"ಕ್ಯಾಲ್ಜಿಯಂ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೦ ನೇ ಸಾಲು: | ೩೦ ನೇ ಸಾಲು: | ||
#ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. | #ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. | ||
#ಯಾವ ಧಾತು ಯಾರು ಕಂಡುಹಿಡಿದರು ಮತ್ತು ಯಾವಾಗ ಕಂಡು ಹಿಡಿದರು ಎಂಬುದನ್ನು ಸಹ ಒಳಗೊಂಡಿದೆ. | #ಯಾವ ಧಾತು ಯಾರು ಕಂಡುಹಿಡಿದರು ಮತ್ತು ಯಾವಾಗ ಕಂಡು ಹಿಡಿದರು ಎಂಬುದನ್ನು ಸಹ ಒಳಗೊಂಡಿದೆ. | ||
− | #ಪ್ರತಿ ಧಾತು ಯಾವುದರಲ್ಲಿ ಬಳಸುತ್ತಾರೆ | + | #ಪ್ರತಿ ಧಾತು ಯಾವುದರಲ್ಲಿ ಬಳಸುತ್ತಾರೆ ಎನ್ನುವುದನ್ನು ಚಿತ್ರ ಸಹಿತ ತೋರಿಸಲಾಗಿದೆ. |
#ಸಮೀಕರಣ ಸಮತೋಲನಗೊಳಿಸುವ ಮತ್ತು ಗಣಕಗಳನ್ನ ಹೊಂದಿದೆ. | #ಸಮೀಕರಣ ಸಮತೋಲನಗೊಳಿಸುವ ಮತ್ತು ಗಣಕಗಳನ್ನ ಹೊಂದಿದೆ. | ||
೦೯:೫೭, ೧೧ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | ಕ್ಯಾಲ್ಜಿಯಂ ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ವಿಷಯ ಸಂಪನ್ಮೂಲ ರಚನೆಯ ಪರಿಕರವಾಗಿದೆ (ವಿಜ್ಞಾನ). |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಕ್ಯಾಲ್ಜಿಯಂ ಒಂದು ವಿಷಯಾಧಾರಿತ ವೈಜ್ಞಾನಿಕ ಅನ್ವಯವಾಗಿದ್ದು, ಧಾತುಗಳ ಶೋಧನೆ ಮತ್ತು ಗುಣಲಕ್ಷಣಗಳು,ಅವುಗಳ ವರ್ಗೀಕರಣಗಳನ್ನು ಒಳಗೊಂಡಿದೆ. ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಆಧಾರದ ಮೇಲೆ ಕ್ಯಾಲ್ಜಿಯಂನ್ನು ರಚಿಸಲಾಗಿದೆ.ಪ್ರತಿಯೊಂದು ಧಾತುವನ್ನು ಅದರ ಭೌತಿಕ ಮತ್ತು ರಾಸಾಯನಿಕ ಗುಣಗಳ ಆಧಾರದ ಮೇಲೆ ವರ್ಗೀಕರಿಸಿ, ಅವುಗಳ ಗುಣಗಳನ್ನು ತಿಳಿಯಲು ಮತ್ತು ದೃಶ್ಯೀಕರಿಸಲು ಸುಲಭವಾದ ವಿಧಾನವಾಗಿದೆ. |
ಆವೃತ್ತಿ | Version 2.4.03 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | ಪ್ರಸ್ತುತದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮೊಬೈಲ್ ತಂತ್ರಾಂಶ ಲಭ್ಯವಿಲ್ಲ. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಅಧಿಕೃತ ವೆಬ್‌ಪುಟ |
ಲಕ್ಷಣಗಳ ಮೇಲ್ನೋಟ
- ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ.
- ಯಾವ ಧಾತು ಯಾರು ಕಂಡುಹಿಡಿದರು ಮತ್ತು ಯಾವಾಗ ಕಂಡು ಹಿಡಿದರು ಎಂಬುದನ್ನು ಸಹ ಒಳಗೊಂಡಿದೆ.
- ಪ್ರತಿ ಧಾತು ಯಾವುದರಲ್ಲಿ ಬಳಸುತ್ತಾರೆ ಎನ್ನುವುದನ್ನು ಚಿತ್ರ ಸಹಿತ ತೋರಿಸಲಾಗಿದೆ.
- ಸಮೀಕರಣ ಸಮತೋಲನಗೊಳಿಸುವ ಮತ್ತು ಗಣಕಗಳನ್ನ ಹೊಂದಿದೆ.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “
Kalzium
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install kalzium
ಅನ್ವಯಕ ಬಳಕೆ
ಕ್ಯಾಲ್ಜಿಯಂ ಅನ್ವಯಕ ಬಳಕೆ
- ಇದನ್ನು "Application > Education > Kalzium" ಮೂಲಕ ತೆರೆಯಬಹುದು. ಕ್ಯಾಲ್ಜಿಯಂನ ಮುಖ್ಯಪುಟ ಈ ಮೇಲಿನ ಪರದೆಯ ರೀತಿ ಕಾಣುತ್ತದೆ. ಮೌಸ್ ನ ಕರ್ಸರ್ ನ್ನು ಕೋಷ್ಟಕದಲ್ಲಿರುವ ಒಂದು ಧಾತುವಿನ ಮೇಲೆ ಚಲಿಸುವಂತೆ ಮಾಡಿದಾಗ ಆ ಧಾತುವಿಗೆ ಸಂಬಂಧಪಟ್ಟ ಮಾಹಿತಿಗಳು ಮಾಹಿತಿ ಫಲಕದಲ್ಲಿರುವ 'ಓವರ್ ವ್ಯೂ ಟ್ಯಾಬ್' (ಎಡಭಾಗ)ದಲ್ಲಿ ಮೂಡುತ್ತವೆ.
- ಮೊದಲನೇ ಚಿತ್ರದಲ್ಲಿ ಕಾಣುವ ಧಾತುಗಳ ಮೇಲೆ ಮೌಸ್‌ನಲ್ಲಿ ಎರಡು ಸಲ ಒತ್ತುವ ಮೂಲಕ ಎರಡನೇ ಚಿತ್ರದಲ್ಲಿರುವಂತೆ ಆ ಧಾತುಗಳ ಮಾಹಿತಿಯನ್ನು ಕಾಣಬಹುದು.
ಅಣುವಿನ ಮಾದರಿ ಮಾಹಿತಿ
ಅಣುವಿನ ಮಾದರಿ(Atom Model) ಪುಟವು ಅಣುಗಳ ಶೆಲ್ ಗಳ ಮಾದರಿಯನ್ನು ತೋರಿಸುತ್ತದೆ. ಪ್ರತಿಯೊಂದು ವೃತ್ತಾಕಾರದ ಕಕ್ಷೆಯು ಅಣುಗಳ ಶೆಲ್ ಗಳನ್ನು ಮತ್ತು ಹಳದಿ ವೃತ್ತವು ಎಲೆಕ್ಟ್ರಾನ್ ಗಳನ್ನು ಪ್ರತಿನಿಧಿಸುತ್ತದೆ.
ಐಸೊಟೋಪ್ ಮಾಹಿತಿ
ಐಸೊಟೋಪ್ ಪುಟದಲ್ಲಿ ಆ ಐಸೊಟೋಪ್ ಗೆ ಸಂಬಂಧಿಸಿದ ಮಾಹಿತಿಗಳು ಮೂಡುತ್ತವೆ. ನಮೂದಿಸಿದ ಐಸೊಟೋಪಿನ ದ್ರವ್ಯರಾಶಿ, ನ್ಯೂಟ್ರಾನ್ ಗಳ ಸಂಖ್ಯೆ, ಐಸೊಟೋಪಿನ ಶೇಕಡಾವಾರು, ಆಫ್ ಲೈಪ್ ಪೀರಿಯಡ್, ಎನರ್ಜಿ ಮತ್ತು ಮೋಡ್ ಆಫ್ ಡೀಕೆ, ಸ್ಪಿನ್, ಪ್ಯಾರಿಟಿ ಮತ್ತು ಮ್ಯಾಗ್ನಟಿಕ್ ಮೂಮೆಂಟ್ ಮಾಹಿತಿಗಳು ದೊರೆಯುತ್ತವೆ.
ಸ್ಪೆಕ್ಟ್ರಮ್ ಮಾಹಿತಿ
ರೋಹಿತ(Spectrum)ದ ಪುಟವು ಧಾತುವಿನ ರೋಹಿತವನ್ನು ಪ್ರಸ್ತುತ ಪಡಿಸುತ್ತದೆ. ತರಂಗ ದೂರಗಳ ವ್ಯಾಪ್ತಿ, ಮಾನಗಳು ಮತ್ತು ರೋಹಿತದ ವಿಧಗಳನ್ನು ಆಯ್ಕೆ ಮಾಡಬಹುದು. ಇಂಟೆಂಸಿಟಿ ಕೋಷ್ಟಕವನ್ನು ಪುಟದ ಬಲಭಾಗದ ಕೆಳತುದಿಯಲ್ಲಿ ಕಾಣಬಹುದು.
ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು
ಇದು ಯಾವುದೇ ಕಡತಗಳನ್ನು ರಚನೆ ಮಾಡುವುದಿಲ್ಲ, ಆದರೆ ಸ್ಕ್ರೀನ್ ಶಾಟ್ ಮೂಲಕ ಚಿತ್ರಗಳನ್ನು ತೆಗೆದುಕೊಂಡು ಉಳಿಸಿಕೊಳ್ಳಬಹುದು.
ಉನ್ನತೀಕರಿಸಿದ ಲಕ್ಷಣಗಳು
ಈ ಪರಿಕರವು ಪ್ರತಿಯೊಂದು ಧಾತುವಿಗೂ ಸಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು.
ಸಂಪನ್ಮೂಲ ರಚನೆಯ ಆಲೋಚನೆಗಳು
ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. ಕ್ಯಾಲ್ಜಿಯಂನಿಂದ ಪ್ರತಿಯೊಂದು ಧಾತುವಿನ ಪರಮಾಣು ಸಂಖ್ಯೆ, ಪರಮಾಣು ತೂಕ, ಸಂಕೇತ, ಕರಗುವ ಬಿಂದು, ಕುದಿಯುವ ಬಿಂದು, ಲೋಹಗಳು/ಅಲೋಹಗಳು, ಯಾವ ಗುಂಪಿಗೆ ಸೇರಿವೆ, ಆ ಧಾತುವಿನಿಂದ ಉಂಟಾಗುವ ರೋಹಿತ ಹೀಗೆ ಹಲವಾರು ವಿಷಯಗಳನ್ನು ಏಕ-ಕಾಲದಲ್ಲೇ ತಿಳಿಯಬಹುದು. ಅಡ್ಡ ಸಾಲು ಮತ್ತು ಕಂಬ ಸಾಲುಗಳನ್ನು ವಿವಿಧ ಬಣ್ಣಗಳಲ್ಲಿ ರೂಪಿಸಿರುವುದರಿಂದ ಯಾವ ಧಾತು ಯಾವ ಸಾಲಿನಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಎಲೆಕ್ಟ್ರಾನ್ ವಿನ್ಯಾಸವನ್ನು ಹಾಗೂ ಎಲ್ಲ ರೀತಿಯ ಮುಖ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಮಕ್ಕಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ.
ಸ್ಕ್ರೀನ್‌ಶಾಟ್ ಹಾಗು ರೆಕಾರ್ಡ್ ಮೈ ಡೆಸ್ಕ್‌ಟಾಪ್ ಬಳಸಿ ಚಿತ್ರ ಹಾಗು ವೀಡಿಯೋ ಸಂಪನ್ಮೂಲಗಳನ್ನು ರಚಿಸಿಕೊಳ್ಳಬಹುದು.