"2019ಶೈಕ್ಷಣಿಕಘೋಷಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧ ನೇ ಸಾಲು: ೧ ನೇ ಸಾಲು:
 +
''[https://teacher-network.in/OER/index.php/2019EducationManifesto See in english]''
 +
 
=== ಮನವಿ ಪತ್ರ ===
 
=== ಮನವಿ ಪತ್ರ ===
  

೧೦:೧೭, ೭ ಫೆಬ್ರುವರಿ ೨೦೧೯ ದ ಇತ್ತೀಚಿನ ಆವೃತ್ತಿ

See in english

ಮನವಿ ಪತ್ರ

ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಗಳು

ಒಂದು ರಾಷ್ಟ್ರೀಯ ಆಂದೋಲನ

ಆತ್ಮೀಯ ಮೇಡಮ್/ಸರ್,

ಶಿಕ್ಷಣ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ - ಪಾಫ್ರೆಯ ಸದಸ್ಯರಾದ ನಾವು ನಮ್ಮ ರಾಷ್ಟ್ರೀಯ ಆಂದೋಲನದ ಭಾಗವಾಗಿ ಹುಟ್ಟಿನಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉತ್ತಮ ಆರೈಕೆಯನ್ನು ಒಳಗೊಂಡಂತೆ ಆರೋಗ್ಯ, ಪೋಷಣೆ ಹಾಗು ಚಿಕ್ಕ ಮಕ್ಕಳಲ್ಲಿ ಇಂದ್ರಿಯ ಸಂವೇದನಾ ಅಭಿವೃದ್ಧಿಯನ್ನು ಉತ್ತೇಜಿಸಲು ಆರಂಭಿಕ ಅವಕಾಶಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಸಮಾನ ಗುಣಮಟ್ಟದ ಶಿಕ್ಷಣದ ವಿಷಯ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಒಂದು ಪ್ರಮುಖ ರಾಜಕೀಯ ಕಾರ್ಯಸೂಚಿಯಾಗಬೇಕೆಂಬ ಉದ್ದೇಶವನ್ನು ಹೊಂದಿದ್ದೇವೆ. ಈ ರಾಷ್ಟ್ರೀಯ ಆಂದೋಲನದ ಮುಂದಾಳತ್ವವನ್ನು ಆರಂಭಿಕ ಮಕ್ಕಳ ಅಭಿವೃದ್ಧಿ ಸಮನ್ವಯ (ECD Alliance ), ರಾಷ್ಟ್ರೀಯ ಶಿಕ್ಷಣ ಹಕ್ಕು ವೇದಿಕೆÉ (RTE Forum) ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನ ಆಂದೋಲನ (CACL) ಜಂಟಿಯಾಗಿ ವಹಿಸಿಕೊಂಡಿವೆ. ಕರ್ನಾಕದಲ್ಲಿ ಈ ನಾಯಕತ್ವವನ್ನು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (PAFRE) ಮುನ್ನೆಡೆಸುತ್ತಿದೆ .ಈ ಕೆಳಗಿನ ಅಂಶಗಳನ್ನು ನಿಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜಿಯಿಲ್ಲದ ಬದ್ಧತೆಯ ವಿಷಯವನ್ನಾಗಿ ಸೇರಿಸಬೇಕೆಂದು ನಾವು ಆಗ್ರಹಿಸುತ್ತೇವೆ . ಚುನಾವಣೆಯ ನಂತರ ಈ ಅಂಶಗಳನ್ನು ಈಡೇರಿಸುವ ರಾಜಕೀಯ ಬದ್ಧತೆಗೂ ಸಹ ನಾವು ಒತ್ತಾಯಿಸುತ್ತೇವೆ .

ನಿಮ್ಮ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಗಳು

  1. ಶಿಕ್ಷಣ ಆಯೋಗದ ಶಿಫಾರಸ್ಸಿನಂತೆ ದೇಶದ ಒಟ್ಟು ಉತ್ಪನ್ನದಲ್ಲಿ ಶೇಕಡಾ 6 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಲು ಮತ್ತು ಹಿಂದಿನಿಂದ ಶಿಕ್ಷಣದ ಹೂಡಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿದೂಗಿಸಿಕೊಡಲು ನಮ್ಮ ಪಕ್ಷವು ಬದ್ಧವಾಗಿರುತ್ತದೆ.
  2. ಹುಟ್ಟಿನಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ಆರೈಕೆಯನ್ನು ಒಳಗೊಂಡಂತೆ ಆರೋಗ್ಯ, ಪೋಷಣೆ, ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಇಂದ್ರಿಯ ಸಂವೇದನಾ ಅಭಿವದ್ಧಿಯನ್ನು ಉತ್ತೇಜಿಸಲು ಆರಂಭಿಕ ಅವಕಾಶಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಮಗುವಿನ ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ನೆರೆಹೊರೆಯ ಸಮಾನ ಶಾಲೆ/ಶಿಶುಪಾಲನಾ ಕೇಂದ್ರಗಳಲ್ಲಿ ಒದಗಿಸಲು ನಮ್ಮ ಪಕ್ಷವು ಬದ್ಧರಾಗಿರುತ್ತದೆ.
  3. ಶಿಕ್ಷಣ ಹಕ್ಕು ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡುವ ಮೂಲಕ ಆರಂಭಿಕ ಮಕ್ಕಳ ಆಭಿವೃದ್ಧಿ (ಇಅಆ), ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಪ್ರೌಢ ಶಿಕ್ಷಣವನ್ನು ಅಂತರಾಷ್ಟ್ರೀಯ ಕಾನೂನುಗಳ ಚೌಕಟ್ಟು ಮತ್ತು ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿ ಕಾನೂನು ಬದ್ಧ ಹಕ್ಕನ್ನಾಗಿಸಲು ನಮ್ಮ ಪಕ್ಷವು ಬದ್ಧವಾಗಿರುತ್ತದೆ.
  4. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಮತ್ತು ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ವಿಲೀನಗೊಳಿಸುವ ಪ್ರಕ್ರಿಯೆಯನ್ನು ಪೂರ್ಣವಾಗಿ ನಿಲ್ಲಿಸಲು ನಮ್ಮ ಪಕ್ಷವು ಬದ್ಧರಾಗಿರುತ್ತದೆ.
  5. ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಪೂರ್ಣವಾಗಿ ನಿಯಂತ್ರಿಸಿ ಖಾಸಗಿ ಶಾಲೆಗಳು ಜನಸಾಮಾನ್ಯರಿಗೆ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವನ್ನು ಹೊಂದಿರಲು ಅನುವಾಗುವಂತೆ ಶುಲ್ಕ ನಿಯಂತ್ರಣ, ಗುಣಾತ್ಮಕ ಶಿಕ್ಷಣಕ್ಕಾಗಿ ಕನಿಷ್ಟ ಪ್ರಮಾಣಕಗಳು ಹಾಗು ಮಾನದಂಡಗಳು ಮತ್ತು ಪೋಷಕರ ಪಾಲ್ಗೊಳುವಿಕೆಗೆ ಪೂರಕವಾಗುವ ಸಾಂಸ್ಥಿಕ ರಚನೆಯನ್ನು ಒಳಗೊಂಡಿರುವ ಕಟ್ಟುನಿಟ್ಟಾದ ವಿಸ್ತøತ ನಿಯಂತ್ರಣ ಕಾನೂನನ್ನು ರೂಪಿಸಿ ಜಾರಿಗೊಳಿಸಲು ನಮ್ಮ ಪಕ್ಷವು ಬದ್ಧವಾಗಿರುತ್ತದೆ.
  6. ಈ ಮೇಲಿನ ಅಂಶಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ‘ಜನರ ಕಾರ್ಯಸೂಚಿ’ಯನ್ನಾಗಿ ಸೇರಿಸಲು ನಾವು ಆಗ್ರಹಪೂರ್ವವಾಗಿ ಒತ್ತಾಯಿಸುತ್ತೇವೆ.

ಶಿಕ್ಷಣ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪರವಾಗಿ

ನಿರಂಜನಾರಾಧ್ಯ ವಿ.ಪಿ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ --PAFRE
ಬಸವರಾಜ ಗುರಿಕಾರ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟ--AIPTF
ನಾರಾಯಣಸ್ವಾಮಿ ವಿ.ಎಮ್ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ--KSPSTA
ಸಿದ್ಧಲಿಂಗಪ್ಪ ಕರ್ನಾಟಕ ರಾಜ್ಯ ಶಾಲಾ ಆಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ--SDMCCF
ವಿಕ್ಟರ್ ಟಾರೋ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ--CACL
ಜಯಮ್ಮ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ – AW&HF- (AITUC)
ಬಾಬು ಮಾಥ್ಯು ಸಾರ್ವಜನಿಕ ನೀತಿ ನಿರೂಪಣಾ ಸಂಸ್ಥೆ,ಎನ್‌ಎಲ್‌ಎಸ್ ಐಯು –IPP,NLSIU
ನಿಹಾಲ್ ಕಿಡಿಯೂರ್ ಇಸ್ಲಾಮಿಕ್ ವಿದ್ಯಾರ್ಥಿ ಸಂಘ –SIO
ಚೇಗಾರೆಡ್ಡಿ ಭಾರತ ಜ್ಞಾನ ವಿಜ್ಞಾನ ಸಮಿತಿ--BGVS
ಪದ್ಮಿನಿ.ಆರ್ ಬಾಲ್ಯ ಪೂರ್ವ ಅಭಿವೃದ್ಧಿ ಸಮನ್ವಯ --ECD Alliance
ಕಿರಣ್ ಕಮಲ್ ಪ್ರಸಾದ್ ಜೀತ ವಿಮುಕ್ತಿ ಕರ್ನಾಟಕ-- JEEVIKA
ಮಲ್ಲಿಗೆ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ-- SSJ
ಮರಿಸ್ವಾಮಿ ಸಮಾಜ ಪರಿವರ್ತನ ಜನಾಂದೋಲನ --SPJ
ತಿರುಮಲರಾವ್ ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣಾಧಿಕಾರಿಗಳ ಸಂಘ -- KSREOA
ಗುರುಮೂರ್ತಿ ಕಾಶೀನಾಥ್ ಪರಿವರ್ತನೆಗಾಗಿ ಮಾಹಿತಿ ತಂತ್ರಜ್ಞಾನ – ITfC
ನಂದಿನಿ ಆಕ್ಷನ್ ಏಯ್ಡ್ ಇಂಡಿಯಾ--AAI
ಸುರೇಶ ಅರಳಕುಪ್ಪೆ ಕರ್ನಾಟಕ ವಿಚಾರವಾದಿಗಳ ಸಂಘ--KVS – KRVP