"ಫ್ರೀ ಮೈಂಡ್ ಕೈಪಿಡಿ ಕನ್ನಡದಲ್ಲಿ ನೋಡಲು ಇಲ್ಲಿ ಒತ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
+ | |||
[http://karnatakaeducation.org.in/KOER/images1/f/f5/Freemind_handout_in_kannada.odt ಫ್ರೀ ಮೈಂಡ್ ಕೈಪಿಡಿ ಡೈನ್ ಲೊಡ್ ಮಾಡಲು ಇಲ್ಲಿ ಒತ್ತಿ] | [http://karnatakaeducation.org.in/KOER/images1/f/f5/Freemind_handout_in_kannada.odt ಫ್ರೀ ಮೈಂಡ್ ಕೈಪಿಡಿ ಡೈನ್ ಲೊಡ್ ಮಾಡಲು ಇಲ್ಲಿ ಒತ್ತಿ] | ||
+ | |||
+ | |||
'''ಮೈಂಡ್ ಮ್ಯಾಪಿಂಗ್''' | '''ಮೈಂಡ್ ಮ್ಯಾಪಿಂಗ್''' |
೧೭:೩೧, ೨೦ ಅಕ್ಟೋಬರ್ ೨೦೧೩ ದ ಇತ್ತೀಚಿನ ಆವೃತ್ತಿ
ಫ್ರೀ ಮೈಂಡ್ ಕೈಪಿಡಿ ಡೈನ್ ಲೊಡ್ ಮಾಡಲು ಇಲ್ಲಿ ಒತ್ತಿ
ಮೈಂಡ್ ಮ್ಯಾಪಿಂಗ್
ಫ್ರೀ ಮೈಂಡ್ ನೊಂದಿಗೆ ಮೈಂಡ್ ಮ್ಯಾಪಿಂಗ್
ಅಧ್ಯಾಯದ ಉದ್ದೇಶಗಳು ಈ ಅಧ್ಯಾಯದಲ್ಲಿ ನೀವು:
- ಮೈಂಡ್ ಮ್ಯಾಪ್‌ನ ಅರ್ಥ ತಿಳಿಯುವಿರಿ.
- ಮೈಂಡ್ ಮ್ಯಾಪ್ ಅನ್ನು ಹೇಗೆ ಬಳಸುವುದು ಎಂದು ತಿಳಿಯುವಿರಿ.
- ಫ್ರೀ ಮೈಂಡ್ ಎನ್ನುವ ತಂತ್ರಾಂಶದ ಅಫ್ಲಿಕೇಷನ್ ಬಳಸಿ ಮೈಂಡ್ ಮ್ಯಾಪ್ ರಚಿಸುವುದನ್ನು ತಿಳಿಯುವಿರಿ.
ಮೈಂಡ್ ಮ್ಯಾಪ್ ಎಂದರೇನು?
ನೀವು ಕಣ್ಣನ್ನು ಮುಚ್ಚಿ ಒಂದು ಪದವನ್ನು ಆಲೋಚಿಸಿ. ಉದಾಹರಣೆಗೆ ಸಸ್ಯ ಎನ್ನುವ ಪದದ ಬಗ್ಗೆ ಯೋಚಿಸಿ. ಸಸ್ಯ ಎನ್ನುವ ಪದವನ್ನು ಯೋಚಿಸಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಎಲ್ಲಾ ಪದಗಳನ್ನು ಯೋಚಿಸಿ. ಈ ಎಲ್ಲಾ ಪದಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ಬರೆಯಿರಿ.
ಸಸ್ಯ ಎನ್ನುವ ಪದವನ್ನು ಯೋಚಿಸಿದಾಗ ನಿಮ್ಮ ಮನಸ್ಸಿಗೆ ಸಾಮಾನ್ಯವಾಗಿ ಬರುವ ಪದಗಳೆಂದರೆ: ಸಸ್ಯ, ನೀರು, ದ್ಯುತಿಸಂಶ್ಲೇಷಣಾಕ್ರಿಯೆ, ಎಲೆ, ಹೂ, ಬೇರು, ಕಾಂಡ, ಮಣ್ಣು , ಸೂರ್ಯನ ಬೆಳಕು, ಇಂಗಾಲದ ಡೈ ಆಕ್ಸೈ ಡ್.
ನೀವು ನೆನಪಿಸಿಕೊಂಡ ಈ ಪದಗಳನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಹುದು. ಈ ಪದಗಳನ್ನು ಪರಿಕಲ್ಪನಾ ಪದಗಳು ಎನ್ನುತ್ತಾರೆ. ಪರಿಕಲ್ಪನೆ ಎಂದರೆ ಮನಸ್ಸಿನಲ್ಲಿ ನೆನಪಿಸಿಕೊಂಡ ಪದಗಳ ಬಗ್ಗೆ ವರ್ಣಿಸುವುದು ಎಂದರ್ಥ. ಯಾವುದೇ ಪದ ಅಥವಾ ವಿಷಯವನ್ನು ಆಲೋಚಿದಾಗ ನಿಮ್ಮ ಮನಸ್ಸಿನಲ್ಲಿ ಬರುವ ಊಹೆ, ಉಪಾಯ, ನಂಬಿಕೆ, ಚಿತ್ರ ಅಥವಾ ಪ್ರತಿಬಿಂಬ ಆಗಿರುತ್ತದೆ. ಉದಾರಹಣೆಗೆ ಸಸ್ಯಕ್ಕೆ ಜೀವವಿರುವುದು ಸಸ್ಯದ ಒಂದು ಪರಿಕಲ್ಪನೆ . ಈಗ ಈ ಪದಗಳನ್ನು ಗಮನಿಸಿ: ಹೊಂದಿದೆ ----------->ಬಳಸುತ್ತದೆ------------ಅವಶ್ಯಕತೆ------------>ಮುಂದುವರಿಸುತ್ತದೆ.
ಈ ಪದಗಳು ಪರಿಕಲ್ಪನೆಯ ಪದಗಳಲ್ಲ, ಆದರೂ ಎರಡು ಅಥವಾ ಹೆಚ್ಚು ಪರಿಕಲ್ಪನೆಯ ಪದಗಳಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತವೆ. ಉದಾ: ಸಸ್ಯಗಳು ಬೇರುಗಳನ್ನು ,ಎಲೆಗಳನ್ನು,ಕಾಂಡ, ಹೂಗಳನ್ನು ಹೊಂದಿವೆ. ಆದ್ದರಿಂದ ಒಂದು ಪರಿಕಲ್ಪನೆಯ ಪದ ಬೇರೆಯ ಪರಿಕಲ್ಪನೆಯ ಪದಕ್ಕೆ ಕೊಂಡಿಯಾಗಿರಬಹುದು ಇದನ್ನು ಪಕ್ಕದಲ್ಲಿ ತೋರಿಸಿರುವ ಚಿತ್ರದಂತೆ ನಕ್ಷೆಯಾಗಿ ತೋರಿಸಬಹುದು.
ಈ ಮೇಲಿನ ಚಿತ್ರಕ್ಕೆ ಅಥವಾ ನಕ್ಷೆಗೆ ಇನ್ನೂ ಹಲವು ಪರಿಕಲ್ಪನೆಯ ಪದಗಳನ್ನು ಸೇರಿಸಿ ಸಸ್ಯ ಎಂಬ ವಿಷಯಕ್ಕೆ ಮೈಂಡ್ ಮ್ಯಾಪ್ ಅನ್ನು ರಚಿಸಬಹುದು.
ಸಸ್ಯದ ಮೈಂಡ್ ಮ್ಯಾಪ್ ಮಾಡುವಾಗ ವರ್ಣಿಸಿದಂತಹ ಪದಗಳು ಮತ್ತು ಚಿತ್ರಸಿಕೊಂಡಂತಹ ಪದಗಳು ಚಿತ್ರ 2ಲ್ಲಿ ಇವೆ.
ಚಿತ್ರ 1 ಮತ್ತು 2 ರಲ್ಲಿ ಏನೇನು ವ್ಯತ್ಯಾಸಗಳನ್ನು ಕಾಣುವಿರಿ? ಚಿತ್ರ 1 ರಲ್ಲಿ ಕಾಣುವ ಒಂದು ಸ್ಪಷ್ಟ ವ್ಯತ್ಯಾಸವೆಂದರೆ ಎಲ್ಲಾ ಪರಿಕಲ್ಪನೆಯ ಪದಗಳು ಮತ್ತು ಕೊಂಡಿಯಾಗಿ ವರ್ತಿಸಿದ ಪದಗಳನ್ನು ಪಟ್ಟಿ ಮಾಡದಿರುವುದು. ಇನ್ನೊಂದು ವ್ಯತ್ಯಾಸವೆಂದರೆ ಚಿತ್ರ 1 ರಲ್ಲಿ ಪೆನ್ನು ಮತ್ತು ಪೇಪರ್‌ಗಳನ್ನು ಬಳಸಿ ಫ್ರೀ ಹ್ಯಾಂಡ್ (Free and) ಮೈಂಡ್ ಮ್ಯಾಪ್ ಅನ್ನು ಮಾಡಿದ್ದಾರೆ. ಎರಡನೆಯ ಚಿತ್ರದಲ್ಲಿ ಫ್ರೀ ಮೈಂಡ್ ಎನ್ನುವ ತಂತ್ರಾಂಶದ ಅಫ್ಲಿಕೇಷನ್ ಬಳಸಿ ಮೈಂಡ್ ಮ್ಯಾಪ್ ಅನ್ನು ರಚಿಸಿದ್ದಾರೆ.
ಮೈಂಡ್ ಮ್ಯಾಪ್ ಅನ್ನು ಬರೆಯಲು ಪ್ರಾರಂಭಿಸುವುದು:
- ಚಿತ್ರ 3ರಲ್ಲಿ ತೋರಿಸಿರುವಂತೆ ನ್ಯೂ ಮೈಂಡ್ ಮ್ಯಾಪ್ ಮೇಲೆ ಡಬಲ್ ಕ್ಲಿಕ್ ಮಾಡಿ.
- ನ್ಯೂ ಮೈಂಡ್ ಮ್ಯಾಪ್ ನಲ್ಲಿರುವ ಪಠ್ಯವನ್ನು ಅಳಿಸಿ, ಸಸ್ಯ ಎಂಬ ಮುಖ್ಯ ಪದವನ್ನು ಟೈಪ್ ಮಾಡಿ.
ಈ ಕೆಳಗಿನ ಯಾವುದಾದರೊಂದು ಆಯ್ಕೆಯನ್ನು ಬಳಸಿ
- ಎಡಿಟ್ → ನ್ಯೂ ಚೈಲ್ಡ್ (ಶಾರ್ಟ್ ಕಟ್ ಕೀ 'Insert').
- ಈಗ ನೀವು ಸಸ್ಯ ನೋಡ್‌ನ ಹೊಸದೊಂದು ಚೈಲ್ಟ್ ನೋಡ್ ಅನ್ನು ರಚಿಸಿದ್ದೀರಿ.
- ಈ ನ್ಯೂನೋಡ್' ನಲ್ಲಿ 'Have' ಎಂಬ ಪಠ್ಯವನ್ನು ಟೈಪ್ ಮಾಡಿ.
- ಫಾರ್ಮ್ಯಾಟ್ ಮೆನುವಿನಿಂದ → ಫೋರ್ಕ್ ಆಪ್ಷನ್ ಅನ್ನು ಆಯ್ಕೆ ಮಾಡಿ.
- ಇನ್ನೊಂದು ಪರಿಕಲ್ಪನಾ ಪದವನ್ನು ಸೇರಿಸಲು ಕರ್ಸರ್ ಅನ್ನು Have ನೋಡ್ (ಪೇರೆಂಟ್ ನೋಡ್)ನ ಮೇಲಿಡಿ ಮತ್ತು
* ಎಡಿಟ್ ಮೆನುವಿನಲ್ಲಿ → ನ್ಯೂ ಚೈಲ್ಡ್ ನೋಡ್ (ಶಾರ್ಟ್ ಕಟ್ ಕೀ 'Insert') ಆಪ್ಷನ್ ಅನ್ನು ಆಯ್ಕೆ ಮಾಡಿ.
- 'Have' ನೋಡ್ ಗೆ ನೀವು ಹೊಸದಾದ ನ್ಯೂ ಚೈಲ್ಡ್ ಅನ್ನು ಸೃಷ್ಟಿಸಿದ್ದೀರಿ.
- . ಕಾಂಡ ಎನ್ನುವ ಹೊಸ ವಿಷಯವನ್ನು ಹೊಸ ಘಟಕದಲ್ಲಿ ಸೇರಿಸಿ.
- ಫಾರ್ಮ್ಯಾಟ್ ಮೆನುವಿನಲ್ಲಿ → ಬಬಲ್ ಆಯ್ಕೆ ಮಾಡಿ.
6. ಎಲೆಗಳು (Leaves) ಎಂಬ ಇನ್ನೊಂದು ಪರಿಕಲ್ಪನಾಪದವನ್ನು ಸೇರಿಸಲು ಕಾಂಡದ (ಸಿಬ್ಲಿಂಗ್ ನೋಡ್)ಮೇಲೆ ಕರ್ಸರ್ ಅನ್ನು ಇರಿಸಿ ಕೆಳಗಿನ ಹಂತಗಳನ್ನು ಅನುಸರಿಸಿ.
- ಎಡಿಟ್ ಮೆನುವಿನಲ್ಲಿ → ನ್ಯೂ ಸಿಬ್ಲಿಂಗ್ ನೋಡ್ (ಶಾರ್ಟ್ ಕಟ್ ಕೀ 'Enter)ಅನ್ನು ಆಯ್ಕೆ ಮಾಡಿ.
- ನೀವು ಹೊಸದಾದ ಕಾಂಡ ಎಂಬ ನ್ಯೂ ಸಿಬ್ಲಿಂಗ್ ನೋಡ್ ಅನ್ನು ಸೃಷ್ಠಿಸಿದ್ದೀರಿ.
- ಈ ಹೊಸ ನೋಡ್‌ನಲ್ಲಿ ಎಲೆಗಳು ಎಂಬ ಪಠ್ಯವನ್ನು ಸೇರಿಸಿ.
- ಫಾರ್ಮ್ಯಾಟ್ ಮೆನುವಿನಲ್ಲಿ → ಬಬಲ್ ಆಯ್ಕೆ ಮಾಡಿ.
ಈ ರೀತಿ ನೀವು ಸಸ್ಯದ ಸಂಪೂರ್ಣ ಮೈಂಡ್ ಮ್ಯಾಪ್ ಅನ್ನು ರಚಿಸಬಹುದು.
ನಿಮ್ಮ ಫ್ರೀ ಮೈಂಡ್ ಮ್ಯಾಪ್ ಅನ್ನು ಸೇವ್ ಮಾಡುವುದು
- ಪೈಲ್ ಮೆನುವಿನಂದ → Save As ಆಯ್ಕೆ ಮಾಡಿ.
- ಪಕ್ಕದಲ್ಲಿರುವಂತೆ ವಿಂಡೋ ಕಾಣಿಸುತ್ತದೆ.
- ಫೋಲ್ಡರ್ ಬಾಕ್ಸ್ ನ ಮೇಲೆ ಡಬಲ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಪೋಲ್ಡರ್ ಅನ್ನು ಆಯ್ಕೆ ಮಾಡಿ. ಇಲ್ಲಿ ಆಯ್ಕೆಯಾಗಿರುವ ಪೋಲ್ಡರ್ /ಹೋಮ್ /ಬಿಂದು/ಡಾಕ್ಯುಮೆಂಟ್ಸ್ ಆಯ್ಕೆಯಾಗಿರುತ್ತದೆ.
- ಬಾಕ್ಸ್ ನಲ್ಲಿ ಸಸ್ಯ ಎಂದು ಕಡತದ ಹೆಸರನ್ನು ಟೈಪ್ ಮಾಡಿ.
- ಓಕೆ (OK)ಯನ್ನು ಕ್ಲಿಕ್ ಮಾಡಿ.
- ಫ್ರೀ ಮೈಂಡ್ ವಿಂಡೋದ ಪ್ಯಾನೆಲ್ ನಲ್ಲಿ ಈಗ ನೀವು ಹೆಸರು ಬದಲಾಗುವುದನ್ನು ಗಮನಿಸುವಿರಿ ಮತ್ತು ಈಗ ಕಡತದ ಹೆಸರು ಯಾವ ಮಾರ್ಗದಲ್ಲಿ ಸೇವ್ ಆಗಿದೆಯೊ ಆ ರೀತಿ ಕಾಣಸಿಗುತ್ತದೆ.
- ನಿಮ್ಮ ಕಡತವು ಸಸ್ಯ. mm ಎಂದು ಸೇವ್ ಆಗಿರುತ್ತದೆ. ಎಲ್ಲಾ ಫ್ರೀ ಮೈಂಡ್‌ಗಳ ಕಡತವು .mm ಎಂಬ ವಿಸ್ತರಣೆಯನ್ನು ಹೊಂದಿರುತ್ತವೆ.
ಈ ಕೆಳಗಿನ ವೆಬ್ ಸೈಟ್ ಗಳನ್ನು ಹೆಚ್ಚಿನ ಮೈಂಡ್ ಮ್ಯಾಪ್ ರಚಿಸಲು ಸಂಪರ್ಕಿಸಿ.