Test ಕನ್ನಡಿಗರ ತಾಯಿ
ಪರಿಕಲ್ಪನಾ ನಕ್ಷೆ
<mm>Flash</mm> ಪರಿವಿಡಿ
೨ ೩ ಲೇಖಕರ ಪರಿಚಯ ೪ ನೀಡಿರುವ ಗದ್ಯಭಾಗದ ಹಿನ್ನಲೆ ೫ ಪ್ರಸ್ತುತ ಗದ್ಯ ಪೀಠಿಕೆ ೬ ಪ್ರಸ್ತುತ ಮಾಡಬೇಕಾದ ಪಾಠದ ವಿವರ ೭ ಪಾಠದ ಬೆಳವಣಿಗೆ ೮ ವ್ಯಾಕರಣ/ಛಂದಸ್ಸು/ಅಲಂಕಾರ ೯ ಉಪಸಂಹಾರ ೧೦ ಮೌಲ್ಯಮಾಪನ
=ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ
ಕವಿ/ಲೇಖಕರ ಪರಿಚಯ
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
- ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಷಯ ವಿಶ್ವಕೋಶದಲ್ಲಿನ ಮಾಹಿತಿ
ಗದ್ಯ/ಪದ್ಯದ ಹಿನ್ನಲೆಯ
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
ಗದ್ಯ/ಪದ್ಯದ ಪೀಠಿಕೆ
ಮಾಡಬೇಕಾದ ಪಾಠದ ವಿವರ
ಹಿನ್ನಲೆ>ಪ್ರಸ್ತುತ>ನಂತರ