು, ಯೀಸ್ಟ್ , ಎಣ್ಣೆ ಬೀಜಗಳು, ಮೊಟ್ಟೆ ಗಳ ಸೇವನೆ
ರಕ್ತ ಹೀನತೆ ಜೀವಸತ್ತ್ವ 'ಬಿ12' ಹಾನಿಕಾರಕ ರಕ್ತಹೀನತೆ, ಸದಾ ಆಯಾಸ, ಹಸಿವೆಯಾಗದಿರುವುದು ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ ಮೀನು ಮತ್ತು ಪಿತ್ತಕೋಶ ಇವುಗಳ ಸೇವನೆಯಿಂದ
ಸ್ಕರ್ವಿ ಚಿತ್ರಗಳು ಜೀವಸತ್ತ್ವ 'ಸಿ' * ಒಸಡು ಮತ್ತು ಆಂತರಿಕ ಅಂಗಗಳಲ್ಲಿ ರಕ್ತಸ್ರಾವ
  • ನಿಶ್ಯಕ್ತಿ, ರಕ್ತಹೀನತೆ, ಕಾಲುಗಳಲ್ಲಿ ಊತ
ಸಿಟ್ರಸ್ ಹಣ್ಣುಗಳು, ಟೊಮೊಟೊ, ನೆಲ್ಲಿಕಾಯಿ, ಮೊಳಕೆ ಕಾಳುಗಳ ಸೇವನೆ
ರಿಕೆಟ್ಸ್ ಚಿತ್ರಗಳು ಜೀವಸತ್ತ್ವ 'ಡಿ' ಮಕ್ಕಳಲ್ಲಿ ಕುಠಿತ ಬೆಳವಣಿಗೆ, ಮೂಳೆಗಳ ವಿಕೃತ ಬೆಳವಣಿಗೆ, ಬಾಗಿರುವ ಕಾಲುಗಳು, ವಿಕೃತ ತಲೆಬುರುಡೆ, ನ್ಯೂನ ಪಕ್ಕೆಲುಬು, ವಿಕೃತ ಹಲ್ಲುಗಳು, ಹಿಗ್ಗಿದ ಕೀಲುಗಳು ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು.
೧೦ ಆಸ್ಟಿಯೋಮಲಾಸಿಯಾ ಚಿತ್ರಗಳು ಜೀವಸತ್ತ್ವ 'ಡಿ' ಮೂಳೆಗಳ ಬಿದುರತೆ
  • ವಯಸ್ಕರಲ್ಲಿ ಸೊಂಟದ ಮೂಳೆಗಳು, ಎದೆಯ ಮೂಳೆಗಳು ಮೃದುವಾಗುವವು.
ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು.
೧೧ ಸರಳ ಗಳಗಂಡ ಚಿತ್ರಗಳು ಅಯೋಡಿನ್‌ * ಥೈರಾಯಿಡ್ ಗ್ರಂಥಿಯ ಊತ
  • ದೈಹಿಕ, ಮಾನಸಿಕ ಆರೋಗ್ಯ ಕುಠಿತಗೊಳ್ಳವುದು.
  • ಚಯಾಪಚಯ ಕ್ರಿಯೆಗಳ ಮೇಲೆ ಅಡ್ಡಪರಿಣಾಮ ಬೀರುವುದು
* ಅಯೋಡೈಸಡ್ ಉಪ್ಪು ಸೇವನೆ
  • ಕಡಲ ಮೀನು ಮತ್ತು ಕಡಲ ಮೂಲದ ಆಹಾರ ಪದಾರ್ಥಗಳ ಸೇವನೆ

ಚಟುವಟಿಕೆ ೧

  1. ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು : ವಿದ್ಯಾರ್ಥಿಗಳ ತಂಡ, ೧00 ರಿಂದ ೨00 ರ ಪ್ರಶ್ನಾವಳಿ ಪತ್ರಿಕೆ, ರೋಗದ ಲಕ್ಷಣಗಳ ಪಟ್ಟಿ
  2. ಪೂರ್ವಾಪೇಕ್ಷಿತ/ ಸೂಚನೆಗಳು: ಊರಿನ ಕುಟುಂಬಗಳೊಂದಿಗೆ ಪ್ರಶ್ನೆ ಗಳಿಗೆ ಉತ್ತರಗಳು ಬರಲೇಬೇಕು ಎಂಬ ನಿರೀಕ್ಷೆಗಳನ್ನು ಹೊಂದಿರಬಾರದು ಕುಟುಂಬಗಳ ಮಾಹಿತಿಯನ್ನು ಊರಿನಲ್ಲಿ ಹರಡದಂತೆ ಎಚ್ಚರ ವಹಿಸಬೇಕು.
  3. ಬಹುಮಾಧ್ಯಮಾ ಸಂಪನ್ಮೂಲಗಳು : ನ್ಯೂನಪೋಷಣೆಯನ್ನು ಬಿಂಬಿಸುವ ಬಿತ್ತಿಪತ್ರಗಳು
  4. ವಿಧಾನ/ಬೆಳವಣಿಗೆಯ ಪ್ರಶ್ನೆಗಳು : ಪ್ರಶ್ನಾವಳಿಗಳಿಗಳಲ್ಲಿರುವ ಪ್ರಶ್ನೆಗಳಿಗೆ ಕುಟುಂಬದವರಿಂದ ಉತ್ತರಗಳನ್ನು ಪಡೆಯುವುದು.
  5. ಮೌಲ್ಯ ನಿರ್ಣಯ : ೧೦೦ ರಿಂದ ೨೦೦ ಕುಟುಂಬಗಳ ಆರೋಗ್ಯ ಮಾಹಿತಿಯನ್ನು ವಿಶ್ಲೇಷಿಸಿ ಸಂಕ್ರಾಮಿಕ, ಪೋಷಕಾಂಶ ಕೊರತೆ ರೋಗಗಳನ್ನು ವರ್ಗಿಕರಿಸಿ ಊರಿನಲ್ಲಿರುವ ನ್ಯೂನತಾ ಕಾಯಿಲೆಗಳ ಪ್ರಮಾಣವನ್ನು ಗುರುತಿಸುವರು.

ಚಟುವಟಿಕೆ ೨

  1. ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  2. ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  3. ಬಹುಮಾಧ್ಯಮ ಸಂಪನ್ಮೂಲಗಳು
  4. ಅಂತರ್ಜಾಲದ ಸಹವರ್ತನೆಗಳು
  5. ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  6. ಮೌಲ್ಯ ನಿರ್ಣಯ
  7. ಪ್ರಶ್ನೆಗಳು

ಯೋಜನೆಗಳು

  • ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ನ್ಯೂನಪೋಷಣೆ ಅಥವಾ ನ್ಯೂನತಾ ಕಾಯಿಲೆಗಳ ವರದಿಗಳನ್ನು ಸಂಗ್ರಹಿಸಿ ಕಡತವನ್ನು ರಚಿಸುವುದು.
  • ವಿವಿಧ ಪೋಷಕಾಂಶಗಳ ಪಟ್ಟಿ ಮಾಡಿ ಆ ಪೋಷಕಾಂಶಗಳು ದೊರೆಯುವ ಆಹಾರಗಳ ನಮೂನೆಗಳನ್ನು ಸಂಗ್ರಹಿಸಿ.

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.