"ಶ್ರೀ ಮಾಲಾ ಭಟ್ ರವರ ಕವನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯ ನೇ ಸಾಲು: ೯ ನೇ ಸಾಲು:

ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!ಎಂದು ಸಾರಿ ಹೇಳುವ ಕಛೇರಿಗಳು....

ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!ಎಂದು ಸಾರಿ ಹೇಳುವ ಕಛೇರಿಗಳು....

ಇದೊ ನಗರ ಜೀವನದಾಟ!

ಇದೊ ನಗರ ಜೀವನದಾಟ!

ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

#ಪ್ರಕೃತಿ 'ಮಾತೆ'

#ಪ್ರಕೃತಿ 'ಮಾತೆ'

ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

೦೯:೩೯, ೨೦ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ಶ್ರೀ ಮಾಲಾ ಭಟ್ ರವರ ಕವನಗಳು

1. ನಗರ ಸುಂದರಿ

ಈ ನಗರಿ ಅದೆಷ್ಟು ಸುಂದರಿ!
ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!
ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟುಗಳು!
ಊರು ಬಿಟ್ಟ ಮಾಣಿಗಳ ಅತ್ರಪ್ತ ಬಯಕೆಗಳಲಿ ಬೇಯ್ವ ಹೊಟೆಲ್ ಗಳು...
ಜನನ ಮರಣ ಲೆಕ್ಕಾಚಾರದ
ಹಾಸ್ಪಿಟಲ್ ಗಳು...
ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!ಎಂದು ಸಾರಿ ಹೇಳುವ ಕಛೇರಿಗಳು....
ಇದೊ ನಗರ ಜೀವನದಾಟ!
ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

1. ಪ್ರಕೃತಿ 'ಮಾತೆ'

ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ
ಹಾಸಿ ಗಂಧ ಗಾಳಿ ತೀಡಿತೇನು!
ಗಿಡಮರಬಳ್ಳಿ ಚಿಗುರಾಗಿ ಕಾಯಾಗಿ ಮಾಗುವಲ್ಲಿ ನಿನ್ನ ಹಂಬಲವೇನು!
ಹಳ್ಳಕೊಳ್ಳ ತೊರೆ ನದಿ ಝರಿಯಾಗಿ ಹರಿಹರಿದು ಸಾಗುವಲ್ಲಿ ನಿನ್ನ ಹೆಸರೇನು!
ಆ ಸೂರ್ಯ ಚಂದ್ರ ತಾರೆಗಳು ಬೇಕೆಂದಾಗ ಬೆಚ್ಚಗೆ
ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?
ಅಂದು ಬರಿಗೈಲಿ ನೀ ಭೂತಾಯ ಮಡಿಲಿಗೆ ಬಂದು ಅಳುವಾಗ ಆಕೆ ಹೇಳಿದ್ದು! ಅಳುವುದೇಕೆ ನಾನಿಲ್ಲವೇನು!..................
ಆದರೆ ಇಂದಿಗೂ ಅದೇ ಮಾತು ಆಕೆ ಹೇಳುತ್ತಿಲ್ಲ
ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?
ನನ್ನ ಪಾಡಿಗೆ ನನ್ನ ಬಿಡುವೆಯೇನು..............?
ರಚನೆ:ಶ್ರೀಮಾಲಾ ಭಟ್ .ಟ್ಯಾಂಕ್ ಗಾರ್ಡನ್.