ವಾಯುಮಾಲಿನ್ಯ ಚಟುವಟಿಕೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೮:೩೮, ೨೯ ಆಗಸ್ಟ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಚಟುವಟಿಕೆ - ಚಟುವಟಿಕೆಯ ಹೆಸರು)
ಚಟುವಟಿಕೆ - ಚಟುವಟಿಕೆಯ ಹೆಸರು
ಚಾರ್ಟ್ ತಯಾರಿಕೆ
ಅಂದಾಜು ಸಮಯ
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಗ್ರಂಥಾಲಯ ,ಅಂತರ್ಜಾಲ ,ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು ,ಅಳತೆ ಪಟ್ಟಿ ,ವಾಯುಮಾಲಿನ್ಯಕ್ಕೆ ಸಂಬಂಧಪಟ್ಟ ಚಿತ್ರಗಳು ,ಮಾಸಿಕ /ಸಾಪ್ತಾಹಿಕ/ದೈನಿಕ ಪತ್ರಿಕೆಗಳು ,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಅಂದವಾದ ಚಾರ್ಟನ್ನು ವಾಯುಮಾಲಿನ್ಯದ ಬಗ್ಗೆ ತಯಾರಿಸಿ ಅದಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಸಂಗ್ರಹಿಸಿ
- ಚಾರ್ಟ್ ನ ವಿಷಯವು ವಾಯುಮಾಲಿನ್ಯದ ಆಕರಗಳು , ಮಾಲಿನ್ಯಕಾರಕಗಳು , ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಒಳಗೊಂಡಿರಬೇಕು .
- ಚಾರ್ಟ ಒಳಗೊಂಡಿರುವ ಅಂಶಗಳೇ ಮೌಲ್ಯಮಾಪನಕ್ಕೆ ಒಳಗೊಂಡಿರುತ್ತವೆ.
- ಚಾರ್ಟನ್ನು ಗುಂಪುಗಳಲ್ಲಿ ಕೊಡುವುದು .
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು .
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ
- ವಾಯವಿನಲ್ಲಿರುವ ಘಟಕಗಳು ಮತ್ತು ಘಟಕಗಳ ಪ್ರಮಾಣಗಳು ವಾತಾವರಣದಲ್ಲಿ ಸ್ಥಿರವಾಗಿವೆಯೇ ? ಘಟಕಗಳ ಪ್ರಮಾಣದಲ್ಲಿ ಬದಲಾವಣೆಯಾದಲ್ಲಿ ಅದಕ್ಕೆ ಕಾರಣಗಳನ್ನು ತಿಳಿಸಿ
- ವಾಯುವಿನ ಘಟಕಗಳು ಮತ್ತು ಅವುಗಳ ಪ್ರಮಾಣದಲ್ಲಿ ಬದಲಾವಣೆಯಾದಲ್ಲಿ ಪರಿಸರ ಮೇಲಾಗುವ ಪರಿಣಾಮಗಳೇನು ?
- ಪರಿಸರಕ್ಕೆ ಧಕ್ಕೆ ಉಂಟುಮಾಡುವಂಥ ಮಾನವನ ಚಟುವಟಿಕೆಗಳನ್ನು ನಿಯಂತ್ರಿಸುವ ವಿಧಾನಗಳೇನು ? ಚರ್ಚಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ವಾಯುಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
- ವಾಯುಮಾಲಿನ್ಯದ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
- ವಾಯುಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- ನಿಮ್ಮ ಊರಿನ 10 ವರ್ಷಗಳಲ್ಲಿ ವಾಹನಗಳ ಸಂಖ್ಯೆ ,ವಾಹನಗಳ ವಿಧಗಳು ಮತ್ತು ವಾಹನ ಇಂಜಿನ್ ಹೊರಸೂಸುವ ಪರೀಕ್ಷೆ ಮಾಡಿಸಿರುವ ಬಗ್ಗೆ ಹಿರಿಯರಿಂದ ಮಾಹಿತಿ ಸಂಗ್ರಹಿಸಿ
- ನಿಮ್ಮ ಮನೆಯಲ್ಲಿ ಬೀಡಿ ,ಸಿಗರೇಟ್ ಮತ್ತು ತಂಬಾಕು ಸೇವನೆ ಮಾಡುವವರ ಸಂಖ್ಯೆ ಹಾಗೂ ಅವರು ಎದುರಿಸು ಆರೋಗ್ಯ ಸಮಸ್ಯೆಗಳ ಬಗ್ಗೆ ಒಂದು ವರದಿ ತಯಾರಿಸಿ
ಪ್ರಶ್ನೆಗಳು
- ವಾಯುಮಾಲಿನ್ಯವೆಂದರೇನು ? ವಾಯುಮಾಲಿನ್ಯಕಾರಗಳನ್ನು ಹೆಸರಿಸಿ
- ವಾಯುಮಾಲಿನ್ಯದ ಆಕರಗಳು ಮತ್ತು ವಾಯುಮಾಲಿನ್ಯಕ್ಕೆ ಕಾರಣಗಳನ್ನು ಪಟ್ಟಿಮಾಡಿ
- ವಾಯುಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಣಕ್ರಮಗಳನ್ನು ತಿಳಿಸಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್