"ಸೋಮೇಶ್ವರ ಶತಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೩ ನೇ ಸಾಲು: ೧೩ ನೇ ಸಾಲು:
 
ವಿಕಿ ಸೋರ್ಸ್‌ನಲ್ಲಿರುವ [https://kn.wikisource.org/wiki/%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%B6%E0%B2%A4%E0%B2%95 ಪುಲಿಗೆರೆ ಸೋಮನಾಥ ಮತ್ತು ಸೋಮೇಶ್ವರ ಶತಕ]ದ ಮಾಹಿತಿ
 
ವಿಕಿ ಸೋರ್ಸ್‌ನಲ್ಲಿರುವ [https://kn.wikisource.org/wiki/%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%B6%E0%B2%A4%E0%B2%95 ಪುಲಿಗೆರೆ ಸೋಮನಾಥ ಮತ್ತು ಸೋಮೇಶ್ವರ ಶತಕ]ದ ಮಾಹಿತಿ
  
[https://kn.wikipedia.org/wiki/%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%B6%E0%B2%A4%E0%B2%95 ವಿಕಿಪೀಡಿಯಾದಲ್ಲಿನ ಮಾಹಿತಿ]   
+
[https://kn.wikipedia.org/wiki/%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%B6%E0%B2%A4%E0%B2%95 ವಿಕಿಪೀಡಿಯಾದಲ್ಲಿನ ಮಾಹಿತಿ]
 +
{| class="wikitable"
 +
|'''No'''
 +
|'''Activity'''
 +
|'''Details'''
 +
|'''Language Dimension'''
 +
|-
 +
|1
 +
|ಪದ್ಯದ ಗಟ್ಟಿ ವಾಚನ
 +
|ಪದ್ಯ ಕೇಳುವುದು
 +
|ಆಲಿಸುವುದು
 +
|-
 +
|
 +
|
 +
|
 +
|
 +
|-
 +
|2
 +
|ಪದ್ಯವನ್ನು ಪೂರ್ಣ ಗೊಳಿಸಿ
 +
|
 +
|
 +
|-
 +
|3
 +
|ಪರಿಕಲ್ಪನಾ ನಕ್ಷೆಯನ್ನು ಬಳಸುವುದು
 +
|
 +
|
 +
|-
 +
|
 +
|
 +
|
 +
|
 +
|-
 +
|4
 +
|
 +
|
 +
|ಮಾತನಾಡುವುದು
 +
|-
 +
|5
 +
|ನಾಲ್ಕನೇ ಪದದ ಸಂಬಂಧ ಬರೆಯಿರಿ
 +
|ಪ್ರಾಸ ಪದ ವಿಶೇಷತೆ – h5p
 +
|
 +
|-
 +
|6
 +
|ಅಭ್ಯಾಸ ಚಟುವಟಿಕೆ ಖಾಲಿ ಬಿಟ್ಟ ಪದ್ಯ ಭಾಗವನ್ನು ಪೂರ್ಣಗೊಳಿಸಿ
 +
|
 +
|
 +
|-
 +
|7
 +
|ಹೊಸಗನ್ನಡದಲ್ಲಿ ಬರೆಯಿರಿ
 +
|ವೀಡಿಯೋ ವೀಕ್ಷಣೆ
 +
|ಆಲಿಸುವುದು / ಓದು
 +
|-
 +
|8
 +
|ಲಘು ಗುರು ಹಾಕಲು
 +
|
 +
|
 +
|-
 +
|9
 +
|ಅದಲು ಬದಲು ಪದವನ್ನು ಸರಿಪಡಿಸಿ -ಭಾಷಾ ಸಮೃದ್ಧಿ
 +
|ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ
 +
|ಮಾತನಾಡುವುದು
 +
|-
 +
|10
 +
|ಅಕ್ಷರ ಗಣದ ಪರಿಚಯ
 +
|
 +
|
 +
|-
 +
|
 +
|
 +
|
 +
|
 +
|-
 +
|11
 +
|ಸಮನಾಂತರ ಪದ್ಯವನ್ನು ಓದಿ
 +
|ಕೆಲವಂ ಬಲ್ಲವರಿಂದ
 +
|ಕೇಳುವುದು /ಮಾತನಾಡುವುದು/ ಓದುವುದು
 +
|-
 +
|
 +
|
 +
|
 +
|
 +
|}  
  
 
=ಹೆಚ್ಚುವರಿ ಸಂಪನ್ಮೂಲ=
 
=ಹೆಚ್ಚುವರಿ ಸಂಪನ್ಮೂಲ=
೧೦೭ ನೇ ಸಾಲು: ೧೮೮ ನೇ ಸಾಲು:
 
=ಭಾಷಾ ವೈವಿಧ್ಯತೆಗಳು =
 
=ಭಾಷಾ ವೈವಿಧ್ಯತೆಗಳು =
 
==ಶಬ್ದಕೋಶ ==
 
==ಶಬ್ದಕೋಶ ==
 +
{| class="wikitable"
 +
|'''ಉಡುರಾಜ'''
 +
|ನಕ್ಷತ್ರಾಧಿಪತಿ
 +
|ಚಂದ್ರ
 +
|-
 +
|'''ಒಲ್ಮೆ'''
 +
|ಪ್ರೀತಿ
 +
|
 +
|-
 +
|'''ನೃಗ್ರೋಧ'''
 +
|ಆಲದ ಮರ
 +
|
 +
|-
 +
|'''ವರ್ಣ'''
 +
|ಅಕ್ಷರ
 +
|
 +
|}
 +
 
==ವ್ಯಾಕರಣ/ಅಲಂಕಾರ/ಛಂದಸ್ಸು==
 
==ವ್ಯಾಕರಣ/ಅಲಂಕಾರ/ಛಂದಸ್ಸು==
 +
ಆದಿಪ್ರಾಸ - ಮತ್ತೇಭ ವಿಕ್ರೀಡಿತ ವೃತ್ತ
 +
 
=ಮೌಲ್ಯಮಾಪನ =
 
=ಮೌಲ್ಯಮಾಪನ =
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 
=ಭಾಷಾ ಚಟುವಟಿಕೆಗಳು/ ಯೋಜನೆಗಳು=
 +
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
 +
 +
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
 +
 +
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
 +
 +
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ
 +
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
  
 
[[ವರ್ಗ:ಪದ್ಯ]]
 
[[ವರ್ಗ:ಪದ್ಯ]]
 
[[ವರ್ಗ:೮ನೇ ತರಗತಿ]]
 
[[ವರ್ಗ:೮ನೇ ತರಗತಿ]]

೧೧:೩೨, ೨೬ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಪುಲಿಗೆರೆ ಸೋಮನಾಥ

  • ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮನೆಂದು ನಂಬಲಾಗಿದೆ. ಈ ಕವಿಯ ಕಾಲ ಸುಮಾರು ೧೨೯೯. ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ, ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ, ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಸೋಮನಾಥನು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು ಈಗಿನ ಲಕ್ಷೀಶ್ವರ. ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ. ೧೩ನೆಯ ಶತಮಾನದಲ್ಲಿ ಹೊಯ್ಸಳ ರಾಜಾಶ್ರಯದಲ್ಲಿದ್ದನು. ಆದಯ್ಯನ ಪರಮ ಶಿವಭಕ್ತನಾಗಿದ್ದ, ಅವನು ಈ ದೇವಾಲಯದಲ್ಲಿ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ. ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿದೆ. ದಂಡನಾಯಕ ನಾಗವರ್ಮಯ್ಯನು ಪುಲಿಗೆರೆಯ ೧೨೦ ಮಹಾಜನರಿಂದ ಭೂಮಿಯನ್ನು ಕೊಂಡು ಸೋಮೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿವರಗಳಿವೆ.
  • ಕನ್ನಡ, ಸಂಸ್ಕೃತ ಭಾಷಾ ಪಂಡಿತನಾದ ಈತನ ಅಂಕಿತ ನಾಮ “ಹರಹರ ಶ್ರೀ ಚನ್ನಸೋಮೇಶ್ವರ”
  • ಕನ್ನಡದಲ್ಲಿ 'ರತ್ನಾಕರಂಡಕ' ಕಾವ್ಯವನ್ನು ಚಂಪೂವಿನಲ್ಲಿಯು, 'ಸೋಮೇಶ್ವರ ಶತಕ'ವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.
  • ಪುಲಿಕೆರೆಯ ಸೋಮ ಕವಿಯ ಕಾಲದ ಬಗ್ಗೆ ನಿಖರತೆ ಇಲ್ಲ. ಸುಮಾರು ಕ್ರಿ. ಶ. ೧೨೦೦ -೧೩೦೦ ರಲ್ಲಿ ಇದ್ದನೆಂದು ಭಾವಿಸಲಾಗಿದೆ. ಸೋಮೇಶ್ವರ ಶತಕವು ನೀತಿ ಶಾಸ್ತ್ರವನ್ನು ಹೇಳುವ ಪದ್ಯಗಳಾಗಿವೆ. ಅವುಗಳನ್ನು ಮತ್ತೇಭ ವಿಕ್ರೀಡಿತ ವೃತ್ತಗಳಲ್ಲಿ ರಚಿಸಲಾಗಿವೆ. ಸೋಮೇಶ್ವರ ಶತಕ ಕನ್ನಡದಲ್ಲಿ ಬಹಳ ಜನಪ್ರಿಯವಾದ ಕಾವ್ಯ. ಹೆಸರೇ ಹೇಳುವಂತೆ (ಶತಕ: ನೂರು)ಅದು ೧೦೦ ಪದ್ಯಗಳನ್ನು ಹೊಂದಿದೆ. ಇವನನ್ನು ನಡುಗನ್ನಡದ ವೀರಶೈವ ಕವಿಗಳ ಸಾಲಿಗೆ ಸೇರಿಸಲಾಗಿದೆ.

(ಸಂಗ್ರಹ:ವಿಕಿಪೀಡಿಯಾ)

ಶಿಕ್ಷಕರಿಗೆ ಟಿಪ್ಪಣಿ

ವಿಕಿ ಸೋರ್ಸ್‌ನಲ್ಲಿರುವ ಪುಲಿಗೆರೆ ಸೋಮನಾಥ ಮತ್ತು ಸೋಮೇಶ್ವರ ಶತಕದ ಮಾಹಿತಿ

ವಿಕಿಪೀಡಿಯಾದಲ್ಲಿನ ಮಾಹಿತಿ

No Activity Details Language Dimension
1 ಪದ್ಯದ ಗಟ್ಟಿ ವಾಚನ ಪದ್ಯ ಕೇಳುವುದು ಆಲಿಸುವುದು
2 ಪದ್ಯವನ್ನು ಪೂರ್ಣ ಗೊಳಿಸಿ
3 ಪರಿಕಲ್ಪನಾ ನಕ್ಷೆಯನ್ನು ಬಳಸುವುದು
4 ಮಾತನಾಡುವುದು
5 ನಾಲ್ಕನೇ ಪದದ ಸಂಬಂಧ ಬರೆಯಿರಿ ಪ್ರಾಸ ಪದ ವಿಶೇಷತೆ – h5p
6 ಅಭ್ಯಾಸ ಚಟುವಟಿಕೆ ಖಾಲಿ ಬಿಟ್ಟ ಪದ್ಯ ಭಾಗವನ್ನು ಪೂರ್ಣಗೊಳಿಸಿ
7 ಹೊಸಗನ್ನಡದಲ್ಲಿ ಬರೆಯಿರಿ ವೀಡಿಯೋ ವೀಕ್ಷಣೆ ಆಲಿಸುವುದು / ಓದು
8 ಲಘು ಗುರು ಹಾಕಲು
9 ಅದಲು ಬದಲು ಪದವನ್ನು ಸರಿಪಡಿಸಿ -ಭಾಷಾ ಸಮೃದ್ಧಿ ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ ಮಾತನಾಡುವುದು
10 ಅಕ್ಷರ ಗಣದ ಪರಿಚಯ
11 ಸಮನಾಂತರ ಪದ್ಯವನ್ನು ಓದಿ ಕೆಲವಂ ಬಲ್ಲವರಿಂದ ಕೇಳುವುದು /ಮಾತನಾಡುವುದು/ ಓದುವುದು

ಹೆಚ್ಚುವರಿ ಸಂಪನ್ಮೂಲ

ಪದ್ಯದ ಹಾಡುಗಾರಿಕೆಯ ವೀಡಿಯೋ

ಸಂಪೂರ್ಣ ಸೋಮೇಶ್ವರ ಶತಕದ ಧ್ವನಿ

ಪುಲಿಗೆರೆ ಸೋಮನಾಥ ದೇವಾಲಯ

ಸಾರಾಂಶ

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |

ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||

ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದಂ |

ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೧ ||

ಭಾವಾರ್ಥ:- ಯಾರು ನಮ್ಮ ಹಿತವನ್ನು ಬಯಸುವನೋ ಅವನೇ ಆತ್ಮಬಂಧು (ನೆಂಟ)- ಮನಸ್ಸಿಗೆ ಹತ್ತಿರವಾದ ನೆಂಟ.ರಕ್ಷಿಸಿ, ಸಾಕಿ, ಸಲಹಿ ಕಾಪಾಡುವವನೇ ತಂದೆ. ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ಕುಟುಂಬದ ಎಲ್ಲಾ ಸುಖಕ್ಕೂ ಕಾರಣ, ಒಂದಕ್ಷವನ್ನು ಕಲಿಸಿದವನಾದರೂ ಸರಿ ಅವನೂ ಗುರುವೇ ಆಗುವನು. ವೇದಗಳನ್ನು ಬಿಡದೆ ಪಠಿಸುತ್ತಾ ಪಾಲನೆ ಮಾಡುವವನೇ ಮುನಿ. ಒಳ್ಳೆಯ ವಿದ್ಯೆಯೇ ಪುಣ್ಯಸಂಪಾದನೆಗೆ ದಾರಿ. ಒಳ್ಳೆಯ ಮಗನೇ ಸದ್ಗತಿಯನ್ನು ತಂದುಕೊಡುತ್ತಾನೆ ಎಂದು ಸೋಮನಾಥ ಹೇಳಿದ್ದಾನೆ.

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |

ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||

ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |

ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ || ೨ ||

ಭಾವಾರ್ಥ:- ಪ್ರಜೆಗಳನ್ನು ಪಾಲಿಸಬಲ್ಲವನೆ ನಿಜವಾದ ಅರಸ. ಲಂಚ ಆಮಿಷಗಳನ್ನು ಬಯಸದವನೇ ನಿಜವಾಗಿ ಒಳ್ಳೆಯ ಮಂತ್ರಿ. ತಂದೆ-ತಾಯಿಯನ್ನು ಸಲಹುವವನೇ ಧರ್ಮವಂತ, ಭಕ್ತಿಯಿಂದ ಪೂಜಿಸುವವನೇ ನಿಜಕವಾದ ಭಕ್ತ. ಧೈರ್ಯವಂತನೇ ನಿಜವಾದ ಭಟ. ಒಳ್ಳೆಯ ಆಚಾರವನ್ನು ಹೊಂದಿರುವವನೇ ದ್ವಿಜ(ಬ್ರಾಹ್ಮಣ) ಎಂದು ಸೋಮನಾಥ ಹೇಳಿದ್ದಾನೆ.

ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ |

ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ ||

ವ್ರತ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ |

ಪತಿಕಾರ‍್ಯಂ ವರ ಮಂತ್ರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೩ ||

ಭಾವಾರ್ಥ:- ಸೋಮನಾಥನು ಒಳ್ಳೆಯ ಮಂತ್ರಿಯಲ್ಲಿರ ಬೇಕಾದ ಗುಣಗಳನ್ನು ಈ ಪದ್ಯಭಾಗದಲ್ಲಿ ಪಟ್ಟಿಮಾಡಿದ್ದಾನೆ. ಅತಿ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ, ಸತ್ಯಾತ್ಮನೂ, ರೂಧಿಯಲ್ಲಿರುವ ಹಲವು ಲಿಪಿ-ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ವ್ರತವನ್ನು ಪಾಲಿಸುವವನೂ ಧರ್ಮಪರನೂ ವಿಚಾರವಂತನೂ ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ಎಂದು ಸೋಮನಾಥ ಹೇಳಿದ್ದಾನೆ.

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಭೀಜಂ ಕೆಲಂ |

ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||

ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |

ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ || ೪ ||

ಭಾವಾರ್ಥ:- ಜೀವನದಲ್ಲಿ ಆಶಾವಾದಿಯಾಗಿರಬೇಕು. ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂಬುದನ್ನು ಇಲ್ಲಿ ಕವಿ ಪ್ರತಿಪಾದಿಸಿದ್ದಾನೆ.

ಚಂದ್ರನು ಒಂದೇ ಸಮನಾಗಿರುವುದಿಲ್ಲ. ಕಳೆಗುಂದುತ್ತಾನೆ ಮತ್ತೆ ಹೆಚ್ಚಾಗುವುದಿಲ್ಲವೇ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು, ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ? ಮಿಡಿ ಹಣ್ಣಾಗುವುದಿಲ್ಲವೇ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನು ಸಿರಿವಂತನಾಗುವುದಿಲ್ಲವೇ? ಎಂದು ಹೇಳುವ ಮೂಲಕ, ಜೀವನದಲ್ಲಿ ಯಾವುದೂ ನಿಶ್ಚಿತವಲ್ಲ. ಬದಲಾವಣೆ ಜಗದ ನಿಯಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

1. ಮಿಡಿ : ಪಣ್ಣಾಗದೇ : : ಎಳಗರು : ___________ ಪೆತ್ತಾಗದೆ

2. ನೃಗ್ರೋಧ : ಆಲದ ಮರ : : ಉಡುರಾಜ : ___________ ಚಂದ್ರ

3. ಭಕ್ತಿಯುಳ್ಳ : ಆಗಮ ಸಂದಿ : : ಕಳೆಗುಂದು : ___________

4. ಧರ್ಮ : ಅಧರ್ಮ : : ಬಡವ : ___________

5. ಕಾರ್ಯ : ಕಜ್ಜ : : ಭಕ್ತಿ : ___________

  1. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಸೋಮೇಶ್ವರ ಶತಕ ಪದ್ಯದ ಸಾಲುಗಳ ಬಿಟ್ಟ ಸ್ಥಳವನ್ನು ತುಂಬಿರಿ

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |

ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||

ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |

ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ || ೨ ||

  1. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ಉಡುರಾಜ ನಕ್ಷತ್ರಾಧಿಪತಿ ಚಂದ್ರ
ಒಲ್ಮೆ ಪ್ರೀತಿ
ನೃಗ್ರೋಧ ಆಲದ ಮರ
ವರ್ಣ ಅಕ್ಷರ

ವ್ಯಾಕರಣ/ಅಲಂಕಾರ/ಛಂದಸ್ಸು

ಆದಿಪ್ರಾಸ - ಮತ್ತೇಭ ವಿಕ್ರೀಡಿತ ವೃತ್ತ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ

ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ

ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ

ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ

ಪಠ್ಯ ಬಗ್ಗೆ ಹಿಮ್ಮಾಹಿತಿ