"ಡಿಜಿಟಲ್ ಭಾಷಾ ಬುನಾದಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಪಠ್ಯಪೋಷಕ ಅಧ್ಯಯನ using HotCat) |
|||
೫೬ ನೇ ಸಾಲು: | ೫೬ ನೇ ಸಾಲು: | ||
*ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ - 10 ಶಬ್ಧ ಕೇಳಿಸಿ ಅದನ್ನು ಜೋಡಿಸಿ ಹೇಳಲು ತಿಳಿಸುವುದು, ಮಳೆ, ಗಾಳಿ ಇತ್ಯಾದಿ | *ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ - 10 ಶಬ್ಧ ಕೇಳಿಸಿ ಅದನ್ನು ಜೋಡಿಸಿ ಹೇಳಲು ತಿಳಿಸುವುದು, ಮಳೆ, ಗಾಳಿ ಇತ್ಯಾದಿ | ||
*ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ ಉದಾ; ನಾನು ನಾಳೆ ಶಾಲೆಗೆ ಬಂದಿದ್ದೆ | *ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ ಉದಾ; ನಾನು ನಾಳೆ ಶಾಲೆಗೆ ಬಂದಿದ್ದೆ | ||
− | '''ಚಟುವಟಿಕೆ 1 ''' | + | '''ಚಟುವಟಿಕೆ 1 ''' |
{| style="height:10px; float:right; align:center;" | {| style="height:10px; float:right; align:center;" | ||
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | ||
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | ||
|} | |} | ||
− | *'''ಪೂರ್ವಾಪೇಕ್ಷಿತ/ ಸೂಚನೆಗಳು''': | + | *'''ಪೂರ್ವಾಪೇಕ್ಷಿತ/ ಸೂಚನೆಗಳು''': |
− | |||
− | |||
*'''ಅಂದಾಜು ಸಮಯ''': | *'''ಅಂದಾಜು ಸಮಯ''': | ||
*'''ಸಾಮಗ್ರಿಗಳು/ಸಂಪನ್ಮೂಲಗಳು''': | *'''ಸಾಮಗ್ರಿಗಳು/ಸಂಪನ್ಮೂಲಗಳು''': | ||
೨೧೪ ನೇ ಸಾಲು: | ೨೧೨ ನೇ ಸಾಲು: | ||
=ಮೌಲ್ಯಮಾಪನ= | =ಮೌಲ್ಯಮಾಪನ= | ||
+ | |||
+ | [[ವರ್ಗ:ಪಠ್ಯಪೋಷಕ ಅಧ್ಯಯನ]] |
೧೫:೫೯, ೧೬ ಅಕ್ಟೋಬರ್ ೨೦೧೭ ನಂತೆ ಪರಿಷ್ಕರಣೆ
ಅಧ್ಯಯ-1 - ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳು
ಪರಿಚಯ
ಈ ಅಭ್ಯಾಸಕ್ರಮದಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ಭಾಷೆಯ ಭಾಷಾ ಬುನಾದಿಯ ಮೂಲ ಪರಿಕಲ್ಪನೆಗಳನ್ನು ಕಲಿಸಲಾಗುವುದು. 'ಕೇಳು - ಮಾತು - ಓದು - ಬರೆಹ' ಇವುಗಳಲ್ಲಿ (ಸಾಂಪ್ರದಾಯಕ ಪದ್ದತಿಯಲ್ಲಿ) ಬಹುತೇಕವಾಗಿ ಮೊದಲಿಗೆ ಬರವಣಿಗೆಯನ್ನು ಮಾತ್ರ ಹೆಚ್ಚು ಗಮನಹರಿಸಲಾಗುವುದನ್ನು ಗುರುತಿಸಬಹುದು. ಮಕ್ಕಳಿಗೆ ಪರಸ್ಪರ ಕಲಿಕೆ ಚಟುವಟಿಕೆಯಾಧಾರಿತವಾಗಿರುವುದರಿಂದ ಕಲಿಕಾ ಪ್ರವೃತ್ತಿಯು ಪರಿಣಾಮಕಾರಿಯಾಗಿರುತ್ತದೆ. ಜೊತೆಗೆ ಇತರೇ ಸಾಮರ್ಥ್ಯಗಳ ಮೂಲಕವೂ ಸಹ ಕಲಿಕೆಯ ಮೇಲೆ ಪರಿಣಾಮಕಾರಿ ಕಲಿಕೆಯನ್ನು ಗುರುತಿಸಬಹುದಾಗಿದೆ. ಆದರೆ ಇತರೆ ವಿಧಾನಗಳಲ್ಲಿ ಇದರ ಸಾಧ್ಯತೆ ಕಡಿಮೆ ಇದ್ದು ಡಿಜಿಟಲ್ ಬೋಧನಾ ಕ್ರಮದಿಂದ ಈ ನಾಲ್ಕೂ ಸಾಮರ್ಥ್ಯಗಳನ್ನು ಸುಲಭವಾಗಿ ಮುಟ್ಟ ಬಹುದಾಗಿದೆ. ಇದರ ಜೊತೆಗೆ ಒಂದೇ ಮಾಧ್ಯಮದಲ್ಲಿ ಬಹು ಸಾಧ್ಯತೆಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ತರಗತಿಯ ಹಂತದಲ್ಲಿನ ಬಹು ಕಲಿಕಾ ಮಟ್ಟದ ಮಕ್ಕಳಿಗೆ ಕಲಿಸಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿ ಕೆಲವು ಪ್ರಯೋಗಗಳನ್ನು ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳಲಾಗಿದ್ದು ಇದೇ ಅಂತಿಮವಲ್ಲ. ತರಗತಿಯ ಪರಿಸರಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳನ್ನು ಸೇರಿಸಬಹುದು. ಇಲ್ಲಿ ಅನುಕ್ರಮವಾಗಿ ಕೇಳುವುದು (ಧ್ವನಿಗಳು)- ಮಾತನಾಡುವುದು(ಚಿತ್ರ ನೋಡಿ !) - ನಂತರ ಓದು, ಬರೆಹವನ್ನು ಯೋಜಿಸಲಾಗಿದೆ.
ಸೂಚನೆ; ತರಗತಿಯ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಂಪನ್ಮೂಲಗಳಾದ ಚಿತ್ರ, ಧ್ವನಿ, ವೀಡಿಯೋ, ಮತ್ತು ಪಠ್ಯಗಳನ್ನು ಬಳಸಿಕೊಳ್ಳುವಾಗ ಸಿಸಿ ಅಂದರೆ (ಕ್ರಿಯೇಟಿವ್ ಕಾಮನ್ಸ್) ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಬಳಸಬಹುದಾದ ಸಂಪನ್ಮೂಲವನ್ನೇ ಬಳಸಬೇಕು. ಮತ್ತು ಹಕ್ಕು ಸ್ವಾಮ್ಯವನ್ನು ಗೌರವಿಸಬೇಕು. ಇಲ್ಲವೇ ನಮ್ಮ ಸೃಜನಶೀಲತೆಗೆ ತಕ್ಕಂತೆ ಡಿಜಿಟಲ್ ಉಪಕರಣಗಳನ್ನು ಬಳಸಿ ತರಗತಿ ಸಂಪನ್ಮೂಲವನ್ನು ಸೃಷ್ಟಿಸಿಕೊಂಡರೆ ಇತರರಿಗೂ ಹಂಚಿಕೆಮಾಡಬಹುದು
ಪರಿಕಲ್ಪನಾ ನಕ್ಷೆ
ಗುರಿಗಳು
- ಡಿಜಿಟಲ್ ಮೂಲಕ ಭಾಷೆಯ ನಾಲ್ಕೂ (ಆನೋಓಬ) ಸಾಮರ್ಥ್ಯಗಳ ಕಲಿಕೆ
- ವಿವಿಧ ಸಾಮರ್ಥ್ಯದ ಮಕ್ಕಳಿಗೆ ವಿವಿಧ ಚಟುವಟಿಕೆಗಳಿಂದ ಕಲಿಸುವ ಮೂಲಕ ಸಮೂದಾಯದೊಂದಿಗಿನ ಸಹಭಾಗಿತ್ವ
- ಮಕ್ಕಳ ಸೃಜನಶೀಲತೆ ಮತ್ತು ಕಲ್ಪನಾಶೀಲತೆಗೆ ಪ್ರೋತ್ಸಾಹ - ಅವರ ಮನಸ್ಸಿನ ಭಾವನೆಗಳಿಗೆ ಅವಕಾಶ
- 'ಕಲಿಕೆಯನ್ನು ಆನಂದದಾಯಕವಾಗಿಸುವುದು' ಎಂಬ ನೀತಿ
- ವೈವಿಧ್ಯ ನಮೂನೆಗಳ ಮೂಲಕ ಭಾಷಾ ವೈವಿಧ್ಯತೆಗಳ ಪರಿಚಯ
- ಮಕ್ಕಳ ಕಲಿಕಾ ಮಟ್ಟದ ಅನ್ವೇಷಣೆ - ನೈನಿದಾನಿಕ ವಿಧಾನದ ಬಳಕೆ
ಸಂದರ್ಭ
- ವಿವಿಧ ಕಲಿಕಾ ಸಾಮರ್ಥ್ಯದ ಮಕ್ಕಳು ಮತ್ತು ತರಗತಿಯ ಭಾಗವಹಿಸುವಿಕೆ ಕಡಿಮೆ
- ಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಭಾಷೆಯಲ್ಲಿ ಭಾಗವಹಿಸುದಿಲ್ಲ (ಭಾಷಾ ವಿಭಿನ್ನತೆಯ ಪರಿಸರ)
- ಹೇಳಿದ್ದನ್ನು - ಕೇಳಿದ್ದನ್ನು ಅರ್ಥೈಸುತ್ತಾ ಉತ್ತರಿಸಲು ಬಾರದು
- ತರಗತಿಯಲ್ಲಿ ಉತ್ಸಾಹಿತರಾಗಿ ಭಾಗವಹಿಸದಿರುವಿಕೆ, ಎಲ್ಲರಿಗೂ ಸಮಾನ ಕಲಿಕಾ ಅವಕಾಶವಿಲ್ಲದಿರುವುದು
- ಅನ್ಯ ಮಾತೃಭಾಷೆ
ತರಗತಿ ಪ್ರಕ್ರಿಯೆ
- ಒಂದು ವಾರದಲ್ಲಿ 3 ಡಿಜಿಟಲ್ ಭಾಷಾ ತರಗತಿಯಂತೆ, 2 ತಿಂಗಳ ಅವಧಿಗೆ ಈ ಅಭ್ಯಾಸ ಕ್ರಮದಲ್ಲಿ 24 ತರಗತಿಗಳು ಲಭ್ಯವಾಗುತ್ತದೆ. ಒಂದು ಶಾಲೆಗೆ ವಾರದ ಒಂದು ತರಗತಿಯನ್ನು ಐಟಿಎಫ್‌ಸಿ ತಂಡದಿಂದ ಮಾದರಿ ತರಗತಿಯಲ್ಲಿ ಭಾಗವಹಿಸಿದರೆ ಉಳಿದ ಎರಡು ತರಗತಿಯನ್ನು ಆಯಾ ಶಾಲಾ ಶಿಕ್ಷಕರೇ ನಿರ್ವಹಿಸುತ್ತಾರೆ. ಇದಕ್ಕೆ ಎರಡು ಅವಧಿಯ ಅಂದರೆ 40 ನಿಮಿಷದ 2 ಅವಧಿಯ ಒಂದು ತರಗತಿಯ ಅಗತ್ಯವಿರುತ್ತದೆ. ಧ್ವನಿ, ಚಿತ್ರ, ದೃಶ್ಯಾ, ಪಠ್ಯ ಹೀಗೆ ವೈವಿಧ್ಯಮಯ ಸಾಧ್ಯತೆಗಳನ್ನು ಪ್ರಯೋಗಿಸಲಾಗುವುದರಿಂದ ಇದಕ್ಕೆ ಪೂರಕವಾದ ಡಿಜಿಟಲ್ ಉಪಕರಣಗಳ ಅಗತ್ಯವಿದೆ. ಉದಾ: ಧ್ವನಿವರ್ಧಕ, ಪ್ರದರ್ಶನ ಪರದೆ, ಪೆನ್ ಡ್ರೈವ್ ಇತ್ಯಾದಿ. ಪ್ರತಿ ಘಟಕದ ಅಥವ ತಿಂಗಳ ಕೊನೆಯಲ್ಲಿ ಮೌಲ್ಯಮಾಪನವಿದ್ದು ಅಂಕಗಳನ್ನು ಅಥವ ಶ್ರೇಣಿಗಳನ್ನು ನೀಡಲಾಗುದು.(ಇದು ಕೇವಲ ಮಕ್ಕಳ ಕಲಿಕೆಯನ್ನು ಪ್ರೋತ್ಸಾಸುವುದಕ್ಕಾಗಿ ಮಾತ್ರ)
ಪಠ್ಯಕ್ರಮ
ಪಾಠ1.ಕೇಳಿ ಕಲಿ
ಪರಿಚಯ
ಈ ತರಗತಿಯಲ್ಲಿ ಮಕ್ಕಳಿಗೆ ಕೇವಲ ಕಥೆಗಳನ್ನು ಕೇಳಲು ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಮಕ್ಕಳ ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ. ಇದಕ್ಕೆ ನಾವೇ ಧ್ವನಿ ಮುದ್ರಿಕೆಗಳನ್ನು ತಯಾರಿಕೊಳ್ಳಬಹುದು ಮತ್ತು ಅಂತರ್ಜಾಲದಲ್ಲಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. ಬಳಕೆಯ ಮೊದಲು ಹಕ್ಕುಸ್ವಾಮ್ಯದ ಬಗ್ಗೆ ಪರಿಶಿಲಿಸ ಬೇಕು.
ತರಗತಿ ಪ್ರಕ್ರಿಯೆ
ಈ ಚಟುವಟಿಕೆಯು ಮಕ್ಕಳಲ್ಲಿ ಮೊದಲು ಆಲಿಸುವ ಸಾಮರ್ಥ್ಯವನ್ನು ವೃದ್ದಿಸಲು ಸಹಾಯಕವಾಗುತ್ತದೆ. ಅನೇಕ ವೇಳೆ ಮಕ್ಕಳು ತಮ್ಮ ಸಹಪಾಠಿಗಳು ನುಡಿವ ಭಾಷೆಯನ್ನು ಸುಲಭವಾಗಿ ಯಾವುದೇ ದೋಷವಿಲ್ಲದೆ ಸುಲಿತವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ತರಗತಿಯ ಸಂದರ್ಭದಲ್ಲಿ ವ್ಯಾಕರಣದಂತಹ ಕೆಲವು ನಿಯಮಗಳಿಂದಲೇ ಬಹುಷಹ ಅನೇಕ ಮಕ್ಕಳು ಪೂರ್ವಗ್ರಹ ಪೀಡಿತರಾಗಿ ಭಾಷೆಯ ಜ್ಞಾನವಿರಲಿ ಮಾತನಾಡುವುದನ್ನು ಸಹ ಕಲಿತಿರುವುದಿಲ್ಲ. ಮೊದಲು ಮಾತನಾಡಲು ಕಲಿತರೆ ನಂತರ ಅಕ್ಷರ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಕಲಿಯ ಬಹುದು. ಈ ಮೂಲಕ ಅರ್ಥೈಸುವಿಕೆ ಮೂಲಕ ಭಾಷೆಯ ಸೊಗಡಿನ ಪರಿಚಯವಾಗುತ್ತದೆ. ಮೊದಲು ಮಕ್ಕಳು ಗಮನವಹಿಸಿ ಕೇಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ತರಗತಿಯಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿಮುದ್ರಿತ ಕಡತಗಳ ಸಂಗ್ರಹವಿರ ಬೇಕು
ಸಂಪನ್ಮೂಲಗಳು
- ಧ್ವನಿ ಕಥೆ - 1
- ಧ್ವನಿ ಕಥೆ - 2
- ಧ್ವನಿ ಕಥೆ - 3
- ದೇವಸ್ಥಾನದ ಕಥೆ
- ಈಜೀಪುರ ಶಾಲೆಯ ವಿದ್ಯಾರ್ಥಿ ಭಾಸ್ಕರ್ ನ ಧ್ವನಿ ಮುದ್ರಿತ ಜಾನಪದ ಕಥೆ ಕೇಳಲು ಇಲ್ಲಿ ಕ್ಲಿಕ್ಕಿಸಿರಿ
- ಈಜಿಪುರ ಶಾಲೆಯ ಮಕ್ಕಳು ಹೇಳಿದ ರಾಜಕುಮಾರಿಯ ಜಾಣ್ಮೆ ಕಥೆಯನ್ನು ಆಲಿಸಲು ಇಲ್ಲಿ ಕ್ಲಿಕ್ಕಿಸಿರಿ
- cc ಧ್ವನಿ ಕಥೆ
ಚಟುವಟಿಕೆಗಳು
ಉದ್ದೇಶಿತ ಚಟುವಟಿಕೆ
೧.೧.೧ 1. ಆಲಿಸು ಮತ್ತು ಉತ್ತರಿಸು ೧.೧.೨ 2. ಆಲಿಸು ಮತ್ತು ಬರೆ ೧.೧.೩ 3. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು ೧.೧.೪ 4. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ
- ಈ ಶಬ್ಧಗಳನ್ನು ಮೇಲಿನ ಧ್ವನಿಯಲ್ಲಿನ ಸನ್ನಿವೇಶಗಳನ್ನು ಕಲ್ಪಿಸಿ ಹೇಳಿರಿ
- ಈ ಧ್ವನಿಗಳನ್ನು ಕುರಿತಂತೆ ಶಿಕ್ಷಕರು ಪ್ರಶ್ನೆಗಳನ್ನು ಕೇಳಿರಿ - ಅಥವ ಮಕ್ಕಳಿ ಹೇಳಿದ ಕಥೆಯನ್ನು ಬದಲಿಸಿ ಹೇಳಿರಿ
- ಕನ್ನಡ ಕಥೆ ಕೇಳಿ ಬದಲಿಸಿ ಹೇಳಿ -ಸಂದರ್ಭ ಬದಲಾವಣೆ
- ಶಬ್ಧ ರೂಪದ ಕಥೆಯನ್ನು ಕೇಳಿ ಮತ್ತು ಹೇಳಿರಿ
- ಧ್ವನಿಯಲ್ಲಿನ ತಪ್ಪನ್ನು ಹುಡುಕುವುದು (ಅಕ್ಕಿ - ಹಕ್ಕಿ)
- ನೀಡಿರುವ ಶಬ್ದವನ್ನು ಬಳಸಿ ಕಥೆಯನ್ನು ರೂಪಿಸಿ ಪ್ರಸ್ತುತ ಪಡಿಸಿ - 10 ಶಬ್ಧ ಕೇಳಿಸಿ ಅದನ್ನು ಜೋಡಿಸಿ ಹೇಳಲು ತಿಳಿಸುವುದು, ಮಳೆ, ಗಾಳಿ ಇತ್ಯಾದಿ
- ಸರಳ ವಾಕ್ಯಗಳನ್ನು ಸರಿಪಡಿಸಿ ಹೇಳಿ (ಅದಲು - ಬದಲು) ಬರೆಯಿರಿ ಉದಾ; ನಾನು ನಾಳೆ ಶಾಲೆಗೆ ಬಂದಿದ್ದೆ
ಚಟುವಟಿಕೆ 1
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಚಟುವಟಿಕೆ 2
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಮೌಲ್ಯಮಾಪನ
ಪಾಠ 2. ನೋಡಿ ಕಲಿ
ಪರಿಚಯ
ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಒಂದು ಭಾಷೆಯ ಆಳವನ್ನು ತಿಳಿಯಲು ಅದರ ಶಬ್ಧ ಪರಿಚಯ ಅತ್ಯಂತ ಪ್ರಮುಖವಾದ್ದದ್ದು. ಒಂದು ಚಿತ್ರವನ್ನು ನೋಡುತ್ತಾ, ಅದರಲ್ಲಿ ಕಾಣುವ ವಿಭಿನ್ನ ಅಂಶಗಳನ್ನು ಗುರುತಿಸಿ ಹೇಳು,ಜೋಡಿಸಿ ಕಥೆ ಹೇಳಲು, ವಿಮರ್ಶಾತ್ಮಕವಾಗಿ ಆಲೋಚಿಸಲು ಇರುವ ಸಾಧ್ಯತೆಗಳನ್ನು ಒಟ್ಟು ಮಾಡಿ ಮಕ್ಕಳಿಗೆ ಅಥವ ಯಾವುದೇ ಭಾಷೆಯನ್ನು ಕಲಿಸಲು ಸಹಕಾರಿಯಾಗಿದೆ.
ತರಗತಿ ಪ್ರಕ್ರಿಯೆ
ಒಂದು ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯಲ್ಲಿ ಅದೇ ಚಿತ್ರವನ್ನು ಬಳಸಿ ವಿವಿಧ ಪ್ರಶ್ನೆಗಳನ್ನು ಕೇಳಬಹುದು. ಉದಾ: 1. ಈ ಚಿತ್ರದಲ್ಲಿ ಎಷ್ಟು ಅಂಶಗಳಿವೆ-ಹೇಳಿ - ಬರೆಯಿರಿ - ವಿವರಿಸಿ ಮುಂತಾಗಿ ಪ್ರಶ್ನೆಗಳನ್ನು ರೂಪಿಸಬಹುದು.
ಈ ಚಟುವಟಿಕೆಗೆ ಚಿತ್ರಗಳನ್ನು ಸಂಗ್ರಹಿಸುವಾಗ ಮುಕ್ತ ಸಂಪನ್ಮೂನವನ್ನೇ ಬಳಸಬೇಕು. ಇಲ್ಲವೆ ಸಂಪನ್ಮೂಲವನ್ನು ನಾವೇ ನಮ್ಮ ಡಿಜಿಟಲ್ ಸಲಕರಣೆಗಳಿಂದ ತರಗತಿಯ ಕಲಿಕೆಗಾಗಿ ತಯಾರಿರಿಸಿಕೊಂಡಿರಬೇಕು. ಅಂತರ್ಜಾಲದಿಂದ ಡೈನ್‌ಲೋಡ್ ಮಾಡುವ ಸಂದರ್ಭದಲ್ಲಿ ಸಿಸಿ ಯನ್ನು ಪರೀಕ್ಷಿಸಿಯೇ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು.
ಸಂಪನ್ಮೂಲಗಳು
ಚಟುವಟಿಕೆಗಳು
೧.೨.೧ 1. ನೋಡು ಮತ್ತು ಉತ್ತರಿಸಿ ೧.೨.೨ 2. ನೋಡು ಮತ್ತು ಬರೆ ೧.೨.೩ 3. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು ೧.೨.೪ 4. ನೋಡು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ ೧.೨.೫ 5. ಚಿತ್ರಗಳನ್ನು ಸೇರಿಸು ಮತ್ತು ಕಥೆಮಾಡು
- ಚಿತ್ರಗಳನ್ನು ಗುರುತಿಸಿ ಹೇಳಿ (ತರಕಾರಿ, ಹಣ್ಣು ಪ್ರಾಣಿಗಳು ಪಕ್ಷಿಗಳು ಹಳ್ಳಿ ಜೀವನ )
- ಚಿತ್ರದಲ್ಲಿರುವ 20 ಪದಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ
- ಚಿತ್ರ ನೋಡಿ / ನೋಡದೆ ಕತೆ ಕಟ್ಟುವುದು ಮತ್ತು ಬರೆಯಿರಿ
- ಚಿತ್ರ ಮತ್ತು ವೀಡಿಯೋ ಸಂಬಂಧಿ ಚಟುವಟಿಕೆ (ಪಂಚತಂತ್ರ)
- ಮೂಕಿ ಚಿತ್ರ ನೋಡಿ ಚಟುವಟಿಕೆ
- ವೀಡಿಯೋ ನೋಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ ವಸ್ತು ಪಾತ್ರಗಳನ್ನು ಗುರುತಿಸಿ,ಅನುಕರಿಸಿ, ಬದಲಿಸಿ ಹೇಳಿ
ಚಟುವಟಿಕೆ 1
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಚಟುವಟಿಕೆ 2
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಮೌಲ್ಯಮಾಪನ
ಪಾಠ 3. ನುಡಿ ಕಲಿ
ಪರಿಚಯ
ಯಾವುದೇ ಒಂದು ಭಾಷೆಯು ಅದನ್ನು ನುಡಿದಂತೆ ಮತ್ತು ಮಾತಿಲ್ಲಿ ಬಳಸಿದಂತೆ ಅದು ಸುಲಭವೂ ಸರಳವೂ ಅಗಿ ಕಲಿಯಲು ಸಾಧ್ಯವಾಗುತ್ತದೆ. ಮಾತನಾಡುವುದೇನೋ ಸರಿ ಆದರೆ ಏನನ್ನು ಮಾತನಾಡುವುದು ಎಂಬುದೇ ಪ್ರಶ್ನೆಯಾಗಿರುತ್ತದೆ. ನಾವು ಚಿಕ್ಕಮಕ್ಕಳನ್ನು ನೋಡಿದಾಗ ಶಾಲೆಗಳಲ್ಲಿ ಮಕ್ಕಳು ಪರಸ್ಪರ ತಮತಮಗೆ ತಳಿದ ಭಾಷೆಯಲ್ಲಿ ಸಂವಹನ ಮಾಡುತ್ತ ಸುಲಭವಾಗಿ ಹೊಸ ಭಾಷೆಯನ್ನು ಕಲಿತುಕೊಂಡಿರುತ್ತಾರೆ ಇವರಿಗೆ ಯಾವುದೇ ವ್ಯಾಕರಣದ ಬೇಲಿ ಇರುವುದಿಲ್ಲ ಆದರೆ ಶಾಸ್ತ್ರೀಯವಾಗಿ ಶಾಲೆಯಲ್ಲಿ ಕಲಿತ ಹಿಂದಿ ಮತ್ತು ಇಂಗ್ಲೀಷ್ ಅನೇಕ ವೇಳೆ ಸಂವಹನಕ್ಕೆ ಮತ್ತು ಭಾಷಾಕಲಿಕೆಯಾಗಿ ಕಂಡುಬರುವುದೇ ಇಲ್ಲ. ಆದ್ದರಿಂದ ಭಾಷಾಕಲಿಕೆಯ ಮೊದಲ ಹೆಜ್ಜೆಯಾಗಿ ಪರಸ್ಪರ ನಿರರ್ಗಳವಾಗಿ, ಬಿಗುಮಾನವಿಲ್ಲದಂತೆ ತಪ್ಪಾದರು ಲೆಕ್ಕಿಸದೇ ಮಾತನಾಡಬೇಕು. ಆಗ ಭಾಷೆಯು ಅನಿಭವ ಮತ್ತು ಅಭ್ಯಾಸದಿಂದ ಸ್ವಯಂ ಪ್ರೇರಣೆಹೊಂದಿ ಹೊಮ್ಮುತ್ತದೆ. ನಂತರ ಶಬ್ಧಭಂಡಾರ ವೃದ್ದಿಯಾದಂತೆ ಲಿಪಿ ಕಲಿಕೆಗೆ ತಕ್ಕೆಂತೆ ಭಾಷಾ ಬಳಕೆ ವೃದ್ದಿಯಾಗುತ್ತದೆ.
ತರಗತಿ ಪ್ರಕ್ರಿಯೆ
ತರಗತಿಯ ಸಂದರ್ಭವು ಶಾಲೆಯಿಂದ ಶಾಲೆಗೆ ವಿಭಿನ್ನವಾಗಿರುತ್ತದೆ. ಕಲಿಕಾ ಮಟ್ಟಕ್ಕೆ ತಕ್ಕಂತೆ ಬೇರೆ ಬೇರೆ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು ಬೋಧನೆಯಲ್ಲಿ ಬಳಸಿಕೊಳ್ಳ ಬಹುದು
ಸಂಪನ್ಮೂಲಗಳು
ಚಟುವಟಿಕೆಗಳು
೧.೩.೧ 1. ನೋಡಿ ಮತ್ತು ಉತ್ತರಿಸಿ ೧.೩.೩ 3. ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ ೧.೩.೫ 5. ಓದಿ ಮತ್ತು ಉತ್ತರಿಸಿ ೧.೩.೭ 7. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳಿ ೧.೩.೯ 9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ಹೇಳಿ
- ಸರಣಿ ಚಿತ್ರಗಳನ್ನು ಆಧರಿಸಿ ಕಥೆ ಹೇಳಿ ಮತ್ತು ಬರೆಯಿರಿ
- ಆಶುಭಾಷಣ,ಆರಂಭಾಕ್ಷರಿ, ಅಂತ್ಯಾಕ್ಷರಿ, ಜಾನಪದ ಕಥೆ ಹೇಳುವುದು
- ನಾಲಿಗೆ ತಿರುಗಣೆ, ಚರ್ಚಾಸ್ಪರ್ಧೆ
- ಮೂಕಿ ಚಿತ್ರವನ್ನು ನೋಡಿ ನಿಮ್ಮ ಭಾಷೆಯಲ್ಲಿ ಹೇಳಿ (ಊಹಿಸಿ) ಮತ್ತು ಭಾವಗಳನ್ನು ಗುರುತಿಸಿ (ನಾಯಿಯ ಕಥೆ)
- ಕಾರ್ಡ್ ವೀಕ್ಷಣೆ ಮತ್ತು ಚರ್ಚೆ
- ವಿಭಿನ್ನ ಧ್ವನಿ ಪರಿಚಯ, ವಿಭಿನ್ನ ಓದಿನ ಪರಿಚಯ (ಮೈಸೂರು- ಗದಗ)
ಚಟುವಟಿಕೆ 1
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಚಟುವಟಿಕೆ 2
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಮೌಲ್ಯಮಾಪನ
ಪಾಠ 4. ಗಿಚಿ ಕಲಿ
ಪರಿಚಯ
ಈ ತರಗತಿಯಲ್ಲಿ ಮಕ್ಕಳಿಗೆ ಸಣ್ಣ ಸಣ್ಣ ಪದಗಳನ್ನು ಏರಿಕೆ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ಅಂದರೆ ಸ್ವರ, ವ್ಯಂಜನ, ಸಜಾತಿಯ ಒತ್ತಕ್ಷರ, ವಿಜಾತಿಯ ಒತ್ತಕ್ಷರಗಳ ಹಾದಿಯಾಗಿ ಎರಡು ಮೂರು ಅಕ್ಷರಗಳಂತೆ ಪದಗಳನ್ನು ಕಲಿಸಲಾಗುವುದು. ಕನಗ್ರಾಂ ಅನ್ವಯ ಬಳಕೆ, ಚಿತ್ರ ನೋಡಿ ಟೈಪಿಸುವುದು, ವೀಡಿಯೋ ನೋಡಿ ಕಥೆ ಟೈಪಿಸುವುದು ಚಟುಚಟಿಕೆಗಳಾಗಿದೆ. ತರಗತಿಯಲ್ಲಿ ಮಕ್ಕಳ ಸಾಮರ್ಥ್ಯವನ್ನು ನೋಡಿ ಪುಸ್ತಕದಲ್ಲಿ ದಾಖಲಿಸಲು ಅಥವ ಕಂಪ್ಯೂಟರ್ ನಲ್ಲಿ ದಾಖಲಿಸಲು ನಿರ್ಧರಿಸಲಾಗುದು. ಇದರಿಂದ ಮಕ್ಕಳ ಬರವಣಿಗೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ. ಬಳಸಬಹುದಾದ ಅನ್ವಯಗಳು - ಕನಗ್ರಾಂ, ಕೆ ಲೆಡರ್ , ಕೆ ವರ್ಡ್, ಅಕ್ಷರ ಕಲಿ , ಕಲಿ - ತಿಳಿ ಕಾರ್ಡ್ ಬಳಕೆ
ತರಗತಿ ಪ್ರಕ್ರಿಯೆ
ಸಂಪನ್ಮೂಲಗಳು
ಚಟುವಟಿಕೆಗಳು
೧.೩.೨ 2. ನೋಡಿ ಮತ್ತು ಬರೆಯಿರಿ ೧.೩.೪ 4. ನೋಡಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ ೧.೩.೬ 6. ಓದಿ ಮತ್ತು ಬರೆಯಿರಿ ೧.೩.೯ 9. ವೀಡಿಯೋ ನಿಶ್ಯಬ್ದಗೊಳಿಸಿ ಮತ್ತು ಕಥೆ ರೂಪಿಸಿ ಬರೆಯಿರಿ ೧.೩.೮ 8. ಓದಿ ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆಯಿರಿ
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಅಕ್ಷರ ಕಲಿ ಅಭ್ಯಾಸ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ
- ಕಲಿ - ತಿಳಿ ಕಾರ್ಡ್ ಬಳಕೆ
ಚಟುವಟಿಕೆ 1
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು:
ಚಟುವಟಿಕೆ 2
- ಪೂರ್ವಾಪೇಕ್ಷಿತ/ ಸೂಚನೆಗಳು:
- ಅಂದಾಜು ಸಮಯ:
- ಸಾಮಗ್ರಿಗಳು/ಸಂಪನ್ಮೂಲಗಳು:
- ವಿಧಾನ/ಪ್ರಕ್ರಿಯೆ:
- ಚರ್ಚಾ ಪ್ರಶ್ನೆಗಳು: