"ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '==ಮಹಾಬಲೇಶ್ವರ ಭಾಗ್ವತ್,GHS ಕೆದೂರ್ , ಉಡುಪಿ==' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
 
==ಮಹಾಬಲೇಶ್ವರ ಭಾಗ್ವತ್,GHS ಕೆದೂರ್ , ಉಡುಪಿ==
 
==ಮಹಾಬಲೇಶ್ವರ ಭಾಗ್ವತ್,GHS ಕೆದೂರ್ , ಉಡುಪಿ==
===ತರಗತಿ ಚಟುವಟಿಕೆಯ===
 
ತರಗತಿ ಚಟುವಟಿಕೆಯನ್ನು ವೀಕ್ಷಿಸಲು[http://bhagwatmc2.blogspot.in/ ಈ ಲಿಂಕನ್ನು ಕ್ಲಿಕ್ಕಿಸಿ]
 
 
===ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ===
 
{{
 
#widget:Picasa
 
|user=itfc.education@gmail.com
 
|album=5987158368673255297
 
|width=300
 
|height=200
 
|captions=1
 
|autoplay=1
 
|interval=5
 
}}
 
 
ಪ್ರೀತಿಯ ಗುರು ಸರ್,ರಂಜನಿ ಮೇಡಂ, ನನ್ನ ಪ್ರೀತಿಯ ಮುಖ್ಯ ಶಿಕ್ಷಕರೆ,ವಿಷಯ ವೇದಿಕೆಯ ಮೂಲಕ ಪರಿಚಿತರಾಗಿರುವ  ಬಾಂಧ್ಯವ್ಯದ ನಂಟನ್ನು ಬೆಸೆದಿರುವ ನನ್ನ ಪ್ರೀತಿಯ  ಸಮಾಜ ವಿಜ್ಞಾನ, ಗಣಿತ -ವಿಜ್ಞಾನ , ಆಂಗ್ಲಭಾಷಾ ವಿಷಯ ವೇದಿಕೆಯ ಎಲ್ಲ ಬಂಧುಗಳೇ,  It for change ನ ಎಲ್ಲ ಮಿತ್ರರೇ, ತಮಗೆಲ್ಲರಿಗೂ  ಹೊಸವರ್ಷದ ಹಾರ್ದಿಕ ಶುಭಾಷಯಗಳು.ಬಹಳ ತಡವಾಗಿ ಶುಭಾಷಯಗಳನ್ನು ತಮಗೆಲ್ಲರಿಗೂ ಕೋರುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು ತಮ್ಮೆಲ್ಲರ ಜೊತೆ ಒಂದು ಮಹತ್ವದ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದೇನೆ.
 
ಆತ್ಮೀಯರೆ , ತಮಗೆಲ್ಲ ತಿಳಿದಿರಬಹುದು. ನಮ್ಮ    ರಾಷ್ಟ್ರದ ಶೈಕ್ಷಣಿಕ ದೇಗುಲ ಎಂದರೆ NCERT .ಈ ದೇಗುಲದೊಳಗೆ ಪ್ರವೇಶಿಸುವ &ಅಲ್ಲಿ ಎರಡು ದಿನ ಮಹತ್ವದ
 
ಚಟುವಟಿಕೆಯಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಒದಗಿ ಬಂದಿತ್ತು. ಕಳೆದ ವರ್ಷದ ಅಂದರೆ ಕಳೆದ ಡಿಸೆಂಬರ್ 30&31ರ ಎರಡು ದಿನಗಳು ನನ್ನ ಜೀವನದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ದಿನಗಳು.ನಾನು ಕನಸಿನಲ್ಲಿಯೂ ಎಣಿಸಿರದ ,ಬಹುಶಃ ಊಹಿಸಲೂ ಸಾಧ್ಯವಿಲ್ಲದ ಮಹತ್ವದ ದಿನಗಳು.ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ , ಆ ಕುರಿತಾಗಿ  ವಿಶೇಷ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು  ICT National Award ಸಲುವಾಗಿ  Jury meeting ನ್ನು  CIET (Central Institute for Educationla Technology ) &NCERTಇವರು ನಡೆಸುತ್ತಿದ್ದು ಇದರ ಅಡಿಯಲ್ಲಿ ಈ ಬಾರಿ ದೇಶದ ವಿವಿಧ  ರಾಜ್ಯಗಳಿಂದ 51 ಶಿಕ್ಷಕ ಪ್ರತಿನಿಧಿಗಳು ಬಂದಿದ್ದು ಅವರಲ್ಲಿ ಕರ್ನಾಟಕದಿಂದ ನಾವು ಮೂವರು ಭಾಗವಹಿಸಿದ್ದೆವು. (ಜಮಖಂಡಿ ತಾಲೂಕಿನ  ಶ್ರಿ ರಮೇಶ ವಡ್ಡರ, ಬೆಂಗಳೂರಿನಿಂದ ಶ್ರಿ ರಾಜಶೇಖರ ಪಾಟೀಲ್& ನಾನು ) .ದೇಶದ ಇತರ ರಾಜ್ಯ&ಕೇಂದ್ರಾಡಳಿತ ಪ್ರದೇಶಗಳಿಂದ ಮುಖ್ಯವಾಗಿ ಪಂಜಾಬ್, ರಾಜಸ್ಥಾನ, ಉತ್ತರಾಂಚಲ,ಪಶ್ಚಿಮ ಬಂಗಾಲ ತಮಿಳುನಾಡು,ಗುಜರಾತ್,ಮಹಾರಾಷ್ಟ್ರ, ದೆಹಲಿ ,ಉತ್ತರ ಪ್ರದೇಶ, ದಾದ್ರಾ ನಗರ್ ಹವೇಲಿ, ಹಾಗೂ ದುಬೈನಿಂದ ಒಬ್ಬರು ಸೇರಿದಂತೆ ಒಟ್ಟಾರೆ 51 ಶಿಕ್ಷಕರು(ಕೇಂದ್ರಿಯ ವಿದ್ಯಾಲಯ, ನವೋದಯ ವಿದ್ಯಾಲಯ, CBSE,AEE  School,CISCE,Ministry of Defence &State Government School including primary&High School)ಭಾಗವಹಿಸಿದ್ದೆವು.ಈ jury meeting  ಭಾಗವಹಿಸಿದ ಶಿಕ್ಷಕರು ತಾವು  ತರಗತಿಗಳಲ್ಲಿ & ಶಾಲೆಗಳಲ್ಲಿ ICT, ಮುಖ್ಯವಾಗಿ ಗಣಕ ಯಂತ್ರ ಮೂಲಕ ಕೈಗೊಂಡಿರುವ  ಬೋಧನೆಗಳು , ಅವುಗಳ ಪರಿಣಾಮಗಳು ಇದರ ಬಗ್ಗೆ Presentation ಮಾಡಬೇಕು. ಎರಡು ದಿನಗಳ ಕಾಲ NCERT Director, CIET Director ಶ್ರೀ ರಾಜಾರಾಮ್ ಶರ್ಮಾ ಜೊತೆಗೆ, NIE, RIE director ಸಹ  jury ಗಳಾಗಿ
 
ಭಾಗವಹಿಸಿದ್ದರು.& ಕೋಆರ್ಡಿನೇಟರ್ ಅಮರೇಂದ್ರ ಬೆಹೆರಾ ಇವರ ಉಪಸ್ಥಿತರಿದ್ದರು.ಇವರೆಲ್ಲರ ಸಮ್ಮುಖದಲ್ಲಿ presentation  ನೀಡುವ ಅವಕಾಶ ನನಗೊದಗಿದ ಮಹಾಭಾಗ್ಯವೇ ಸರಿ. ಎರಡು ದಿನಗಳಕಾಲ  ನಡೆದ  ಈ ಕಾರ್ಯಕ್ರಮದಲ್ಲಿ ಏಳು ನಿಮಿಷಗಳ  ಅವಧಿಯಲ್ಲಿ ನಾವು ICT ಯಲ್ಲಿನ ನಮ್ಮ ಕಾರ್ಯದ ಬಗ್ಗೆ ಹೇಳಬೇಕು. ಈ ಅವಧಿಯಲ್ಲಿ Jury ಗಳು ಕೇಳುವ ಪ್ರಶ್ನೆಗಳಿಗೆ , ಭಾಗವಹಿಸಿದ ಇತರ ಶಿಕ್ಷಕ ಮಿತ್ರರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಇದೊಂದು ಅಮೋಘ ಅನುಭವ. ಸಾಮಾನ್ಯವಾಗಿ  ದೆಹಲಿಯಲ್ಲಿ ಪ್ರಚಲಿತ ಬಾಷೆಹಿಂದಿ& ಆಂಗ್ಲ ಭಾಷೆ. ಇದರಲ್ಲಿ ನಮ್ಮ ಪ್ರಸ್ತುತಿ ಇದ್ದರೆ ಉತ್ತಮ. ನಾನು ಆಂಗ್ಲ &ಸ್ವಲ್ಪ ಹಿಂದಿ & ಜೊತೆಗೆ ಕನ್ನಡ ಸಹ ಬಳಸಿ ನನ್ನ Presentation ನೀಡಿದ್ದೇನೆ.ಅಂದರೆ ಅಲ್ಲಿನ jury  ಯಾಗಿ ಭಾಗವಹಿಸುವ ಎಲ್ಲರಿಗೂ ಕನ್ನಡ ತಿಳಿಯದು. ಹೆಚ್ಚಾಗಿಇಂಗ್ಲೀಷ್ &ಹಿಂದಿ ಬಳಸುತ್ತಾರೆ. ಜೊತೆಗೆ ಹೆಚ್ಚಾಗಿ ಭಾಗವಹಿಸಿದ ಇತರ ಶಿಕ್ಷಕರ ಮಿತ್ರರೂ ಸಹ ವ್ಯವಹರಿಸುವುದು ಹಿಂದಿ&ಇಂಗ್ಲೀಷ್ ನಲ್ಲಿ. ಹಾಗಾಗಿ ನಾವು ಹೇಳಿದ ವಿಚಾರ ಅವರೆಲ್ಲರಿಗೂ ತಿಳಿಯ ಬೇಕೆಂದರೆ ಹಿಂದಿ&ಇಂಗ್ಲೀಷ್  ಅನಿವಾರ್ಯ.ಈ ಬಾರಿ ಅಲ್ಲಿ ಮೈಕೊರೆವ ಚಳಿ.2ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಕಳೆದ ಬಾರಿ ವಿಷಯವೇದಿಕೆಯ ಮಿತ್ರರಾಗಿರುವ  ಶ್ರೀಮತಿ ರಾಧಾ ನಾರ್ವೆ &  ಶ್ರೀ ರಾಜೇಶ್ ಇವರು ಭಾಗವಹಿಸಿ ಪ್ರಶಸ್ತಿ ಗಳಿಸಿದ್ದು ತಮಗೆ ತಿಳಿದಿದೆ.
 
ಆತ್ಮೀಯರೇ, Jury Meetingನಲ್ಲಿ ಭಾಗವಹಿಸುವ ಮೊದಲು ನನಗೆ  ICT ಯಲ್ಲಿ ನಾನು ಏನೋ ವಿಶೇಷವಾದದ್ದನ್ನು ನಡೆಸುತ್ತಿದ್ದೇನೆ ಎನಿಸುತ್ತಿತ್ತು. ಆದರೆ ನಿಜ
 
ಹೇಳಬೇಕೆಂದರೆ ಮಿತ್ರರೆ ನಾನು  ಕಲಿತದ್ದು& ಮಾಡುತ್ತಿರುವುದು  ಕೇವಲ ಸಾಸಿವೆಯ ಕಾಳಿನಷ್ಟು  ಮಾತ್ರ.ರಾಜಸ್ಥಾನದಂತಹ ಶೈಕ್ಷಣಿಕವಾಗಿ ಪ್ರಗತಿಯ ಹಾದಿಯಲ್ಲಿರುವ ರಾಜ್ಯದ
 
ಶಿಕ್ಷಕರು , ಮಹಾರಾಷ್ಟ್ರ ಬಂಧುಗಳು, ಪಂಜಾಬ್ ನ ಸ್ನೇಹಿತರು , ಪಶ್ಚಿಮ ಬಂಗಾಲ ಜೊತೆಗೆ  ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯದ ಶಿಕ್ಷಕರು ನಡೆಸುತ್ತಿರುವ
 
ICTಪ್ರಯೋಗಗಳು ನಿಜಕ್ಕೂ ಅದ್ಭುತ. ಆಶ್ಚರ್ಯ ತರಿಸುತ್ತವೆ,. ಉತ್ತರಾಖಂಡದಿಂದ ಬಂದಿದ್ದ ಶಿಕ್ಷಕರೊಬ್ಬರು ತಮ್ಮ ದೈಹಿಕ ನ್ಯೂನತೆಯ ನಡುವೆ ನಡೆಸುತ್ತಿರುವ ಪ್ರಯೋಗಗಳು
 
ನಿಜಕ್ಕೂ ನಾನೆಷ್ಟು ಚಿಕ್ಕವನು  ಎಂಬುದನ್ನು ಅರಿವುಮೂಡಿಸಿದೆ. ಇನ್ನು ದೆಹಲಿಯ ಸಹೋದರರ ಪ್ರಯೋಗಗಳು ತರಗತಿಗೊಂದು ವೆಬ್ ಗಳು, ಶಿಕ್ಷಕರಿಗೊಂದು ವೆಬ್ ಸೈಟ್ ಗಳು
 
ನಿಜಕ್ಕೂ ಶಿಕ್ಷಕರು ಇದೆಲ್ಲವನ್ನೂ ಮಾಡಲು ಸಾಧ್ಯವೇ ಎನಿಸುವಷ್ಟು ಆಶ್ಚರ್ಯ ತರಿಸುತ್ತವೆ. ಕೆಲವರಿಗೆ ಹೆಚ್ಚಿನ ಅವಕಾಶಗಳು ಇರಬಹುದು. ನಮಗಿರುವ ಅವಕಾಶಗಳಲ್ಲಿ
 
ನಾವು ಸಾಧ್ಯವಾದಷ್ಟು ನಡೆಸುತ್ತಿರಬಹುದು. ಆದರೂ ಹೆಚ್ಚಿನದೇನನ್ನು ಮಾಡಬಹುದು ಎನ್ನುವುದರ ಬಗ್ಗೆ ನನಗೆ ಮಾಹಿತಿ ದೊರಕಿತು. ನಾವು ಕೆಲವೊಮ್ಮೆ ನಮ್ಮ  ವೈಫಲ್ಯಕ್ಕೆ
 
ನಮ್ಮ ಇಲಾಖೆಯನ್ನು , ನಮ್ಮ ಮೇಲಧಿಕಾರಿಗಳನ್ನು ದೂಷಿಸುತ್ತೇವೆ. ಅಥವಾ ಇನ್ನಾರನ್ನೋ ಹೊಣೆಗಾರರನ್ನಾಗಿ ಮಾಡುತ್ತೇವೆ. ಆದರೆ  ಅಲ್ಲಿ ಬಂದಿದ್ದ ಹೆಚ್ಚಿನ ಶಿಕ್ಷಕರು
 
(ದೆಹಲಿ&ದುಬೈ ,Navodaya, CBSE, AEE ಇವರನ್ನು ಹೊರತು ಪಡಿಸಿದರೆ ) ಬಹುಶಃ ನಮಗಿಂತ  ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ ಎನಿಸಿತು. ರಾಜಸ್ಥಾನದ ಬಿರು ಬಿಸಿಲು,
 
ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯದಲ್ಲಿ ಶಾಲೆಗಳಿಗೆ ಹೋಗಬೇಕಾದರೆ ಇರುವ ಕಷ್ಟದ ಅರಿವಾಯಿತು. ಅಲ್ಲಿನ ಶಾಲೆಗಳು ಬಹುಶಃ ನಮ್ಮ ಕರ್ನಾಟಕದ ಜೊಯಿಡಾ, ಸಕಲೇಶಪುರ, ಕೊಡಗು ಚಿಕ್ಕಮಗಳೂರಿನ, ಚಾಮರಾಜನಗರದ ಕೆಲವು ಶಾಲೆಗಳಂತೆ . ಸೌಲಭ್ಯಗಳು ವಂಚಿತ ಶಾಲೆಗಳೂ ಸಹ ಇವೆ. ಆದರೂ ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮದೇ ಆದ ವೆಬ್ ಸೈಟ್ ನಡೆಸುತ್ತಿರುವ,ಶಿಕ್ಷಕರರು ತಮ್ಮದೇ ಆದ (ಇಲಾಖೆ ತರಬೇತಿ ಇಲ್ಲದೇ)  mail group ನಡೆಸುತ್ತಿರುವುದನ್ನು ನೋಡಿದಾಗ ನಾವು ನಮ್ಮಲ್ಲಿ ಪ್ರತಿವರ್ಷ ಇಷ್ಟೆಲ್ಲ ತರಬೇತಿ ಪಡೆದರೂ ಸಹ( ತರಬೇತಿ ಪಡೆದವರೂ ಸಹ) ICT ಯ ಬಗ್ಗೆ ನಾವು ತೋರುತ್ತಿರುವ ಅನಾದರಗಳು,ತರಗತಿಯಲ್ಲಿ ಗಣಕ ಯಂತ್ರ ಬಳಕೆಯಲ್ಲಿ ನಾವಿನ್ನೂ  ಹಿಂದಿರುವುದು ಯೋಚಿಸುವಂತೆ ಮಾಡಿದೆ. ವಿದ್ಯಾರ್ಥಿಗಳಿಗೆ ಕೆಲವು ಶಿಕ್ಷಕರು ಚಿಕ್ಕ ಚಿಕ್ಕ ವಿಡಿಯೋಗಳ ಮೂಲಕವೇ ಪಾಠ ನಡೆಸುತ್ತಿದ್ದಾರೆ. ಪಂಜಾಬನಿಂದ ಬಂದಿದ್ದ ಶಿಕ್ಷಕರೊಬ್ಬರು (ಪ್ರಾಥಮಿಕ)ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಹಾಡಿನ ಮೂಲಕವೇ(ವಿಡಿಯೋ) ಕಲಿಸುತ್ತಿದ್ದರೆ ,ಮಹಾರಾಷ್ಟ್ರ ಮಿತ್ರರೊಬ್ಬರು ೨೦೦೦ಕ್ಕೂ ಹೆಚ್ಚು  PPT  ರಚಿಸಿ
 
ಬೋಧಿಸುತ್ತಿದ್ದಾರೆ.ರಾಜಸ್ಥಾನದ&ಪಂಜಾಬಿನ  ಶಿಕ್ಷಕರು  80ಕ್ಕೂ ಹೆಚ್ಚು ಶಾಲೆಗಳ ಗುಂಪು ರಚಿಸಿಕೊಂಡು ಗಣಿತ ಶಿಕ್ಷಕರಿಗೆ ಅವರೇ ಸ್ವತಃ ತರಬೇತಿ ನೀಡುತ್ತಿದ್ದಾರೆ.ಜೊತೆಗೆ ನಮ್ಮ ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದಾರೆ.Edubuntu ಅಲ್ಲಿಸಹ ಜನಪ್ರಿಯವಾಗುತ್ತಿದೆ. ಇದೆಲ್ಲ ನೋಡಿದ ಮೇಲೆ ನಾನೇನಾದರೂ ಹಾದಿತಪ್ಪಿ ಇಲ್ಲಿಗೆ ಬಂದೆನಾ ಎನಿಸುವಷ್ಟು
 
ಮುಜುಗರವಾಯಿತು. ನಿಜಕ್ಕೂ ಸ್ನೇಹಿತರೇ,  ICT ಬಳಕೆಯಲ್ಲಿ ನಾನು  ತುಂಬಾಹಿಂದಿದ್ದೇನೆ. ನಾನು ಕಲಿತರೆ ಸಾಲದು . ನನ್ನ ವಿದ್ಯಾರ್ಥಿಗಳು ಸ್ವತಂತ್ರವಾಗಿ  ICT
 
ಬಳಸಬೇಕು ಎನ್ನುವುದರ ಜ್ಞಾನ ಲಭಿಸಿದೆ.
 
ಸ್ನೇಹಿತರೆ , 2014ರ ICT national  Award ಗಾಗಿ ಅಧಿಸೂಚನೆ ಹೊರಬಿದ್ದಿದೆ.ಪ್ರಕಟಣೆಯನ್ನು ಲಗತ್ತಿಸಿದ್ದೇನೆ. ಸೂಚನೆಗನುಸಾರ ನಮೂನೆಯನ್ನು ಭರ್ತಿಮಾಡಿ
 
ಮೇಲಾಧಿಕಾರಿಗಳ ಮೂಲಕ DSERTಗೆ ಕಳುಹಿಸಿರಿ. ಕರ್ನಾಟಕದಿಂದ ಶಿಕ್ಷಕರನ್ನು ಆಯ್ಕೆಮಾಡಿ ಕಳಿಸುವ ಜವಾಬ್ಧಾರಿ DSERT ಇವರದು . ಇನ್ನಷ್ಟು ಶಿಕ್ಷಕರು ನಮ್ಮ  ರಾಜ್ಯದಿಂದ ಈ ಸ್ಪರ್ಧೆಗೆ ಭಾಗವಹಿಸುವಂಥಾಗಲಿ. ನಮ್ಮ ರಾಜ್ಯಕ್ಕೆ 03 ಪ್ರಶಸ್ತಿಗಳು ಮೀಸಲಿವೆ. ತಮಗೂ ಸಹ ಲಭಿಸಲಿ. ICT ಜ್ಞಾನ ಹೆಚ್ಚಲಿ. ತರಗತಿ ಕೋಣೆಯೊಳಗೆ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸೋಣ.
 
ನನ್ನೆಲ್ಲ  ಪ್ರೀತಿಯ ಮುಖ್ಯಶಿಕ್ಷಕರೇ,  ತಾವೂ ಸಹ ಇದರಲ್ಲಿ ಭಾಗವಹಿಸಬಹುದು. ತಮ್ಮಶಾಲೆಯ ಇತರ ಶಿಕ್ಷಕ ಮಿತ್ರರೂ ಸಹ ಭಾಗವಹಿಸುವಂತೆ ಪ್ರೇರೇಪಿಸಿರಿ  ಎಂದು
 
ವಿನಂತಿಸುತ್ತಿದ್ದೇನೆ. ನನ್ನ ವೃತ್ತಿ ಬಾಂಧವರೇ ಸಿದ್ಧತೆಗಳನ್ನು ಆರಂಭಿಸಿರಿ.ಅನುಭವಕ್ಕಾಗಿ ಭಾಗವಹಿಸಿರಿ , ಪ್ರಶಸ್ತಿಗೆ ಪಾತ್ರರಾಗಿರಿ. ಸರಳ ವಿಧಾನದಲ್ಲಿಆರಂಭಿಸಿ. ಗೆಲವು ನಿಮ್ಮದೇ.
 
ಕೆಲವು ವರ್ಷಗಳ ಹಿಂದೆ ಗಣಕಯಂತ್ರದ ಸಾಮಾನ್ಯ ಜ್ಞಾನವೂ ಇಲ್ಲದಿದ್ದ ನನಗೆರಾಷ್ಟ್ರದ ಶೈಕ್ಷಣಿಕ ದೇಗುಲದ ದರ್ಶನ ಸಾಧ್ಯವಾಗಿದ್ದು  ನನ್ನ ಈ ವಿಷಯವೇದಿಕೆಯ
 
ಮೂಲಕ.ನನಗೆ  STF ಮಾರ್ಗದರ್ಶನ ಮಾಡುತ್ತಿದೆ.  ತಮ್ಮೆಲ್ಲರ ಒಡನಾಟದಲ್ಲಿ, ಕೊಯರ್
 
ಮೂಲಕವಾಗಿ, NCERT  ದರ್ಶನ ಭಾಗ್ಯ ಲಭಿಸಿದೆ. ನನಗೆ ಈ ಹಂತದಲ್ಲಿ ಪ್ರತಿಕ್ಷಣವೂಮಾರ್ಗದರ್ಶನ ನೀಡಿರುವ ಪ್ರೀತಿಯ ಗುರು ಸರ್ ಇವರಿಗೆ, ಪ್ರೀತಿಯ ರಂಜನಿ ಮೇಡಂ ಇವರಿಗೆವಿಷಯವೇದಿಕೆ ಮೂಲಕ ಪರಿಚಿತವಾಗಿ ಮಾರ್ಗದರ್ಶನ ನೀಡಿದ ಶ್ರೀಮತಿ ರಾಧಾ  ನಾರ್ವೆಇವರಿಗೆ , IT for Changeನ ಎಲ್ಲ ಬಳಗದವರಿಗೆ ನನ್ನ ಧನ್ಯವಾದಗಳು.ಉಡುಪಿ ವಿಷಯವೇದಿಕೆ ಮಿತ್ರರಿಗೆ, ಕೃತಜ್ಞತೆಗಳು.ಡಯಟ್ ಉಡುಪಿ ಇಲ್ಲಿನ ಎಲ್ಲಉಪನ್ಯಾಸಕರಿಗೆ,ಪ್ರಾಂಶುಪಾಲರಿಗೆ ಧನ್ಯವಾದಗಳು,ನನಗೆ ಅವಕಾಶ ಕಲ್ಪಿಸಿಕೊಟ್ಟ DSERTಯವರಿಗೆ ,  ಶ್ರೀ ಸುಧಾಕರ  AIF  ಇವರಿಗೂ ಸಹ ಧನ್ಯವಾದಗಳು. ತಮ್ಮೆಲ್ಲರ ಒಡನಾಟ,ಮಾರ್ಗದರ್ಶನ ಸದಾ ನನಗಿರಲಿ . ಮುಂದಿನ ದಿನಗಳಲ್ಲಿ ನನ್ನ ಪ್ರೀತಿಯ ವೇದಿಕೆಯಮಿತ್ರರಿಗೆ  ಹೆಚ್ಚೆಚ್ಚು ICT  award ಸಿಗಲಿ. ಕೊಯರ್ ಅಭಿವೃದ್ಧಿಯಾಗಲಿ,ವೇದಿಕೆಯಬೆಳವಣಿಗೆಯಾಗಲಿ , ನಮ್ಮ ವಿದ್ಯಾರ್ಥಿಗಳಿಗೆ ICTಯ ಹೆಚ್ಚಿನ ಪ್ರಯೋಜನ ಲಭಿಸಲಿ ಎಂದುಬಯಸುತ್ತಾ
 
Indeed it was wonderful learning platform  I did learnt a lot whenheard different approaches to deliver concepts through ICT. Collecteda lot of new ideas from  presentation.
 
 
ನಿಮ್ಮವನು.
 
 
ಭಾಗ್ವತ್
 
 
==ರವಿ ಆಹೇರಿ,(GHS ಕೊಣನಕೇರಿ,ಹಾವೇರಿ ಜಿಲ್ಲೆ ) ಬ್ಲಾಗ್ ನ ಸಂಪನ್ಮೂಲಗಳು ==
 
==ಬಿ.ಎಮ್.ತಿಪ್ಪೇಸ್ವಾಮಿ ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ ==
 

೧೪:೧೩, ೧೦ ಏಪ್ರಿಲ್ ೨೦೧೪ ನಂತೆ ಪರಿಷ್ಕರಣೆ

ಮಹಾಬಲೇಶ್ವರ ಭಾಗ್ವತ್,GHS ಕೆದೂರ್ , ಉಡುಪಿ