ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
b
+
== ಸಾರಾಂಶ ==
 +
ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಚಲನಚಿತ್ರದ ತುಣುಕುಗಳನ್ನು ನೋಡಿ ಅದನ್ನು ವಿಶ್ಲೇಷಣೆ ಮಾಡುವ ಮೂಲಕ ಪುರುಷ ಪ್ರಧಾನತೆಯನ್ನು ಹೇಗೆ ಮೀರಬಹುದು ಎಂದು ಮಾತನಾಡುತ್ತಾರೆ. ತಮಾಷೆಯ ವಿಡಿಯೋಗಳನ್ನು ಉಪಯೋಗಿಸಿಕೊಂಡು ಈ ಮಾತುಕತೆಯನ್ನು ನಡೆಸುವುದರಿಂದ ಕಿಶೋರಿಯರನ್ನು ಪರಿಣಾಮಕಾರಿಯಾಗಿ ತಲುಪಲು ಸಹಾಯವಾಗುತ್ತದೆ.
 +
 
 +
ಮುಖ್ಯ ಫೆಸಿಲಿಟೇಟರ್‌: ಅನುಷಾ
 +
 
 +
ಕೊ-ಫೆಸಿಲಿಟೇಟರ್‌ಗಳು: ಶ್ರೇಯಸ್
 +
 
 +
== ಊಹೆಗಳು ==
 +
1. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
 +
 
 +
2. ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
 +
 
 +
3. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
 +
 
 +
4. ಹಿಂದಿನ ತರಗತಿಯ ಶಿಕ್ಷಕರು ಇವರನ್ನು ಬೈಯಬಹುದು, ಇದರಿಂದ ಕಿಶೋರಿಯರು ನಿರುತ್ಸಾಹರಾಗಿರಬಹುದು.
 +
 
 +
5. ಪುರುಷ ಪ್ರಧಾನತೆ ಅಂದರೆ ಏನು ಎಂದು ಗೊತ್ತಾಗಿದೆ.
 +
 
 +
6. Venn Diagram ಚಟುವಟಿಕೆಯ ಮೂಲಕ ಕಿಶೋರಿಯರು ಅವರ ಮೇಲೆ ಯಾರು ಯಾರಿಗೆ ಎಷ್ಟು ಅಧಿಕಾರ ಇದೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ.
 +
 
 +
7.  ಕನ್ನಡ ಬಿಟ್ಟು ಬೇರೆ ಭಾಷೆಯ ಆಡಿಯೋ/ವಿಡಿಯೋ ತೋರಿಸಿದರೆ ಕೆಲವು ಕಿಶೋರಿಯರಿಗೆ ಅರ್ಥವಾಗುವುದಿಲ್ಲ. ಇದರಿಂದ ಅವರು ಮಾತುಕತೆಯಲ್ಲ ಭಾಗವಹಿಸಲು ಹಿಂಜರಿಯುತ್ತಿದಾರೆ.
 +
 
 +
8. ಕಿಶೋರಿಯರು ಓದಲು ಬರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ಅವರು  ಈ ಚಟುವಟಿಕೆಗಳಲ್ಲಿ ಭಾಗವಹಿಸುವದಿಲ್ಲ.
 +
 
 +
9. ಹಿಂದಿನ ವಾರ ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರಿರುವವರ ಬಗ್ಗೆ ಕೇಳಿದಾಗ ಒಬ್ಬ ಕಿಶೋರಿಯನ್ನು ಬಿಟ್ಟು ಬೇರೆ ಯಾರೂ ಮಾತನಾಡಿಲ್ಲ.
 +
 
 +
10. ಹಿಂದಿನ ತರಗತಿಯ ಶಿಕ್ಷಕರು ಜಾಸ್ತಿ ಸಮಯ ತೆಗೆದುಕೊಳ್ಳುತ್ತಾರೆ.
 +
 
 +
11. ನಾವು 'ಹದಿಹರೆಯದ ವ್ಯಾಖ್ಯಾನ' ಮಾಡ್ಯೂಲ್‌ ಸಮಯದಲ್ಲಿ ಮಾಡಿರುವ ಪಾತ್ರಾಭಿನಯಗಳು ಕಿಶೋರಿಯರಿಗೆ ನೆನಪಿರಬಹುದು.
 +
 
 +
== ಉದ್ದೇಶ ==
 +
• ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರುವುದು ಹೇಗೆ ಎನ್ನುವ ಚರ್ಚೆಯನ್ನು ಪ್ರಾರಂಭಿಸುವುದು.
 +
 
 +
== ಪ್ರಕ್ರಿಯೆ ==
 +
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳ ಬಗ್ಗೆ ಮಾತನಾಡುವುದು.  
 +
 
 +
ಹಿಂದಿನ ವಾರಗಳಲ್ಲಿ ಚರ್ಚಿಸಿರುವ ವಿಷಯಗಳ ಬಗ್ಗೆ ನೆನಪಿಸುವುದು. '''೧೦ ನಿಮಿಷ'''
 +
 
 +
ಇದಾದ ನಂತರ ತೆಲುಗು ಭಾಷೆಯ 'ಜಂಬ ಲಕಿಡಿ ಪಂಬ' ಎನ್ನುವ ಸಿನೆಮಾದ ತುಣುಕುಗಳನ್ನು ತೋರಿಸುವುದು. ಈ ಸಿನೆಮಾದಲ್ಲಿ ಮಹಿಳೆಯರ ಮತ್ತು ಪುರುಷರ 'Gender Role’ಗಳನ್ನು ಬದಲಾಯಿಸಿ ಕಥೆಯನ್ನು ಹೆಣೆಯಲಾಗಿದೆ.
 +
 
 +
ಪ್ರತಿ ತುಣುಕುಗಳನ್ನು ತೋರಿಸಿದ ನಂತರ ಅದರಲ್ಲಿ ಏನಿತ್ತು, ಪುರುಷರು ಏನು ಮಾಡಿತ್ತದ್ದರು, ಮಹಿಳೆಯರು ಏನು ಮಾಡುತ್ತಿದ್ದಾರೆ ಎಂದು ಕಿಶೋರಿಯರನ್ನು ಕೇಳುವುದು. ಅವರು ಹೇಳುವುದನ್ನು ಫೆಸಿಲಿಟೇಟರ್‌ ಚಾರ್ಟಿನ ಮೇಲೆ ಬರೆಯುತ್ತಾರೆ.
 +
 
 +
ಎಲ್ಲ ತುಣುಕುಗಳನ್ನೂ ತೋರಿಸಿದ ನಂತರ ಈ ವಿಡಿಯೋಗಳಿಗೂ ಅವರು ಇರುವ ಸಮಾಜಕ್ಕೂ ಇರುವ ಸಾಮ್ಯತೆ/ವ್ಯತ್ಯಾಸಗಳು ಏನು ಎಂದು ಚರ್ಚಿಸುವುದು.
 +
 
 +
ಈ ಕೆಳಗಿನ ಪ್ರಶ್ನೆಗಳ ಮೂಲಕ ಮಾತುಕತಯನ್ನು ಮುಂದುವರೆಸಬಹುದು.
 +
 
 +
• ಪುರುಷ ಪ್ರಧಾನ ಸಮಾಜದಲ್ಲಿ ಗಂಡುಮಕ್ಕಳ ಸ್ಥಾನ ಎಲ್ಲಿತ್ತು? ಇದರಲ್ಲಿ ಎಲ್ಲಿದೆ?
 +
 
 +
• ಅಧಿಕಾರ ಯಾರ ಕೈಯಲ್ಲಿದೆ?
 +
 
 +
• ಇವುಗಳನ್ನು ಒಪ್ಕೋತೀರ?
 +
 
 +
ನೀವು ಹೇಳಿರೋದು ಹಾಗು ಈ ಸಿನೆಮಾದ ತುಣುಕುಗಳನ್ನು ನೋಡಿದರೆ, ಇದೆಲ್ಲ ಬರಿ ತಮಾಷೆಯ ಥರಹ ನೋಡಬಹಿದೇ ಹೊರತು ನಿಜ ಜೀವನದಲ್ಲಿ ಈ ಥರ ಏನು ಆಗಲ್ಲ. ಆದ್ದರಿಂದ ಪುರುಷ ಪ್ರಧಾನತೆಯ ಪ್ರಭಾವವನ್ನು ಅರ್ಥ ಮಾಡಿಕೊಳ್ಳುವುದು ತುಂಬ ಅವಶ್ಯ. ಅದನ್ನ ಅರ್ಥ ಮಾಡಿಕೊಂಡರೆ ಪುರುಷ ಪ್ರಧಾನತೆಯನ್ನು ಮೀರಬಹುದು. ಕಿಶೋರಿಯರು ಹೇಳಿದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಮಾತುಕತೆಯನ್ನು ಮುಂದುವರೆಸುವುದು.
 +
 
 +
ಇದಾದ ನಂತರ ಪುರುಷ ಪ್ರಧಾನತೆಯನ್ನು ಮೀರಿರುವವರು ಯಾರಾದರೂ ಗೊತ್ತ ಎಂದು ಕಿಶೋರಿಯರನ್ನು ಕೇಳುವುದು.
 +
 
 +
ಕಿಶೋರಿಯರು ಅವರ ಅನುಭವಗಳನ್ನು ಹಂಚಿಕೊಂಡ ನಂತರ ಪುರುಷ ಪ್ರಧಾನತೆಯನ್ನು ಇನ್ನೂ ಬೇರೆ ಬೇರೆ ಬೇರೆ ರೀತಿಯಲ್ಲಿ ಮೀರುವುದು ಹೇಗೆ ಎಂದು ಮುಂದಿನ ವಾರಗಳಲ್ಲಿ ತಿಳಿದುಕೊಳ್ಳೋಣ ಎಂದು ಹೇಳಿ ನಮ್ಮ ಮಾತುಕತೆಯನ್ನು ಮುಗಿಸುವುದು. '''೫೦ ನಿಮಿಷ'''
 +
 
 +
== ಬೇಕಾದ ಸಂಪನ್ಮೂಲಗಳು ==
 +
* ಕಂಪ್ಯೂಟರ್‌
 +
* ಪ್ರೊಜೆಕ್ಟರ್‌
 +
* ಸ್ಪೀಕರ್‌
 +
 
 +
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
 +
ಒಬ್ಬ ಮುಖ್ಯ ಫೆಸಿಲಿಟೇಟರ್‌, ಒಬ್ಬರು ಸಹಾಯಕ ಫೆಸಿಲಿಟೇಟರ್‌
 +
 
 +
== ಒಟ್ಟು ಸಮಯ ==
 +
೬೦ ನಿಮಿಷಗಳು    
 +
 
 +
== ಇನ್‌ಪುಟ್‌ಗಳು ==
 +
• ಸಿನೆಮಾದ ತುಣುಕುಗಳು
 +
 
 +
== ಔಟ್‌ಪುಟ್‌ಗಳು ==
 +
• ಕಿಶೋರಿಯರು ಹೇಳುವ ಅಂಶಗಳು
೪೦೭

edits