ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
KPSB module 9
೧ ನೇ ಸಾಲು: ೧ ನೇ ಸಾಲು: −
+
== ಸಾರಾಂಶ ==
 +
ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.
 +
 
 +
ಫೆಸಿಲಿಟೇಟರ್‌ - ಕಾರ್ತಿಕ್‌
 +
 
 +
ಕೊ-ಫೆಸಿಲಿಟೇಟರ್‌ಗಳು -ಶ್ರೇಯಸ್‌,  ಅನುಷಾ
 +
 
 +
== ಊಹೆಗಳು ==
 +
• ಪರೀಕ್ಷೆಗಳ ಬಗ್ಗೆ ಭಯ/ಆತಂಕ ಶುರುವಾಗಿರಬಹುದು.
 +
 
 +
• ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ
 +
 
 +
• ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ
 +
 
 +
• ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ
 +
 
 +
• ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ
 +
 
 +
• ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ
 +
 
 +
• ನಮ್ಮ ಸೆಷನ್ ಸಫಲವಾಗಲು ರುತು ತರಹದ ಕಿಶೋರಿಯಿಲ್ಲ ಹಾಗೂ ಇಲ್ಲಿ ಭಯವಿಲ್ಲದೆ ಮಾತನಾಡುವ ಕಿಶೋರಿಯರು ಸ್ಪಂದಿಸುತ್ತಾರೆಂದು ಆಶಿಸುತ್ತೇವೆ.
 +
 
 +
• ಸಾಮಾನ್ಯವಾಗಿ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ
 +
 
 +
• ಶಾಲೆಗೆ ಎಂದು ಹೇಳಿ ಪಾರ್ಕಿಗೆ ಹೋಗುವ, ಶಾಲೆಯ ನಂತರ ಸಮವಸ್ತ್ರ ಬದಲಿಸಿ ಸಿಂಗರಿಸಿಕೊಂಡು ಹುಡುಗರೊಂದಿಗೆ ಹೋಗುವ ಕಿಶೋರಿಯರು ಇದ್ದಾರೆ.
 +
 
 +
== ಉದ್ದೇಶ ==
 +
ಕಿಶೋರಾವಸ್ಥೆಯ ಪರಿಚಯ ಮತ್ತು ವ್ಯಾಖ್ಯಾನವನ್ನು ಆರಂಭಿಸುವುದು
 +
 
 +
== ಪ್ರಕ್ರಿಯೆ ==
 +
ಕಿಶೋರಿಯರ ಕುಶಲೋಪರಿಯನ್ನು ವಿಚಾರಿಸುವ ಮೂಲಕ  ಮಾತುಕಥೆಯನ್ನು ಆರಂಭಿಸುವುದು.
 +
 
 +
ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. '''(೧೦ ನಿಮಿಷ)'''
 +
 
 +
ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು ಹಾಗು ಆಡಿಯೋ ಕಥೆಗಳನ್ನು ಪುನಃ ಕೇಳಿಸುವುದು.
 +
 
 +
ಇದಾದ ನಂತರ ೩ ಗುಂಪುಗಳನ್ನು ಮಾಡಿಕೊಂಡು, ಗುಂಪುಗಳಲ್ಲಿ ಕುಳಿತುಕೊಳ್ಳುವುದು. '''(೫ ನಿಮಿಷ)'''
 +
 
 +
ಗುಂಪಿನಲ್ಲಿ ಕುಳಿತುಕೊಂಡ ನಂತರ ಪಾತ್ರಾಭಿನಯಗಳ ಶೀರ್ಷಿಕೆಗಳನ್ನು ಬಳಸಿಕೊಂಡು ಗುಂಪಿನ ಚರ್ಚೆಯನ್ನು ಪ್ರಾರಂಭಿಸಬಹುದು.
 +
 
 +
ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು
 +
 
 +
೧) ಯಾವ ಪಾತ್ರಾಭಿನಯ ಇಷ್ಟ ಆಯಿತು? ಯಾಕೆ?
 +
 
 +
೨) ಯಾವ ಪಾತ್ರ ಇಷ್ಟ ಆಯಿತು? ಯಾಕೆ?
 +
 
 +
೩) ಕಥೆ ಇಷ್ಟ ಆಯ್ತು ಅಂದರೆ, ಯಾವ ಕಥೆ ಇಷ್ಟ ಆಯ್ತು?
 +
 
 +
ಒಬ್ಬೊಬ್ಬರು ಒಂದೊಂದು ಕಥೆ ಬಗ್ಗೆ  ಹೇಳುತ್ತಾರೆ ಎಂದು ಅಂದುಕೊಳ್ಳಬಹುದು. ಎಲ್ಲಾ ವಿಷಯಗಳ ಬಗ್ಗೆಯೂ ಮಾತುಕತೆ ಆಗಿಲ್ಲ ಅಂದರೆ, ‘ಇನ್ನೇನು ಕಥೆಗಳಿದ್ದವು?’ ಎಂದು ಕೇಳುವುದು. ಹೀಗೆಯೇ ಪ್ರತಿ ಕಥೆಯ ಬಗ್ಗೆಯೂ ಕೇಳುವುದು.
 +
 
 +
ಕಿಶೋರಿಯರು ಏನೂ ಮಾತನಾಡದೇ ಇದ್ದಲ್ಲಿ ಈ ಕೆಳಗಿನ ಉದಾಹರಣೆಗಳನ್ನು ಬಳಸಿಕೊಂಡು ಗುಂಪಿನ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬಹುದು.
 +
 
 +
"ಚಿಕ್ಕ ಹುಡುಗಿ ಕಥೆಯಲ್ಲಿ ಏನಾಗುತ್ತೆ?” ಎಂದು ಕೇಳಿದರೆ ಕಿಶೋರಿಯರು ಕಥೆ ಬಗ್ಗೆ ಮಾತನಾಡಬಹುದು.
 +
 
 +
"ಕಿಶೋರಿಯರಿಬ್ಬರೂ ಒಂದೇ ಕ್ಲಾಸ್‌, ಒಂದೇ ವಯಸ್ಸಿನೋರು ಅಂತ ಅನ್ಸುತ್ತಲ್ವಾ?” ಎಂದು ಕೇಳಿದರೆ ಕಿಶೋರಿಯರು 'ಇರಬಹುದು' ಎಂದು ಹೇಳಬಹುದು.
 +
 
 +
"ಹಾಗಿದ್ದಾಗ ದೊಡ್ಡೋರು ಚಿಕ್ಕೋರು ಅಂತ ಯಾಕೆ ಮಾತಾಡ್ಕೋತಿದಾರೆ? ಮತ್ತೆ ಇದಕ್ಕೂ ಹೊಟ್ಟೆ ನೋವಿಗೂ ಏನು ಸಂಬಂಧ?”
 +
 
 +
ಹೀಗೇಯೇ ಎಲ್ಲಾ ಕಥೆಗಳ ಬಗ್ಗೆಯೂ ಒಂದೊಂದಾಗಿ ಏನನ್ನಿಸಿತು ಎಂದು ಕೇಳವುದು.
 +
 
 +
"ಹಾಡು ಕೇಳ್ತೀಯಾ?ಕಥೆ ಬಗ್ಗೆ ಏನು ಅನ್ನಿಸಿತು?” ಎಂದು ಕೇಳಿದರೆ ಈ ಕೆಳಗಿನ ಅಂಶಗಳನ್ನು ಹೇಳಬಹುದು.
 +
 
 +
• ಚೆನ್ನಾಗಿತ್ತು.
 +
 
 +
• ಹುಡುಗಿನೇ ಹುಡುಗನನ್ನು ಹೆಚ್ಚು ನೋಡುತ್ತಿದ್ದಳು.
 +
 
 +
• ಅಕ್ಕ ಬಂದು ಬೈದಳು.
 +
 
 +
ಹೀಗೆ ಎಲ್ಲಾ ಕಥೆಗಳ ಬಗ್ಗೆ ಕೇಳುತ್ತೇವೆ.
 +
 
 +
ಇದಾದ ನಂತರ ಕಿಶೋರಿಯರಿಗೆ ಪಾತ್ರಾಭಿನಯಗಳಲ್ಲಿ ಬರುವ ಪಾತ್ರಗಳ ಜೊತೆ ಹೋಲಿಸಿಕೊಳ್ಳಲು ಹೇಳುವುದು.
 +
 
 +
"ಇದನ್ನೆಲ್ಲಾ ನೊಡಿದಾಗ, ಯಾವ ಪಾತ್ರ ನೋಡಿದರೆ ನಿಮಗೂ ಈ ಥರ ಆಗಿದೆ ಅಂಥ ಅನಿಸುತ್ತೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.
 +
 
 +
• ಚುಡಾಯಿಸುವುದು.
 +
 
 +
• ಕಾಲು ತುಳಿಯುವುದು.
 +
 
 +
• ಹೊಟ್ಟೆ ನೋವು.
 +
 
 +
• ಹುಡುಗ ಹುಡುಗಿ ಕಥೆ
 +
 
 +
ಮುಂದಿನ ಚಟುವಟಿಕೆಗೆ, ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು.
 +
 
 +
1. ಒಂದು ಮಗುವಿನ ಚಿತ್ರ
 +
 
 +
2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ
 +
 
 +
ಈ ಗುಂಪುಗಳಲ್ಲೇ ೩ ಜನರ ಉಪಗುಂಪುಗಳನ್ನು ಮಾಡಿಕೊಂಡು, ಚಿತ್ರಗಳನ್ನು ಮಧ್ಯದಲ್ಲಿ ಎಸೆದು, ಅವರಿಗೆ ಒಂದನ್ನು ಆರಿಸಿಕೊಳ್ಳಲು ಹೇಳುವುದು. ಆರಿಸಿಕೊಂಡಾದ ನಂತರ ಏನು ಮಾಡಬೇಕೆಂದು ಹೇಳಬೇಕು.
 +
 
 +
“ನಾವು ಚಿಕ್ಕ ಡ್ರಾಮಗಳಲ್ಲಿ ಬೇರೆ ಬೇರೆ ಅಂಶಗಳನ್ನು ನೋಡಿದೀವಲ್ಲ? ಆ ಅಂಶಗಳು, ನಿಮಗೆ ಬಂದಿರುವ ಚಿತ್ರಗಳಿಗೆ ಅನ್ವಯ ಆಗುತ್ತವೆಯೇ?” ಎಂದು ಕೇಳುವುದು.
 +
 
 +
ಅನ್ವಯ ಆದರೆ, ಏನೇನು ಅನ್ವಯ ಅಗುತ್ತವೆ? ಆಗಿಲ್ಲ ಅಂದರೆ ಏಕೆ ಆಗಲ್ಲ?
 +
 
 +
ಮಗುವಿನ ಚಿತ್ರದ ಬಗ್ಗೆ ಮೊದಲು ಕೇಳುವುದು.  
 +
 
 +
"ಮಗುವಿಗೆ ಹೊಟ್ಟೆ ನೋವು ಬರುತ್ತೆ" ಎಂದು ಕಿಶೋರಿಯರು ಹೇಳಬಹುದು.
 +
 
 +
ಆಮೇಲೆ ಉಳಿದ ಎರಡು ಗುಂಪುಗಳಿಗೆ ಬಂದ ಚಿತ್ರಗಳಿಗೆ ಏನೇನು ಅನ್ವಯ ಆಗುತ್ತದೆ ಎಂದು ಕೇಳುತ್ತೇವೆ.
 +
 
 +
• ಕಿಶೋರಿಯರು ಎಲ್ಲ ಕಥೆಗಳ ಬಗ್ಗೆ ಹೇಳಬಹುದು.
 +
 
 +
ಇದಾದ ನಂತರ ಈ ಕಿಶೋರಿಯರಿಗೆ ಏಷ್ಟು ವರ್ಷ ಇರಬಹುದು ಎಂದು ಕೇಳುತ್ತೇವೆ.
 +
 
 +
ಕಿಶೋರಿಯರು ವಯಸ್ಸಿನ ಬಗ್ಗೆ ಒಮ್ಮತಕ್ಕೆ ಬಂದ ನಂತರ ಈ ವಾರದ ಮಾತುಕತೆಯನ್ನು ಮುಗಿಸುತ್ತೇವೆ. '''(೩೫ ನಿಮಿಷ)'''
 +
 
 +
== ಬೇಕಾಗಿರುವ ಸಂಪನ್ಮೂಲಗಳು ==
 +
• ಆಡಿಯೋ ಕಥೆಗಳು
 +
 
 +
• ಕಂಪ್ಯೂಟರ್‌
 +
 
 +
• ಸ್ಪೀಕರ್‌
 +
 
 +
• ೩ ಚಿತ್ರಗಳು
 +
 
 +
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩ ==
 +
 
 +
== ಒಟ್ಟು ಸಮಯ ==
 +
೫೦ ನಿಮಿಷಗಳು
 +
 
 +
== ಇನ್‌ಪುಟ್‌ಗಳು ==
 +
• ಆಡಿಯೋ ಕಥೆಗಳು
 +
 
 +
== ಔಟ್‌ಪುಟ್‌ಗಳು ==
 +
• ಕಿಶೋರಿಯರು ಗುಂಪಿನಲ್ಲಿ ಹೇಳಿದ ಅಂಶಗಳು
೪೦೭

edits