"ಚಿಗುರು-೧೦-ಹದಿಹರೆಯದ ವ್ಯಾಖ್ಯಾನ ಭಾಗ -೩" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೧೬ ನೇ ಸಾಲು: ೧೧೬ ನೇ ಸಾಲು:
  
 
== ಔಟ್‌ಪುಟ್‌ಗಳು ==
 
== ಔಟ್‌ಪುಟ್‌ಗಳು ==
 +
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಕರ್ನಾಟಕ ಪಬ್ಲಿಕ್‌ ಶಾಲೆ, ಬಸವನಗುಡಿ]]

೧೨:೦೪, ೪ ಮೇ ೨೦೨೦ ನಂತೆ ಪರಿಷ್ಕರಣೆ

ಸಾರಾಂಶ

ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.

ಫೆಸಿಲಿಟೇಟರ್‌ - ಅಪರ್ಣ

ಕೊ-ಫೆಸಿಲಿಟೇಟರ್‌ಗಳು -ಶ್ರೇಯಸ್‌, ಅನುಷಾ, ಕಾರ್ತಿಕ್‌

ಊಹೆಗಳು

• ಪರೀಕ್ಷೆಗಳ ಬಗ್ಗೆ ಭಯ/ಆತಂಕ ಶುರುವಾಗಿರಬಹುದು.

• ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ

• ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ

• ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ

• ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ

• ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ

• ನಮ್ಮ ಸೆಷನ್ ಸಫಲವಾಗಲು ರುತು ತರಹದ ಕಿಶೋರಿಯಿಲ್ಲ ಹಾಗೂ ಇಲ್ಲಿ ಭಯವಿಲ್ಲದೆ ಮಾತನಾಡುವ ಕಿಶೋರಿಯರು ಸ್ಪಂದಿಸುತ್ತಾರೆಂದು ಆಶಿಸುತ್ತೇವೆ.

• ಸಾಮಾನ್ಯವಾಗಿ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ

• ಶಾಲೆಗೆ ಎಂದು ಹೇಳಿ ಪಾರ್ಕಿಗೆ ಹೋಗುವ, ಶಾಲೆಯ ನಂತರ ಸಮವಸ್ತ್ರ ಬದಲಿಸಿ ಸಿಂಗರಿಸಿಕೊಂಡು ಹುಡುಗರೊಂದಿಗೆ ಹೋಗುವ ಕಿಶೋರಿಯರು ಇದ್ದಾರೆ.

ಉದ್ದೇಶ

ಕಿಶೋರಾವಸ್ಥೆಯ ಪರಿಚಯ ಮತ್ತು ವ್ಯಾಖ್ಯಾನವನ್ನು ಆರಂಭಿಸುವುದು

ಪ್ರಕ್ರಿಯೆ

ಕಿಶೋರಿಯರ ಕುಶಲೋಪರಿಯನ್ನು ವಿಚಾರಿಸುವ ಮೂಲಕ  ಮಾತುಕಥೆಯನ್ನು ಆರಂಭಿಸುವುದು.

ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. (೧೦ ನಿಮಿಷ)

ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು. ಈ  ಕೆಳಗಿನ ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು..

1. ಒಂದು ಮಗುವಿನ ಚಿತ್ರ

2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ

ಈ ಚಿತ್ರಗಳನ್ನು ಹಿಂದಿನ ವಾರದ ಮಾಡ್ಯೂಲ್‌ನಲ್ಲಿ ಕೂಡ ಉಪಯೋಗಿಸಲಾಗಿದೆ. ಚಿತ್ರಗಳಿಗಾಗಿ ಮಾಡ್ಯೂಲ್‌ ೯ನ್ನು ನೋಡಿ.

ಮುಖ್ಯ ಫೆಸಿಲಿಟೇಟರ್‌ “ಈ ಚಿತ್ರಗಳಲ್ಲಿ ನಿಮ್ಮನ್ನ ಯಾವ ಚಿತ್ರಕ್ಕೆ ಹೋಲಿಕೆ ಮಾಡ್ಕೋತೀರಾ?” ಎಂದು ಕೇಳುವುದು.

ಕಿಶೋರಿಯರು ಒಂದು ಚಿತ್ರವನ್ನು ಹೇಳಿದಾಗ."ಏಕೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಒಂದೇ ವಯಸ್ಸು.

• ಒಂದೇ ತರಹದ ಸಮಸ್ಯೆಗಳು.

• ಒಂದೇ ತರಹದ ಸನ್ನಿವೇಶಗಳು.

• ಅವರಿಗೆ ಆಗಿರೋದೆಲ್ಲಾ ನಮಗೂ ಅಗುತ್ತೆ.  (೧೫ ನಿಮಿಷ)

ಉಪಸಂಹಾರ

ಹದಿಹರೆಯದ ವ್ಯಾಖ್ಯಾನದ ಬಗ್ಗೆ ಮಾಡಿರುವ ಪ್ರಸ್ತುತಿಯನ್ನು  ಉಪಯೋಗಿಸಿಕೊಂಡು ಫೆಸಿಲಿಟೇಟರ್‌ ಈ ಕೆಳಗಿನ ಅಂಶಗಳನ್ನು ಹೇಳಬಹುದು. ಹೇಳುವ ರೀತಿ ವಿಧಾನಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಹುದು. ಪ್ರಸ್ತುತಿಯನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು.

ಹದಿಹರೆಯದ ವ್ಯಾಖ್ಯಾನ

ಹಿಂದಿನ ವಾರಗಳಲ್ಲಿ ನಿಮ್ಮ ಜೊತೆ ಮಾತನಾಡಿದಾಗ ಬೇರೆ ಬೇರೆ ಸಮಸ್ಯೆಗಳನ್ನು ಗುರುತಿಸಿದ್ದೇವೆ.

ಉದಾಹರೆಣೆಗೆ

• ಸ್ಕೂಲಿನಿಂದ ಹೋಗುವಾಗ ರೇಗಿಸುತ್ತಾರೆ

• ಬಸ್‌ನಲ್ಲಿ ಕಾಲು ತುಳಿಯುತ್ತಾರೆ.

ಹಾಗೂ, ಈ ಸಮಸ್ಯೆಗಳು ಕೇವಲ ನಮ್ಮದೊಂದೇ ಅಲ್ಲ, ಎಲ್ಲರದ್ದೂ ಅಂತ ತಿಳಿದುಕೊಂಡಿದ್ದೇವೆ.  

ಆಮೇಲೆ ಹಿಂದಿನ ವಾರ ಪಾತ್ರಾಭಿನಯಗಳ ಮಾಡಿದ್ದೆವು. ಈ ಪಾತ್ರಾಭಿನಯಗಳ ಮೂಲಕ ಹಾಗೂ ಗುಂಪಿನ ಚರ್ಚೆಗಳ ಮೂಲಕ ಯಾವ ವಯಸ್ಸಿನ ಹೆಣ್ಣುಮಕ್ಕಳಿಗೆ ಪಾತ್ರಾಭಿನಯಗಳಲ್ಲಿ ಹೇಳಿರುವ ಸಮಸ್ಯೆಗಳು ಬರಬಹುದು ಅಂತ ಗುರುತಿಸಿದ್ದೇವೆ.

ಆಮೇಲೆ ನೀವು ಹೇಳಿದ ಹಾಗೆ ಇವರೆಲ್ಲಾ ನಿಮ್ಮ ವಯಸ್ಸಿನ ಹುಡುಗಿಯರೇ ಅಂತ.

೧೨ ವರ್ಷಕ್ಕಿಂತ ಕಮ್ಮಿ ವಯಸ್ಸನ್ನ ಬಾಲ್ಯಾವಸ್ಥೆ ಅಂತ ಹೇಳಬಹುದು. ೧೯ ವರ್ಷಕ್ಕಿಂತ ಜಾಸ್ತಿ ವಯಸ್ಸನ್ನ ಪ್ರೌಢಾವಸ್ಥೆ ಅಂತ ಹೇಳಬಹುದು. ಹಾಗೇ ಆ ಮಧ್ಯದಲ್ಲಿ ಇರುವ ೧೨- ೧೯ ವಯಸ್ಸು. ಅದನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.

ಈ ವಯಸ್ಸನ್ನೇ ಅಥವಾ ನಿಮ್ಮ ವಯಸ್ಸನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು.

ಇದನ್ನ ಹದಿಹರೆಯ, ಟೀನೇಜ್‌ ಎಂದು ಹೇಳಬಹುದು.  

ನಾವು ತರಗತಿಯಲ್ಲಿ ಏನೆಂದು ಕರೆಯೋಣ ಎಂದು ನಿರ್ಧರಿಸಿಕೊಳ್ಳುತ್ತೇವೆ.

ನಿಮಗೆ ಗೊತ್ತಿರುವ ಹಾಗೆ, ಟೀನೇಜ್‌ನಲ್ಲಿ, ಶಾರೀರಿಕ ಬದಲಾವಣೆ, ಮಾನಸಿಕ ಹಾಗೂ ಬೌಧ್ಧಿಕ ಬದಲಾವಣೆಗಳು ಅಗುತ್ತವೆ.  ಇದು ಹುಡುಗೀರಿಗೊಂದೇ ಅಲ್ಲ. ಹುಡುಗರಿಗೂ ಆಗುತ್ತವೆ.

ಶಾರೀರಿಕವಾಗಿ, ಎತ್ತರ ಜಾಸ್ತಿ ಆಗಬಹುದು. ಬೇರೆ ಬೇರೆ ವಯಸ್ಸಲ್ಲಿ ದೊಡ್ಡೋರಾಗಬಹುದು. ಹುಡುಗರಿಗೆ ಧ್ವನಿ ಗಡಸು ಆಗಬಹುದು.

ಮಾನಸಿಕ ಬದಲಾವಣೆಗಳನ್ನು ನೋಡಿದರೆ, ನಮ್ಮ ಉಡುಪಿನ ಶೈಲಿ ಬದಲಾಗಬಹುದು. ನಾವು ಯಾವ ಥರ ಬಟ್ಟೆ ತೊಡಬೇಕು, ಕೂದಲು ಯಾವ ಥರ ಇರಬೇಕು ಎಂದು ನಾವೇ ಯೋಚಿಸಲು ಶುರು ಮಾಡಿರಬಹುದು.

ಯಶ್, ದರ್ಶನ್‌, ವಿಜಯ್ ಎಲ್ಲಾ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.

ಅಥವಾ ಗಂಡುಮಕ್ಕಳಿಗೆ ರಚಿತಾ ರಾಮ್‌, ತಮನ್ನಾ, ದೀಪಿಕಾ ಪಡುಕೋಣೆ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು.

ಬೌಧ್ಧಿಕವಾಗಿ ಕೆಲವೊಂದು ವಿಷಯಗಳು ಅರ್ಥ ಆಗಲು ಶುರು ಆಗಬಹುದು.

ಮೂವಿ ಕಥೆ ಮೊದಲು ಅರ್ಥ ಆಗ್ತಾ ಇರಲಿಲ್ಲ, ಈಗ ಅರ್ಥ ಆಗುತ್ತೆ. ಪರಿಸರ, ಮಾಲಿನ್ಯದ ಬಗ್ಗೆ ಅರ್ಥ ಆಗುತ್ತದೆ.

ಹೀಗೇ ಹಲವಾರು ಬದಲಾವಣೆಗಳು ನಮ್ಮಲ್ಲಿ ಆಗಬಹುದು.

ಇವುಗಳನ್ನೆಲ್ಲ ಒಟ್ಟು ಸೇರಿಸಿ ನಾವು ಅದನ್ನ ಟೀನೇಜ್‌ ಅಂತ ಕರೆಯಬಹುದೆ? ಎಂದು ಕೇಳುವುದು.

ಹೌದು ಎಂದು ಕಿಶೋರಿಯರು ಹೇಳಬಹುದು.

ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ.                        (೨೫ ನಿಮಿಷ)

ಬೇಕಾಗಿರುವ ಸಂಪನ್ಮೂಲಗಳು

• ಕಂಪ್ಯೂಟರ್‌

• ಪ್ರೊಜೆಕ್ಟರ್‌

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩

ಒಟ್ಟು ಸಮಯ

೫೦ ನಿಮಿಷಗಳು

ಇನ್‌ಪುಟ್‌ಗಳು

• ಹದಿಹರೆಯದ ವ್ಯಾಖ್ಯಾನದ ಪ್ರಸ್ತುತಿ

ಔಟ್‌ಪುಟ್‌ಗಳು