ಜಿ-ಮೇಲ್ ಕಲಿಯಿರಿ
ಪರಿಚಯ
ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್ನೆಟ್ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್ನಲ್ಲಿ ಹಲವಾರು ಡೊಮೈನ್ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ. ಜೀಮೇಲ್ ಎಂಬುದು ಗೂಗಲ್ ವೆಬ್ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ.
ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಜೀಮೇಲ್ ಸಹಕಾರಿಯಾಗುತ್ತದೆ.
ಆವೃತ್ತಿ
ಸಂರಚನೆ
ಇದು ಅಂತರ್ಜಾಲಾಧಾರಿತ ಸೇವೆಯಾಗಿದ್ದು, ಜೀಮೇಲ್ ಬಳಸಲು ಅಂತರ್ಜಾಲ ಸಂಪರ್ಕಹೊಂದಿರಬೇಕು.
ಲಕ್ಷಣಗಳ ಮೇಲ್ನೋಟ
ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್ ನ ಗಾತ್ರವನ್ನು ಸಹ ಹೆಚ್ಚಿಸಿದೆ. ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್ಗಳನ್ನು ಹುಡುಕಬಹುದಾಗಿದೆ.
ಇತರೇ ಸಮಾನ ಅನ್ವಯಕಗಳು
Yahoo.com, Rediffmail, Mail.com, Outlook.com, Inbox.com
ಅಭಿವೃದ್ದಿ ಮತ್ತು ಸಮುದಾಯ ಸಹಾಯ
ಗೂಗಲ್
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
ಹಂತ 1- ಯಾವುದೇ ವೆಬ್ ಬ್ರೌಸರ್ ತೆರೆಯಿರಿ ನಂತರ (ಪೈರ್ಫಾಕ್ಸ್ ಅಥವಾ ಕ್ರೋಮ್) ಅಡ್ರೆಸ್ ಬಾರ್ ನಲ್ಲಿ www.gmail.com ಎಂದು ನಮೂದಿಸಿ ನೀವು ಈಗಾಗಲೇ ಜೀಮೇಲ್ ಬಳಕೆದಾರರ ಐಡಿ (ಯೂಸರ್ ಐಡಿ) ಮತ್ತು ಗುಪ್ತಪದ(ಪಾಸ್ವರ್ಡ್) ಹೊಂದಿದಲ್ಲಿ, ನೇರವಾಗಿ ಲಾಗಿನ್ ಆಗಬಹುದು. ನೀವು ಬಳಕೆದಾರರ ಐಡಿ ಹೊಂದಿರದಿದ್ದಲ್ಲಿ “Create Account” ಎಂಬಲ್ಲಿ ಕ್ಲಿಕ್ ಮಾಡಿ ನಂತರ ಸೂಚನೆಗಳನ್ನು ಅನುಸರಿಸಿ.
- Image
ಹಂತ 2- “Create Account” ಎಂಬಲ್ಲಿ ಕ್ಲಿಕ್ ಮಾಡಿದ ನಂತರ ಈ ಸೂಚನೆಗಳನ್ನು ಅನುಸರಿಸಿ. 1. ನಿಮ್ಮ ಹೆಸರನ್ನು ನಮೂದಿಸಿ 2. ಹೊಸದಾಗಿ ಒಂದು ಯೂಸರ್ ಐಡಿ ನಮೂದಿಸಿ. ನಂತರ ಹೊದ ಗುಪ್ತಪದ ನಮೂದಿಸಿ. ಇವೆರಡನ್ನು ನೆನಪಿನಲ್ಲಿಟ್ಟುಕೊಳ್ಳಿ. 3. ನಂತರ ನಿಮ್ಮ ಜನ್ಮದಿನಾಂಕ, ಲಿಂಗ, ದೂರವಾಣಿ ಸಂಖ್ಯೆ ನಮೂದಿಸಿ. ಅಲ್ಲಿ ಕೇಳುವ ಕೆಲವು ಕೋಡ್ ಗುರುತಿಸಿ ನಮೂದಿಸಿ. ನಂತರ Terms & Condition ಬಾಕ್ಸ್ ಕ್ಲಿಕ್ ಮಾಡಿ "Next Step” ಎಂಬಲ್ಲಿ ಕ್ಲಿಕ್ ಮಾಡಿ.
- Image
ಹಂತ 3- ಈಗ ನೀವು ಈ ಹಿಂದೆ ನೀಡಿರುವ ಮಾಹಿತಿ ಸರಿಯಾಗಿದ್ದಲ್ಲಿ ನಿಮಗೆ ಹೊಸ ಅಕೌಂಟ್ ತೆರೆಯುತ್ತದೆ. ಅದರ ಮೊದಲನೆ ಪುಟವು ಚಿತ್ರದಲ್ಲಿರುವಂತೆ ಕಾಣುತ್ತದೆ. ಇಲ್ಲಿ "Continue to Gmail” ಎಂಬಲ್ಲಿ ಕ್ಲಿಕ್ ಮಾಡಿ.
- Image
ಹಂತ 4- 1. ನೀವು ಲಾಗಿನ್ ಆದ ಕೂಡಲೇ ಜೀಮೆಲ್ ಈ ಚಿತ್ರದಲ್ಲಿರುವಂತೆ ತೆರೆಯುತ್ತದೆ. ಇದರಲ್ಲಿ "Inbox” ಮೇಲೆ ಕ್ಲಿಕ್ ಮಾಡುವ ಮೂಲಕ ನಿಮಗೆ ಬಂದಿರುವ ಎಲ್ಲಾ ಇಮೇಲ್ಗಳನ್ನು ನೋಡಬಹುದು.
- Image
ಹಂತ 5- 1. ಹೊಸ ಇಮೇಲ್ ಬರೆಯಲು, ಎಡಬದಿಯಲ್ಲಿನ "Compose" ಎಂಬಲ್ಲಿ ಕ್ಲಿಕ್ ಮಾಡಿ. 2. ಆಗ ತೆರೆಯುವ ಹೊಸ ವಿಂಡೋದಲ್ಲಿ ನೀವು ಹೊಸ ಇಮೇಲ್ ಬರೆಯುವುದನ್ನು ಪ್ರಾರಂಭಿಸಬಹುದು.
- Image
ಹಂತ 6- ನೀವು ಯಾರಿಗೆ ಇಮೇಲ್ ಕಳುಹಿಸಬೇಕಿದೆಯೋ ಅವರ ಇಮೇಲ್ ವಿಳಾಸವನ್ನು "To" ಎಂಬಲ್ಲಿ ನಮೂದಿಸಿ. ಒಮ್ಮೇಗೆ ಎಷ್ಟು ಜನರಿಗೆ ಬೇಕಾದರು ಇಮೇಲ್ ಕಳುಹಿಸಬಹುದಾಗಿದೆ. ಉದಾಹರಣೆಗೆ ಗಣಿತ-ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸಲು ಬಯಸಿದಲ್ಲಿ “To” ಎಂಬಲ್ಲಿ mathssciencestf@googlegroups.com ಎಂದು ನಮೂದಿಸಿ. ಒಬ್ಬರಿಗೆ ಇಮೇಲ್ ಕಳುಹಿಸುವಾಗ ಅದನ್ನು ಇನ್ನೊಬ್ಬರಿಗೂ ಪ್ರತಿ ಮಾಡಬಹುದು ಇದಕ್ಕಾಗಿ "cc" ಆಯ್ಕೆ ಬಳಸಬಹುದು. ಇಮೇಲ್ ವಿಷಯವನ್ನು “subject” ಎಂಬಲ್ಲಿ ನಮೂದಿಸಿ. ನಂತರ ಇಮೇಲ್ ಕಳುಹಿಸುತ್ತಿರುವ ಬಗ್ಗೆ ಏನಾದರು ಬರವಣಿಗೆ ಬರೆಯುವುದಿದ್ದರೆ ಬರೆಯಬಹುದು. ಇಮೇಲ್ ಜೊತೆ ಯಾವುದಾದರು ಕಡತವನ್ನು ಕಳುಹಿಸುವುದಾದಲ್ಲಿ , ಮೌಸ್ ಕರ್ಸರ್ ಚಲಿಸುವ ಮೂಲಕ “AttachFile” ಎಂಬಲ್ಲಿ ಕಲ್ಇಕ್ ಮಾಡಿ ಕಡತ ಸೇರಿಸಿ. ನಂತರ "Send" ಮೇಲೆ ಕ್ಲಿಕ್ ಮಾಡಿ. to mail.
- Image
ಹಂತ 7-ನಿಮ್ಮ ಇನ್ಬಾಕ್ಸ್ ಗೆ ಇಮೇಲ್ ಸ್ವೀಕರಿಸಿದ ನಂತರ, ನಿಮಗೆ ಇಮೇಲ್ ಕಳುಹಿಸಿದವರಿಗೆ ಪ್ರತ್ಯುತ್ತರ ನಿಡಬಹುದು ಇದಕ್ಕಾಗಿ ಚಿತ್ರದಲ್ಲಿ ತೋರಿಸಿರುವಂತೆ ಕ್ಲಿಕ್ ಮಾಡಿ " Reply” ಆಯ್ಕೆ ಮಾಡಿಕೊಂಡು ಪ್ರತ್ಯುತ್ತರ ನಮೂದಿಸಿ ಕಳುಹಿಸಬಹುದು. ಅದೇ ರೀತಿ ಆ ಇಮೇಲ್ನ್ನು ಮತ್ತ್ಯಾರಿಗಾದರು ಕಳುಹಿಸಬೇಕಾದಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಕ್ಲಿಕ್ ಮಾಡಿ " Forward” ಆಯ್ಕೆ ಮಾಡಿಕೊಂಡು ಅವರ ಇಮೇಲ್ ವಿಳಾಸ ನಮೂದಿಸಿ ಕಳುಹಿಸಬಹುದು. ಇದೇ ರೀತಿ ಪ್ರತ್ತ್ಯುತ್ತರ ನೀಡುವಾಗ ವೇದಿಕೆಗಳಂತಹ ಗುಂಪಿಗೂ ಸಹ ಪ್ರತ್ತ್ಯುತ್ತರ ನೀಡಬಹುದು ಆದರೆ ಇಡೀ ಗುಂಪಿಗೆ ಇಮೇಲ್ ಕಳುಹಿಸುವಾಗ ಎಚ್ಚರವಿರಲಿ.
- Image
ನಿಮ್ಮ ಮೆಯಿಲ್ ಅನ್ನು ತೆರೆದ ನಂತರ, 'Attachment' ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಮೆಯಿಲ್ನೊಂದಿಗೆ attach ಆಗಿ ಬಂದಿರುವ ಫೈಲ್ ಅನ್ನು ಕ್ಲಿಕ್ ಮಾಡಿ (ಇದು ಒಂದು ಕ್ಲಿಪರ್ನ ಸಂಕೇತ ಹೊಂದಿರುತ್ತದೆ). ಫೈಲ್/ದಾಖಲೆ (Document)ಯನ್ನು ಓಪನ್ ಅಥವಾ ಸೇವ್ ಮಾಡಲು, 'Dialogue box' ತೆರೆದು ನಿಮ್ಮನ್ನು ಕೇಳುವುದು. ನೀವು ಓಪನ್ ಬಟನ್ ಅನ್ನು ಕ್ಲಿಕ್ ಮಾಡಿದಾಗ ದಾಖಲೆ ತೆರೆಯುವುದು, ಅದನ್ನು ನೀವು ಓದಬಹುದು. ಸೇವ್ ಬಟನ್ ಅನ್ನು ಕ್ಲಿ ಕ್ ಮಾಡಿದಾಗ ಡೌನ್ ಲೋಡ್ ನಲ್ಲಿ ಸೇವ್ ಆಗುವುದು. ಇಲ್ಲವಾದಲ್ಲಿ, ನೀವು ಬಯಸುವ ಡ್ರೈವ್ ಅನ್ನು ಸೂಚಿಸಿದರೆ ಆ ಫೈಲ್ , ಸೂಚಿಸಿದ ಡ್ರೈವ್ ನಲ್ಲಿ ಸೇವ್ ಆಗುವುದು.
- Image
ಹಂತ 9-ನಿಮಗೆ ಬಂದಿರುವ ಇಮೇಲ್ಗಳನ್ನು ಅಳಿಸಿಹಾಕಲು ಬಯಸಿದಲ್ಲಿ. ಇಮೇಲ್ ಮೇಲಿನ ಸಾಲಿನಲ್ಲಿರುವ Delete ಸೂಚಕದ ಮೇಲೆ ಕ್ಲಿಕ್ ಮಾಡಿ. ಒಟ್ಟಾಗಿ ಬಹಳ ಇಮೇಲ್ಗಳನ್ನು ಅಳಿಸಿಹಾಕಲು ಮೊದಲು ಇಮೇಲ್ಗಳನ್ನು ಆಯ್ಕೆ ಮಾಡಿಕೊಂಡು ನಂತರ Delete ಸೂಚಕದ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಅಳಿಸಿದ ಇಮೇಲ್ಗಳು Trash ಕಡತಕೋಶದಲ್ಲಿ 30 ದಿನಗಳ ಕಾಲ ಉಳಿದಿರುತ್ತವೆ.
- Image
ಹಂತ 10- ಜೀಮೇಲ್ ನಲ್ಲಿ ನಿಮ್ಮ ಇಮೇಲ್ ಕಾರ್ಯಗಳು ಮುಗಿದ ಮೇಲೆ ನೇರವಾಗಿ ಪರದೆಯನ್ನು ಮುಚ್ಚಬೇಡಿ. ನಿಮ್ಮ ಇಮೇಲ್ ನ ಬಲಬಾಗದ ಮೂಲೆಯಲ್ಲಿ ಕಾಣುವ ನಿಮ್ಮ ಪೋಟೋ ಅಥವಅ ನಿಮ್ಮ ಹೆಸರಿನ ಮೊದಲಿನ ಅಕ್ಷರದ ಮೇಲೆ ಕ್ಲಿಕ್ ಮಾಡಿ ಅಲ್ಲಿ “Log out” ಮೇಲೆ ಕ್ಲಿಕ್ ಮಾಡಿ. ಈಗ ಸುರಕ್ಷಿತವಾಗಿ ನಿಮ್ಮ ಜೀಮೇಲ್ ಮುಚ್ಚುತ್ತದೆ.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಕಡತಗಳ ನಿರ್ಯಾತ (ಎಕ್ಸ್ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
- ಹೆಚ್ಚಿದ ಸಂಗ್ರಹ ಸ್ಥಳ
- ಜೀಮೇಲ್ ಲ್ಯಾಬ್
- ಟ್ಯಾಬ್ ಇನ್ಬಾಕ್ಸ್
- ಸ್ಪಾಮ್ ಫಿಲ್ಟರ್
- ಮೊಬೈಲ್ ನಲ್ಲಿ ಜೀಮೇಲ್
- ಸಾಮಾಜಿಕ ತಾಣಗಳ ಜೊತೆ ಕೊಂಡಿ
- ಧ್ವನಿ ಸಂಭಾಷಣೆ
- ಸಂಭಾಷಣೆ ಆಧಾರಿತ ಹುಡುಕಾಟ
- ಸ್ಥಳೀಯ ಭಾಷೆ ಬಳಕೆ
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್ವೇರ್ ಸೆಂಟರ್ನಿಂದ | |
ಟರ್ಮಿನಲ್ನಿಂದ | |
ವೆಬ್ಪುಟದಿಂದ | |
ವೆಬ್ಆಧಾರಿತ ನೊಂದಣಿ |